ಬಲಿಯನ್ನಿತೊಡೆ ಮುನಿವೆಂ
1. ಅಭಯ ರುಚಿಯ ಸೋದರಿಯ ಹೆಸರೇನು?
ಅಭಯ ರುಚಿಯ ಸೋದರಿಯ ಹೆಸರು ಅಭಯ ಮತಿ.
2. ಅಭಯ ರುಚಿ ಮತ್ತು ಅಭಯಮತಿಯರನ್ನು ಸೆರೆ ಹಿಡಿದದ್ದು ಯಾವಾಗ?
ಗುರುಗಳಾದ ಸುಧಾಚಾರ್ಯರ ಆದೇಶದಂತೆ ಅಭಯ್ ರುಚಿ ಅಭಯಮತಿಯರು ಭಿಕ್ಷೆಗೆ ಬರುತ್ತಿದ್ದ ಸಮಯದಲ್ಲಿ ಅವರನ್ನು ಸೆರೆ ಹಿಡಿಯಲಾಯಿತು.
3. ಕುಸುಮದತ್ತನ ತಂದೆ ಹೆಸರೇನು?
ಕುಸುಮದತ್ತನ ತಂದೆಯ ಹೆಸರು ಮಾರಿದತ್ತ ಮಹಾರಾಜ.
4. ಮಾರಿದತ್ತ ಪಟ್ಟವನ್ನು ಯಾರಿಗೆ ಕಟ್ಟಿದನು?
ಮಾರಿದತ ಪಟ್ಟವನ್ನು ತನ್ನ ಮಗನಾದ ಕುಸುಮದತ್ತನಿಗೆ ಕಟ್ಟಿದನು.
ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.
1. ಅಭಯ ರುಚಿ ತಲ್ಲಣಗೊಳ್ಳಲು ಕಾರಣವೇನು?
ಕೇವಲ ಸಂಕಲ್ಪ ಹಿಂಸೆಯನ್ನು ಮಾಡಿದ್ದರಿಂದಲೇ ಅದೇ ರುಚಿಯಾದ ಜನ್ಮಾಂತರಗಳನ್ನು ಕಷ್ಟವನ್ನು ಎದುರಿಸಬೇಕಾಯಿತು ಆದರೆ ಯಾವುದೇ ಭಯವಿಲ್ಲದೆ ಜೀವನಾಶಿಗಳನ್ನು ನಿರಂತರವಾಗಿ ಬಲಿ ಕೊಡುತ್ತಿದ್ದರಿಂದ ಅವನು ನರಕಕ್ಕೆ ಹೋಗುವುದು ನಿಶ್ಚಿತ ಎಂದು ನೆನೆದ ಅಭಯ ರುಚಿಯು ತಲ್ಲಣಗೊಂಡನು.
2. ಮಾರಿದತ್ತ ಏಕೆ ಉದ್ವಿಗ್ನನಾದನು?
ಮಾರಿದತನ ಆದೇಶದಂತೆ ಚಂಡ ಕರ್ಮನ ದೇವಿಗೆ ಬಲಿ ಕೊಡಲು ಅಭಯ ರುಚಿ ಮತ್ತು ಅಭಿಯಮತಿಯರನ್ನು ಸೆರೆಹಿಡಿದು ತಂದಾಗ ಅವರು ಸ್ವಲ್ಪವೂ ಭಯಪಡಲಿಲ್ಲ ಮಾರಿದತ್ತನ್ನು ಅದರ ಕಾರಣವನ್ನು ತಿಳಿಯಬಯಸಿದಾಗ ಅವರಿಗೆ ಕೇವಲ ಸಂಕಲ್ಪ ಹಿಂಸೆಯಿಂದಈ ವಿಧದ ಜನ್ಮಾವಳಿಗಳನ್ನು ಪಡೆದಿದ್ದಾಗಿಯೂ ತಮ್ಮ ಪರಿಸ್ಥಿತಿಗೆ ಸ್ವಲ್ಪವೂ ಭಯವಿಲ್ಲ ಆದರೆ ಮಾರಿದತ್ತ ತನ್ನ ಪಾಪ ಕೃತ್ಯಗಳಿಂದ ಅವನು ನರಕಕ್ಕೆ ಹೋಗುವುದು ನಿಶ್ಚಿತ ಎಂದಾಗ ಮಾರಿದತ್ತನ್ನು ಉದ್ವಿಗ್ನಗೊಂಡನು.
3. ಚಂಡಮಾರಿ ಜನರನ್ನು ಕುರಿತು ಏನು ಹೇಳಿದಳು?
ಜಲಗಂಧ ಹೂಮಾಲೆ ಅಕ್ಕಿ ಧೂಪ ದೀಪಹವಿಸ್ಸು ತಾಂಬೂಲ ಸಮೂಹಗಳಿಂದ ನನ್ನನ್ನು ಪೂಜಿಸಿರಿ ಆದರೆ ಜೀವಸಮುಹಗಳನ್ನು ನನಗೆ ಬಲಿ ನೀಡಿದರೆ ನಾನು ಮುನಿಸಿಕೊಳ್ಳುವೆ ಎಂದು ಚಂಡಮಾರಿಯ ಜನರಿಗೆ ಹೇಳಿದಳು.
4. ಜೀವಿಗಳನ್ನು ಕೊಲ್ಲುವುದರಿಂದ ಆಗುವ ಪರಿಣಾಮವೇನು?
ಸಂಕಲ್ಪ ಹಿಂಸೆಯನ್ನು ಮಾಡಿದ ಮಾತ್ರಕ್ಕೆ ಯಶೋಧರ ಚಂದ್ರಮತಿಯರು ಅಭಯ ರುಚಿ ಮತ್ತು ಅಭಯ ಮತಿ ನಾನ ರೀತಿಯ ಕರ್ಮವನ್ನು ಅನುಭವಿಸಿ ದಂತಾಯಿತು ನಿಜವಾದ ಹಿಂಸೆಗೆ ತೊಡಗಿಸಿಕೊಂಡರೆ ನರಲೋಕದಲ್ಲಿಯೇ ನಿವಾರಣೆ ಪಡೆಯಬೇಕಾಗುತ್ತದೆ.
ಈ ಕೆಳಗಿನ ಪ್ರಶ್ನೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
1. ಕರಣದಿಂದೆ ತಲ್ಲಣಿಸಿದಪೆಂ
ಈ ಮೇಲಿನ ವಾಕ್ಯವನ್ನು ಜನ್ನ ಕವಿಯು ಬರೆದ ಯಶೋಧರ ಚರಿತೆಯಿಂದ ಆರಿಸಿ ಅಭ್ಯಾಸಕ್ಕೆ ಇಟ್ಟಿರುವ ಬಲಿಯನ್ನಿತೊಡೆ ಮುನಿವೆಂ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಅದೇ ರುಚಿಯು ಮಾರಿದತ್ತ ಮಹಾರಾಜನಿಗೆ ಹೇಳಿದನು.
ಮಾರಿದತ್ತನ ಆದೇಶದಂತೆ ಜಾತ್ರೆಯಲ್ಲಿ ಚಂಡಮಾರಿಗೆ ಬಲಿ ಕೊಡಲು ತಳಾರ ಚಂಡ ಕರ್ಮನು ಭಿಕ್ಷೆಗೆ ಹೊರಟಿದ್ದ ಅಭಯ ರುಚಿ ಮತ್ತು ಅಭಯಮತಿಯರನ್ನು ಸೆರೆಹಿಡಿದು ಮಾರಿದತ್ತನ ಮುಂದೆ ನಿಲ್ಲಿಸಿದಾಗ ಅವರು ಭಯಪಡಲಿಲ್ಲ ಆಗ ಚಿಕಿತನಾದ ಮಾರಿದತ್ತನು ಅವರ ವೃತ್ತಾಂತವನ್ನು ಕೇಳಿದನು. ಮಾರಿದತ್ತನಿಗೆ ತನ್ನ ಹಿಂದಿನ ಜನ್ಮದ ವಿಚಾರಗಳನ್ನು ತಿಳಿಸುತ್ತಾ ಅಭಯ ರುಚಿಯು ನಮ್ಮನ್ನು ಬಲಿಕೊಡುವ ಬಗ್ಗೆ ಸ್ವಲ್ಪ ಮಾತ್ರವೂ ಭಯವಿಲ್ಲ ಸಂಕಲ್ಪ ಹಿಂಸೆ ಮಾಡಿದ ಮಾತ್ರಕ್ಕೆ ನಾವು ಭಾವಾವಳಿಯ ಹಿಂಸೆಯನ್ನು ಅನುಭವಿಸಿದವು. ಇನ್ನು ನಿಜಕ್ಕೂ ಹಿಂಸೆ ಮಾಡುತ್ತಿರುವ ನೀನು ನಿನ್ನ ಮುಂದಿನ ಪರಿಸ್ಥಿತಿಯನ್ನು ನೆನೆಸಿಕೊಂಡು ಭಯವಾಗುವುದು ಎಂದು ಮೇಲಿನಂತೆ ಹೇಳಿದನು.
2. ಬಲಿಯನ್ನಿತೊಡೆ ಮುನಿವೆಂ
ಈ ಮೇಲಿನ ವಾಕ್ಯವನ್ನು ಜನ್ನ ಕವಿಯು ಬರೆದ ಯಶೋಧರ ಚರಿತೆಯಿಂದ ಆರಿಸಿ ಅಭ್ಯಾಸಕ್ಕೆ ಇಟ್ಟಿರುವ ಬಲಿಯನ್ನಿತೊಡೆ ಮುನಿವೆಂ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಮರಿದೆತನ ಆದೇಶದಂತೆ ಚಂಡ ಕರ್ಮನು ಜಾತ್ರೆಯ ಸಂದರ್ಭದಲ್ಲಿ ಚಂಡಮಾರಿಗೆ ಬಲಿ ಕೊಡಲು ಹಬೆಯ ರುಚಿ, ಅವಯಮತಿ ರನ್ನು ಬಲಿ ಕೊಡಲು ಬಂದಾಗ ತಮ್ಮ ಪರಿಸ್ಥಿತಿಗೆ ಭಯಪಡದೆ ಹಿಂಸೆ ಮಾಡುತ್ತಿರುವ ಮಾರಿದತ್ತನ ಮುಂದಿನ ಪರಿಸ್ಥಿತಿಗೆ ತಲ್ಲಣವಾಗುತ್ತಿದೆ ಎಂದು ಹೇಳಿದಾಗ ಅದೇ ಸಂದರ್ಭದಲ್ಲಿ ಪ್ರತಿ ಕ್ಷಣದ ಚಂಡಮಾರಿಯು ಪ್ರಜೆಗಳು ತನಗೆ ಹೂವು ಗಂಧ ಅಕ್ಷತೆ,ಹವಿಸ್ಸು ಪೂಜಿಸಿ ಅದರ ಬದಲಿಗೆ ಜೀವಿಗಳ ಬಗ್ಗೆ ನೀಡಿ ಪೂಜಿಸಿದರೆ ಮುನಿಸಿಕೊಳ್ಳುವೆ ಎಂದು ಮೇಲಿನಂತೆ ಹೇಳಿದಳು.
ದೇವಿಗೆ ಮಲ್ಲಿಗೆ ಅವಶ್ಯಕತೆ ಇಲ್ಲ ಎನ್ನುವುದನ್ನು ಕವಿಯು ದೇವಿಯ ಮಾತಿನ ರೂಪದಲ್ಲಿ ಹೇಳಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ.
3. ನರಲೋಕದೊಳ್ ನಿವಾರಣೆವಡೆವಯ್
ಈ ಮೇಲಿನ ವಾಕ್ಯವನ್ನು ಜನ್ನ ಕವಿಯು ಬರೆದ ಯಶೋಧರ ಚರಿತೆಯಿಂದ ಆರಿಸಿ ಅಭ್ಯಾಸಕ್ಕೆ ಇಟ್ಟಿರುವ ಬಲಿಯನ್ನಿತೊಡೆ ಮುನಿವೆಂ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಚಂಡಮಾರಿಯ ಜಾತ್ರೆಯಲ್ಲಿ ಬಲಿಕೊಡಲು ಮಾರಿದತ್ತ ರಾಜನ ಆದೇಶದಂತೆ ತಳಾರ ಚಂಡ ಕರ್ಮನು ಅಭಯ ರುಚಿ ಮತ್ತು ಅಭಯಮತಿಯರನ್ನು ಸೆರೆಹಿಡಿದು ತಂದಾಗ ಅವರು ಭಯಪಡುವುದಿಲ್ಲ ಅದನ್ನು ಕಂಡು ಮಾರಿದತ್ತನ್ನು ಪ್ರಶ್ನಿಸಿದಾಗ ಅಭಯ ರುಚಿಯು ತನ್ನ ಹಿಂದಿನ ಜನ್ಮದ ವೃತ್ತಾಂತವನ್ನು ತಿಳಿಸಿ ತಾವು ಸಂಕಲ್ಪನೆ ಮಾಡಿದ ಮಾತ್ರಕ್ಕೆ ಕಷ್ಟ ಅನುಭವಿಸಬೇಕಾಯಿತು ಇನ್ನು ಮಾರಿದಂತ ರಾಜನು ನಿಜಕ್ಕೂ ಜೀವ ಬಲಿ ಕೊಡುತ್ತಿರುವುದರಿಂದ ಅವನು ನರಕವನ್ನು ಪಡೆಯುವುದು ನಿಶ್ಚಿತ ಎಂದು ಹೇಳಿದನು
ಹಿಂಸೆಯ ಕುರಿತು ಮನದಲ್ಲಿ ಯೋಚಿಸಿದ ಮಾತ್ರಕ್ಕೆ ಶಿಕ್ಷೆ ಅನುಭವಿಸುವುದಾದರೆ ನಿಜಕ್ಕೂ ಹಿಂಸಾ ಮಾರ್ಗಕ್ಕೆ ತೊಡಗಿಸಿಕೊಂಡರೆ ಅವರ ಪರಿಸ್ಥಿತಿ ಏನು ಎಂಬ ಅಭಿರುಚಿಯ ಕಳಕಳಿ, ಹಿಂಸೆ ಮಾಡಬಾರದು ಎಂಬ ಮನೋಭಾವ ಇಲ್ಲಿ ವ್ಯಕ್ತವಾಗಿದೆ.
4.ದೇವನೆ ಆದಂ
ಈ ಮೇಲಿನ ವಾಕ್ಯವನ್ನು ಜನ್ನ ಕವಿಯು ಬರೆದ ಯಶೋಧರ ಚರಿತೆಯಿಂದ ಆರಿಸಿ ಅಭ್ಯಾಸಕ್ಕೆ ಇಟ್ಟಿರುವ ಬಲಿಯನ್ನಿತೊಡೆ ಮುನಿವೆಂ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಅಭಿರುಚಿಯ ಮಾತುಗಳು ಮತ್ತು ಚಂಡಮಾರಿ ದೇವತೆ ಪ್ರತ್ಯಕ್ಷನಾಗಿ ಬಲಿ ಕೊಡಬೇಡಿ ಎಂದು ಹೇಳಿದ ಮಾತುಗಳು ಮಾರಿ ಕರ್ತನ ಮನಸ್ಸಿನ ಮೇಲೆ ಹಾಳವಾದ ಪ್ರಭಾವವನ್ನು ಬೀರಿ ಅವನು ಅಹಿಂಸೆಯ ಸಂಕಲ್ಪವನ್ನು ಮಾಡಿ ರಾಜ್ಯ ಪದವಿಯನ್ನು ತ್ಯಜಿಸಿ ಸನ್ಯಾಸ ದೀಕ್ಷೆ ತೆಗೆದುಕೊಂಡು ಉಗ್ರವಾದ ತಪಸ್ಸು ಮಾಡಿ ಸಮಾಧಿಸ್ತನಾದನು ಮೂರನೇ ಸ್ವರ್ಗದಲ್ಲಿ ನೆಲೆಸಿದವನು ಕಲೆಯನ್ನು ಮೂದಲಿಸುವಂತೆ ದೇವನೆ ಆದನೆಂದು ಕವಿ ಹೇಳಿದ್ದಾನೆ.
ತಪ್ಪಿಗೆ ಪಶ್ಚಾತಾಪವೇ ಪ್ರಾಯಶ್ಚಿತ ಮಾರಿದ ತತ್ವಗಳನ್ನು ತಿದ್ದುಕೊಂಡಿದ್ದರಿಂದ ಅವನಿಗೆ ದೇವ ಪದವಿ ಪ್ರಾಪ್ತಿ ವಾಯಿತೆಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ.
1. ಅಭಯ ರುಚಿ ಮಾರಿದತನನ್ನು ಭೇಟಿಯಾದ ಸಂದರ್ಭ ವಿವರಿಸಿ.
ರಾಜಪುರ ಎಂಬ ಪಟ್ಟಣವನ್ನು ಮಾರಿದತ್ತ ರಾಜನು ಹಾಳುತ್ತಿದ್ದನು ಅಪುರದಲ್ಲಿ ಒಂದು ಚಂಡಮಾರಿ ದೇವಾಲಯವಿತ್ತು. ಚೈತ್ರ ಮತ್ತು ಅಶ್ವಿಜ ಮಾಸಗಳಲ್ಲಿ ಅಲ್ಲಿ ಜಾತ್ರೆ ನಡೆಯುತ್ತಿತ್ತು. ಒಮ್ಮೆ ಚೈತ್ರ ಮಾಸದಲ್ಲಿ ನಡೆಯಬೇಕಾಗಿದ್ದ ಜಾತ್ರೆಗೆ ಬಲಿ ಕೊಡಲು ಮಾನವರನ್ನು ಹಿಡಿದು ತರಬೇಕೆಂದು ಮಾರಿದತ್ತ ರಾಜನು ತನ್ನ ತಳರನಾದ ಚಂಡ ಕರ್ಮನಿಗೆ ಆದೇಶವನ್ನು ನೀಡಿದನು. ಅದೇ ವೇಳೆಯಲ್ಲಿ ಸುಧತ್ತಾಚಾರ್ಯ ಮುನಿಗಳ ಜೊತೆ ಆ ಊರಿನಲ್ಲಿ ತಂದಿದ್ದ ಅಭಯ ರುಚಿ ಮತ್ತು ಅಭಯಮತಿ ಎಂಬ ಸಹೋದರರು ಭಿಕ್ಷೆಗೆ ಹೊರಟಿದ್ದರು. ತಳರನಾದ ಚೆಂದ ಕರ್ಮನು ಅವರಿಬ್ಬರನ್ನು ಹಿಡಿದು ತಂದು ಮಾರಿದತನ ಮುಂದೆ ನಿಲ್ಲಿಸಿದನು. ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತ ರಾಗಲಿಲ್ಲ ಅವರ ಧೈರ್ಯ ಧೈರ್ಯಗಳನ್ನು ನೋಡಿದ ಮಾರಿದತನಿಗೆ ಆಶ್ಚರ್ಯವಾಗಿ ಅವರ ವರ್ತಂತವನ್ನು ತಿಳಿಯ ಬಯಸಿದನು. ಇದು ಅಭಯ ರುಚಿ ಮಾರಿದತನನ್ನು ಭೇಟಿಯಾದ ಸಂದರ್ಭವಾಗಿದೆ.
2. ಅಭಯ ರುಚಿಯ ಮಾತುಗಳು ಮಾರಿದತನ ಮೇಲೆ ಬೀರಿದ ಪರಿಣಾಮವನ್ನು ತಿಳಿಸಿ
ಚಂಡಮಾರಿಗೆ ಬಲಿಕೊಡಲು ಮಾರಿದತ್ತನ ಹಗ್ನೆಯಂತೆ ಚಂಡ ಕರ್ಮನೆಂಬ ತಳರನ್ನು ಅಭಿರುಚಿ ಅಭಯಮತಿಯರನ್ನು ಹೆಸರಿಹಿಡಿದು ಮಾರಿದತನ ಮುಂದೆ ತಂದು ನಿಲ್ಲಿಸಿದಾಗ ಅವರು ಸ್ವಲ್ಪ ವಿಚಲಿತರಾಗಲಿಲ್ಲ ಅದಕ್ಕೆ ಆಶ್ಚರ್ಯಗೊಂಡ ಮಾರ್ಗ ತನು ಅವರನ್ನು ವಿಚಾರಿಸಿಲಾಗಿ ತಮ್ಮ ಪೂರ್ವ ವೃತ್ತಾಂತವನ್ನು ವಿವರಿಸಿದ ಅಭಯ ರುಚಿಯು ಕೇವಲ ಸಂಕಲ್ಪ ಹಿಂಸೆಯನ್ನು ಮಾಡಿದ ಮಾತ್ರಕ್ಕೆ ನಾವು ಭವಾವಳಿಯ ಕಷ್ಟವನ್ನು ಎದುರಿಸಬೇಕಾಯಿತು ಇನ್ನು ಮಾರಿದತನು ಈ ರೀತಿಯ ಹಿಂಸೆಯನ್ನು ಮಾಡುತ್ತಿರುವುದರಿಂದ ನರಕದಲ್ಲಿ ಪರಿಹಾರ ಪಡೆಯುವನು ಎಂದನು ಅಭಯ ರುಚಿಯ ಮಾತುಗಳು ಜನರಿಗೆ ಅಭಯವೆನ್ನುವ ಡಂಗೂರ ದಂತಿತ್ತು ಅಭಯ ರುಚಿಯ ಧೈರ್ಯದ ಮಾತುಗಳನ್ನು ಕೇಳಿದ ಮಾರಿದತ್ತನು ಅತಿ ಆಶ್ಚರ್ಯ ಕೊಳಗಾಗಿ ಭಯದಿಂದ ಉದ್ವಿಗ್ನ ನಾದನು.
3. ಮಾರಿದತ್ತ ರಾಜ್ಯವನ್ನು ತಿಳಿಸಲು ಕಾರಣವೇನು?
ಕೇವಲ ಸಂಕಲ್ಪ ಹಿಂಸೆಯಿಂದಲೇ ಭವಾವಳಿಯ ತೊಂದರೆಗೆ ಅಭಯ ರುಚಿ ಹಬೆಯ ಮತಿಯರು ಒಳಗಾಗುವಂತಾಯಿತು. ಇನ್ನು ನೇರವಾಗಿ ಹಿಂಸಾ ಮಾರ್ಗದಲ್ಲಿ ತೊಡಗಿಸಿಕೊಂಡಿರುವ ಮಾರಿದತ್ತನು ನೇರವಾಗಿ ನರಕಕ್ಕೆ ಹೋಗುವುದು ಖಚಿತ ಎಂದು ಅಭಯ ರುಚಿಯು ಹೇಳಿದಾಗ ಮಾರಿದತ್ತನು ಉದ್ವಿಗ್ನನಾದನು. ಅದೇ ವೇಳೆಯಲ್ಲಿ ಪ್ರತ್ಯಕ್ಷವಾದ ಚಂಡಮಾರಿಯೂ ಸಹ ಹಬೆಯ ರುಚಿಗೆ ವಂದಿಸಿ ನೀನು ಆಚಾರ್ಯನೇ ನಿಜ ಎಂದು ಹೇಳಿ ಇನ್ನು ಮುಂದೆ ಪ್ರಜೆಗಳೆಲ್ಲರೂ ಸಹ ಜಲ ಗಂಧ ತಾಂಬೂಲ ಹೂ ಮಾಲೆ ದೂಪ ದೀಪ ಹವಿಸ್ಸು ಹಾವಿಸಿನಿಂದ ನನ್ನನ್ನು ಪೂಜಿಸಿರಿ ಜೀವಿ ಬಲಿಯನ್ನೇನಾದರೂ ನೀಡಿದರೆ ನಿಮ್ಮ ಮೇಲೆ ಮುನಿಸಿಕೊಳ್ಳುವೆನು.
ಈ ಮೇಲಿನ ಎಲ್ಲಾ ಘಟನೆಗಳನ್ನು ಗಮನಿಸಿದ ಮಾರಿದತನಿಗೆ ತನ್ನ ತಪ್ಪಿನ ಹರಿವಾಯಿತು ತನ್ನ ತಪ್ಪಿಗೆ ಪ್ರಾಯಶ್ಚಿತ ಪಟ್ಟ ಅವನು ಬಲಿಕೊಡಲು ಬಂಧಿಸಿದ ಅನೇಕ ಜೀವಿಗಳೆಲ್ಲವನ್ನು ಬಿಡುಗಡೆಗೊಳಿಸಿದನು. ತನ್ನ ಸಹೋದರಿಯ ಮಕ್ಕಳಾದ ಹಬೇರುಚಿ ಹಬೆಯ ಮತ್ತಿರಲು ಮುದ್ದಾಡಿದನು. ತಾನು ಇದುವರೆಗೆ ಮಾಡಿದ ಪಾಪ ಕೃತ್ಯಗಳಿಗೆ ಪಶ್ಚಾತಾಪ ಪಟ್ಟು ರಾಜ್ಯ ಪದವಿಯನ್ನು ತಿಳಿಸಿ ತನ್ನ ಮಗನಾದ ಕುಸುಮದತ್ತನಿಗೆ ಅಧಿಕಾರವನ್ನು ವಹಿಸಿದನು.