Showing posts with label Travel holiday places. Show all posts
Showing posts with label Travel holiday places. Show all posts

10ನೇ ತರಗತಿ ಹಲಗಲಿ ಬೇಡರು (ಜನಪದ ಲಾವಣಿ) ಕನ್ನಡ ನೋಟ್ಸ್

 10ನೇ ತರಗತಿ ಹಲಗಲಿ ಬೇಡರು (ಜನಪದ ಲಾವಣಿ) ಕನ್ನಡ ನೋಟ್ಸ್


 

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊ೦ದು ವಾಕ್ಯಗಳಲ್ಲಿ ಉತ್ತರಿಸಿ.

೧. ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?
ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ
ಆದೇಶ ಹೊರಡಿಸಿತು.
೨. ಹಲಗಲಿಯ ನಾಲ್ವರು ಪ್ರಮುಖರು ಯಾರು ?
ಹಲಗಲಿಯ ನಾಲ್ವರು ಪ್ರಮುಖರುಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗ , ರಾಮ.
೩. ಹಲಗಲಿ ಗುರುತು ಉಳಿಯದಂತಾದುದು ಏಕೆ ?
ಕುಂಪಣಿ ಸರ್ಕಾರದ ದಂಡು ಹಲಗಲಿಗೆ ಬೆಂಕಿ ಹಚ್ಚಿ ಸುಟ್ಟು ಬೂದಿ ಮಾಡಿದ್ದರಿಂದ ಗುರುತು ಉಳಿಯದಂತಾಯಿತು.
೪. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?
ಹಲಗಲಿಯ ಬಂಟರ ಹತಾರ ಕದನದ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
೫. ಹಲಗಲಿ ಗ್ರಾಮ ಎಲ್ಲಿದೆ ?
ಹಲಗಲಿ ಗ್ರಾಮ ಮುಧೋಳ ಸಂಸ್ಥಾನದಲ್ಲಿದ್ದು, ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.

ಹೆಚ್ಚುವರಿ ಪ್ರಶ್ನೋತ್ತರಗಳು

೬. ಒಳಗಿನ ಮಂದಿ ಗುಂಡನ್ನು  ಹೇಗೆ ಹೊಡೆದgÄÀ ?
ಒಳಗಿನ ಮಂದಿ ಮುಂಗಾರು ಸಿಡಿಲು ಸಿಡಿಯುವ ಹಾಗೆ ಗುಂಡನ್ನು ಹೊಡೆದರು.
೭. ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು  ಯಾರು ?
ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು ಹೆಬಲಕ ಸಾಬ.
೮. ಲಾವಣಿಕಾರ ಯಾರ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾನೆ ?
ಲಾವಣಿಕಾರ ಕುರ್ತುಕೋಟಿ ಕಲ್ಮೇಶನ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾರೇ .
೯. ಕಂಪನಿ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿದ ಕಥೆಯನ್ನೊಳಗೊಂಡ ಲಾವಣಿ ಯಾವುದು ?
ಕಂಪನಿ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿದ ಕಥೆಯನ್ನೊಳಗೊಂಡ ಲಾವಣಿ ಹಲಗಲಿ ಬೇಡರ ಲಾವಣಿ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು ?
ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ  ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು
ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.ಈ ಆದೇಶದ ಪ್ರಕಾರ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಗೆ ಬಂದು ಜೋರ ಮಾಡಿ
ಬೇಡರ ಆಯುಧಗಳನ್ನು  ಕಸಿದುಕೊಳ್ಳಲು ಹೋದರು  . ಇದನ್ನು ವಿರೋಧಿಸಿ ರಾಮ, ಬಾಲ, ಹನುಮ, ಜಡಗ ಮೊದಲಾದ ಹಲಗಲಿ ಬೇಡರು
ತಮ್ಮಲ್ಲಿರುವ ಆಯುಧಗಳನ್ನು  ಕೊಡಲೊಪ್ಪದೆ ದಂಗೆ ಎದ್ದರು.
೨. ಹಲಗಲಿಗೆ ದಂಡು ಬರಲು ಕಾರಣವೇನು ?
ಹಲಗಲಿಯ ಬೇಡರು ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು  ಕೊಡಲು ಒಪ್ಪದೆದಂಗೆ ಎದ್ದು ಮುಂಗಾರಿನ ಸಿಡಿಲು ಸಿಡಿಯುವ ಹಾಗೆ ಗುಂಡು ಹೊಡೆರು  ಇದರಿಂದ ಬ್ರಿಟೀಷ್ ಸೈನಿಕರು  ದಂಗು ಹಿಡಿದು ದೂರ ಸರಿದು
ನಿಂತರು. ಆಗ ಇನ್ನು ಹೆಚ್ಚಿನ ದಂಡು ಬರಲಿ ಎಂದು ಸಾಹೇಬ (ಜೆ..ಬಿ.ಸೆಬಿ.ಸೆಟೆನ್ಕರ್) ಪತ್ರ ಬರೆದು ತನ್ನ ಮೇಲಿನ ಅಧಿಕಾರಿಗೆ ಕಳಿಸಿದನು. ಆಗ
ದಂಡು ತಯಾರಾಗಿ ಹಲಗಲಿಗೆ ಬಂದಿತು.
೩. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು ?
ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ  ಆದೇಶವನ್ನು  ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಒಪ್ಪದೆ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷ್‌ರ ದಂಡು ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು ಹಲಗಲಿಯ ಬೇಡರನ್ನು ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು . ಬೇಡರನ್ನು  ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು  ಸಾಯಿಸಿದರು . ಸಿಕ್ಕದ್ದನ್ನೆಲ್ಲ ತೆಗೆದುಕೊಂಡು ಊರಿಗೆ ಕೊಳ್ಳಿ ಇಟ್ಟು ಗುರುತು ಉಳಿಯದಂತೆ ಸುಟ್ಟು ಬೂದಿ ಮಾಡಿ ಹೋದರು.
೪. ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ ?
ಲಾವಣಿಗಳನ್ನು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ವೀರ ಕಲಿಗಳ ವೀರಸಾಹಸ, ವೀರರ ಉಜ್ವಲ ಜೀವನದ ಘಟನೆಗಳನ್ನಾ
ಧರಿಸಿದಕಥನಾತ್ಮಕ ಕಾವ್ಯಗಳಾಗಿದ್ದು ಸಾಮಾನ್ಯವಾಗಿ ವೀರತನ ಹಾಗೂ ಸಾಹ¸ª
ವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು  ಎನ್ನಲಾಗಿದೆ.

ಹೆಚ್ಚುವರಿ ಪ್ರಶ್ನೆಗಳು

೫. ಹಲಗಲಿ ಏಕೆ ಹಾಳಾಗಿ ಹೋಯಿತು ?
ಬ್ರಿಟೀಷರ ದಂಡು ಹಲಗಲಿಗೆ ಮುತ್ತಿಗೆ ಹಾಕಿ ಬೇಡರನ್ನು  ಬಗ್ಗು ಬಡಿದು ಕೊಡಲಿ, ಕುಡಗೋಲು , ಕುಡ, ಕಬ್ಬಿಣ, ಮೊಸರು  ,ಬೆಣ್ಣಿ, ಹಾಲು, ಉಪ್ಪು,ಎಣ್ಣೆ ,ಅರಿಸಿಣ, ಜೀರಗಿ , ಅಕ್ಕಿ, ಸಕ್ಕರೆ  ಬೆಲ್ಲ, ಗಂಗಳ, ತಂಬಿಗೆ, ಮಂಗಳಸೂತ್ರ , ಬೀಸುವಕಲ್ಲು –ಹೀಗೆಹೀಗೆ ಸಿಕ್ಕಿದ್ದೆಲ್ಲಾ ತೆಗೆದುಕೊಂಡು, ಊರಿಗೆಕೊಳ್ಳಿ ಇಟ್ಟು ಸುಟ್ಟು ಬೂದಿ ಮಾಡಿ ಗುರುತು ಉಳಿಯದಂತೆ ಮಾಡಿ ಹೋಗಿದ್ದರಿಂದ ಹಾಳಾಗಿ ಹೋಯಿತು.
೬.ಬ್ರಿಟೀಷರು ಹೊರಡಿಸಿದ ನಿಶ್ಯಸ್ತಿçÃಕರಣದ ಆದೇಶ ವಿವರಣೆ ಏನು ?
ಬ್ರಿಟೀಷರು  ಹೊರಡಿಸಿದ ನಿಶ್ಯಸ್ತ್ರೀಕರಣದ ಆದೇಶ ವಿವರಣೆ   ಏನೆಂದರೆ ಬ್ರಿಟೀಷ್ ಸರ್ಕಾರದ ಅನುಮತಿಯಿರದೆ ಭಾರತೀಯರು ಶಸ್ತ್ರಾಸ್ತಗಳು
ಹೊಂದುವ೦ತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬುದಾಗಿತ್ತು.
೭. ಹೆಬಲಕ ಸಾಹೇಬನ ಬುದ್ಧಿಮಾತಿಗೆ ವಿರೋಧವಾಗಿ ಜಡಗ ಏನು ಹೇಳುತ್ತಾನೆ ?
ಹೆಬಲಕ ಸಾಹೇಬನ ಬುದ್ಧಿಮಾತಿಗೆ ವಿರೋಧವಾಗಿ ಜಡಗ ಇವರನ್ನು
ಹೊಡಿಯಿರಿ , ಇವರು  ಸಂಪೂರ್ಣವಾಗಿ ಮೋಸಗಾರರು  ,ವಿಶ್ವಾಸವಚಕರು  ಇವರ ಮೇಲೆ ನಂಬಿಗೆ ಇಲ್ಲ. ಒಳಸಂಚಿನಿ೦ದ ಮೋಸಮಾಡಿ ನಮ್ಮ ದೇಶ ಗೆಲ್ಲುತ್ತಾರೆ. ಮುಂದೆ ನಮಗೆ ಆಪತ್ತು ಕಾದಿದೆ
ಎಂದು ಹೇಳುತ್ತಾನೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕವಾಕ್ಯಗಳಲ್ಲಿ ಉತ್ತರಿಸಿ.

೧. ಹಲಗಲಿ ದಂಗೆಗೆ ಕಾರಣವೇನು? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು?
ಕ್ರಿ.ಶ. ೧೮೫೭ರ ಪ್ರಥಮ  ಸ್ವಾತಂತ್ರ್ಯ  ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು
ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.ಈ ಆದೇಶದ ಪ್ರಕಾರ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಗೆ ಬಂದು ಜೋರ ಮಾಡಿ
ಬೇಡರ ಆಯುಧಗಳನ್ನು  ಕಸಿದುಕೊಳ್ಳಲು ಹೋದರು  . ಇದನ್ನು ವಿರೋಧಿಸಿ ರಾಮ, ಬಾಲ, ಹನುಮ, ಜಡಗ ಮೊದಲಾದ ಹಲಗಲಿ ಬೇಡರು
ತಮ್ಮಲ್ಲಿರುವ ಆಯುಧಗಳನ್ನು  ಕೊಡಲೊಪ್ಪದೆ ದಂಗೆ ಎದ್ದು ಒಳಗಿನಿಂದ ಮುಂಗಾರಿನ ಸಿಡಿಲು ಸಿಡಿಯುವ ಹಾಗೆ ಗುಂಡು ಹೊಡೆರು .ಇದರಿಂದ ಬ್ರಿಟೀಷ್ ಸೈನಿಕರು ದಂಗು ಹಿಡಿದು ದೂರ ಸರಿದು ನಿಂತರು. ಆಗ ಇನ್ನು ಹೆಚ್ಚಿನ ದಂಡು ಬರಲಿ ಎಂದು ಸಾಹೇಬ (ಜೆ.ಬಿ.ಸೆಟೆನ್ಕರ್)
ಪತ್ರ  ಬರೆದು  ತನ್ನ ಮೇಲಿನ ಅಧಿಕಾರಿಗೆ ಕಳಿಸಿದನು. ಆಗ ಬ್ರಿಟೀಷ್ ಸರ್ಕಾರದ ದಂಡು ತಯಾರಾಗಿ ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನಸಿಪಾಯಿಗಳು ಹಲಗಲಿಯ ಬೇಡರನ್ನು  ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು  . ಬೇಡರನ್ನು  ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು ಸಾಯಿಸಿದರು. ಸಿಡಿಲು ಸಿಡಿಯುವ ಹಾಗೆ ಸಿಟ್ಟಿಲೆ ¨ ಭರಪೂರವಾಗಿ ಗುಂಡನ್ನು ¸ಸುರಿಸಿದರು. ಇದರಿಂದ ಹಲಗಲಿಬಂಟರು ಹೋರಾಡಿ ವೀರ ಮರಣವನ್ನಪಿದ  . ಸಿಕ್ಕದ್ದನ್ನೆಲ್ಲ  ತೆಗೆದುಕೊಂಡು ಊರಿಗೆ ಕೊಳ್ಳಿ ಇಟ್ಟು ಗುರುತು ಉಳಿಯದಂತೆ ಸುಟ್ಟು ಬೂದಿಮಾಡಿ ಹಲಗಲಿಯ ದಂಗೆಯನ್ನು ನಿಯಂತ್ರಿಸಿದರು.
೨. ಹಲಗಲಿ ದಂಗೆಯ ಪರಿಣಾಮವೇನು ?
ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ  ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದ
ಹಲಗಲಿಯ ಬೇಡರನ್ನು  ಬಗ್ಗು ಬಡಿಯಲು ಬ್ರಿಟೀಷ್ ಸರ್ಕಾರದ ದಂಡು ತಯಾರಾಗಿ ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು
ಹಲಗಲಿಯ ಬೇಡರನ್ನು  ಬೆನ್ನು ಬೆನ್ನು ಹತ್ತಿ ತಿರುತಿರತಿರವಿ ಹಾಕಿ ಕೊಂದರು  . ಬೇಡರನ್ನು  ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ
ಗುಂಡು ಹೊಡೆದು  ಸಾಯಿಸಿದರು. ಕೆಲವು ಬೇಡರು  ತಪ್ಪಿಸಿಕೊಂಡು ಗುಡ್ಡದ ಕಡೆ ಓಡಿದರು. ಅಗಸಿಗೆ ಬಂದು ಬುದ್ಧಿ ಮಾತನ್ನು ಹೇಳುತ್ತಿದ್ದ
ಹೆಬಲಕ ಸಾಹೇಬನ್ನು ಜಡಗ ಗುಂಡು ಹೊಡೆದು  ಕೊಂದು ಹಾಕಿದನು. ಇದರಿಂದ ಸಿಟ್ಟಿಗೆದ್ದ ಕಾರಸಾಹೇಬ ಊರನ್ನು  ಲೂಟಿ ಮಾಡಲು
ಆದೇಶಿಸಿದನು  . ಬ್ರಿಟೀಷ್ ಸೈನಿಕರು ಸಿಡಿಲು ಸಿಡಿಯುವ ಹಾಗೆ ಸಿಟ್ಟಿಲೆ ¨ಭರಪೂರವಾಗಿ ಗುಂಡನ್ನು ಸುರಿಸಿದನು  . ಬಾಲನು ಕಸರತ್ತಿನಿಂದ ಹತ್ತಿಪ್ಪತ್ತು
ಕುದುರೆಗಳನ್ನು ಕಡಿದು ಹಾಕಿದನು  . ರಾಮನ ವಿಪರೀತ ಕಡಿತದಿಂದ ರಕ್ತದ ಕಾಲುವೆ ಹರಿಯಿತ . ಹೀಗೆ ಹಲಗಲಿ ಬಂಟರಾದ ಪೂಜೇರಿ
ಹನುಮಾ, ಬ್ಯಾಡರ ಬಾಲ, ಜಡಗ, ರಾಮ, ಭೀಮ ಮೊದಲಾದ ಹೋರಾಡಿ ವೀರ ಮರಣವನ್ನಪ್ಪಿದ  . ಹಲಗಲಿಗೆ ಮುತ್ತಿಗೆ ಹಾಕಿ ಬೇಡರನ್ನು
ಬಗ್ಗು ಬಡಿದ ಬ್ರಿಟೀಷ್ ದಂಡು ಕೊಡಲಿ, ಕುಡಗೋಲು, ಕುಡ, ಕಬ್ಬಿಣ, ಮೊಸರು ,ಬೆಣ್ಣಿ, ಹಾಲು, ಉಪ್ಪು ,ಎಣ್ಣೆ ,ಅರಿಸಿಣ, ಜೀರಗಿ , ಅಕ್ಕಿ, ಸಕ್ಕರೆ,
ಬೆಲ್ಲ, ಗಂಗಳ, ತಂಬಿಗೆ, ಮಂಗಳಸೂತ್ರ, ಬೀಸುವಕಲ್ಲು  –ಹೀಗೆ  ಸಿಕ್ಕಿದ್ದೆಲ್ಲಾ ತೆಗೆದುಕೊಂಡು, ಊರಿಗೆ ಕೊಳ್ಳಿ ಇಟ್ಟು ಸುಟ್ಟು ಬೂದಿ ಮಾಡಿ ಗುರುತು
ಉಳಿಯದಂತೆ ಮಾಡಿ ಹೋಗಿದ್ದರಿಂದ ಹಾಳಾಗಿ ಹೋಯಿತು.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಎಲ್ಲಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ”
ಆಯ್ಕೆ :- ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ
ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಇದು ಕುಂಪಣಿ ಸರ್ಕಾರ ಹೊರಡಿಸಿದ ಆದೇಶದ ವಾಕ್ಯವಾಗಿದೆ. ಕ್ರಿ.ಶ. ೧೮೫೭ರ ಪ್ರಥಮ  ಸ್ವಾತಂತ್ರ್ಯ  ಸಂಗ್ರಾಮದ ನಂತರ ವಿದೇಶದಿ೦ದ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.
ಇದನ್ನು ವಿರೋಧಿಸಿ ಹಲಗರ ಹಳ್ಳಿ ಸುತ್ತಾ ಮುತ್ತಾ ಮೆರೆಯಿತು ಎಂದ ಲಾವಣಿಕಾರ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ:- ಭಾರತೀಯರನ್ನು ನಿಶ್ಯಸ್ತ್ರೀಕರಣಗೊಳಿಸಬೇಕೆಂಬ ಕುಂಪಣಿ ಸರ್ಕಾರದ ದರ್ಪ ಈ ವಾಕ್ಯದಲ್ಲಿ ಸ್ವಾರಸ್ಯ  ಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
೨. “ಜೀವ ಸತ್ತು ಹೋಗುವುದು ಗೊತ್ತ ”
ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ
ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಇದು ಹಲಗಲಿ ಬೇಡರು  ಹೇಳಿದ ಮಾತಾಗಿದೆ. ಕುಂಪಣಿ ಸರಕಾರ ನಿಶ್ಶಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು
ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿದಾಗ, ಹಲಗಲಿಯ ಪ್ರಮುಖರಾದ ಪೂಜಾರಿ ಹನುಮಾ, ಬ್ಯಾಡರ ಬಾಲ, ಜಡಗ  ರಾಮ ಎಂಬ
ನಾಲ್ಕು ಮಂದಿ ಕೂಡಿಕೊಂಡು ನಾವು ನಮ್ಮ ಬಳಿಯಿರುವ ಆಯಧಳನ್ನು ಸತಾಯಿಸಿದರೂ  ಕೊಡಬಾರದು  . ಆಯುಧಗಳು  ಹೋದರೆ ನಮ್ಮ
ಜೀವ ಸತ್ತು ಹೋಗುತ್ತದೆ ಎಂದು ಪಿತೂರಿ ಮಾಡಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ:- ಆಯುಧಗಳು  ತಮ್ಮ  ಪ್ರಾಣಕ್ಕಿಂತ ಮಿಗಿಲಾದವು  , ಅವು ಹೋದರೆ ನಮ್ಮ ಪ್ರಾಣಕ್ಕೆ ಸಂಚಕಾರ ಎಂಬ ಭಾವನೆ ಹಲಗಲಿಯ ಬೇಡರ ಈ
ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡ೦ತೆ ಇದೆ.
೩. “ಹೊಡೆದರೊ ಗುಂಡ ಕರುಣ ಇಲ್ಲದ್ಹಂಗ ”
ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ
ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೆ
ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದ ಹಲಗಲಿಯ ಬೇಡರನ್ನು  ಬಗ್ಗುಬಡಿಯಲು ಬ್ರಿಟಿಷ್‌ರ ದಂಡು ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು ಹಲಗಲಿಯ ಬೇಡರನ್ನು  ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು  . ಬೇಡರನ್ನು  ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು
ಸಾಯಿಸಿದರು  ಎಂದು ಲಾವಣಿಕಾರ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ:- ಹಲಗಲಿಯ ಬೇಡರ ಮೇಲೆ ಗುಂಡು ಹಾರಿಸಿ ಕೊಲ್ಲುವ ಬ್ರಿಟಿಷ್ ಸೈನಿಕರ ನಿಷ್ಕಕರುಣಾ ಭಾವ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ
ವರ್ಣಿತವಾಗಿದೆ.
೪. “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು ”
ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ
ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಬ್ರಿಟಿಷ್‌ರ ಸೈನಿಕರು  ಹಲಗಲಿಯನ್ನು ಲೂಟಿಮಾಡಿ ಊರಿಗೆ ಬೆಂಕಿ ಇಟ್ಟು ಸುಟ್ಟು
 ಬೂದಿ ಮಾಡಿದ್ದರಿಂದ ಹಲಗಲಿಯು ಎಳ್ಳಷ್ಟು
ಗುರುತು ಉಳಿಯದೆ ಕಾಣದೆ ಹಾಳಾಗಿ ಹೋಯಿತು. ಇದನ್ನು ಕುರ್ತುಕೋಟಿಯ ಕಲ್ಮೇಶನ ದಯದಿಂದ ನಾನು ಕಂಡೊಷ್ಟು ವರ್ಣಿಸಿ ಹೇಳಿದೆ
ಎಂದು ಲಾವಣಿಕಾರ ಹಾಡಿದ ಸಂದರವಾಗಿದೆ.
ಸ್ವಾರಸ್ಯ:- ಹಲಗಲಿ ಬೇಡರು  ಹೋರಾಡಿ ಕೆಟ್ಟು ಹೋದ ವಿಚಾರವನ್ನು ಕಂಡಷ್ಟು  ವರ್ಣಿಸಿದ್ದೇನೆ ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿದೆ.

ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

೧. ಹಲಗಲಿ ಬಂಟರ ಕದನ  ವೀರರಸ ಪ್ರಧಾನವಾದ ಲಾವಣಿ
(ಕತೆ  ಗಾದೆ, ಒಗಟು, ಲಾವಣಿ)
೨. ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ ಬಾಗಲಕೋಟೆ
(ಬಾಗಲಕೋಟೆ, ಕಲಾದಗಿ, ಮುಧೋಳ, ಹೆಬಲಕ)
೩. ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ ನಿಶ್ಶಸ್ತ್ರೀಕರಣ
(ಯುದ್ಧಶಾಸನ, ನಿಶ್ಶಸ್ತ್ರೀಕರಣ, ಕಬುಲಶಾಸನ, ಕುರ್ತಕೋಟಿಶಾಸನ)
೪. ಲಾವಣಿಕಾರ ಅಂಕಿತಗೊಳಿಸಿರುವ ದೈವ ಕಲ್ಮೇಶ
(ಕಲ್ಮೇಶ, ಹನುಮ, ರಾಮ, ಲಕ್ಷ್ಮೀಶ)
೫. ‘ವಿಲಾತಿ’ ಪದದ ಸರಿಯಾದ ರೂಪ ವಿಲಾಯಿತಿ
(ಆಯುಧ, ವಿಹಾರ, ವಿಲಂತಿ, ವಿಲಾಯಿತಿ)

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.

ಮುಂಗೈ              =ಕೈಯ              +ಮುಂದು                                -ಅಂಶಿಸಮಾಸ
ನಡುರಾತ್ರಿ          =ರಾತ್ರಿಯ        +ನಡು                                        – ಅ೦ಶಿಸಮಾಸ
ಹನುಮಭೀಮರಾಮ  =ಹನುಮನೂ+ಭೀಮನೂ    +ರಾಮನೂ    -ದ್ವ೦ದ್ವಸಮಾಸ
ಮೋಸಮಾಡು   =ಮೋಸರನ್ನು  +ಮಾಡು                                 -ಕ್ರಿಯಾಸಮಾಸ

೨. ಕೊಟ್ಟಿರುವ ಗ್ರಾಮ್ಯ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.

ಹೀಂಗ, ಮ್ಯಾಗ, ಕಳುವ್ಯಾರೆ, ಇಲ್ಲದ್ಹಂಗ, ಇಸವಾಸ, ಸಕ್ಕಾರಿ.

➢ಹೀಂಗ✓ ಹೀಗೆ
➢ಮ್ಯಾಗ✓ ಮೇಲೆ
➢ಕಳುವ್ಯಾರೆ✓ ಕಳುಹಿಸಿದ್ದಾರೆ
➢ಇಲ್ಲದ್ಹ೦ಗ✓ ಇಲ್ಲದಹಾಗೆ
➢ಇಸವಾಸ✓ ವಿಶ್ವಾಸ
➢ಸಕ್ಕಾರಿ✓ ಸಕ್ಕರೆ

೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.

ಅ) ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ
ಅಲ೦ಕಾರ: ಉಪಮಾಲಂಕಾರ ( ಧರ್ಮಲುಪ್ತೋ ಪಮಾಲಂಕಾರ )
ಉಪಮೇಯ: ಒಳಗಿನ ಮಂದಿ ಗುಂಡು ಹೊಡೆಯುವುದು
ಉಪಮಾನ: ಮುಂಗಾರಿನ ಸಿಡಿಲು ಸಿಡಿಯುವುದು
ಉಪಮಾ ವಾಚಕ: ಹಾಂಗ
ಸಮಾನ ಧರ್ಮ: ಸ್ಪಷ್ಟವಾಗಿಲ್ಲ (ಸಿಡಿಯುವುದು)
ಸಮನ್ವಯ: ಇಲ್ಲಿ ಉಪಮೇಯವಾದ ಒಳಗಿನ ಮಂದಿ ಗುಂಡು ಹೊಡೆಯುವುದನ್ನು  ಉಪಮಾನವಾದ
ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಪರಸ್ಪರ  ಹೋಲಿಸಿ ವರ್ಣಿಸಲಾಗಿದೆ.
ಲಕ್ಷಣ: ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು  ಹೋಲಿಸಿ ವರ್ಣಿಸಿದರೆ ಅದು ‘
ಉಪಮಾಲಂಕಾರ

ಆ) ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ

ಅಲಂಕಾರ: ಉಪಮಾಲಂಕಾರ ( ಧರ್ಮಲುಪ್ತೋ ಪಮಾಲಂಕಾರ )
ಉಪಮೇಯ: ಗುಂಡು ಸುರಿಯುವುದು
ಉಪಮಾನ: ಸಿಡಿಲು ಸಿಡಿಯುವುದು
ಉಪಮಾ ವಾಚಕ: ಹಾಂಗ
ಸಮಾನ ಧರ್ಮ: ಸ್ಪಷ್ಟವಾಗಿಲ್ಲ (ಸುರಿಯುವುದು, ತೀವ್ರತೆ)
ಸಮನ್ವಯ:ಇಲ್ಲಿ ಉಪಮೇಯವಾದ ಗುಂಡು ಸುರಿಯುವುದನ್ನು  ಉಪಮಾನವಾದ ಸಿಡಿಲು
ಸಿಡಿಯುವುದಕ್ಕೆ ಪರಸ್ಪರ ಹೋಲಿಸಿವರ್ಣಿಸಲಾಗಿದೆ.
 ಲಕ್ಷಣ: ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು  ಹೋಲಿಸಿ ವರ್ಣಿಸಿದರೆ ಅದು ‘
ಉಪಮಾಲಂಕಾರ

೪. ಸ್ವಂತ ವಾಕ್ಯದಲ್ಲಿ ಬಳಸಿ.

ಒಳಗಿಂದೊಳಗೆ, ಸುದ್ದಿ, ಮಂದಿ, ಕಸರತ್ತು.
ಒಳಗಿಂದೊಳಗೆ: ಹಲಗಲಿಯ ಬೇಡರೆಲ್ಲ ಒಂದೆಡೆ ಸೇರಿಕೊಂಡು ಒಳಗಿಂದೊಳಗೆ ಮಾತು ಕೊಟ್ಟರು  .
ಸುದ್ದಿ
: ಕಾರಕೂನನ ಕಪಾಳ ಹೊಡೆದು, ಸಿಪಾಯಿಯನ್ನು ಸಾಯಿಸಿ ನೆಲಕ್ಕೆ ಬೀಳುವಂತೆ ಮಾಡಿದ ದುಃಖದ ಸುದ್ದಿ
ಸಾಹೇಬನಿಗೆ ಮುಟ್ಟಿತು.
ಮಂದಿ:ಒಳಗಿನ ಮಂದಿ ಮುಂಗಾರಿ ಸಿಡಿಲ ಸಿಡಿದ್ಹಾಂಗ ಗುಂಡು ಹೊಡಿದರು.
ಕಸರತ್ತು: ಬಾಲನು ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆಗಳನ್ನು ಕಡಿದು ಹಾಕಿದರು.

೫. ದೇಶ್ಯ-ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.

ಹೊತ್ತು, ಹತಾರ, ಮಸಲತ್ತ, ಬಂಟರು, ಹುಕುಮ, ಮುಂಗೈ, ಸಾಹೇಬ, ಕಾರಕೂನ, ಸಿಪಾಯಿ, ಮುಂಗಾರು, ಕಬುಲ.
ದೇಶಿಯ ಪದಗಳುಹೊತ್ತು ,ಬಂಟರು , ಮುಂಗೈ , ಮುಂಗಾರು.
ಅನ್ಯದೇಶಿಯ ಪದಗಳುಹತಾರ , ಮಸಲತ್ತ , ಹುಕುಮ , ಸಾಹೇಬ , ಕಾರಕೂನ , ಸಿಪಾಯಿ , ಕಬುಲ.

ಚಟುವಟಿಕೆ

೧. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.


ಸಿಕ್ಕದ್ದು  ತಗೊಂಡು ಸರದ ನಿಂತರೊ ಊರಿಗೆ ಕೊಳ್ಳಿ ಕೊಟ್ಟಾ

ಬೂದಿ ಮಾಡ್ಯಾರೊ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟೂ 

ಕಾಣದೆ ಹೋಯಿತೊ ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು

ಕುರ್ತಕೋಟಿ ಕಲ್ಮೇಶನ ದಯದಿಂದ ಹಾಡಿದೆನಣ್ಣಾ ಜನಕಾ

ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾ

ಉಪ್ಪು ಎಣ್ಣಿ ಅರಿಸಿಣ ಜೀರಗಿ ಅಕ್ಕಿಸಕ್ಕಾರಿ ಬೆಲ್ಲಾ

ಗಂಗಳ ಚೆರಗಿ ಮಂಗಳ ಸೂತ್ರ ಹೋದವು ಬೀಸುಕಲ್ಲಾ

ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ



10ನೇ ತರಗತಿ ಕನ್ನಡ ಗದ್ಯ-02-ಶಬರಿ-ಪ್ರಶ್ನೋತ್ತರ ವೀಕ್ಷಣೆ & ಡೌನ್‌ಲೋಡ್

 

10ನೇ ತರಗತಿ ಕನ್ನಡ ಗದ್ಯ-02-ಶಬರಿ-ಪ್ರಶ್ನೋತ್ತರ ವೀಕ್ಷಣೆ & ಡೌನ್‌ಲೋಡ್




5th JUNE environmental day 2022

ವಿಶ್ವ ಪರಿಸರ ದಿನ ಎಂದರೇನು?

1973 ರಲ್ಲಿ ಮೊದಲ ಬಾರಿಗೆ ನಡೆದ ವಿಶ್ವ ಪರಿಸರ ದಿನವನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ) ರಚಿಸಿದ ಸಂಸ್ಥೆಯಿಂದ "ಸಕಾರಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಜಾಗತಿಕ ವೇದಿಕೆ" ಎಂದು ವಿವರಿಸಲಾಗಿದೆ.

ಇದು ಈಗ ಅತಿದೊಡ್ಡ ಜಾಗತಿಕ ಪರಿಸರ ಕಾರ್ಯಕ್ರಮವಾಗಿದ್ದು, 150 ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದಾರೆ. "ಸರ್ಕಾರಗಳು, ವ್ಯವಹಾರಗಳು, ನಾಗರಿಕ ಸಮಾಜ, ಶಾಲೆಗಳು, ಸೆಲೆಬ್ರಿಟಿಗಳು, ನಗರಗಳು ಮತ್ತು ಸಮುದಾಯಗಳು ಜಾಗೃತಿ ಮೂಡಿಸಲು ಮತ್ತು ಪರಿಸರ ಕ್ರಿಯೆಯನ್ನು ಆಚರಿಸಲು" ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.




ವಿಶ್ವ ಪರಿಸರ ದಿನವನ್ನು ಹೇಗೆ ಆಚರಿಸುವುದು

1.ಮರುಬಳಕೆಗೆ ಬದ್ಧತೆಯನ್ನು ಮಾಡಿ

ಇದು ಒಂದು ಮೂಲಭೂತ ಸಲಹೆಯಂತೆ ತೋರಬಹುದು, ಆದರೆ ಮರುಬಳಕೆ ಮಾಡಲು ನೀವು ನಿಜವಾಗಿಯೂ ಸಾಧ್ಯವಿರುವ ಪ್ರತಿಯೊಂದು ಅವಕಾಶವನ್ನು ತೆಗೆದುಕೊಳ್ಳುತ್ತಿದ್ದೀರಾ? ಮುಂದಿನ ಬಾರಿ ನೀವು ಆ ಕಾಗದದ ತುಂಡನ್ನು ಕಸದ ಬುಟ್ಟಿಯಲ್ಲಿ ಎಸೆಯುವ ಬಗ್ಗೆ ಯೋಚಿಸುತ್ತಿರುವಾಗ, ಮರುಬಳಕೆಯ ಬಿನ್ ಪ್ರವೇಶಿಸಲು ಸಾಧ್ಯವಿಲ್ಲ, ಎರಡು ಬಾರಿ ಯೋಚಿಸಿ. ಪ್ಲಾಸ್ಟಿಕ್ ಕಂಟೇನರ್ ಅನ್ನು ಹಿಡಿದುಕೊಳ್ಳುವುದು ಮತ್ತು ಇದು ಜೈವಿಕ ವಿಘಟನೀಯ ವಿಧಗಳಲ್ಲಿ ಒಂದಾಗಿದೆಯೇ ಎಂದು ನೋಡಲು ತುಂಬಾ ಸೋಮಾರಿಯಾಗಿದೆಯೇ? ನಿಮ್ಮ ಸ್ಮಾರ್ಟ್ ಫೋನ್ ಅನ್ನು ತೆರೆಯಿರಿ ಮತ್ತು ಅದನ್ನು ನೋಡಿ! ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪ್ರತಿಯೊಬ್ಬರೂ ಜವಾಬ್ದಾರರು - ನೀವು ಸೇರಿದಂತೆ.

2.ಒಂದು ಮರವನ್ನು ನೆಡಿ

ಮರಗಳು ವಾಸನೆಗಳು ಮತ್ತು ಮಾಲಿನ್ಯಕಾರಕ ಅನಿಲಗಳನ್ನು (ಸಾರಜನಕ ಆಕ್ಸೈಡ್ ಗಳು, ಅಮೋನಿಯಾ, ಸಲ್ಫರ್ ಡೈಆಕ್ಸೈಡ್ ಮತ್ತು ಓಝೋನ್) ಹೀರಿಕೊಳ್ಳುತ್ತವೆ ಮತ್ತು ಅವುಗಳ ಎಲೆಗಳು ಮತ್ತು ತೊಗಟೆಯ ಮೇಲೆ ಅವುಗಳನ್ನು ಬಂಧಿಸುವ ಮೂಲಕ ಗಾಳಿಯಿಂದ ಕಣಗಳನ್ನು ಫಿಲ್ಟರ್ ಮಾಡುತ್ತವೆ. ಏಕ-ಕುಟುಂಬದ ಮನೆಯ ಸುತ್ತಲೂ ವ್ಯೂಹಾತ್ಮಕವಾಗಿ ಇರಿಸಲಾದ ಅವರು ಬೇಸಿಗೆಯ ಹವಾನಿಯಂತ್ರಣ ಅಗತ್ಯಗಳನ್ನು ಶೇಕಡಾ 50 ರಷ್ಟು ಕಡಿತಗೊಳಿಸಬಹುದು. ನಮ್ಮ ಮನೆಗಳನ್ನು ತಂಪಾಗಿಸಲು ಶಕ್ತಿಯ ಬೇಡಿಕೆಯನ್ನು ಕಡಿಮೆ ಮಾಡುವ ಮೂಲಕ, ನಾವು ವಿದ್ಯುತ್ ಸ್ಥಾವರಗಳಿಂದ ಇಂಗಾಲದ ಡೈಆಕ್ಸೈಡ್ ಮತ್ತು ಇತರ ಮಾಲಿನ್ಯ ಹೊರಸೂಸುವಿಕೆಗಳನ್ನು ಕಡಿಮೆ ಮಾಡುತ್ತೇವೆ.



ವಿಶ್ವ ಪರಿಸರ ದಿನದ ಗೀತೆ

ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಹಾಡಲು ಅರ್ಥ್ ಗೀತೆಯನ್ನು ರಚಿಸಲಾಯಿತು.

ಇದನ್ನು ಭಾರತೀಯ ರಾಜತಾಂತ್ರಿಕ ಕವಿ ಅಭಯ್ ಕೆ ರಚಿಸಿದ್ದಾರೆ.

ಇದನ್ನು ವಿಶ್ವಸಂಸ್ಥೆಯ ಎಲ್ಲಾ ಅಧಿಕೃತ ಭಾಷೆಗಳಾದ ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪ್ಯಾನಿಷ್ ಒಳಗೊಂಡ ಎಂಟು ಭಾಷೆಗಳಲ್ಲಿ ದಾಖಲಿಸಲಾಗಿದೆ.

ಇದನ್ನು ಹಿಂದಿ ಮತ್ತು ನೇಪಾಳಿ ಭಾಷೆಗಳಲ್ಲಿಯೂ ದಾಖಲಿಸಲಾಗಿದೆ.

ಇದನ್ನು ೨೦೧೩ ರ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು.

ಇದನ್ನು ಜಾಗತಿಕ ಸಂಸ್ಥೆ ಹ್ಯಾಬಿಟ್ಯಾಟ್ ಫಾರ್ ಹ್ಯುಮಾನಿಟಿ ಬೆಂಬಲಿಸುತ್ತದೆ.

ವಾರ್ಷಿಕ ಥೀಮ್ ಗಳು ಮತ್ತು ಆತಿಥೇಯ ದೇಶಗಳು


ಜ್ಞಾನಪೀಠ ಪ್ರಶಸ್ತಿ karnataka

 ಜ್ಞಾನಪೀಠ ಪ್ರಶಸ್ತಿ

ಜ್ಞಾನಪೀಠ ಪ್ರಶಸ್ತಿಯು ಭಾರತೀಯ ಜ್ಞಾನಪೀಠವು "ಸಾಹಿತ್ಯಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ" ಲೇಖಕರಿಗೆ ವಾರ್ಷಿಕವಾಗಿ ಪ್ರಸ್ತುತಪಡಿಸುವ ಅತ್ಯಂತ ಹಳೆಯ ಮತ್ತು ಅತ್ಯುನ್ನತ ಭಾರತೀಯ ಸಾಹಿತ್ಯ ಪ್ರಶಸ್ತಿಯಾಗಿದೆ. 1961ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು ಭಾರತೀಯ ಭಾಷೆಗಳಲ್ಲಿ ಬರೆಯುವ ಭಾರತೀಯ ಬರಹಗಾರರಿಗೆ ಮಾತ್ರ ನೀಡಲಾಗುತ್ತದೆ, ಇದನ್ನು ಭಾರತ ಮತ್ತು ಇಂಗ್ಲಿಷ್ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರಿಸಲಾಗಿದೆ,ಯಾವುದೇ ಮರಣೋತ್ತರ ಪ್ರದಾನವಿಲ್ಲ.

1965 ರಿಂದ 1981 ರವರೆಗೆ, ಲೇಖಕರಿಗೆ ಅವರ "ಅತ್ಯಂತ ಅತ್ಯುತ್ತಮ ಕೃತಿ"ಗಾಗಿ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ಪ್ರಶಸ್ತಿ ಫಲಕ, ನಗದು ಬಹುಮಾನ ಮತ್ತು ಹಿಂದೂ ಜ್ಞಾನ ಮತ್ತು ಬುದ್ಧಿವಂತಿಕೆಯ ದೇವತೆ ಸರಸ್ವತಿಯ ಕಂಚಿನ ಪ್ರತಿಕೃತಿಯನ್ನು ಒಳಗೊಂಡಿತ್ತು.  ೧೯೫೦ರಲ್ಲಿ ಪ್ರಕಟವಾದ ಒದಕ್ಕುಳಲ್ (ದಿ ಬಿದಿರು ಕೊಳಲು) ಎಂಬ ಕವನ ಸಂಕಲನಕ್ಕಾಗಿ ೧೯೬೫ರಲ್ಲಿ ಪ್ರಶಸ್ತಿ ಸ್ವೀಕರಿಸಿದ ಮಲಯಾಳಂ ಬರಹಗಾರ ಜಿ.ಶಂಕರ ಕುರುಪ್ ಈ ಪ್ರಶಸ್ತಿಗೆ ಮೊದಲ ಬಾರಿಗೆ ಭಾಜನರಾಗಿದ್ದರು. 
 ಹಿಂದಿನ ಇಪ್ಪತ್ತು ವರ್ಷಗಳಲ್ಲಿ ಪ್ರಕಟವಾದ ಕೃತಿಗಳನ್ನು ಮಾತ್ರ ಪರಿಗಣಿಸಲು ನಂತರದ ವರ್ಷಗಳಲ್ಲಿ ನಿಯಮಗಳನ್ನು ಪರಿಷ್ಕರಿಸಲಾಯಿತು, ಪ್ರಶಸ್ತಿಯನ್ನು ನೀಡಬೇಕಾದ ವರ್ಷವನ್ನು ಹೊರತುಪಡಿಸಿ ಮತ್ತು ನಗದು ಬಹುಮಾನವನ್ನು 1981 ರಿಂದ ₹1.5 ಲಕ್ಷಕ್ಕೆ (₹26 ಲಕ್ಷ ಅಥವಾ 2020 ರಲ್ಲಿ ಯುಎಸ್ $ 35,000 ಕ್ಕೆ ಸಮನಾಗಿ) ಹೆಚ್ಚಿಸಲಾಯಿತು. 

2015 ರ ಪ್ರಕಾರ, ನಗದು ಬಹುಮಾನವನ್ನು ₹11 ಲಕ್ಷ (2020 ರಲ್ಲಿ ₹14 ಲಕ್ಷ ಅಥವಾ ಯುಎಸ್ $ 19,000 ಕ್ಕೆ ಸಮನಾಗಿದೆ) ಮತ್ತು ಇಪ್ಪತ್ತಮೂರು ಅರ್ಹ ಭಾಷೆಗಳಲ್ಲಿ ಪ್ರಶಸ್ತಿಯನ್ನು ಹದಿನಾರು ಭಾಷೆಗಳ ಕೃತಿಗಳಿಗೆ ಪ್ರಸ್ತುತಪಡಿಸಲಾಗಿದೆ: ಹಿಂದಿ (ಹನ್ನೊಂದು), ಕನ್ನಡ (ಎಂಟು), ಬಂಗಾಳಿ ಮತ್ತು ಮಲಯಾಳಂ (ತಲಾ ಆರು), ಗುಜರಾತಿ, ಮರಾಠಿ, ಒಡಿಯಾ, ಮತ್ತು ಉರ್ದು (ತಲಾ ನಾಲ್ಕು), ಅಸ್ಸಾಮಿ ಮತ್ತು ತೆಲುಗು (ತಲಾ ಮೂರು),  ಪಂಜಾಬಿ, ತಮಿಳು ಮತ್ತು ಕೊಂಕಣಿ (ತಲಾ ಎರಡು), ಇಂಗ್ಲಿಷ್, ಕಾಶ್ಮೀರಿ ಮತ್ತು ಸಂಸ್ಕೃತ (ತಲಾ ಒಂದು). ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಏಳು ಮಹಿಳಾ ಲೇಖಕರು ಸೇರಿದಂತೆ ಐವತ್ತೆಂಟು ಬರಹಗಾರರು. 1976 ರಲ್ಲಿ, ಬಂಗಾಳಿ ಕಾದಂಬರಿಕಾರಿ ಆಶಾಪೂರ್ಣ ದೇವಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆಯಾದರು ಮತ್ತು 1965 ರ ಕಾದಂಬರಿ ಪ್ರೊಥಾಮ್ ಪ್ರೊಟಿಶ್ರುಟಿ (ದಿ ಫಸ್ಟ್ ಪ್ರಾಮಿಸ್) ಗಾಗಿ ಗೌರವಿಸಲ್ಪಟ್ಟರು, ಇದು ಟ್ರೈಲಾಜಿಯಲ್ಲಿ ಮೊದಲನೆಯದು. ಈ ಪ್ರಶಸ್ತಿಗೆ ಇತ್ತೀಚಿನ ವರು ಅಸ್ಸಾಮಿ ಕವಿ ನೀಲಮಣಿ ಫೂಕನ್ ಮತ್ತು ಕೊಂಕಣಿ ಬರಹಗಾರ ದಾಮೋದರಮೌಜೋ, ಕ್ರಮವಾಗಿ 2020 ಮತ್ತು 2021 ರ ವರ್ಷಗಳಿಗೆ ಪ್ರಶಸ್ತಿ ಯನ್ನು ಪಡೆದರು.

ಜ್ಞಾನಪೀಠ ಪ್ರಶಸ್ತಿ ವಿಜೇತರು 
ಕರ್ನಾಟಕ



ಸ್ವಚ್ಛ ಭಾರತ ಅಭಿಯಾನ ಎಂದರೇನು?

 ಸ್ವಚ್ಛ ಭಾರತ ಅಭಿಯಾನ ಎಂದರೇನು?



ಸ್ವಚ್ಛ ಭಾರತ ಅಭಿಯಾನವು ಭಾರತದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಮತ್ತು ಮಹತ್ವದ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಈ ಅಭಿಯಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಚಯಿಸಿದರು ಮತ್ತು ಮಹಾತ್ಮಾ ಗಾಂಧಿ ಅವರ ಸ್ವಚ್ಛ ದೇಶದ ದೃಷ್ಟಿಕೋನವನ್ನು ಗೌರವಿಸಲು 2014 ರ ಅಕ್ಟೋಬರ್ 2 ರಂದು ಪ್ರಾರಂಭಿಸಲಾಯಿತು.

ಸೂಚನೆ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 25, 2019 ರಂದು ನ್ಯೂಯಾರ್ಕ್ ನಲ್ಲಿ ಸ್ವಚ್ಛ ಭಾರತ ಅಭಿಯಾನದ ಉಪಕ್ರಮಕ್ಕಾಗಿ ಗೇಟ್ಸ್ ಫೌಂಡೇಶನ್ ನಿಂದ "ಗ್ಲೋಬಲ್ ಗೋಲ್ ಕೀಪರ್" ಪ್ರಶಸ್ತಿಯನ್ನು ಸ್ವೀಕರಿಸಿದರು.


ಆರಂಭದಲ್ಲಿ, ಈ ಸ್ವಚ್ಛ ಭಾರತ ಅಭಿಯಾನ ಅಭಿಯಾನವನ್ನು ಎಲ್ಲಾ ಪಟ್ಟಣಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಯಿತು.


ಸ್ವಚ್ಛ ಭಾರತ ಅಭಿಯಾನದ ಈ ಪ್ರಬಂಧವು ಸ್ವಚ್ಛ ಭಾರತ ಅಭಿಯಾನ ಅಭಿಯಾನದ ಬಗ್ಗೆ ಸೂಕ್ತ ವಿವರಗಳನ್ನು ನೀಡುತ್ತದೆ ಮತ್ತು ಬ್ಯಾಂಕ್ ಪರೀಕ್ಷೆಗಳು ಮತ್ತು ಸರ್ಕಾರಿ ಪರೀಕ್ಷೆಗಳಂತಹ ವಿವಿಧ ಪರೀಕ್ಷೆಗಳಿಗೆ ಅಭ್ಯರ್ಥಿಗಳಿಗೆ ಸಹಾಯಕವಾಗಲಿದೆ

ಸ್ವಚ್ಛ ಭಾರತ ಅಭಿಯಾನದ ಕ್ರಿಯಾ ಯೋಜನೆಯನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ವು ರೂಪಿಸಿದೆ. ೨೦೧೯ ರ ವೇಳೆಗೆ ನೈರ್ಮಲ್ಯದ ಸೌಲಭ್ಯವನ್ನು ಮೂರು ಪಟ್ಟು ಹೆಚ್ಚಿಸುವುದು ದೂರದೃಷ್ಟಿಯಾಗಿದೆ. ಜಾರಿಗೆ ತರಬೇಕಾದ ಪ್ರಮುಖ ಬದಲಾವಣೆಯೆಂದರೆ ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಭಾರತದ ತಯಾರಿಕೆಯಲ್ಲಿ.




ಕ್ರಿಯಾ ಯೋಜನೆ ಮುಖ್ಯಾಂಶಗಳು:


2019 ರ ವೇಳೆಗೆ ಶೌಚಾಲಯಗಳ ಬೆಳವಣಿಗೆಯ ಶೇಕಡಾವಾರು ಪ್ರಮಾಣವನ್ನು 3% ರಿಂದ 10% ಗೆ ಸುಧಾರಿಸಿ

ಶೌಚಾಲಯಗಳ ನಿರ್ಮಾಣವನ್ನು ಪ್ರತಿದಿನ 14000 ರಿಂದ 48000 ಕ್ಕೆ ಹೆಚ್ಚಿಸುವುದು

ಸ್ವಚ್ಛ ಭಾರತ ಮಿಷನ್ (ನಗರ) 1.0

ಸ್ವಚ್ಛ ಭಾರತ ಮಿಷನ್ (ನಗರ) ಗೆ ಬಂದಾಗ, ಇದು ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿದೆ ಮತ್ತು ಒಟ್ಟು 377 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ 4041 ಶಾಸನಬದ್ಧ ಪಟ್ಟಣಗಳಲ್ಲಿ ನೈರ್ಮಲ್ಯ ಮತ್ತು ಗೃಹ ಶೌಚಾಲಯ ಸೌಲಭ್ಯಗಳನ್ನು ನೀಡಲು ನಿಯೋಜಿಸಲಾಗಿದೆ.

ಅಂದಾಜು ವೆಚ್ಚ ಐದು ವರ್ಷಗಳಲ್ಲಿ ೬೨,೦೦೯ ಕೋಟಿ ರೂ.ಗಳು, ಕೇಂದ್ರದ ನೆರವಿನ ಪಾಲು ೧೪,೬೨೩ ಕೋಟಿ ರೂ.

1.04 ಕೋಟಿ ಕುಟುಂಬಗಳನ್ನು ಒಳಗೊಳ್ಳಲು, 2.5 ಲಕ್ಷ ಸಮುದಾಯ ಶೌಚಾಲಯ ಆಸನಗಳನ್ನು, 2.6 ಲಕ್ಷ ಸಾರ್ವಜನಿಕ ಶೌಚಾಲಯ ಆಸನಗಳನ್ನು ನೀಡಲು ಮಿಷನ್ ಆಶಿಸಿದೆ.

ಪ್ರತಿ ಪಟ್ಟಣದಲ್ಲಿ ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಸ್ಥಾಪಿಸಲು ಅದು ಪ್ರಸ್ತಾಪಿಸುತ್ತದೆ.

ಈ ಕಾರ್ಯಾಚರಣೆಯ ತಿರುಳಿನಲ್ಲಿ ಆರು ಘಟಕಗಳಿವೆ:


ವೈಯಕ್ತಿಕ ಗೃಹ ಶೌಚಾಲಯಗಳು;

ಸಮುದಾಯ ಶೌಚಾಲಯಗಳು;

ಸಾರ್ವಜನಿಕ ಶೌಚಾಲಯಗಳು;

ಮುನ್ಸಿಪಲ್ ಘನ ತ್ಯಾಜ್ಯ ನಿರ್ವಹಣೆ;

ಮಾಹಿತಿ ಮತ್ತು ಶಿಕ್ಷಣ ಸಂವಹನ (ಐಇಸಿ) ಮತ್ತು ಸಾರ್ವಜನಿಕ ಜಾಗೃತಿ;

ಸಾಮರ್ಥ್ಯ ವರ್ಧನೆ


ನಗರ ಸ್ವಚ್ಛ ಭಾರತ ಮಿಷನ್ ಬಯಲು ಮಲವಿಸರ್ಜನೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತದೆ; ಶೌಚಾಲಯಗಳನ್ನು ಫ್ಲಶ್ ಮಾಡಲು ಅನೈರ್ಮಲ್ಯ ಶೌಚಾಲಯಗಳನ್ನು ಪರಿವರ್ತಿಸಿ; ಕೈಯಾರೆ ಮಲ ಹೊರುವ ಪದ್ಧತಿ ನಿರ್ಮೂಲನೆ ಮಾಡಿ, ಘನತ್ಯಾಜ್ಯ ನಿರ್ವಹಣೆಗೆ ಅನುಕೂಲ ಮಾಡಿಕೊಡುವುದು.
ಈ ಮಿಷನ್ ಜನರಲ್ಲಿ ನಡವಳಿಕೆಯ ಬದಲಾವಣೆಯನ್ನು ತರಲು, ಆರೋಗ್ಯಕರ ನೈರ್ಮಲ್ಯ ಅಭ್ಯಾಸಗಳಿಗಾಗಿ, ಬಯಲು ಮಲವಿಸರ್ಜನೆಯ ಹಾನಿಕಾರಕ ಪರಿಣಾಮಗಳು, ಹರಡಿದ ಕಸದಿಂದ ಹರಡುವ ಪರಿಸರ ಅಪಾಯಗಳು ಮತ್ತು ಇತ್ಯಾದಿಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುವ ಮೂಲಕ ಒತ್ತು ನೀಡುತ್ತದೆ.ಈ ಉದ್ದೇಶಗಳನ್ನು ಸಾಧಿಸಲು, ಬಂಡವಾಳ ಮತ್ತು ಕಾರ್ಯಾಚರಣೆ ವೆಚ್ಚಗಳೆರಡರ ದೃಷ್ಟಿಯಿಂದ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅನುಕೂಲಕರ ವಾತಾವರಣವನ್ನು ಉತ್ತೇಜಿಸಲು ನಗರ ಸ್ಥಳೀಯ ಸಂಸ್ಥೆಗಳನ್ನು ವಿನ್ಯಾಸಗೊಳಿಸಲು, ಅನುಷ್ಠಾನಗೊಳಿಸಲು ಮತ್ತು ನಿರ್ವಹಿಸಲು ವ್ಯವಸ್ಥೆಗಳನ್ನು ತರಲಾಗುತ್ತಿದೆ ಮತ್ತು ಬಲಪಡಿಸಲಾಗುತ್ತಿದೆ