ಪಠ್ಯಪೂರಕ ಅಧ್ಯಯನ-1 : ಉದಾತ್ತ ಚಿಂತನೆಗಳು
ಪ್ರಶ್ನೆಗಳಿಗೆ ಒಂದು – ಎರಡು ವಾಕ್ಯಗಳಲ್ಲಿ ಉತ್ತರಿಸಿ .
೧. ಕ್ರಿಯಾ ಸ್ವಾತಂತ್ರ್ಯ ಎಂದರೇನು ?
ಉತ್ತರ :ಕ್ರಿಯಾ ಸ್ವಾತಂತ್ರ್ಯವೆಂದರೆ , ತನಗೆ ಇಷ್ಟ ಬಂದ ಕೆಲಸ ಮಾಡಲು ಇರುವ ವ್ಯಕ್ತಿಗೆ ಅವಕಾಶವಿರುವುದು , ಅದು ಆದು ನಿರ್ದಿಷ್ಟ ಕಾರ್ಯಗಳನ್ನು ಈ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲದ ಕಡೆ ಸ್ವಾತಂತ್ರ್ಯವೂ ಇರುವುದಿಲ್ಲ , ಶೋಷಣೆ ಎಲ್ಲಿ ಇಲ್ಲವಾಗಿದೆಯೋ ಒಂದು ವರ್ಗವು ಇನ್ನೊಂದು ವರ್ಗವನ್ನು ತುಳಿಯುತ್ತಿಲ್ಲವೋ , ಎಲ್ಲಿ ನಿರುದ್ಯೋಗವಿಲ್ಲವೋ , ಬಡತನವಿಲ್ಲವೋ , ಎಲ್ಲಿ ತನ್ನ ಕೆಲಸದ ಫಲವಾಗಿ ತನ್ನ ಕೆಲಸ , ಮನೆ , ಆಹಾರಗಳನ್ನು ಕಳೆದುಕೊಂಡು ಬಿಡುವ ಭೀತಿ ವ್ಯಕ್ತಿಗೆ ಇರುವುದಿಲ್ಲವೋ ಅಲ್ಲಿ ನಿಜವಾದ ಕ್ರಿಯಾ ಸ್ವಾತಂತ್ರ್ಯ , ಇದೆ ಎಂದು ಹೇಳಬಹುದು .
೨. ರಾಜಕೀಯ ಸ್ವಾತಂತ್ರ್ಯದ ಮಹತ್ವವೇನು ?
ಉತ್ತರ :ರಾಜಕೀಯ ಸ್ವಾತಂತ್ರ್ಯ ಇರುವುದು ವ್ಯಕ್ತಿಗೆ ಶಾಸನಗಳನ್ನು ರಚಿಸುವುದರಲ್ಲಿ , ಸರಕಾರಗಳ ಸ್ಥಾಪನೆ , ವಿಸರ್ಜನೆಗಳಲ್ಲಿ ಪಾಲು ಇರುವ ಪಕ್ಕಿನಲ್ಲಿ , ಸರಕಾರ ಇರುವುದಾದರೂ ಜನರಿಗೆ ಜೀವನ , ಸ್ವಾತಂತ್ರ್ಯ , ಸಂತೋಷಾನ್ವೇಷಣೆಗಳನ್ನು ಒದಗಿಸಿ ಕೊಡುವ ಸಲುವಾಗಿ , ಆದ್ದರಿಂದ ಸರಕಾರವು ಯಾರನ್ನು ರಕ್ಷಿಸುವುದು ತನ್ನ ಕರ್ತವ್ಯವಾಗಿದೆಯೋ , ಆ ಜನರಿಂದಲೇ ತನ್ನ ಅಧಿಕಾರವನ್ನೂ ಬಲವನ್ನೂ ಪಡೆದುಕೊಳ್ಳಬೇಕಾಗುತ್ತದೆ. ವಾಸ್ತವವಾಗಿ ರಾಜಕೀಯ ಸ್ವಾತಂತ್ರ್ಯ ಎನ್ನುವುದು ಮಾನವ ವ್ಯಕ್ತಿತ್ವ ಮತ್ತು ಸಮಾನತೆಗಳ ತತ್ತ್ವದಿಂದ ಅನುಗಮನ ಮಾಡಿದ ತತ್ತ್ವವೇ ಸರಿ . ಏಕೆಂದರೆ ರಾಜಕೀಯವಾದ ಸಮಸ್ತ ಅಧಿಕಾರವೂ ಜನತೆಯಿಂದ ಬರುತ್ತದೆ . ತಮ್ಮ ಸಾರ್ವಜನಿಕವಾದ ಹಾಗೂ ಖಾಸಗಿಯಾದ ಜೀವನವನ್ನು ನಿರ್ದೇಶಿಸುವ , ನಿಯಂತ್ರಿಸುವ ಸಾಮರ್ಥ್ಯವನ್ನು ಅವರು ತಾವೇ ಹೊಂದಿರುತ್ತಾರೆಯೇ ಹೊರತು ಬೇರೆ ಯಾರೂ ಅಲ್ಲ . ಎಂದು ಇದರ ಅರ್ಥವಾಗುತ್ತದೆ .
೩. ಅಂದವಾದ ಬರೆವಣಿಗೆಯ ಬಗ್ಗೆ ಗಾಂಧೀಜಿಯವರ ಅಭಿಪ್ರಾಯವೇನು ?
ಉತ್ತರ :ಅಂದವಾದ ಅಕ್ಷರ , ಒಳ್ಳೆಯ ಬರೆವಣಿಗೆ , ಶಿಕ್ಷಣದ ಅವಶ್ಯಕ ಅಂಶವಲ್ಲವೆಂಬ ಭಾವನೆ ನನಗೆ ಹೇಗೆ ಬಂತೋ ಕಾಣೆ , ಇಂಗ್ಲೆಂಡ್‌ಗೆ ಹೋಗುವವರೆಗೆ ನನ್ನಲ್ಲಿ ಇದೇ ಭಾವನೆ ಇತ್ತು . ಅನಂತರ ದಕ್ಷಿಣ ಆಫ್ರಿಕಾಕ್ಕೆ ಹೋದ ಮೇಲೆ , ಅಲ್ಲಿ ಸುಶಿಕ್ಷಿತ ಯುವಕರ ಮತ್ತು ವಕೀಲರ ಮುತ್ತು ಪೋಣಿಸಿದಂತಿದ್ದ ಸುಂದರ ಬರೆವಣಿಗೆ ನೋಡಿ , ನನಗೆ ನಾಚಿಕೆಯೂ ಪಶ್ಚಾತ್ತಾಪವೂ ಉಂಟಾಯಿತು . ಕೆಟ್ಟ ಅಕ್ಷರದ ಬರೆವಣಿಗೆ ಅಪಕ್ವ ಮತ್ತು ಅಪೂರ್ಣ ಶಿಕ್ಷಣದ ಚಿಹ್ನೆ ಎಂದು ನಾನು – ಅರಿತೆನು , ಈಚೆಗೆ ನನ್ನ ಬರಹವನ್ನು ತಿದ್ದಿಕೊಳ್ಳಬೇಕೆಂದು ಪ್ರಯತ್ನಿಸಿದೆ . ಸುಟ್ಟಮಡಕೆಗೆ ಹಸಿಮಣ್ಣನ್ನು ಮೆತ್ತಲು ಸಾಧ್ಯವೆ ? ಆ ವೇಳೆಗೆ ಕಾಲ ಮೀರಿ ಹೋಗಿತ್ತು . ಚಿಕ್ಕವಯಸ್ಸಿನಲ್ಲಿ ಅಸಡ್ಡೆ ಮಾಡಿದುದನ್ನು ತಿದ್ದಿಕೊಳ್ಳಲು ಆಗಲಿಲ್ಲ . ನನ್ನ ಉದಾಹರಣೆಯಿಂದ ಒಳ್ಳೆಯ ಬರೆವಣಿಗೆ ಉತ್ತಮ ಶಿಕ್ಷಣದ ಅವಶ್ಯವಾದ ಅಂಶವೆಂಬುದನ್ನು ಪ್ರತಿಯೊಬ್ಬ ಯುವಕನೂ , ಯುವತಿಯೂ ತಿಳಿದುಕೊಳ್ಳಲಿ .
೪. ‘ ಅನ್‌ಟು ದಿಸ್ ಲಾಸ್ಟ್ ‘ ಕೃತಿ ಗಾಂಧೀಜಿಯವರ ಮೇಲೆ ಯಾವ ಪರಿಣಾಮ ಬೀರಿತು ?
ಉತ್ತರ :ರಸ್ಕಿನ್‌ನ “ ಅನ್‌ಟು ದಿಸ್ ಲಾಸ್ಟ್ ” ಎಂಬ ಪುಸ್ತಕವನ್ನು ಓದಲು ಪ್ರಾರಂಭಿಸಿದುದೇ ತಡ , ಅದನ್ನು ಕೆಳಗಿಳಿಸಲು ಸಾಧ್ಯವಾಗಲಿಲ್ಲ . ಅದು ನನ್ನ ಮನಸ್ಸನ್ನು ಸೆರೆಹಿಡಿಯಿತು . ಆ ಪುಸ್ತಕದಲ್ಲಿ ಹೇಳಿದ್ದ ಧೈಯಗಳಿಗನುಸಾರವಾಗಿ ನನ್ನ ಜೀವನವನ್ನು ನನ್ನ ವಿದ್ಯಾಭ್ಯಾಸದ ಕಾಲದಲ್ಲಿ ಪಠ್ಯಪುಸ್ತಕಗಳ ಹೊರತು ಮತ್ತೇನನ್ನೂ ಓಡಲಿಲ್ಲವೆಂದು ಹೇಳಬಹುದು . ನಾನು ಜೀವನದ ಕರ್ಮರಂಗವನ್ನು ಪ್ರವೇಶಿಸಿದ ಮೇಲೆ , ಏನನ್ನೂ ಓದಲು ನನಗೆ ಸಮಯವೆ ದೊರೆಯಲಿಲ್ಲ . ಆದುದರಿಂದ ನನಗೆ ಹೆಚ್ಚಾದ ಪುಸ್ತಕ ಜ್ಞಾನವಿದೆಯೆಂದು ಹೇಳಲಾರೆ . ನನ್ನ ಮಿತವಾದ ವ್ಯಾಸಂಗ ನಾನು ಓದಿದುದನ್ನು ಚೆನ್ನಾಗಿ ಅರಗಿಸಿಕೊಳ್ಳಲು ಇವುಗಳ ಪೈಕಿ , ಬಾಳಿನಲ್ಲಿ ತತ್‌ಕ್ಷಣ ಪರಿಣಾಮಕಾರಿಯಾದ ಬದಲಾವಣೆಯನ್ನು ಮಾಡಿದುದು ‘ ಅನ್‌ಟು ದಿಸ್ ಲಾಸ್ಟ್ ‘ ಎಂಬ ಪುಸ್ತಕ , ಅನಂತರ ನಾನು ಆ ಪುಸ್ತಕವನ್ನು ಸರ್ವೋದಯವೆಂಬ ಗುಜರಾತಿ ( ಭಾಷೆ ) ಗೆ ಅನುವಾದ ಮಾಡಿದೆ .
೫. ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗುವುದು ಯಾವಾಗ ?
ಉತ್ತರ :ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿ , ಅವರು ವಿಷಯಗ್ರಹಣ ಮಾಡಿಕೊಳ್ಳುವರು . ಆದರೆ ಅವರಿಗೆ ಮತ್ತೊಂದು ಅವಶ್ಯಕತೆ ಇದೆ . ಅದು ಸಂಸ್ಕೃತಿ , ನೀವು ಅವರಿಗೆ ಇದನ್ನು ಕೊಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು . ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು . ಕೇವಲ ಜ್ಞಾನರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ . ಜಗತ್ತಿಗೆ ಜ್ಞಾನರಾಶಿಯನ್ನೇ ಕೊಡಬಹುದು . ಆದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ . ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು
೬ , ಬಾಳಿನಲ್ಲಿ ತೃಪ್ತಿ ದೊರಕಬೇಕಾದರೆ ಏನು ಮಾಡಬೇಕೆಂಬುದು ವಿವೇಕಾನಂದರ ಅಭಿಪ್ರಾಯ ?
ಉತ್ತರ :ಯಾರೂ ದುರ್ಬಲರಲ್ಲ . ಆತ್ಮ ಸರ್ವಶಕ್ತ , ಸರ್ವಜ್ಞ ಏಳಿ , ಯಾರಿಗೂ ಮಣಿಯಬೇಡಿ . ನಿಮ್ಮಲ್ಲಿರುವ ಭಗವಂತನನ್ನು ವ್ಯಕ್ತಗೊಳಿಸಿ , ಅದನ್ನು ಅಲ್ಲಗಳೆಯಬೇಡಿ . ಏಳಿ , ದುರ್ಬಲತೆಯ ಪರವಶತೆಯಿಂದ ಪಾರಾಗಿ ಪಾರಾಗುವುದಕ್ಕೆ ಮಾರ್ಗ ನಿಮ್ಮ ಶಾಸ್ತ್ರಗಳಲ್ಲಿಯೇ ಇದೆ . ನಿಜವಾದ ಆತ್ಮನ ವಿಷಯವನ್ನು ನೀವು ಕೇಳಿ , ಇತರರಿಗೆ ಬೋಧಿಸಿ , ನಿದ್ರಿಸುವವರನ್ನು ಎಬ್ಬಿಸಿ . ಅವರು ಹೇಗೆ ಜಾಗೃತರಾಗುತ್ತಾರೆ ಎಂಬುದನ್ನು ನೋಡಿ , ಆಗ ಶಕ್ತಿ ಬರುವುದು . ಮಹಿಮೆ ಬರುವುದು , ಶ್ರೇಯಸ್ಸು ಬರುವುದು , ಪಾವಿತ್ರ್ಯ ಬರುವುದು . ಈಗ ನಿದ್ರಿಸುತ್ತಿರುವ ಜೀವ ಜಾಗೃತವಾಗಿ ಕಾರ್ಯೋನ್ಮುಖನಾಗುವಾಗ ಅವನಲ್ಲಿ ಎಲ್ಲ ಕಲ್ಯಾಣ ಗುಣಗಳೂ ಬರುವುವು . ನಿಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಿಮ್ಮ ಮೇಲೆ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮುಖರಾಗಿ , ವೇದಾಂತದ ಸಂದೇಶವನ್ನು ಪ್ರತಿ ಮನೆಗೂ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ , ಅನಂತರ ಮಹಾ ಆದರ್ಶಕ್ಕಾಗಿ ಬಾಳಿ ದುಡಿದು ಮಡಿದಿರಿ ಎಂಬ ಲವನ್ನು ಸಾಧಿಸಿದ್ದರೂ ನೀವು ಒಂದು ಇರುತ್ತದೆ .