9th Class Tatva Padagalu Poems Notes | 9ನೇ ತರಗತಿ ತತ್ವಪದಗಳು ಪದ್ಯ ನೋಟ್ಸ್'
ಪದ್ಯ ಭಾಗ – 6 ತತ್ವಪದಗಳು
– ಕಡಕೋಳ ಮಡಿವಾಳಪ್ಪ – ಶಿಶುನಾಳ ಶರೀಫ
ಕೃತಿಕಾರರ ಪರಿಚಯ
ಕಡಕೋಳ ಮಡಿವಾಳಪ್ಪ ಅವರು ( ಕ್ರಿ . ಶ . 1765 ) ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಿದನೂರ ಗ್ರಾಮದಲ್ಲಿ ಜನಿಸಿದರು .
ಇವರ ತಾಯಿ ಗಂಗಮ್ಮ , ತಂದೆ ವಿರೂಪಾಕ್ಷಯ್ಯ ಇವರು ಕಲಬುರ್ಗಿಯ ಶ್ರೀಶರಣ ಬಸವೇಶ್ವರರ ನಿರ್ದೇಶನದಂತೆ ಕಲಕೇರಿ ಮರುಳಾರಾಧ್ಯರಿಂದ ಲಿಂಗದೀಕ್ಷೆಯನ್ನು ಪಡೆಯುತ್ತಾರೆ . ಆಧ್ಯಾತ್ಮ ಕ್ಷೇತ್ರದಲ್ಲಿ ತನ್ನದೇ ಆಗಿರುವ ಪ್ರತಿಭೆಯನ್ನು ಮೆರೆದ ವಿಶಿಷ್ಟ ಕವಿ ಎನಿಸಿಕೊಂಡಿದ್ದಾರೆ .
ಕಲಬುರಗಿ ಜಿಲ್ಲೆ 104 ಜೇವರ್ಗಿ ತಾಲ್ಲೂಕು ಯಡ್ರಾಮಿ ಬಳಿಯ ಕಡಕೋಳ ಗ್ರಾಮವು ಇವರ ಕಾರ್ಯಕ್ಷೇತ್ರ ಇಲ್ಲಿ ಕಡಕೋಳ ಮಡಿವಾಳಪ್ಪ ಅವರ ಮಠವಿದೆ . ಎಂಬ ಅಂಕಿತವನ್ನು ಇಟ್ಟುಕೊಂಡು ನೂರಾರು ‘ ಮಹಾಂತೇಶ ‘ ತತ್ತ್ವಪದಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ .
‘ ಗುರುಕರುಣೆ ‘ ತತ್ತ್ವಪದವನ್ನು ‘ ಆಯ್ದ ತತ್ತ್ವಪದಗಳು ‘ ( ಪುಟ ಸಂಖ್ಯೆ 4 ) ಸಂಕಲನದಿಂದ ಆಯ್ದು ನಿಗದಿಪಡಿಸಿದೆ .
ಆಶಯ ಭಾವ
ಕಡಕೋಳ ಮಡಿವಾಳಪ್ಪ ಅವರ ತತ್ತ್ವಪದವು ಮಾನವನು ತನ್ನ ಜೀವನದಲ್ಲಿ ಅನುಸರಿಸಬೇಕಾದ ನಡೆನುಡಿಗಳನ್ನು ಬಹುಸುಂದರವಾಗಿ ಚಿತ್ರಿಸುತ್ತದೆ .
ನಮ್ಮ ಎಲ್ಲ ಕಾರ್ಯಗಳಿಗೆ ಗುರುಕರುಣೆ ಅತ್ಯಗತ್ಯ . ಅವರು ಸಾಧು ಸತ್ಪುರುಷರ ಸೇವೆಯನ್ನು ಮಾಡುವುದು . ಹೀನ ಮನುಷ್ಯರ ಸ್ನೇಹವನ್ನು ಮಾಡದಿರುವುದು . ಸಮಯವನ್ನು ವ್ಯರ್ಥಮಾಡದಿರುವುದು ಉತ್ತಮ ಗುಣಗಳು ಎಂದು ಅಭಿಪ್ರಾಯಪಡುತ್ತಾರೆ .
ಆಶನ – ಅನ್ನ , ಆಹಾರ ,
ಕೃತಿಕಾರರ ಪರಿಚಯ
ಸಂತ ಶಿಶುನಾಳ ಶರೀಫ ತತ್ತ್ವಪದ ರಚನಾಕಾರರಾದ ಇವರು ( ಕ್ರಿಸ್ತ ಶಕ 1819 ) ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುನಾಳದವರು , ಬಾಲ್ಯದ ಹೆಸರು ಮಹಮ್ಮದ್ ಶರೀಫ , ಗುರು ಕಳಸದ ಗೋವಿಂದ ಭಟ್ಟರು .
ಕರ್ನಾಟಕದ ಕಬೀರರೆಂದೇ ಶರೀಫರು ಪ್ರಸಿದ್ಧರು . ಶಿಶುನಾಳಾಧೀಶ , ಶಿಶುನಾಳೇಶ ಅಂಕಿತ . ಇವರು ನೂರಾರು ತತ್ವಪದಗಳನ್ನು ರಚಿಸಿದ್ದಾರೆ . ‘ ಬಿದಿರು ‘ ತತ್ತ್ವಪದವನ್ನು ವಿದ್ವಾನ್ ಸದ್ಯೋಜಾತಮೂರ್ತಿ ಸಂಪಾದಿಸಿರುವ ‘ ಶಿಶುನಾಳರ ಗೀತೆಗಳು ‘ ಸಂಕಲನದಿಂದ ( ಪುಟ 79 ) ಆಯ್ದು ನಿಗದಿಪಡಿಸಿದೆ .
ಆಶಯ ಭಾಷೆ
ಪ್ರಕೃತಿಯಲ್ಲಿ ಬೇಡವಾದ ವಸ್ತು ಯಾವುದೂ ಇಲ್ಲ . ಕೆಲವು ಹೆಚ್ಚು ಮತ್ತೆ ಕೆಲವು ಕಡಿಮೆ ಉಪಯೋಗಿ ವಸ್ತುಗಳಾಗಿವೆ . ಹುಟ್ಟಿನಿಂದ ಸಾವಿನ ತನಕ ದಿನನಿತ್ಯ ಬಳಸುವ ಅತ್ಯಮೂಲ್ಯ ವಸ್ತು ನೀರು ,
ಇದರಂತೆ ಬಿದಿರೂ ಬಹು ಉಪಯೋಗಿ , ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲೂ ಬೇಕಾದ ಈ ಅಮೂಲ್ಯ ಅತ್ಯಗತ್ಯ ಬಿದಿರನ್ನು ಸಂತ ತನ್ನ ದೃಷ್ಟಿಯಲ್ಲಿ ನೋಡಿದ ಪರಿ ಈ ತತ್ತ್ವ ಪದದಲ್ಲಿ ಸರಳ ಸುಂದರವಾಗಿ ಚಿತ್ರಿತವಾಗಿದೆ
ಪದಗಳ ಅರ್ಥ
ಏಕದಂಡಿ – ತಂತೀ ವಾದ್ಯ .
ಚಕ್ಕಡಿ – ಎತ್ತಿನಗಾಡಿ .
ದಿವಿನಾಗು – ಮೈತುಂಬಿಕೊಳ್ಳು ;
ಮರ ( ಮೊರ ) – ಕೇರುವ ಸಾಧನ , ಗೆರಸೆ ,
ದಂಡಿಗೆ – ಪಲ್ಲಕ್ಕಿ ಹೊರುವ ಕೋಲು ;
ಬಹುಪಾಡ – ಬಹಳ ಕಷ್ಟ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
9th Standard kannada lessons Tatva Padagalu Poems question and answers
1. ಯಾರ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ ?
ಉತ್ತರ : ಗುರುಕರುಣೆ ಇಲ್ಲದವನ ಸ್ನೇಹ ಸಾಯುವತನಕ ಬೇಡ ಎಂದಿದ್ದಾರೆ .
2. ಯಾರ ಸ್ನೇಹವನ್ನು ಮಾಡಿ ಕೆಡಬಾರದು ?
ಉತ್ತರ : ಹೀನ ಮನುಷ್ಯನ ಸ್ನೇಹ ಮಾಡಿ ಕೆಡಬಾರದು .
3. ತತ್ತ್ವಪದಕಾರರು ಯಾರ ಸೇವೆ ಮಾಡಬೇಕು ಎಂದಿದ್ದಾರೆ ?
ಉತ್ತರ : ತತ್ತ್ವಪದಕಾರರು ಸಾಧು – ಸತ್ಪರುಷರ ಸೇವೆ ಮಾಡಬೇಕು ಎಂದಿದ್ದಾರೆ .
4. ಬಿದಿರು ಹೇಗೆ ಬೆಳೆಯಿತು ?
ಉತ್ತರ : ಬಿದಿರು ಹುಟ್ಟುತ್ತಾ ಹುಲ್ಲಿನಂತಿದ್ದ ಬೆಳೆಬೆಳೆಯುತ್ತ ದಿವಿಯಾಗುತ್ತದೆ .
5. ಬಿದಿರಿನ ಚಪ್ಪರವು ಏನನ್ನು ಕೊಡುತ್ತದೆ ?
ಉತ್ತರ : ಬಿದಿರಿನ ಚಪ್ಪರವು ನೆರಳನ್ನು ಕೊಡುತ್ತದೆ .
6. ಬಿದಿರು ಶಿಶುನಾಳಾಧೀಶನಿಗೆ ಏನಾಗುತ್ತದೆ ?
ಉತ್ತರ : ಬಿದಿರು ಶೀಶುನಾಳಧೀಶನಿಗೆ ಓಲಗವಾಗುತ್ತದೆ .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
1. ಬಿದಿರು ಮಕ್ಕಳಿಗೆ , ರೈತರಿಗೆ ಮಹಾತ್ಮರಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ?
ಉತ್ತರ : ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿ ಉಪಯೋಗವಾಗುತ್ತದೆ . ಮಕ್ಕಳು ನಿದ್ದೆ ಮಾಡಲು ಬಹು ಉಪಯೋಗಿ , ರೈತರಿಗೆ ಹೊಲದಲ್ಲಿ ಬೀಜ ಬಿತ್ತಲು ಸಹಕಾರಿಯಾದ ಕೂರಿಗೆಯಾಗಿ ಉಪಯೋಗವಾಗಿದೆ . ಮಹಾತ್ಮರ ಕೈಯಲ್ಲಿನ ಬೆತ್ತವಾಗಿ ಬಿದಿರು ಉಪಯೋಗವಾಗಿದೆ .
2. ಧಾನ್ಯಗಳನ್ನು ಕುಟ್ಟಲು , ಬೀಸಲು , ಕೇರಲು ಬಿದಿರು ಹೇಗೆ ಸಹಾಯಕವಾಗಿರುತ್ತದೆ ?
ಉತ್ತರ : ಬಿದಿರು ಧಾನ್ಯಗಳನ್ನು ಕುಟ್ಟಲು ಒನಕೆಯಾಗಿ ಬೀಸುವ ಕಲ್ಲಿನ ಗೂಟವಾಗಿ ಅಕ್ಕಿ ರಾಗಿ , ಕೇರುವ ಮರವಾಗಿ ಸಹಾಯಕವಾಗಿರುತ್ತದೆ .
3. ತತ್ತ್ವಪದಕಾರರು ಸ್ನೇಹ ಮಾಡುವ ಬಗೆಗೆ ಏನೆಂದು ತಿಳಿಸಿದ್ದಾರೆ ?
ಉತ್ತರ : ಗುರುಕರುಣವಿಲ್ಲದವನ ಸ್ನೇಹ ಸಾವುತನಕ ಮಾಡಬಾರದು . ಮಾತಿನೊಳಗ ಮಾತಿಲ್ಲದವನ ಸ್ನೇಹ ಜಾತಿಜನ್ಮಕಬೇಡ . ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಲಿಬೇಡ ,
ಮಾತಿನೊಳಗೆ ಮಾತಿಲ್ಲದವನ ಸ್ನೇಹ ಜನ್ಮ ಇರುವವರೆಗೆ ಬೇಡ , ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದೆಂದು ತತ್ತ್ವಪದಕಾರರು ಹೇಳಿದ್ದಾರೆ .
4. ‘ ಗುರುಕರುಣೆ ‘ ಪದ್ಯದ ಮೂರು ಮತ್ತು ನಾಲ್ಕನೆಯ ಚರಣದಲ್ಲಿ ಏನನ್ನು ಮಾಡಬಾರದೆಂದು ತತ್ತ್ವ ಸಾರಿದ್ದಾರೆ ?
ಉತ್ತರ : ಅಕ್ಕ – ತಂಗಿಯರು ಎಂದು ಬಾಯಲಿ ಕರೆದು ಅವರನ್ನು ಕೆಟ್ಟದಾಗಿ ನೋಡಬಾರದು , ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮಾಡಬಾರದು . ಬರೀ ಊಟ ಮಾಡುತ್ತಾ ಸಮಯವನ್ನು ವ್ಯರ್ಥ ಹಾಳುಮಾಡಬಾರದು .
ಮೇಲು – ಕೀಳು ಎಂಬ ಭಾವನೆಯನ್ನು ಬಿಟ್ಟು ಬದುಕಬೇಕು . ಎಳೆಗರು ಎತ್ತಾಗದೆ ಎಂಬಂತೆ ಹಿಂದೆ ಕಿರಿದಾಗಿರುವುದು ಇಂದು ಹಿರಿದಾಗುತ್ತದೆ . ಯಾವುದನ್ನೂ ಉಪೇಕ್ಷೆ ಮಾಡಬಾರದು .
ಒಂದನ್ನು ಮತ್ತೊಂದಕ್ಕೆ ಹೋಲಿಸಿ ಸರಿ ಮಾಡಲು ಬೇಡ , ಅವುಗಳಿಗೆ ಅವುಗಳದ್ದೆ ಸ್ಥಾನವಿದೆ . ಯಾವಾಗಲೂ ಗುರು ಮಹಾಂತೇಶ ಧ್ಯಾನವನ್ನು ಮಾಡುತ್ತಾ ಜೀವನ ನಡೆಸಬೇಕು .
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
1. ‘ ಗುರುಕರುಣೆ ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ಕಡಕೋಳ ಮಡಿವಾಳಪ್ಪರವರ ತತ್ತ್ವಪದದಲ್ಲಿ ಸ್ನೇಹ , ಸಂಬಂಧ , ಸೇವೆಗಳ ಬಗ್ಗೆ ವಿವರಿಸಿದ್ದಾರೆ . ಮಾನವನು ತನ್ನ ಜೀವನದಲ್ಲಿ ಅನುಸರಿಸಬೇಕಾದ ನಡೆನುಡಿಗಳನ್ನು ಬಹುಸುಂದರವಾಗಿ ಚಿತ್ರಿಸುತ್ತದೆ ನಮ್ಮ ಎಲ್ಲ ಕಾರ್ಯಗಳಿಗೆ ಗುರುಕರುಣೆ ಅತ್ಯಗತ್ಯ.ಯಾವ ವ್ಯಕ್ತಿಯು ಗುರುಗಳ ಮೇಲೆ ಗೌರವ ,
ಅಭಿಮಾನ ಇಲ್ಲವೋ , ಗುರುಗಳ ಅನುಗ್ರಹ , ಕೃಪೆಯನ್ನು ಗಳಿಸಿಲ್ಲವೋ , ಗುರುಕರುಣೆ ಇಲ್ಲದವನ ಸ್ನೇಹ ಸಾಯುತನಕ ಮಾಡಬಾರದು ಎಂದಿದ್ದಾರೆ ತತ್ತ್ವಪದಕಾರರು . ಸಾಧು ಸತ್ಪರುಷರ ಸೇವೆಯನ್ನು ಮಾಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು .
ಕೆಟ್ಟ ಮನುಷ್ಯರ ಸ್ನೇಹವನ್ನು ಮಾಡಿ ಕೆಡಬಾರದು . ಹೀನ ಮನುಷ್ಯರ ಸ್ನೇಹವನ್ನು ಮಾಡದಿರುವುದು ಒಳ್ಳೆಯದು ಎಂದಿದ್ದಾರೆ . ಅಕ್ಕ ತಂಗಿಯರೆಂದು ಬಾಯಿಯಲ್ಲಿ ಕರೆದು ಅವರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು . ನಿತ್ಯ ಕಾಲದಲ್ಲಿ ಆಹಾರವನ್ನು ಸೇವಿಸುತ್ತಾ ಸಮಯವನ್ನು ವ್ಯರ್ಥ ಮಾಡಬಾರದು .
ಮೇಲು ಕೀಳೂ ಎಂಬ ಭಾವನೆಯಿಲ್ಲದೆ , ಎಳೆಗರು ಎತ್ತಾಗದೆ ಎಂಬಂತೆ ಹಿಂದೆ ಕಿರಿದಾಗಿರುವುದು ಇಂದು ಹಿರಿದಾಗುತ್ತದೆ . ಯಾವುದನ್ನೂ ಉಪೇಕ್ಷೆ ಮಾಡಬಾರದು .
ಒಂದನ್ನು ಮತ್ತೊಂದಕ್ಕೆ ಹೋಲಿಸಿ ಸರಿ ಮಾಡಲು ಬೇಡ . ಅವುಗಳಿಗೆ ಅವುಗಳದ್ದೆ ಸ್ಥಾನವಿದೆ . ಗುರು ಮಹಾಂತೇಶನ ಸೇವೆಯನ್ನು ಮಾಡುತ್ತಾ ಇರುವುದೇ ಉತ್ತಮ ಗುಣಗಳು ಎಂದು ತತ್ತ್ವಪದಕಾರರು ಅಭಿಪ್ರಾಯ ಪಡುತ್ತಾರೆ .
2. ‘ ಬಿದಿರು ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ಸಂತ ಶಿಶುನಾಳ ಶರೀಫರ ತತ್ತ್ವಪದದಲ್ಲಿ ಪ್ರಕೃತಿಯಲ್ಲಿ ಬೇಡವಾದ ವಸ್ತು ಯಾವುದೂ ಇಲ್ಲ . ಅದರಲ್ಲೂ ಕೆಲವು ವಸ್ತುಗಳು ಬಹು ಉಪಯೋಗಿಗಳು . ಹುಟ್ಟಿನಿಂದ ಸಾವಿನ ತನಕ ದಿನನಿತ್ಯ ಬಳಸುವ ಅತ್ಯಮೂಲ್ಯ ವಸ್ತು ನೀರು ಇದರಂತೆ
ಬಿದಿರು ಬಹು ಉಪಯೋಗಿ , ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲೂ ಬೇಕಾದ ಈ ಅಮೂಲ್ಯ ಅತ್ಯಗತ್ಯ ಬಿದಿರನ್ನು ಸಂತ ತನ್ನ ದೃಷ್ಟಿಯಲ್ಲಿ ನೋಡಿದ ಪರಿ ಈ ತತ್ತ್ವಪದದಲ್ಲಿ ಸರಳ ಸುಂದರವಾಗಿ ಚಿತ್ರಿತವಾಗಿದೆ .
ಹುಟ್ಟುತ ಹುಲ್ಲು ನಾನಾದೆ ಬೆಳೆ ಬೆಳೆಯುತ್ತ ದಿವಿನಾದೆ ಮಕ್ಕಳನ್ನು ತೂಗುವತೊಟ್ಟಿಲಾಗುತ್ತದೆ . ಪಲ್ಲಕ್ಕಿಯ ದಂಡಿಗೆಯಾಗಿ , ಪತ್ರೆಗೆ ಬುಟ್ಟಿ ತಾನಾಗಿ , ಮಹಾತ್ಮರ ಕೈಗೆ ಬೆತ್ತವಾಗಿ , ಒನಕೆಯಾಗಿ , ಅಂಬಿಗಗೆ ಕೋಲಾಗಿ ಬಹು ಉಪಯೋಗಿ , ರೈತನಿಗೆ ಬಿತ್ತುವ ಕೂರಿಗ್ಯಾಗಿ ಉಪಯೋಗವಾಗುತ್ತದೆ .
ಬೀಸುಕಲ್ಲಿನ ಗೂಟವಾಗಿ ಮೊರವಾಗಿ ಬೆತ್ತವಾಗಿ ಊರುಗೋಲಾಗಿ , ಕೋಲಾಗಿ ಬಂಡಿಯಾಗಿ ನಂದಿ ಕೋಲಾಗಿ , ಚಪ್ಪರವಾಗಿ ಕೊಳಲು , ಮಗುವಿನಿಂದ ಮುದುಕರವರೆಗೆ ಎಲ್ಲರ ಅಗತ್ಯಗಳನ್ನು ಪೂರೈಸುವಲ್ಲಿ ಬಿದಿರು ಬಹು ಉಪಯೋಗಿ
, ಆಡುವ ಕೋಲಾಗಿ , ಹೂಡಲು ಚಕ್ಕಡಿಯಾಗಿ , ಸಿದ್ದರಾಮೇಶಗೆ ನಂದಿ ಕೋಲಾಗಿ , ನೆರಳಿಗೆ ಚಪ್ಪರವಾಗಿ , ಏಕದಂಡಿಗೆ ಕೊಳವೆಯಾಗಿ , ಶಿಶುನಾಳಾಧೀಶಗೆ ಓಲಗವಾಗಿ ಬಿದಿರು ಸಾರ್ಥಕವಾಗುತ್ತದೆ .
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. ” ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಬೇಡ
ಆಯ್ಕೆ : ಕಡಕೋಳ ಮಡಿವಾಳಪ್ಪನವರ ತತ್ತ್ವಪದದ ಈ ವಾಕ್ಯವನ್ನು ಆಯ್ದ ತತ್ತ್ವಪದಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಗುರುಕರುಣೆಯಿಲ್ಲದವನ ಸ್ನೇಹವನ್ನು ಸಾಯುತನಕ ಮಾಡಬಾರದು ಮಾತಿನೊಳಗೆ ಮಾತಿಲ್ಲದವನ ಸ್ನೇಹ ಮಾಡಬಾರದು . ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದೆಂದು ಎಂದು ಹೇಳುವ ಸಂದರ್ಭದಲ್ಲಿ ತತ್ತ್ವಪದಕಾರರು ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಮಾನವನು ಹೇಗೆ ಬದುಕಬೇಕೆಂದು , ಯಾರ ಸ್ನೇಹವನ್ನು ಮಾಡಬೇಕು . ಯಾರ ಸ್ನೇಹವನ್ನು ಮಾಡಬಾರದು ಎಂಬ ಸಂದೇಶವನ್ನು ನೀಡಿರುವುದು ಸ್ವಾರಸ್ಯಕರವಾಗಿದೆ .
2 , “ ನಿತ್ಯಕಾಲದಲ್ಲಿ ಅಶನವ ಉಂಡು ಹೊತ್ತು ಗಳಿಯಲಿಬೇಡ ”
ಆಯ್ಕೆ : ಕಡಕೋಳ ಮಡಿವಾಳಪ್ಪನವರ ತತ್ತ್ವಪದದ ಈ ವಾಕ್ಯವನ್ನು ಆಯ್ದ ತತ್ತ್ವಪದಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಮನುಷ್ಯನು ಕೆಲಸ ಮಾಡುವ ಸಮಯದಲ್ಲಿ ಊಟವನ್ನು ಮಾಡುತ್ತಾ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು . ಮೇಲು – ಕೀಳು ಎಂಬ ಭಾವನೆಯನ್ನು ಬಿಟ್ಟು ಬದುಕಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ತತ್ತ್ವಪದಕಾರರು ಹೇಳಿದ್ದಾರೆ .
ಸ್ವಾರಸ್ಯ : ಮನುಷ್ಯನ ಜೀವನವು ಅಮೂಲ್ಯವಾದದು ಅದನ್ನು ಸುಮ್ಮನೆ ಊಟ ಮಾಡಿಕೊಂಡು ವ್ಯರ್ಥ ಮಾಡಬಾರದು . ಉಪಯುಕ್ತವಾದ ಕೆಲಸದಲ್ಲಿ ತೊಡಗಿ ಸಾರ್ಥಕತೆ ಮಾಡಿಕೊಳ್ಳಬೇಕು ಎಂಬುದು ಸ್ವಾರಸ್ಯಕರವಾಗಿ ಮೂಡಿ ಬಂದಿದೆ .
3. “ ಮಹಾತ್ಮರ ಕೈಗೆ ಬೆತ್ತ ನಾನಾದೆ ”
ಆಯ್ಕೆ : ಈ ವಾಕ್ಯವನ್ನು ಸಂತ ಶಿಶುನಾಳ ಶರೀಫರವರು ಬರದಿರುವ ‘ ಬಿದಿರು ‘ ತತ್ತ್ವಪದವನ್ನು ವಿದ್ವಾನ್ ಸದ್ಯೋಜಾತಮೂರ್ತಿ ಸಂಪಾದಿಸಿರುವ ‘ ಶಿಶುನಾಳರ ಗೀತೆಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿದೆ . ರೈತರಿಗೆ ಹೊಲದಲ್ಲಿ ಬೀಜ ಬಿತ್ತಲು ಉಪಯೋಗವಾಗುತ್ತದೆ . ಮಹಾತ್ಮರ ಕೈಗೆ ಬೆತ್ತವಾಗಿ ಬಿದಿರು ಉಪಯೋಗುತ್ತದೆ . ಬಿದಿರಿನ ಉಪಯೋಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಬಿದಿರಿನ ಉಪಯೋಗಗಳು ಸ್ವಾರಸ್ಯಕರವಾಗಿ ಮೂಡಿ ಬಂದಿವೆ .
4. “ ಬೆಳೆ ಬೆಳೆಯುತ್ತ ದಿವಿನಾದ ”
ಆಯ್ಕೆ : ಈ ವಾಕ್ಯವನ್ನು ಸಂತ ಶಿಶುನಾಳ ಶರೀಫರವರು ಬರದಿರುವ ‘ ಬಿದಿರು ‘ ತತ್ತ್ವಪದವನ್ನು ವಿದ್ವಾನ್ ಸದ್ಯೋಜಾತಮೂರ್ತಿ ಸಂಪಾದಿಸಿರುವ ‘ ಶಿಶುನಾಳರ ಗೀತೆಗಳು ‘ ಸಂಕಲನದಿಂದ ಆಯ್ತು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಬಿದಿರು ಹುಟ್ಟುತ್ತಾ ಹುಲ್ಲಾಗಿ ಬೆಳೆಬೆಳೆಯುತ್ತಾ ದಿವಿಯಾಗಿ ಬೆಳೆದು ವಿವಿಧ ಉಪಯೋಗಿ ವಸ್ತುಗಳನ್ನು ಮಾಡಲು ಅನುಕೂಲಕರವಾಗುತ್ತದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ
ಸ್ವಾರಸ್ಯ : ಬಿದಿರು ಯಾವ ರೀತಿ ಹುಟ್ಟಿ ಬೆಳೆಯುತ್ತದೆ ಎಂಬುದನ್ನು ತತ್ವಪದಕಾರರು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ .
ಉ ) ಕೊಟ್ಟಿರುವ ಪದಗಳಲ್ಲಿ ಸೂಕ್ತಪದವನ್ನು ಆರಿಸಿ ಬರೆಯಿರಿ ,
1. ‘ ಅಶನ ‘ ಪದದ ಅರ್ಥ ಆಸೆ…………..
( ಅನ್ನ . ಬಟ್ಟೆ, ಆಸೆ, ನೀರು)
2. ‘ ಬೆತ್ತ ‘ ಪದದ ತತ್ಸಮರೂಪ ……………
( ವೆತ್ತ, ವೇತ್ರ, ಬೆತ್ರ, ಪೆತ್ತ )
3. ‘ ಕರುಣೆ ‘ ಪದದ ವಿರುದ್ಧಾರ್ಥಕ ಪದ…………
( ಅನುಕರಣೆ, ನಿಕರುಣೆ, ನಿಷ್ಕರುಣೆ, ಅಪಕರುಣೆ )
4. ‘ ಅಂಬಿಗ ‘ ಎಂದರೆ………..
( ರೈತ ಗಾಡಿ ಹೊಡೆಯುವವ, ಗುರು ದೋಣಿ ನಡೆಸುವವ)
1. ಅನ್ನ
2. ಬೆತ್ತ
3. ನಿಷ್ಕರುಣೆ
4. ದೋಣಿ ನಡೆಸುವವ
ಊ ) ಮೊದಲೆರಡು ಪದಗಳಿಗೆ ಸಂಬಂಧ ಇರುವಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .
1. ಹಿಂದು : ಮುಂದು : ಹಿರಿದು :……………….
2 . ಮಾತಿಲ್ಲದವನ : ಲೋಪ ಸಂಧಿ :: ಕರುಣವಿಲ್ಲದವನ :…………….
3. ಮನುಷ್ಯನ : ಷಷ್ಠಿ ವಿಭಕ್ತಿ :: ಕಾಲದಲ್ಲಿ :…………….
4. ಪತ್ರ : ಎಲೆ : ಚಕ್ಕಡಿ :……………….
1. ಕಿರಿದು
2. ವಕಾರಾಗಮಸಂಧಿ
3. ಸಪ್ತಮಿ ವಿಭಕ್ತಿ
4. ಎತ್ತಿನಗಾಡಿ
ಅ . ಕೊಟ್ಟಿರುವ ಪದ್ಯಗಳನ್ನು ಕಂಠಪಾಠ ಮಾಡಿರಿ .
ಮಾತಿನೊಳಗೆ ಮಾತಿಲ್ಲದವನ ಸ್ನೇಹ
ಜಾತಿಜನ್ಮಕಬೇಡ |
ಹೀನ ಮನುಷ್ಯನ ಸ್ನೇಹ ಮಾಡಿ
ನೀನು ಕೆಡಲಿಬೇಡ
ಬೀಸುವ ಗೂಟವಾದೆ
ಕೇರುವ ಮರವಾದೆ
ಮುದುಕರಿಗೆ ಊರುವ ಬೆತ್ತವಾದೆ
ಆಡುವ ಕೋಲಾದೆ
ಹೂಡಲು ಚಕ್ಕಡಿಯಾದೆ
ಸಿದ್ದರಾಮೇಶಗೆ ನಂದಿ ಕೋಲಾದೆ