ನೇಮಿಚಂದ್ರ
ಶ್ರೀಮತಿ ನೇಮಿಚಂದ್ರ ಅವರು ಚಿತ್ರದುರ್ಗದಲ್ಲಿ ಜುಲೈ ೧೬ , ೧೯೫೯ ರಂದು ಜನಿಸಿದರು . ತಂದೆ ಪ್ರೊ ಜಿ . ಗುಂಡಣ್ಣ , ತಾಯಿ ತಿಮ್ಮಕ್ಕ . ಬೆಂಗಳೂರಿನ ಎಚ್.ಎ.ಎಲ್ . ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ . ಇವರ ಪ್ರಮುಖ ಕೃತಿಗಳೆಂದರೆ ಯಾದ್ ವಶೇಮ್ – ಕಾದಂಬರಿ , ನಮ್ಮ ಕನಸುಗಳಲ್ಲಿ ನೀವಿದ್ದೀರಿ , ಮತ್ತೆ ಬರೆದ ಕಥೆಗಳು , ನೇಮಿಚಂದ್ರರ ಕಥೆಗಳು ಮುಂತಾದ ಕಥಾಸಂಕಲನಗಳು , ಒಂದು ಕನಸಿನ ಪಯಣ , ಪೆರುವಿನ ಪವಿತ್ರ ಕಣಿವೆಯಲ್ಲಿ – ಪ್ರವಾಸ ಕಥನಗಳು , ಮೊದಲಾದವುಗಳು . ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ , ನೃಪತುಂಗ ಪ್ರಶಸ್ತಿ , ಅತ್ತಿಮಬ್ಬೆ ಪ್ರಶಸ್ತಿಗಳು ಸಂದಿವೆ [ ಪ್ರಸ್ತುತ ‘ ನೀರು ಕೊಡದ ನಾಡಿನಲ್ಲಿ ಅಂಕಣ ಬರೆಹವನ್ನು ಶ್ರೀಮತಿ ನೇಮಿಚಂದ್ರ ಅವರ ‘ ಬದುಕು ಬದಲಿಸಬಹುದು ‘ ಕೃತಿಯಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ .
Neeru Kodada Nadinalli Notes Question Answer
ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1 ) ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು ?
ಉತ್ತರ : ‘ ಮದರ್ಸ್‌ಡೇ , ‘ ‘ ಫಾದರ್ಸ್ ಡೇ ‘ , ‘ ವ್ಯಾಲೆಂಟೈನ್ ಡೇ ‘ ಆಚರಿಸುವುದು ‘ ಗಿಫ್ಟ್ ‘ , ‘ ಗ್ರೀಟಿಂಗ್ ಕಾರ್ಡ್ ‘ ಮಾರುವ ಹೊಸ ಹುನ್ನಾರಗಳೆಂದು ಸರ್ವರಿಗೂ ವೇದ್ಯವಾಗಿದೆ .
2 ) ಲೇಖಕಿಗೆ ಹೋಟೆಲ್‌ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು ?
ಉತ್ತರ : ಲೇಖಕಿಗೆ ಹೋಟೆಲ್‌ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಬರೀ ಬಾಯಲ್ಲ ಮನ ತಂಪಾಯಿತು .
3 ) ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು ?
ಉತ್ತರ : ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಕೋಲಾ ಸಿಗುತ್ತದೆ .
4 ) ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ ?
ಉತ್ತರ : ಪ್ರತಿಯೊಬ್ಬರೂ ಪ್ರತಿಯೊಬ್ಬರೂ ನೀರನ್ನು ಕೊಂಡು ಕುಡಿಯುವಂತೆ ಮಾಡುವ ಹುನ್ನಾರ ಭಾರತದಲ್ಲಿ ಇತ್ತೀಚೆಗೆ ನಡೆದಿದೆ .
5 ) ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ ?
ಉತ್ತರ : ಯೂರೋಪಿನಲ್ಲಾಗಲಿ , ಅಮೇರಿಕದಲ್ಲಾಗಲಿ ನೀರು ಕೊಡುವ ಸಂಪ್ರದಾಯವಿಲ್ಲ .
6 ) ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ ?
ಉತ್ತರ : ಮನೆಗೆ ಬಂದವರಿಗೆ ಮೊದಲು ನೀರು ಕೊಡುವ ‘ ಸಂಪ್ರದಾಯವಿದೆ .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ
1 ) ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿರುವ ಆಚರಣೆಗಳಾವುವು ?
ಉತ್ತರ : ‘ ಮದರ್ಸ್‌ಡೇ , ‘ ‘ ಫಾದರ್ಸ್ ಡೇ ‘ , ‘ ವ್ಯಾಲೆಂಟೈನ್ ಡೇ ‘ ಆಚರಿಸುವುದು ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿವೆ . ಈ ಹೊಸ ಹೊಸ ದಿನಗಳೆಲ್ಲ ಉಕ್ಕಿದ ಪ್ರೀತಿಯ ದ್ಯೋತಕವಲ್ಲ . ‘ ಗಿಫ್ಟ್ ‘ , ‘ ಗ್ರೀಟಿಂಗ್ ಕಾರ್ಡ್ ‘ ಮಾರುವ ಹೊಸ ಹುನ್ನಾರಗಳೆಂಬುದು ಎಲ್ಲರಿಗೂ ತಿಳಿದಿದೆ .
ಉತ್ತರ : ತಂಪು ಪಾನೀಯದ ಕಂಪನಿಯೊಂದು ಜನಪ್ರಿಯ ಹೋಟೆಲಿನ ಮಾಲೀಕರೊಬ್ಬರನ್ನು ಸಂಪರ್ಕಿಸಿ ನೀವು ಗ್ರಾಹಕರಿಗೆ ಬಂದೊಡನೆ ನೀರು ಕೊಡುವುದನ್ನು ನಿಲ್ಲಿಸಿದರೆ , ಇಷ್ಟು ಹಣ ಕೊಡುವುದಾಗಿ ‘ ಹೇಳಿತ್ತು .
3 ) ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ ?
ಉತ್ತರ : ಕೋಲಾಗಳ ಆಸೆಯಿಂದ ನಾವು ಎಳನೀರು , ಮಜ್ಜಿಗೆ , ಪಾನಕ , ಕಬ್ಬಿನ ಹಾಲು , ತಾಜಾ ಹಣ್ಣಿನ ರಸ ಎಲ್ಲವನ್ನು ತೊರೆಯುತ್ತಿದ್ದೇವೆ
4 ) ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಏನೇನು ದೊರೆಯುವವು ?
ಉತ್ತರ : ಬಾಯಾರಿಕೆ , ಕೋಲಾಗಳು , ಫ್ರೆಂಚ್ ವೈನ್ , ಬಿಯರ್ , ಬಾಟಲಿಯಲ್ಲಿ ಹಣ್ಣಿನ ರಸ ಧಾರಾಳವಾಗಿ ದೊರೆಯುತ್ತವೆ . ಆದರೆ ಕುಡಿಯಲು ನೀರು ಸಿಗುವುದಿಲ್ಲ .
5 ) ಗುರುದ್ವಾರಗಳ ಬಳಿ ಸ್ವಯಂ ಸೇವಕರು ಏನು ಮಾಡುತ್ತಿದ್ದರು ?
ಉತ್ತರ : ಗುರುದ್ವಾರಗಳ ಬಳಿ , ಸ್ವಯಂ ಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದು , ನಿಲ್ಲಿಸಿದ ಆಟೋ , ಬಸ್ಸು ಹಾಗೂ ದಾರಿಹೋಕರಿಗೆಲ್ಲ ಕುಡಿಯಲು ನೀರು ತುಂಬಿ ತುಂಬಿ ಕೊಡುತ್ತಿದ್ದರು .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
1 ) ಕಂಪನಿಗಳು ಅಪ್ಪಟ ಅಗತ್ಯದ ವಸ್ತುಗಳನ್ನು ಇವಿಲ್ಲದೆ ಬದುಕಿಲ್ಲ ‘ ಎಂಬಂತೆ ಹೇಗೆ ಬಿಂಬಿಸುತ್ತಿವೆ ?
ಉತ್ತರ : ನಮ್ಮ ಭಾರತೀಯ ಸಂಸ್ಕೃತಿಯ ಬುನಾದಿಯನ್ನು ಜೀವನಶೈಲಿಯನ್ನು , ನಂಬಿಕೆಗಳನ್ನು , ಮೌಲ್ಯಗಳನ್ನು , ಸಂಸ್ಕೃತಿಯ ಬುನಾದಿಯನ್ನು ಅಲುಗಿಸುವ ‘ ಕೊಳ್ಳುಬಾಕತನ ‘ , ಅಗತ್ಯಗಳಲ್ಲಿ ನಡೆದು ಹೋಗುತ್ತಿದ್ದ ಬದುಕು , ಇಂದು ‘ ಬೇಕು’ಗಳ ಬಲೆಗೆ ಬಿದ್ದಿದೆ . ಬೇಕುಗಳನ್ನು ‘ ಆಗತ್ಯ’ಗಳಾಗಿ , ಹಾಗೂ ಅತ್ಯಗತ್ಯ’ಗಳಾಗಿ ಬಲು ಜಾಣತನದಿಂದ ಬದಲಿಸುವ ಜಾಹೀರಾತುಗಳು ಮತ್ತೆ ಮತ್ತೆ ಬಿತ್ತರಿಸುತ್ತವೆ . ಕಂಪನಿಗಳು ಆರಾಮ , ಐಷಾರಾಮದ , ಅಪ್ಪಟ ಅನಗತ್ಯದ ವಸ್ತುಗಳನ್ನು ‘ ಇವಿಲ್ಲದೆ ಬದುಕಿಲ್ಲ ‘ ಎಂಬಂತೆ ಬಿಂಬಿಸುತ್ತವೆ . ‘ ಡಿಓಡರೆಂಟ್ ‘ ಹಾಕಿಕೊಳ್ಳದೆ ಇದ್ದರೆ ‘ ತಾನು ನಾತ ಬಡಿಯುತ್ತೇನೆ ‘ ಎಂಬಷ್ಟು ಕೀಳರಿಮೆಯನ್ನು ಕಂಪನಿಗಳು ಹುಟ್ಟಿಸಬಲ್ಲವು . ಕೊನೆಗೆ ಎಲ್ಲವೂ ನಮ್ಮನ್ನು ಕೊಳ್ಳುವಂತೆ ಪ್ರೇರೇಪಿಸುತ್ತವೆ .
2 ) ಲೇಖಕಿಗೆ ಬೆಂಗಳೂರಿನಲ್ಲಿ ನೀರು ಕೊಡದ ಸಂಸ್ಕೃತಿಯ ಬಗ್ಗೆ ಆದ ಅನುಭವನ್ನು ಬರೆಯಿರಿ .
ಉತ್ತರ : ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ ‘ ಬಾಂಬೆ ಬಜಾರ್ ‘ ಎದುರಿನ ಪುಟ್ಟ ಜಾಯಿಂಟ್‌ನಲ್ಲಿ ಲೇಖಕಿ ಮತ್ತು ಅವರ ಮಗಳು ಕುಳಿತಿದ್ದರು . ಅಲ್ಲಿ ನೀರು ತಂದಿಡಲಿಲ್ಲ . ಅವರು ಐಸ್ಕ್ರೀಂ ತಿಂದ ನೀರು ಬೇಕು ‘ ಎಂದು ಕೇಳಿದರು . ಅದಕ್ಕೆ ವೇಟರ್ ‘ ಮಿನಿರಲ್ ವಾಟರ್ ಬೇಕೆ ? ‘ ಎಂದು ಪ್ರಶ್ನಿಸಿದನು . ಅದಕ್ಕೆ ಲೇಖಕಿಯವರು ‘ ಇಲ್ಲಪ್ಪ ಸಾಮಾನ್ಯ ನೀರು ‘ ಎಂದರು . ಹೋದ ವೇಟರ್ ಹದಿನೈದು ನಿಮಿಷ ಕಾದರೂ ಬರಲೇ ಇಲ್ಲ . ಕಾದು ಕಾದು ಸುಸ್ತಾಗಿ ಕೊನೆಗೆ ಬಿಲ್ಲು ಕೊಟ್ಟು ಹೊರಬಂದರು . ಅದೇ ವೇಟರ್ , ಪುಟ್ಟ ಪುಟ್ಟ ಬಾಟಲಿಗಳಲ್ಲಿ ಮಿನರಲ್ ವಾಟರುಗಳನ್ನು ಬೇರೆ ಬೇರೆ ಮೇಜಿಗೆ ಸರಬರಾಜು ಮಾಡುತ್ತಿದ್ದುದು ಕಂಡುಬಂತು .
3 ) ದುಡ್ಡಿಲ್ಲದೇ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯವೇನು ?
ಉತ್ತರ : ನೀರು ಸಲೀಸಾಗಿ ಎಲ್ಲೆಂದರಲ್ಲಿ ಪುಕ್ಕಟ್ಟೆಯಾಗಿ ವಿದೇಶಗಳಲ್ಲಿ ಖಂಡಿತ ಸಿಗುವುದಿಲ್ಲ . ನಮ್ಮಲ್ಲಿಯಂತೆ ರೈಲು ನಿಲ್ದಾಣಗಳಲ್ಲಿ , ಬಸ್ಸು ನಿಲ್ದಾಣಗಳಲ್ಲಿ , ವಿಮಾನ ನಿಲ್ದಾಣಗಳಲ್ಲೂ ‘ ದುಡ್ಡಿಲ್ಲದೆ ಕುಡಿಯಬಲ್ಲ ನೀರನ್ನು ಇರಿಸುವುದಿಲ್ಲ . ಬಾಯಾರಿದಾಗ ಈಗಲೂ ಹೋಟೆಲ್ ಒಂದಕ್ಕೆ ಹೊಕ್ಕು , ನೀರು ಮಾತ್ರ ಕುಡಿದು ಹೊರ ಬರಬಹುದಾದ ಸವಲತ್ತು ಇಲ್ಲಿಲ್ಲ . ಮನೆಯ ಹೊರಗೆ ಕಾಂಪೌಡ್ ಗೋಡೆಗೆ ಸಣ್ಣ ತೊಟ್ಟಿ ಕಟ್ಟಿ , ‘ ದನಕರುಗಳು ಕುಡಿದು ಹೋಗಲಿ ‘ ಎಂದು ನೀರು ತುಂಬಿಡುತ್ತಿದ್ದ ಬಾಲ್ಯದ ದಿನಗಳು ನನಗಿನ್ನೂ ನೆನಪಿವೆ . ದಿಲ್ಲಿಯಲ್ಲೂ ಯಾರೋ ಪುಣ್ಯಾತ್ಮರು ದೊಡ್ಡ ಮಣ್ಣಿನ ಮಡಕೆಗಳಲ್ಲಿ ನೀರು ತುಂಬಿಟ್ಟಿರುತ್ತಿದ್ದರು . ಅನೇಕ ಗುರುದ್ವಾರಗಳ ಬಳಿ , ಸ್ವಯಂ ಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದು , ನಿಲ್ಲಿಸಿದ ಆಟೋ , ಬಸ್ಸು ಹಾಗೂ ದಾರಿಹೋಕರಿಗೆಲ್ಲ ನೀರು ತುಂಬಿ ತುಂಬಿ ಕುಡಿಸುತ್ತಿದ್ದರು ‘ ಎಂದು ದುಡ್ಡಿಲ್ಲದೇ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರು ಅಭಿಪ್ರಾಯಪಟ್ಟಿದ್ದಾರೆ .
ಈ) ಖಾಲಿಬಿಟ್ಟ ಜಾಗಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ .
1 ) ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವೂ ‘ ನೀರು ಕೊಡದ ನಾಡುಗಳು ‘
2 ) ಈ ದೇಶಗಳಲ್ಲಿ ಮನೆಯ ನಲ್ಲಿಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ .
3 ) ಗ್ರೀಟಿಂಗ್ ಕಾರ್ಡ್ ಮಾರುವ ಹೊಸ ಹುನ್ನಾರ ಗಳೆಂದು ಸರ್ವರಿಗೂ ವೇದ್ಯವಾಗಿದೆ .
4 ) ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ ಕೋಲಾ ನೀಡುತ್ತಾರೆ .
ಉ ] ಕೊಟ್ಟಿರುವ ಪದಗಳ ತದ್ಭವ ರೂಪ ಬರೆಯಿರಿ
ವರ್ಷ ವರ್ಷ ,
ಪ್ರಾಣ ಹರಣ ,
ಶಕ್ತಿ – ಸಕುತಿ ,
ಮಣ್ಯ – ಹೂನ್ಯ