Showing posts with label tenth kannada notes. Show all posts
Showing posts with label tenth kannada notes. Show all posts

10ನೇ ತರಗತಿ ವೀರಲವ ಕನ್ನಡ ನೋಟ್ಸ್ veeralava notes

 

 ವೀರಲವ ಕನ್ನಡ ನೋಟ್ಸ್ 




 ಕವಿಪರಿಚಯ– ಲಕ್ಷ್ಮೀಶ

 ಕವಿ ಲಕ್ಷ್ಮೀಶನು ಕ್ರಿ . ಶ . ಸುಮಾರು ೧೫೫೦ ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ

ದೇವನೂರಿನಲ್ಲಿ ಜನಿಸಿದನು . ಇವನಿಗೆ ಲಕ್ಷ್ಮೀರಮಣ , ಲಕ್ಷ್ಮೀಪತಿ ಎಂಬ ಹೆಸರುಗಳೂ ಇದ್ದವು . ಇವರು

‘ ಜೈಮಿನಿ ಭಾರತ ‘ ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ . ಈತನಿಗೆ ಉಪಮಾಲೋಲ , ಕರ್ಣಾಟ

ಕವಿಚೂತವನಚೈತ್ರ ಎಂಬ ಬಿರುದುಗಳನ್ನು ನೀಡಿಗೌರವಿಸಲಾಗಿದೆ . 

ಅ ] ಒಂದು ವಾಕ್ಯದಲ್ಲಿ ಉತ್ತರಿಸಿ . 

೧. ‘ ಜೈಮಿನಿ ಭಾರತ ‘ ಕಾವ್ಯವನ್ನು ಬರೆದ ಕವಿ ಯಾರು ? 

ಜೈಮಿನಿ ಭಾರತಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ 

೨. ಯಜ್ಞಾಶ್ವವನ್ನು ಕಟ್ಟಿದವರು ಯಾರು ? 

ಯಜ್ಞಾಶ್ವವನ್ನು ಕಟ್ಟಿದವರು ಲವ

 ೩ ಕುದುರೆಯನ್ನು ಅವನು ಯಾವುದರಿಂದ ಕಟ್ಟಿದನು ? 

ಕುದುರೆಯನ್ನು ಅವನು ತನ್ನ ಉತ್ತರೀಯದಿಂದ ಕಟ್ಟಿದನು . 

೪. ಮುನಿಸುತರು ಹೆದರಲು ಕಾರಣವೇನು ? 

ಅವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ ಮುನಿಸುತರು ಹೆದರಿದರು .

 ಆ ] ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ . 

೧. ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ . 

ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದು ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು . 

೨. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ? 

ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಭೂಮಂಡಲದಲ್ಲಿ ಕೌಸಲ್ಯಯು ಮಗನಾದ  ರಾಮನು ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರುಯಾರೇ ಆದರು ತಡೆಯಲಿ ” ಎಂದ ಬರೆಯಲಾಗಿತ್ತು . 

 ೩. ಕುದುರೆಯನ್ನುಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ. 

ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಹೆದರಿದ ಮುನಿಸುತರು ” ಬೇಡಬೇಡ ಅರಸುಗಳ ಕುದುರೆಯನ್ನು ಬಿಡು , ನಮ್ಮನ್ನು ಹೊಡೆಯವರು ” ಎಂದು ಹೇಳಿದರು . ಆಗ ಅವನು ನಗುತ “ ಬ್ರಾಹ್ಮಣರ ಮಕ್ಕಳು ಹೆದರಿದರೆ , ಜಾನಕಿಯ ಮಗನು ಇದಕ್ಕೆ ಹೆದರುವನೇ , ನೀವು ಹೋಗಿ ” ಎಂದು ಶೌರ್ಯದಿಂದ ಹೇಳಿದನು . 

ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

 ೧. ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು ? 

ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು . ಆಗ ಇದನ್ನು ಕಂಡ ಅವನು ಯಾವ ಕಡೆಯ ಕುದುರೆಯು . ಹೊಕ್ಕು , ಹೂತೋಟವನ್ನು . ನುಗ್ಗುನುರಿಯಾಗುವಂತೆ ತುಳಿದುದು . ” ಎಂದು ಕುದುರೆ ಯಕಡೆಗೆ ನಡೆದು ಬಂದು ನೋಡಿದನು . ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ ಭೂಮಂಡಲದಲ್ಲಿ ಕೌಸಲ್ಯಯ ಮಗನಾದ ರಾಮನ ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ ” ಎಂದು ಬರೆಯಲಾಗಿತ್ತು . ಇದನ್ನು ಓದಿದ ಅವನು ಕೋಪಗೊಂಡು “ ಅಹಂಕಾರವನ್ನು ಬಿಡಿಸದಿದ್ದರೆ ತನ್ನತಾಯಿಯನ್ನು ಎಲ್ಲ ಜನರೂ ಬಂಜೆ ಎನ್ನದಿರುವರೇ , ತನಗೆ ರುವ ತೋಳುಗಳು ಇವು ಏತಕೆ ? ” ಎಂದು ಪ್ರತಿಜ್ಞೆಯನ್ನುಕೈಗೊಂಡು , ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಕಟ್ಟಿಹಾಕಿದನು . 

೨. ಲವನ ನಡೆವಳಿಕೆ ಮೆಚ್ಚುಗೆಯಾಯಿತೆ ? ಏಕೆ ? 

ಲವನು ಬಾಲಕನಾಗಿದ್ದರು ಸ್ವಾಭಿಮಾನಿ , ಅವನ ಮಾತುಗಳು ವೀರೋಚಿತ . ಆತನ ಮಾತೃಪ್ರೇಮ ಅನನ್ಯ . ವಾಲ್ಮೀಕಿ ಮಹರ್ಷಿಗಳು ಆಶ್ರಮದಿಂದ ಹೊರಗೆ ಹೋಗುವಾಗ ಅವನಿಗೆ ಆಶ್ರಮದ ಜವಾಬ್ದಾರಿಯನ್ನು ವಹಿಸಿರುತ್ತಾರೆ . ಇಂತಹ ಸಮಯದಲ್ಲಿ ರಾಮನ ಯಜಾಶ್ವವು ಆಶ್ರಮವನ್ನು ಪ್ರವೇಶಿಸಿ ಹೂದೋಟವನ್ನು ಹಾಳುಮಾಡುತ್ತದೆ . ಇದನ್ನು ಕಂಡು ಅವನು ಕುದುರೆಯ ಬಳಿಬಂದು , ಕುದುರೆಯ ನೆತ್ತಿಯ ಮೇಲೆ ಮೆರೆಯುತ್ತಿದ್ದ ಪಟ್ಟದ ಲಿಖಿತವನ್ನು ಓದಿ . ರಾಮನೊಬ್ಬನೇ ಜಗತ್ತಿಗೆ ವೀರನೆಂಬ ವಾಕ್ಯವನ್ನು ಕಂಡು ಕೆರಳಿ , ಇವನ ಗರ್ವವನ್ನು ಬಿಡಿಸುತ್ತೇನೆ . ಇಲ್ಲದಿದ್ದಲ್ಲಿ ನನ್ನ ತಾಯಿಯನ್ನು ಎಲ್ಲರೂ ಹೇಡಿಯನ್ನು ಹೆತ್ತವಳೆಂದು ದೂರಿಬಿಡುತ್ತಾರೆ ಎಂದು ಚಿಂತಿಸಿ , ತನ್ನ ತೋಳಲವನ್ನು ತೋರಿಸಿಬಿಡುತ್ತೇನೆ ಎಂದು ಕುದುರೆಯನ್ನು ಕಟ್ಟಿಹಾಕುತ್ತಾನೆ . ಋಷಿ ಮುನಿಗಳ ಮಕ್ಕಳು ಹೆದರಿಕೆಯಿಂದ ಬೇಡವೆಂದಾಗ , “ ಬ್ರಾಹ್ಮಣರ ಮಕ್ಕಳು ಯುದ್ಧಕ್ಕೆ ಹೆದರಿದರೆ ; ಜಾನಕಿಯ ಸುತನು ಹೆದರುವನೇ ? ” ಎಂದು ವೀರನಂತೆ ಇಲ್ಲಿನ ಹೆಡೆಯೇರಿಸಿ ಠೇಂಕಾರವನ್ನು ಮಾಡಿ ನಿಂತನು . ಮೇಲಿನ ಮಮತೆ . ದುರಹಂಕಾರವನ್ನು ಮೆಟ್ಟುವ ಸಾಹಸ ಇಂತಹ ವೀರ ಬಾಲಕನ ಶೌರ್ಯ ,ಎಂತಹವರಿಗೂ ಮೆಚ್ಚುಗೆಯಾಗುತ್ತದೆ . 

ಈ ] ಸಂದರ್ಭ ಸಹಿತ ಸ್ವಾರಸ್ಯ ತಿಳಿಸಿ .

೧. “ ರಘದಹನ ಸೊಲ್ಲೇಳಿ ನಮಿಸಲ್ 

ಆಯ್ಕೆ : – ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ ಜೈಮಿನಿ ಭಾರತ ಮಹಾ ಕಾವ್ಯದಿಂದ ಆಯ್ದ‘ ವೀರಲವ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . 

ಸಂದರ್ಭ : ಶ್ರೀರಾಮನ ಅಶ್ವಮೇಧ ಯಾಗದ ಯಜ್ಞಾಶ್ವವು ಸಂಚರಿಸಿದ ಕಡೆಯಲ್ಲೆಲ್ಲ ರಾಜರುಗಳಿಂದ

ಅದಕ್ಕೆ ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ . 

ಸ್ವಾರಸ್ಯ : ಶ್ರೀರಾಮನ ಹೆಸರನ್ನು ಕೇಳಿಯೇ ಪರಾಕ್ರಮಿಗಳಾದ ರಾಜರುಗಳು ಗೌರವದಿಂದ ನಮಿಸಿ ಶರಣಾಗಿ

ಯಜ್ಞಾಶ್ವವು ಮುಂದೆ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ವರ್ಣಿಸಿರುವುದು ಸ್ವಾರಸ್ಯಪೂರ್ಣವಾಗಿದೆ . 

೨ “ ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪದೆ ” 

ಸಂದರ್ಭ : ಲವನು ತನ್ನ ಆಶ್ರಮದ ತೋಟವನ್ನು ಧ್ವಂಸ ಮಾಡಿದ ಶ್ರೀರಾಮನ ಯಜ್ಞಾಶ್ವದ ಹಣೆಯಲ್ಲಿದ್ದ

ಪಟ್ಟಿಯ ಬರಹವನ್ನು ಓದಿ ಅದನ್ನು ಕಟ್ಟಿಹಾಕಲು ನಿರ್ಧರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

 ಸ್ವಾರಸ್ಯ : ಕ್ಷತ್ರಿಯನಾದ ವೀರಲವನು ಬಾಲಕನಾದರೂ ಹೆದರದೆ ಕುದುರೆಯನ್ನು ಕಟ್ಟಲು ನಿರ್ಧರಿಸಿ , ತನ್ನ

ವೀರತ್ವವನ್ನು ಪ್ರದರ್ಶಿಸುವುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ . 

೩. “ ಅರಸುಗಳ ವಾಜಿಯ ಬಿಡು ” 

ಸಂದರ್ಭ : – ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿಹಾಕಿದ ಸಂದರ್ಭದಲ್ಲಿ ಮುನಿಪುತರು ಈ ಮಾತನ್ನು ಹೇಳುತ್ತಾರೆ .  

ಸ್ವಾರಸ್ಯ : ರಾಜನ ಯಜ್ಞಾಶ್ವವನ್ನು ಕಟ್ಟಿಹಾಕುವುದು ಅಪರಾಧ ಅದರಿಂದ ಮುಂದೆ ತೊಂದರೆ ಉಂಟಾಗುತ್ತದೆ

ಎಂದು ಮುನಿಪುತ್ತರು ಭಯಗೊಳ್ಳುವುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ . 

೪. “ ಜಾನಕಿಯ ಮಗನಿದಕೆ ಬೆದರುವನೆ “ 

ಸಂದರ್ಭ – ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು

ಮುನಿಪುತ್ರರು ಕುದುರೆಯನ್ನು ಬಿಡು ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ಲವರು ಹೇಳುತ್ತಾನೆ . 

ಸ್ವಾರಸ್ಯ : – ಸೀತೆಯ ಮಗನಾದ ಲವನ ಧೈರ್ಯವು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ . 

 ಭಾಷಾ ಚಟುವಟಿಕೆ 

೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ , 

೧. ಸೊಲ್ಗಳಿ      -ಸೊಲ್ಲನ್ನು + ಕೇಳಿ=ಕಿಯಾಸಮಾಸ

 ೨. ನಲ್ಲುದುರೆ  -ನಲ್ಲಿತು + ಕುದುರೆ=ಕರ್ಮಧಾರಯ ಸಮಾಸ

೩. ಬಿಲ್ಗೊಂಡು  -ಬಿಲ್ಲನ್ನು + ಕೊಂಡು=ಕ್ರಿಯಾಸಮಾಸ

೪. ಬಿಲ್ಲಿರುವನೇರಿಸಿ -ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ

 ೫. ಪೂದೋಟ -ಪೂವಿನ + ತೋಟ= ತತ್ಪುರುಷಸಮಾಸ 

 ೬. ಲಿಖಿತವನೋದಿ – ಲಿಖಿತವನ್ನು + ಓದ=ಕ್ರಿಯಾಸಮಾಸ

೭. ಯಜತುರುಗ  -ಯಜ್ಞದ + ತುರುಗ=ತತ್ಪುರುಷಸಮಾಸ 

 ೮. ಕದಳೆದುಮ  – ಕದಳಿಯ + ದುಮ = ತತ್ಪುರುಷಸಮಾಸ 

೯. ಅಭಿಪ     -ಅಬ್ಬಿಗೆ ( ಸಮುದ್ರಕ್ಕೆ ) ಪತಿ ( ಒಡೆಯ ) ಯಾರೋ ಆತ ( ವರುಣ ) = ಬಹುವೀಹಿಸಮಾಸ 

 ೨. ತತ್ಸಮ – ತದ್ಭವ ಬರೆಯಿರಿ.

 ೧. ವೀರ – ಬೀರ  ೨ , ಯಜ್ಞ – ಜನ್ನ  ,  ೩,ಬಂಜೆ – ವಂದ್ಯಾ ೪ , ಕುವರ – ಕುಮಾರ ೫. ಲೋಕ – ಲೋಗ

ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ. 

೧. ಚರಿಸುತಧ್ವರದ   -ಚರಿಸುತ   + ಅಡ್ವರದ  = ಲೋಪಸಂಧಿ

೨. ನಿಜಾಶ್ರಮ    – ನಿಜ    + ಆಶ್ರಮ   = ಸವರ್ಣದೀರ್ಘಸಂಧಿ

 ೩. ಲೇಖನವನೋದಿ  – ಲೇಖನವನು + ಓದಿ    = ಲೋಪಸಂಧಿ

೪. ತೆಗೆದುತ್ತರೀಯಮಂ    -ತೆಗೆದು  + ಉತ್ತರೀಯಮಂ  = ಲೋಪಸಂಧಿ

 ೫. ಬೇಡಬೇಡರಸುಗಳ    – ಬೇಡಬೇಡ + ಅರಸುಗಳ   = ಲೋಪಸಂಧಿ

 ೬ ನಿಂತಿರ್ದನ್   – ನಿಂತು + ಇರ್ದನ್  = ಲೋಪಸಂಧಿ 

೭ ಪೂದೋಟ     -ಪೂ – ತೋಟ  = ಆದೇಶಸಂಧಿ

೮. ಸೊಳ್ಳೇಳಿ     – ಸೊಲ್ಲು + ಕೇಳಿ   =ಆದೇಶಸಂಧಿ .

 

ವರ್ಧಕ ಷಟ್ಪದಿ ಲಕ್ಷಣಗಳು :

* ಆರು ಸಾಲುಗಳಿರುತ್ತವೆ

*೧ ,೩ ೪ ಮತ್ತು ೫ ನೇ ಸಾಲುಗಳು ತಲಾ ೨೦ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ

* ೩ ಮತ್ತು ೪ನೇ ಸಾಲುಗಳು ತಲಾ ೩೨ ಮಾತೃಗಳನ್ನು ಹೊಂದಿದ್ದು ೫ ಮಾತ್ರೆಯ ೬ ಗಣಗಳೊಂದಿಗೆ ಒಂದು ಗುರು ಇರುತ್ತದೆ .

* ಮೊದಲನೇ ಸಾಲಿನನ ಗಣವಿನ್ಯಾಸ ೫\೫\೫\೫

ಬಹು ಅಂಶ ಆಯ್ಕೆ ಪ್ರಶ್ನೆಗಳು 

 ೧. ‘ ರಗಳೆ ‘ ಪದದ ತದ್ಭವ ರೂಪವಿದೆ . 

ಎ ) ರಘಟಾ  ಬಿ )ರಗಳಾ  ಸಿ)ರಾಗಟ  ಸಿ)ರಂಗಗೀತೆ  

೨. ಇವುಗಳಲ್ಲಿ ಬಹುಪಾದಗಳುಳ್ಳ ಪದ್ಯ :

ಎ ) ಕಂದ  ಬಿ ) ಷಟ್ಟದಿ  ಸಿ ) ವೃತ್ತ ಡಿ ) ರಗಳೆ

೩. ವಾರ್ಧಕ ಷಟ್ನದಿಯ ಒಂದು ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ :

ಎ ) ೧೦೨   ಬಿ ) ೧೪೦ ಸಿ ) ೧೪೪ ಡಿ ) ೬೪ 

೪. ಇವುಗಳಲ್ಲಿ ಯಾವುದು ರಗಳೆಯ ವಿಧವಾಗಿಲ್ಲ :

ಎ ) ಉತ್ಸಾಹ  ಬಿ ) ಲಲಿತ  ಸಿ ) ಸರಸಿ   ಡಿ ) ಮಂದಾನಿಲ

೫ . ವಾರ್ಧಕ ಷಟ್ನದಿಯಲ್ಲಿ ಪ್ರತಿ ಗಣವು ಎಷ್ಟು ಮಾತ್ರೆಗಳಿಂದ ಕೂಡಿರುತ್ತದೆ ?

ಎ) ೩  ಬಿ) ೬ ಸಿ)೪  ಡಿ ) ೫

೬. * ನೆತ್ತಿಯೊಳ್ ” ಇದು ಈ ವಿಭಕ್ತಿಗೆ ಉದಾಹರಣೆಯಾಗಿದೆ .

ಎ ) ಪ್ರಥಮ  ಬಿ ) ದ್ವಿತೀಯ  ಸಿ ) ತೃತೀಯ  ಡಿ ) ಸಪ್ತಮಿ

೭.’ ಲಿಖಿತಮಂ ‘ ಇಲ್ಲಿರುವ ವಿಭಕ್ತಿ :

ಎ ) ಪ್ರಥಮ  ಬಿ ) ದ್ವಿತೀಯ  ಸಿ ) ತೃತೀಯ  ಡಿ ) ಸಪ್ತಮಿ

೮. ‘ ಕುವರಂ ‘ ಇಲ್ಲಿರುವ ಅಕ್ಷರಗಣ :

ಎ ) ಭ – ಗಣ ಬಿ ) ಸ-ಗಣ ಸಿ ) ಮ – ಗಣ ಡಿ)ತ -ಗಣ 

೯). ಉರ್ವಿಯೊಳ್ ? ಈ ಪದದಲ್ಲಿರುವ ಕಾರಕಾರ್ಥ .

ಎ)ಕರ್ಮಾರ್ಥ ಬಿ)ಸಂಪ್ರದಾನ ಸಿ) ಅಪಾದಾನ ಸಿ) ಅಧಿಕರಣ

೧೦. ‘ ಅಗಡು ‘ ಪದದ ಹೊಸಗನ್ನಡ ರೂಪವಾಗಿದೆ .

ಎ )ಅಡಗಿಕೋ ಬಿ)ಶೌರ್ಯ ಸಿ)ಕುದುರೆ ಡಿ)ಹಡಗು 

ಉತ್ತರ : ಎ ) ರಘಟಾ ಬಿ ) ರಗಳೆ  ಸಿ ) ೧೪೪  ಸಿ ) ಸರಸಿ   ಸಿ ) ೫  ಡಿ ) ಸಪ್ತಮಿ  ಬಿ ) ದ್ವಿತೀಯ   ಬಿ ) ಸ – ಗಣ   ಡಿ ) ಅಧಿಕರಣ   ಬಿ) . ಶೌರ್ಯ

ಮೊದಲೆರಡು ಪದಗಳಿಗಿರುವ ಸಂಬಂಧದಂತೆ   ಮೂರನೆಯ ಬದಕ್ಕೆ ಸಂಬಂಧಿಸಿದಂತೆ ಪದ ಬರೆಯಿರಿ  

೧. ಭಾಮಿನಿ: ೦೦೨ : :ವರ್ಧಕ:____

೨. ವೃತ್ತಗಳು : ಅಕ್ಷರಗಣ   :ರಗಳೆ :_____

 ೩. ಸೊಲ್ಲೇಳಿ :ಕ್ರಿಯಾಸಮಾಸ :ಪೂದೋಟ____

೪. ಬಿಲ್ಲಿರುವನೇರಿಸಿ:ಕ್ರಿಯಾಸಮಾಸ : ನಲ್ಲುದುರೆ______

 ೫. ನೃಪ:ರಾಜ :ಅಭಿಪ  :_______

 ೬. ಸೊಳ್ಳೇಳಿ :ಸೊಲ್ಲನ್ನು + ಕೇಳಿ :_______

೭. ವೀರ ; ಬೀರ :: ಬಂಜೆ :_________

೮. ಗಳ :ಕೊರಳು:: ವಾಜಿ :______

ಉತ್ತರಗಳು :  ೧ . ೧೪೪ ೨ .ಮಾತ್ರಾಗಣ  ೩.ತತ್ಪುರುಷಸಮಾಸ  ೪.ಕರ್ಮಧಾರಯ 

 ೫. ವರುಣ  ೬.ನಲ್ಲಿ ತ್ತು +ಕುದುರೆ  ೭.ವಂದ್ಯಾ  ೮.ಕುದುರೆ 


10ನೇ ತರಗತಿ ಹಸುರು ಕನ್ನಡ ನೋಟ್ಸ್ hasuru kannada notes

 

 ಹಸುರು ಕನ್ನಡ ನೋಟ್ಸ್ 




ಪದ್ಯ -೫ .  ಹಸುರು 

ಕವಿ ಪರಿಚಯ : ಕುವೆಂಪು 

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು . ಜನನ ೧೯೦೪ ಡಿಸೆಂಬರ್ ೨೯ , 

ಇವರು ಬರೆದಿರುವ ಪ್ರಮುಖ ಕೃತಿಗಳು : ಕೊಳಲು , ಪಾಂಚಜನ್ಯ , ಪ್ರೇಮಕಾಶ್ಮೀರ , ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು , ನನ್ನ ದೇವರು ಮತ್ತು ಇತರ ಕಥೆಗಳು , ಸಂನ್ಯಾಸಿ ಮತ್ತು ಇತರ ಕಥೆಗಳು -ಕಥಾಸಂಕಲನಗಳು , ಕಾನೂರು ಹೆಗ್ಗಡತಿ , ಮಲೆಗಳಲ್ಲಿ ಮದುಮಗಳು – ಕಾದಂಬರಿಗಳು . ರಸೋವೈಸಃ , ತಪೋನಂದನ – ವಿಮರ್ಶಾ ಸಂಕಲನಗಳು , ಅಮಲನ ಕಥೆ , ಮೋಡಣ್ಣನ ತಮ್ಮ , ಬೊಮ್ಮನಹಳ್ಳಿಯ ಕಿಂದರಿಜೋಗಿ – ಮಕ್ಕಳ ಪುಸ್ತಕಗಳು , ಜಲಗಾರ , ಯಮನ ಸೋಲು , ಬೆರಳೆ ಕೊರಳ್ – ನಾಟಕಗಳು , ನೆನಪಿನ ದೋಣಿಯಲ್ಲಿ – ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ . ಶ್ರೀಯುತರಿಗೆ ‘ ಶ್ರೀರಾಮಾಯಣ ದರ್ಶನಂ ‘ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೬೮ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ . ಧಾರವಾಡದಲ್ಲಿ ನಡೆದ ೧೯೫೭ ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು . ಇವರಿಗೆ ೧೯೬೪ ರಲ್ಲಿ ರಾಷ್ಟ್ರಕವಿ , ೧೯೮೮ ರಲ್ಲಿ ಪಂಪ ಪ್ರಶಸ್ತಿ , ೧೯೯೧ ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ . ಅಲ್ಲದೆ ಮೈಸೂರು , ಕರ್ನಾಟಕ , ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ . ೧೯೯೨ ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ . ಪ್ರಸ್ತುತ ಪದ್ಯಭಾಗವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ .

ಆ)ಕೊಟ್ಟಿರುವ ಪ್ರಶ್ನೆಗಳಿಗೆ  ಒಂದು ವಾಕ್ಯದಲ್ಲಿ ಉತ್ತರಿಸಿ . 

ಆಶ್ವಯುಜ೦ದ ಬತ್ತದ ಗದ್ದೆಯ ಬಣ್ಣಯಾವ ಹಸುರಿನಂತಿದೆ? 

ಉ : ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಗಿಳಿಯ ಹಸುರಿನಂತಿದೆ . 

೨. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?

 ಉ : ಕವಿಯು ನೋಡಿದ ಅಡಕೆಯ ತೋಟ ವನದಂಚಿನಲ್ಲಿದೆ . 

೩. ‘ ಹಸುರು ‘ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ? 

ಉ : ‘ ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ . 

೪. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ? 

ಉ : ಕವಿಗೆ ಹುಲ್ಲಿನ ಹಾಸು ಮಕಮಲ್ಲಿನ ಹೊಸಪಚ್ಚೆಯ ಜಮಖಾನೆಯ ರೀತಿ ಕಂಡಿದೆ . 

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ . 

೧ ) ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ ? 
ಉ : ಕವಿಗೆ ನವರಾತ್ರಿಯಲ್ಲಿ , ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ , ನೀಲ ಸಮುದ್ರದಲ್ಲಿ ಹಸುರಾದ ಕವಿಯ ಹೃದಯಕ್ಕೆ ಆಗಸ ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲುಕಾಡಂಚಿನ ಅಡಕೆಯ ತೋಟ , ಹೂವಿನ ಕಂಪಿನಲ್ಲಿ , ಎಲರಿನ ತಂಪಿನಲ್ಲಿ ಹಕ್ಕಿಯ ಕೊರಲಿನಲ್ಲಿ ,ಹೀಗೆ ಆಗಸದಿಂದ ಬಿಸಿಲವರೆಗೂ ಕವಿಗೆ ಹಸುರು ಕಾಣುತ್ತಿದೆ . 

೨ ) ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ ?

ಉ : ಹಸುರಾದ ಭೂಮಿ , ಆಗಸ , ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು ಕಾಡಂಚಿನ
ಅಡಕೆಯ ತೋಟ ಇವೆಲ್ಲಾ ಕಣ್ಣಿಗೆ ಗೋಚರವಾದರೆ , ಹೂವಿನ ಕಂಪಿನ ಹಸುರು ಮೂಗಿಗೆ , ಎಲರಿನ ತಂಪಿನ ಸ್ಪರ್ಷ
ಚರ್ಮಕ್ಕೆ , ಹಕ್ಕಿಯ ಕೊರಲಿನ ಚಿಲಿಪಿಲಿ ಗಾನ ಕಿವಿಗೆ , ಶ್ಯಾಮಲ ಸಮುದ್ರದ ಹಸುರು ಕವಿಯಾತ್ಮಕ್ಕೆ ರಸಪಾನ ಮಾಡಿದಂತಾದುದು ನಾಲಗೆಗೆ ಹೀಗೆ ಪ್ರಕೃತಿಯ ಹಸುರು ಸಕಲ ಇಂದ್ರಿಯಗಳನ್ನೂ ವ್ಯಾಪಿಸಿದೆ ಎಂಬುದನ್ನು ಕವಿ ಕುವೆಂಪು ಅವರು ಅಭೂತಪೂರ್ಣವಾಗಿ ವರ್ಣಿಸಿದ್ದಾರೆ .

 ೩ ) ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳೇನು ?

 ಉ : ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯಲ್ಲಿ ವಿಶಾಲವಾದ ಶಾಮಲ ಕಡಲು ,
ಹಸುರಾಗಸ ; ಹಸುರು ಮುಗಿಲು ; ಹಸುರು ಗದ್ದೆಯ ಬಯಲು , ಹಸುರಿನ ಮಲೆ ; ಹಸುರು ಕಣಿವೆ : ಸಂಜೆಯ
ಬಿಸಿಲು , ಅಶ್ವಜದ ಶಾಲಿವನದ ಗಿಳಿಯ ಹಸುರು ಬಣ್ಣದ ನೋಟ ; ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ ;
ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಪಸರಿಸಿದಂತೆ ಭೂಮಿಯು ಹಸುರುಟ್ಟಿದ್ದು ಹೊಸ ಹೂವಿನ ಕಂಪು ;
ತಂಗಾಳಿಯ ತಂಪು : ಹಕ್ಕಿಯ ಇಂಪಾದ ಗಾನ ; ಎತ್ತೆತ್ತ ನೋಡಿದರೂ ಹಸುರು ಹಸುರು . ಹಸರು .. ಈ ಇವೆಲ್ಲಾ
ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳಾದವು . 

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . 

೧. ‘ ಹಸುರು ‘ ಕವನದ ರೀತ್ಯ ಎಲ್ಲೆಲ್ಲಿ ಹಸುರು ವ್ಯಾಪಿಸಿದೆ ಎಂಬುದನ್ನು ವಿವರಿಸಿ . 
ಉ : ‘ ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ . ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ ಕವಿಶೈಲದಲ್ಲಿ ಅವರಿಗುಂಟಾದ ಸೌಂದರ್ಯಾನುಭವ ಪ್ರಕೃತಿ , ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ . ವಿಶಾಲವಾದ ಕವಿಯಾತವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯ ದಿನದಲ್ಲಿ ಹೊಸ ಚಿಗುರಿನಿಂದ ಕೂಡಿದ ಭೂಮಿಯಲ್ಲಿ ಕಡಲು ಹಸುರಾಗಿರುವುದನ್ನು ನೋಡಿ ಕವಿಯ ಆತ್ಮವನ್ನು ರಸಪಾನದಲ್ಲಿ ಮಿಂದಿತು . ಆಗಸದಲ್ಲಿ ಮುಗಿಲಿನಲ್ಲಿ 
ಗದ್ದೆಯ ಬಯಲಿನಲ್ಲಿ : ಬೆಟ್ಟಗುಡ್ಡಗಳಲ್ಲಿ : ಕಣಿವೆಯಲ್ಲಿ : ಸಂಜೆಯ ಬಿಸಿಲಿನಲ್ಲಿ ಹಸುರು ಹರಡಿತ್ತು . ಹಾಗೆಯೇ ಅಶ್ವಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ , ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ ಭೂಮಿಯು ಹಸುರಿನಿಂದ ಮೈ ಮುಚ್ಚಿರಲು ಕವಿಗೆ ಬೇರೆ ಬಣ್ಣಗಳೇ ಕಾಣದಾದವು . ಹೊಸ ಹೂವಿನ ಕಂಪು ; ತಂಗಾಳಿಯ ತಂಪು ; ಹಕ್ಕಿಯ ಇಂಪಾದ ಗಾನ ; ಅತ್ತ – ಇತ್ತ – ಎತ್ತ ನೋಡಿದರೂ ಹಸುರು . ಹಸುರು .. ಹಸರು .. ಇದನ್ನು ನೋಡಿದ ಕವಿಯಾತ್ಮವು ಹಸುರುಗಟ್ಟಿತು . ಕವಿಯ ದೇಹದಲ್ಲೂ ಹಸುರು ರಕ್ತವೇ ಹರಿದಾಡಿತು . ಎಂದು ಹಸುರು ವ್ಯಾಪಿಸಿದ ಬಗೆಯನ್ನು ಕವಿ ವರ್ಣಿಸಿದ್ದಾರೆ . 

೨. ಪ್ರಕೃತಿಯ ‘ ಹಸುರು ‘ ಜೀವ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ .

 ( ಮಕ್ಕಳ ಸೃಜನಶೀಲತೆಗಾಗಿ ಬಿಡಲಾಗಿದೆ ) 

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ , 

೧. “ ಹಸುರಾದುದು ಕವಿಯಾತ್ಮಂ ‘ 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘ ತೆಗೆದುಕೊಳ್ಳಲಾಗಿದೆ . 
ಸಂದರ್ಭ : ನವರಾತ್ರಿಯ ನವರಾತ್ರಿಯ ಈ ಶ್ಯಾಮಲ ವರ್ಣದ ಕಡಲಿನಲ್ಲೂ ಕವಿಯ ಆತ್ಮ ಹಸುರಾಯಿತು ,
ರಸಪಾನದಲ್ಲಿ ಮಿಂದಿತು ಎಂದು ಪ್ರಕೃತಿಯಲ್ಲಿ ವ್ಯಾಪಿಸಿರುವ ಹಸುರಿನ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಕವಿ
ಈ ಮಾತನ್ನು ಹೇಳಿದ್ದಾರೆ . ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ ಕವಿಶೈಲ’ದಲ್ಲಿ
ಅವರಿಗುಂಟಾದ ಸೌಂದರ್ಯಾನುಭವ , ಪ್ರಕೃತಿ , ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ
ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ . 
ಸ್ವಾರಸ್ಯ : ನವರಾತ್ರಿಯ ಕಪ್ಪು ಕಡಲಿನಲ್ಲೂ ಹಸುರನ್ನು ಕಾಣುವ ಕುವೆಂಪು ಅವರ ಕವಿಯಾತ್ಮದ
ಪ್ರಕೃತಿಯ ರಸಾಸ್ವಾದನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ . 

೨” ಬೇರೆ ಬಣ್ಣವನೆ ಕಾಣೆ ” 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘
ಎಂಬ ಪದ್ಯದಿಂದ ತೆಗೆದುಕೊಳ್ಳಲಾಗಿದೆ . 
ಸಂದರ್ಭ : ಅಶ್ವಿಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ ; ಅದರ ಪಕ್ಕದಲ್ಲೇ
ಕಾಡಂಚಿನಲ್ಲಿ ಫಲಭರಿತ ಆಡಕೆಯ ತೋಟ ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ
ಭೂಮಿಯು ಹಸುರಿನಿಂದ ಮೈ ಮುಚ್ಚಿರುವ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಭೂಮಿಯ ಮೇಲೆ ಎಲ್ಲೆಂದರಲ್ಲಿ ವಿವಿಧ ರೂಪದಲ್ಲಿ ಹಸುರು ಪಸರಿಸಿರುವುದನ್ನು ನೋಡಿ
ರಸಾನಂದ ಹೊಂದಿದ ಕವಿ ‘ ಬೇರೆ ಬಣ್ಣಗಳೇ ಕಾಣದಾದವು ‘ ಎಂದು ಹೇಳಿರುವಲ್ಲಿ ಅವರ ರಸಾಸ್ವಾದನೆಯ
ಔನ್ನತ್ಯವನ್ನು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ . 

೩. “ ಹಸುರು ಹಸುರಿಳೆಯುಸಿರೂ ” ಹಳತ 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ
ಎಂಬ ಪದ್ಯದಿಂದ ತೆಗೆದುಕೊಳ್ಳಲಾಗಿದೆ . 
ಸಂದರ್ಭ : ಹೊಸ ಹೂವಿನ ಕಂಪು , ಬೀಸುವ ಗಾಳಿಯ ತಂಪು , ಹಕ್ಕಿಯ ಕೊರಲಿನಿಂದ ಹೊರಟ ಗಾನದ
ಇಂಪು , ಅಲ್ಲದೆ ಇಡೀ ಭೂಮಿಯ ಶ್ವಾಸವೆಲ್ಲಾ ಹಸುರುಮಯವಾಗಿದೆ ಎಂದು ವರ್ಣಿಸುವ ಸಂದರ್ಭದಲ್ಲಿ
ಕವಿ ಈ ಮಾತನ್ನು ಹೇಳಿದ್ದಾರೆ . ಇಲ್ಲಿ ಹೂವು – ಗಾಳಿ ಹಕ್ಕಿಯ ಗಾನಗಳಲ್ಲಿ ಬೇರೆ ಬೇರೆ ಅನುಭವವಿದ್ದರೂ ಕವಿಯ
ಏಕತಾ ದೃಷ್ಟಿಯಲ್ಲಿ ಎಲ್ಲದರಲ್ಲೂ ಹಸುರೇ ಕಾಣುತ್ತದೆ . 
ಸ್ವಾರಸ್ಯ : ಹಸುರು ಸರ್ವೇಂದ್ರಿಯಗಳನ್ನೂ ವ್ಯಾಪಿಸಿದೆ ಎಂದು ವರ್ಣಿಸಿರುವ ಕವಿಯ ಕಲ್ಪನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ . 

೪. ” ಹಸುರತ್ತಲ್ , ಹಸುರಿತ್ತಲ್ , ಹಸುರೆತ್ತಲ್ ” 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘ ಎಂಬ
ಪದ್ಯದಿಂದ ತೆಗೆದುಕೊಳ್ಳಲಾಗಿದೆ . 
ಸಂದರ್ಭ : ಅತ್ತ – ಇತ್ತ – ಎತ್ತಲೂ ಹಸುರೇ ಆವರಿಸಿರುವುದನ್ನು ಕವಿದೃಷ್ಟಿಯಿಂದ ನೋಡಿದ ಕುವೆಂಪು ಅವರು ‘ ಕಡಲಿನಲ್ಲಿ
ಎಲ್ಲೆಲ್ಲೂ ಹಸುರೇ ಹಸುರು . ಕವಿಯ ಆತ್ಮ ಹಸುರು ನೆತ್ತರಿನಿಂದ ಹಸುರುಗಟ್ಟಿತು ‘ ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನುಹೇಳಿದ್ದಾರೆ . ಎಲ್ಲೆಲ್ಲೂ ಹಸುರನ್ನು ಕಂಡ ಕವಿಯಾತ್ಮವು ಹಸುರುಗಟ್ಟಿತಲ್ಲದೆ ಅವರ ದೇಹದಲ್ಲಿನ ರಕ್ತವೂ ಹಸುರೇ ! ಎಂದು ವರ್ಣಿಸಿದ್ದಾರೆ .
ಸ್ವಾರಸ್ಯ : ಹಸುರು ಕೇವಲ ಸಸ್ಯವರ್ಗಕ್ಕೆ ಮಾತ್ರ ಸೀಮಿತವಲ್ಲ ಇಡೀ ಪ್ರಕೃತಿಯ ಚೈತನ್ಯಕ್ಕೆ ಅದೇ ಕಾರಣ . ಪ್ರಕೃತಿಗಷ್ಟೇ ಅಲ್ಲದೆ‘ ರಕ್ತದಲ್ಲೂ ಹಸುರು ವ್ಯಾಪಿಸಿದೆ ‘ ಎಂದು ಸ್ವಾರಸ್ಯಪೂರ್ಣವಾಗಿದೆ . 


ಛಲಮನೆ ಮೆರೆವೆಂ ಕನ್ನಡ ನೋಟ್ಸ್ chalavane merevem kannada notes

 

 ಛಲಮನೆ ಮೆರೆವೆಂ ಕನ್ನಡ ನೋಟ್ಸ್ 






ಛಲಮನೆ ಮೆರೆವೆಂ 

ಕವಿ ಪರಿಚಯ : – ರನ್ನ 
ರನ್ನ ಕ್ರಿ ಶ . ಸುಮಾರು ೯೪೯ ರಲ್ಲಿ ( ಹತ್ತನೆಯ ಶತಮಾನದಲ್ಲಿ ಬಾಗಲಕೋಟೆ ಜಿಲ್ಲೆಯ ಮುದುವೊಳಲು ( ಈಗಿನ ಮುಧೋಳ ) ಎಂಬ
ಗ್ರಾಮದಲ್ಲಿ ಜನಿಸಿದನು , ಇವನ ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ . ಈತನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು .
ಇವನು ‘ ಸಾಹಸ ಭೀಮ ವಿಜಯಂ ( ಗದಾಯುದ್ಧ ) ‘ , ‘ ಅಜಿತತೀರ್ಥಂಕರ ಪುರಾಣತಿಲಕಂ ‘ , ‘ ಪರಶುರಾಮಚರಿತಂ ‘ ,
‘ ಚಕ್ರೇಶ್ವರಚರಿತಂ ‘ ಎಂಬ ಕಾವ್ಯಗಳನ್ನು ಬರೆದಿದ್ದಾನೆ . ರನ್ನಕಂದ ‘ ಎಂಬ ನಿಘಂಟನ್ನು ಬರೆದಿರುವುದಾಗಿ ತಿಳಿದುಬರುತ್ತದೆ .
ಇವನಿಗೆ ತೈಲಪನು ‘ ಕವಿಚಕ್ರವರ್ತಿ ‘ ಎಂಬ ಬಿರುದನ್ನು ಕೊಟ್ಟನು . ಈತನು ಕನ್ನಡದ ರತ್ನತ್ರಯರಲ್ಲಿ ಒಬ್ಬನು .
‘ ಛಲಮನೆ ಮೆಜಂ ‘ ಎಂಬ ಪದ್ಯಭಾಗವನ್ನು ಪ್ರೊ . ಹಂಪ ನಾಗರಾಜಯ್ಯ ಅವರು ಸಂಪಾದಿಸಿರುವ ‘ ರನ್ನ
ಸಂಪುಟ’ದ ಮಹಾಕವಿ ರನ್ನನ ‘ ಸಾಹಸ ಭೀಮ ವಿಜಯಂ ‘ ಎಂಬ ಮಹಾಕಾವ್ಯಭಾಗದ ಐದನೆಯ ಆಶ್ವಾಸದಿಂದ
ಆರಿಸಿಕೊಳ್ಳಲಾಗಿದೆ . 

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ . 

೧. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಯಾರಿಗೆ ಹೇಳುವನು ?

ಉ : ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಭೀಷ್ಮಾಚಾರ್ಯರಿಗೆ ಹೇಳುವನು .  

೨. ದಿನಪಸುತ ಎಂದರೆ ಯಾರು ? 

ಉ : ದಿನಪಸುತ ಎಂದರೆ ಕರ್ಣ . 

೩. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ ? 

ಉ : ಅರ್ಜುನ ಮತ್ತು ಭೀಮ ಇಬ್ಬರನ್ನೂ ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ .

 ೪. ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ಯಾರು ? 

ಉ : ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ದುರ್ಯೋಧನ 

೫. ಅಂತಕಾತ್ಮಜ ಎಂದರೆ ಯಾರು ? 

ಉ : ಅಂತಕಾತ್ಮಜ ಎಂದರೆ ಧರ್ಮರಾಯ . 

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ . 

೧. ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ ?
 ಉ : ದುರ್ಯೋಧನನನನು ಭೀಷ್ಮಾಚಾರ್ಯರಿಗೆ “ ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಆದರೆ ನನ್ನ ಛಲಕ್ಕಾಗಿ
ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು ಭೂಮಿಗೆ ಸಮ . ನನ್ನ ಒಡ ಹುಟ್ಟಿದ ನೂರುಮಂದಿ
ಸಹೋದರರು ಯುದ್ಧದಲ್ಲಿ ಹೋರಾಡಿ ಸತ್ತರು . ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ ? ಆದ್ದರಿಂದ
ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮರೆಯುತ್ತೇನೆ ” ಎಂದು ಹೇಳುತ್ತಾನೆ . 

೨. ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳುವುದೇಕೆ ?
 ಉ : ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿ ಮಾಡಿಕೊ ಎಂದು ಸಲಹೆ ಮಾಡಿದಾಗ ದುರ್ಯೋಧನನನು
ಅದಕ್ಕೆ ಒಪ್ಪುವುದಿಲ್ಲ . ಅವನು “ ನಾನು ಭೂಮಿಗಾಗಿ ಹೋರಾಡುತ್ತಿಲ್ಲ . ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು .
ಈ ಭೂಮಿ ನನಗೆ ಪಾಳು ಭೂಮಿಗೆ ಸಮ . ಪ್ರಿಯ ಗೆಳೆಯನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು
ಮತ್ತೆ ಸಹಬಾಳ್ವೆ ಮಾಡುವುದಿಲ್ಲ ” ಎನ್ನುತ್ತಾನೆ . 

೩. ಪಾರ್ಥ – ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು ?
 ಉ : “ ನನ್ನ ಪ್ರೀತಿಯ ಗೆಳೆಯ ಕರ್ಣನನ್ನು ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನನ್ನು ಕೊಂದ ಅರ್ಜುನ – ಭೀಮರು
ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೆ : ನಾನು ಸಂಧಿಮಾಡಿಕೊಳ್ಳಲು ಒಪ್ಪುವುದಿಲ್ಲ . ಮೊದಲು ಆ
ಇಬ್ಬರನ್ನೂ ಕೊಲ್ಲುವೆನು . ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ ” ಎಂಬುದು
ಪಾರ್ಥ – ಭಿಮರ ಬಗೆಗೆ ದುರ್ಯೋಧನನ ಅಭಿಪ್ರಾಯವಾಗಿದೆ . 

ಇ . ಕೊಟ್ಟಿರುವ ಪ್ರಶ್ನೆಗಳ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . 

೧. ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ . 
ಉ : ಮಹಾಭಾರತ ಯುದ್ಧದಲ್ಲಿ ತನ್ನೆಲ್ಲ ಸಹೋದರರನ್ನೂ ಆಪ್ತಮಿತ್ರನಾದ ಕರ್ಣನನ್ನೂ ಕಳೆದುಕೊಂಡ ದುರ್ಯೋಧನನು
ತನ್ನ ತಂದೆ ತಾಯಿಯರ ಅಪೇಕ್ಷೆಯಂತೆ ರಣರಂಗದಲ್ಲಿ ಶರಶಯ್ಕೆಯಲ್ಲಿ ಮಲಗಿದ್ದ ತಾತ ಭೀಷರ ಸಲಹೆಯನ್ನು ಪಡೆಯಲು ಬರುತ್ತಾನೆ .ಭೀಷರು ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕೊಳ್ಳುವುದು ಸೂಕ್ತವೆಂದು ದುರ್ಯೋಧನನಿಗೆ ಸಲಹೆ  ನೀಡುತ್ತಾರೆ .ಭೀಷರು ದುರ್ಯೋಧನನಿಗೆ “ ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಹಿಂದಿನಂತೆ ನಡೆಯುವ ಹಾಗೆ ಮಾಡುವೆನು” ಎಂದು ಹೇಳುತ್ತಾರೆ . ಅವರಿಗೆ ದುರ್ಯೋಧನನು ಛಲಗಾರ ಎಂಬುದು ತಿಳಿದಿದ್ದರೂ ಹಿರಿಯರಾಗಿ ಅವನನ್ನು ಸಂಧಿಗಾಗಿ ಒಪ್ಪಿಸುವ ಒಂದು ಪ್ರಯತ್ನ ಇಲ್ಲಿ ಕಂಡುಬರುತ್ತದೆ . ಹಾಗೆಯೇ “ ಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆ . ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕು ” ಎಂದು ಹೇಳುವ ಭೀಷರ ಮಾತುಗಳಲ್ಲಿ ಅವರಿಗೆ ಪಾಂಡವರ ಮೇಲಿದ್ದ ನಂಬಿಕೆ – ವಿಶ್ವಾಸವೂ ವ್ಯಕ್ತವಾಗಿದೆ .“ ಅಜ್ಞಾ , ನಾನು ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದಿಲ್ಲ . ನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ ? ಆದರೆ ನಾನು ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು ಭೂಮಿ ” ಎಂದು ಹೇಳುವಲ್ಲಿ ಅವನ ದಿಟ್ಟ ನಿರ್ಧಾರ ಸ್ಪಷ್ಟವಾಗಿ ಗೋಚರಿಸುತ್ತದೆ . ಅಲ್ಲದೆ “ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಬಾಳಲಾದೀತೆ ? ನನ್ನ ಪ್ರೀತಿಯ ಗೆಳೆಯನನ್ನು ನನ್ನ ಪ್ರೀತಿಯ ತಮ್ಮನನ್ನು ಕೊಂದ ಅರ್ಜುನ – ಭೀಮರು ಬದುಕಿರುವವರೆಗೆ ,ನನ್ನ ದೇಹದಲ್ಲಿ ಪ್ರಾಣ ಇರುವವರೆಗೆ ನಾನು ಸಂಧಿಯನ್ನು ಒಪ್ಪುವುದಿಲ್ಲ . ಮೊದಲು ಆ ಇಬ್ಬರನ್ನೂ ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ ” ಎಂದು ಹೇಳುವಲ್ಲಿ ಆತನಿಗೆ ಕರ್ಣ ಮತ್ತು ದುಶ್ಯಾಸನನ ಮೇಲಿದ್ದ ಪ್ರೀತಿಯೂ ಭೀಮಾರ್ಜುನರ ಬಗೆಗಿದ್ದ ಕೋಪದ ತೀವ್ರತೆಯೂ ವ್ಯಕ್ತವಾಗಿದೆ . ಪ್ರಾಣ ಹೋದರೂ ಅಭಿಮಾನ ಬಿಡುವುದಿಲ್ಲ ಎಂಬ ದುರ್ಯೋಧನನ ಮಾತುಗಳು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿವೆ .

೨. ದುರ್ಯೋಧನನ ಛಲದ ಗುಣ ಅವನ ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ
ಉ : ಭೀಷ್ಮಾಚಾರ್ಯರು ತಮ್ಮ ಬಳಿಗೆ ಬಂದ ದುರ್ಯೋಧನನಿಗೆ ಪಾಂಡವರೊಡನೆ ಸಂಧಿಮಾಡಿಕೊಳ್ಳುವ ಸಲಹೆ
ನೀಡುತ್ತಾರೆ . ಆದರೆ ಅಭಿಮಾನಧನನಾದ ದುರ್ಯೋಧನನು ಅದಕ್ಕೆ ಒಪ್ಪುವುದಿಲ್ಲ . ಆಗ ಅವನಾಡುವ ಮಾತುಗಳಲ್ಲಿ
ಆತನ ಛಲದ ಗುಣ ವ್ಯಕ್ತವಾಗಿರುವುದನ್ನು 1 ಕಾಣಬಹುದು . ದುರ್ಯೋಧನನು ಭೀಷರನ್ನು ಕುರಿತು “ ಅಜ್ಜ , ನಿಮಗೆ
ನಮಸ್ಕರಿಸಿ ಹೋಗಲೆಂದು ಬಂದನೇ ಹೊರತು ಶತುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆ ? ನಾನು
ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ ? ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು . ಈ ಭೂಮಿ ನನಗೆ ಪಾಳು
ಭೂಮಿ , ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವೆನೆ ? ” “ ನನ್ನ ಪ್ರೀತಿಯ ಗೆಳೆಯನನ್ನೂ
ಪ್ರೀತಿಯ ತಮ್ಮನನ್ನೂ ಕೊಂದ ಅರ್ಜುನ – ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಅಜ್ಜಾ , ನಾನು
ಸಂಧಿಯನ್ನು ಒಪ್ಪುವುದಿಲ್ಲ . ಆ ಇಬ್ಬರನ್ನೂ ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ . ನನ್ನ ಒಡಹುಟ್ಟಿದ
ನೂರುಮಂದಿ ಸಹೋದರರು ಯುದ್ಧದಲ್ಲಿ ಹೋರಾಡಿ ಸತ್ತರು . ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ ? ಪಾಂಡವರೊಡನೆ ಹೋರಾಡಿ
ನನ್ನ ಛಲವನ್ನೇ ಮೆರೆಯುತ್ತೇನೆ . ನಾನು ಹೋರಾಡದೆ ಬಿಡುವುದಿಲ್ಲ . ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ; ಇಲ್ಲವೆ
ನಾನು ಉಳಿಯಬೇಕು . ಹಾಗೆಯೇ ಈ ಭೂಮಿ ಪಾಂಡವರದಾಗಬೇಕು ; ಇಲ್ಲವೇ ಕೌರವನದಾಗಬೇಕು ” ಎಂದು ದುರ್ಯೋಧನನು
ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳುವ ಮಾತುಗಳಲ್ಲಿ ಆತನ ಛಲ , ದೃಢನಿರ್ಧಾರ ಮತ್ತು ಸ್ವಾಭಿಮಾನವನ್ನು
ಕಾಣಬಹುದಾಗಿದೆ . 

ಈ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ , 

೧. “ ನೆಲಕಿಟೆವೆನೆಂದು ಬಗೆದಿರೆ ಚಲಕಿಚೆವೆಂ ” 
ಉ : ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ

ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭೀಷ್ಮಾಚಾರ್ಯರು ಪಾಂಡವರನ್ನು ಒಪ್ಪಿಸುತ್ತೇನೆ . ಸಂಧಿಮಾಡಿಕೋ ‘ ಎಂದು ಹೇಳಿದಾಗ ದುರ್ಯೋಧನನು
“ ಅಜ್ಜಾ , ನಾನು ಈ ಭೂಮಿಗಾಗಿ ಯುದ್ಧ ಮಾಡುವೆನೆಂದು ಭಾವಿಸಿರುವಿರಾ ? ನಾನು ಛಲಕ್ಕಾಗಿ ಪಾಂಡವರೊಡನೆ
ಹೋರಾಡುವೆನು . ಈ ಭೂಮಿ ನನಗೆ ಪಾಳುಬಿದ್ದ ನೆಲಕ್ಕೆ ಸಮ ” ಎನ್ನುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
 ಸ್ವಾರಸ್ಯ : ದುರ್ಯೋಧನನ ಈ ಮಾತಿನಲ್ಲಿ ನಶ್ವರವಾದ ಅರಸುತನಕ್ಕಿಂತ ಛಲದಿಂದ ಬಾಳುವುದೇ ನಿಜವಾದ ಕ್ಷತ್ರಿಯನ
ಗುಣ . ಸಂಧಿಮಾಡಿಕೊಳ್ಳುವುದು ಹೇಡಿತನದ ಲಕ್ಷಣ ಎಂಬ ಧ್ವನಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ .

೨. “ ಸಮರದೊಳೆನಗಜ್ಜ ಪೇಟೆಮಾವುದು ಕಜ್ಜಂ . ” 

ಉ : ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ ಆರಿಸಲಾಗಿರುವ
‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭೀಷ್ಮಾಚಾರ್ಯರು ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಮೊದಲಿದ್ದಂತೆ
ನಡೆಯುವ ಹಾಗೆ ಮಾಡುವೆನು . ಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆ . ನೀನೂ ಕೂಡ
ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕು ಎಂದು ಭೀಷರು ಹೇಳಿದಾಗ ದುರ್ಯೋಧನನು ಮುಗುಳು ನಗೆ ನಕ್ಕು
“ ಅಜ್ಜಾ , ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು
ಬಂದೆನೆ ? ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : “ ಸಮರದೊಳೆನಗಜ್ಜ ಪೇಟೆಮಾವುದು ಕಜ್ಜಂ ” ಎಂದು ಹೇಳುವ ದುರ್ಯೋಧನನ ಮಾತಿನಲ್ಲಿ ‘ ಸಂಧಿ ಮಾಡಿಕೊಳ್ಳುವ ಮಾತೊಂದನ್ನು ಬಿಟ್ಟು . ಯುದ್ಧದಲ್ಲಿ
ನಾನೇನು ಮಾಡಬಹುದೆಂಬುದನ್ನು ಹೇಳಿ ” ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ . ಏಕೆಂದರೆ ದುರ್ಯೋಧನನಿಗೆ ಇಷ್ಟವಾಗದ ಒಂದು ಮಾತು “ ಸಂಧಿ ” . 

೩. “ ಪಾಂಡವರೊಳಿದು ಛಲಮನೆ ಮೆರೆವೆಂ . ” 

ಉ : ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ
ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : “ ನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು ಹೋರಾಡಿ ಸತ್ತರು . ಆದ್ದರಿಂದ ನನ್ನಲ್ಲಿ ಕೋಪ ಹುಟ್ಟಿ ಬೆಳೆಯಿತು . ಸತ್ತವರೇನು
ಮತ್ತೆ ಹುಟ್ಟುವುದಿಲ್ಲವೇ ? ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ . ಎಂದು ಹೇಳುವ
ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ದುರ್ಯೋಧನನ ತನಗೆ ಕೋಪ ಹೆಚ್ಚಾಗಲು ಕಾರಣವನ್ನು ನೀಡಿರುವುದಲ್ಲದೆ
ತನ್ನ ಸಹೋದರರು ಸತ್ತಿಲ್ಲ . ಅವರು ಮತ್ತೆ ಹುಟ್ಟಿಬರುವರೆಂಬ ನಂಬಿಕೆಹೊಂದಿರುವುದು ಹಾಗೂ ಛಲಕ್ಕಾಗಿ ಹೋರಾಡುವ ಆತನ
ನಿಲುವು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ . 

೪. “ ಮೇಣಾಯ್ತು ಕೌರವಂಗವನಿತಳಂ . “

 ಉ : ಆಯ್ಕೆ : ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ ಸಾಹಸ ಭೀಮ ವಿಜಯ ‘ ಎಂಬ ಕೃತಿಯಿಂದ
ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಸಂಧಿಗೆ ಒಪ್ಪದ  ದುರ್ಯೋಧನನು , “ ಅಜ್ಜ , ನಾನು ಹೋರಾಡದೆ ಬಿಡುವುದಿಲ್ಲ . ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು
ಇಲ್ಲವೆ ನಾನು ಉಳಿಯಬೇಕು . ಆದ್ದರಿಂದ ಈ ಭೂಮಿ ಪಾಂಡವರದಾಗಬೇಕು ಇಲ್ಲವೇ ಕೌರವನದಾಗಬೇಕು ಎಂದು
ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ . 
ಸ್ವಾರಸ್ಯ : ತನ್ನ ಕೊನೆಯುಸಿರು ಇರುವ ವರೆಗೂ ಪಾಂಡವರ ವಿರುದ್ಧ ಹೋರಾಡುತ್ತೇನೆಂಬ ದುರ್ಯೋಧನನದಿಟ್ಟ ನಿರ್ಧಾರ , ಪಾಂಡವರ ಮೇಲಿನ ಕೋಪದ ತೀವ್ರತೆ ಈ ಸಂದರ್ಭದಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

ಭಾಷಾ ಚಟುವಟಿಕೆ

 ಅ . ಕೊಟ್ಟಿರುವ ಪದ್ಯದ ಸಾಲುಗಳಿಗೆ ಪ್ರಸ್ತಾರ ಹಾಕಿ , ಗಣ ವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ . 

ಇ . ಕೊಟ್ಟಿರುವ ಪದಗಳನ್ನು ವಿಗ್ರಹವಾಕ್ಯ ಮಾಡಿ ಸಮಾಸದ ಹೆಸರನ್ನು ತಿಳಿಸಿ . 

ಪಾರ್ಥಭೀಮರು = ಪಾರ್ಥನೂ + ಭೀಮನೂ – ದ್ವಂದ್ವ ಸಮಾಸ 

ಅಂತಕಾತ್ಮಜ = ಅಂತಕನ ಆತ್ಮಜನಾದವನು ದಿನಪಸುತ ಯಾರೋ ಅವನೇ ಅಂತಕಾತ್ಮಜ ( ಧರ್ಮರಾಜ) – ಬಹುವೀಹಿ 

ಸಮಾಸ = ದಿನಪನ ಸುತನಾದವನು ಯಾರೋ ಅವನೇ ದಿನಪಸುತ ( ಕರ್ಣ ) – ಬಹುವೀಹಿ ಸಮಾಸ 

10ನೇ ತರಗತಿ ವೃಕ್ಷಸಾಕ್ಷಿ ಕನ್ನಡ ನೋಟ್ಸ್ vruksha shakshi kannada notes

 

 ವೃಕ್ಷಸಾಕ್ಷಿ ಕನ್ನಡ ನೋಟ್ಸ್ 






ಗದ್ಯಪಾಠ ೦೭- ವೃಕ್ಷಸಾಕ್ಷಿ

ಕವಿ – ಕಾವ್ಯ ಪರಿಚಯ:

ದುರ್ಗಸಿಂಹ
ದುರ್ಗಸಿಂಹ  ಕವಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ (ಈಗಿನ ಗದಗ ಜಿಲ್ಲೆಯ ರೋಣ
ತಾಲೂಕಿನ ಸವಡಿ) ಕ್ರಿ.ಶ.೧೦೩೧ ಜನಿಸಿದನು. ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ
ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು. ಮತದರ್ಮ  ಸಮನ್ವಯಕಾರನಾದ ಈತ
ಸಯ್ಯಡಿಯಲ್ಲಿ ಹಲವಾರು ಹರಿಹರಭವನಗಳನ್ನು   ನರ‍್ಮಿಸಿದನೆಂದು  ತಿಳಿದುಬಂದಿದೆ.ಈತನು
  ‘ಪಂಚತಂತ್ರ ಎಂಬ ಕೃತಿಯನ್ನು ರಚಿಸಿದ್ದಾನನೆ. ಪಂಚತಂತ್ರದಲ್ಲಿ ಭೇದ, ಪರೀಕ್ಷಾ,ವಿಶ್ವಾಸ,
ವಂಚನಾ ಮತ್ತು ಮಿತ್ರಕಾರ್ಯ ಎಂಬ ಐದು  ತಂತ್ರಗಳನ್ನಾಧರಿಸಿ  ೪೮ ಉಪಕತೆಗಳಿವೆ.


ಬಹು ಆಯ್ಕೆ ಪ್ರಶ್ನೆಗಳು

೧. ‘ಅನೃತ’ ಪದದ ಅರ್ಥ.
ಅ] ನಿಜ ಆ] ಸುಳ್ಳು ಇ] ಮಿತ್ರ ಈ] ಶತ್ರು.
೨. ‘ಅಬ್ಜೋದರ’ ಸಮಾಸಕ್ಕೆ ಉದಾಹರಣೆ  .
ಅ] ದ್ವಿಗು ಆ] ಬಹವ್ರೀಹಿ ಇ] ತತ್ಪುರುಷ  ಈ] ಕರ್ಮಧಾರಯಾ.
೩. ‘ಬಳಾರಿಯ ಮನೆಯಂ ಪರಕೆಯ  ಕುರಿಯಂ ಪುಗಿಸುವಂತೆ’ ಇಲ್ಲಿ ಬಂದಿರುವ ಅಲಂಕಾರ
ಅ] ಶ್ಲೇಷಾ ಆ] ಉಪಮಾ  ಇ] ರೂಪಕ ಈ] ಅರ್ಥಾಂತರನ್ಯಾಸ
೪. ‘ತೊಳೆಯದೆ’ ಈ ಅವ್ಯಯಕ್ಕೆ ಉದಾಹರಣೆ.
ಅ] ಭಾವಸೂಚಕವ್ಯಯ ಆ] ಕೃದಂತಾವ್ಯಯ ಇ] ತದ್ಧಿತಾಂತವ್ಯಯ ಈ] ಸಾಮಾನ್ಯವ್ಯಯ
೫. ‘ರವಿಯು ಮೂಡಣದಲ್ಲಿ ಹುಟ್ಟುತ್ತಾನೆ’ ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದ
ಅ] ಗುಣವಾಚಕ ಆ] ದಿಗ್ವಾಚಕ ಇ] ವಸ್ತುವಾಚಕ ಈ] ಪರಿಮಾಣವಾಚಕ
೬. ‘ಪುದಿವಿನೊಳ್’ ಈ ಪದದಲ್ಲಿರುವ  ವಿಭಕ್ತಿ 
ಅ] ಚತುರ್ಥೀ ಆ] ದ್ವಿತಿಯಾ ಇ] ಪಂಚಮೀ ಈ] ಸಪ್ತಮೀ.
೭. ‘ಆದಿತ್ಯೋದಯ’ ಈ ಸಂಧಿಗೆ ಉದಾಹರಣೆ .
ಅ] ವೃದ್ಧಿ ಆ] ಗುಣ ಇ] ಯಣ್ ಈ] ಆಗಮ  ಸಂಧಿ
೮. ‘ತಮ್ಮ  ತಮ್ಮ ಮನೆಗೆಲ್ಲರುಂ ಪೋದರ್’ ಅಡಿಗೆರೆ ಎಳೆದ ಪದದ ಸರ್ವನಾಮರೂಪ.
ಅ] ಸಾಂದರ್ಭಿಕ         ಆ] ಆತ್ಮಾರ್ಥಕ
ಇ] ಪ್ರಶ್ನಾರ್ಥಕ     ಈ] ಪುರುಷಾರ್ಥಕ.
೯. ಕಂದ ಪದ್ಯಗಳ ಸಾಲುಗಳ ಸಂಖ್ಯೆ
ಅ] ೬ ಆ] ೨ ಇ] ೪ ಈ] ೩
೧೦. ಕಂದ ಪದ್ಯದಲ್ಲಿ ಒಟ್ಟು ಮಾತ್ರೆಗಳ ಸಂಖ್ಯೆ
ಅ] ೬೪ ಆ] ೬೨ ಇ] ೬೦ ಈ] ೫೦
೧೧. ಭ, ರ, ನ, ಭ, ಭ, ರ, ಇದು ಯಾವ ವೃತ್ತದ ಗಣಗಳು
ಅ] ಉತ್ಪಲಮಾಲಾವೃತ್ತ ಆ] ಚಂಪಕಮಲಾ ಇ] ಸ್ರಗ್ಧರಾವೃತ್ತ ಈ] ಮಹಾಸ್ರಗ್ದರಾವೃತ್ತ
೧೨. ಮ, ರ, ನ, ಭ, ನ, ಯ, ಯ, ಯ . ಈ ವೃತ್ತದ ಗಣಗಳು.
ಅ] ಉತ್ಪಲಮಾಲಾವೃತ್ತ ಆ] ಚಂಪಕಮಾಲಾ ಇ] ಸ್ರಗ್ದರಾವೃತ್ತ ಈ] ಮಹಾಸ್ರಗ್ದ ರಾವೃತ್ತ
೧೩. ಮಹಾಸ್ರಗ್ದರಾವೃತ್ತ ಗಣಗಗಳು  .
ಅ] ಭ,ರ,ನ,¨ಭ ಭ,ರ, ಆ] ಮ,ರ,ನ,ಭ,ನ,ಯ,ಯ,ಯ. ಇ] ಸ,ತ,ತ,ನ,ಸ,ರ,ರ ಈ] ಮ,ಸ,ಜ,ಸ,ತ,ತ
೧೪. – – – ಇದು
ಅ] ಮಗಣ     ಆ]ತಗಣ
ಇ] ಸಗಣ     ಈ]ನಗಣ
೧೫. ಸಾಕ್ಷಿಮಾಡಿ ಇದು
ಅ] ದ್ವಿಗು ಆ] ಕ್ರಿಯಾಸಮಾಸ  ಇ] ತತ್ಪುರು ಷ ಈ] ಕರ್ಮಧಾರಯ.
೧೬. ಕ್ರಿಯಾ ಸಮಾಸಕ್ಕೆ  ಉದಾ
ಅ] ಕೈಕೊಳ್ವುದು ಆ] ಪರಧನ ಇ] ಅತಿಕುಟಿಲ ಈ] ಕಪಟ
೧೭. ಅತಿಕುಟಿಲ ಈ ಸಮಾಸಕ್ಕೆ ಉದಾ
ಅ] ದ್ವಿಗು ಆ] ಕ್ರಿಯಾಸಮಾಸ ಇ] ತತ್ಪುರುಷ ಈ] ಕರ್ಮಧಾರಯಾ.
೧೮) ಖ್ಯಾತ ಕರ್ನಾಟಕಗಳೆಂದು  ಪ್ರಸಿದ್ಧವಾಗಿರುವ ಅಕ್ಷರ ವೃತ್ತಗಳು.
ಅ) ೪ ಬ) ೬ ಕ) ೨೧ ಡ) ೮
೧೯) ಚಂಪಕಮಾಲ  ವೃತ್ತದಲ್ಲಿರುವ ಗಣಗಳ ಸಂಖ್ಯೆ.
ಅ) ೭ ಗಣ ಬ) ೬ ಗಣ ಕ) ೫ ಗಣ ಡ) ೪ಗಣ
೨೦) ವೃತ್ತದಲ್ಲಿ ಎಷ್ಟು ಪಾದಗಳಿರುತ್ತವೆ.
ಅ) ೧ ಪಾದ ಬ) ೩ ಪಾದ ಕ) ೪ ಪಾದ ಡ) ೬ ಪಾದ
೨೧) ಚಂಪಕಮಾಲ ವೃತ್ತದಲ್ಲಿರುವ ಅಕ್ಷರಗಳ ಸಂಖ್ಯೆ.
ಅ) ೧೯
ಬ) ೨೦
ಕ) ೨೧
ಡ) ೨೨
೨೨] ಖ್ಯಾತಕರ್ನಾಟಕ ವೃತ್ತವು
ಅ) ಅಕ್ಷರಗಣ
ಬ) ಮಾತ್ರಗಣ
ಕ) ಗಣ
ಡ) ಮಾತ್ರೆ
೨೩] ಕಂದ ಪದ್ಯವು
ಅ) ಅಕ್ಷರಗಣ
ಬ) ಮಾತ್ರಗಣ
ಕ) ಗಣ
ಡ) ಮಾತ್ರೆ
೨೪] ‘ಪೋಗಲ್‌ವೇೞ್ಕುಂ’ ಈ ಸಂಧಿಗೆ ಉದಾಹರಣೆ 
ಅ] ವೃದ್ಧಿ ಆ] ಗುಣ ಇ] ಯಣ್ ಈ] ಆಗಮ  ಸಂಧಿ
ಉತ್ತರಗಳು
೧]ಆ  ೨]ಆ ೩]ಆ ೪]ಇ  ೫]ಆ  ೬]ಈ  ೭]ಆ  ೮]ಆ  ೯]ಇ  ೧೦]ಇ  ೧೧]ಅ ೧೨]ಇ
೧೩]ಇ  ೧೪]ಅ ೧೫]ಆ ೧೬]ಅ ೧೭]ಈ ೧೮]ಬ ೧೯]ಅ ೨೦]ಕ ೨೧]ಕ ೨೨]ಅ ೨೩]ಬ ೨೪] ಈ
ಮೊದಲೆರೆಡು ಪದಗಳಿಗಿರುವ ಸಂಬಂಧಿಸಿದಂತೆ  ಮೂರನೆಯ ಪದಕ್ಕೆ ಸಂಬAಧಿಸಿದ ಪದ ಬರೆಯಿರಿ.
೧. ಮೇದಿನಿ : ಭೂಮಿ :: ಆದಿತ್ಯ : __________
೨. ಪೊನ್ನಮ್ : ದ್ವಿತೀಯಾ :: ಪರಿಗ್ರಹಮೆಲ್ಲಂ :________
೩. ಬೀಣೇಯಂ : ಭಗಣ  :: ಲೋಕೇಶ : _______
೪. ದೈವಭಕ್ತಿ : ತತ್ಪುರುಷ  :: ಅಬ್ಜೋದರ : _______
೫. ಉತ್ಪಲಮಾಲಾವೃತ್ತ : ಇಪ್ಪತ್ತು ಅಕ್ಷರ :: ಸ್ರಗ್ಧರಾವೃತ್ತ: ……………………………
೬. ತಸ್ಕರ : ಕಳ್ಳ :: ಅನೃತ : …………………………………………………
೭. ಕೂರ್ಮೆ : ಸ್ನೇಹ :: ಚೋದ್ಯ : ………………………………………………………
೮.ವ್ಯಾಪಾರಿ : ಬೇಹಾರಿ :: ಕೋಕಿಲಾ : …………………………………………
೯. ಪರಧನ  : ತತ್ಪುರುಷ :: ಬಲವಂದು : ……………………………
೧೦. ತಕ್ಕನಿತು : ಲೋಪ :: ಪೂೞ್ದೆಡೆ : ………………………………
೧೧. ಧನಹರಣ : ಕ್ರಿಯಾಸಮಾಸ :: ಸ್ವಾಮಿದ್ರೋಹ : ……………………………
ಉತ್ತರಗಳು
೧] ಭಾಸ್ಕರ ೨] ಪ್ರಥಮಾ ೩] ತಗಣ ೪] ಬಹುವ್ರೀಹಿ
ಕ್ರಿಯಾಸಮಾಸ ೧೦] ಆದೇಶ ೧೧. ತತ್ಪುರುಷ ಸಮಾಸ
೫] ಇಪ್ಪತ್ತೊಂದು ಅಕ್ಷರ೬] ಅಸತ್ಯ
೭] ಅಧ್ಬುತ ೮] ಕೋಗಿಲೆ
]

ಪಾಠದ ಆಶಯ ಭಾವ

ಗುಣಾಢ್ಯನಿಂದ ಪೈಶಾಚಿಕ ಭಾಷೆಯಲ್ಲಿ ರಚಿತವಾದ ಬೃಹತ್ಕಥೆಯನ್ನಾಧರಿಸಿ ವಸುಭಾಗಭಟ್ಟನು  ಸಂಸ್ಕೃತದಲ್ಲಿ ಪಂಚತಂತ್ರ  ಕೃತಿಯನ್ನು ರಚಿಸಿದ್ದಾನೆ.ಈ ಸಂಸ್ಕೃತ ಕೃತಿಯನ್ನಾಧರಿಸಿ ಕನ್ನಡದಲ್ಲಿ  ಪಂಚತಂತ್ರವನ್ನು ಬರೆದಿರುವುದಾಗಿ ದುರ್ಗಸಿಂಹ ಹೇಳಿಕೊಂಡಿದ್ದಾನೆ. ಪಂಚತಂತ್ರ  ಕೃತಿಯಿಂದ ಆಯ್ದವೃಕ್ಷಸಾಕ್ಷಿ
ಕಥೆಯ ಮೂಲಕ ಹಳೆಗನ್ನಡ ಚಂಪೂಕಾವ್ಯವನ್ನು ಪರಿಚಯಿಸುವ ಆಶಯದೊಂದಿಗೆ ವೃಕ್ಷಸಾಕ್ಷಿ ಕಥೆಯು “ಸತ್ಯಕ್ಕೆ
ಸಾವಿಲ್ಲ ಸುಳ್ಳಿಗೆಸುಖವಿಲ್ಲ” ಎಂಬ ನೀತಿಯನ್ನು ಪ್ರತಿಪಾದಿಸುತ್ತದೆ. ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಪಾತ್ರಗಳು
 ಹೆಸರಿಗೆ ತಕ್ಕಂತೆ ಗುಣವನ್ನು ಹೊಂದಿದ್ದು ಧರ್ಮಬುದ್ದಿಯ ಪಾತ್ರವು  ಸಹನಶೀಲತೆ , ಸುಸಂಸ್ಕೃತ ವ್ಯಕ್ತಿತ್ವವನ್ನು
ನಿರೂಪಿಸಿದರೆ ದುಷ್ಟಬುದ್ಧಿಯ ಪಾತ್ರವು ತನ್ನ ವಂಚನೆ  ಕಪಟತನ,ಮೋಸದಿಂದ ತಾನು ಹಾಳಾಗುವುದಲ್ಲದೆ, ಸಂಪತ್ತಿಗಾಗಿ
ತನ್ನ ತಂದೆಯನ್ನು ಬಲಿಕೊಡುವ ಹೃದಯಹೀನ ಕೃತ್ಯದಿಂದ “ಮಾಡಿದುಣ್ಣೊಮಾರಾಯ”ನೀತಿಯಂತೆ ಕೆಟ್ಟ ಫಲವನ್ನು
ಅನುಭವಿಸುವಂತಾಗುತ್ತದೆ. ಈ ಕಥೆಯು “ಹಣಕ್ಕಿಂತ ಗುಣ ಮೇಲು” ಎಂಬ ಆಶಯವನ್ನು ಪ್ರತಿಪಾದಿಸುತ್ತದೆ.

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊದು ವಾಕ್ಯಗಳಲ್ಲಿ ಉತ್ತರಿಸಿ.

೧. ‘ವೃಕ್ಷ ಸಾಕ್ಷಿ’ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?
‘ವೃಕ್ಷ ಸಾಕ್ಷಿ’ ಕತೆಯನ್ನು ದುರ್ಗಸಿಂಹನ ಪಂಚತಂತ್ರ  ಕೃತಿಯಿಂದ ಆರಿಸಲಾಗಿದೆ.

೨. ದುಷ್ಟಬುದ್ದಿಯು ಧರ್ಮಬುದ್ಧಿಯ  ಮೇಲೆ ಯಾವ ಆರೋಪವನ್ನು ಹೊರಿಸಿದನು ?
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ ಆರೋಪವನ್ನು ಹೊರಿಸಿದನು.

೩. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ?
ದುಷ್ಟಬುದ್ಧಿವ  ವೃಕ್ಷವೇ (ಆಲದಮರ) ಸಾಕ್ಷಿ ಎಂದಾಗ ಧರ್ಮಾಧಿಕರಣರ
ವಿಸ್ಮಯಗೊಂಡರು.

೪. ದುಷ್ಟಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕೆಳೆದನು  ?
ಧರ್ಮಬುದ್ಧಿಯು ದೇವರು  , ಗುರುಗಳು, ವೇದಾಧ್ಯಯನ ನಿರತರಾದವರನ್ನು  ಪೂಜೆ ಮಾಡುತ್ತ ಬೆಳಗಿನ ಹೊತ್ತನ್ನು ಕಳೆದನು.

೫. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಧರ್ಮಾಧಿಕರಣರು ದುಷ್ಟಬುದ್ಧಿ  ಮತ್ತು ದುಷ್ಟಬುದ್ಧಿಯ ಜಗಳವನ್ನು  ಬಗೆಹರಿಸಲು , ವೃಕ್ಷಸಾಕ್ಷಿಯನ್ನು ಕೇಳಲುವಟವೃಕ್ಷದ ಸಮೀಪಕ್ಕೆ ಬಂದರು  .


ಹೆಚ್ಚುವರಿ ಪ್ರಶ್ನೋತ್ತರಗಳು

೬. ದುಷ್ಟಬುದ್ಧಿಯ ತಂದೆಯ ಹೆಸರೇನು ?
ದುಷ್ಟಬುದ್ಧಿಯ ತಂದೆಯ ಹೆಸರು ಪ್ರೇಮಮತಿ.

೭. ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯರು ಎಲ್ಲಿ ಬೀಡುಬಿಟ್ಟಿದ್ದರು ?
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯರು ಮಧುರಾಪುರನಗರ ಹೊರವಲಯದ ಉದ್ಯಾನವನದೊಳಗೆ ಬೀಡುಬಿಟ್ಟರು.

೮. ಹೊನ್ನನ್ನು ಕದ್ದವರು  ಯಾರು ?
ಹೊನ್ನನ್ನು ಕದ್ದವರು ದುಷ್ಟಬುದ್ಧಿ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕುನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.


೧. ಧರ್ಮಬುದ್ಧಿಗೆ ದುಷ್ಟಬುದ್ಧಿಯು  ಯಾವ ಸಲಹೆಯಿತ್ತನು ?

ಧರ್ಮಬುದ್ಧಿಗೆ ದುಷ್ಟಬುದ್ಧಿಯು “ಈ ಹೊನ್ನನ್ನು ಹಂಚಿಕೊಂಡು  ಮನೆಯಲ್ಲ ಸ್ವೇಚ್ಛೆಯಿಂದ ಇರುವವರಲ್ಲ  ಮತ್ತೆ ವ್ಯಾಪಾರಕ್ಕಾಗಿ ದೂರದೇಶಕ್ಕೆ
ಹೋಗಬೇಕಾಗುತ್ತದೆ . ಆಕಾರಣದಿಂದ ನಿನಗೂ ನನಗೂ ವ್ಯಯಕ್ಕೆ(ಖರ್ಚಿಗೆ) ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು, ಉಳಿದ ಹೊನ್ನನೆಲ್ಲವನ್ನು ಇ
ಇಲ್ಲಿಯೇ ಇಡೋಣ”ಎಂದು ಸಲಹೆಯಿತ್ತನು.

೨. ದುಷ್ಟಬುದ್ದಿಯು   ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು ?
ದುಷ್ಟಬುದ್ದಿಯು  ತನ್ನ ತಂದೆಗೆ ಏಕಾಂತದಲ್ಲಿ ಕರೆದುಕೊಂಡು ಹೋಗಿ
“ನಿಮ್ಮ ಒಂದು ಮಾತಿನಿಂದ ನಮ್ಮ ಪರಿಜನರೆಲ್ಲರೂ (ಮನೆಯವರೆಲ್ಲರೂ)ಹಲವು ಕಾಲ ಹಸಿಯದೆ ಊಟಮಾಡಿ ಬಾಳುವಷ್ಟು ಹಣವು ಲಭಿಸುವುದು. ನೀವು ಆ ಮರದ ಪೊಟರೆಯಲ್ಲಿ ಅವಿತುಕೊಂಡು ಧರ್ಮಬುದ್ಧಿಯೇಹೊನ್ನನ್ನು ತೆಗೆದುಕೊಂಡು ಹೋದನು ಎಂದು ”ಹೇಳಿದನು.

೩. ಧರ್ಮಾಧಿಕರಣರು  ವಟವೃಕ್ಷಕ್ಕೆ  ಏನು ಹೇಳಿದರು ?
ಧರ್ಮಾಧಿಕರಣ ರು ವಟವೃಕ್ಷಕ್ಕೆ“ನೀನಾದರೋ ಯಕ್ಷಾದಿ ದಿವ್ಯ ದೇವತೆಗಳಿಗೆ ವಾಸಸ್ಥಾನವು ಮತ್ತು ಅವರ ಸೇವೆಯನ್ನು ಮಾಡುವಂತಹ ª
ವೃಕ್ಷವೂಆಗಿದ್ದೀಯಾ, ಆ ಕಾರಣದಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುವೆವು, ನೀನು ತಪ್ಪದೆ ಸಾಕ್ಷಿಯನ್ನು ನುಡಿ”
 ಎಂದು ಹೇಳಿದರು  .

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.


೧. ವೃಕ್ಷ ಸಾಕ್ಷಿ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು ? ಏಕೆ ?

ವೃಕ್ಷಸಾಕ್ಷಿ ಪಾಠದಲ್ಲಿ ನಾನು ಮೆಚ್ಚುವ  ಪಾತ್ರವೆಂದರೆ  ಧರ್ಮಬುದ್ಧಿಯ  ಪಾತ್ರ. ಏಕೆಂದರೆ ಧರ್ಮಬುದ್ಧಿ ಧರ್ಮಮಾರ್ಗದಲ್ಲಿ ನಡೆಯುವ ª
ವ್ಯಕ್ತಿ.ಹೆಸರಿಗೆ ತಕ್ಕಂತೆ ಗುಣವನ್ನು ಹೊಂದಿದ್ದು ದುಷ್ಟಬುದ್ಧಿಯ  ಪಾತ್ರವು  ಸಹನಶೀಲತೆ, ಸುಸಂಸ್ಕೃತ ವ್ಯಕ್ತಿತ್ವ
ನಿರೂಪಿಸುತ್ತದೆ. ತನ್ನ ಸ್ನೇಹಿತನ ಮಾತನ್ನ್ನು  ನಂಬುಗೆಯಿಂದ  ನೋಡಿದವನಾಗಿದ್ದಾನೆ. ಆತನಲ್ಲಿ
ತಾಳ್ಮೆ ಸ್ವಭಾವ ಉನ್ನತವಾದದ್ದು ಏಕೆಂದರೆ ದುಷ್ಟಬುದ್ಧಿ ಈತನ ಮೇಲೆ ಕಳ್ಳತನದ ಆರೋಪವರಿಸಿದರು
ಭಯಪಡದೆ  ಶಾಂತನಾಗಿ ವರ್ತಿಸಿದನು.ಸೂರ್ಯೋದಯವಾದೊಡನೆ ಧರ್ಮಬುದ್ಧಿಯು ದೇವರು, ಗುರುಗಳು,
ವೇದಾಧ್ಯಯನ ನಿರತರಾದವರನ್ನು  ಪೂಜೆ ಮಾಡುತ್ತ ಬೆಳಗಿನ ಹೊತ್ತನ್ನು ಕಳೆದನು  ಎಂಬುದನ್ನು  ನೋಡಿದರೆ ಆತನೊಬ್ಬ  ದೈವಭಕ್ತನಾಗಿದ್ದನು ಎಂದು ಹೇಳಬಹುದು. ಅಲ್ಲದೇ ಮರದ ಪೊಟರೆಯೊಳಗಿದ್ದ ಪ್ರೇಮಮತಿ, ಧರ್ಮಬುದ್ಧಿಯೇ ಹೊನ್ನನ್ನು ಕದ್ದವನು ಎಂದು ಹೇಳಿದಾಗಲೂ ವಿಚಲಿತನಾಗದೆ  ದೇವರು ಮಾತನಾಡಿದ್ದರೆ ಸತ್ಯವನ್ನು  ಹೇಳುತ್ತಿತ್ತು ಇದರಲ್ಲಿ  ಏನೋ ಮೋಸ ಅಡಗಿದೆ ಎಂದು ತನ್ನ ಬುದ್ಧಿವಂತಿಕೆಯಿಂದ  ಮರದೊಳಗೆ ಮನುಷ್ಯ ಸಂಚಾರವಾಗಿರುವದನ್ನ  ಗ್ರಹಿಸಿಕೊಂಡು ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯನ್ನು ಹೊರಗೆ ಬರುವಂತೆ ಮಾಡಿ ಸತ್ಯವನ್ನು  ತೋರಿಸುತ್ತಾನೆ. ಆದ್ದರಿಂದ ಆತ ಸತ್ಯವಂತನಾಗಿದ್ದು  . ದುಷ್ಟಬುದ್ಧಿಯ ತಂತ್ರ ಆತನಿಗೆ ತಿರುಗುಬಾಣವಾಗುವಂತೆ ಮಾಡಿ ಪಾಪಬುದ್ಧಿಯವನಾದ ದುಷ್ಟಬುದ್ಧಿಗೆ ಸರಿಯಾದ ಪಾಠವನ್ನು ಕಲಿಸಿದನು  .ಆದ್ದರಿಂದ ನನಗೆ ಧರ್ಮಬುದ್ಧಿಯ ಪಾತ್ರ ಮೆಚ್ಚಿಕೆಯಾಯಿತು.

೨. ದುಷ್ಟಬುದ್ದಿಯ  ತಂತ್ರ ಅವನಿಗೆ ತಿರುಗುಬಾಣವಾದ ಬಗೆಯನ್ನು ತಿಳಿಸಿ.

ದುಷ್ಟಬುದ್ಧಿಯು ಅತಿ ಮೋಸದ ಮನಸ್ಸಿನಿಂದ, ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೋಗಿ ಹೂತಿಟ್ಟ ಹೊನ್ನನೆಲ್ಲವನ್ನು ತೆಗೆದುಕೊಂಡು ಬಂದು ,ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ ಆರೋಪವನ್ನು  ಹೊರಿಸಿದರು  . ಈ ವಿಚಾರ ಧರ್ಮಾದಿಕಾರಣರ  ಬಳಿ ಬಂದಾಗ ಧರ್ಮಬುದ್ಧಿಯೇಹೊನ್ನು ಕದ್ದಿರುವುದಕ್ಕೆ  ಅಲ್ಲಿದ್ದ ಆಲದ ಮರವೇ ಸಾಕ್ಷಿ ಎಂದು ಹೇಳುತ್ತಾನೇ  ಸಾಕ್ಷಿ ಹೇಳಿಸಲುತನ್ನ  ತಂದೆಯನ್ನೇ ಆ ಮರದ ಪೊಟರೆಯೊಳಗೆ  ಕೂಡಿಸಿ ಧರ್ಮಬುದ್ಧಿಯೇ ಹೊನ್ನನ್ನು ಕದ್ದನು  ಎಂದು ಹೇಳಿಸುತ್ತಾನೆ. ಇದರಲ್ಲಿ  ಏನಾದರೊಂದು  ಮೋಸವಾಗಿರಲೇಬೇಕು ಎಂದು ಅರಿತಧರ್ಮಬುದ್ಧಿ ಆ ಮರವನ್ನು ಸುತ್ತು ಹಾಕಿ ನೋಡಿ ದೊಡ್ಡದಾದ ಪೊಟರೆಯಲ್ಲಿ ಮನುಷ್ಯ ಸಂಚಾರವಾಗಿರುವುದನ್ನು ಕಂಡು ತೀರ್ಮಾನಿಸಿಧರ್ಮಬುದ್ಧಿಯು ಧರ್ಮಾಧಿಕಾರಿಗಳಿಗೆ ಹೀಗೆ ಹೇಳಿದನು. “ಹುಸಿಯದ ಬೇಹಾರಿಯೇ ಇಲ್ಲ.” ನಾನು ವ್ಯಾಪಾರಿ ಆಗಿರುವುದರಿಂದ ನಮ್ಮ ವೃತ್ತಿಧರ್ಮಕ್ಕೆ ಸುಳ್ಳನ್ನು  ಹೇಳಿದ್ದೇನೆ. ಧನವನ್ನು  ವಂಚನೆಯಿಂದ  ನನ್ನ ಮನೆಗೆ ತೆಗೆದುಕೊಂಡು ಹೋಗುವೆ ಎನ್ನುವಷ್ಟರಲ್ಲಿ  ಸೂರ್ಯೋದಯವಾದಾಗ  ತೆಗೆದುಕೊಂಡು ಹೋಗಲು ಅವಕಾಶವಿಲ್ಲದೆ ಮರದ ಪೊಟರೆಯೊಳಗೆ ಇಟ್ಟು ಬಂದು , ಮರುದಿವಸ ಹೋಗಿ
ನೋಡುವಷ್ಟರಲ್ಲಿ  ಆ ಹೊನ್ನನ್ನು ಒಂದು ಹಾವು ಸುತ್ತಿಕೊಂಡಿದ್ದಾಗ ಅದನ್ನು ತೆಗೆದುಕೊಳ್ಳಲು ಹೆದರಿ ಹೋದೆನು. ನೀವು ಇಲ್ಲಿದ್ದಂತೆ ನೋಡುತ್ತ
ಇರಿ, ಪೊಟರೆಯೊಳಗೆ ಹೊಗೆಯನ್ನು ಹಾಕಿ, ಹಾವನ್ನು  ಹೊರಬರಿಸಿ, ಕದ್ದುಕೊಂಡ ಒಡವೆಯನ್ನು ಕೊಡುವೆನು  ಎಂದನು. ಧರ್ಮಬುದ್ಧಿಯು
ಹುಲ್ಲನ್ನು , ಪುಳ್ಳಿಗಳಳನ್ನು ತರಿಸಿ, ಆ ಪೊಟರೆಯೊಳಗೆ ಅಡಗಿಸಿ ತುಂಬಿ, ಬೆಂಕಿಯನ್ನು ಇಟ್ಟೊಡನೆ  ಹೊಗೆ ಸುತ್ತಿ ಬೆಂಕಿ ಉರಿಯುತ್ತಿರಲು,ಪ್ರೇಮಮತಿ ಧೃತಿಗೆಟ್ಟು ಗೋಳಾಡಿ ಪೊಟರೆಯೊಳಗಿಂದ ಸುರುಳುತ್ತ ಉರುಳಿ ಉಸಿರುಗಟ್ಟಿ ಪ್ರಾಣತ್ಯಾಗ ಮಾಡಿದನು. ಇದನ್ನು  ಧರ್ಮಾಧಿಕರಣರು  ನೋಡಿ ಇವನು ದುಷ್ಟಬುದ್ಧಿಯ ತಂದೆ ಸಂದೇಹವಿಲ್ಲ ಎಂದು ತಿಳಿದು, ಈ ಪಾಪಕರ್ಮನಾದ  ದುಷ್ಟಮಗನಿಂದ ನಿನಗೆ ಇಂತಹ ದುರ್ಮರಣಬಂದೊದಗಿತು ಎಂದು ನುಡಿದರು. ಹೀಗೆ ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗುಬಾಣವಾಯಿತು.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಪೊನ್ನನೆಲ್ಲಮಂ ನೀನೆ ಕೊಂಡೆ”

ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರವಿರಚಿತ ‘ಪಂಚತಂತ್ರ ’ಎಂಬ ಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
ಎಂಬ  ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ದುಷ್ಟಬುದ್ಧಿಯು ಧರ್ಮಬುದ್ಧಿಗೆ ಹೇಳಿದನು.ದುಷ್ಟಬುದ್ಧ್ಧಿಯು ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೋಗಿ ಹೂತಿಟ್ಟ
ಹೊನ್ನ ನೆಲ್ಲವನ್ನು  ತೆಗೆದುಕೊಂಡು ಕುಳಿಯನ್ನು ಮೊದಲಿನಂತೆ ಮುಚ್ಚಿ, ಕೆಲವಾನು ದಿವಸಗಳನ್ನು ಬಿಟ್ಟು, ತಾನೇ ಧರ್ಮಬುದ್ಧಿಯಲ್ಲಿಗೆ ಬಂದು,
ವ್ಯಯಕ್ಕೆ ಹೊನ್ನಿಲ್ಲ. ಇನ್ನು ಸ್ವಲ್ಪ ಹೊನ್ನನ್ನು ತೆಗೆದುಕೊಳ್ಳೋಣ ಬನ್ನಿರಿ ಎಂದು ಜೊತೆಗೂಡಿ ಕರೆದುಕೊಂಡು ಹೊನ್ನು ಹೂತಿಟ್ಟ ಸ್ಥಳಕ್ಕೆ
ಹೋದನು. ಹೂತು ಹಾಕಿದ ಸ್ಥಳದಲ್ಲಿ ಹೊನ್ನನ್ನು ಕಾಣದೆ, ಇನ್ನು ಮಾತನಾಡದೆ ಇದ್ದರೆ ಅಪವಾದವು ತನ್ನ್ನ  ಮೇಲೆ  ಬರುವುದೆಂದು,,“ಪೊನ್ನನೆಲ್ಲಮ೦ನೀನೆ ಕೊಂಡೆ (ಹೊನ್ನನೆಲ್ಲವನ್ನು ನೀನೆ ತೆಗೆದುಕೊಂಡು ಹೋಗಿದ್ದೀಯಾ) ಎಂದು ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ
ಆರೋಪವನ್ನು  ಹೊರಿಸಿದ ಸಂದರ್ಭವಾಗಿದೆ.
ಸ್ವಾರಸ್ಯ : ತನ್ನ ಮೇಲೆ ಅಪವಾದ ಬರುವಂತೆ  ನೋಡಿಕೊಳ್ಳುವ ಮತ್ತು ಇನ್ನೊಬ್ಬರ ಮೇಲೆ ಅಪವಾದವನ್ನು ಹೊರಿಸುವ ದುಷ್ಟಬುದ್ಧಿಯು
ತಂತ್ರವನ್ನು ಕವಿ ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಎತ್ತಿ ತೋರಿಸಿದ್ದಾರೇ .
೨. “ಈತನ ಮಾತು ಅಶ್ರುತಪೂರ್ವಮ್”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ‘ಪಂಚತಂತ್ರ  ’ಎಂಬಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
ಎಂಬ  ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು  ಧರ್ಮಾಧಿಕಾರಣರು ಹೇಳಿಕೊಂಡರು. ನ್ಯಾಯ ತೀರ್ಮಾನಕ್ಕಾಗಿ ಧರ್ಮಾಧಿಕರಣ  ಬಳಿ ಬಂದಾಗ ದುಷ್ಟಬುದ್ಧಿಯುಹೊನ್ನನೆಲ್ಲವನ್ನು  ಈತನೇ ಕದ್ದುಕೊಂಡಿರುವುದಕ್ಕೆ ಸಾಕ್ಷಿ ಉಂಟು ಎಂದು ಹೇಳಿದರು  . ಆಗ ಸಭೆಯ ಸದಸ್ಯರು  ಸಾಕ್ಷಿಯನ್ನು ಹೇಳು ಎನ್ನಲುದುಷ್ಟಬುದ್ಧಿಯು ಆ ಸ್ಥಳದಲ್ಲಿ ಹೊನ್ನನ್ನು ಇಡುವಾಗ ಈತನೂ  ಮತ್ತು ನಾನು ಬಿಟ್ಟು ಬೇರೆ ಯಾರು ಮನುಷ್ಯರು ಇರಲಿಲ್ಲ . ಆ ಸ್ಥಳದಲ್ಲಿ ಇರುವವಟವೃಕ್ಷವೇ (ಆಲದಮರದ ) ಸಾಕ್ಷಿ ಎಂದಾಗ ಧರ್ಮಾಧಿಕರಣರು
 ವಿಸ್ಮಯಗೊಂಡು“ಈತಈತನ ಮಾತು ಅಶ್ರುತಪೂರ್ವಮ್”( ಈತನ ಮಾತು ಈ ಮೊದಲು ಕೇಳಿಲ್ಲದ್ದು ) ಈ ಆಶ್ಚರ್ಯವನ್ನು ನೋಡೋಣವೆಂದು ಧರ್ಮಬುದ್ಧಿಯನ್ನು ಕರೆದು ನೀನು ಈ ಸಾಕ್ಷಿಯನ್ನು ಒಪ್ಪಿಕೊಳ್ಳುವೆಯಾ?ಎಂದು ಕೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ವೃಕ್ಷ ಸಾಕ್ಷಿ ಹೇಳುವುದು ಎಂಬುದನ್ನು  ಹಿಂದೆ ಎಂದೂ ಕೇಳಿಲ್ಲ ಎಂದು ಧರ್ಮಾಧಿಕರಣರು  ವಿಸ್ಮಯಭಾವದಿಂದ ಈ ಮಾತನ್ನು
ಹೇಳುವುದು ಬಹು ಸ್ವಾರಸ್ಯಪೂರ್ಣವಾಗಿದೆ.
೩. “ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ ‘ಪಂಚತಂತ್ರ  ’ಎಂಬ ಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು  ದುಷ್ಟಬುದ್ಧಿಯ ತಂದೆ ಪ್ರೇಮಮತಿ ದುಷ್ಟಬುದ್ಧಿಗೆ ಹೇಳಿದನು  .ದುಷ್ಟಬುದ್ಧ್ಧಿಯು ತನ್ನ ತಂದೆಯ ಕೈಯನ್ನು ಹಿಡಿದು,
ಏಕಾಂತದಲ್ಲಿ ಕರೆದುಕೊಂಡು ಹೋಗಿ ನಡೆದ ಸಂಗತಿಯನ್ನೆಲ್ಲ ತಿಳಿಯುವಂತೆ ಹೇಳಿ “ನಿಮ್ಮ ಒಂದು ಮಾತಿನಿಂದ ನಮ್ಮ
ಪರಿಜನರೆಲ್ಲರೂ (ಮನೆಯವರೆಲ್ಲರೂ) ಹಲವು ಕಾಲ ಹಸಿಯದೆ ಊಟಮಾಡಿ ಬಾಳುವಷ್ಟು ಹಣವು ಲಭಿಸುವುದು . ನೀವು ಆ ಮರದ
ಪೊಟರೆಯಲ್ಲಿ ಅವಿತುಕೊಂಡು ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡು ಹೋದನು ಎಂದು ಹೇಳಬೇಕು ಎಂದಾಗ ದುಷ್ಟಬುದ್ಧಿಯ
ತಂದೆ“ ಪರರಧನವನ್ನು  ಅಪಹರಿಸುವುದು ನಂಬಿಕೆದ್ರೋಹಮಾಡುವುದು, ಸ್ವಾಮಿದ್ರೋಹ ಮಾಡುವುದು ಇವೆಲ್ಲವೂ ಏನೇ ಮಾಡಿದರೊ
ನಮ್ಮನ್ನು ಕೆಡಿಸುತ್ತವೆ. ಇಂತಹದೆಲ್ಲವನ್ನು ನೀನು ತಿಳಿದಿದ್ದು ನನ್ನನು  ಸಾಕ್ಷಿ ಮಾಡಿ ಮಾತನಾಡಿಸಿ, ನನ್ನನು  ಕೆಡಿಸಲು ಬಯಸಿದೆ. ““ನಿನ್ನ ಪೞುವಗೆ ನಮ್ಮ
ಕುಲಮನೆಲ್ಲಮನೞಿವ ಬಗೆ”( ನಿನ್ನ ಕೆಟ್ಟಬುದ್ಧಿಯು ನಮ್ಮ ಕುಲವನ್ನೆಲ್ಲವನ್ನು(ಮನೆತನವನ್ನೆಲ್ಲ) ಹಾಳು ಮಾಡುವ ರೀತಿಯದಾಗಿದೆ)” ಎಂದು
ದುಷ್ಟಬುದ್ಧಿಗೆ ಬುದ್ಧಿ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಕೆಟ್ಟಬುದ್ಧಿಯು ಕುಲವನ್ನೆಲ್ಲ ಹಾಳು ಮಾಡುತ್ತದೆ ಎಂದು ಪ್ರೇಮಮತಿ ತನ್ನ ಮಗನಾದ ದುಷ್ಟಬುದ್ಧಿಗೆ ಬುದ್ಧಿಮಾತನ್ನು ಹೇಳುವುದು
ಸ್ವಾರಸ್ಯಪೂರ್ಣವಾಗಿದೆ.
೪. “ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗು೦”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ‘ಪಂಚತಂತ್ರ  ’ಎಂಬಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
 ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯು ಬುದ್ಧಿಗೆಟ್ಟು, ಧರ್ಮಮಾರ್ಗವನ್ನು  ಬಿಟ್ಟು“ಪ್ರಕೃತಿ
ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗು೦ (ಪ್ರಕೃತಿ ವಿಕೃತಿಯಾದ (ಸಹಜ ಗುಣ ಬದಲಾವಣೆಯಾದ) ಮನುಷ್ಯನ ಆಯುಷ್ಯವು
ಕಡಿಮೆಯಾಗುತ್ತದೆ) ಎಂದು ಹೇಳುವಂತೆ ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡನು ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ದುಷ್ಟಬುದ್ಧಿಯ ತಂದೆಯಾದ ಪ್ರೇಮಮತಿಯು ಹೇಳಿದ ಸುಳ್ಳು ಆತನ ಆಯುಷ್ಯವನ್ನು ಕಡಿಮೆ ಮಾಡಿತು ಎಂದು ಪರೋಕ್ಷವಾಗಿ ಕವಿ
ಬಳಸಿರುವ ಈ ಮಾತು ಸ್ವಾರಸ್ಯಪೂರ್ಣವಾಗಿದೆ.
೫. “ಹುಸಿಯದ ಬೇಹಾರಿಯೇ ಇಲ್ಲ.”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರವಿರಚಿತ ‘ಪಂಚತಂತ್ರ  ’ಎಂಬಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
ಎಂಬ  ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು  ಧರ್ಮಬುದ್ಧಿಯು ಧರ್ಮಾಧಿಕರಣರಿಗೆ ಹೇಳಿದನು. ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡನು ಎಂದು ಹೇಳುವುದನ್ನು ಕೇಳಿದ ಧರ್ಮಬುದ್ಧಿಯು ಇದರಲ್ಲಿ  ಏನಾದರೊಂದು  ಮೋಸವಾಗಿರಲೇಬೇಕು ಎಂದು ಆ ಮುರರವನ್ನು ಸುತ್ತು ಹಾಕಿ ನೋಡಿದೊಡ್ಡದಾದ ಪೊಟರೆಯಲ್ಲಿ ಮನುಷ್ಯ ಸಂಚಾರವಾಗಿರುವುದನ್ನು ಕಂಡು ತೀರ್ಮಾನಿಸಿ ಧರ್ಮಬುದ್ಧಿಯು ಧರ್ಮಾಧಿಕಾರಿಗಳಿಗೆ ಹೀಗೆ ಹೇಳಿದನು.“ಹುಸಿಯದ ಬೇಹಾರಿಯೇ ಇಲ್ಲ.” (ಸುಳ್ಳು ಹೇಳದ ವ್ಯಾಪಾರಿಯೇ ಇಲ್ಲ) ನಾನು ವ್ಯಾಪಾರಿ ಆಗಿರುವುದರಿಂದ ನಮ್ಮ ವೃತ್ತಿಧರ್ಮಕ್ಕೆ ಧರ್ಮಬುದ್ಧಿಯು ಅಧರ್ಮಬುದ್ಧಿಯಾಗಿ ಧನವನ್ನು ವಂಚನೆಯಿಂದ ತೆಗೆದುಕೊಂಡು  ಹೋದೆನು ಎಂದು ದುಷ್ಟಬುದ್ಧಿಯ ತಂತ್ರವನ್ನು ಬಯಲುಮಾಡುವ ಸಂದರ್ಭವಾಗಿದೆ .
ಸ್ವಾರಸ್ಯ :- ವ್ಯಾಪಾರಿಗಳು  ವೃತ್ತಿಧರ್ಮದಲ್ಲಿ ಕೆಲವೊಂದು ಸಲ ಸುಳ್ಳು ಹೇಳುತ್ತಾರೆ ಎಂಬು ಲೋಕರೂಡಿಯ ಮಾತು ಬಹು ಸ್ವಾರಸ್ಯಪೂರ್ಣವಾಗಿ
ಇಲ್ಲಿ ಮೂಡಿಬಂದಿದೆ.

ಉ) ಮೊದಲೆರಡು ಪದಗಳಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂದಿಸಿದ ಪದವನ್ನು ಬರೆಯಿರಿ.

೧) ವಡ್ಡಾರಾಧನೆ : : ಶಿವಕೋಟ್ಯಾಚಾರ್ಯ : : ಪಂಚತಂತ್ರ  : ದುರ್ಗಸಿಂಹ
೨) ಕಬ್ಬ : ಕಾವ್ಯ : : ಬೇಹಾರಿ : ವ್ಯಾಪಾರಿ
೩) ಅನೃತ : ಸುಳ್ಳು : : ಕೃತ್ರಿಮ : ಮೋಸ , ವಂಚನೆ
೪) ಬಂದಲ್ಲದೆ : ಲೋಪಸಂದಿ  : : ಧೃತಿಗೆಟ್ಟು : ಆದೇಶ ಸಂಧಿ
೫) ದೈವಭಕ್ತಿ – ತತ್ಪುರುಷ ಸಮಾಸ  : : ಅಬ್ಜೋದರ : ಬಹುವ್ರೀಹಿ ಸಮಾಸ

 

ಭಾಷಾ ಚಟುವಟಿಕೆ

೧. ಈ ಪದಗಳನ್ನು ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.

ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.

ಅತಿಕುಟಿಲ, ಕೈಕೊಳ್ವುದು, ಕಟ್ಟೇಕಾಂತ, ಸ್ವಾಮಿದ್ರೋಹ, ಪರಧನ , ಧನಹರಣ , ಸಾಕ್ಷಿಮಾಡಿ, ಬಲವಂದು.
ಅತಿಕುಟಿಲ      –  ಅತಿಯಾದ   +   ಕುಟಿಲ           =ಕರ್ಮಧಾರೆಯ ಸಮಾಸ
ಕೈಕೊಳ್ವುದು    –   ಕೈಯನ್ನು   +   ಕೊಳ್ವುದು      =ಕ್ರಿಯಾ ಸಮಾಸ
ಕಟ್ಟೇಕಾಂತ      –      ಕಡಿದು   +   ಏಕಾಂತ     =ಕರ್ಮಧಾರೆಯ ಸಮಾಸ
ಸ್ವಾಮಿದ್ರೋಹ   –  ಸ್ವಾಮಿಗೆ    +    ದ್ರೋಹ       =ತತ್ಪುರಷ ಸಮಾಸ
ಪರಧನ             –    ಪರರ    +     ಧನ     =ತತ್ಪುರಷ ಸಮಾಸ
ಧನಹರಣ         –    ಧನದ   +   ಹರಣ     =ತತ್ಪುರಷ ಸಮಾಸ
ಸಾಕ್ಷಿಮಾಡಿ       –   ಸಾಕ್ಷಿಯನ್ನು   +     ಮಾಡಿ      = ಕ್ರಿಯಾ ಸಮಾಸ
ಬಲವಂದು       –       ಬಲಕ್ಕ        +      ಬಂದು       = ಕ್ರಿಯಾ ಸಮಾಸ

೩. ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ.

ಅ) ಅತಿಕುಟಿಲಮನಂ ಧನಲು ಬ್ಧತೆಯಿಂದ೦ ದುಷ್ಟಬುದ್ಧಿ ನುಡಿದಂ ಪುಸಿಯಂ
ಛಂದಸ್ಸು  – ಕಂದ ಪದ್ಯ
ಲಕ್ಷಣ : ಒಂದನೇ ಸಾಲಿನಲ್ಲಿ ೪ ಮಾತ್ರೆಯ ೩ ಗಣಗಳು ಮತ್ತು ಎರಡನೆಯ ಸಾಲಿನಲ್ಲಿ ೪ ಮಾತ್ರೆಯ ೫ ಗಣಗಳು ಬಂದಿದ್ದು ಕಂದಪz್ಯÀ ದ
ಪೂರ್ವಾರ್ಧದ ಲಕ್ಷಣ ಹೊಂದಿದೆ ಆದ್ದರಿಂದ ಇದು ಕಂದಪದ್ಯ ಛಂದಸ್ಸಾಗಿದೆ
ಆ)ಮೇದಿನಿಯಂ ಕ್ರಮಕ್ರಮದೆ ಪರ್ವಿದುದಾತನಭೋ  ವಿಭಾಗಮಾ

ಛಂದಸ್ಸು  – ಉತ್ಪಲ ಮಾಲಾ ವೃತ್ತ

ಲಕ್ಷಣ : ಈ ಪಾದದಲ್ಲಿ ೨೦ ಅಕ್ಷರಗಳು, ೨೮ ಮಾತ್ರೆಗಳು , ಭರನಭಭರಲಗ ಗಣಗಳು ಹಾಗೂ ಪಾದದ ಆದಿಯಲ್ಲಿ ಒಂದು ಗುರುಬಂದಿದ್ದು
ಇದು ಉತ್ಪಲ ಮಾಲಾ ವೃತ್ತ ಛಂದಸ್ಸಿನ ಲಕ್ಷಣವನ್ನು ಹೊಂದಿದೆ. ಆದ್ದರಿಂದ ಇದು ಉತ್ಪಲ ಮಾಲಾ ವೃತ್ತ ಛಂದಸ್ಸಾಗಿದೆ.