Showing posts with label 10th Kannada notes. Show all posts
Showing posts with label 10th Kannada notes. Show all posts

9ನೇ ತರಗತಿ ಕನ್ನಡ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್ | 9th Standard Ninna Muttina Sattigeyanittu Salahu Kannada Notes

 

9ನೇ ತರಗತಿ ಕನ್ನಡ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್ | 9th Standard Ninna Muttina Sattigeyanittu Salahu Kannada Notes

ರಾಘವಾಂಕ



* ರಾಘವಾಂಕನು ಕ್ರಿ . ಶ . ಸುಮಾರು ೧೨೨೫ ರಲ್ಲಿ ಹಂಪಿಯಲ್ಲಿ ಜೀವಿಸಿದ್ದನು .* ಇವರು ‘ ರಗಳೆಯ ಕವಿ ‘ ಎಂದು ಪ್ರಸಿದ್ಧನಾದ ಹರಿಹರನ ಸೋದರಳಿಯ ಮತ್ತು ಶಿಷ್ಯನಾಗಿದ್ದನು .* ವಿರೂಪಾಕ್ಷನ ಪರಮಭಕ್ತನಾದ ಇವನು ರಚಿಸಿರುವ ಕೃತಿಗಳೆಂದರೆ : ಹರಿಶ್ಚಂದ್ರ ಕಾವ್ಯ , ಸಿದ್ಧರಾಮ ಚಾರಿತ್ರ್ಯ , ವೀರೇಶ್ವರ ಚರಿತೆ , ಸೋಮನಾಥ ಚರಿತೆ , ಶರಭ ಚಾರಿತ್ರ್ಯ , ಹರಿಹರ ಮಹತ್ವ ಎಂಬ ಕಾವ್ಯಗಳನ್ನು ಷಟ್ಟದಿ ಛಂದಸ್ಸಿನಲ್ಲಿ ರಚಿಸಿದ್ದಾನೆ .

* ಈತನಿಗೆ ಉಭಯ ಕವಿ ಕಮಲ ರವಿ , ಕವಿ ಶರಭ ಭೇರುಂಡ , ಪಟ್ಟದಿಯ ಬ್ರಹ್ಮ ಎಂಬ ಬಿರುದುಗಳಿದ್ದವು .

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು question and answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1. ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು ?

ಉತ್ತರ : ಗಾನರಾಣಿಯರು ಹರಿಶ್ಚಂದ್ರನನನ್ನು ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಕೇಳಿದರು .

2. ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ ?

ಉತ್ತರ : ಸತ್ತಿಗೆಯು ರಾಜಪಟ್ಟ ಕಟ್ಟುವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ .

3. ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾನೆ ?

ಉತ್ತರ : ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಕಾಳರಾತ್ರಿಯ ಕನೈಯರು ಹಗಲನ್ನು ನೋಡುವುದಕ್ಕೆಂದು ಬಂದಂತೆ ಎಂದು ಹೋಲಿಸಿದ್ದಾನೆ .

4. ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು ?

ಉತ್ತರ : ಗಾನರಾಣಿಯರಿಗೆ ಹರಿಶ್ಚಂದ್ರನು ಸರ್ವಾಭರಣವನ್ನು ಬಹುಮಾನವಾಗಿ ಕೊಟ್ಟನು .

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು ?

ಉತ್ತರ : ಹರಿಶ್ಚಂದ್ರನು ಗಾನರಾಣಿಯರನ್ನು ಕುರಿತು “ ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ . ಈ ಭೂಮಿಯ ಮೇಲೆ , ಯುದ್ಧರಂಗದಲ್ಲಿ ಸತ್ತಿಗೆಯನ್ನು ನೋಡಿದ ಶತ್ರುಗಳು ನಿಲ್ಲುವುದಿಲ್ಲ . ಈ ಸತ್ತಿಗೆಯ ನೆರಳಿನಲ್ಲಿ ಯಾವನು ಇರುವನೋ ಆತನಿಗೆ ವಿಪತ್ತು , ಅಡಚಣೆಗಳು , ಬಡತನ , ರೋಗ , ಅಪಕೀರ್ತಿ , ಸೋಲು , ಭಯ ಕಳೆದುಹೋಗುವುದು , ಆದ್ದರಿಂದ ಇದನ್ನು ಕೊಡುವುದಿಲ್ಲ ” ಎಂದನು .

2. ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ ?

ಉತ್ತರ : ಹರಿಶ್ಚಂದ್ರನು ಗಾನರಾಣಿಯರಿಗೆ : “ ಈ ಸತ್ತಿಗೆಯು ಜನರಿಗೆ ಕೊಡಬಾರದು . ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ ಇದು ದೇವರು , ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ ಇದು ಪೋಷಿಸುವ ತಾಯಿ , ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಇದು ಚತುರಂಗ ಬಲ ಎನಿಸಿಕೊಂಡಿದೆ . ” ಎಂದು ಸತ್ತಿಗೆಯ ವಿಶೇಷತೆಯನ್ನು ತಿಳಿಸಿದನು .

3. ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನೈಯರ ರೂಪಲಾವಣ್ಯ ಹೇಗಿತ್ತು ? ವಿವರಿಸಿ .

ಉತ್ತರ : ಕಾಳರಾತ್ರಿಯ ಕನೈಯರು ಹಗಲನ್ನು ನೋಡುವುದಕ್ಕೆಂದು ಬಂದರೋ ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಂಥನ ಮಾಡುವ ಸಮಯದಲ್ಲಿ ಹೊರಹೊಮ್ಮಿದ ಹೊಸ ವಿಷದ ಹೊಗೆ ಸುರಿದು , ಕಪ್ಪಾಗಿ ಗಟ್ಟಿಯಾದಂತೆಮನುಷ್ಯರಾದರೋ ! ಬ್ರಹ್ಮನು ನೀಲಿ ಬಣ್ಣದಿಂದ ಮಾಡಿದ ಗೊಂಬೆಗಳು ಜೀವವನ್ನು ಪಡೆದವೋ ! ಎನ್ನುವಂತೆ ಇದ್ದರು .

4. ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು ? ವಿವರಿಸಿ ,

ಉತ್ತರ : ಗಾನರಾಣಿಯರು . ಮಹಾರಾಜ ಹರಿಶ್ಚಂದ್ರನನ್ನು ಕುರಿತು : ” ಮಝ , ಭಾಮಿ , ಆದಟರಾಯ , ಮಝರೇ ರಾಯ , ರಾಯದಳವುಳಕಾರ , ರಾಯಕಂಟಕ , ರಾಯಜಗಜೆಟ್ಟಿ , ರಾಯದಲ್ಲ , ರಾಯಶೋಳಾದಳ , ರಾಯಭುಜಬಲಭೀಮ , ರಾಯಮರ್ದನ ” ಎಂದು ಗುಣಗಾನ ಮಾಡುತ್ತಾ “ ಒಡೆಯನೇ ಚಿರಂಜೀವಿಯಾಗು ” ಎಂದು ಕೀರ್ತಿಸಿ ಹಾಡಿದರು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂವಾದವನ್ನು ಸಂಗ್ರಹಿಸಿ ಬರೆಯಿರಿ .

ಉತ್ತರ : ( ಹರಿಶ್ಚಂದ್ರನು ಗಾನರಾಣಿಯರ ನೃತ್ಯವನ್ನು ಮೆಚ್ಚಿ ಆಭರಣಗಳನ್ನು ಬಹುಮಾನವಾಗಿ ನೀಡುತ್ತಾನೆ . ಆಗ ಅವರು ) ಗಾನರಾಣಿಯರು : ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ನಮಗೆ ನೀನು ಆಭರಣಗಳನ್ನು ಕೊಟ್ಟರೆ ಪ್ರಯೋಜನವೇನು ? ಅದಕ್ಕೆ ಬದಲಾಗಿ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟು ನಮ್ಮನ್ನು ಕಾಪಾಡು . ಹರಿಶ್ಚಂದ್ರ ಸೂರ್ಯವಂಶದ ಪರಂಪರೆಯ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ ರಾಜತನವು ದೊರೆಯುವುದಿಲ್ಲ . ಆದ್ದರಿಂದ ಇದನ್ನು ಕೊಡಲು ಸಾಧ್ಯವಿಲ್ಲ . ಪ್ರೀತಿಯಿಂದ ಎಲ್ಲವನ್ನು ಕೊಡಬಹುದು . ಹಾಗೆಂದು ತಾಯಿ , ತಂದೆ , ಹೆಂಡತಿ , ದೇವರು ಮತ್ತು ಮನಸಾರೆ ನಂಬಿ ವಿಶ್ವಾಸವಿಟ್ಟ ಪರಿವಾರವನ್ನು ಕೊಡುವ ಶೂರು ಜಗತ್ತಿನಲ್ಲಿ ಇಲ್ಲ . ಗಾ.ರಾ : ಮಹಾರಾಜ ನೀನು ಈಗ ಹೇಳಿದ ಇವರಲ್ಲಿ ಯಾರನ್ನಾದರು ಬೇಡಿದರೆ ಕೊಡಬೇಡ , ಆದರೆ ನಿನ್ನ ಬಳಿ ಇರುವ ಮುತ್ತಿನ ಸತ್ತಿಗೆಯನ್ನು ಕೊಡು ಎಂದರೆ ಲೋಭವೇಕೆ ? ಹರಿಶ್ಚಂದ್ರ ಏಕೆಂದರೆ , ನನಗೆ ಇದಲ್ಲದೆ ಬೇರೆ ತಾಯಿತಂದೆಯರು ಇಲ್ಲ . ವಂಶಪರಂಪರೆಯಿಂದ ಬಂದಿದ್ದರಿಂದ ಇದು ತಂದೆ , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿ ಕೊಳ್ಳುವುದರಿಂದ ಇದು ದೇವರು , ನೆರಳಿನ ತಂಪನ್ನು ಸೊಗಸಾಗಿ ಕೊಡುವುದರಿಂದ ಇದು ನನ್ನನ್ನು ಪೋಷಿಸುವ ತಾಯಿ , ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಇದೇ ಚತುರಂಗ ಬಲ ಎನಿಸಿಕೊಂಡಿದೆ .

ಉತ್ತರ : ಹರಿಶ್ಚಂದ್ರನು ನೀಡಿದ . ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೀಗೆ ಹೇಳುತ್ತಾರೆ : “ ಬಡತನದ ಸಮಯದಲ್ಲಿ ಆನೆಯು ದೊರೆತು ಫಲವೇನು ? ಬಾಯಾರಿಕೆಯ ಸಮಯದಲ್ಲಿ ತುಪ್ಪವು ದೊರಕಿ ಫಲವೇನು ? ರೋಗಬಂದು ಬಿದ್ದಿರುವಾಗ ರಂಭೆಯು ದೊರಕಿ ಫಲವೇನು ? ಸಾಯುವ ಸಮಯದಲ್ಲಿ ರಾಜ್ಯದ ದೊರೆತನ ದೊರಕಿ ಫಲವೇನು ? ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ಸಮಯದಲ್ಲಿ ನಮಗೆ ನೀನು ಪ್ರೀತಿಯಿಂದ ಆಭರಣಗಳನ್ನು ಕೊಟ್ಟು ಫಲವೇನು ? ಅದರ ಬದಲು ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪವನ್ನು ಬಡವನಿಗೆ ಚಿನ್ನವನ್ನು ಅತಿರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷವನ್ನು ಹೊಂದುವರು , ಅವರನ್ನು ಹೋಲುವ ನಮಗೆ ಸುಡುಸುಡನೆ ಸುಡುವ ಈ ಬಿರುಬಿಸಿಲ ಸೆಕೆಯಲ್ಲಿ ಉಸಿರಿನ ಬಿಸಿ ಹೆಚ್ಚಾಗಿ ಉರಿಯಹತ್ತಿದೆ . ನಮ್ಮ ಬಾಯಿ ಬತ್ತಿಹೋಗಿದೆ . ಬಿಸಿಲ ಝಳದಿಂದ ಸಾವು ಆವರಿಸುತ್ತಿದೆ . ಆದ್ದರಿಂದ ನಮಗೆ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟು ನಮ್ಮನ್ನು ಕಾಪಾಡು ಎಂದರು .

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು “

ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ಬಹುಮಾನವಾಗಿ ನೀಡಿದ ಆಭರಣಗಳಿಗೆ ಬದಲಾಗಿ ಗಾನರಾಣಿಯರು ನಿನ್ನ ಮುತ್ತಿನ ಸತ್ತಿಗೆಯನ್ನು ನೀಡು ಎಂದು ಕೇಳಿದಾಗ ಹರಿಶ್ಚಂದ್ರನು ಈ ಮಾತನ್ನು ಹೇಳುತ್ತಾನೆ . ಪ್ರೀತಿಯಿಂದ ಎಲ್ಲವನ್ನೂ ಕೊಡಬಹುದು ಬಿಡಬಹುದು . ಹಾಗೆಂದು ತಾಯಿ – ತಂದೆ , ಹೆಂಡತಿ – ಮಕ್ಕಳು . ಬಂಧು – ಬಾಂಧವರು , ದೇವರು , ವಿಶ್ವಾಸವಿಟ್ಟುಕೊಂಡಿರುವ ಪರಿವಾರವನ್ನು ನೀಡಲು ಸಾಧ್ಯವೇ ಎಂದು ಹರಿಶ್ಚಂದ್ರ ಅವರಿಗೆ ಮನವರಿಕೆ ಮಾಡುತ್ತಾನೆ .

ಸ್ವಾರಸ್ಯ : ಕುಟುಂಬ , ಬಂಧು – ಬಾಂಧವರು , ದೇವರು ಮುಂತಾದವರನ್ನು ಯಾರಿಗೂ ಬಿಟ್ಟುಕೊಡದೆ ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

2. ” ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು “

ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ತನ್ನ ಬಳಿಗೆ ಬಂದು ಅಮೋಘವಾಗಿ ನರ್ತಿಸಿ ಮನಸ್ಸಿಗೆ ಸಂತಸ ನೀಡಿದ ಗಾನರಾಣಿಯರಿಗೆ ಆಭರಣಗಳನ್ನು ಬಹುಮಾನವಾಗಿ ನೀಡಿದಾಗ ಅವರು ಅದನ್ನು ತಿರಸ್ಕರಿಸಿ ಹರಿಶ್ಚಂದ್ರನಿಗೆ ಈ ಮಾತನ್ನು ಹೇಳುತ್ತಾರೆ . ತಮಗೆ ಈ ಬಹುಮಾನ ನೀಡಿದ್ದು ಸೂಕ್ತವಲ್ಲ ಅದಕ್ಕೆ ಬದಲಾಗಿ ಸತ್ತಿಗೆಯನ್ನು ನೀಡು ಎಂದು ಕೇಳುತ್ತಾರೆ .

ಸ್ವಾರಸ್ಯ : ವಂಶಪಾರ್ಯವಾಗಿ ಬಂದಿರುವ ಪವಿತ್ರವಾದ ರಾಜಲಾಂಛನಗಳಲ್ಲಿ ಒಂದಾದ ಸತ್ತಿಗೆಯನ್ನು ( ಬೆಳ್ಕೊಡೆಯನ್ನು ) ತಮ್ಮ ಬಿಸಿಲಬೇಗೆ ಪರಿಹರಿಸಿಕೊಳ್ಳಲು ಕೇಳುವುದು ಸ್ವಾರಸ್ಯಕರವಾಗಿದೆ .

3. “ ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲೆಂದು ಬಂದರೊ ”

ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನ ಬಳಿಗೆ ಬಂದ ಗಾನರಾಣಿಯರ ರೂಪವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ಕಾರಿರುಳಂತಿರುವ ಕನೈಯರು ಹಗಲಿನಂತೆ ಕಾಂತಿಯುತನಾಗಿದ್ದ ಮಹಾರಾಜನನ್ನು ನೋಡಲೆಂದು ಬಂದರೋ ಎಂದು ವರ್ಣಿಸಲಾಗಿದೆ .

ಸ್ವಾರಸ್ಯ : ಗಾನರಾಣಿಯರನ್ನು ಕಾರಿರುಳಿಗೂ ಹರಿಶ್ಚಂದ್ರನನ್ನು ಹಗಲಿಗೂ ಸಮೀಕರಿಸಿರುವುದು ಸ್ವಾರಸ್ಯಕರವಾಗಿದೆ .

4. “ ಬಡತನದ ಹೊತ್ತಾನೆ ದೊರಕಿ ಫಲವೇನು

ಆಯ್ಕೆ : ಈ ವಾಕ್ಯವನ್ನು ರಾಘವಾಂಕನು ರಚಿಸಿರುವ ‘ ಹರಿಶ್ಚಂದ್ರಕಾವ್ಯ ‘ ದಿಂದ ಆರಿಸಿಕೊಳ್ಳಲಾದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಹರಿಶ್ಚಂದ್ರನು ತನ್ನ ಬಳಿಗೆ ಬಂದು ಅಮೋಘವಾಗಿ ನರ್ತಿಸಿ ಮನಸ್ಸಿಗೆ ಸಂತಸ ನೀಡಿದ ಗಾನರಾಣಿಯರಿಗೆ ಆಭರಣಗಳನ್ನು ಬಹುಮಾನವಾಗಿ ನೀಡಿದಾಗ ಅವರು ಅದನ್ನು ತಿರಸ್ಕರಿಸಿ ಹರಿಶ್ಚಂದ್ರನಿಗೆ ಈ ಮಾತನ್ನು ಹೇಳುತ್ತಾರೆ . ತಮಗೆ ಈ ಬಹುಮಾನ ನೀಡಿದ್ದು ಸೂಕ್ತವಲ್ಲ ಎಂದು ಅವರು ಹೇಳುತ್ತಾರೆ .

ಸ್ವಾರಸ್ಯ : ಬಡತನದಿಂದ ಕೂಡಿರುವವನಿಗೆ ಆನೆ ಕೊಡುವುದರಿಂದ ಅವನಿಗೆ ಪ್ರಯೋಜನವಾಗುತ್ತದೆಯೇ ? ಎಂದು ಹೇಳಿರುವುದು ಸ್ವಾರಸ್ಯಕರವಾಗಿದೆ .

ಭಾಷಾ ಚಟುವಟಿಕೆ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1. ಷಟ್ಟದಿ ಎಂದರೇನು ? ವಿಧಗಳಾವುವು ?

ಉತ್ತರ : ಷಟ್ಟದಿ ಮಾತ್ರಾಗಣಕ್ಕೆ ಸೇರಿದ ಪದ್ಯ ಪ್ರಕಾರ , ಷಟ್ಟದಿಯಲ್ಲಿ ಶರ , ಕುಸುಮ , ಭೋಗ , ಭಾಮಿನಿ , ಪರಿವರ್ಧಿನಿ , ವಾರ್ಧಕ ಎಂಬ ಆರು ವಿಧಗಳಿವೆ.ಷಟ್ – ಆರು , ಪದಿ – ಸಾಲು , ಆರುಸಾಲುಗಳ ಪದ್ಯ – ಷಟ್ಟದಿ .

2. ಭಾಮಿನಿ ಷಟ್ನದಿಯ ಲಕ್ಷಣವೇನು ?

ಉತ್ತರ : 1 , 2 , 4 ಮತ್ತು 5 ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಎರಡೆರಡು ಬರುತ್ತವೆ . 3 ಮತ್ತು 6 ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಮೂರು ಮೂರು ಇದ್ದು , ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ .

3. ವಾರ್ಧಕ ಷಟ್ನದಿಯ ಲಕ್ಷಣವನ್ನು ವಿವರಿಸಿ .

ಉತ್ತರ : 1. 2. 4 ಮತ್ತು 5 ನೆಯ ಸಾಲುಗಳಲ್ಲಿ 5 ಮಾತ್ರೆಗಳ 4 ಗಣಗಳಿರುತ್ತವೆ . 3. ಮತ್ತು 6 ನೆಯ ಸಾಲುಗಳಲ್ಲಿ 5 ಮಾತ್ರೆಗಳ 6 ಗಣಗಳು ಮತ್ತು ಒಂದು ಗುರು ನಿಯತವಾಗಿರುತ್ತದೆ .

10ನೆಯ ತರಗತಿ ಪಠ್ಯಪೂರಕ ಅಧ್ಯಯನ -ತಾಯಿ ಭಾರತಿಯ ಅಮರ ಪುತ್ರರು (Notes)thayi baratiya amaraputhraru

 

10ನೆಯ ತರಗತಿ ಪಠ್ಯಪೂರಕ ಅಧ್ಯಯನ -ತಾಯಿ ಭಾರತಿಯ ಅಮರ ಪುತ್ರರು (Notes)

10ನೆಯ ತರಗತಿ ಪಠ್ಯಪೂರಕ ಅಧ್ಯಯನ -ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು (Notes)samajika darmika sudarakaru

 

10ನೆಯ ತರಗತಿ ಪಠ್ಯಪೂರಕ ಅಧ್ಯಯನ -ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು (Notes)


10ನೆಯ ತರಗತಿ ಪಠ್ಯಪೂರಕ ಅಧ್ಯಯನ -4-ವಸಂತ ಮುಖ ತೋರಲಿಲ್ಲ (Notes) vasantha mukha toralilla

10ನೆಯ ತರಗತಿ ಪಠ್ಯಪೂರಕ ಅಧ್ಯಯನ -4-ವಸಂತ ಮುಖ ತೋರಲಿಲ್ಲ (Notes)


10ನೇ ತರಗತಿ-ಕನ್ನಡ-ಗದ್ಯ-07-ಶ್ರೇಷ್ಠ ಭಾರತೀಯ ಚಿಂತನೆಗಳು- ಪ್ರಶ್ನೋತ್ತರ (Notes) ವೀಕ್ಷಣೆ & ಡೌನ್‌ಲೋಡ್

 

10ನೇ ತರಗತಿ-ಕನ್ನಡ-ಗದ್ಯ-07-ಶ್ರೇಷ್ಠ ಭಾರತೀಯ ಚಿಂತನೆಗಳು- ಪ್ರಶ್ನೋತ್ತರ (Notes) ವೀಕ್ಷಣೆ & ಡೌನ್‌ಲೋಡ್



10th Class Swadeshi Sutrada Sarala Habba Notes in Kannada 2022

 

10th Class Swadeshi Sutrada Sarala Habba Notes in Kannada 2022

ಅಭ್ಯಾಸ

ಪ್ರಶ್ನೆಗಳಿಗೆ ಉತ್ತರಿಸಿ :

1. ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಾರರು ಗಿರಾಕಿಗಳು ಮತ್ತು ಅಂಗಡಿಯವನನ್ನು ಏನೆಂದು ವಿನಂತಿಸಿಕೊಂಡರು ?

ಉತ್ತರ: ಹಿಂದೂಸ್ತಾನದಲ್ಲಿ ಪ್ರತಿಯೊಬ್ಬನ ದಿನದ ಉತ್ರನ್ನ ಸರಾಸರಿ ಒಂದು ಆಣೆ ಮೂರು ಪೈಸೆಗಳು ಮಾತ್ರ! ಇಲ್ಲಿ 55 ಕೋಟಿ ಜನರ ಸರಾಸರಿ ವರ್ಷದ ಉತ್ಪನ್ನ 1250 ಕೋಟಿಯಿದೆ. ದೇಶದ ಸಾಲವು 1100 ಕೋಟಿಯಿದೆ. ಇದಲ್ಲದೆ ಪ್ರತಿವರ್ಷ 125 ಕೋಟಿ ಪರದೇಶಕ್ಕೆ ಹೋಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಹಬ್ಬ, ಹುಣ್ಣಿಮೆಗಳು ಸಮೀಪಿಸಿದ ಈ ದಿನಗಳಲ್ಲಿ ಪರದೇಶಿ ವಸ್ತುಗಳನ್ನು ಕೊಳ್ಳುವುದು ಸರಿಯಲ್ಲ. ಬಣ್ಣದ ಕಾಗದ, ಗಾಜಿನ ಮಣಿಗಳು, ಬೇಗಡಿ, ಇಮಿಟೇಶನ್‌ ಮುತ್ತು, ತುರಾಯಿಗಳು ನಮ್ಮ ಹಿಂದುಸ್ತಾನದಂತಹ ಬಡದೇಶಕ್ಕೆ ಅನವಶ್ಯಕ ಪಟಾಕಿ, ಧಡಾಕಿ, ನೆಲಗುಮ್ಮ, ಮುಂತಾದ ವಸ್ತುಗಳು, ವಿದೇಶಿ ಎಂದು ಮಾರಲ್ಟಡುವ ಕರ್ಪೂರ, ಪರದೇಶಿ ಅತ್ತರುಗಳನ್ನು ಖರೀದಿಸಿ ದೇಶಕ್ಕೆ ಒದಗಿರುವ ಸಂಕಟ ಪರಂಪರೆಯನ್ನು ಯಾರೂ ಹೆಚ್ಚಿಸಬಾರದು! ದೇವರ ಪೂಜಾದಿಗಳನ್ನು ಶುದ್ದ ಶುಭ್ರ ದೇಶೀ ವಸ್ತುಗಳಿಂದಲೇ ಮಾಡಿರಿ, ಪರದೇಶಿ ವಸ್ತುಗಳಿಂದ ದೇವರ ಮೂರ್ತಿಗನ್ನು ಭ್ರಷ್ಟ ಮಾಡಬೇಡಿರಿ!

2.ಯಾವ ಯಾವ ವಸ್ತುಗಳನ್ನು ಬಳಸಬೇಡಿರೆಂದು ಜನಾಂದೋಲನ ಮಾಡಲಾಯಿತು ?

ಉತ್ತರ: ಪರದೇಶದಿಂದ ಬರುವ ಬಣ್ಣದ ಕಾಗದ, ಗಾಜಿನ ಮಣಿಗಳು, ಬೇಗಡಿ, ಇಮಿಟೇಶನ್‌ ಮುತ್ತು, ತುರಾಯಿಗಳು, ಪಟಾಕಿ, ಧಡಾಕಿ, ನೆಲಗುಮ್ಮ, ಕರ್ಪೂರ ಹಾಗೂ ಜರಿಯ ಟೋಪಿಗಳನ್ನು ಬಳಸಬೇಡಿರೆಂದು ಜನಾಂದೋಲನ ಮಾಡಲಾಯಿತು.

3. ಮಲೆನಾಡಿನಲ್ಲಿ ದೀಪದ ಬತ್ತಿಯ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಲಾಯಿತು?

ಉತ್ತರ: ಮಲೆನಾಡಿನ ಪಶ್ಚಿಮ ಘಟ್ಟದ ಕಾಡುಗಳಲ್ಲಿ ತೊಡಕಲು ಕುಡಿಯ ಎಂಬ ಗಿಡವಿದೆ ಇದರ ಎಳೆಯ ಕುಡಿ ಸಂಗ್ರಹಿಸಿ ಡಬ್ಬದಲ್ಲಿ ಶೇಖರಿಸಿ ಇಡಲಾಗುತ್ತಿತ್ತು ಒಣಗಿದ ಕುಡಿಯನ್ನು ಎಣ್ಣೆಯಲ್ಲಿ ಅದ್ದಿ ನಿತ್ಯ ಆರತಿಗೆ ಬಳಸಲಾಗುತ್ತಿತ್ತು. ಇದಲ್ಲದೆ ನಾಗಸಂಪಿಗೆ ಮರದ ಬೀಜಗಳಲ್ಲಿ ಎಣ್ಣೆ ಅಂಶ ಜಾಸ್ತಿ ಇರುವುದರಿಂದ ಅದನ್ನೂ ದೀಪಕ್ಕೆ ಉಪಯೋಗಿಸಲಾಗುತ್ತದೆ. ಅಡಿಕೆ ತೋಟಗಳ ಅಂಚಿನಲ್ಲಿ ಒಂದೆರಡು ಜವಾರಿ ಹತ್ತಿ ಗಿಡಗಳು ಇರುತ್ತಿದ್ದವು. ಈ ಹತ್ತಿಯನ್ನು ದೀಪಕ್ಕೆ ಬಳಸುವ ಪರಿಪಾಠವಿತ್ತು.

೪. ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ – ಏಕೆ?

ಉತ್ತರ: ಆದರ್ಶವಾಗಿದ್ದ ನೆಲದಲ್ಲಿ ಆಡಂಬರ, ರಂಗು, ನಾಟಕೀಯತೆ ಸೇರಿಕೊಂಡು ಬದುಕು ಲಗಾಮಿಲ್ಲದ ಓಟ ಕಿತ್ತಿದೆ. ಸಂಪ್ರದಾಯ ದೇವರ ನಂಬಿಕೆಗಳಿಗಿಂತ ಹಬ್ಬಗಳು ಖರೀದಿಯ ಸವಾಲು ಒಡ್ಡಿ ಮನೆ ಮನಗಳನ್ನು ಕಾಡುತ್ತಿವೆ. ರಾತ್ರಿ ಹಗಲಾಗಿಸುವ ವಿದ್ಯುತ್‌ ದೀಪಾಲಂಕಾರದಲ್ಲಿ ಪರದೇಶಿ ಚೈನಾ ಬಲ್ಬ್‌ ಮೆರೆದಿವೆ! ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ.

೫. ಸ್ವದೇಶೀ ಆರ್ಥಿಕತೆ ಬಲಪಡಿಸಲು ಹಬ್ಬಗಳಲ್ಲಿ ಸ್ವದೇಶೀ ವಸ್ತುಗಳನ್ನೇ ಬಳಸಲು ಪ್ರಾರಂಭಿಸಬೇಕು – ಈ ಕುರಿತು ನಿಮ್ಮ ಅಭಿಪ್ರಾಯವೇನು ?

ಉತ್ತರ: ನಮ್ಮ ದೇಶದಲ್ಲಿ ಹಬ್ಬದ ಸಮಯದಲ್ಲಿ ಬಟ್ಟೆಗಳನ್ನು ವಿವಿಧ ವಸ್ತುಗಳಿಂದ ಬೆಳೆದು ಬಂದಿವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ನಡೆದಿದೆ. ಇದಕ್ಕೆ ಕಾರಣ ಹಬ್ಬ ಎಂದರೆ ಉತ್ಸಾಹ ಸಂಭ್ರಮವನ್ನು ಆಚರಿಸುವ ಕಾಲ ಎಂಬ ಭಾವನೆ. ಜನರು ಈ ಸಮಯದಲ್ಲಿ ಹೆಚ್ಚು ಕೊಳ್ಳುತ್ತಾರೆ ಅಥವಾ ಅವರನ್ನು ಕೊಳ್ಳುವಂತೆ ಮಾಡಬೇಕು ಎಂದು ಅಂಗಡಿಗಳು ಈ ಸಮಯದಲ್ಲಿ ರಿಯಾಯಿತಿ ( ಡಿಸ್ಕೌಂಟ್)‌ ಗಳನ್ನು ಘೋಷಿಸುತ್ತದೆ. ಜನರು ಈ ಸಮಯದಲ್ಲಿ ಸ್ವದೇಶಿ ವಸ್ತುಗಳನ್ನು ಖರೀದಿಸುವ ಮನಸ್ಸು ಮಾಡಿದರೆ ಖಂಡಿತ ಸ್ವದೇಶಿ ಆರ್ಥಿಕತೆಯು ಬಲವಾಗುತ್ತದೆ. ಅದರೆ ಇದು ಅಷ್ಟು ಸುಲಭವಾಗಿಲ್ಲ. ಜನರು ವಿದೇಶಿ ವಸ್ತಗಳನ್ನು ಏಕೆ ಖರೀದಿಸುತ್ತಾರೆ ಎಂಬುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಕೊಡಬಹುದು. ಕೆಲವು ವಿದೇಶಿ ವಸ್ತುಗಳು ಉದಾಹರಣೆಗೆ ಚೈನಾದಿಂದ ಆಮದಾಗುಬ ಹಲವಾರು ವಸ್ತುಗಳು ಸ್ವದೇಶಿ ವಸ್ತುಗಳಿಗಿಂತ ತುಂಬಾ ಅಗ್ಗವಾಗಿತ್ತದೆ. ಎರಡನೆಯದು ವಿದೇಶಿ ವಸ್ತುಗಳು ಗುಣಮಟ್ಟದಲ್ಲಿ ಸ್ವದೇಶಿ ವಸ್ತುಗಳಿಗಿಂತ ಚೆನ್ನಾಗಿರುತ್ತದೆ ಎಂಬುದು. ಇದು ಲೋಕಲ್‌ (ಸ್ವದೇಶಿ) ಚೆನ್ನಾಗಿರುವುದಿಲ್ಲ. ಇದು ಇಂಪೋರ್ಟೆಡ್‌ (ವಿದೇಶದಿಂದ ತರಿಸಿದ್ದು ) ತುಂಬಾ ಚೆನ್ನಾಗಿರುತ್ತದೆ ಎಂಬ ಭಾವನೆ ಜನರಲ್ಲಿ ಬಲವಾಗಿ ಬೇರೂರಿದೆ. ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ತಯಾರಿಸುವ ಸವಾಲು ದೇಶಿಯ ಉತ್ಪಾದಕರ ಮುಂದಿದೆ. ನಾವು ಧರಿಸುವ ವಿವಿಧ ಬಟ್ಟೆಗಳು ಉಡುಪುಗಳು, ಮನೆಬಳಕೆ ವಸ್ತುಗಳು, ಮನೆಯ ಅಲಂಕಾರದ ಸಾಮಗ್ರಿ , ಸವಾರಿ ಮಾಡುವ ವಿವಿಧ ಗಾಡಿಗಳನ್ನು ಹಬ್ಬದ ಸಮಯದಲ್ಲಿ ಖರೀದಿಸುವುದು ರೂಢಿ. ಈ ಎಲ್ಲವನ್ನೂ ಖರೀದಿಸುವಾಗ ಜನರು ಆದಷ್ಟು ಸ್ವದೇಶಿ ವಸ್ತುಗಳನ್ನೆ ಕೊಳ್ಳಬೇಕು. ಎಂಬ ಮನಸ್ಸು ಮಾಡಿದರೆ ಸ್ವದೇಶಿ ಆರ್ಥಿಕತೆಗೆ ಖಂಡಿತ ಬಲ ಸಿಗುತ್ತದೆ.

sslc samajika mattu dharmika sudharakaru notes in kannada

 

sslc samajika mattu dharmika sudharakaru notes in kannada

ಶ್ರೀ ನಾರಾಯಣಗುರು

ಶ್ರೀ ನಾರಾಯಣಗುರು ಅವರು ೧೯೦೩ ರಲ್ಲಿ ಧರ್ಮ ಪರಿಪಾಲನಾ ಯೋಗಂ ಆರಂಭಿಸಿದರು . ಇವರು ಕೇರಳದ ಈಳವು ಎಂಬಲ್ಲಿ ಹುಟ್ಟಿದರು . ಈ ಸಂಘಟನೆಯ ಪ್ರಮುಖ ಉದ್ದೇಶವೆಂದರೆ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣ , ನಾರಾಯಣಗುರು ( ೧೮೫೪-೧೯೨೮ ) ಹಾಗೂ ಅವರ ಒಡನಾಡಿಗಳಾದ ಡಾ || ಪಲ್ಲು ಮತ್ತು ಕುಮಾರನ್ ಆಸನ್‌ರವರು ಈ ಚಳವಳಿಯನ್ನು ಮುನ್ನಡೆಸಿದರು . ಕೇರಳದ ಸಮಾಜದಲ್ಲೂ ಅತೀ ಜಾತಿ ಅಂತರಗಳ ಸಮಸ್ಯೆಗಳು ವ್ಯಾಪಕವಾಗಿದ್ದು , ಅನೇಕ ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಹೇರಲಾಗಿತ್ತು . ಆ ಕಾಲಘಟ್ಟದಲ್ಲಿ ಈ ಸಮುದಾಯಗಳು ಎಲ್ಲರೂ ಬಳಸಲು ತೆಗೆದುಕೊಳ್ಳಲಾಗುತ್ತಿರಲಿಲ್ಲ . ರಸ್ತೆಗಳ ಮೂಲಕ ಓಡಾಡಲಾಗುತ್ತಿರಲಿಲ್ಲ . ದೇವಸ್ಥಾನಕ್ಕೆ ಪ್ರವೇಶಿಸುವಂತಿರಲಿಲ್ಲ . ಮಹಿಳೆಯರ ಉಡುಪುಗಳ ಇಷ್ಟೇ ಅಲ್ಲದೆ ಶಾಲೆಗಳಿಗೂ ಇವರಿಗೆ ರಲಿಲ್ಲ . ಶ್ರೀ ನಾರಾಯಣಗುರು ಸಾಮಾಜಿಕ ನಿರ್ಬಂಧಗಳನ್ನು ಕೆರೆ ಬಾವಿಗಳಲ್ಲಿ ನೀರನ್ನು ಮೇಲೂ ಪಡೆಯದ ಈ ಸಮುದಾಯಗಳು ಉಸಿರುಗಟ್ಟಿ ಬದುಕಬೇಳಗಳನ್ನು ಹಾಕುವಂತಿರಲಿಲ್ಲ . ನಿರ್ಬಂಧಗಳನ್ನು ಹೇರಲಾಗಿತ್ತು , ಪ್ರಮಾಣದ ಮಾನವ ಹಕ್ಕುಗಳನ್ನು ಪರಿಸ್ಥಿತಿ ಇತ್ತು . ಈ ವಿಷಯಗಳನ್ನು ಧರ್ಮ ಪರಿಪಾಲನಾ ಯೋಗಂ ಮೂಲಕ ಸಾಮಾಜಿಕ ಘನತೆಯಿಂದ ಬದುಕುವ ಸಮಾಜದ ನಿರ್ಮಾಣವೇ ಕೈಗೆತ್ತಿಕೊಂಡು ಶ್ರೀ ನಾರಾಯಣಗುರು ಅವರು ಪ್ರತಿರೋಧದ ಚಳವಳಿಗಳನ್ನು ಪ್ರಾರಂಭಿಸಿದರು . ಈ ಸಂಘಟನೆಯ ಉದ್ದೇಶವಾಗಿತ್ತು , ನಾರಾಯಣಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ , ಒಂದೇ ಧರ್ಮ ಮತ್ತು ಒಬ್ಬನೇ Man ) ಎಂಬುದು . ಇದನ್ನು ಸಾಧಿಸಲು ( One Caste , One Religion and One God for ಮಾರ್ಗವೆಂದು ಸಾರಿದರು . ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು .

ನಾರಾಯಣಗುರು ಮತ್ತು ಅವರ ಅನುಯಾಯಿಗಳು ೧೯೨೪ ರಲ್ಲಿ ವೈಕಂ ಸತ್ಯಾಗ್ರಹವೆಂಬ ಶಿವ ದೇವಾಲಯ ಪ್ರವೇಶ ಚಳವಳಿಯನ್ನು ನಡೆಸಿದರು . ಇದರಲ್ಲಿ ಗಾಂಧೀಜಿಯವರು ಹಾಗೂ ಆತ್ಮಗೌರವ ಚಳವಳಿಯ ರೂವಾರಿಗಳಾದ ಪೆರಿಯಾರ್‌ರು ಭಾಗವಹಿಸಿದ್ದರು . ಗುರುವಾಯೂರು ದೇವಾಲಯ ಪ್ರವೇಶ ಚಳವಳಿಯು ಮತ್ತೊಂದು ಮಹತ್ವದ ಘಟನೆ .

ಪೆರಿಯಾರ್

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬ್ರಾಹ್ಮಣೇತರ ಚಳವಳಿಯೆಂಬ ಹೊಸ ಬಗೆಯ ಚಳವಳಿ ದಕ್ಷಿಣ ಭಾರತದಲ್ಲಿ ಆರಂಭವಾಯಿತು . ಬಹುಸಂಖ್ಯಾತರಾಗಿದ್ದ ಬ್ರಾಹ್ಮಣೇತರರು ಸರ್ಕಾರಿ ರಂಗದಲ್ಲಿ ಇದ್ದ ಅವಕಾಶಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಪ್ರಾತಿನಿಧ್ಯ ಸಿಗಬೇಕೆಂದು ಹೋರಾಟವನ್ನು ಆರಂಭಿಸಿದರು . ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇದೊಂದು ಪ್ರಮುಖ ಚಳವಳಿಯಾಯಿತು . ಬ್ರಾಹ್ಮಣೇತರ ಸಮುದಾಯಗಳು ತಮ್ಮ ಮೇಲೆ ಹೇರಲಾಗಿದ್ದ ಸಾಮಾಜಿಕ ನಿರ್ಬಂಧಗಳನ್ನು ವಿರೋಧಿಸತೊಡಗಿದರು . ಇದಕ್ಕೆ ಪ್ರಮುಖ ಕಾರಣವಾದದ್ದು ಇಂಗ್ಲಿಷ್ ವಿದ್ಯಾಭ್ಯಾಸದ ವಿಸ್ತರಣೆ . ಇದರ ಜೊತೆಗೆ ಬ್ರಿಟಿಷರು ೧೮೭೦ ರ ನಂತರ ತಂದ ಜನಗಣತಿ ವರದಿಗಳು , ಬ್ರಾಹ್ಮಣೇತರರಿಗೆ ತಮ್ಮ ಜನಸಂಖ್ಯೆಯ ಅರಿವನ್ನು ತಂದುಕೊಟ್ಟವು . ತಮಿಳುನಾಡಿನಲ್ಲಿ ೧೯೧೬ ರಲ್ಲಿ ಪ್ರಾರಂಭವಾದ ‘ ಜಸ್ಟೀಸ್ ಪಾರ್ಟಿ’ಯು ಈ ಚಳವಳಿಯನ್ನು ಮುನ್ನಡೆಸಿತು .

ಇದು ಹೆಚ್ಚು ಕ್ರಾಂತಿಕಾರಕವಾದ ಹೆಜ್ಜೆಯಾಗಿತ್ತು . ಆ ಹೊಸರೂಪವೇ ಇ.ವಿ. ರಾಮಸ್ವಾಮಿ ನಾಯ್ಕರ್ ಅವರ ನೇತೃತ್ವದಲ್ಲಿ ಆರಂಭಗೊಂಡ ‘ ಆತ್ಮಗೌರವ ಚಳವಳಿ ‘ ( Self Respect Movement ) . ೧೯೨೫ ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಬಂದ ರಾಮಸ್ವಾಮಿಯವರು ೧೯೨೬ ರಲ್ಲಿ ಸೆಲ್ಫ್ ರೆಸ್ಪೆಕ್ಸ್ ಲೀಗ್ ಅನ್ನು ಆರಂಭಿಸಿದರು . ಇವರನ್ನು ಜನರು ಪ್ರೀತಿಯಿಂದ ಪೆರಿಯಾರ್ ( ಹಿರಿಯರು ) ಎಂದು ಕರೆದರು . ಪೆರಿಯಾರ್ ತಮಿಳುನಾಡಿನ ಈರೋಡಿನಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು . ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ ಇದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳವಳಿಯೆಂಬ ಜನಾಂಗೀಯ ಪರಿಕಲ್ಪನೆ ಕೇಂದ್ರಿತ ಚಳವಳಿಯನ್ನು ರೂಪಿಸತೊಡಗಿದರು . ತಮಿಳು ಭಾಷೆಯನ್ನು ದ್ರಾವಿಡರ ಭಾಷೆಯೆಂದರು . ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿಹಿಡಿದರು . ೧೯೨೪ ರಲ್ಲಿ ಕೇರಳದ ವೈಕಂನಲ್ಲಿ ಅಸ್ಪೃಶ್ಯರಿಗೆ ದೇವಾಲ ಪ್ರವೇಶದ ಹಕ್ಕಿನ ಹೋರಾಟದಲ್ಲಿ ಭಾಗವಹಿಸಿದ್ದರು . ಕಳಗಂ ” ಎಂಬ ಸಂಘಟನೆಯನ್ನು ಹುಟ್ಟುಹಾಕಿದರು .

“ ದ್ರಾವಿಡ ಹುಟ್ಟುಹಾಕಿದರು . ಇಂದಿಗೂ ತಮಿಳುನಾಡಿನ ರಾಜಕೀಯ ಕ್ಷೇತ್ರಗಳಲ್ಲಿ ಯಾರ್‌ರು ಸೈದ್ಧಾಂತಿಕ ಸಂಕೇತವಾಗಿ ಉಳಿದಿದ್ದಾರೆ . ತಮ್ಮ ಪಕ್ಷಗಳ ಹೆಸರಿನಲ್ಲಿ ಉಳಿಸಿಕೊಂಡಿರುವುದೇ ಇದಕ್ಕೆ ದೊಡ್ಡ ಸಾಕ್ಷಿ , ಸಿ , ಅಯೋಥಿದಾಸ್ ‘ ಪಂಡಿತ್ , ಟಿ.ಎಂ.ನಾಯರ್ ಮುಂತಾದವರು ಆರಂಭಿಸಿ ಪೆರಿಯಾರ್‌ರು ಸಾಂಸ್ಕೃತಿಕ ಚಳವಳಿಯನ್ನಾಗಿ ಂದ ಮುಕ್ತವಾಗಿ , ಜಾತಿ , ಲಿಂಗ ಅಸಮಾನತೆಗಳಿಂದ ಹೊರಬಂದು ಅಲ್ಲಿನ ರಾಜಕೀಯ ಪಕ್ಷಗಳು ‘ ದ್ರಾವಿಡ ‘ ಎನ್ನುವ ಹ ಬ್ರಾಹ್ಮಣೇತರ ಚಳವಳಿಯನ್ನು ಪರಿವರ್ತಿಸಿದರು . ಎಲ್ಲ ಬಗೆಯ ಬೇಕು ಎನ್ನುವುದೇ ಅವರ ಬದುಕಿನ ಧೈಯವಾಗಿತ್ತು . ‘ ಸರ್ವಧರ್ಮಸಹಿಷ್ಣತೆಯ ‘ ಸಮಾಜ

10th Class Samajika Mattu Dharmika Sudharakaru Kannada Notes 2022

ಪ್ರಶ್ನೆಗಳಿಗೆ ಉತ್ತರಿಸಿ :

೧. ನಾರಾಯಣಗುರು ಧರ್ಮಪರಿಪಾಲನಾ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ ,

ಉತ್ತರ: ಶ್ರೀ ನಾರಾಯಣಗುರು ಅವರು 1903ರಲ್ಲಿ ಧರ್ಮಪರಿಪಾಲನಾ ಯೋಗಂ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯ ಪ್ರಮುಖ ಉದ್ದೇಶವೆಂದರೆ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣವಾಗಿತ್ತು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು. ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು. ನಾರಾಯಣ ಗುರು ಮತ್ತು ಅವರ ಅನುಯಾಯಿಗಳು 1924ರಲ್ಲಿ ʼವೈಕಂ ಸತ್ಯಾಗ್ರಹʼ ವೆಂಬ ಶಿವ ದೇವಾಲಯ ಪ್ರವೇಶ ಚಳುವಳಿಯನ್ನು ನಡೆಸಿದರು. ಗುರುವಾಯೂರು ದೇವಾಲಯ ಪ್ರವೇಶ ಚಳುವಳಿಯು ಮತ್ತೊಂದು ಮಹತ್ವದ ಘಟನೆ.

೨. ನಾರಾಯಣಗುರು ಅವರ ಪ್ರಮುಖ ಆಶಯ ಏನಾಗಿತ್ತು?

ಉತ್ತರ: ನಾರಾಯಣ ಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬುದು.

೩. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿ ಮಾಡಿ ,

ಉತ್ತರ: ಪೆರಿಯಾರ್ ಚಳವಳಿಯ ಮುಖ್ಯಾಂಶಗಳು

1. ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ಸಿದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳುವಳಿ ಎಂಬ ಜನಾಂಗೀಯ ಪರಿಕಲ್ಪನೆ ಕೇಂದ್ರಿತ ಚಳುವಳಿಯನ್ನು ರೂಪಸಿದರು.

2. ತಮಿಳು ಭಾಷೆಯನ್ನು ದ್ರಾವಿಡರ ಭಾಷೆ ಎಂದರು.

3. ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿ ಹಿಡಿದರು.

4. ಮೊದಲಿಗೆ ಆರಂಭವಾಗಿದ್ದ ಬ್ರಾಹ್ಮಣೇತರ ಚಳುವಳಿಯನ್ನು ಪರಿವರ್ತಿಸಿದರು.

5. ಎಲ್ಲ ಬಗೆಯ ಶೋಷಣೆಗಳಿಂದ ಹೊರಬಂದು ಸರ್ವಧರ್ಮ ಸಹಿಷ್ಣುತೆಯ ಸಮಾಜ ರೂಪುಗೊಳ್ಳಬೇಕು ಎಂದರು.

೪ , ಪೆರಿಯಾರ್‌ರವರು ಹುಟ್ಟು ಹಾಕಿದ ಸಂಘಟನೆಯ ಹೆಸರೇನು ?

ಉತ್ತರ: ಪೆರಿಯಾರ್‌ರವರು ಹುಟ್ಟು ಹಾಕಿದ ಸಂಘಟನೆಯ ಹೆಸರು ʼದ್ರಾವಿಡ ಕಳಗಂʼ

10ನೇ ತರಗತಿ ಹಸುರು ಪದ್ಯ 10th kannada poem hasuru

 

ರಾಷ್ಟ್ರಕವಿ ಕುವೆಂಪು (Kuvempu)



ಪರೀಕ್ಷಾ ದೃಷ್ಟಿಯಿಂದ ಕಿರು ಪರಿಚಯ

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು. ಜನನ ೧೯೦೪ ಡಿಸೆಂಬರ್ ೨೯. 

ಇವರು ಬರೆದಿರುವ ಪ್ರಮುಖ ಕೃತಿಗಳು: ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು, ನನ್ನ ದೆವರು ಮತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರ ಕಥೆಗಳು -ಕಥಾಸಂಕಲನಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು - ಕಾದಂಬರಿಗಳು. ರಸೋವೈಸಃ, ತಪೋನಂದನ - ವಿಮರ್ಶಾ ಸಂಕಲನಗಳು, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಿಜೋಗಿ - ಮಕ್ಕಳ ಪುಸ್ತಕಗಳು, ಜಲಗಾರ, ಯಮನ ಸೋಲು, ಬೆರಳ್ಗೆ ಕೊರಳ್ - ನಾಟಕಗಳು, ನೆನಪಿನ ದೋಣಿಯಲ್ಲಿ - ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. 

ಶ್ರೀಯುತರಿಗೆ ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೬೮ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಧಾರವಾಡದಲ್ಲಿ ನಡೆದ ೧೯೫೭ ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ ೧೯೬೪ರಲ್ಲಿ ರಾಷ್ಟ್ರಕವಿ, ೧೯೮೮ರಲ್ಲಿ ಪಂಪ ಪ್ರಶಸ್ತಿ, ೧೯೯೧ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಅಲ್ಲದೆ ಮೈಸೂರು, ಕರ್ನಾಟಕ, ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ. ೧೯೯೨ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ. 

ಪ್ರಸ್ತುತ ಪದ್ಯಭಾಗವನ್ನು ಕುವೆಂಪು ಅವರ ’ಪಕ್ಷಿಕಾಶಿ’ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.





10ನೇ ತರಗತಿ ಹಸುರು ಪದ್ಯದ ಸಾರಾಂಶ

 `ಹಸುರು’ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ. ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ಕವಿಶೈಲ’ದಲ್ಲಿ ಅವರಿಗುಂಟಾದ ಸೌಂದರ್ಯಾನುಭವ. ಪ್ರಕೃತಿ, ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ.  

           ಹಸುರು ಪದ್ಯಭಾಗದ ಸಾರಾಂಶ 
ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ!
   
ಹಸುರಾಗಸ; ಹಸುರು ಮುಗಿಲು;
ಹಸುರು ಗದ್ದೆಯಾ ಬಯಲು;
ಹಸುರಿನ ಮಲೆ; ಹಸುರು ಕಣಿವೆ;
ಹಸುರು ಸಂಜೆಯೀ ಬಿಸಿಲೂ!


ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯ ದಿನದಲ್ಲ್ಲಿ ಹೊಸ ಚಿಗುರಿನಿಂದ ಕೂಡಿದ ಭೂಮಿಯಲ್ಲಿ ವಿಶಾಲವಾದ ಶಾಮಲ ಕಡಲು ಹಸುರಾಗಿರುವುದನ್ನು ನೋಡಿ ಕವಿಯ ಆತ್ಮವನ್ನು ರಸಪಾನದಲ್ಲಿ ಮಿಂದಿತು. ಆಗಸದಲ್ಲಿ; ಮುಗಿಲಿನಲ್ಲಿ; ಗದ್ದೆಯ ಬಯಲಿನಲ್ಲಿ; ಬೆಟ್ಟಗುಡ್ಡಗಳಲ್ಲಿ; ಕಣಿವೆಯಲ್ಲಿ; ಸಂಜೆಯ ಬಿಸಿಲಿನಲ್ಲಿ ಎಲ್ಲೆಲ್ಲೂ ಹಸುರು ಹರಡಿತ್ತು.

ಅಶ್ವೀಜದ ಶಾಲಿವನದ
ಗಿಳಿಯೆದೆ ಬಣ್ಣದ ನೋಟ;
ಅದರೆಡೆಯಲಿ ಬನದಂಚಲಿ
ಕೊನೆವೆತ್ತಡಕೆಯ ತೋಟ!

ಅದೊ ಹುಲ್ಲಿನ ಮಕಮಲ್ಲಿನ
ಪೊಸಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈ ಮುಚ್ಚಿರೆ
ಬೇರೆ ಬಣ್ಣವನೆ ಕಾಣೆ!


ಅಶ್ವೀಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ; ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ ಭೂಮಿಯು ಹಸುರಿನಿಂದ ಮೈ ಮುಚ್ಚಿರಲು ಕವಿಗೆ ಬೇರೆ ಬಣ್ಣಗಳೇ ಕಾಣದಾದವು.

ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು!
ಹಕ್ಕಿಯ ಕೊರಲಿಂಪು ಹಸುರು!
ಹಸುರು ಹಸುರಿಳೆಯುಸಿರೂ!

ಹಸುರತ್ತಲ್! ಹಸುರಿತ್ತಲ್!
ಹಸುರೆತ್ತಲ್ ಕಡಲಿನಲಿ
ಹಸುರ‍್ಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ!


ಹೊಸ ಹೂವಿನ ಕಂಪು; ತಂಗಾಳಿಯ ತಂಪು; ಹಕ್ಕಿಯ ಇಂಪಾದ ಗಾನ; ಕಡಲು; ಅತ್ತ-ಇತ್ತ-ಎತ್ತ ನೋಡಿದರೂ ಹಸುರು.. ಹಸುರು.. ಹಸರು.. ಇದನ್ನು ನೋಡಿದ ಕವಿಯಾತ್ಮವು ಹಸುರುಗಟ್ಟಿತು. ಕವಿಯ ದೇಹದಲ್ಲೂ ಹಸುರು ರಕ್ತವೇ ಹರಿದಾಡಿತು. ಎಂದು ಹಸುರು ವ್ಯಾಪಿಸಿದ ಬಗೆಯನ್ನು ಕವಿ ಕುವೆಂಪು ಅವರು ವರ್ಣಿಸಿದ್ದಾ

veera lava 10th poem notes

ಲಕ್ಷ್ಮೀಶ ಕವಿ ಮತ್ತು ಆತನ ಕೃತಿ ಪರಿಚಯ




 ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |

ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು ||
ಪುಲ್ಗಳ ಪಸುರ್ಗೆಳಸಿ ಪೊಕ್ಕೊಡಾ ತೋಟಗಾ|
ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆ ಮಿಗೆ |
ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರಲವನು || ೧ ||


         ಬಲಶಾಲಿಗಳಾದ ರಾಜರೂ ಸಹ ಶ್ರೀರಾಮನ ಶ್ರೇಷ್ಠತೆಯ ವಿಚಾರವನ್ನು ಕೇಳಿಯೆ ಕುದುರೆಯನ್ನು ಕಟ್ಟಲು ಹೆದರಿ ,ಅದಕ್ಕೆ ನಮಸ್ಕರಿಸಿ ಅದನ್ನು ತಡೆಯದೇ ಇರಲು ,ಶ್ರೀರಾಮನ ಯಜ್ಞಾಶ್ವದ ಪ್ರೀತಿಯ ಕುದುರೆಯು ಇಡೀ ಭೂಮಂಡಲದಲ್ಲಿ ಚಲಿಸುತ್ತ, ವಾಲ್ಮೀಕಿಯ ತಪೋವನದ ಉಪವನದಲ್ಲಿ ಬೆಳೆದು ನಿಂತಿದ್ದ ಹುಲ್ಲಿನ ಹಸುರಿಗೆ ಮನಸೋತು ಆಕರ್ಷಣೆಗೆ ಒಳಗಾಗಿ ಅದನ್ನು ಪ್ರವೇಶಿಸಿತು. ಅಲ್ಲಿ ತನ್ನ ಸ್ನೇಹಿತರೊಡನೆ (ಒಡನಾಡಿಗಳೊಡನೆ ) ಆಟವಾಡಿ ಮುಗಿಸಿ ಬಿಲ್ಲಿನ ಸಮೇತನಾಗಿ ಬರುತ್ತಿದ್ದ ವೀರ ಲವನು ಆಶ್ರಮವನ್ನು ಪ್ರವೇಶಿಸಿದ್ದ ಪೂಜಿತ (ಪೂಜಿಸಲ್ಪಟ್ಟಿದ್ದ)ಸುಂದರ ಕುದುರೆಯನ್ನು ಕಂಡನು.
ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ|
ತೊತ್ತಳದುಳಿದುದು ವಾಲ್ಮೀಕಿ ಮುನಿನಾಥನೇ |
ಪೊತ್ತುಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ ||
ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ
ನುತ್ತ ಹಯದೆಡೆಗೆ ನಡೆತಂದು ನೋಡಲ್ಕದರ |
ನೆತ್ತಿಯೊಳ್ ಮೆರವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು || ೨ ||


ಉಪವನದೊಳಕ್ಕೆ ನುಗ್ಗಿದ ಕುದುರೆಯನ್ನು ನೋಡಿದ ಲವನು ಎಲ್ಲಿಯ ಕುದುರೆಯಿದು ? ಉಪವನಕ್ಕೆ ನುಗ್ಗಿ ಹೂದೋಟವನ್ನು ಹಾಳು ಮಾಡಿದೆಯಲ್ಲ ! ವಾಲ್ಮೀಕಿ ಮುನಿಶ್ರೇಷ್ಠರು ವರುಣನು ಕರೆದಿದ್ದರಿಂದ ಅಲ್ಲಿಗೆ ಹೋಗುವಾಗ ನನಗೆ ಈ ಉಪವನವನ್ನು ಕಾಯಲು ಹೇಳಿ ಹೋಗಿದ್ದರು. ಮತ್ತೆ ಅವರು ವರುಣನ ಲೋಕದಿಂದ ಹಿಂದಿರುಗಿ ಬಂದಾಗ ಈ ಹೂದೋಟವು ಹಾಳಾದುದನ್ನು ನೋಡಿ ಮುನಿಸಿಕೊಳ್ಳುವರು ಎಂದು ಯೋಚಿಸುತ್ತ ಕುದುರೆಯೆಡೆಗೆ ಬಂದನು. ಆಗ ಲವನು ಅದರ ಹಣೆಯ ಮೇಲೆ ಬರೆಹದ ಪಟ್ಟಿಯು ಇದ್ದುದನ್ನು ನೋಡಿ ಅದನ್ನು ಓದತೊಡಗಿದನು.

ಊರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ |
ನೋರ್ವನೇ ವೀರನಾತನ ಯಜ್ಞತುರಗಮಿದು |
ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ ||
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ|
ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ|
ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು|| ೩ ||


        ಈ ಭೂಮಿಯಲ್ಲಿ ಕೌಸಲ್ಯೆಯು ಪಡೆದ ಮಗನಾದ ಶ್ರೀರಾಮನೊಬ್ಬನೇ ವೀರ. ಅವನ ಯಜ್ಞ ತುರಗವಿದು. ಇದನ್ನು ನಿರ್ಸುವಹಿಸುವ ಸಮರ್ಥರು ಯಾರಾದರೂ ಇದ್ದರೆ ಈ ಕುದುರೆಯನ್ನು ತಡೆಯಿರಿ ಎಂದಿದ್ದನ್ನು ನೋಡಿ, "ಓಹೋ ! ಅವನ (ಶ್ರೀರಾಮನ) ಗರ್ವವನ್ನು ಮುರಿಯದಿದ್ದರೆ ನನ್ನ ತಾಯಿಯನ್ನು ಎಲ್ಲರೂ ಬಂಜೆಯೆಂದು ಕರೆಯದಿರುವರೇ ? ಅಲ್ಲದೇ ನನ್ನ ಶ್ರೇಷ್ಠವಾದ ತೋಳುಗಳಿದ್ದೂ ಏನು ಪ್ರಯೋಜನ ?" ಎಂದು ಪ್ರತಿಜ್ಞೆಯನ್ನು ಮಾಡಿ ಲವನು ಉರಿದೆದ್ದನು.

ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ |
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ |
ಮಿಗೆ ನಡುಗಿ ಬೇಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು ||
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ |
ನಗಡುತನದಿಂದೆ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು || ೪ ||


         ಲವನು ತನ್ನ ಉತ್ತರೀಯವನ್ನು ಹೊಸೆದು, ಅದನ್ನು ಕುದುರೆಯ ಕೊರಳಿಗೆ ಬಿಗಿದು ಬಾಳೆಯ ಗಿಡಕ್ಕೆ ಕಟ್ಟಲು ಮುನಿಸುತರು ಬಹಳ ನಡುಗುತ್ತಾ, "ಬೇಡ ಬೇಡ ಅರಸರ ಕುದುರೆಯನ್ನು ಬಿಟ್ಟುಬಿಡು, ಇಲ್ಲವಾದರೆ ನಮ್ಮನ್ನು ಹೊಡೆಯುವರು " ಎಂದರು ಅದಕ್ಕೆ ಲವನು ನಗುತ್ತ "ಬ್ರಾಹ್ಮಣರ ಮಕ್ಕಳು ಅಂಜುವರೆಂದರೆ ಜಾನಕಿಯ ಮಗನು ಇದಕ್ಕೆ ಹೆದರುವನೇ? ಹೋಗಿ ನೀವು" ಎಂದು ಶೌರ್ಯದಿಂದ ಬಿಲ್ಲನ್ನು ಹೆದೆಗೇರಿಸಿ, ತೀಡಿ ಜೇಂಕಾರ ಮಾಡಿ ನಿಂತಿದ್ದನು.


ಪಾಠದ ಹೆಸರು : ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು

ಪಾಠದ ಹೆಸರು : ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು

ಪ್ರಶ್ನೆಗಳಿಗೆ ಉತ್ತರಿಸಿ :

೧. ನಾರಾಯಣಗುರು ಧರ್ಮಪರಿಪಾಲನಾ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ ,

ಉತ್ತರ: ಶ್ರೀ ನಾರಾಯಣಗುರು ಅವರು 1903ರಲ್ಲಿ ಧರ್ಮಪರಿಪಾಲನಾ ಯೋಗಂ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯ ಪ್ರಮುಖ ಉದ್ದೇಶವೆಂದರೆ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣವಾಗಿತ್ತು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು. ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು. ನಾರಾಯಣ ಗುರು ಮತ್ತು ಅವರ ಅನುಯಾಯಿಗಳು 1924ರಲ್ಲಿ ʼವೈಕಂ ಸತ್ಯಾಗ್ರಹʼ ವೆಂಬ ಶಿವ ದೇವಾಲಯ ಪ್ರವೇಶ ಚಳುವಳಿಯನ್ನು ನಡೆಸಿದರು. ಗುರುವಾಯೂರು ದೇವಾಲಯ ಪ್ರವೇಶ ಚಳುವಳಿಯು ಮತ್ತೊಂದು ಮಹತ್ವದ ಘಟನೆ.

೨. ನಾರಾಯಣಗುರು ಅವರ ಪ್ರಮುಖ ಆಶಯ ಏನಾಗಿತ್ತು?

ಉತ್ತರ: ನಾರಾಯಣ ಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬುದು.

೩. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿ ಮಾಡಿ ,

ಉತ್ತರ: ಪೆರಿಯಾರ್ ಚಳವಳಿಯ ಮುಖ್ಯಾಂಶಗಳು

1. ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ಸಿದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳುವಳಿ ಎಂಬ ಜನಾಂಗೀಯ ಪರಿಕಲ್ಪನೆ ಕೇಂದ್ರಿತ ಚಳುವಳಿಯನ್ನು ರೂಪಸಿದರು.

2. ತಮಿಳು ಭಾಷೆಯನ್ನು ದ್ರಾವಿಡರ ಭಾಷೆ ಎಂದರು.

3. ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿ ಹಿಡಿದರು.4. ಮೊದಲಿಗೆ ಆರಂಭವಾಗಿದ್ದ ಬ್ರಾಹ್ಮಣೇತರ ಚಳುವಳಿಯನ್ನು ಪರಿವರ್ತಿಸಿದರು.

5. ಎಲ್ಲ ಬಗೆಯ ಶೋಷಣೆಗಳಿಂದ ಹೊರಬಂದು ಸರ್ವಧರ್ಮ ಸಹಿಷ್ಣುತೆಯ ಸಮಾಜ ರೂಪುಗೊಳ್ಳಬೇಕು ಎಂದರು.

೪ , ಪೆರಿಯಾರ್‌ರವರು ಹುಟ್ಟು ಹಾಕಿದ ಸಂಘಟನೆಯ ಹೆಸರೇನು ?

ಉತ್ತರ: ಪೆರಿಯಾರ್‌ರವರು ಹುಟ್ಟು ಹಾಕಿದ ಸಂಘಟನೆಯ ಹೆಸರು ʼದ್ರಾವಿಡ ಕಳಗಂʼ