9ನೇ ತರಗತಿ ಉರಿದ ಬದುಕು ನೋಟ್ಸ್
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ .
1. ಅರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ ಏನೆಂದು ಹೇಳಿದಳು ?
ಉತ್ತರ : ಅರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ “ ಬೇಡ ಅಣ್ಣ ಕಾಲಿಗೆ ಬೀಳುತ್ತೇನೆ ; ಒಳಗೆ ಬರಬೇಡ ನಮ್ಮನ್ನೆಲ್ಲ ಸಾವಿನ ಬಾಯಿಯಲ್ಲಿ ತುರಕಬೇಡ ” ಎಂದು ಹೇಳಿದಳು .
2. ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಯಾರು ?
ಉತ್ತರ : ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ‘ ಶಂಕ್ರಣ್ಣ ‘
3. ದುರ್ಗಪ್ಪ ಯಾರು ?
ಉತ್ತರ : ಆಶ್ರಯ ನೀಡಿದವನು . ಶಾಂತರಸ ದುರ್ಗಪ್ಪ ಭಜನೆ , ತತ್ವಪದ ಆಡುವವನು ಹಾಗೂ ತಿಪ್ಪಣ್ಣ ಮೊದಲಾದ ಹೋರಾಟಗಾರರಿಗೆ 28 ಕನ್ನಡ
4. ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ ಹೇಳಿದ ನೀತಿ ಮಾತುಗಳಾವುವು ?
ಉತ್ತರ : ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ “ ಕುಡಿ ತಮ್ಮ ಮೊದಲು ಜೀವ ಬದುಕಲಿ . ಜೀವಕ್ಕೆ ಯಾವ ಕುಲನೂ ಇಲ್ಲ . ಗಾಳಿಗೆ ಕುಲ ಇದೀಯಾ ತಮ್ಮ ? ನೀರಿಗೆ ಕುಲ ಇದೀಯಾ ? ನೆಲಕ್ಕೆ ಕುಲ ಇದೀಯಾ ? ಇದೆಲ್ಲ ನಾವು ಮಾಡಿಕೊಂಡಿದ್ದು ” ಎಂಬ ನೀತಿಯ ಮಾತುಗಳಾಡಿದರು .
5. ದುರ್ಗಪ್ಪನ ಯಾವ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು ?
ಉತ್ತರ : “ ಗೆಲುವು ನಮಗೆ , ಬದುಕಿದ್ದರೇ ಸ್ವತಂತ್ರ ನೋಡೋಣ ಸತ್ತರೆ ದೇಶಕ್ಕಾಗಿ ಸತ್ತ ಎಂದು ಹೇಳುತ್ತಾರೆ . ಇಂತ ಸಾವು ಯಾರಿಗುಂಟು ಯಾರಿಗಿಲ್ಲ .ಅದು ಪುಣ್ಯದ ಕೆಲಸ , ನಮ್ಮ ಮುಂದಿನವರಾದರೂ ಸ್ವತಂತ್ರ ನೋಡ್ತಾರಲ್ಲ ” ಎಂಬ ದುರ್ಗಪ್ಪನ ಈ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು .