ಬಹುಮಾನ ಪದ್ಯ ಭಾಗ 4
ಕೃತಿಕಾರರ ಪರಿಚಯ :
ಕುವೆಂಪು ( ೧೯೦೪ ಡಿಸೆಂಬರ್ ೨೯ – ೧೯೯೪ ನವೆಂಬರ್ ೧೧ ) – ಕನ್ನಡದಲ್ಲಿ ಬರೆದ ರಾಷ್ಟ್ರಕವಿ . ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಅಲ್ಲೇ ಪ್ರಾಧ್ಯಾಪಕರಾಗಿ ಕುಲಪತಿಗಳಾಗಿ ಕೆಲಸ ಮಾಡಿದರು, ಸಣ್ಣಕತೆ , ಕವಿತೆ , ಕಾದಂಬರಿ , ನಾಟಕ , ವಿಮರ್ಶೆ , ಮೀಮಾಂಸೆ , ಜೀವನಚರಿತ್ರೆ ಮುಂತಾದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಕುವೆಂಪು ಅವರು ತಾವು ಬರೆದ “ ಶ್ರೀ ರಾಮಾಯಣ ದರ್ಶನಂ ” ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು . ಕೊಳಲು ಇವರ ಮೊದಲ ಕವನಸಂಕಲನ . ಅನಂತರ ಪಾಂಚಜನ್ಯ , ನವಿಲು , ಕಲಾಸುಂದರಿ , ಕೃತ್ತಿಕೆ , ಅಗ್ನಿಹಂಸ , ಪಕ್ಷಿಕಾಶಿ , ಷೋಡಶಿ , ಅನಿಕೇತನ ಮುಂತಾದ ಹಲವು ಕವನ ಸಂಕಲನಗಳನ್ನು ಪ್ರಕಟಿಸಿದರು . ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಇವರ ಎರಡು ಬೃಹತ್ ಕಾದಂಬರಿಗಳು , ಕರ್ನಾಟಕರತ್ನ , ಪಂಪಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಪದ್ಮಭೂಷಣ , ಪದ್ಮವಿಭೂಷಣ ಮುಂತಾದ ಹಲವು ಪ್ರಶಸ್ತಿಗಳು ಸಂದಿವೆ . ಇವರು ಕನ್ನಡದ ಎರಡನೆಯ ರಾಷ್ಟ್ರಕವಿಗಳು ( ಮೊದಲನೆಯವರು ಮಂಜೇಶ್ವರ ಗೋವಿಂದ ಪೈಗಳು ), ಪ್ರಸ್ತುತ ಕವಿತೆಯನ್ನು ಕುವೆಂಪು ಅವರ “ ನವಿಲು ” ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿದೆ .
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ1. ಜಗತ್ತು ಜಮ್ಮೆಂದುದು ಯಾವಾಗ?
ಕುಹೂ ಕುಹೂ ಕಿಲವಾಣಿ ಕೇಳಿದಾಗ ಜಗತ್ತು ಜುಮ್ಮೆಂದಿತು.
2. ಕೋಗಿಲೆ ಕೂಗನ್ನು ಯಾವುದು ಮಾರ್ದನಿಸಿತು?
ಕೋಗಿಲೆ ಕೂಗನ್ನು ನೀರವ ಪರ್ವತ ಕಾನನ ಶ್ರೇಣಿಯು ಮಾರ್ಗನಿಸಿತು.
3. ಗಾನವನ್ನು ಕೇಳಿದ ನೀಲಾಕಾಶ ಏನು ಮಾಡಿತು?
ಗಾನವನ್ನು ಕೇಳಿದ ನೀಲಾಕಾಶ ಸುಮ್ಮನೆ ಮಾತನಾಡದೆ ಬಣ್ಣಿಸುತ್ತಿತ್ತು.
4. ಕಣಿವೆಯಲ್ಲಿದ್ದ ಸರೋವರ ಕೋಗಿಲೆ ಗಾನಕ್ಕೆ ಹೇಗೆ ಪ್ರತಿಕ್ರಿಯೆ ಕೊಟ್ಟಿತು?
ಕಣಿವೆಲ್ಲಿದ್ದ ಸರೋವರ ಕೋಗಿಲೆಯ ಗಾನ ಕೇಳುತ್ತಾ ತನ್ನ ತೆರೆಗಳಿಂದ ಚಪ್ಪಾಳೆ ತಟ್ಟಿತು.
5. ಕೋಗಿಲೆಯ ಕೂಗನ್ನು ಹಾಲಿಸಿದ ಮನುಷ್ಯ ಏನೆಂದು ಹೇಳಿದನು?
ಕೋಗಿಲೆಯ ಕೂಗನ್ನು ಹಾಲಿಸಿದ ಮನುಷ್ಯನು ಮಲೆಗಳಲುಲಿಯುವ ಓ ಕೂಗಿಲೆಯೇಯೇ ಬಲು ಚೆಲುವಿನ ಇಂಗ್ಲಿಷ್ಗೆ ತರ್ಜುಮೆ ಮಾಡಿದರೆ ದೊರೆಯುವುದು ನೊಬೆಲ್ ಬಹುಮಾನ ಅರಣ್ಯರೋಧನ ಸುಮ್ಮನೆ ಹಾಡುವೆ ಹೇಳುವವರಾರಿಲ್ಲಿ ಎಂದು ಹೇಳಿದನು.
6. ಮನುಷ್ಯನ ಮಾತಿಗೆ ಕೋಗಿಲೆ ಕೊಟ್ಟ ಉತ್ತರವೇನು?
ಮನುಷ್ಯನ ಮಾತಿಗೆ ಕೋಗಿಲೆಯು ಖುಹು ಎಂದು ತನ್ನ ಪಾಡಿಗೆ ತಾನು ಉತ್ತರದ ರೂಪದಲ್ಲಿ ಹಾಡಿತು.
ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.
1. ಕೋಗಿಲೆಯ ಗಾನಕ್ಕೆ ಪ್ರಕೃತಿ ಹೇಗೆ ಸ್ಪಂದಿಸಿತು?
ಉತ್ತರ: ಕೋಗಿಲೆಯ ಕೂಗು ಎಂಬ ಕುಕ್ಕಿಲ ವಾಣಿಯ ಕೇಳಿ ರೋಮಾಂಚನದಿಂದ ಜಗ ಜುಮ್ ಎಂದಿತು ಅದರ ಗಾನವ ಕೇಳಿ ಮಹಾದಾಕಾಶ ಮುಖಸ್ಮಿತವಾಗಿ ಬಣ್ಣಿಸ ತೊಡಗಿತು. ಹೀಗೆ ಬಗೆ ಬಗ್ಗೆ ಕಂದಕ ದೊಳಗಿದ್ದ ಸರೋವರ ತೆರೆ ಚಪ್ಪಾಳೆ ಸಿಕ್ಕಿತು ಹೀಗೆ ಬಗೆ ಬಗೆಯಾಗಿ ಕೋಗಿಲೆಯ ಗಾನಕ್ಕೆ ಪ್ರಕೃತಿಗೆ ಸ್ಪಂದಿಸಿತು.
2. ಕೋಗಿಲೆಯ ಗಾನವನ್ನು ಆಲಿಸಿ, ನೊಂದು ಮನುಷ್ಯ ಏನಂದನು?
ಉತ್ತರ : ಕೋಗಿಲೆ ಗಾನವನ್ನು ಹಲಸಿನೊಂದು ಒಬ್ಬ ಮನುಷ್ಯನು ಮಲೆಗಳಲ್ಲಿ ಹುಲಿಬಾ ಹೋ ಕೋಗಿಲೆ ಬಲು ಚೆಲುವಿದೆ ನಿನ್ನೀಗಾನ ಇಂಗ್ಲಿಷ್ ಗೆ ಕರ್ಚುಮೆ ಮಾಡಿದರೆ ದೊರೆಯುವುದು ನೊಬೆಲ್ ಬಹುಮಾನ ನಿನ್ನಿಗಾನ ಅರಣ್ಯ ರೋಧನ ಸುಮ್ಮನೆ ಹಾಡುವೆ ಕೇಳುವರು ಯಾರಿಲ್ಲಿ ಎಂದು ನೋಡಿದನು.
3. ಮನುಷ್ಯನ ಮಾತಿಗೆ ಕೋಗಿಲೆಯು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿತು?
ಕೋಗಿಲೆಯ ಮಧುರ ಧ್ವನಿ ಕೇಳುವವರಿಲ್ಲದ ಈ ಕಾಡಿನಲ್ಲಿ ಅದರ ಗಾನ ಅರಣ್ಯ ರೋಧನ ವೆಂದು ನುಡಿದನು ಅವನ ಮಾತಿಗೆ ಯಾವ ಪ್ರತಿಕ್ರಿಯೆಯು ನೀಡದೆ ಹಾಡುವುದು ನನ್ನ ಕರ್ಮ ಕೇಳದಿರಲಿ ಎಂಬುವಂತಿತ್ತು ಕೋಗಿಲೆಯ ಪ್ರತಿಕ್ರಿಯೆ.
ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ.
1. ಕೋಗಿಲೆಯ ಗಾನಕ್ಕೆ ಪ್ರಕೃತಿ ಮತ್ತು ಮನುಷ್ಯರ ಪ್ರತಿಕ್ರಿಯೆಗಳು ಹೇಗಿದ್ದವು?
ಕುಹೂ ಕುಹೂ ಎಂಬ ಕೋಗಿಲೆಯ ಮಧುರ ವಾಣಿಯ ಕೇಳಿ ಜಗವು ರೋಮಾಂಚನದಿಂದ ಜುಮ್ಮೆಂದಿತು. ನಿಧ್ವ೯ನಿಯ ಪರ್ವತ ಕಾನನ ಶ್ರೇಣಿಗಳು ಮೊದಲಿಂದ ಮರ ದ್ವನಿ ಕೈದವು ಕೋಗಿಲೆಯ ಹಿಂಪಿಗೆ ಮಹಾಹಾಕಾಶವೇ ಮೂಕ ವಿಸ್ಮಿತವಾಯಿತು ಅಲ್ಲಿ ಭಾಷೆಗೆ ನಿಲುಕದ ಬಣ್ಣನೆ ಇತ್ತು ಕಂದಕದ ಅಡಿಯಲ್ಲಿದ್ದ ಸರೋವರ ಒಂದು ಸಂತಸಗೊಂಡು ತನ್ನ ತೆರೆಗಳ ಚಪ್ಪಾಳೆ ತಟ್ಟಿತು ತನ್ನನ್ನೇ ತಾನು ಮರೆತು ತನ್ನ ಮಧುರ ಗಂಟದಿಂದ ಕೋಗಿಲೆಯು ಹಾಡನ್ನು ಹಾಡುತ್ತಿತ್ತು.
ಇಂತಹ ಮಧುರ ದನಿಯನ್ನು ಹಾಲಿಸಿದ ಓರ್ವನು ನೊಂದುಕೊಂಡು ಕೋಗಿಲೆಗೆ ಮಲೆಗಳಲ್ಲಿ ಹುಲಿಯುವ ಹೊಗುಲಿಯೇ ಬಲು ಚೆಲುವೆ ಗಾನ ಇಂಗ್ಲೀಷಿಗೆ ಮಾಡಿದರೆ ದೊರೆಯುವುದು ನೋಬೆಲ್ ಬಹುಮಾನ ಇದು ಅರಣ್ಯರೋಧನ ಸುಮ್ಮನೆ ಹಾಡುವೆ ಕೇಳುವವರು ಯಾರಿಲ್ಲ ಎಂದು ಕೋಗಿಲೆಯ ಗಾನಕ್ಕೆ ಪ್ರಕೃತಿ ಮತ್ತು ಮನುಷ್ಯ ಪ್ರತಿಕ್ರಿಹಿಸಿದನು.
2. ಕೋಗಿಲೆಯ ಕುಹುವಾಣಿಯನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು?
ಪ್ರಕೃತಿದತ್ತ ಕೋಗಿಲೆಯ ಇಂಪಾದ ಧ್ವನಿಗೆ ಮರುಳಾಗದವರು ಯಾರು ಇಲ್ಲ ಅದು ತನ್ನ ಪಾಡಿಗೆ ತಾನು ಕಾಡುಮೇಡುಗಳಲ್ಲಿ ಹಾಡಿಕೊಂಡಿರುತ್ತದೆ ಅದಕ್ಕೆ ಯಾವ ಗೊಡವೆಯೂ ಇಲ್ಲ ಯಾರಾದರೂ ಅದು ಕೇಳಲಿ ಕೇಳದಿರಲಿ ಹಾಡುವುದು ತನ್ನ ಕರ್ಮವೆಂದು ಅರಿತು ಹಾಡಿದರೆ ಅದನ್ನು ಕೇಳಿದ ವ್ಯಕ್ತಿ ನೀನು ಇಂಗ್ಲಿಷಿನಲ್ಲಿ ಹಾಡಿದರೆ ನೋಬೆಲ್ ಪ್ರಶಸ್ತಿ ಬಂದಿತೆಂದು ನೋಡಿದಾಗ ಕೋಗಿಲೆಯು ಕುಹು ಎಂಬ ವಾಣಿಯಿಂದ ಉತ್ತರಿಸಿತು. ಆದರೆ ಆ ಧ್ವನಿಯು ಇಡೀ ಪ್ರಕೃತಿಯಲ್ಲಿ ಒಂದು ಸಂಚಲನವನ್ನು ಸೃಷ್ಟಿ ಸುತ್ತದೆ ನಾವು ಯಾವ ಕೆಲಸದಲ್ಲಿ ಪರಿಣಿತರು ಅದನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಬೇಕು ಲೋಕದ ಟೀಕೆ ಟಿಪ್ಪಣಿಗಳಿಗೆ ನಾವು ತಲೆಕೆಡಿಸಿಕೊಳ್ಳಬಾರದು ನಮ್ಮ ಅಭಿವ್ಯಕ್ತಿಯನ್ನು ನಮ್ಮ ಸಹಜ ಭಾಷೆ, ದೇಶೀಯ ನುಡಿ ಮಾತೃಭಾಷೆಯಲ್ಲಿ ಸರಳ ಆಡು ನುಡಿಯಲ್ಲಿ ಮಾಡಿದರೆ ಅದು ಜೀವಂತಿಕೆಯಿಂದ ಕೂಡಿರುತ್ತದೆ ಅನ್ಯ ಭಾಷೆಯಲ್ಲಿ ಅಭಿವ್ಯಕ್ತಿ ಎಷ್ಟಿದ್ದರೂ ಕೃತಕ.
ಈ ಪದ್ಯದಲ್ಲಿರುವ ಕೋಗಿಲೆಯ ಕುಹವಾಣಿಯು ಕೇವಲ ಸಾಂಕೇತಿಕವಾಗಿರುವುದು ಬೇರೆಯವರ ಇಷ್ಟಗಳನ್ನು ಪರಿಗಣಿಸದೆ ಪ್ರಕೃತಿ ಸಹಜವಾಗಿರಬೇಕೆಂದು ಅರ್ಥಿಸಿಕೊಳ್ಳಬೇಕು.
ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ
1. ಮರುದನಿಗೈದಿತು ಮುದತಾಳಿ
ಪ್ರಸ್ತುತ ಮುಖ್ಯಮಂತ್ರಿ ಬರೆದಿರುವ ಬಹುಮಾನ ಎಂಬ ಪದ್ಯದಿಂದ ಆಯ್ದುಕೊಳ್ಳಲಾದ ನವಿಲು ಎಂಬ ಕವನ ಸಂಕಲ ದಿಂದ ಆಯ್ಕೆಮಾಡಿಕೊಳ್ಳಲಾಗಿದೆ.
ಕೋಗಿಲೆಯು ಕೂಹು ಎಂಬ ಕುಕಲವಣಿಯಿಂದ ಗಾನವನ್ನು ಹಾಡಿದಾಗ ಅದನ್ನು ಕೇಳಿದ ಜಗವೇ ರೋಮಾಂಚನಗೊಂಡಿತು ಅದರ ಇಂಪಾದ ಧ್ವನಿಗೆ ನೀರವ ಪರ್ವತ ಕಾನನಗಳೆಲ್ಲವೂ ಅತ್ಯಂತ ಸಂತೋಷದಿಂದ ಮುದದಿಂದ ಮರುದ್ವನಿಯನ್ನು ನೀಡಿದವು ಎಂಬುದು ಇಲ್ಲಿನ ಸಂದರ್ಭವಾಗಿದೆ.
ನಿಜ೯ನ ಪ್ರದೇಶ ಪರ್ವತ ಶ್ರೇಣಿಗಳಲ್ಲಿ ಮರು ಧ್ವನಿ ಸಹಜವಾದರೂ ಕವಿಯು ಕೋಗಿಲೆಯ ಇಂಪಿಗೆ ಅತಿ ಸಂತೋಷಗೊಂಡು ಪ್ರತಿಧ್ವನಿಸುವುದು ಇಲ್ಲಿನ ಸ್ವಾರಸ್ಯವಾಗಿದೆ.
2. ಬಲು ಚೆಲುವಿದೆ ನಿನ್ನೀಗಾನ
ರಾಷ್ಟ್ರಕವಿ ಕುವೆಂಪುರವರು ಬರೆದಿರುವ ನವಿಲು ಎಂಬ ಕವನ ಸಂಕಲನದಿಂದ ಆಯ್ದು ಬಹುಮಾನ ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆ
ಕೋಗಿಲೆಯು ತನ್ನನ್ನೇ ಮರೆತು ಮಾಧುರ್ಯದಿಂದ ಕುಹು ಕುಹು ಎಂದು ಕೂಗಿತು. ಅದನ್ನು ಆಲಿಸಿದವರು ವ್ಯಕ್ತಿಯು ಮಲೆಗಳಲ್ಲಿ ಉಲಿಯುವ ಹೊಗಲಿಗೆ ನಿನೀಗಾನದಲ್ಲಿ ಚೆಲುವಿದೆ ಎಂದು ನುಡಿಯುತ್ತದೆ.
ಕೋಗಿಲೆಯ ಧ್ವನಿ ಅತ್ಯಂತ ಮಧುರವಾಗಿತ್ತು ಎಂಬ ಮಾತು ಇಲ್ಲಿ ವಾಕ್ಯವಾಗಿದ್ದರು ಒಬ್ಬರ ನೈಜ ಸೃಷ್ಟಿಯನ್ನು ಕೊಂಡಾಡುವಿಕೆಯು ಎಲ್ಲಿ ದ್ವನಿಸುತ್ತದೆ.
3. ಅರಣ್ಯರೋಧನ ಸುಮ್ಮನೆ ಹಾಡುವೆ
ಕಾನನ ಪರ್ವತ ಶ್ರೇಣಿಗಳಲ್ಲಿ ಒಂದು ಕೋಗಿಲೆಯು ಮಾಧುರ್ಯದಿಂದ ಮೈ ಮರೆತು ಕುಹೂ ಕುಹೂ ಎಂದು ಕೂಗಿತು ಅದನ್ನು ಕೇಳಿದ ಊರ್ವನು ಮಲೆಗಳಲ್ಲಿ ಉಲಿಯುವ ಕೋಗಿಲೆ ಮಾಡಿದರೆ ಸುಮ್ಮನೆ ಹಾಡುವೆ ಕೇಳುವವರು ಯಾರಿಲ್ಲ ಎಂದು ನೋಂದ ವ್ಯಕ್ತಿ ಒಬ್ಬನು ಕೋಗಿಲೆಗೆ ಸೂಚನೆಯ ಒಂದನ್ನು ಕೊಡುವನು.
ಕೋಗಿಲೆ ಹಾಡು ಅತ್ಯಂತ ಅದ್ಭುತವಾಗಿತ್ತು ಇದನ್ನು ಏನಾದರೂ ಇಂಗ್ಲಿಷ್ಗೆಷ್ಗೆ ತಜು೯ಮೆ ಮಾಡಿದರೆ ನೋಬೆಲ್ ಬಹುಮಾನ ದೊರೆಯಬಹುದು ಆದರೆ ಯಾರೂ ಕೇಳದ ಈ ನೆಚ್ಚಿನ ಸ್ಥಳದಲ್ಲಿ ನೀ ಆಡುವುದು ನಿರರ್ಥಕ ಎಂಬ ಮಾತು ಅತ್ಯಂತ ಸ್ವಾರಸ್ಯ ಪೂರ್ಣವಾಗಿದೆ.
4. ತಲ್ಲಣಿಸಿತು ಜಗ ಜುಮ್ಮೆಂದು
ಕೋಗಿಲೆ ಎಂದು ತನ್ನ ಸ್ವ ಸಂತೋಷಕ್ಕಾಗಿ ಕಾಡಿನ ಮಧ್ಯೆ ಪರ್ವತ ಶ್ರೇಣಿಗಳಲ್ಲಿ ಆಡುತ್ತಾ ಇರುತ್ತದೆ ಅದನ್ನು ಕೇಳಿದ ವ್ಯಕ್ತಿ ಒಬ್ಬನು ನೀನು ಇಂಗ್ಲೀಷಿನಲ್ಲಿ ಹೇಳಿದರೆ ನೋಬೆಲ್ ಪ್ರಶಸ್ತಿ ಬರುವುದು ಎಂದು ಹೇಳಿದನು. ಆ ಮಾತಿಗೆ ಕೋಗಿಲೆಯು ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡದೆ ಮತ್ತೊಮ್ಮೆ ಗುಹೆ ಎಂದು ಹೇಳಿತು ಆದರೆ ಆ ಧ್ವನಿಯು ಇಡೀ ಪ್ರಕೃತಿಯಲ್ಲಿ ಒಂದು ಸಂಚಲನವನ್ನು ಮೂಡಿಸುತ್ತದೆ ನಾವು ಯಾವ ಕೆಲಸದಲ್ಲಿ ಪರಿಣಿತರು ಆ ಕೆಲಸವನ್ನು ಪ್ರಾಮಾಣಿಕತೆಯಿಂದ ಮಿಸ್ ಮಾಡ್ತಾ ದಿಂದ ಮಾಡಬೇಕು ಇದೆಲ್ಲದಕ್ಕೆ ಯಾವ ಸ್ಥಳದಲ್ಲಿ ಯಾರು ಎದುರಿನಲ್ಲಿ ಹಾಡಬೇಕು ಎಂಬುದು ಅಮುಖ್ಯವಾದಂತದ್ದು ಅಂತರಂಗದ ಈ ಸಹಜನುಡಿಗೆ ಪ್ರಕೃತಿಯು ರೋಮಾಂಚನಗೊಂಡು ತಲ್ಲಣಿಸಿತು ಎಂಬುವುದು ಇಲ್ಲಿನ ಸಂದರ್ಭವಾಗಿದೆ.
ಕೃತಕವಲ್ಲದ ಸ್ವಾಭಾವಿಕ ಕ್ರಿಯೆಯು ಅಭಿವ್ಯಕ್ತಿಗೆ ಅತ್ಯಂತ ಪೂರಕ ಮತ್ತು ಜಗತ್ತು ತಾನಾಗಿಯೇ ಸಂತೋಷವಾಗಿ ಒಪ್ಪುವುದು ಎಂಬ ಮಾತು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ.