Showing posts with label 7th kannada notes. Show all posts
Showing posts with label 7th kannada notes. Show all posts

7th Standard Bidugadeya Haadu Kannada Notes | 7ನೇ ತರಗತಿ ಬಿಡುಗಡೆಯ ಹಾಡು ಕನ್ನಡ ನೋಟ್ಸ್

 

7th Standard Bidugadeya Haadu Kannada Notes | 7ನೇ ತರಗತಿ ಬಿಡುಗಡೆಯ ಹಾಡು ಕನ್ನಡ ನೋಟ್ಸ್

7th Standard Bidugadeya Haadu Kannada Notes | 7ನೇ ತರಗತಿ ಬಿಡುಗಡೆಯ ಹಾಡು ಕನ್ನಡ ನೋಟ್ಸ್

7th Standard Kannada Poem Bidugadeya Haadu  Notes 7ನೇ ತರಗತಿ ಬಿಡುಗಡೆಯ ಹಾಡು  ಪಾಠ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book, pdf text book pdf download

ಅ ) ಕೊಟ್ಟಿರುವ ಒಂದು ವಾಕ್ಯದಲ್ಲಿ ಉತ್ತರಿಸಿ . 

ಪ್ರಶ್ನೆ 1 . ಪಂಜರದ ಹಕ್ಕಿ ಯಾವುದರ ಸಂಕೇತವಾಗಿದೆ ? 

ಉತ್ತರ : ಪಂಜರದ ಹಕ್ಕಿ ಭಾರತೀಯರ ( ಬಂಧನದಲ್ಲಿರುವವರ ) ಸಂಕೇತವಾಗಿದೆ . 

ಪ್ರಶ್ನೆ 2 . ಹಂಗಿನ ಅರಮನೆಯಲ್ಲಿ ಹಕ್ಕಿ ಹೇಗೆ ನರಳುತ್ತಿದೆ ?

ಉತ್ತರ : ಹಂಗಿನರಮನೆಯಲ್ಲಿ ರೆಕ್ಕೆಗಳ ಬಿಗಿ ಹಿಡಿದು ನರಳುತ್ತಿದೆ .  

ಪ್ರಶ್ನೆ 3 . ಮೃಗರಾಜ ಏನೆಂದು ಗೊಣಗುತ್ತಿದೆ ?  

ಉತ್ತರ : ಮೃಗರಾಜ ಇನ್ನು ಈ ಬಂಧನ ಸಾಕು ಎಂದು ಗೊಣಗುತ್ತಿದೆ . 

ಪ್ರಶ್ನೆ 4 . ಯಾವುದು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ ? 

ಉತ್ತರ : ಕಾರಿರುಳು ತನ್ನ ಸೆರೆಯೊಳಗೆ ರವಿಕಿರಣಗಳನ್ನು ಅಡಗಿಸಿಟ್ಟುಕೊಂಡಿದೆ . 

ಪ್ರಶ್ನೆ 5 . ನಮ್ಮ ಗುಡಿಯು ( ಬಾವುಟ ) ಎಷ್ಟು ಬಣ್ಣಗಳನ್ನು ಹೊಂದಿದೆ ? 

ಉತ್ತರ : ನಮ್ಮ ಬಾವುಟವು ಮೂರು ಬಣ್ಣಗಳನ್ನು ಹೊಂದಿದೆ . 

ಆ ) ಕೊಟ್ಟಿರುವ ಎರಡು – ಮುಾರು ವಾಕ್ಯಗಳಲ್ಲಿ

 ಪ್ರಶ್ನೆ 1 . ಪಂಜರದಲ್ಲಿ ನರಳುತ್ತಿರುವ ಹಕ್ಕಿ ಹರ್ಷದಲ್ಲಿ ವಿಹರಿಸಲು ಏನು ಮಾಡಬೇಕು ?

 ಉತ್ತರ : ಪಂಜರದಲ್ಲಿ ನರಳುತ್ತಿರುವ ಹಕ್ಕಿ  ಪಂಜರದ ಬಾಗಿಲನ್ನು ಮುರಿದು ಹೆಣೆದ ಬಂಧನದಿಂದ ಮುಕ್ತಿ ಹೊಂದುತ್ತದೆ . ಬಾನಾಡಿಯಾಗಿ ( ಪಕ್ಷಿಯಾಗಿ ) ಆಕಾಶದಲ್ಲಿ
ವಿಹರಿಸುತ್ತಾ ಹರ್ಪಿಸಲಿ ಎಂದು ಕವಿ ಹಾರೈಸುತ್ತಾರೆ . 

ಪ್ರಶ್ನೆ 2 . ತಿಳಿನೀರ ಮಳೆ ಏಕೆ ಸುರಿಯಬೇಕು ?

 ಉತ್ತರ : ಕಾರಿರುಳಿನಿಂದ ಜಡಗೊಂಡ ಮೈ ಹಾಗೂ ಮನಸ್ಸುಗಳು ತನ್ನ ಮಲಿನತೆಯನ್ನು ಕಳೆದುಕೊಳ್ಳಲು ತಿಳಿನೀರ ಮಳೆ ಸುರಿಯಬೇಕು . ಈ ರೀತಿ ಸುರಿದ ಮಳೆಯಿಂದ ಕೊಳಕು ಮಾಯವಾಗುತ್ತದೆ . ಒಳ ಹೊರಗೆ ಶುಚಿಯಾಗಬೇಕಾದರೆ ತಿಳಿ ನೀರ ಮಳೆ ಸುರಿಯಬೇಕಾಗುತ್ತದೆ .

ಪ್ರಶ್ನೆ 3 . ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲವೇಕೆ ? 

ಉತ್ತರ : ಶತ ಶತಮಾನಗಳಿಂದ ಮೆರೆದ ಕಡಲುಗಳ ರಾಣಿಗೆ ಇನ್ನು ಮುಂದೆ ಉಳಿಗಾಲವಿಲ್ಲ ಏಕೆಂದರೆ ಭಾರತೀಯರಲ್ಲಿ ಇಂದು ಐಕ್ಯತೆಯಿದೆ . ಅವರೆಲ್ಲ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಿಡಿಲ ಹೋರಾಟ ಮಾಡುತ್ತಿದ್ದಾರೆ . ಅದೂ ತಾಯಿ ಭಾರತೀಯ ಮೇಲೆ ಆಣೆ ಹಾಕಿ & ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸಿ ಧೈಯದಿಂದ ಹೋರಾಡುತ್ತಿರುವುದರಿಂದ ಕಡಲ ರಾಣಿಗೆ ಉಳಿಗಾಲವಿಲ್ಲ . 

ಪ್ರಶ್ನೆ 4 . ಒಕ್ಕೊರಲ ಹಾಡನ್ನು ಬಯಸುತ್ತಾನೆ ? ವೆ ಎಂಬ ಹೇಗೆ ಹಾಡಬೇಕೆಂದು ಕವಿ – ಸರಿ 

ಉತ್ತರ : ಜಾತಿ ಮನೋವುಗಳ ಬೇಧವಿಲ್ಲದೆ ನಾವೆಲ್ಲಾ ಒಂದೇ ಎಂಬ ಮನೋಭಾವದಿಂದ ಮನುಜಮತವನ್ನು ಎತ್ತಿ ಹಿಡಿದಿದ್ದೇವೆ . ನಮ್ಮ ಮೂರು ಬಣ್ಣದ ಬಾವುಟವನ್ನು ಹಾರಿಸುತ್ತಾ ಸರ್ವರಿಗೂ ನಾವು ಸಮ ಎಂದು ಮನದುಂಬಿ ದನಿಯೆತ್ತಿ ಒಕ್ಕೊರಲ ಹಾಡನ್ನು ಹಾಡಬೇಕು ಎಂದು ಕವಿ ಬಯಸುತ್ತಾರೆ . 

ಇ ) ಖಾಲಿ ಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ 

೧. ಚಡಪಡಿಸುತಿದೆ __________ ಹಾದಿ ಹುಡುಕಿ.
೨. ಸೆರೆಯಿಂದ ನಾ __________ ಸದರೇರಬೇಕು.
೩. ಇನ್ನೆಲ್ಲ ನೀನೇಳು _______ ರಾಣಿ.
೪. ಹಾಡುವೆವು ಬಿಡುಗಡೆಯ ________ ಹಾಡು.

 ಉತ್ತರಗಳು :

 1 ) ಮುನ್ನಡೆವ

 2 ) ಜಿಗಿದು 

3 ) ಕಡಲುಗಳ

 4 ) ಒಕ್ಕೊರಲ 

ಭಾಷಾ ಚಟುವಟಿಕೆ 

ಅ . ಸೂಚನೆಗಳನ್ನು ಗಮನಿಸಿ

 ಪ್ರಶ್ನೆ 1 . ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ಪಟ್ಟಿ ಮಾಡಿರಿ . 

ಉತ್ತರ : ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖರು ಪ್ರಮುಖರ ಹೆಸರುಗಳನ್ನು ಶಾಸಿ , ಜವಹರಲಾಲ್ ನೆಹರೂ , ಲಾಲ್‌ಬಹದ್ದೂರ್ ಶಾಸ್ತ್ರಿ , ಸರ್ದಾರ್ ವಲ್ಲಬಾಯಿ ಪಟೇಲ್ , ಸುಭಾಷ್ ಚಂದ್ರ ಬೋಸ್ ಈ ರೀತಿ ಸಾವಿರಾರು ಜನರಿದ್ದಾರೆ .

 

 ಪ್ರಶ್ನೆ 2 . ನಮ್ಮ ದೇಶದ ಬಾವುಟದ ಚಿತ್ರವನ್ನು ಬರೆದು ಚಿತ್ರಕ್ಕೆ ಸೂಕ್ತ ಬಣ್ಣವನ್ನು ಹಚ್ಚಿರಿ .

  1. ಈ ಪದ್ಯದಲ್ಲಿ 2 ನೇ ಹಾಗೂ 5 ನೇ ಪದ್ಯಗಳನ್ನು ಕಂಠಪಾಠ ಮಾಡಿರಿ 

ಆ ) ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ 

  1. ಸೆರೆಯಿಂದ = ಸೆರೆ + ಇಂದ = ‘ ಯ ‘ 
  2. ಉಳಿಗಾಲ = ಉಳಿ + ಕಾಲ = ಆದೇಶಸಂಧಿ 
  3. ‘ ಹತ್ತಡಿಯ = ಹತ್ತು + ಅಡಿಯ = ಲೋಪಸಂಧಿ
  4. ಮನದುಂಬಿ = ಮನ + ತುಂಬಿ = ದೇಶಸಂಧಿ 

ಇ ) ಈ ಕೆಳಗಿನ ಪದಗಳಿಗೆ  ತತ್ಸಮ- ತತ್ಬವ ಬರೆಯಿರಿ ,

  1. ಮೃತ = ಮಿಗ . 
  2. ರಾಜ = ರಾಯ 
  3. ಬಣ್ಣ = ವರ್ಣ
  4. 4. ಪ್ರಾಣ ಹರಣ 
  5. ವಸನ = ಬೆಸನ
  6. ಹಕ್ಕಿ = ಪಕ್ಷಿ ತದ್ಭವ ಪದಗಳನ್ನು 

ಈ ) ಈ ಕೆಳಗಿನ ವಾಕ್ಯಗಳನ್ನು ವೇಗವಾಗಿ ಓದುವುದನ್ನು ಅಭ್ಯಾಸ ಮಾಡಿ . 

  1. ಗಿಡ ತಳಿರೊಡೆದೆರಡೆಲೆಯಾಯ್ತು .

ಕೃತಿಕಾರರ ಪರಿಚಯ : – 

ನಿಮುದೇನೂರು ಸಂಗಣ್ಣ 

ಸಂಗಣ್ಣನವರು ಬಳ್ಳಾರಿ ಜಿಲ್ಲೆಗೆ ಸೇರಿದ ಚಿಗಟೇರಿಯಲ್ಲಿ ದೊಡ್ಡ ಜಮೀನ್ದಾರಿ ಕುಟುಂಬದಲ್ಲಿ ಸಂಗೀತ ನಾಟಕದಲ್ಲಿ ಬಹಳ ತಾಲೂಕಿನ ವ್ಯಾಪಾರಿ . 17 ನೇ ಮಾರ್ಚ್ 1927 ರಲ್ಲಿ ಜನಿಸಿದರು . ಬಾಲ್ಯದಿಂದಲೂ ಆಸಕ್ತಿ ಇವರಿಗೆ ಶಿವರಾಮಕಾರಂತ , ಗೆಳೆತನವಿತ್ತು . ವ್ಯವಸಾಯ , ಮಾಡಿದ್ದಾರೆ . ಇವರ ಪ್ರಮುಖ ಬಾಳ ಭಿಕ್ಷುಕ , ಚಿತ್ರಪಟ , ರಾಮಾಯಣ ‘ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ . ಕೆ.ವಿ.ಸುಬ್ಬಣ್ಣನವರ ಜೊತೆ ಕೃಷಿಯ ಜೊತೆ ಸಾಹಿತ್ಯ ಕೃಷಿಯನ್ನು ಕೃತಿಗಳು ‘ ನವಿಲು ಕುಣಿದಾವ , ಮಾಡಿದ್ದರು . ಜನಪದ ಮುಕ್ತಕಗಳು , ಆ ಅಜ್ಜ ಈ ಮೊಮ್ಮಗ , ಗೊಂದಲಿಗ ದೇವೇಂದ್ರಪ್ಪನ ಹಾಡುಗಳು , ಚಿಗಟೇರಿ ಪದಕೋಶ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ನಾಡೋಜ ಪ್ರಶಸ್ತಿ , ಕರ್ನಾಟಕಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ .

 ಮುಖ್ಯಾಂಶಗಳು :

ಈ ಪದ್ಯದಲ್ಲಿ ಸ್ವಾತಂತ್ರ್ಯ ಎಷ್ಟೊಂದು ಮುಖ್ಯ ಇದು ಮನುಷ್ಯರಿಗೆ ಮಾತ್ರವಲ್ಯ ಪ್ರಾಣಿ ಪಕ್ಷಿಗಳಿಗೂ ಅವಶ್ಯಕ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ . ನಮ್ಮ ದೇಶ ಭಾರತವನ್ನು ” ಕಡಲುಗಳ ರಾಣಿ ‘ ಎನಿಸಿದ ಇಂಗ್ಲೆಂಡ್ , ಪಡೆಯ ( ಆ ಟಿಪ್ ) ಹೇಗೆ ಆಳಿದರು , ಅವರಿಂದ ಸ್ವತಂತ್ರ ಹೋರಾಟ ಮಾಡಬೇಕಾಯಿತು ಎಂಬುದು ಎಲ್ಲರಿಗೂ ತಿಳಿದ ಸಂಗತಿ . ಭಾರತೀಯರ ಐಕ್ಯತೆಯ ಮಂತ್ರದಿಂದಲೇ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು ಎಂಬುದನ್ನು ಈ ಪದ್ಯದ ಮೂಲಕ ಒತ್ತಿ ಹೇಳುತ್ತಿದ್ದಾರೆ .ರುದ್ರರು , ನಮ್ಮ ತಾಯಿ ಭಾರತೀಯ ಆಣೆ ನಾವು ನಿನ್ನನ್ನು ಬಿಡುವುದಿಲ್ಲ . ಇಲ್ಲಿಂದ ನೀನು ತೊಲಗಲೇಬೇಕು , ಹೋಗು ಹೊರಟು ಹೋಗು ಎಂದು ಬೊಬ್ಬಿಡುತ್ತಿದ್ದಾರೆ . ಜಾತಿ , ಮತ , ಪಂಥ ಎಂದು ಬೇಧವೆಣಿಸಿದೆ ನಾವೆಲ್ಲರ ಮನುಜಮತ ದ ವರು ಎಂದು ತೋರಿಸಿಕೊಡುತ್ತೇವೆ . ನಮ್ಮ ಮೂರು ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ . ನಾವು ಎಲ್ಲರಿಗೂ ನಾವೆಲ್ಲರೂ ಒಂದೇ ಎಂದು ಐಕ್ಯತೆಯಿಂದ ಮನಸ ದನಿಯೆತ್ತಿ ಹಾಡುತ್ತೇವೆ . ಇದು ನಮ್ಮ ಬಿಡುಗಡೆಯ ಹಾಡು .  ಸರ್ವತಂತ್ರ ಸ್ವತಂತ್ರರು ಎಂದು ಆ ಹಾಡುತ್ತಿದ್ದಾರೆ .

 ಪದಗಳ ಅರ್ಥ : 

  • ಹಂಗು – ಋಣ ,
  •  ಪಂಜರ – ಪಕ್ಷಿಗಳ ಬೋನು 
  • ಬಾನಾಡಿ – ಪಕ್ಷಿ 
  • ವಿಹರಿಸು ಸಂಚರಿಸು 
  • ಹರ್ಷ – ಹಿಗ್ಗು , ಸಂತೋಷ 
  • ಸೊಕ್ಕಿ – ಗರ್ವ , ಜಂಭ
  • ಕೊಳೆಗೊಂಡು – ಮಾಲಿನ್ಯಗೊಂಡು , ತೃಪ್ತಿಗೊಂಡು 
  • ತಣಿಸು – ತಂಪಾಗಿಸು , ತೃಪ್ತಿಗೊಳಿಸು 
  • ವಸನ – ವಸ್ತ್ರ , ಬಟ್ಟೆ 
  • ಹದ್ದು – ಎಲ್ಲೆ , ಗಡಿ
  • ಕನಲು – ಕೋಪಗೊಳ್ಳು , ಸಿಟ್ಟಾಗು 
  • ಕೆಂಗಿಡಿ – ಉರಿಬೆಂಕಿ , 
  • ಕೆಂಪಾದ ಬೆಂಕಿ
  •  ಸದರೇರು – ಅಂಗಳ ಸೇರು , ಬಂದಮುಕ್ತವಾಗು 
  • ಸೆರೆ – ಬಂಧನ 
  • ಅಡಗು – ಕಾಣದಂತಾಗು 
  • ಕಾರಿರುಳು – ದಟ್ಟವಾದ ಕತ್ತಲೆ
  •  ಪಣ – ಒತ್ತೆ ಇಡು 
  • ತೊಲಗು – ಬಿಟ್ಟು ಹೋಗು , ಹೊರಟುಹೋಗು 
  • ಗುಡಿ – ಬಾವುಟ , ಕೇತನ
  •  ಒಕ್ಕೊರಲು – ಒಗ್ಗಟ್ಟು , ಒಂದೇ ಧ್ವನಿಯಾಗು

7th Standard Hacchevu Kannadada Deepa Notes | 7ನೇ ತರಗತಿ ಹಚ್ಚೇವು ಕನ್ನಡದ ದೀಪ ಕನ್ನಡ ನೋಟ್ಸ್

 

7th Standard Hacchevu Kannadada Deepa Notes | 7ನೇ ತರಗತಿ ಹಚ್ಚೇವು ಕನ್ನಡದ ದೀಪ ಕನ್ನಡ ನೋಟ್ಸ್

7th Standard Hacchevu Kannadada Deepa Notes | 7ನೇ ತರಗತಿ ಹಚ್ಚೇವು ಕನ್ನಡದ ದೀಪ ಕನ್ನಡ ನೋಟ್ಸ್

7th Standard Hacchevu Kannadada Deepa Notes 7ನೇ ತರಗತಿ Hacchevu Kannadada Deepa, 7th ಪಾಠ ಕನ್ನಡ ಹಚ್ಚೇವು ಕನ್ನಡದ ದೀಪ ನೋಟ್ಸ್, ಪ್ರಶ್ನೆ ಉತ್ತರ question answer, text book, pdf text book pdf download

ಅಭ್ಯಾಸ

 ಅ).ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ .

 ಪ್ರಶ್ನೆ 1 . ಕನ್ನಡದ ಕಂಪನ್ನು ಸೂಸುವಲ್ಲಿ ಏನನ್ನು ಚಾಚುತ್ತೇವೆ ? 

ಉತ್ತರ : ಕನ್ನಡದ ಕಂಪನ್ನು ಸೂಸುವಲ್ಲಿ ನಮ್ಮ ದೇಹವನ್ನು ಚಾಚುತ್ತೇವೆ . 

 

ಪ್ರಶ್ನೆ 2 . ಕಲ್ಪನೆಯ ಕಣ್ಣು ಹರಿವ ತನಕ ಯಾವ ದೀಪಗಳನ್ನು ಹಚ್ಚುತ್ತೇವೆ ? 

ಉತ್ತರ : ಕಲ್ಪನೆಯ ಕಣ್ಣು ಹರಿವ ತನಕ ಸಾಲು  ದೀಪಗಳನ್ನು ಹಚ್ಚುತ್ತೇವೆ .

 

 ಪ್ರಶ್ನೆ 3 . ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲರೂ ಏನು ಮಾಡಬೇಕು? 

ಉತ್ತರ : ನಮ್ಮವರು ಗಳಿಸಿದ ಹೆಸರುಳಿಸಲು ಕನ್ನಡಿಗರೆಲ್ಲರೂ ಒಂದುಗೂಡಿ ಕನ್ನಡ ಮಾತೆಯನ್ನು ಪೂಜಿಸಬೇಕು . 

 

ಪ್ರಶ್ನೆ 4 . ನಮ್ಮುಸಿರು ತೀಡುವ ನಾಡಿನಲ್ಲಿ ಯಾವ ಗೀತೆ ಹಾಡುತ್ತೇವೆ ? 

ಉತ್ತರ :ನಮ್ಮುಸಿರು ತೀಡುವ ನಾಡಿನಲ್ಲಿ ಮಂಗಳದ ಗೀತೆಯನ್ನು ಹಾಡುತ್ತೇವೆ .

 

 ಪ್ರಶ್ನೆ 5 . ಕರುಳೆಂಬ ಕುಡಿಗೆ ಏನನ್ನು ಮುಡಿಸುತ್ತೇವೆ ? 

ಉತ್ತರ : ಕರುಳೆಂಬ ಕುಡಿಗೆ ಮಿಂಚನ್ನು ಮುಡಿಸುತ್ತೇವೆ .

 

 ಆ . ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರ ವಾಕ್ಯದಲ್ಲಿ ಉತ್ತರಿಸಿರಿ .

 ಪ್ರಶ್ನೆ 1 . ಕನ್ನಡಿಗರು ಯಾವ ದೀಪವನ್ನು ಹಚ್ಚು 

ಉತ್ತರ : ಕನ್ನಡಿಗರು ಕನ್ನಡದ ಶ್ರೀಮಂತಿಕೆಯನ್ನು ತೋರುವ ಒಲವನ್ನು ಬೆಳಗುವ ದೀಪವನ್ನು ಹಚ್ಚುತ್ತಾರೆ . 

 

ಪ್ರಶ್ನೆ 2 . ಮರೆವನ್ನು ಮರೆತು , ಒಲವನ್ನು ಎರೆದು , ಹೇಗೆ ಕನ್ನಡದ ದೀಪ ಹಚ್ಚುತ್ತಾರೆ ? 

ಉತ್ತರ : ಕನ್ನಡಿಗರೆಲ್ಲರೂ ಈ ನಾಡಿಗಾಗಿ ಶ್ರಮಿಸುತ್ತ ಕಹಿಯನ್ನು ಮರೆತು ವಿಶಾಲವಾದ ಮನಸ್ಸಿನಿಂದ ನಾಡಿಗಾಗಿ ಒಲವನ್ನು ಎರೆದು ಕನ್ನಡದ ದೀಪವನ್ನು ಹಚ್ಚಿ ಅದರ ಕಾಂತಿಯನ್ನು ಎಲ್ಲೆಡೆ ಬೆಳಗುತ್ತಾರೆ .

ಪ್ರಶ್ನೆ 3 . ಕನ್ನಡ ಮಾತೆಯನ್ನು ಹೇಗೆ ಆದರಿಸುತ್ತಾರೆ ? 

ಉತ್ತರ : ಕನ್ನಡಿಗರು ಗಳಿಸಿದ ಹೆಸರನ್ನು ಉಳಿಸಲು ಕನ್ನಡಿಗರೆಲ್ಲರೂ ನಾವೆಲ್ಲರೂ ಒಂದುಗೂಡಿ ಕನ್ನಡ ವಾತೆಯನ್ನು ಪೂಜಿಸುತ್ತ ಕೆಟ್ಟದ್ದನ್ನು ನಾಶಮಾಡುವ ಸಂಕಲ್ಪದಿಂದ ಮಂಗಳಗೀತೆಯನ್ನು ಹಾಡುತ್ತಾ ಕನ್ನಡದ ಕಾಂತಿಯನ್ನು ಬೆಳಗುವುದರ ಮೂಲಕ ಕನ್ನಡ ಮಾತೆಯನ್ನು ಆದರಿಸುತ್ತಾರೆ

 ಇ . ಕೆಳಗಿನ ಸಾಲುಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ . 

  1. ಮೈಮರೆವೆಯಿಂದ ಕೂಡಿರುವ_____ 
  2. ಹಚ್ಚಿರುವ ದೀಪದಲಿ ತಾಯರೂಪ _____
  3. ನಮ್ಮೆದೆಯ ಮಿಡಿಯು ಮಾಡೇವು . ______
  4. ಕರುಳೆಂಬ ಕುಡಿಗೆ ಮಿಂಚನೇ _________ .

ಉತ್ತರಗಳು 

1.ಕೊಲೆಯ ಕೊಚ್ಚೇವು 

2.ಅಚ್ಚಳಿಯದಂತೆ ತೋರೇವು 

3.ಪೂಜೆ ಮಾಡೆವು 

4.ಹಚ್ಚೇವು ಕನ್ನಡ ದೀಪ 

ಈ . ‘ ಹಚ್ಚೇವು  ‘ ಎಂಬ ಪದಕ್ಕೆ ಸರಿಹೊಂದುವ , ಪದ್ಯದಲ್ಲಿ ಇರುವ ಪ್ರಾಸಪದಗಳನ್ನು ಬರೆಯಿರಿ .

 ಹಚ್ಚೇವು 

ಕೊಚ್ಚೇವು =ಚಾಚೇವು=ಕಚ್ಚೇವು

 , ಒಂದುಗೂಡೇವು , 

ಮರೆತೇವು =ತೆರೆದೇವು =ಎರದೇವು 

ಬೀರೇವು=ತೋರೇವು=ತೂರೇವು 

ಮಾಡೇವು =ಹಾಡೇವು =ತೊರೆದೇವು 

ಕಡೆದೇವು=ಪಡೆದೇವು=ಕೊಡೇವು 

ಉ . ‘ ಬೀರೆವು ‘ ಎಂಬ ಪದದಂತೆ ಪದಮಧ್ಯದಲ್ಲಿ ‘ ರ ‘ ಅಕ್ಷರ ಬರುವ ಪದಗಳನ್ನು ಪಟ್ಟಿ ಮಾಡಿ . ತೊರೆದೇವು ತೂರೇವು ತೋರೇವು ಬೀರೇವು 

ಬೀರೇವು -ತೂರೇವು -ತೊರೇವು 

ಊ . ಕೈಗೆ ಕಾಲ್ ಮೂಳೆಯ ಜಡಿಯ

 ಶಿಲುಬೆಗಿಕ್ಕಿ ಸಾಯೆ ಬಡಿಯ 

ಅವರ ತಪ್ಪ ಕ್ಷಮಿಸುಯೆಂದು

 ಮೊರೆಯನಿಟ್ಟ ತಂದೆಗೆಂದು 

ಕ್ರಿಸ್ತ ಸತ್ತು ಬದುಕಿದ

 ಯುಗವೊಂದನು ತೊಡಗಿದ- ಕಯ್ಯಾರ ಕಿಞ್ಞಣ್ಣ ರೈ ( ಶತಮಾನದ ಗಾನ ) 

ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಪಟ್ಟಿ ಮಾಡಿ : 

ಜಡಿಯೆ = ಬಡಿಯ

 ಕ್ಷಮಿಸುಯೆಂದು = ತಂದೆಗೆಂದು

 ಬದುಕಿದ = ತೊಡಗಿದ . 

ಕೈಗೆ =ಕಾಲ್ಗೆ 

 ಭಾಷಾಭ್ಯಾಸ

ಅ . ಕೆಳಗೆ ನೀಡಿರುವ ಪದ್ಯದ ಪ್ರಾಸಪದಗಳನ್ನು 

ಜೋಡಿಸಿ ಬರೆಯಿರಿ .

ದೀಪ  ಮರುಳು   ತೀಡು  ಹಾಡು 

ಮನವ   ಹಚ್ಚು  ರೂಪ  ಕರುಳು ಪಡೆ 

ಮನೆ ,ಇಡೀ ಗೂಡು ನಾಡು ಮರೆತೆವು 

ನಾಡು ಗಡಿನಾಡು ಸಿಡಿ ಪ್ರೀತಿ ನೀತಿ 

ಮನ ಕುಡಿ ಇರುಳು ಸೋಂಪು ನಡುನಡು 

ಅಚ್ಚು ತೊಡೆ  ಮುಡಿ ಹಿಡಿ ಮರೆವು 

ಮಿಡಿ ತೊರೆದೇವು ಕೆಚ್ಚು ಗಳಿಸು  ಕಂಪು 

  •  ಗೂಡು = ನಾಡು 
  • ಪ್ರೀತಿ = ನೀತಿ ,ಭೀತಿ = ನೀತಿ
  •  ಮನ = ಮನೆ 
  • ತೊಡೆ = ಪಡೆ 
  • ಮುಡಿ = ಮಿಡಿ
  •  ಹಿಡಿ = ಸಿಡಿ
  • ನಡುಗಾಡು = ಗಡಿನಾಡು 
  • ಮಿಡಿ = ಕುಡಿ 
  • ನೀಡು = ಹಾಡು 
  • ಕರುಳು = ಇರುಳು
  •  ಮರೆತೇವು = ತೊರೆದೇವು 
  • ಮನವ = ಮರೆವ
  • ಕಂಪು = ಸೊಂಪು 
  • ಕೆಚ್ಚು = ಅಚ್ಚು
  • ನಾಡು – ಹಾಡು 

ಆ . ಕೆಳಗೆ ನೀಡಿರುವ ಪದಗಳ ಅರ್ಥವ್ಯತ್ಯಾಸವನ್ನು ಗಮನಿಸಿ 

  • .  ಹಚ್ಚು – ಹಚೇವು – ಹಚ್ಚುವುದಿಲ್ಲ ,

             ಹಚೇವು – ಹಚ್ಚುತೇವೆ .

  •  ಬೀರು – ಬೀರೇವು – ಬೀರುವುದಿಲ್ಲ

              ಬೀರೇವು –  ಬೀರುತೇವೆ

  •   ಮಾಡು – ಮಾಡೆವು – ಮಾಡುವುದಿಲ್ಲ . 

             ಮಾಡೆವು- ಮಾಡುತ್ತೇವೆ 

ಇ . ಇದೇ ರೀತಿಯಲ್ಲಿ ನೋಡು , ಹಾಡು , ನಿಲ್ಲು , ಮೆಚ್ಚು ಮೊದಲಾದ ಪದಗಳನ್ನು ಕೆಳಗಿನ ವಾಕ್ಯದಲ್ಲಿ ಬಳಸಿ ವಾಕ್ಯ ಪೂರ್ಣಗೊಳಿಸಿ . 

  • ನಾವು ಕನ್ನಡ ಚಲನ ಚಿತ್ರಗಳನ್ನು_________
  • ನಾವು ಕನ್ನಡ ಗೀತೆಗಳನ್ನು ಹಾಡುತ್ತೇವೆ______
  •  ನಿಮಗಾಗಿ ನಾಳೆ ನಾವು ಕಾಯುತ್ತಾ 
  • ನಿಮ್ಮೆಲ್ಲ ಚಿತ್ರಗಳನ್ನು

ಉತ್ತರ :

  •  ನೋಡುತ್ತೇವೆ . 
  • ಹಾಡೇವು  
  • ನಿಲ್ಲುತ್ತೇವೆ .  
  • ಮೆಚ್ಚೇವು 

 ಈ . ಒಂದೇ ಪದವನನ್ನು ನಾಮಪದ ಮತ್ತು ಕ್ರಿಯಾಪದ ಅರ್ಥದಲ್ಲಿ ಮಾದರಿಯಂತೆ ಬಳಸಿ ವಾಕ್ಯ ರಚಿಸಿ . 

ಮಾದರಿ : ಕಳೆ : ನಮ್ಮ ಶಾಲಾ ಕೈತೋಟದಲ್ಲಿ ತುಂಬಾ ಕಳೆ ಬೆಳೆದಿದೆ . ರಾಜು ಬೆಲೆ ಬಾಳುವ ಉಂಗುರವನ್ನು ಕಳೆದನು .

  1. ಹಚ್ಚು : ರಾಜು ತರಕಾರಿ ಹಚ್ಚಿದ ನಂತರ ದೀಪ ಹಚ್ಚಿದನು 
  2. ಕುಡಿ  ನೀನು ನನ್ನ ಕರುಳಿನ ಕುಡಿ , ಬೇಗ ಹಾಲು ಕುಡಿ .
  3. ಪಡೆ : ಅಶೋಕನು ಶತ್ರುಪಡೆಯೊಂದಿಗೆ ಕಾದಾಡಿ ಜಯವನ್ನು ಪಡೆದನು . 

ಉ . ಮೊದಲೆರಡು ಪದಗಳ ಸಂಬಂಧ ಗ್ರಹಿಸಿ ಖಾಲಿ ಜಾಗದಲ್ಲಿ ಸೂಕ್ತ ಪದ ಭರ್ತಿಮಾಡಿ . 

  1. ಆಂಧ್ರಪ್ರದೇಶ : ಹೈದರಾಬಾದ್ : : ಕೇರಳ : 
  2. ಶತ್ರು : ಮಿತ್ರ : : ರಾತ್ರಿ :  
  3. ಮಾತಾ : ತಾಯಿ : : ಪಿತಾ : 
  4. ದಾವಣಗೆರೆ : ನಡುನಾಡು : : ಬೆಳಗಾವಿ : 

  ಉತ್ತರ :

  • ತಿರುವನಂತಪುರ 
  • ಹಗಲು 
  • ತಂದೆ 
  • ಗಡಿನಾಡು

ಕವಿ ಪರಿಚಯ :  

ಡಿ ಎಸ್ ಕರ್ಕಿಯವರು ರಚಿಸಿದ ಕವನ ಇದನ್ನು ಇವರ ‘ ನಕ್ಷತ್ರಗಾನ ‘ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ ಎಸ್ ಕರ್ಕಿಯವರು ಭಾವತೀರ್ಥ , ತನನತೋಂ ಗೀತಗೌರವ , ಕರಿಕೆ ಕಣಗಿಲು , ನಮನ , ಬಣ್ಣದಚೆಂಡು ಎಂಬ ಕವನ ಸಂಕಲನಗಳನ್ನು ಬರೆದಿದ್ದಾರೆ . ಗಡಿನಾಡನಲ್ಲಿದ್ದ ಇವರು ಅವರೆಲ್ಲರ ಪ್ರತಿನಿಧಿಯಾಗಿ ಏಕೀಕರಣದ ಕನಸ ಕಂಡವರು ಅದಕ್ಕಾಗಿಯೇ ಅನೇಕ ಕವನಗಳನ್ನು ಕಟ್ಟಿ ಜನರ ಮನದಲ್ಲಿ ಕೆಚ್ಚನ್ನು ಮೂಡಿಸಿದರು . ಆಶಯ : ಕನ್ನಡ ನಾಡಿನ ನಾಡಿನವರ ಭಾಷೆ ಕನ್ನಡ ನಾಡಭಾಷೆಯಾದ ಕನ್ನಡ ಇಂದು ವಿವಿಧ ಕಾರಣಗಳಿಂದ ನಾಡಿನವರಿಂದ ದೂರವಾಗುತ್ತದೆ . ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ .

ಪಪಂಚದಲ್ಲಿಯೇ ಅತ್ಯಂತ ವೈಜ್ಞಾನಿಕವಾಗಿ ಜೋಡಿಸಲ್ಪಟ್ಟ ವರ್ಣಮಾಲೆಯನ್ನು ಹೊಂದಿರುವ ಹೆಗ್ಗಳಿಕೆ ನಮ್ಮದು . ಇಂತಹ ಸುಂದರ ಭಾಷೆಯನ್ನು ನಮ್ಮ ನಾಡಿನಲ್ಲಿ ಜೊತೆಗೆ ನಾಡಿನ ಹೊರಗೂ ಪಸರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಕಥೆ ಬರೆಯುವುದು ಸಾಮರ್ಥ್ಯ : ಕಥೆಗಳನ್ನು ನಾಟಕಗಳಾಗಿ ನಾಟಕಗಳನ್ನು ಕಥೆಗಳಾಗಿ ಪರಿವರ್ತಿಸುವ ಕವಿತೆಗಳಿಗೆ ಸಾರಾಂಶ ಬರೆಯುವ ಸೃಜನಾತ್ಮಕಥೆಯನ್ನು ಬೆಳೆಸುವುದು .

ಸಾರಾಂಶ :

ಈ ಕವನ ಸಂಕಲನದಲ್ಲಿ ಕವಿ ಡಿ . ಎಸ್ ಕರ್ಕಿ ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡತನ ರ ಜಾಗೃತಿಗೊಳ್ಳಿ ಎಲ್ ಶಿಸುವ ಕಾರ್ಯವನ್ನು ಮಾಡುತ್ತಿದ್ದಾರೆ . ಕನ್ನಡದ , ಕನ್ನಡನುಡಿಯೆಂಬ ದೀಪವನ್ನು ಒಲವಿನಿಂದ ಹಳ್ಳೋಣ . ಬಹಳ ದಿನಗಳಿಂದ , ನಾಡುನುಡಿಯ ಬಗೆಗಿನ ಮರವಿನಿಂದಾಗಿ ಮೂಡಿರುವ ತಿರಸ್ಕಾರದ ಭಾವನೆಯನ್ನು ದೂರ ಮಾಡುತ್ತಾ ಕನ್ನಡದ ಕಂಪು ಎಲ್ಲೆ ಸೂಸಲಿ ಅಲ್ಲಿ ಭಾಗವಹಿಸುತ್ತಾ ಕನ್ನಡ ನಾಡಿನ ಯಾವುದೇ ಭಾಗದಲ್ಲೂ ಕನ್ನಡದ ಕಾಂತಿಯನ್ನು ಬೆಳಗೋಣ , ಹಳೆಯದನ್ನು ಮರೆತು , ಪ್ರಾಣವನೇ , ದೀಪವಾಗಿಸಿ ಒಲವಿನಿಂದ ಕನ್ನಡದ ದೀಪವನ್ನು ಹಚೋಣ . ಬಹುದೂರದವರೆಗೆ ಕಾಣುವಂತೆ ದೀಪವನ್ನು ಹಚ್ಚಿ ಆ ಬೆಳಕಿನಲ್ಲಿ ಕನ್ನಡ ತಾಯಿಯ ರೂಪ ಚಿರವಾಗಿರುವಂತೆ ಮಾಡುವೆವು ಮನದಲ್ಲಿನ ಯಾವುದೇ ಭಾವನೆಗಳು ಗಡಿನಾಡಿನ ಆಚೆ ಹೋಗುವುದಿಲ್ಲ . ಪ್ರೀತಿಯಿರುವಾಗ ಭಯದ ಮಾತೆ ಇಲ್ಲ . ನಾಡಿನ ಪ್ರೀತಿಯನ್ನು ಮನೆ – ಮನೆ ಮನ – ಮನಗಳಲ್ಲಿ ಕನ್ನಡದ ಮೂಲಕ ಹತ್ತೋಣ ನಮ್ಮ ಹಿರಿಯರು ಶ್ರಮಿಸಿ ಗಳಿಸಿದ ,ಉಳಿಸಿದ ಹೆಸರನ್ನು ಬೆಳಗಲು ಒಂದುಗೂಡೋಣ . ನಮ್ಮೆಲ್ಲರ ಮನಸ್ಸುಗಳನ್ನು ಒಂದಾಗಿಸಿ ಕನ್ನಡ ಮಾತೆಯನ್ನು ಪೂಜಿಸೋಣ ನಮ್ಮ ಉಸಿರಲ್ಲಿ ಶಕ್ತಿ ತುಂಬಿ ಮಂಗಳ ಗೀತೆಯನ್ನು ಹಾಡೋಣ , ಹುಚ್ಚು ಭಾವನೆಗಳನ್ನು ಕಟ್ಟಿಟ್ಟು ಕೆಟ್ಟದ್ದನ್ನು ನಾಶಮಾಡುತ್ತಾ ಕನ್ನಡದ ಉನ್ನತಿಗೆ ಶ್ರಮಿಸೋಣ ಕನ್ನಡ ತಾಯಿಯ ಮಮತೆಯ ಒಡಲಿಗೆ ಮಿಂಚೆಂಬ ಒಗ್ಗಟ್ಟಿನ ದೀಪವನ್ನಿಟ್ಟು ಬೆಳಗೋಣ . 

ಶಬ್ದಾರ್ಥ : 

  • ಹಚೇವು – ಹಚ್ಚುವೆವು 
  • ಕರುನಾಡು – ಕನ್ನಡನಾಡು
  • ಕೊಚೇವು – ಕತ್ತರಿಸುತ್ತೇವೆ 
  • ಸೂಸು – ಹರಡು , ಚಿಮುಕಿಸು
  •  ಕರಣ – ಒಡಲು 
  • ಶರೀರ – ಕಾಂತಿ , ತೇಜಸ್ಸು 
  • ಪಕಾಶ ಎರೆ – ಹೊಯ್ಯು 
  • ಹುರಿಗೊಳಿಸು – ಹಗ್ಗ ಮಾಡು , ಬಲಪಡಿಸು 
  • ಕೆಚ್ಚು – ಕೂಡುವಿಕೆ , ಬೆಸುಗೆ , ಸೇರಿಸು ; 
  • ಅಚ್ಚಳಿಯದೆ – ಅಂದಗೆಡದಂತೆ , ರೂಪುಗೆಡದಂತೆ ; 
  • ಒಂದುಗೂಡೇವು – ಒಂದಾಗಿ ಸೇರುತ್ತೇವೆ ;
  •  ನೀಡು . – ಬೀಸು , ಹೊರಹೊಮ್ಮು
  •  ಮಾಂಗಲ್ಯಗೀತೆ – ಮಂಗಳಕರವಾದ ಹಾಡ 
  • ಮರುಳು – ಹುಚ್ಚು – 
  • ಕಡೆ – ನಿವಾರಿಸು 
  • ಮೈಮರೆವು – ದೇಹದ ಅರಿವು ಇಲ್ಲವಾಗು , ಮೂರ್ಛ ;
  •  ಮಾತೆ – ತಾಯಿ , ಜನನಿ ; 
  • ಕೋಳ – ಹೊಲಸು ; 
  • ಕಂಪು – ಸುಂಗಂಧ , ಪರಿಮಳ 
  • ನಾಡು – ಜನವಸತಿಯುಳ್ಳ ಪ್ರದೇಶ , ರಾಜ್ಯ ,
  •  ಡೆಂಡೆ – ಗ್ರಹಿಸು , ಹಿಡಿದಿಟ್ಟುಕೊ ; 
  • ಹೊಸೆ – ಹುರಿ ಮಾಡು , ಹೆಣೆ ;
  •  ಹರಿವು – ಪವಹಿಸು , ಹರಿಯುವಿಕೆ ; 
  • ಬೀರು – ಹರಡು ; 
  • ಅಚ್ಚಳಿ – ಅಂದಕೆಡು ; 
  • ತೋರು – ಕಾಣುವಂತೆ ಮಾಡು ; 
  • ಒಡಲು – ಹೊಟ್ಟೆ 
  • ತೂರು – ಎಸೆ , ನೂಕು .

7th Standard Chagali Iruve Kannada Notes | 7ನೇ ತರಗತಿ ಚಗಳಿ ಇರುವೆ ಕನ್ನಡ ನೋಟ್ಸ್

 

7th Standard Chagali Iruve Kannada Notes | 7ನೇ ತರಗತಿ ಚಗಳಿ ಇರುವೆ ಕನ್ನಡ ನೋಟ್ಸ್



ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ , 

ಪ್ರಶ್ನೆ 1 , ಕೋಟ್ಟೆ ಎಂದರೇನು ? 

ಉತ್ತರ : ಚಗಳಿ ಇರುವೆಗಳು ಎಲೆಗಳನ್ನು ಒಂದಕ್ಕೊಂದು ಸೇರಿಸಿ ಕಟ್ಟುವ ಗೂಡನ್ನು ಕೊಟ್ಟೆ ‘ ಎನ್ನುತ್ತಾರೆ. 

ಪ್ರಶ್ನೆ 2 . ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ಏನನ್ನು ಬಳಸುತ್ತವೆ ?

 ಉತ್ತರ : ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ತಮ್ಮ ದೇಹದಿಂದ ಉತ್ಪತ್ತಿಯಾಗುವ ರೇಷ್ಮೆಯಂತ ನೂಲನ್ನು ಬಳಸುತ್ತದೆ . 

ಪ್ರಶ್ನೆ 3 . ಇವು ತಮ್ಮ ಸಂಗಡಿಗರಿಗೆ ಯಾವ ರಾಸಾಯನಿಕದ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ ?

 ಉತ್ತರ : ತಮ್ಮ ಸಂಗಡಿಗರಿಗೆ ಫಿರಮೊನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುವುದರ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ .

ಪ್ರಶ್ನೆ 4 , ಚಗಳಿ ಇರುವೆಗಳಂತೆಯೇ ಸಂಘಜೀವನವನ್ನು ನಡೆಸುವ ಇತರ ಜೀವಿಗಳು ಯಾವುವು ? 

ಉತ್ತರ : ಚಗಳಿ ಇರುವೆಗಳಂತೆಯೇ ಸಂಘಜೀವನವನ್ನು ನಡೆಸುವ ಇತರ ಜೀವಿಗಳು ಜೇನುಹುಳು , ಕರಿಗೊದ್ದ . ಕೆಂಪು ಇರುವೆ …. ಇತ್ಯಾದಿ . 

 

ಆ . ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ . 

ಪ್ರಶ್ನೆ 1 . ಚಗಳಿ ಇರುವೆಗಳ ಶಿಸ್ತಿಗೆ ಒಂದು ಉದಾಹರಣೆ ಕೊಡಿ . 

ಉತ್ತರ : ಕಟ್ಟುವ ರೀತಿ ನಿಜವಾಗಲೂ ಇರುವೆಗಳು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತದೆ . ಎಲೆಯನ್ನು ಬಗ್ಗಿಸಿ ಇರುವೆಗಳು ಒಂದರ ಕಾಲು ಇನ್ನೊಂದು ಹಿಡಿದುಕೊಂಡು ಜೋತಾಡುತ್ತಾ ಕಟ್ಟುವುದು . 

ಪ್ರಶ್ನೆ 2 , ಕೆಲಸಗಾರ ಇರುವೆಗಳ ಕೆಲಸವೇನು ? 

ಉತ್ತರ : ಕೆಲಸಗಾರ ಇರುವೆಗಳು ತಿಗಣೆ ಮತ್ತು ಜಿಗಿ ಹುಳುಗಳನ್ನು ಹಿಡಿದು ತಂದು ತಾವು ಕೊಟ್ಟೆ ಕಟ್ಟಿದ ಮರದ ಕೊಂಬೆಗಳ ಮೇಲೆ ಅವುಗಳನ್ನು ಸಾಕುವುದು , ಚಗಳಿಗಳ ಜೀವನದಲ್ಲಿ ಇದಕ್ಕೆ ಅಪಾರ ಪ್ರಾಮುಖ್ಯತೆ ಇದೆ . ಅವು ತರುವ ಕೀಟಗಳ ಉಚ್ಚಿಷ್ಯ ( ಎಂಜಲು)ಸಿಹಿಯಾದ ಮಧುವಾಗಿರುವುದರಿಂದ ಅದು ಇರುವೆಗಳಿಗೆ ಆಹಾರವಾಗುತ್ತದೆ . 

ಪ್ರಶ್ನೆ 3 . ಚಗಳಿ ಇರುವೆಗಳನ್ನು ಹಿಮ್ಮೆಟ್ಟಿಸುವುದು ಮನುಷ್ಕರಿಗೂ ಏಕೆ ಕಪ್ಪ ?

 ಉತ್ತರ : ಚಗಳಿ ಇರುವೆಗಳಲ್ಲಿ ಶಿಸ್ತು , ಧೈರ್ಯ ಮತ್ತು ಸಹ ಕಪ್ಪ , ಇವುಗಳನ್ನು ಹಿಡಿಯಲು ಹೋದರೆ ಬದಲಿಗೆ ತಿರುಗಿ ನಿಂತು ಕಚ್ಚಲು ಹೋದರೆ ಓಡುವುದರ ಬದಲಿಗೆ ತಿರುಗಿ ನಿಂತು ನೆಗೆದು ಕಚ್ಚಲು ಸಿದ್ದವಾಗುತ್ತವೆ. ಅಷ್ಟೆ ಅಲ್ಲದೇ ತನ್ನ ಹಿಂಭಾಗವನ್ನು ಮೇಲೆತ್ತಿ ಹೊಟ್ಟೆ ಅಡಿಯಲ್ಲಿರುವ ಗ್ರಂಥಿಗಳಿಂದ ಅಪಾಯದ ಪಿರಮೋನ್‌ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುತ್ತವೆ. 

ಇ . ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ ?

 ಪ್ರಶ್ನೆ 1 . ಚಗಳಿ ಇರುವೆಗಳು ತಮ್ಮ ಗೂಡನ್ನು ಹೇಗೆ ನಿರ್ಮಿಸುತ್ತವೆ ? 

ಉತ್ತರ : ಚಗಳಿ ಇರುವೆಗಳು ಎಲ್ಲಿ ಗೂಡು ಕಟ್ಟಬೇಕು ಎಂದು ನಿರ್ಧರಿಸಿ , ಮೊದಲು ಎರಡೋ ಮೂರೋ ಅಕ್ಕಪಕ್ಕದ ಎಲೆಗಳನ್ನು ಸೇರಿಸಿ ಪೊಟ್ಟಣ ಕಟ್ಟಿದಂತೆ ಗೂಡು ಕಟ್ಟುತ್ತವೆ . ನಂತರ ಅಕ್ಕಪಕ್ಕದ 

ಹಲವಾರು ಎಲೆಗಳನ್ನು ಹೊಂದಿಸಿ ಮಾಳಿಗೆಗಳನ್ನು ನಿರ್ಮಿಸುತ್ತಾ ಗೂಡನ್ನು ದೊಡ್ಡ ಮಾಡುತ್ತವೆ . ಇದರ ಶರೀರಕ್ಕಿಂತ ನೂರಾರು ಪಟ್ಟು ವಿಸ್ತಾರವಾಗಿಯೂಬಲವಾಗಿಯೂ ಇರುವ ಎಲೆಗಳನ್ನು ಬಗ್ಗಿಸಿ ಅದನ್ನು ದಾರದಿಂದಅಂಚನ್ನು ಹೊಲೆಯಲು ಅನೇಕ ಇರುವೆಗಳು ಒಂದರ ಕಾಲನ್ನುಇನ್ನೊಂದು ಹಿಡಿದುಕೊಂಡು ಜೋತಾಡುತ್ತಾ ಮೇಲಿನಿಂದ ಕೆಳಗೆ ಬರುತ್ತದೆ . ಈ ಕಾರ್ಯದಲ್ಲಿ ಶಿಸ್ತಿನ ಸಿಪಾಯಿಯಂತೆ ಕರಾರುವಕ್ಕಾಗಿ ಕೆಲಸ ಮಾಡುತ್ತವೆ . ಈ ರೀತಿ ಗೂಡನ್ನು ನಿರ್ಮಿಸುತ್ತದೆ . 

ಪ್ರಶ್ನೆ 2: ಚಗಳಿ ಇರುವೆಗಳು ಉಪಕಾರಿಯೂ ಹೌದು , ಉಪದ್ರವಕಾರಿಯೂ ಹೌದು .ಈ ಹೇಳಿಕೆಯನ್ನು ವಿವರಿಸಿ .

 ಉತ್ತರ : ಚಗಳಿ ಇರುವೆಗಳು ತಮ್ಮ ಆಹಾರಕ್ಕಾ ಕ್ಷಾಂತರ ಕೀಟಗಳನ್ನು ಹಿಡಿದು ತಂದು ಕೊಲ್ಲುವುದರಿಂದ ಸಹಾಯ ಮಾಡಿದಂತಾಗುತ್ತದೆ . ಈ ಕೀಟಗಳಿಂದ ಆಗುವ ಹಾನಿಗಳು ತಪ್ಪಿ 

ಇರುವೆಗಳು ರೈತಮಿತ್ರ ಎನಿಸಿಕೊಳ್ಳುತ್ತದೆ . ಹಾಗೆಯೇ ಜಿಗಿ ಹುಳುಗಳನ್ನೂ , ತಿಗಣೆಗಳನ್ನು ಗೂಡು ಮಾಡಿರುವ ಮರ ಗಿಡಗಳಲ್ಲೆಲ್ಲಾ ತಂದು ಸಾಕುವುದರಿಂದ ಈ ಉಪದ್ರವಕಾರಿ . ಹಚ್ಚಿ ತೊಂದರೆ ಕೊಡುತ್ತದೆ . ಆದುದರಿಂದ ಇದನ್ನು ಉಪಕ್ರಿಯೂ ಹೌದು ಉಪದ್ರಕಾರಿಗಳು ಹೌದು ಎಂಬುದನ್ನು ತಿಳಿಯಬಹುದು . 

ಪ್ರಶ್ನೆ 3 . ಕಪ್ಪಕ್ಕೆ ಹೆದರಿ ಓಡಬಾರದು , ತಿರುಗಿ ನಿಂತು ಎದುರಿಸಬೇಕೆಂಬ ಸಂದೇಶವನ್ನು ನಾವು ಇವುಗಳ ಜೀವನದಿಂದ ಹೇಗೆ ಕಲಿಯಬಹುದು ?

ಉತ್ತರ : ಮನುಷ್ಕನೇನಾದರೂ ಚಗಳಿ ಇರುವೆಗಳನ್ನು ಹಿಡಿಯಲು ಅಥವಾ ಹಿಂಸಿಸಲು ಹೋದರೆ , ಅವು ತಮ್ಮ ಸ್ವಾರ್ಥವನ್ನು ಮಾತ್ರ ನೋಡಿಕೊಂಡು ಓಡಿ ಹೋಗುವುದಿಲ್ಲ . ಅದರ ಬದಲಿಗೆ ತಿರುಗಿ ನಿಂತು , ನೆಗೆದು ಕಚ್ಚಲು ಸಿದ್ದವಾಗುತ್ತದೆ . ಎಲ್ಲ ಚಗಳಿ ಅಪೇ ಅಲ್ಲ ತನ್ನ ಹೊಟ್ಟೆಯ ಅಡಿಯಲ್ಲಿರುವ ಗಂಥಿಗಳಿಂದ ಅಪಾಯದ ಫೆರಮೋನ್ ಎಂಬ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸಿ , ಕೆಲವೇ ಕ್ಷಣಗಳಲಿರ್ಲಿ ಇರುವೆಗಳೂ ಹಾಜರಾಗುವಂತೆ ಮಾಡುತ್ತ ಇದನ್ನು ನೋಡಿ ನಾವು ಕಪ್ಪಕ್ಕೆ ಹೆದರಿ  ನಿಂತು ಎದುರಿಸಬೇಕೆಂಬ ಸಂ ಕಲಿಯಬಹುದು . ಓಡಬಾರದು , ತಿರುಗಿ ನಿಂತು ಎದುರಿಸಬೇಕು ಸಂದೇಶವನ್ನ ಕಲಿಯಬಹುದು . 

 

 ಈ . ಖಾಆ ಜಾಗವನ್ನು ಸಾಕ್ತ ಪದಗಳಿಂದ ಭರ್ತಿ ಮಾಡಿ . 

       1.ಚಗಳಿ ಇರುವೆಗಳಿಗೆ ಮೂಲ ಇರುವೆ .

  1. ದನ ಸಾಕುವ ಗೋಪಾಲಕರನ್ನು ಹೋಲುವ ಇರುವೆಗಳು
  2. ಚಗಳಿ ಇರುವೆಗಳ ಗೂಡನ್ನು – ಎಂದು – ಕರೆಯುತ್ತಾರೆ .
  3. ಒಂದು ಚಗಳಿ ಇರುವೆ ಗೂಡಿನಲ್ಲಿ ಸುಮಾರು ಇರುವೆಗಳು
  4. ಇರುವೆಗಳಿಂದ ಒಸರುವ ರಾಸಾಯನಿಕ 

1. ರಾಣಿ

2. ಕೆಲಸಗಾರ ಇರುವೆಗಳು

3. ಕೊಟ್ಟೆ

4. 5 ರಿಂದ 10 ಲಕ್ಷ

5. ಫಿರಮೋನ್

ಭಾಷಾ ಚಟುವಟಿಕೆ

ಅ . ಕೆಳಗಿನ ಪಟ್ಟಿಯಲ್ಲಿ ಅನೇಕ ವಾಕ್ಯಗಳನ್ನು ಒಳಗೊಂಡಿರುವ ಪದಗಳಿವೆ . ನಿಮ್ಮಿಂದ ಎಷ್ಟು ವಾಕ್ಯಗಳನ್ನು ಪತ್ತೆ ಹಚ್ಚಲು ಸಾಧ್ಯ ? ಪ್ರಯತ್ನಿಸಿ .

 ಮಾದರಿ : ಮುಂಜಾನೆ ಬೇಗ ಏಳಬೇಕು . 

  • ಮುಂಜಾನೆ ಬೇಗ ಏಳಬೇಕು . 
  •  ಭಾನುವಾರ ಶಾಲೆಗೆ ರಜೆ . 
  • ಮುಂಜಾನೆ ಕೋಳಿಯು ಕೂಗುತ್ತದೆ . 
  • ರಮೇಶ ಶಾಲೆಗೆ ಹೋದನು .
  •  ಸಲೀಮ ಒಳ್ಳೆಯವನು . ಸೂರ್ಯ ಬೆಳಕು ಬೀರುತ್ತಾನೆ . 

 

ಅ . ಕೆಳಗಿನ ವಾಕ್ಯಗಳನ್ನು ಗಮನಿಸಿ ಓದಿ , ಅಲ್ಲಿ ಯಾವ ಭಾವನೆ ಪ್ರಮುಖವಾಗಿ ವ್ಯಕ್ತವಾಗಿದೆ ಎಂಬುದನ್ನು ಗಮನಿಸಿ ಅಂಥಹದೇ  ಇದು ವಾಕ್ಯವನ್ನು ನೀವು ರಚಿಸಿರಿ , 

 

ಪ್ರಶ್ನೆ 1 . ಸ್ವಾಮಿ ! ಈ ಕುರ್ಚಿಯಲ್ಲಿ ದಯಮಾಡಿ ಕುಳಿತುಕೊಳ್ಳಿ ( ಗೌರವ ) 

ಉತ್ತರ : ಗುರುಗಳ , ವಂದನೆಗಳು , ದಯಮಾಡಿ ಒಳಗೆ ಬನ್ನಿ .. 

 

ಪ್ರಶ್ನೆ 2 . ದೇವ ದೇವ ನಮಗೆ ಒಳಿತನ್ನು ಮಾಡು . ( ಪ್ರಾರ್ಥನೆ ) 

ಉತ್ತರ : ದೇವರೇ , ಎಲ್ಲರಿಗೂ ಒಳ್ಳೆಯದನ್ನು ಮಾಡು .

 

ಪ್ರಶ್ನೆ 3 . ಅಯ್ಯೋ ! ಮಗು ಎಡವಿ ಬಿದ್ದಿದೆ . ( ಕಾಳಜಿ ) 

ಉತ್ತರ : ಅಯೋ , ಹಾಲೆಲ್ಲಾ ಚೆಲ್ಲಿ ಹೋಯಿತು . 

 

ಪ್ರಶ್ನೆ 4 . ಭಲೇ ಭಲೇ ! ನೀನು ನಮ್ಮ ಊರಿನ ಮಾನ ಕಾಪಾಡಿ ! ( ಮೆಚ್ಚುಗೆ ) 

ಉತ್ತರ : ಭೇಷ್ , ಅಂತೂ ನೀನು ಗೆದ್ದಿರುವುದು ಎಲ್ಲರಿ ಸಂತೋಷ . 

 

ಇ . ಯಾವ ರೀತಿ ಓದಿದರಾ ಅರ್ಥ ವ್ಯತ್ಯಾಸವಾಗದಿ ಪದಗಳನ್ನು ಗಮನಿಸಿ . 

ಉತ್ತರ : ನಯನ , ದಡದ , ಕನಕ ನಮನ , ಜಲಜ , ಗುನುಗು … ಇತ್ಯಾದಿ .