10ನೇ ತರಗತಿ ವೃಕ್ಷಸಾಕ್ಷಿ ಕನ್ನಡ ನೋಟ್ಸ್ vruksha shakshi kannada notes

 

 ವೃಕ್ಷಸಾಕ್ಷಿ ಕನ್ನಡ ನೋಟ್ಸ್ 






ಗದ್ಯಪಾಠ ೦೭- ವೃಕ್ಷಸಾಕ್ಷಿ

ಕವಿ – ಕಾವ್ಯ ಪರಿಚಯ:

ದುರ್ಗಸಿಂಹ
ದುರ್ಗಸಿಂಹ  ಕವಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ (ಈಗಿನ ಗದಗ ಜಿಲ್ಲೆಯ ರೋಣ
ತಾಲೂಕಿನ ಸವಡಿ) ಕ್ರಿ.ಶ.೧೦೩೧ ಜನಿಸಿದನು. ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ
ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು. ಮತದರ್ಮ  ಸಮನ್ವಯಕಾರನಾದ ಈತ
ಸಯ್ಯಡಿಯಲ್ಲಿ ಹಲವಾರು ಹರಿಹರಭವನಗಳನ್ನು   ನರ‍್ಮಿಸಿದನೆಂದು  ತಿಳಿದುಬಂದಿದೆ.ಈತನು
  ‘ಪಂಚತಂತ್ರ ಎಂಬ ಕೃತಿಯನ್ನು ರಚಿಸಿದ್ದಾನನೆ. ಪಂಚತಂತ್ರದಲ್ಲಿ ಭೇದ, ಪರೀಕ್ಷಾ,ವಿಶ್ವಾಸ,
ವಂಚನಾ ಮತ್ತು ಮಿತ್ರಕಾರ್ಯ ಎಂಬ ಐದು  ತಂತ್ರಗಳನ್ನಾಧರಿಸಿ  ೪೮ ಉಪಕತೆಗಳಿವೆ.


ಬಹು ಆಯ್ಕೆ ಪ್ರಶ್ನೆಗಳು

೧. ‘ಅನೃತ’ ಪದದ ಅರ್ಥ.
ಅ] ನಿಜ ಆ] ಸುಳ್ಳು ಇ] ಮಿತ್ರ ಈ] ಶತ್ರು.
೨. ‘ಅಬ್ಜೋದರ’ ಸಮಾಸಕ್ಕೆ ಉದಾಹರಣೆ  .
ಅ] ದ್ವಿಗು ಆ] ಬಹವ್ರೀಹಿ ಇ] ತತ್ಪುರುಷ  ಈ] ಕರ್ಮಧಾರಯಾ.
೩. ‘ಬಳಾರಿಯ ಮನೆಯಂ ಪರಕೆಯ  ಕುರಿಯಂ ಪುಗಿಸುವಂತೆ’ ಇಲ್ಲಿ ಬಂದಿರುವ ಅಲಂಕಾರ
ಅ] ಶ್ಲೇಷಾ ಆ] ಉಪಮಾ  ಇ] ರೂಪಕ ಈ] ಅರ್ಥಾಂತರನ್ಯಾಸ
೪. ‘ತೊಳೆಯದೆ’ ಈ ಅವ್ಯಯಕ್ಕೆ ಉದಾಹರಣೆ.
ಅ] ಭಾವಸೂಚಕವ್ಯಯ ಆ] ಕೃದಂತಾವ್ಯಯ ಇ] ತದ್ಧಿತಾಂತವ್ಯಯ ಈ] ಸಾಮಾನ್ಯವ್ಯಯ
೫. ‘ರವಿಯು ಮೂಡಣದಲ್ಲಿ ಹುಟ್ಟುತ್ತಾನೆ’ ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದ
ಅ] ಗುಣವಾಚಕ ಆ] ದಿಗ್ವಾಚಕ ಇ] ವಸ್ತುವಾಚಕ ಈ] ಪರಿಮಾಣವಾಚಕ
೬. ‘ಪುದಿವಿನೊಳ್’ ಈ ಪದದಲ್ಲಿರುವ  ವಿಭಕ್ತಿ 
ಅ] ಚತುರ್ಥೀ ಆ] ದ್ವಿತಿಯಾ ಇ] ಪಂಚಮೀ ಈ] ಸಪ್ತಮೀ.
೭. ‘ಆದಿತ್ಯೋದಯ’ ಈ ಸಂಧಿಗೆ ಉದಾಹರಣೆ .
ಅ] ವೃದ್ಧಿ ಆ] ಗುಣ ಇ] ಯಣ್ ಈ] ಆಗಮ  ಸಂಧಿ
೮. ‘ತಮ್ಮ  ತಮ್ಮ ಮನೆಗೆಲ್ಲರುಂ ಪೋದರ್’ ಅಡಿಗೆರೆ ಎಳೆದ ಪದದ ಸರ್ವನಾಮರೂಪ.
ಅ] ಸಾಂದರ್ಭಿಕ         ಆ] ಆತ್ಮಾರ್ಥಕ
ಇ] ಪ್ರಶ್ನಾರ್ಥಕ     ಈ] ಪುರುಷಾರ್ಥಕ.
೯. ಕಂದ ಪದ್ಯಗಳ ಸಾಲುಗಳ ಸಂಖ್ಯೆ
ಅ] ೬ ಆ] ೨ ಇ] ೪ ಈ] ೩
೧೦. ಕಂದ ಪದ್ಯದಲ್ಲಿ ಒಟ್ಟು ಮಾತ್ರೆಗಳ ಸಂಖ್ಯೆ
ಅ] ೬೪ ಆ] ೬೨ ಇ] ೬೦ ಈ] ೫೦
೧೧. ಭ, ರ, ನ, ಭ, ಭ, ರ, ಇದು ಯಾವ ವೃತ್ತದ ಗಣಗಳು
ಅ] ಉತ್ಪಲಮಾಲಾವೃತ್ತ ಆ] ಚಂಪಕಮಲಾ ಇ] ಸ್ರಗ್ಧರಾವೃತ್ತ ಈ] ಮಹಾಸ್ರಗ್ದರಾವೃತ್ತ
೧೨. ಮ, ರ, ನ, ಭ, ನ, ಯ, ಯ, ಯ . ಈ ವೃತ್ತದ ಗಣಗಳು.
ಅ] ಉತ್ಪಲಮಾಲಾವೃತ್ತ ಆ] ಚಂಪಕಮಾಲಾ ಇ] ಸ್ರಗ್ದರಾವೃತ್ತ ಈ] ಮಹಾಸ್ರಗ್ದ ರಾವೃತ್ತ
೧೩. ಮಹಾಸ್ರಗ್ದರಾವೃತ್ತ ಗಣಗಗಳು  .
ಅ] ಭ,ರ,ನ,¨ಭ ಭ,ರ, ಆ] ಮ,ರ,ನ,ಭ,ನ,ಯ,ಯ,ಯ. ಇ] ಸ,ತ,ತ,ನ,ಸ,ರ,ರ ಈ] ಮ,ಸ,ಜ,ಸ,ತ,ತ
೧೪. – – – ಇದು
ಅ] ಮಗಣ     ಆ]ತಗಣ
ಇ] ಸಗಣ     ಈ]ನಗಣ
೧೫. ಸಾಕ್ಷಿಮಾಡಿ ಇದು
ಅ] ದ್ವಿಗು ಆ] ಕ್ರಿಯಾಸಮಾಸ  ಇ] ತತ್ಪುರು ಷ ಈ] ಕರ್ಮಧಾರಯ.
೧೬. ಕ್ರಿಯಾ ಸಮಾಸಕ್ಕೆ  ಉದಾ
ಅ] ಕೈಕೊಳ್ವುದು ಆ] ಪರಧನ ಇ] ಅತಿಕುಟಿಲ ಈ] ಕಪಟ
೧೭. ಅತಿಕುಟಿಲ ಈ ಸಮಾಸಕ್ಕೆ ಉದಾ
ಅ] ದ್ವಿಗು ಆ] ಕ್ರಿಯಾಸಮಾಸ ಇ] ತತ್ಪುರುಷ ಈ] ಕರ್ಮಧಾರಯಾ.
೧೮) ಖ್ಯಾತ ಕರ್ನಾಟಕಗಳೆಂದು  ಪ್ರಸಿದ್ಧವಾಗಿರುವ ಅಕ್ಷರ ವೃತ್ತಗಳು.
ಅ) ೪ ಬ) ೬ ಕ) ೨೧ ಡ) ೮
೧೯) ಚಂಪಕಮಾಲ  ವೃತ್ತದಲ್ಲಿರುವ ಗಣಗಳ ಸಂಖ್ಯೆ.
ಅ) ೭ ಗಣ ಬ) ೬ ಗಣ ಕ) ೫ ಗಣ ಡ) ೪ಗಣ
೨೦) ವೃತ್ತದಲ್ಲಿ ಎಷ್ಟು ಪಾದಗಳಿರುತ್ತವೆ.
ಅ) ೧ ಪಾದ ಬ) ೩ ಪಾದ ಕ) ೪ ಪಾದ ಡ) ೬ ಪಾದ
೨೧) ಚಂಪಕಮಾಲ ವೃತ್ತದಲ್ಲಿರುವ ಅಕ್ಷರಗಳ ಸಂಖ್ಯೆ.
ಅ) ೧೯
ಬ) ೨೦
ಕ) ೨೧
ಡ) ೨೨
೨೨] ಖ್ಯಾತಕರ್ನಾಟಕ ವೃತ್ತವು
ಅ) ಅಕ್ಷರಗಣ
ಬ) ಮಾತ್ರಗಣ
ಕ) ಗಣ
ಡ) ಮಾತ್ರೆ
೨೩] ಕಂದ ಪದ್ಯವು
ಅ) ಅಕ್ಷರಗಣ
ಬ) ಮಾತ್ರಗಣ
ಕ) ಗಣ
ಡ) ಮಾತ್ರೆ
೨೪] ‘ಪೋಗಲ್‌ವೇೞ್ಕುಂ’ ಈ ಸಂಧಿಗೆ ಉದಾಹರಣೆ 
ಅ] ವೃದ್ಧಿ ಆ] ಗುಣ ಇ] ಯಣ್ ಈ] ಆಗಮ  ಸಂಧಿ
ಉತ್ತರಗಳು
೧]ಆ  ೨]ಆ ೩]ಆ ೪]ಇ  ೫]ಆ  ೬]ಈ  ೭]ಆ  ೮]ಆ  ೯]ಇ  ೧೦]ಇ  ೧೧]ಅ ೧೨]ಇ
೧೩]ಇ  ೧೪]ಅ ೧೫]ಆ ೧೬]ಅ ೧೭]ಈ ೧೮]ಬ ೧೯]ಅ ೨೦]ಕ ೨೧]ಕ ೨೨]ಅ ೨೩]ಬ ೨೪] ಈ
ಮೊದಲೆರೆಡು ಪದಗಳಿಗಿರುವ ಸಂಬಂಧಿಸಿದಂತೆ  ಮೂರನೆಯ ಪದಕ್ಕೆ ಸಂಬAಧಿಸಿದ ಪದ ಬರೆಯಿರಿ.
೧. ಮೇದಿನಿ : ಭೂಮಿ :: ಆದಿತ್ಯ : __________
೨. ಪೊನ್ನಮ್ : ದ್ವಿತೀಯಾ :: ಪರಿಗ್ರಹಮೆಲ್ಲಂ :________
೩. ಬೀಣೇಯಂ : ಭಗಣ  :: ಲೋಕೇಶ : _______
೪. ದೈವಭಕ್ತಿ : ತತ್ಪುರುಷ  :: ಅಬ್ಜೋದರ : _______
೫. ಉತ್ಪಲಮಾಲಾವೃತ್ತ : ಇಪ್ಪತ್ತು ಅಕ್ಷರ :: ಸ್ರಗ್ಧರಾವೃತ್ತ: ……………………………
೬. ತಸ್ಕರ : ಕಳ್ಳ :: ಅನೃತ : …………………………………………………
೭. ಕೂರ್ಮೆ : ಸ್ನೇಹ :: ಚೋದ್ಯ : ………………………………………………………
೮.ವ್ಯಾಪಾರಿ : ಬೇಹಾರಿ :: ಕೋಕಿಲಾ : …………………………………………
೯. ಪರಧನ  : ತತ್ಪುರುಷ :: ಬಲವಂದು : ……………………………
೧೦. ತಕ್ಕನಿತು : ಲೋಪ :: ಪೂೞ್ದೆಡೆ : ………………………………
೧೧. ಧನಹರಣ : ಕ್ರಿಯಾಸಮಾಸ :: ಸ್ವಾಮಿದ್ರೋಹ : ……………………………
ಉತ್ತರಗಳು
೧] ಭಾಸ್ಕರ ೨] ಪ್ರಥಮಾ ೩] ತಗಣ ೪] ಬಹುವ್ರೀಹಿ
ಕ್ರಿಯಾಸಮಾಸ ೧೦] ಆದೇಶ ೧೧. ತತ್ಪುರುಷ ಸಮಾಸ
೫] ಇಪ್ಪತ್ತೊಂದು ಅಕ್ಷರ೬] ಅಸತ್ಯ
೭] ಅಧ್ಬುತ ೮] ಕೋಗಿಲೆ
]

ಪಾಠದ ಆಶಯ ಭಾವ

ಗುಣಾಢ್ಯನಿಂದ ಪೈಶಾಚಿಕ ಭಾಷೆಯಲ್ಲಿ ರಚಿತವಾದ ಬೃಹತ್ಕಥೆಯನ್ನಾಧರಿಸಿ ವಸುಭಾಗಭಟ್ಟನು  ಸಂಸ್ಕೃತದಲ್ಲಿ ಪಂಚತಂತ್ರ  ಕೃತಿಯನ್ನು ರಚಿಸಿದ್ದಾನೆ.ಈ ಸಂಸ್ಕೃತ ಕೃತಿಯನ್ನಾಧರಿಸಿ ಕನ್ನಡದಲ್ಲಿ  ಪಂಚತಂತ್ರವನ್ನು ಬರೆದಿರುವುದಾಗಿ ದುರ್ಗಸಿಂಹ ಹೇಳಿಕೊಂಡಿದ್ದಾನೆ. ಪಂಚತಂತ್ರ  ಕೃತಿಯಿಂದ ಆಯ್ದವೃಕ್ಷಸಾಕ್ಷಿ
ಕಥೆಯ ಮೂಲಕ ಹಳೆಗನ್ನಡ ಚಂಪೂಕಾವ್ಯವನ್ನು ಪರಿಚಯಿಸುವ ಆಶಯದೊಂದಿಗೆ ವೃಕ್ಷಸಾಕ್ಷಿ ಕಥೆಯು “ಸತ್ಯಕ್ಕೆ
ಸಾವಿಲ್ಲ ಸುಳ್ಳಿಗೆಸುಖವಿಲ್ಲ” ಎಂಬ ನೀತಿಯನ್ನು ಪ್ರತಿಪಾದಿಸುತ್ತದೆ. ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಪಾತ್ರಗಳು
 ಹೆಸರಿಗೆ ತಕ್ಕಂತೆ ಗುಣವನ್ನು ಹೊಂದಿದ್ದು ಧರ್ಮಬುದ್ದಿಯ ಪಾತ್ರವು  ಸಹನಶೀಲತೆ , ಸುಸಂಸ್ಕೃತ ವ್ಯಕ್ತಿತ್ವವನ್ನು
ನಿರೂಪಿಸಿದರೆ ದುಷ್ಟಬುದ್ಧಿಯ ಪಾತ್ರವು ತನ್ನ ವಂಚನೆ  ಕಪಟತನ,ಮೋಸದಿಂದ ತಾನು ಹಾಳಾಗುವುದಲ್ಲದೆ, ಸಂಪತ್ತಿಗಾಗಿ
ತನ್ನ ತಂದೆಯನ್ನು ಬಲಿಕೊಡುವ ಹೃದಯಹೀನ ಕೃತ್ಯದಿಂದ “ಮಾಡಿದುಣ್ಣೊಮಾರಾಯ”ನೀತಿಯಂತೆ ಕೆಟ್ಟ ಫಲವನ್ನು
ಅನುಭವಿಸುವಂತಾಗುತ್ತದೆ. ಈ ಕಥೆಯು “ಹಣಕ್ಕಿಂತ ಗುಣ ಮೇಲು” ಎಂಬ ಆಶಯವನ್ನು ಪ್ರತಿಪಾದಿಸುತ್ತದೆ.

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊದು ವಾಕ್ಯಗಳಲ್ಲಿ ಉತ್ತರಿಸಿ.

೧. ‘ವೃಕ್ಷ ಸಾಕ್ಷಿ’ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?
‘ವೃಕ್ಷ ಸಾಕ್ಷಿ’ ಕತೆಯನ್ನು ದುರ್ಗಸಿಂಹನ ಪಂಚತಂತ್ರ  ಕೃತಿಯಿಂದ ಆರಿಸಲಾಗಿದೆ.

೨. ದುಷ್ಟಬುದ್ದಿಯು ಧರ್ಮಬುದ್ಧಿಯ  ಮೇಲೆ ಯಾವ ಆರೋಪವನ್ನು ಹೊರಿಸಿದನು ?
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ ಆರೋಪವನ್ನು ಹೊರಿಸಿದನು.

೩. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ?
ದುಷ್ಟಬುದ್ಧಿವ  ವೃಕ್ಷವೇ (ಆಲದಮರ) ಸಾಕ್ಷಿ ಎಂದಾಗ ಧರ್ಮಾಧಿಕರಣರ
ವಿಸ್ಮಯಗೊಂಡರು.

೪. ದುಷ್ಟಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕೆಳೆದನು  ?
ಧರ್ಮಬುದ್ಧಿಯು ದೇವರು  , ಗುರುಗಳು, ವೇದಾಧ್ಯಯನ ನಿರತರಾದವರನ್ನು  ಪೂಜೆ ಮಾಡುತ್ತ ಬೆಳಗಿನ ಹೊತ್ತನ್ನು ಕಳೆದನು.

೫. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಧರ್ಮಾಧಿಕರಣರು ದುಷ್ಟಬುದ್ಧಿ  ಮತ್ತು ದುಷ್ಟಬುದ್ಧಿಯ ಜಗಳವನ್ನು  ಬಗೆಹರಿಸಲು , ವೃಕ್ಷಸಾಕ್ಷಿಯನ್ನು ಕೇಳಲುವಟವೃಕ್ಷದ ಸಮೀಪಕ್ಕೆ ಬಂದರು  .


ಹೆಚ್ಚುವರಿ ಪ್ರಶ್ನೋತ್ತರಗಳು

೬. ದುಷ್ಟಬುದ್ಧಿಯ ತಂದೆಯ ಹೆಸರೇನು ?
ದುಷ್ಟಬುದ್ಧಿಯ ತಂದೆಯ ಹೆಸರು ಪ್ರೇಮಮತಿ.

೭. ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯರು ಎಲ್ಲಿ ಬೀಡುಬಿಟ್ಟಿದ್ದರು ?
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯರು ಮಧುರಾಪುರನಗರ ಹೊರವಲಯದ ಉದ್ಯಾನವನದೊಳಗೆ ಬೀಡುಬಿಟ್ಟರು.

೮. ಹೊನ್ನನ್ನು ಕದ್ದವರು  ಯಾರು ?
ಹೊನ್ನನ್ನು ಕದ್ದವರು ದುಷ್ಟಬುದ್ಧಿ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕುನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.


೧. ಧರ್ಮಬುದ್ಧಿಗೆ ದುಷ್ಟಬುದ್ಧಿಯು  ಯಾವ ಸಲಹೆಯಿತ್ತನು ?

ಧರ್ಮಬುದ್ಧಿಗೆ ದುಷ್ಟಬುದ್ಧಿಯು “ಈ ಹೊನ್ನನ್ನು ಹಂಚಿಕೊಂಡು  ಮನೆಯಲ್ಲ ಸ್ವೇಚ್ಛೆಯಿಂದ ಇರುವವರಲ್ಲ  ಮತ್ತೆ ವ್ಯಾಪಾರಕ್ಕಾಗಿ ದೂರದೇಶಕ್ಕೆ
ಹೋಗಬೇಕಾಗುತ್ತದೆ . ಆಕಾರಣದಿಂದ ನಿನಗೂ ನನಗೂ ವ್ಯಯಕ್ಕೆ(ಖರ್ಚಿಗೆ) ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು, ಉಳಿದ ಹೊನ್ನನೆಲ್ಲವನ್ನು ಇ
ಇಲ್ಲಿಯೇ ಇಡೋಣ”ಎಂದು ಸಲಹೆಯಿತ್ತನು.

೨. ದುಷ್ಟಬುದ್ದಿಯು   ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು ?
ದುಷ್ಟಬುದ್ದಿಯು  ತನ್ನ ತಂದೆಗೆ ಏಕಾಂತದಲ್ಲಿ ಕರೆದುಕೊಂಡು ಹೋಗಿ
“ನಿಮ್ಮ ಒಂದು ಮಾತಿನಿಂದ ನಮ್ಮ ಪರಿಜನರೆಲ್ಲರೂ (ಮನೆಯವರೆಲ್ಲರೂ)ಹಲವು ಕಾಲ ಹಸಿಯದೆ ಊಟಮಾಡಿ ಬಾಳುವಷ್ಟು ಹಣವು ಲಭಿಸುವುದು. ನೀವು ಆ ಮರದ ಪೊಟರೆಯಲ್ಲಿ ಅವಿತುಕೊಂಡು ಧರ್ಮಬುದ್ಧಿಯೇಹೊನ್ನನ್ನು ತೆಗೆದುಕೊಂಡು ಹೋದನು ಎಂದು ”ಹೇಳಿದನು.

೩. ಧರ್ಮಾಧಿಕರಣರು  ವಟವೃಕ್ಷಕ್ಕೆ  ಏನು ಹೇಳಿದರು ?
ಧರ್ಮಾಧಿಕರಣ ರು ವಟವೃಕ್ಷಕ್ಕೆ“ನೀನಾದರೋ ಯಕ್ಷಾದಿ ದಿವ್ಯ ದೇವತೆಗಳಿಗೆ ವಾಸಸ್ಥಾನವು ಮತ್ತು ಅವರ ಸೇವೆಯನ್ನು ಮಾಡುವಂತಹ ª
ವೃಕ್ಷವೂಆಗಿದ್ದೀಯಾ, ಆ ಕಾರಣದಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುವೆವು, ನೀನು ತಪ್ಪದೆ ಸಾಕ್ಷಿಯನ್ನು ನುಡಿ”
 ಎಂದು ಹೇಳಿದರು  .

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.


೧. ವೃಕ್ಷ ಸಾಕ್ಷಿ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು ? ಏಕೆ ?

ವೃಕ್ಷಸಾಕ್ಷಿ ಪಾಠದಲ್ಲಿ ನಾನು ಮೆಚ್ಚುವ  ಪಾತ್ರವೆಂದರೆ  ಧರ್ಮಬುದ್ಧಿಯ  ಪಾತ್ರ. ಏಕೆಂದರೆ ಧರ್ಮಬುದ್ಧಿ ಧರ್ಮಮಾರ್ಗದಲ್ಲಿ ನಡೆಯುವ ª
ವ್ಯಕ್ತಿ.ಹೆಸರಿಗೆ ತಕ್ಕಂತೆ ಗುಣವನ್ನು ಹೊಂದಿದ್ದು ದುಷ್ಟಬುದ್ಧಿಯ  ಪಾತ್ರವು  ಸಹನಶೀಲತೆ, ಸುಸಂಸ್ಕೃತ ವ್ಯಕ್ತಿತ್ವ
ನಿರೂಪಿಸುತ್ತದೆ. ತನ್ನ ಸ್ನೇಹಿತನ ಮಾತನ್ನ್ನು  ನಂಬುಗೆಯಿಂದ  ನೋಡಿದವನಾಗಿದ್ದಾನೆ. ಆತನಲ್ಲಿ
ತಾಳ್ಮೆ ಸ್ವಭಾವ ಉನ್ನತವಾದದ್ದು ಏಕೆಂದರೆ ದುಷ್ಟಬುದ್ಧಿ ಈತನ ಮೇಲೆ ಕಳ್ಳತನದ ಆರೋಪವರಿಸಿದರು
ಭಯಪಡದೆ  ಶಾಂತನಾಗಿ ವರ್ತಿಸಿದನು.ಸೂರ್ಯೋದಯವಾದೊಡನೆ ಧರ್ಮಬುದ್ಧಿಯು ದೇವರು, ಗುರುಗಳು,
ವೇದಾಧ್ಯಯನ ನಿರತರಾದವರನ್ನು  ಪೂಜೆ ಮಾಡುತ್ತ ಬೆಳಗಿನ ಹೊತ್ತನ್ನು ಕಳೆದನು  ಎಂಬುದನ್ನು  ನೋಡಿದರೆ ಆತನೊಬ್ಬ  ದೈವಭಕ್ತನಾಗಿದ್ದನು ಎಂದು ಹೇಳಬಹುದು. ಅಲ್ಲದೇ ಮರದ ಪೊಟರೆಯೊಳಗಿದ್ದ ಪ್ರೇಮಮತಿ, ಧರ್ಮಬುದ್ಧಿಯೇ ಹೊನ್ನನ್ನು ಕದ್ದವನು ಎಂದು ಹೇಳಿದಾಗಲೂ ವಿಚಲಿತನಾಗದೆ  ದೇವರು ಮಾತನಾಡಿದ್ದರೆ ಸತ್ಯವನ್ನು  ಹೇಳುತ್ತಿತ್ತು ಇದರಲ್ಲಿ  ಏನೋ ಮೋಸ ಅಡಗಿದೆ ಎಂದು ತನ್ನ ಬುದ್ಧಿವಂತಿಕೆಯಿಂದ  ಮರದೊಳಗೆ ಮನುಷ್ಯ ಸಂಚಾರವಾಗಿರುವದನ್ನ  ಗ್ರಹಿಸಿಕೊಂಡು ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯನ್ನು ಹೊರಗೆ ಬರುವಂತೆ ಮಾಡಿ ಸತ್ಯವನ್ನು  ತೋರಿಸುತ್ತಾನೆ. ಆದ್ದರಿಂದ ಆತ ಸತ್ಯವಂತನಾಗಿದ್ದು  . ದುಷ್ಟಬುದ್ಧಿಯ ತಂತ್ರ ಆತನಿಗೆ ತಿರುಗುಬಾಣವಾಗುವಂತೆ ಮಾಡಿ ಪಾಪಬುದ್ಧಿಯವನಾದ ದುಷ್ಟಬುದ್ಧಿಗೆ ಸರಿಯಾದ ಪಾಠವನ್ನು ಕಲಿಸಿದನು  .ಆದ್ದರಿಂದ ನನಗೆ ಧರ್ಮಬುದ್ಧಿಯ ಪಾತ್ರ ಮೆಚ್ಚಿಕೆಯಾಯಿತು.

೨. ದುಷ್ಟಬುದ್ದಿಯ  ತಂತ್ರ ಅವನಿಗೆ ತಿರುಗುಬಾಣವಾದ ಬಗೆಯನ್ನು ತಿಳಿಸಿ.

ದುಷ್ಟಬುದ್ಧಿಯು ಅತಿ ಮೋಸದ ಮನಸ್ಸಿನಿಂದ, ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೋಗಿ ಹೂತಿಟ್ಟ ಹೊನ್ನನೆಲ್ಲವನ್ನು ತೆಗೆದುಕೊಂಡು ಬಂದು ,ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ ಆರೋಪವನ್ನು  ಹೊರಿಸಿದರು  . ಈ ವಿಚಾರ ಧರ್ಮಾದಿಕಾರಣರ  ಬಳಿ ಬಂದಾಗ ಧರ್ಮಬುದ್ಧಿಯೇಹೊನ್ನು ಕದ್ದಿರುವುದಕ್ಕೆ  ಅಲ್ಲಿದ್ದ ಆಲದ ಮರವೇ ಸಾಕ್ಷಿ ಎಂದು ಹೇಳುತ್ತಾನೇ  ಸಾಕ್ಷಿ ಹೇಳಿಸಲುತನ್ನ  ತಂದೆಯನ್ನೇ ಆ ಮರದ ಪೊಟರೆಯೊಳಗೆ  ಕೂಡಿಸಿ ಧರ್ಮಬುದ್ಧಿಯೇ ಹೊನ್ನನ್ನು ಕದ್ದನು  ಎಂದು ಹೇಳಿಸುತ್ತಾನೆ. ಇದರಲ್ಲಿ  ಏನಾದರೊಂದು  ಮೋಸವಾಗಿರಲೇಬೇಕು ಎಂದು ಅರಿತಧರ್ಮಬುದ್ಧಿ ಆ ಮರವನ್ನು ಸುತ್ತು ಹಾಕಿ ನೋಡಿ ದೊಡ್ಡದಾದ ಪೊಟರೆಯಲ್ಲಿ ಮನುಷ್ಯ ಸಂಚಾರವಾಗಿರುವುದನ್ನು ಕಂಡು ತೀರ್ಮಾನಿಸಿಧರ್ಮಬುದ್ಧಿಯು ಧರ್ಮಾಧಿಕಾರಿಗಳಿಗೆ ಹೀಗೆ ಹೇಳಿದನು. “ಹುಸಿಯದ ಬೇಹಾರಿಯೇ ಇಲ್ಲ.” ನಾನು ವ್ಯಾಪಾರಿ ಆಗಿರುವುದರಿಂದ ನಮ್ಮ ವೃತ್ತಿಧರ್ಮಕ್ಕೆ ಸುಳ್ಳನ್ನು  ಹೇಳಿದ್ದೇನೆ. ಧನವನ್ನು  ವಂಚನೆಯಿಂದ  ನನ್ನ ಮನೆಗೆ ತೆಗೆದುಕೊಂಡು ಹೋಗುವೆ ಎನ್ನುವಷ್ಟರಲ್ಲಿ  ಸೂರ್ಯೋದಯವಾದಾಗ  ತೆಗೆದುಕೊಂಡು ಹೋಗಲು ಅವಕಾಶವಿಲ್ಲದೆ ಮರದ ಪೊಟರೆಯೊಳಗೆ ಇಟ್ಟು ಬಂದು , ಮರುದಿವಸ ಹೋಗಿ
ನೋಡುವಷ್ಟರಲ್ಲಿ  ಆ ಹೊನ್ನನ್ನು ಒಂದು ಹಾವು ಸುತ್ತಿಕೊಂಡಿದ್ದಾಗ ಅದನ್ನು ತೆಗೆದುಕೊಳ್ಳಲು ಹೆದರಿ ಹೋದೆನು. ನೀವು ಇಲ್ಲಿದ್ದಂತೆ ನೋಡುತ್ತ
ಇರಿ, ಪೊಟರೆಯೊಳಗೆ ಹೊಗೆಯನ್ನು ಹಾಕಿ, ಹಾವನ್ನು  ಹೊರಬರಿಸಿ, ಕದ್ದುಕೊಂಡ ಒಡವೆಯನ್ನು ಕೊಡುವೆನು  ಎಂದನು. ಧರ್ಮಬುದ್ಧಿಯು
ಹುಲ್ಲನ್ನು , ಪುಳ್ಳಿಗಳಳನ್ನು ತರಿಸಿ, ಆ ಪೊಟರೆಯೊಳಗೆ ಅಡಗಿಸಿ ತುಂಬಿ, ಬೆಂಕಿಯನ್ನು ಇಟ್ಟೊಡನೆ  ಹೊಗೆ ಸುತ್ತಿ ಬೆಂಕಿ ಉರಿಯುತ್ತಿರಲು,ಪ್ರೇಮಮತಿ ಧೃತಿಗೆಟ್ಟು ಗೋಳಾಡಿ ಪೊಟರೆಯೊಳಗಿಂದ ಸುರುಳುತ್ತ ಉರುಳಿ ಉಸಿರುಗಟ್ಟಿ ಪ್ರಾಣತ್ಯಾಗ ಮಾಡಿದನು. ಇದನ್ನು  ಧರ್ಮಾಧಿಕರಣರು  ನೋಡಿ ಇವನು ದುಷ್ಟಬುದ್ಧಿಯ ತಂದೆ ಸಂದೇಹವಿಲ್ಲ ಎಂದು ತಿಳಿದು, ಈ ಪಾಪಕರ್ಮನಾದ  ದುಷ್ಟಮಗನಿಂದ ನಿನಗೆ ಇಂತಹ ದುರ್ಮರಣಬಂದೊದಗಿತು ಎಂದು ನುಡಿದರು. ಹೀಗೆ ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗುಬಾಣವಾಯಿತು.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಪೊನ್ನನೆಲ್ಲಮಂ ನೀನೆ ಕೊಂಡೆ”

ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರವಿರಚಿತ ‘ಪಂಚತಂತ್ರ ’ಎಂಬ ಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
ಎಂಬ  ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ದುಷ್ಟಬುದ್ಧಿಯು ಧರ್ಮಬುದ್ಧಿಗೆ ಹೇಳಿದನು.ದುಷ್ಟಬುದ್ಧ್ಧಿಯು ಧರ್ಮಬುದ್ಧಿಯನ್ನು ಮೋಸಗೊಳಿಸಿ ಹೋಗಿ ಹೂತಿಟ್ಟ
ಹೊನ್ನ ನೆಲ್ಲವನ್ನು  ತೆಗೆದುಕೊಂಡು ಕುಳಿಯನ್ನು ಮೊದಲಿನಂತೆ ಮುಚ್ಚಿ, ಕೆಲವಾನು ದಿವಸಗಳನ್ನು ಬಿಟ್ಟು, ತಾನೇ ಧರ್ಮಬುದ್ಧಿಯಲ್ಲಿಗೆ ಬಂದು,
ವ್ಯಯಕ್ಕೆ ಹೊನ್ನಿಲ್ಲ. ಇನ್ನು ಸ್ವಲ್ಪ ಹೊನ್ನನ್ನು ತೆಗೆದುಕೊಳ್ಳೋಣ ಬನ್ನಿರಿ ಎಂದು ಜೊತೆಗೂಡಿ ಕರೆದುಕೊಂಡು ಹೊನ್ನು ಹೂತಿಟ್ಟ ಸ್ಥಳಕ್ಕೆ
ಹೋದನು. ಹೂತು ಹಾಕಿದ ಸ್ಥಳದಲ್ಲಿ ಹೊನ್ನನ್ನು ಕಾಣದೆ, ಇನ್ನು ಮಾತನಾಡದೆ ಇದ್ದರೆ ಅಪವಾದವು ತನ್ನ್ನ  ಮೇಲೆ  ಬರುವುದೆಂದು,,“ಪೊನ್ನನೆಲ್ಲಮ೦ನೀನೆ ಕೊಂಡೆ (ಹೊನ್ನನೆಲ್ಲವನ್ನು ನೀನೆ ತೆಗೆದುಕೊಂಡು ಹೋಗಿದ್ದೀಯಾ) ಎಂದು ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನು ಕದ್ದ
ಆರೋಪವನ್ನು  ಹೊರಿಸಿದ ಸಂದರ್ಭವಾಗಿದೆ.
ಸ್ವಾರಸ್ಯ : ತನ್ನ ಮೇಲೆ ಅಪವಾದ ಬರುವಂತೆ  ನೋಡಿಕೊಳ್ಳುವ ಮತ್ತು ಇನ್ನೊಬ್ಬರ ಮೇಲೆ ಅಪವಾದವನ್ನು ಹೊರಿಸುವ ದುಷ್ಟಬುದ್ಧಿಯು
ತಂತ್ರವನ್ನು ಕವಿ ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಎತ್ತಿ ತೋರಿಸಿದ್ದಾರೇ .
೨. “ಈತನ ಮಾತು ಅಶ್ರುತಪೂರ್ವಮ್”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ‘ಪಂಚತಂತ್ರ  ’ಎಂಬಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
ಎಂಬ  ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು  ಧರ್ಮಾಧಿಕಾರಣರು ಹೇಳಿಕೊಂಡರು. ನ್ಯಾಯ ತೀರ್ಮಾನಕ್ಕಾಗಿ ಧರ್ಮಾಧಿಕರಣ  ಬಳಿ ಬಂದಾಗ ದುಷ್ಟಬುದ್ಧಿಯುಹೊನ್ನನೆಲ್ಲವನ್ನು  ಈತನೇ ಕದ್ದುಕೊಂಡಿರುವುದಕ್ಕೆ ಸಾಕ್ಷಿ ಉಂಟು ಎಂದು ಹೇಳಿದರು  . ಆಗ ಸಭೆಯ ಸದಸ್ಯರು  ಸಾಕ್ಷಿಯನ್ನು ಹೇಳು ಎನ್ನಲುದುಷ್ಟಬುದ್ಧಿಯು ಆ ಸ್ಥಳದಲ್ಲಿ ಹೊನ್ನನ್ನು ಇಡುವಾಗ ಈತನೂ  ಮತ್ತು ನಾನು ಬಿಟ್ಟು ಬೇರೆ ಯಾರು ಮನುಷ್ಯರು ಇರಲಿಲ್ಲ . ಆ ಸ್ಥಳದಲ್ಲಿ ಇರುವವಟವೃಕ್ಷವೇ (ಆಲದಮರದ ) ಸಾಕ್ಷಿ ಎಂದಾಗ ಧರ್ಮಾಧಿಕರಣರು
 ವಿಸ್ಮಯಗೊಂಡು“ಈತಈತನ ಮಾತು ಅಶ್ರುತಪೂರ್ವಮ್”( ಈತನ ಮಾತು ಈ ಮೊದಲು ಕೇಳಿಲ್ಲದ್ದು ) ಈ ಆಶ್ಚರ್ಯವನ್ನು ನೋಡೋಣವೆಂದು ಧರ್ಮಬುದ್ಧಿಯನ್ನು ಕರೆದು ನೀನು ಈ ಸಾಕ್ಷಿಯನ್ನು ಒಪ್ಪಿಕೊಳ್ಳುವೆಯಾ?ಎಂದು ಕೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ವೃಕ್ಷ ಸಾಕ್ಷಿ ಹೇಳುವುದು ಎಂಬುದನ್ನು  ಹಿಂದೆ ಎಂದೂ ಕೇಳಿಲ್ಲ ಎಂದು ಧರ್ಮಾಧಿಕರಣರು  ವಿಸ್ಮಯಭಾವದಿಂದ ಈ ಮಾತನ್ನು
ಹೇಳುವುದು ಬಹು ಸ್ವಾರಸ್ಯಪೂರ್ಣವಾಗಿದೆ.
೩. “ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ ‘ಪಂಚತಂತ್ರ  ’ಎಂಬ ಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು  ದುಷ್ಟಬುದ್ಧಿಯ ತಂದೆ ಪ್ರೇಮಮತಿ ದುಷ್ಟಬುದ್ಧಿಗೆ ಹೇಳಿದನು  .ದುಷ್ಟಬುದ್ಧ್ಧಿಯು ತನ್ನ ತಂದೆಯ ಕೈಯನ್ನು ಹಿಡಿದು,
ಏಕಾಂತದಲ್ಲಿ ಕರೆದುಕೊಂಡು ಹೋಗಿ ನಡೆದ ಸಂಗತಿಯನ್ನೆಲ್ಲ ತಿಳಿಯುವಂತೆ ಹೇಳಿ “ನಿಮ್ಮ ಒಂದು ಮಾತಿನಿಂದ ನಮ್ಮ
ಪರಿಜನರೆಲ್ಲರೂ (ಮನೆಯವರೆಲ್ಲರೂ) ಹಲವು ಕಾಲ ಹಸಿಯದೆ ಊಟಮಾಡಿ ಬಾಳುವಷ್ಟು ಹಣವು ಲಭಿಸುವುದು . ನೀವು ಆ ಮರದ
ಪೊಟರೆಯಲ್ಲಿ ಅವಿತುಕೊಂಡು ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡು ಹೋದನು ಎಂದು ಹೇಳಬೇಕು ಎಂದಾಗ ದುಷ್ಟಬುದ್ಧಿಯ
ತಂದೆ“ ಪರರಧನವನ್ನು  ಅಪಹರಿಸುವುದು ನಂಬಿಕೆದ್ರೋಹಮಾಡುವುದು, ಸ್ವಾಮಿದ್ರೋಹ ಮಾಡುವುದು ಇವೆಲ್ಲವೂ ಏನೇ ಮಾಡಿದರೊ
ನಮ್ಮನ್ನು ಕೆಡಿಸುತ್ತವೆ. ಇಂತಹದೆಲ್ಲವನ್ನು ನೀನು ತಿಳಿದಿದ್ದು ನನ್ನನು  ಸಾಕ್ಷಿ ಮಾಡಿ ಮಾತನಾಡಿಸಿ, ನನ್ನನು  ಕೆಡಿಸಲು ಬಯಸಿದೆ. ““ನಿನ್ನ ಪೞುವಗೆ ನಮ್ಮ
ಕುಲಮನೆಲ್ಲಮನೞಿವ ಬಗೆ”( ನಿನ್ನ ಕೆಟ್ಟಬುದ್ಧಿಯು ನಮ್ಮ ಕುಲವನ್ನೆಲ್ಲವನ್ನು(ಮನೆತನವನ್ನೆಲ್ಲ) ಹಾಳು ಮಾಡುವ ರೀತಿಯದಾಗಿದೆ)” ಎಂದು
ದುಷ್ಟಬುದ್ಧಿಗೆ ಬುದ್ಧಿ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಕೆಟ್ಟಬುದ್ಧಿಯು ಕುಲವನ್ನೆಲ್ಲ ಹಾಳು ಮಾಡುತ್ತದೆ ಎಂದು ಪ್ರೇಮಮತಿ ತನ್ನ ಮಗನಾದ ದುಷ್ಟಬುದ್ಧಿಗೆ ಬುದ್ಧಿಮಾತನ್ನು ಹೇಳುವುದು
ಸ್ವಾರಸ್ಯಪೂರ್ಣವಾಗಿದೆ.
೪. “ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗು೦”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರಚಿತ‘ಪಂಚತಂತ್ರ  ’ಎಂಬಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
 ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಮರದ ಪೊಟರೆಯೊಳಗೆ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿಯು ಬುದ್ಧಿಗೆಟ್ಟು, ಧರ್ಮಮಾರ್ಗವನ್ನು  ಬಿಟ್ಟು“ಪ್ರಕೃತಿ
ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗು೦ (ಪ್ರಕೃತಿ ವಿಕೃತಿಯಾದ (ಸಹಜ ಗುಣ ಬದಲಾವಣೆಯಾದ) ಮನುಷ್ಯನ ಆಯುಷ್ಯವು
ಕಡಿಮೆಯಾಗುತ್ತದೆ) ಎಂದು ಹೇಳುವಂತೆ ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡನು ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ದುಷ್ಟಬುದ್ಧಿಯ ತಂದೆಯಾದ ಪ್ರೇಮಮತಿಯು ಹೇಳಿದ ಸುಳ್ಳು ಆತನ ಆಯುಷ್ಯವನ್ನು ಕಡಿಮೆ ಮಾಡಿತು ಎಂದು ಪರೋಕ್ಷವಾಗಿ ಕವಿ
ಬಳಸಿರುವ ಈ ಮಾತು ಸ್ವಾರಸ್ಯಪೂರ್ಣವಾಗಿದೆ.
೫. “ಹುಸಿಯದ ಬೇಹಾರಿಯೇ ಇಲ್ಲ.”
ಆಯ್ಕೆ : ಈ ವಾಕ್ಯವನ್ನು ‘ದುರ್ಗಸಿಂಹ ಕವಿ ’ವಿರವಿರಚಿತ ‘ಪಂಚತಂತ್ರ  ’ಎಂಬಕೃತಿಯಿಂದ  ಆಯ್ದ ‘ವೃಕ್ಷಸಾಕ್ಷಿ ’ಎಂಬ
ಎಂಬ  ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು  ಧರ್ಮಬುದ್ಧಿಯು ಧರ್ಮಾಧಿಕರಣರಿಗೆ ಹೇಳಿದನು. ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡನು ಎಂದು ಹೇಳುವುದನ್ನು ಕೇಳಿದ ಧರ್ಮಬುದ್ಧಿಯು ಇದರಲ್ಲಿ  ಏನಾದರೊಂದು  ಮೋಸವಾಗಿರಲೇಬೇಕು ಎಂದು ಆ ಮುರರವನ್ನು ಸುತ್ತು ಹಾಕಿ ನೋಡಿದೊಡ್ಡದಾದ ಪೊಟರೆಯಲ್ಲಿ ಮನುಷ್ಯ ಸಂಚಾರವಾಗಿರುವುದನ್ನು ಕಂಡು ತೀರ್ಮಾನಿಸಿ ಧರ್ಮಬುದ್ಧಿಯು ಧರ್ಮಾಧಿಕಾರಿಗಳಿಗೆ ಹೀಗೆ ಹೇಳಿದನು.“ಹುಸಿಯದ ಬೇಹಾರಿಯೇ ಇಲ್ಲ.” (ಸುಳ್ಳು ಹೇಳದ ವ್ಯಾಪಾರಿಯೇ ಇಲ್ಲ) ನಾನು ವ್ಯಾಪಾರಿ ಆಗಿರುವುದರಿಂದ ನಮ್ಮ ವೃತ್ತಿಧರ್ಮಕ್ಕೆ ಧರ್ಮಬುದ್ಧಿಯು ಅಧರ್ಮಬುದ್ಧಿಯಾಗಿ ಧನವನ್ನು ವಂಚನೆಯಿಂದ ತೆಗೆದುಕೊಂಡು  ಹೋದೆನು ಎಂದು ದುಷ್ಟಬುದ್ಧಿಯ ತಂತ್ರವನ್ನು ಬಯಲುಮಾಡುವ ಸಂದರ್ಭವಾಗಿದೆ .
ಸ್ವಾರಸ್ಯ :- ವ್ಯಾಪಾರಿಗಳು  ವೃತ್ತಿಧರ್ಮದಲ್ಲಿ ಕೆಲವೊಂದು ಸಲ ಸುಳ್ಳು ಹೇಳುತ್ತಾರೆ ಎಂಬು ಲೋಕರೂಡಿಯ ಮಾತು ಬಹು ಸ್ವಾರಸ್ಯಪೂರ್ಣವಾಗಿ
ಇಲ್ಲಿ ಮೂಡಿಬಂದಿದೆ.

ಉ) ಮೊದಲೆರಡು ಪದಗಳಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂದಿಸಿದ ಪದವನ್ನು ಬರೆಯಿರಿ.

೧) ವಡ್ಡಾರಾಧನೆ : : ಶಿವಕೋಟ್ಯಾಚಾರ್ಯ : : ಪಂಚತಂತ್ರ  : ದುರ್ಗಸಿಂಹ
೨) ಕಬ್ಬ : ಕಾವ್ಯ : : ಬೇಹಾರಿ : ವ್ಯಾಪಾರಿ
೩) ಅನೃತ : ಸುಳ್ಳು : : ಕೃತ್ರಿಮ : ಮೋಸ , ವಂಚನೆ
೪) ಬಂದಲ್ಲದೆ : ಲೋಪಸಂದಿ  : : ಧೃತಿಗೆಟ್ಟು : ಆದೇಶ ಸಂಧಿ
೫) ದೈವಭಕ್ತಿ – ತತ್ಪುರುಷ ಸಮಾಸ  : : ಅಬ್ಜೋದರ : ಬಹುವ್ರೀಹಿ ಸಮಾಸ

 

ಭಾಷಾ ಚಟುವಟಿಕೆ

೧. ಈ ಪದಗಳನ್ನು ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.

ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.

ಅತಿಕುಟಿಲ, ಕೈಕೊಳ್ವುದು, ಕಟ್ಟೇಕಾಂತ, ಸ್ವಾಮಿದ್ರೋಹ, ಪರಧನ , ಧನಹರಣ , ಸಾಕ್ಷಿಮಾಡಿ, ಬಲವಂದು.
ಅತಿಕುಟಿಲ      –  ಅತಿಯಾದ   +   ಕುಟಿಲ           =ಕರ್ಮಧಾರೆಯ ಸಮಾಸ
ಕೈಕೊಳ್ವುದು    –   ಕೈಯನ್ನು   +   ಕೊಳ್ವುದು      =ಕ್ರಿಯಾ ಸಮಾಸ
ಕಟ್ಟೇಕಾಂತ      –      ಕಡಿದು   +   ಏಕಾಂತ     =ಕರ್ಮಧಾರೆಯ ಸಮಾಸ
ಸ್ವಾಮಿದ್ರೋಹ   –  ಸ್ವಾಮಿಗೆ    +    ದ್ರೋಹ       =ತತ್ಪುರಷ ಸಮಾಸ
ಪರಧನ             –    ಪರರ    +     ಧನ     =ತತ್ಪುರಷ ಸಮಾಸ
ಧನಹರಣ         –    ಧನದ   +   ಹರಣ     =ತತ್ಪುರಷ ಸಮಾಸ
ಸಾಕ್ಷಿಮಾಡಿ       –   ಸಾಕ್ಷಿಯನ್ನು   +     ಮಾಡಿ      = ಕ್ರಿಯಾ ಸಮಾಸ
ಬಲವಂದು       –       ಬಲಕ್ಕ        +      ಬಂದು       = ಕ್ರಿಯಾ ಸಮಾಸ

೩. ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ.

ಅ) ಅತಿಕುಟಿಲಮನಂ ಧನಲು ಬ್ಧತೆಯಿಂದ೦ ದುಷ್ಟಬುದ್ಧಿ ನುಡಿದಂ ಪುಸಿಯಂ
ಛಂದಸ್ಸು  – ಕಂದ ಪದ್ಯ
ಲಕ್ಷಣ : ಒಂದನೇ ಸಾಲಿನಲ್ಲಿ ೪ ಮಾತ್ರೆಯ ೩ ಗಣಗಳು ಮತ್ತು ಎರಡನೆಯ ಸಾಲಿನಲ್ಲಿ ೪ ಮಾತ್ರೆಯ ೫ ಗಣಗಳು ಬಂದಿದ್ದು ಕಂದಪz್ಯÀ ದ
ಪೂರ್ವಾರ್ಧದ ಲಕ್ಷಣ ಹೊಂದಿದೆ ಆದ್ದರಿಂದ ಇದು ಕಂದಪದ್ಯ ಛಂದಸ್ಸಾಗಿದೆ
ಆ)ಮೇದಿನಿಯಂ ಕ್ರಮಕ್ರಮದೆ ಪರ್ವಿದುದಾತನಭೋ  ವಿಭಾಗಮಾ

ಛಂದಸ್ಸು  – ಉತ್ಪಲ ಮಾಲಾ ವೃತ್ತ

ಲಕ್ಷಣ : ಈ ಪಾದದಲ್ಲಿ ೨೦ ಅಕ್ಷರಗಳು, ೨೮ ಮಾತ್ರೆಗಳು , ಭರನಭಭರಲಗ ಗಣಗಳು ಹಾಗೂ ಪಾದದ ಆದಿಯಲ್ಲಿ ಒಂದು ಗುರುಬಂದಿದ್ದು
ಇದು ಉತ್ಪಲ ಮಾಲಾ ವೃತ್ತ ಛಂದಸ್ಸಿನ ಲಕ್ಷಣವನ್ನು ಹೊಂದಿದೆ. ಆದ್ದರಿಂದ ಇದು ಉತ್ಪಲ ಮಾಲಾ ವೃತ್ತ ಛಂದಸ್ಸಾಗಿದೆ.


No comments: