ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್
ಕವಿ – ಕಾವ್ಯ ಪರಿಚಯ
ದೇವನೂರ ಮಹಾದೇವ
ದೇವನೂರ ಮಹಾದೇವ ಅವರು ಕ್ರಿ.ಶ. 1948 ಮೈಸೂರು ಜಿಲ್ಲೆಯ ನಂಜನಗೊಡು ತಾಲೂಕಿನ ದೇವನೊರು ಎಂಬ ಊರಿನಲ್ಲಿ ಜನಿಸಿದರು. ಇವರು ಎದೆಗೆ ಬಿದ್ದ ಅಕ್ಷರ , ಕುಸುಮಬಾಲೆ, ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೋ, ನಂಬಿಕೆಯನೆಂಟ, ನೋಡು ಮತ್ತು ಕೂಡು, ಮುಂತಾದ ಪ್ರಮುಖ ಕೃತಿಗಳನ್ನು ಬರೆದಿದ್ದಾರೆ.
ಇವರ ‘ಕಕುಮಬಾಲೆ ’ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,‘ ಒಡಲಾಳ ’ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.
1. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ.
2. ಮನೆಮಂಚಮ್ಮ ಯಾರು?
ಮನೆಮಂಚಮ್ಮ ಗ್ರಾಮದೇವತೆ .
3. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?
ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ .
4. ಶಿವಾನು¨ ಶಬ್ದಕೋಶ ಪುಸ್ತಕ ಬರೆದವರು ಯಾರು?
ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಫ.ಗು.ಹಳಕಟ್ಟಿಯವರು .
5. ವಚನಕಾರರಿಗೆ ಯಾವುದು ದೇವರಾಗಿತ್ತು?
ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು .
6. ಅಶೋಕ ಪೈ ಅವರ ವೃತ್ತಿ ಯಾವುದು?
ಅಶೋಕ ಪೈ ಅವರು ಮನೋವೈದ್ಯರು .
7. ದೇವನೂರರ ನನ್ನ ದೇವರು ಯಾರೆಂಬುದನ್ನು ಸ್ಪಷ್ಟೀಕರಿಸಿ.
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ. ಎಂದು
ದೇವರ ಮಹದೇವ ಅವರು ನನನ್ನ ದೇವರು ಯಾರು ಎಂಬುದನ್ನು ಸ್ಪಷ್ಟಿಕರಿಸುತ್ತಾರೆ.
ಹೆಚ್ಚುವರಿ ಪ್ರಶ್ನೋತ್ತರಗಳು
8. ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ ?
ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.
9.ವಚನಕಾರರು ತಮ್ಮ ಕಷ್ಟ ಸುಖ ,, ದುಃಖ ದುಮ್ಮಾನ, ಏಳುಬೀಳುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತಿದ್ದರು ?
ವಚನಕಾರರು ತಮ್ಮ ಕಷ್ಟ ಸುಖ , ದುಃಖ ದುಮ್ಮಾನ, ಏಳುಬೀಳುಗಳನ್ನು ತಮ್ಮ ಪ್ರತಿಜ್ನೆ ಮುಂದೆ ಹೇಳಿಕೊಳ್ಳುತಿದ್ದರು .
10. ನಮ್ಮೊಳಗೆ ಯಾವುದನ್ನ ಎಚ್ಚಗೊಳಿಸಬೇಕಾಗಿದೆ ?
ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
ಅಶೋಕ ಪೈ ಹೇಳಿದ ಆ ಸಂಶೋಧನಾ ಸತ್ಯವೇನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್(ಟಿ.ವಿ) ನೋಡುತ್ತಿದ್ದಾರೆ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಪಕ್ಕ ದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವು ಇರುತ್ತಾರೆ. ಆಗ ಟೆಲಿವಿಷನ್(ಟಿ.ವಿ)ನಲ್ಲಿ ಯಾವುದಾದ ಕೊಲೆ ದೃಶ್ಯ ಬಂದಾಗ ಟೆಲಿವಿಷನ್(ಟಿ.ವಿ) ನೋಡುತ್ತಿದ್ದವರು ದು:ಖದ ಭಾವಳಗಾಗುತ್ತಾರೆ. ಇದು ಪಕ್ಕದ ಕೊಠಡಿಯಲ್ಲಿ ಇರುವರು ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ. ಅದೇ ಟೆಲಿವಿಷನ್(ಟಿ.ವಿ)ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರಲ್ಲಿ ಖುಷಿ ಭಾವನೇ ಉಂಟಾಗುತ್ತದೆ. ಇದು ಪಕ್ಕದ ಕೊಠಠಡಿಯಲ್ಲಿ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸಂತೋಷದ ಭಾವನೆ ಉಂಟಾಗುತ್ತದೆ. ಈ ಸಂಶೋಧನಾ ತಿರುಳೇನೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವಸಂಕುಲವೆಲ್ಲ ಒಂದೇ ಎಂದು ಹೇಳುತ್ತದೆ.
2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ.
ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ
ಒಡಮೂಡಿ ಬರುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು
ಅರಿವು ಎಂದು ಹೇಳಲಾಗಿದೆ .ಹೆಚ್ಚುವರಿ ಪ್ರಶ್ನೋತ್ತರಗಳು
3. ಅಶೋಕ ಪೈರವರ ಸಂಶೋಧನಾ ಸತ್ಯದ ತಿರುಳೇನು ?
ಅಶೋಕ ಪೈರವರ ಸಂಶೋಧನಾ ಸತತ್ಯದ ತಿರುಳೇನೆಂದರೆ ಯಾವ ಜೀವಿಯೂ ತನ್ನಷ್ಟ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ
ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳೆಲ್ಲವೂ ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವ ಕುಲವೆಲ್ಲ ಒಂದೇ
ಎಂದು ಹೇಳುತ್ತದೆ.
4. ದೇವನೂರ ಮಹಾದೇವ ಅವರು ಗುರುತಿಸಿದ ವಚನಕಾರರ ಪ್ರಜ್ಞೆಯ ಬಗ್ಗೆ ತಿಳಿಸಿ.
ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರದೇ
ಆದ ಇಷ್ಟ ವ ಇದ್ದಿತು. ಅದೇ ಪ್ರಜ್ಞೆ , ಅಂದರೆ “ ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ ಕಷ್ಟ ಸುಖ , ದುಃಖ ದುಮ್ಮಾನ,
ಏಳುಬೀಳುಗಳನ್ನು ಅವರ ಉತ್ಕಟ ಇಕ್ಕಟ್ಟುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ
ಕೊಟ್ಟರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ.
ದೇವನೂರ ಮಹಾದೇವ ಅವರಿಗೆ ಕವಿ ಸಿದ್ಧಲಿಂಗಯ್ಯ ಅವರು ಮನೆಮಂಚಮ್ಮ ಎಂಬ ಗ್ರಾಮದೇವತೆಯ ಕತೆಯನ್ನು ಹೇಳುತ್ತಾರೆ. ಆ ಕತೆ ಹೀಗಿದೆ
– ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ಗ್ರಾಮದೇವತೆ ಮಂಚಮ್ಮಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಗುಡಿ ಕಟ್ತಾ ಇರುವಾಗ
ಗುಡಿಯ ಕಟ್ಟಡ ಚಾವಣಿ ಮಟ್ಟಕ್ಕೆ ಬಂದಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ ಮಕ್ಕಳಾ”
ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರ ಜನ ತಮ್ಮ ಕೆಲಸ ನಿಲ್ಲಿಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ. ಆಗ ಗ್ರಾಮದೇವತೆ ಮಂಚಮ್ಮ “ಏನ್ರಯ್ಯಾ
ಏನ್ ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು ‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳುತ್ತಾರೆ. ಪುನಃ ಆ ದೇವತೆ“ಓಹೋ
ಗುಡಿಮನೆ ಕಟ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ?”? ಎಂದು ಕೇಳುತ್ತಾಳೆ. ಆಗ ಒಬ್ಬನು
“ ತಾಯಿ” ಹೇಳುತ್ತಾಳೆ ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು
ಹೇಳುತ್ತಾಳೆ. ಅಂದಿನಿಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ. ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು
ಪೂಜಿತಳಾಗುತ್ತಿದ್ದಾಳೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಮಣೆಮಂಚಮ್ಮ ದೇವತೆ , ತನಗೆ ಗುಡಿ ಕಟ್ಟುತ್ತಿದ್ದ ಜನರಿಗೆ ಹೇಳುತ್ತಾಳೆ. ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ
ಗ್ರಾಮದೇವತೆ ಮಂಚಮ್ಮಗೆ ಗುಡಿಕಟ್ಟುವಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ಏನ್ರಯ್ಯಾ ಏನ್
ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು ‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’
ತಾಯಿ ಎಂದು ಹೇಳುತ್ತಾರೆ. ಆಗ ದೇವತೆ“ಓಹೋ,ಗುಡಿಮನೆ ಕಟ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ?”
? ಎಂದು ಕೇಳಿದಾಗ ಒಬ್ಬನು “ನನಗಿಲ್ಲತಾಯಿ” ಹೇಳುತ್ತಾರೇ ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಗುಡಿಕಟ್ಟುವ ಜನನರಿಗೆ ಮನೆ ಇಲ್ಲದ ಮೇಲೆ ಗುಡಿಮನೆ ಎಂದು ಗ್ರಾಮದೇವತೆ ಹೇಳುವ ಈ ಮಾತು ಸಮಾನತೆಯ
ತತ್ವವನ್ನು ಪತಿ್ರ ಬಿಂಬಿಸುತ್ತದೆ.
2. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಲೇಖಕರು ಬುದ್ಧನ ಕಾರುಣ್ಯ ತಮ್ಮ ಮನದಲ್ಲಿ ಕೂತ ಬಗೆಯನ್ನು ಅಶೋಕ ಪೈರವರು ಹೇಳಿದ ಸಂಶೋಧನಾ ಉದಾಹರಣೆ
ನೀಡಿ ಅರ್ಥೈಸುವ ಸಂದರ್ಭದಲ್ಲಿ ಈ ಮಾತು ಬಂದಿದೆ. ಟಿ.ವಿ ನೋಡುವ ಭಾವನೆಗಳು ಪಕ್ಕದ ಕೊಠಡಿಯಲ್ಲಿದ್ದವರ ಮೇಲೆ ಹೇಗೆ
ಪರಿಣಾಮ ಬೀರಿತೋ, ಹಾಗೆಯೇ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ
ಇರುವ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವನ ಕುಲವೆಲ್ಲ ಒಂದೇ ಎಂದು ಅರ್ಥೈಸಿದಸಂದ¨ ವಾಗಿದೆ.
ಸ್ವಾರಸ್ಯ : ಯಾವ ಜೀವಿಯು ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ , ಜೀವಿಗ ಪರಸ್ಪರಾವಲಂಬಿಗಳು, ಇಡೀ ಜೀವಕುಲವೆಲ್ಲ ಒಂದೇ ಎಲ್ಲರೂಸಮಾನ ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿ ಬಂದಿದೆ.
3. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಡಿರಲಿಲ್ಲ
. ಪ್ರತಿಯೊಬ್ಬ ವಚನಕಾರರಿಗೂ ಅವರವರ ಆದ ಇಷ್ಟ ಇದ್ದಿತು. ಅದೇ ಪe, ಅಂದರೆ “ ವಚನಕಾರರಿಗೆಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ ಕಷ್ಟ ಸುಖ , ದುಃದುಮ್ಮಾನ, ಏಳುಬೀಳುಗಳನ್ನು ಅವರ ಉತ್ಕಟ ಇಕ್ಕಟ್ಟುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ ಎಂದು ಪ್ರಜ್ಞೆಯ ಬಗ್ಗೆ ವಿವರಿಸುವಾಗ ಈ ಮಾತು ಬಂದಿದೆ.
ಸ್ವಾರಸ್ಯ : ವಚನಕಾರರಿಗೆ ಇಷ್ಟ ವದ ರೀತಿಯಲ್ಲಿ ಇದ್ದ ಪ್ರಜ್ಞೆಯಂತೆಪ್ರತಿಯೊಬ್ಬರಲ್ಲಿ ಪ್ರಜ್ಞೆ ಜಾಗೃತವಾಗಿ ಎಂಬುದನ್ನು ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ.
4. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ (ತಳಮಳ )ಗೊಂಡು ನರಳುತ್ತಿರುವ ಈ ಜಗತ್ತು ತನ್ನ ಆಳದ ಒಳ ಸಮಷ್ಟಿ
ಮನಸ್ಸಘಾಸಿಗೊಳಿಸುವುದು.ಈಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ . ಮನಸ್ಸು ಘಾಸಿಗೊಳಗಾಗಬಾರ ದರೆ ಎಲ್ಲರಲ್ಲೂ ಕಾರುಣ್ಯಮೂಡಬೇಕು. ಆದ್ದರಿಂದ ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರಕಾರುಣ್ಯವನ್ನು ಎಚ್ಚಗೊಳಿಸಬೇಕಾಗಿದೆ ಎಂದು ಹೇಳಿದಸಂವಾಗಿದೆ.
ಸ್ವಾರಸ್ಯ : ಸಮ ಸ್ತರು ಸಮಾನ ಆದ್ದರಿಂದ ಕಾರುಣ್ಯ ಮನೋಭಾವ ಎಲ್ಲರ ಮನದಲ್ಲೂ ಮೂಡಿಬರಬೇಕು ಆಗ ಸಮಾಜ ಘಾಸಿಗೊಳ್ಳುವುದಿಲ್ಲ
ಎಂದು ಅಥೈಸಿರುವುದು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
ಭಾಷಾ ಚಟುವಟಿಕೆ
1. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ.
ಕಕ್ಕಾಬಿಕ್ಕಿ, ಆರಂಭಿಸು, ಪ್ರಯತ್ನಿಸು, ಘಾಸಿಗೊಳಿಸು.
ಕಕ್ಕಾಬಿಕ್ಕಿ: ವಿದ್ಯಾರ್ಥಿಗಳು ಹಾವನ್ನ ನೋಡಿ ಕಕ್ಕಾಬಿಕ್ಕಿಯಾಗಿ ಓಡಿ ಹೋದರು.
ಆರಂಭಿಸು: ವಿಶ್ವೇಶ್ವರಯ್ಯನವರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಆರಂಭಿಸಿದರು.
ಪ್ರಯತ್ನಿಸು: ವಿದ್ಯಾರ್ಥಿಗಳು ೧೦ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸಬೇಕು.
ಘಾಸಿಗೊಳಿಸು: ಸೋಲು ಉಂಟಾಯಿತೆಂದು ಮನಸ್ಸಿಗೆ ಘಾಸಿಮಾಡಿಕೊಳ್ಳಬಾರದು.
ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ.
ಒಳಿತು, ಸಮಷ್ಟಿ, ಪುಣ್ಯ, ಬೆಳಕು , ಧರ್ಮ
ಒಳಿತು ಘಿ ಕೆಡುಕು | ಸಮಷ್ಟಿ ಘಿ ವ್ಯಷ್ಠಿ | ಪುಣ್ಯ ಘಿ ಪಾಪ | ಬೆಳಕು ಘಿ ಕತ್ತಲು | ಧರ್ಮ ಘಿ ಅಧರ್ಮ |