7th Standard Bidugadeya Haadu Kannada Notes | 7ನೇ ತರಗತಿ ಬಿಡುಗಡೆಯ ಹಾಡು ಕನ್ನಡ ನೋಟ್ಸ್
7th Standard Bidugadeya Haadu Kannada Notes | 7ನೇ ತರಗತಿ ಬಿಡುಗಡೆಯ ಹಾಡು ಕನ್ನಡ ನೋಟ್ಸ್
7th Standard Kannada Poem Bidugadeya Haadu Notes 7ನೇ ತರಗತಿ ಬಿಡುಗಡೆಯ ಹಾಡು ಪಾಠ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book, pdf text book pdf download
ಅ ) ಕೊಟ್ಟಿರುವ ಒಂದು ವಾಕ್ಯದಲ್ಲಿ ಉತ್ತರಿಸಿ .
ಪ್ರಶ್ನೆ 1 . ಪಂಜರದ ಹಕ್ಕಿ ಯಾವುದರ ಸಂಕೇತವಾಗಿದೆ ?
ಉತ್ತರ : ಪಂಜರದ ಹಕ್ಕಿ ಭಾರತೀಯರ ( ಬಂಧನದಲ್ಲಿರುವವರ ) ಸಂಕೇತವಾಗಿದೆ .
ಪ್ರಶ್ನೆ 2 . ಹಂಗಿನ ಅರಮನೆಯಲ್ಲಿ ಹಕ್ಕಿ ಹೇಗೆ ನರಳುತ್ತಿದೆ ?
ಉತ್ತರ : ಹಂಗಿನರಮನೆಯಲ್ಲಿ ರೆಕ್ಕೆಗಳ ಬಿಗಿ ಹಿಡಿದು ನರಳುತ್ತಿದೆ .
ಪ್ರಶ್ನೆ 3 . ಮೃಗರಾಜ ಏನೆಂದು ಗೊಣಗುತ್ತಿದೆ ?
ಉತ್ತರ : ಮೃಗರಾಜ ಇನ್ನು ಈ ಬಂಧನ ಸಾಕು ಎಂದು ಗೊಣಗುತ್ತಿದೆ .
ಪ್ರಶ್ನೆ 4 . ಯಾವುದು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ ?
ಉತ್ತರ : ಕಾರಿರುಳು ತನ್ನ ಸೆರೆಯೊಳಗೆ ರವಿಕಿರಣಗಳನ್ನು ಅಡಗಿಸಿಟ್ಟುಕೊಂಡಿದೆ .
ಪ್ರಶ್ನೆ 5 . ನಮ್ಮ ಗುಡಿಯು ( ಬಾವುಟ ) ಎಷ್ಟು ಬಣ್ಣಗಳನ್ನು ಹೊಂದಿದೆ ?
ಉತ್ತರ : ನಮ್ಮ ಬಾವುಟವು ಮೂರು ಬಣ್ಣಗಳನ್ನು ಹೊಂದಿದೆ .
ಆ ) ಕೊಟ್ಟಿರುವ ಎರಡು – ಮುಾರು ವಾಕ್ಯಗಳಲ್ಲಿ
ಪ್ರಶ್ನೆ 1 . ಪಂಜರದಲ್ಲಿ ನರಳುತ್ತಿರುವ ಹಕ್ಕಿ ಹರ್ಷದಲ್ಲಿ ವಿಹರಿಸಲು ಏನು ಮಾಡಬೇಕು ?
ಉತ್ತರ : ಪಂಜರದಲ್ಲಿ ನರಳುತ್ತಿರುವ ಹಕ್ಕಿ ಪಂಜರದ ಬಾಗಿಲನ್ನು ಮುರಿದು ಹೆಣೆದ ಬಂಧನದಿಂದ ಮುಕ್ತಿ ಹೊಂದುತ್ತದೆ . ಬಾನಾಡಿಯಾಗಿ ( ಪಕ್ಷಿಯಾಗಿ ) ಆಕಾಶದಲ್ಲಿ
ವಿಹರಿಸುತ್ತಾ ಹರ್ಪಿಸಲಿ ಎಂದು ಕವಿ ಹಾರೈಸುತ್ತಾರೆ .
ಪ್ರಶ್ನೆ 2 . ತಿಳಿನೀರ ಮಳೆ ಏಕೆ ಸುರಿಯಬೇಕು ?
ಉತ್ತರ : ಕಾರಿರುಳಿನಿಂದ ಜಡಗೊಂಡ ಮೈ ಹಾಗೂ ಮನಸ್ಸುಗಳು ತನ್ನ ಮಲಿನತೆಯನ್ನು ಕಳೆದುಕೊಳ್ಳಲು ತಿಳಿನೀರ ಮಳೆ ಸುರಿಯಬೇಕು . ಈ ರೀತಿ ಸುರಿದ ಮಳೆಯಿಂದ ಕೊಳಕು ಮಾಯವಾಗುತ್ತದೆ . ಒಳ ಹೊರಗೆ ಶುಚಿಯಾಗಬೇಕಾದರೆ ತಿಳಿ ನೀರ ಮಳೆ ಸುರಿಯಬೇಕಾಗುತ್ತದೆ .
ಪ್ರಶ್ನೆ 3 . ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲವೇಕೆ ?
ಉತ್ತರ : ಶತ ಶತಮಾನಗಳಿಂದ ಮೆರೆದ ಕಡಲುಗಳ ರಾಣಿಗೆ ಇನ್ನು ಮುಂದೆ ಉಳಿಗಾಲವಿಲ್ಲ ಏಕೆಂದರೆ ಭಾರತೀಯರಲ್ಲಿ ಇಂದು ಐಕ್ಯತೆಯಿದೆ . ಅವರೆಲ್ಲ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಿಡಿಲ ಹೋರಾಟ ಮಾಡುತ್ತಿದ್ದಾರೆ . ಅದೂ ತಾಯಿ ಭಾರತೀಯ ಮೇಲೆ ಆಣೆ ಹಾಕಿ & ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸಿ ಧೈಯದಿಂದ ಹೋರಾಡುತ್ತಿರುವುದರಿಂದ ಕಡಲ ರಾಣಿಗೆ ಉಳಿಗಾಲವಿಲ್ಲ .
ಪ್ರಶ್ನೆ 4 . ಒಕ್ಕೊರಲ ಹಾಡನ್ನು ಬಯಸುತ್ತಾನೆ ? ವೆ ಎಂಬ ಹೇಗೆ ಹಾಡಬೇಕೆಂದು ಕವಿ – ಸರಿ
ಉತ್ತರ : ಜಾತಿ ಮನೋವುಗಳ ಬೇಧವಿಲ್ಲದೆ ನಾವೆಲ್ಲಾ ಒಂದೇ ಎಂಬ ಮನೋಭಾವದಿಂದ ಮನುಜಮತವನ್ನು ಎತ್ತಿ ಹಿಡಿದಿದ್ದೇವೆ . ನಮ್ಮ ಮೂರು ಬಣ್ಣದ ಬಾವುಟವನ್ನು ಹಾರಿಸುತ್ತಾ ಸರ್ವರಿಗೂ ನಾವು ಸಮ ಎಂದು ಮನದುಂಬಿ ದನಿಯೆತ್ತಿ ಒಕ್ಕೊರಲ ಹಾಡನ್ನು ಹಾಡಬೇಕು ಎಂದು ಕವಿ ಬಯಸುತ್ತಾರೆ .
ಇ ) ಖಾಲಿ ಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ
೧. ಚಡಪಡಿಸುತಿದೆ __________ ಹಾದಿ ಹುಡುಕಿ.
೨. ಸೆರೆಯಿಂದ ನಾ __________ ಸದರೇರಬೇಕು.
೩. ಇನ್ನೆಲ್ಲ ನೀನೇಳು _______ ರಾಣಿ.
೪. ಹಾಡುವೆವು ಬಿಡುಗಡೆಯ ________ ಹಾಡು.
ಉತ್ತರಗಳು :
1 ) ಮುನ್ನಡೆವ
2 ) ಜಿಗಿದು
3 ) ಕಡಲುಗಳ
4 ) ಒಕ್ಕೊರಲ
ಭಾಷಾ ಚಟುವಟಿಕೆ
ಅ . ಸೂಚನೆಗಳನ್ನು ಗಮನಿಸಿ
ಪ್ರಶ್ನೆ 1 . ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ಪಟ್ಟಿ ಮಾಡಿರಿ .
ಉತ್ತರ : ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖರು ಪ್ರಮುಖರ ಹೆಸರುಗಳನ್ನು ಶಾಸಿ , ಜವಹರಲಾಲ್ ನೆಹರೂ , ಲಾಲ್‌ಬಹದ್ದೂರ್ ಶಾಸ್ತ್ರಿ , ಸರ್ದಾರ್ ವಲ್ಲಬಾಯಿ ಪಟೇಲ್ , ಸುಭಾಷ್ ಚಂದ್ರ ಬೋಸ್ ಈ ರೀತಿ ಸಾವಿರಾರು ಜನರಿದ್ದಾರೆ .
ಪ್ರಶ್ನೆ 2 . ನಮ್ಮ ದೇಶದ ಬಾವುಟದ ಚಿತ್ರವನ್ನು ಬರೆದು ಚಿತ್ರಕ್ಕೆ ಸೂಕ್ತ ಬಣ್ಣವನ್ನು ಹಚ್ಚಿರಿ .
- ಈ ಪದ್ಯದಲ್ಲಿ 2 ನೇ ಹಾಗೂ 5 ನೇ ಪದ್ಯಗಳನ್ನು ಕಂಠಪಾಠ ಮಾಡಿರಿ
ಆ ) ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ
- ಸೆರೆಯಿಂದ = ಸೆರೆ + ಇಂದ = ‘ ಯ ‘
- ಉಳಿಗಾಲ = ಉಳಿ + ಕಾಲ = ಆದೇಶಸಂಧಿ
- ‘ ಹತ್ತಡಿಯ = ಹತ್ತು + ಅಡಿಯ = ಲೋಪಸಂಧಿ
- ಮನದುಂಬಿ = ಮನ + ತುಂಬಿ = ದೇಶಸಂಧಿ
ಇ ) ಈ ಕೆಳಗಿನ ಪದಗಳಿಗೆ ತತ್ಸಮ- ತತ್ಬವ ಬರೆಯಿರಿ ,
- ಮೃತ = ಮಿಗ .
- ರಾಜ = ರಾಯ
- ಬಣ್ಣ = ವರ್ಣ
- 4. ಪ್ರಾಣ ಹರಣ
- ವಸನ = ಬೆಸನ
- ಹಕ್ಕಿ = ಪಕ್ಷಿ ತದ್ಭವ ಪದಗಳನ್ನು
ಈ ) ಈ ಕೆಳಗಿನ ವಾಕ್ಯಗಳನ್ನು ವೇಗವಾಗಿ ಓದುವುದನ್ನು ಅಭ್ಯಾಸ ಮಾಡಿ .
- ಗಿಡ ತಳಿರೊಡೆದೆರಡೆಲೆಯಾಯ್ತು .
ಕೃತಿಕಾರರ ಪರಿಚಯ : –
ನಿಮುದೇನೂರು ಸಂಗಣ್ಣ
ಸಂಗಣ್ಣನವರು ಬಳ್ಳಾರಿ ಜಿಲ್ಲೆಗೆ ಸೇರಿದ ಚಿಗಟೇರಿಯಲ್ಲಿ ದೊಡ್ಡ ಜಮೀನ್ದಾರಿ ಕುಟುಂಬದಲ್ಲಿ ಸಂಗೀತ ನಾಟಕದಲ್ಲಿ ಬಹಳ ತಾಲೂಕಿನ ವ್ಯಾಪಾರಿ . 17 ನೇ ಮಾರ್ಚ್ 1927 ರಲ್ಲಿ ಜನಿಸಿದರು . ಬಾಲ್ಯದಿಂದಲೂ ಆಸಕ್ತಿ ಇವರಿಗೆ ಶಿವರಾಮಕಾರಂತ , ಗೆಳೆತನವಿತ್ತು . ವ್ಯವಸಾಯ , ಮಾಡಿದ್ದಾರೆ . ಇವರ ಪ್ರಮುಖ ಬಾಳ ಭಿಕ್ಷುಕ , ಚಿತ್ರಪಟ , ರಾಮಾಯಣ ‘ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ . ಕೆ.ವಿ.ಸುಬ್ಬಣ್ಣನವರ ಜೊತೆ ಕೃಷಿಯ ಜೊತೆ ಸಾಹಿತ್ಯ ಕೃಷಿಯನ್ನು ಕೃತಿಗಳು ‘ ನವಿಲು ಕುಣಿದಾವ , ಮಾಡಿದ್ದರು . ಜನಪದ ಮುಕ್ತಕಗಳು , ಆ ಅಜ್ಜ ಈ ಮೊಮ್ಮಗ , ಗೊಂದಲಿಗ ದೇವೇಂದ್ರಪ್ಪನ ಹಾಡುಗಳು , ಚಿಗಟೇರಿ ಪದಕೋಶ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ನಾಡೋಜ ಪ್ರಶಸ್ತಿ , ಕರ್ನಾಟಕಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ .
ಮುಖ್ಯಾಂಶಗಳು :
ಈ ಪದ್ಯದಲ್ಲಿ ಸ್ವಾತಂತ್ರ್ಯ ಎಷ್ಟೊಂದು ಮುಖ್ಯ ಇದು ಮನುಷ್ಯರಿಗೆ ಮಾತ್ರವಲ್ಯ ಪ್ರಾಣಿ ಪಕ್ಷಿಗಳಿಗೂ ಅವಶ್ಯಕ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ . ನಮ್ಮ ದೇಶ ಭಾರತವನ್ನು ” ಕಡಲುಗಳ ರಾಣಿ ‘ ಎನಿಸಿದ ಇಂಗ್ಲೆಂಡ್ , ಪಡೆಯ ( ಆ ಟಿಪ್ ) ಹೇಗೆ ಆಳಿದರು , ಅವರಿಂದ ಸ್ವತಂತ್ರ ಹೋರಾಟ ಮಾಡಬೇಕಾಯಿತು ಎಂಬುದು ಎಲ್ಲರಿಗೂ ತಿಳಿದ ಸಂಗತಿ . ಭಾರತೀಯರ ಐಕ್ಯತೆಯ ಮಂತ್ರದಿಂದಲೇ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು ಎಂಬುದನ್ನು ಈ ಪದ್ಯದ ಮೂಲಕ ಒತ್ತಿ ಹೇಳುತ್ತಿದ್ದಾರೆ .ರುದ್ರರು , ನಮ್ಮ ತಾಯಿ ಭಾರತೀಯ ಆಣೆ ನಾವು ನಿನ್ನನ್ನು ಬಿಡುವುದಿಲ್ಲ . ಇಲ್ಲಿಂದ ನೀನು ತೊಲಗಲೇಬೇಕು , ಹೋಗು ಹೊರಟು ಹೋಗು ಎಂದು ಬೊಬ್ಬಿಡುತ್ತಿದ್ದಾರೆ . ಜಾತಿ , ಮತ , ಪಂಥ ಎಂದು ಬೇಧವೆಣಿಸಿದೆ ನಾವೆಲ್ಲರ ಮನುಜಮತ ದ ವರು ಎಂದು ತೋರಿಸಿಕೊಡುತ್ತೇವೆ . ನಮ್ಮ ಮೂರು ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ . ನಾವು ಎಲ್ಲರಿಗೂ ನಾವೆಲ್ಲರೂ ಒಂದೇ ಎಂದು ಐಕ್ಯತೆಯಿಂದ ಮನಸ ದನಿಯೆತ್ತಿ ಹಾಡುತ್ತೇವೆ . ಇದು ನಮ್ಮ ಬಿಡುಗಡೆಯ ಹಾಡು . ಸರ್ವತಂತ್ರ ಸ್ವತಂತ್ರರು ಎಂದು ಆ ಹಾಡುತ್ತಿದ್ದಾರೆ .
ಪದಗಳ ಅರ್ಥ :
- ಹಂಗು – ಋಣ ,
- ಪಂಜರ – ಪಕ್ಷಿಗಳ ಬೋನು
- ಬಾನಾಡಿ – ಪಕ್ಷಿ
- ವಿಹರಿಸು ಸಂಚರಿಸು
- ಹರ್ಷ – ಹಿಗ್ಗು , ಸಂತೋಷ
- ಸೊಕ್ಕಿ – ಗರ್ವ , ಜಂಭ
- ಕೊಳೆಗೊಂಡು – ಮಾಲಿನ್ಯಗೊಂಡು , ತೃಪ್ತಿಗೊಂಡು
- ತಣಿಸು – ತಂಪಾಗಿಸು , ತೃಪ್ತಿಗೊಳಿಸು
- ವಸನ – ವಸ್ತ್ರ , ಬಟ್ಟೆ
- ಹದ್ದು – ಎಲ್ಲೆ , ಗಡಿ
- ಕನಲು – ಕೋಪಗೊಳ್ಳು , ಸಿಟ್ಟಾಗು
- ಕೆಂಗಿಡಿ – ಉರಿಬೆಂಕಿ ,
- ಕೆಂಪಾದ ಬೆಂಕಿ
- ಸದರೇರು – ಅಂಗಳ ಸೇರು , ಬಂದಮುಕ್ತವಾಗು
- ಸೆರೆ – ಬಂಧನ
- ಅಡಗು – ಕಾಣದಂತಾಗು
- ಕಾರಿರುಳು – ದಟ್ಟವಾದ ಕತ್ತಲೆ
- ಪಣ – ಒತ್ತೆ ಇಡು
- ತೊಲಗು – ಬಿಟ್ಟು ಹೋಗು , ಹೊರಟುಹೋಗು
- ಗುಡಿ – ಬಾವುಟ , ಕೇತನ
- ಒಕ್ಕೊರಲು – ಒಗ್ಗಟ್ಟು , ಒಂದೇ ಧ್ವನಿಯಾಗು