ಕೃತಿಕಾರರ ಪರಿಚಯ
ಡಾಕ್ಟರ್ ಎನ್ ರಂಗನಾಥ ಶರ್ಮ ಕನ್ನಡ ಮತ್ತು ಸಂಸ್ಕೃತಗಳಲ್ಲಿ ಪಾಂಡಿತ್ಯ ಹೊಂದಿದ್ದ ಹಿರಿಯ ಸಾಹಿತಿ ಇವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಡಹಳ್ಳಿ ಗ್ರಾಮದಲ್ಲಿ 1916 ಜನವರಿ 7ರಂದು ಜನಿಸಿದರು ಇವರ್ ಬರೆದಿರುವ ಕೃತಿಗಳು ಏಕಚಕ್ರಂ ಬಾಹುಬಲಿ ವಿಜಯಂ ಗುರುಪಾದ ಮಿತ್ರಚರಿತಂ ಗೊಮ್ಮಟೇಶ ಪಂಚಕಮ್ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ ಲೌಕಿಕ ನ್ಯಾಯಗಳು ಸೂಕ್ತಿ ವ್ಯಾಪ್ತಿ ಉಪನಿಷತ್ತಿನ ಕಥೆಗಳು ವಾಲ್ಮೀಕಿ ಮುನಿಗಳ ಹಾಸ್ಯ ಪ್ರವೃತ್ತಿ ಮುಂತಾದವುಗಳನ್ನು ಕನ್ನಡದಲ್ಲಿ ಬರೆದಿದ್ದಾರೆ.
ಪ್ರಶಸ್ತಿ ಮತ್ತು ಗೌರವಗಳು
ಸಂಸ್ಕೃತ ಆಧ್ಯಾಪಕನಾಗಿ ರಾಷ್ಟ್ರ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಯ ತಿರುಪತಿಯ ಸಂಸ್ಕೃತ ವಿಶ್ವವಿದ್ಯಾನಿಲಯದ ಮಹಾಮಹೋಪಾದ್ಯಾಯ ಗೌರವ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಚುಂಚ ಶ್ರೀ ಪ್ರಶಸ್ತಿ ರಾಷ್ಟ್ರಪತಿಗಳ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
ಪ್ರಸ್ತುತ ಪಠ್ಯ ಭಾಗವನ್ನು ಡಾಕ್ಟರ್ ರಂಗನಾಥ ಶರ್ಮಾರ ಶ್ರೀ ಮದ್ವಾಲ್ಮೀಕಿ ರಾಮಾಯಣಂ ಕೃತಿಯ ಅಯೋಧ್ಯ ಕಾಂಡ ಸಂಪುಟದಿಂದ ಆರಿಸಿಕೊಳ್ಳಲಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಅಮಾತ್ಯರು ಯಾವ ವಿಷಯದಲ್ಲಿ ನಿಪುಣರಾಗಿರಬೇಕು?
ಅಮಾತ್ಯರು ರಾಜ್ಯಶಾಸ್ತ್ರದಲ್ಲಿ ನಿಪುಣರಾಗಿರಬೇಕು.
2. ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು?
ರಾಜನು ಅಲ್ಪ ಪ್ರಯತ್ನದಿಂದ ಬಹು ಫಲವನ್ನು ಕೊಡತಕ್ಕ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು.
3. ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು?
ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಪಂಡಿತ.
4. ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದು ಕೊಡಬಲ್ಲವನು ಯಾರು?
ಮೇಧಾವಿಯು ಶೂರನ್ನು ಕಾರ್ಯದಕ್ಷಣೆ ರಾಜ್ಯಶಾಸ್ತ್ರ ವಿಶಾರದದನು ಸಚಿವನು ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದು ಕೊಡಬಲ್ಲನು.
5. ಜನರು ಅರಸನನ್ನು ಹೇಗೆ ತಿರಸ್ಕರಿಸಬಹುದು?
ಬಲತ್ಕಾರದಿಂದ ಕೆಲಸ ಮಾಡಿಸಿಕೊಂಡು ಶೋಷಿಸುವ ಯಜಮಾನನಂತೆ ಅರಸನು ವರ್ತಿಸಿದರೆ ಜನರು ಅರಸನನ್ನು ತಿರಸ್ಕರಿಸಬಹುದು.
6. ದೇಶಕ್ಕೆ ದೊಡ್ಡ ಗಂಡಾಂತರ ತರ ಬಲ್ಲವರು ಯಾರು?
ದೇಶ ಭ್ರಷ್ಟ ಗೊಳಿಸಿದ ಶತ್ರುಗಳು ಮರಳಿ ದೇಶಕ್ಕೆ ಸೇರಿಸಿಕೊಂಡರೆ ಅವರ ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲರು.
7. ಯಾರೊಡನೆ ಸಮಾಲೋಚಿಸುವುದು ರಾಜ್ಯ ದೋಷ ಎಂದು ರಾಮನು ಹೇಳುತ್ತಾನೆ?
ಅನುಭವವಿಲ್ಲದ ಅವಿವೇಕಿಗಳಾಡನೆ ಸಮಾಲೋಚಿಸುವುದು ರಾಜ ದೋಷ ಎಂದು ರಾಮನು ಹೇಳುತ್ತಾನೆ.
ಈ ಕೆಳಗಿನ ಪ್ರಶ್ನೆಗಳಿಗೆ 5-6 ವಾಕ್ಯದಲ್ಲಿ ಉತ್ತರಿಸಿ
1. ಮಂತ್ರಾಲೋಚನೆಯನ್ನು ಹೇಗೆ ನಡೆಸಬೇಕೆಂದು ರಾಮನ ಅಭಿಪ್ರಾಯ?
ರಾಜ್ಯಶಾಸ್ತ್ರ ನಿಪುಣರಾದ ಅಮಾತ್ಯ ರೊಂದಿಗೆ ಮಂತ್ರಾಲೋಚನೆಯನ್ನು ಗೌಪ್ಯವಾಗಿ ನಡೆಸಬೇಕು ಮಂತ್ರಾಲಯ ಅಗತ್ಯಕ್ಕಿಂತ ಹೆಚ್ಚಿನ ಮಂದಿಯನ್ನು ಸೇರಿಸಿಕೊಳ್ಳಬಾರದು ಮಂತ್ರಾಲೋಚನೆಯು ಕಾರ್ಯರೂಪಕ್ಕೆ ಬರುವುದರೊಳಗೆ ರಾಷ್ಟ್ರದಲ್ಲಿ ಬಹಿರಂಗ ಭಾಗಬಾರದು. ಮೊದಲೇ ಸಮಾಂತರ ರಾಜರಿಗೆ ತಿಳಿಯಬಾರದು ಅದು ಸಾಮಂತರಿಗೆ ಗೊತ್ತಾಗುವ ವರ್ಷದಲ್ಲಿ ಪೂರ್ಣವಾಗಿ ನಡೆದು ಹೋಗಿರಬೇಕು ಇಲ್ಲವೇ ಅರ್ಧದಷ್ಟು ಆದರೂ ಆಚರಣೆಯಲ್ಲಿ ಬಂದಿರಬೇಕು.
2. ರಾಜ್ಯದ ಅಮಾತ್ಯರಲ್ಲಿ ಯಾವ ಗುಣವಿರಬೇಕು?
ಅಮರ್ತ್ಯನು ರಾಜ್ಯಶಾಸ್ತ್ರ ನಿಪುಣನಾಗಿರಬೇಕು ಮಂತ್ರಾಲೋಚನೆಯನ್ನು ಗೌಪ್ಯವಾಗಿ ಇಡುವವನಾಗಿರಬೇಕು ವೇದವ್ಯೂ ಚೂರನ್ನು ಕಾರ್ಯದಕ್ಷಣೆ ಆಗಿರಬೇಕು ಲಂಚವನ್ನು ಮುಟ್ಟದವನು ಪ್ರಾಮಾಣಿಕನು ಆಗಿರಬೇಕು ರಾಜ್ಯದ ಆಡಳಿತವನ್ನು ಸರಿಯಾಗಿ ನಿರ್ವಹಿಸಿ ರಾಜನಿಗೆ ಶ್ರೇಯಸ್ಸನ್ನು ತಂದುಕೊಡಬಲ್ಲವನಾಗಿರಬೇಕು.
3. ಯಾವ ಮೂರು ವ್ಯಕ್ತಿಗಳನ್ನು ರಾಜನ ತ್ಯಜಿಸಬೇಕು ?ಏಕೆ?
ಉಪಾಯದಿಂದ ಹಣ ಕೇಳುವ ವೈದ್ಯನನ್ನು ಒಡೆಯನನ್ನು ದೂಷಿಸುವ ಸೇವಕನನ್ನು ಖಜಾನೆ ಐಶ್ವರ್ಯದ ಮೇಲೆ ಕಂಟಿರುವ ಸೈನಿಕನನ್ನು ರಾಜನು ತ್ಯಜಿಸಬೇಕು ಏಕೆಂದರೆ ಈ ವ್ಯಕ್ತಿಗಳ ಕುತಂತ್ರದಿಂದಲೇ ರಾಜನು ವಿಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು ಆದರಿಂದ ಅವರಿಗೆ ಉಗ್ರ ಶಿಕ್ಷೆಯನ್ನು ನೀಡಿ ರಾಜನು ತನ್ನಿಂದ ಇಂತವರನ್ನು ದೂರ ಬಿಡಬೇಕು.
4. ದೂತನು ಹೇಗಿರಬೇಕು?
ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ವಿದ್ವಾಂಸರನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು ಹೇಳಿ ಕಳಿಸಿದ ಸಂದೇಶವನ್ನಷ್ಟೇ ತಿಳಿಸುವ ಸತ್ಯವಂತನಾಗಿರಬೇಕು ವ್ಯಕ್ತಿ ವಸ್ತುಗಳ ಮೌಲ್ಯವನ್ನು ಯೋಗ್ಯತೆಯನ್ನು ಸರಿಯಾಗಿ ಗುರುತಿಸಬಲ್ಲ ನಿಷ್ಠಾವಂತನಾಗಿರಬೇಕು.
5. ಸೇವಕರ ವಿಷಯದಲ್ಲಿ ರಾಜರು ಹೇಗೆ ವರ್ತಿಸಬೇಕು?
ಸೇವಕರು ನಿರ್ಭಯರಾಗಿ ಬಂದು ಎದುರಿಗೆ ನಿಲ್ಲುವ ಸಲಿಗೆಯನ್ನು ಕೊಡಬಾರದು ಅಥವಾ ಹತ್ತಿರವೇ ಸುಳಿಯದೆ ದೂರಕ್ಕೆ ಸರಿಯುವಂತೆ ಅರ್ಜಿ ಸಲುಬಾರದು ಅವರ ವಿಷಯದಲ್ಲಿ ಹೆಚ್ಚು ಸಲಿಗೆಯು ಸಲ್ಲದು ಹೆಚ್ಚು ಹೊಂದಿಸುವುದು ಸಲ್ಲದು ಇವೆರಡರ ನಡು ದಾರಿಯನ್ನು ರಾಜನು ಕಾಯ್ದುಕೊಳ್ಳಬೇಕು ಎಂದು ರಾಮನು ಹೇಳುತ್ತಾನೆ.
6. ಖಜಾನೆಯನ್ನು ಹೇಗೆ ನಿಭಾಯಿಸಬೇಕೆಂದು ರಾಮನ ಹೇಳುತ್ತಾನೆ?
ಆದಾಯವು ಬೇಕಂತ ಹೆಚ್ಚಿರಬೇಕು ರಾಜ್ಯದ ಬೊಕ್ಕಸದಲ್ಲಿ ಸಂಗ್ರಹಿಸುವ ಸಂಪತ್ತು ರಾಜ್ಯದ ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ವಿನಿಯೋಗವಾಗಬೇಕು ಹಾಗೆಂದು ಅದನ್ನು ತುಳುಕುವಷ್ಟು ತುಂಬಿಸಿಕೊಳ್ಳಲು ಅನರ್ಥ ಅನ್ಯಾಯಗಳ ಮಾರ್ಗವನ್ನು ಹಿಡಿಯಬಾರದು ಬಗ್ಗೆ ಹೇಳುತ್ತಾನೆ.
ಈ ಕೆಳಗಿನ ಪ್ರಶ್ನೆಗಳಿಗೆ ಹತ್ತು ವಾಕ್ಯದಲ್ಲಿ ವಿಸ್ತಾರವಾಗಿ ಉತ್ತರಿಸಿ
1. ರಾಜಾಡಳಿತದ ವಿಷಯದಲ್ಲಿ ರಾಮನ ಉಪದೇಶವನ್ನು ಸಂಗ್ರಹವಾಗಿ ಬರೆಯಿರಿ.
ರಾಜ್ಯವನ್ನು ಆಳತಕ್ಕವರಿಗೆ ಮಂತ್ರಾಲಯ ಮುಖ್ಯವಾದದ್ದು ಅದನ್ನು ಗೌಪ್ಯವಾಗಿ ಇಟ್ಟಿರಬೇಕು ಮೇಧಾವಿಶೂರನು ಕಾರ್ಯದಕ್ಷನ್ನು ರಾಜ್ಯಶಾಸ್ತ್ರ ವಿಷಯದನು ಆದ ಸಚಿವನನ್ನು ರಾಜನು ಹೊಂದಿರಬೇಕು ಅವನು ಆಡಳಿತದಲ್ಲಿ ರಾಜನಿಗೆ ಶ್ರೇಯಸ್ಸನ್ನು ತಂದು ಕೊಡುವನು ಅಧಿಕಾರಿಗಳನ್ನು ಅವರ ಕುಶಲತೆಗೆ ಯೋಗ್ಯತೆಗೆ ತಕ್ಕಂತೆ ನೇಮಿಸಿಕೊಳ್ಳಬೇಕು ಸೇನಾ ನಾಯಕರನ್ನು ಸೈನಿಕರನ್ನು ರಾಜನು ಚೆನ್ನಾಗಿ ನೋಡಿಕೊಳ್ಳಬೇಕು ದೇಶದಲ್ಲಿಯೇ ಹುಟ್ಟಿ ಬೆಳೆದ ವಿದ್ವಾಂಸರನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು ಶತ್ರು ಪಕ್ಷದಲ್ಲಿನ ಇಲಾಖೆಗಳನ್ನು ಗಮನಿಸಲು ಕೂಡಚಾರರನ್ನು ನೇಮಿಸಬೇಕು ರಾಜ್ಯದ ಬೊಕ್ಕಸದಲ್ಲಿನ ಸಂಪತ್ತನ್ನು ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಉಪಯೋಗಿಸಬೇಕು ಖರ್ಚಿಗಿಂತ ಆದಾಯವು ಹೆಚ್ಚಿರುವ ಹಾಗೆ ನೋಡಿಕೊಳ್ಳಬೇಕು ರಾಜನು ಯಂತ್ರ ಯಂತ್ರಜ್ಞಾನರನ್ನು ಶಿಲ್ಪಿಗಳನ್ನು ಆಯುಧಗಳನ್ನು ಧನುರ್ದಾರಿಗಳಾದ ಸೈನಿಕರನ್ನು ಹೊಂದಿರಬೇಕು.
2.
೨.ರಾಜನಲ್ಲಿ ತಲೆದೋರಬಹುದಾದ ಹದಿನಾಲ್ಕು ದೋಷಗಳ ಬಗ್ಗೆ ವಿವರಿಸಿ .
ರಾಜನಲ್ಲಿ ಸಂಭವಿಸಬಹುದಾದ ದೋಷಗಳು ಹದಿನಾಲ್ಕು , ಅವು ನಾಸ್ತಿಕಬುದ್ಧಿ , ಸುಳ್ಳು , ಸಿಟ್ಟು , ಅನವಧಾನ , ಚಟುವಟಿಕೆಯಿಲ್ಲದೆ ಕೆಲಸವನ್ನು ತಡಮಾಡುವುದು , ಪ್ರಾಜರಾದ ಸಜ್ಜನರೊಡನೆ ಸೇರದಿರುವುದು , ಸೋಮಾರಿತನ , ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು , ಮಂತ್ರಿಗಳೊಡನೆ ಸಮಾಲೋಚಿಸದೆ ರಾಜ್ಯಕಾರ್ಯಗಳಲ್ಲಿ ತಾನೊಬ್ಬನೇ ನಿರ್ಧಾರವನ್ನು ತೆಗೆದುಕೊಳ್ಳುವುದು . ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು , ನಿಶ್ಚಯಿಸಿದ ಕಾರ್ಯಗಳನ್ನು ಆರಂಭಿಸುರುವರು , ಮಂತ್ರಾಲೋಚನೆಯನ್ನು ರಹಸ್ಯವಾಗಿಡದೆ ಬಹಿರಂಗಪಡಿಸುವುದು ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು ಹಾಗೂ ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ – ಈ ಹದಿನಾಲ್ಕು ರಾಜದೋಷಗಳಿಗೆ ಅವಕಾಶವನ್ನು ಕೊಡಬೇಡ ,
ಈ ಮಾತುಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.
೧. ಸಾವಿರ ಮೂರ್ಖರಿಗಿಂತ ಒಬ್ಬ ಪಂಡಿತ ಲೇಸು.
ಈ ಮೇಲಿನ ವಾಕ್ಯವನ್ನು ಡಾಕ್ಟರಿಂದ ರಂಗನಾಥ ಶರ್ಮ ಅವರು ಬರೆದಿರುವ ಶ್ರೀ ಮದ್ವಾಲ್ಮೀಕಿ ರಾಮಾಯಣಂ ಕೃತಿಯ ಅಯೋಧ್ಯ ಖಂಡದಿಂದ ಆರಿಸಿ ಅಭ್ಯಾಸಕ್ಕೆ ಇಟ್ಟಿರುವ ರಾಮರಾಜ್ಯ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ
ಸಾವಿರ ಮೂರ್ಖರಿಗಿಂತಲೂ ಒಬ್ಬ ಪಂಡಿತನೇ ಲೇಸೆಂದು ತಿಳಿದು ಅವನನ್ನು ಆದರಿಸುವೆಯಾ? ಏಕೆಂದರೆ ಕಷ್ಟಕಾಲದಲ್ಲಿ ಪಂಡಿತನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನು ಹೇಳಲಾಗಿದೆ.
ಮೂರ್ಖರ ಸಂಖ್ಯೆ ಸಾವಿರವಿರಲಿ, ಹತ್ತು ಸಾವಿರವೇ ಇರಲಿ, ರಾಜನಿಗೆ ಆದರಿಂದ ಯಾವ ಸಹಾಯವೂ ಆಗುವುದಿಲ್ಲ. ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಆದ ಸಚಿವನು ಒಬ್ಬನೇ ಆದರೂ ರಾಜನಿಗಾಗಲೀ ರಾಜ್ಯದ ಆಡಳಿತವನ್ನು ನಿರ್ವಹಿಸುವವನಿಗಾಗಲೀ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.
೨. ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು
ಈ ಮೇಲಿನ ವಾಕ್ಯವನ್ನು ಡಾಕ್ಟರಿಂದ ರಂಗನಾಥ ಶರ್ಮ ಅವರು ಬರೆದಿರುವ ಶ್ರೀ ಮದ್ವಾಲ್ಮೀಕಿ ರಾಮಾಯಣಂ ಕೃತಿಯ ಅಯೋಧ್ಯ ಖಂಡದಿಂದ ಆರಿಸಿ ಅಭ್ಯಾಸಕ್ಕೆ ಇಟ್ಟಿರುವ ರಾಮರಾಜ್ಯ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ
ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು ಹೇಳಿಕಳಿಸಿದ ಸಂದೇಶವನ್ನು ಮಾತ್ರ ತಿಳಿಸುವಂತ ಸತ್ಯವಂತನಾಗಿರಬೇಕು.
ವ್ಯಕ್ತಿ ವಸ್ತುಗಳ ಮೌಲ್ಯವನ್ನುಯೋಗ್ಯತೆಯನ್ನು ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು. ಹೀಗೆ ರಾಮನು ಹೇಳಿದಂತೆ ಚಾಣಾಕ್ಷತನವನ್ನು ಹೊಂದಿರುವ ದೂತನು ಇದ್ದರೆ ಆತನು ರಾಜನನ್ನು ಶತ್ರುಗಳ ಸಂಚಿನಿಂದ ಕಾಪಾಡಬಲ್ಲವನಾಗುವನು ಸುತ್ತಮುತ್ತಲಿನ ರಾಜ್ಯಗಳಲ್ಲಿ ನಡೆಯುವ ವಿಚಾರಗಳನ್ನು ಸರಿಯಾಗಿ ರಾಜನಿಗೆ ಮುಟ್ಟಿಸಬಲ್ಲವನಾಗಿರುತ್ತಾನೆ.
೩. ಪೂರ್ವಿಕರ ವ್ಯಕ್ತಿತ್ವದ ಅತ್ಯುತ್ತಮ ಅಂಶಗಳನ್ನು ರಾಜನು ಅಳವಡಿಸಿಕೊಳ್ಳಬೇಕು.
ಈ ಮೇಲಿನ ವಾಕ್ಯವನ್ನು ಡಾಕ್ಟರಿಂದ ರಂಗನಾಥ ಶರ್ಮ ಅವರು ಬರೆದಿರುವ ಶ್ರೀ ಮದ್ವಾಲ್ಮೀಕಿ ರಾಮಾಯಣಂ ಕೃತಿಯ ಅಯೋಧ್ಯ ಖಂಡದಿಂದ ಆರಿಸಿ ಅಭ್ಯಾಸಕ್ಕೆ ಇಟ್ಟಿರುವ ರಾಮರಾಜ್ಯ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ
ಇತಿಹಾಸವನ್ನು ಅವಲೋಕಿಸಿದಾಗ ನಮಗೆ ಅನೇಕ ಮಹಾನುಭಾವರ ಪರಿಚಯವಾಗುತ್ತದೆ. ಅವರೆಲ್ಲ ತಮ್ಮ ಉದಾತ್ತ ವ್ಯಕ್ತಿತ್ವದಿಂದ ನಮ್ಮ ಗಮನ ಸೆಳೆಯುತ್ತಾರೆ.
ತಮ್ಮ ವ್ಯಕ್ತಿತ್ವದಿಂದಾಗಿ ಅಪೂರ್ವವಾದ ಸಾಧನೆಯನ್ನು ಆದಕಾರಣ ರಾಮನು ಸಹ ಭರತನಿಗೆ ರಾಜನ ಆಡಳಿತದ ಬಗ್ಗೆ ಹೇಳುವಾಗ ರಾಜನು ತನ್ನ ಪೂರ್ವಿಕರ ವ್ಯಕ್ತಿತ್ವದ ಅತ್ಯತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಾನೆ. ಈ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಆಡಳಿತವು ಸುಲಭವಾಗುತ್ತದೆ. ಮತ್ತು ಪ್ರಜೆಗಳು ಸಂತುಷ್ಟರಾಗುತ್ತಾರೆ. ಉತ್ತಮ ವ್ಯಕ್ತಿತ್ವವುಳ್ಳ ರಾಜನು ಪ್ರಜೆಗಳ ಪ್ರೀತಿಗೆ ಗೌರವಕ್ಕೆ ಪಾತ್ರನಾಗುತ್ತಾನೆ.