ಪಾಠದ ಹೆಸರು : ನಿಜವಾದ ಆದರ್ಶ ಪುರುಷ ಯಾರಾಗಬೇಕು?
ಕೃತಿಕಾರರ ಹೆಸರು : ಕೇಶವ ಬಲಿರಾಮ ಹೆಗಡೇವಾರರು
ಕವಿ ಪರಿಚಯ
ಕೇಶವ ಬಲಿರಾಮ ಹೆಗಡೇವಾರರು
ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ( ಆರೆಸ್ಸೆಸ್ ) ದ ಸಂಸ್ಥಾಪಕರು , ಇವರು ೧೮೮೯ ರ ಏಪ್ರಿಲ್ ೧ ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು . ಸ್ವಾಮಿ ವಿವೇಕಾನಂದರು , ಶ್ರೀ ಅರವಿಂದರು ಹಾಗೂ ವಿನಾಯಕ ದಾಮೋದರ ಸಾವರ್ಕರರ ಚಿಂತನೆಗಳಿಂದ ಪ್ರಭಾವಿತರಾದರು . ಕಲಕತ್ತೆಯಲ್ಲಿ ವೈದ್ಯಕೀಯ ಪದವಿ ಪಡೆದು ವೈದ್ಯರಾಗಿ ಜನಸೇವೆ ಮಾಡಿದರು . ತಿಲಕರ ಸ್ವರಾಜ್ಯ ಹೋರಾಟದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು ಹಾಗೂ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು ಜೈಲುವಾಸವನ್ನು ಅನುಭವಿಸಿದರು . ಜಂಗಲ್ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕಾರಣ ಮತ್ತೆ ೯ ತಿಂಗಳ ಅವಧಿಗೆ ಅವರು ಬ್ರಿಟಿಷ್ ಸರಕಾರದಲ್ಲಿ ಕಾರಾಗೃಹವಾಸ ಅನುಭವಿಸಬೇಕಾಯಿತು . ಭಾರತದ ಸ್ವಾತಂತ್ರ್ಯವು ಅರ್ಥಪೂರ್ಣವಾಗಬೇಕಾದರೆ ಭಾರತೀಯರು ತಮ್ಮ ನೆಲದ ಸಂಸ್ಕೃತಿ , ಸತ್ವಗಳನ್ನು ಆರಿತುಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು . ಅವರು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದು ಸರಿಸುಮಾರು ೬೦ ಲಕ್ಷ ಸದಸ್ಯರನ್ನು ಒಳಗೊಂಡಿದೆ . ಪ್ರಸ್ತುತ ಪಾಠವನ್ನು ಅವರ “ ಪ್ರೇರಣಾ ” ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ .
10th class Nijavada Adarsha Purusha Yaragabeku notes in Kannada
ಆಶಯ ಭಾವ
ಆದರ್ಶ ಎಂಬ ಸಂಸ್ಕೃತ ಶಬ್ದದ ಮೂಲಾರ್ಥ ಕನ್ನಡಿ ಎಂದು . ಕನ್ನಡಿಯ ಎದುರು ನಿಂತಾಗ ನಾವು ನಮ್ಮನ್ನು ಸರಿಪಡಿಸಿಕೊಳ್ಳುತ್ತೇವೆ . ಸಿಂಗರಿಸಿಕೊಳ್ಳುತ್ತೇವೆ . ಕನ್ನಡಿಯು ನಮಗೆ ಹೇಗಿರಬೇಕೆಂಬುದನ್ನು ಬಾಯ್ದಿಟ್ಟು ಹೇಳದಿದ್ದರೂ ಅದರ ಎದುರಿನಲ್ಲಿ ನಾವು ನಮ್ಮನ್ನು ಸರಿಪಡಿಸಿಕೊಳ್ಳಲು ಪ್ರಾರಂಭಿಸುತ್ತೇವೆ . ಹಾಗೆಯೇ ಆದರ್ಶ ವ್ಯಕ್ತಿ ಎಂದರೆ ಯಾರನ್ನು ನೋಡಿ ನಾವು ನಮ್ಮ ಬದುಕನ್ನು , ವ್ಯಕ್ತಿತ್ವವನ್ನು , ವರ್ತನೆಗಳನ್ನು ಪರಿಷ್ಕರಿಸಿಕೊಳ್ಳಬಹುದೋ ಅಂಥ ವ್ಯಕ್ತಿ . ಅವರು ನಮ್ಮನ್ನುದ್ದೇಶಿಸಿ ಏನನ್ನೂ ಹೇಳದಿದ್ದರೂ ಅವರ ವ್ಯಕ್ತಿತ್ವವೇ ನಮಗೆ ನಮ್ಮನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ . ಅವರು ನಮಗೆ ಪರೋಕ್ಷ ಮಾರ್ಗದರ್ಶಕರಾಗುತ್ತಾರೆ . ನಾವು ಪ್ರತಿಯೊಬ್ಬರೂ ಅಂಥದೊಂದು ಆದರ್ಶವನ್ನು ಜೀವನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು . ಯಾಕೆಂದರೆ ಅದು ನಮ್ಮ ಬದುಕನ್ನು ರೂಪಿಸುತ್ತದೆ . ನಾವು ಸರಿದಾರಿಯಲ್ಲಿ ನಡೆಯುವಂತೆ ನಮ್ಮನ್ನು ಪ್ರೇರೇಪಿಸುತ್ತದೆ . ನಮ್ಮ ಜೀವನಕ್ಕೆ ಒಂದು ಗುರಿಯನ್ನು ಕೊಡುತ್ತದೆ . ಅದರಿಂದ ನಮ್ಮ ಚಿಂತನೆಯಲ್ಲಿ ಸ್ಪಷ್ಟತೆ ಮೂಡುತ್ತದೆ . ಭವಿಷ್ಯದ ಗೊಂದಲಗಳೆಲ್ಲ ನಿವಾರಣೆಯಾಗಿ ನಮಗೆ ಅತ್ಯಂತ ಖಚಿತವಾದ ದಾರಿಯು ಗೋಚರಿಸುತ್ತದೆ . ಹಾಗಾಗಿ ಆದರ್ಶವು ನಮ್ಮನ್ನು ಸ್ಪಷ್ಟ ದಿಕ್ಕಿನಲ್ಲಿ ಮುನ್ನಡೆಸುತ್ತದೆ. ಈ ಆದರ್ಶವು ಓರ್ವ ವ್ಯಕ್ತಿ ಆಗಿರಬೇಕೋ ಅಥವಾ ಒಂದು ತತ್ತ್ವವೋ ಎಂಬುದನ್ನು ಪ್ರಸ್ತುತ ಪಾಠವು ಚರ್ಚಿಸುತ್ತದೆ .
ಪದಗಳ ಅರ್ಥ:
ಆದರ್ಶ – ಮಾದರಿ
ತತ್ತ್ವ – ಸಿದ್ಧಾಂತ , ಸೂತ್ರ , ಮೌಲ್ಯ
ನಿರ್ಗುಣ – ಯಾವುದೇ ಗುಣಗಳನ್ನು ಆರೋಪಿಸಲಾಗದ , ಗುಣಾತೀತವಾದ
ನಿರಾಕಾರ – ಯಾವುದೇ ಆಕಾರವನ್ನು ಆರೋಪಿಸಲಾಗದ , ಎಲ್ಲ ಆಕಾರಗಳಿಗೆ ಅತೀತವಾದ
ಪ್ರಮಾದಾತೀತ – ಎಲ್ಲ ತಪ್ಪು , ಕಳಂಕ , ಅಪರಾಧಗಳಿಗೆ ಅತೀತವಾದ
ಮೋಕ್ಷ – ಜೀವನದ ಕೊನೆಯ ಸ್ಥಿತಿ , ಮುಕ್ತಿ
ಪುಣ್ಯಸಂಚಯ – ಪುಣ್ಯವನ್ನು ಒಟ್ಟುಗೂಡಿಸುವುದು
ವಿಭೂತಿ ಪುರುಷ ಮಹಾನ್ ವ್ಯಕ್ತಿ , ಸಾಧಕ
ಚೈತನ್ಯ – ಶಕ್ತಿ
ಅಕಲಂಕ – ಕಳಂಕವಿಲ್ಲದ , ದೋಷರಹಿತ
ನಿರ್ಭಿಡೆ – ಭಯವಿಲ್ಲದ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ ,
1. ತಿಲಕರನ್ನು ಯಾವ ರೀತಿ ಚಿತ್ರಿಸಲಾಗಿತ್ತು ?
ಉತ್ತರ : ತಿಲಕರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದ್ಯಗಳನ್ನು ಕೊಡಲಾಗಿತ್ತು .
2 , ಶಿವಚರಿತ್ರೆಯಲ್ಲಿ ಯಾವ ಉಲ್ಲೇಖ ಮಾಡಲಾಗಿದೆ ?
ಉತ್ತರ : ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಉಲ್ಲೇಖ ಮಾಡಲಾಗಿದೆ .
3. ಯಾವುದು ಎಂದೆಂದೂ ನಮ್ಮ ಆದರ್ಶವಾಗಿರಬೇಕು ?
ಉತ್ತರ : ತತ್ತ್ವವೇ ಎಂದೆಂದೂ ನಮ್ಮ ಆದರ್ಶವಾಗಿರಬೇಕು
4. ಯಾವ ವ್ಯಕ್ತಿ ನಮಗೆ ಆದರ್ಶವಾಗಬಲ್ಲನು ?
ಉತ್ತರ : ನಮ್ಮಿಂದ ಎಂದೂ ದೂರವಾಗದಂಥ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು .
5. ಗುರುಪೂರ್ಣಿಮಾ ದಿನದಂದು ಲೇಖಕರು ಯಾರನ್ನು ಪೂಜಿಸುತ್ತಾರೆ ?
ಉತ್ತರ : ಗುರುಪೂರ್ಣಿಮಾ ದಿನದಂದು ಲೇಖಕರು ಧ್ವಜವನ್ನು ಪೂಜಿಸುತ್ತಾರೆ .
10th Standard Nijavada Adarsha Purusha Kannada Notes
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1 , ಮೊಗ್ಗನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು ?
ಉತ್ತರ : ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಮಷಗಳು ನಮ್ಮ ಆದರ್ಶವಾಗಬೇಕು . ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಆ ಕ್ರಿಮಿಕೀಟಗಳಿಂದಾಗಿ ಮುಂದೆ ಅವು ಪೂರ್ಣವಾಗಿ ಅರಳಲಾರವು ,
2. ಧ್ವಜವನ್ನೇ ನಮ್ಮ ಗುರುವೆಂದು ಸ್ವೀಕರಿಸಿದ್ದೇವೆ ಎಂದು ಲೇಖಕರು ಹೇಳಿದ್ದಾರೇಕೆ ?
ಉತ್ತರ : ‘ ಕೇವಲ ತಮ್ಮ ಒಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು . ಅದನ್ನು ಧ್ವಜವು ಸಾಂಕೇತಿಸುತ್ತದೆ . ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ , ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆಯೋ , ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆಯೋ , ಹೃದಯದಲ್ಲಿ ಅಪೂರ್ವ ಸ್ಫೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ . ಗುರುಪೂರ್ಣಿಮಾ ದಿನದಂದು ಅದನ್ನು ಪೂಜಿಸುತ್ತೇವೆ . ‘ ಎಂದು ಲೇಖಕರು ಹೇಳಿದ್ದಾರೆ .
3. ಜನರು ಮೂರ್ತಿಪೂಜೆ ಮಾಡಲು ಕಾರಣವೇನು ?
ಉತ್ತರ : ಅದೃಶ್ಯ , ಅವ್ಯಕ್ತ ಹಾಗೂ ಅಸ್ಪಷ್ಟ ವಿಶ್ವಚಾಲಕ ಶಕ್ತಿಯನ್ನು ನಿರ್ಗುಣ ಮತ್ತು ನಿರಾಕಾರ ರೂಪದಲ್ಲಿ ಪೂಜೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ . ಆದ್ದರಿಂದ ಆ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ . ಜನಸಾಮಾನ್ಯರಿಗೆ ವಿಶ್ವಶಕ್ತಿಯ ನಿರಾಕಾರ ಸ್ವರೂಪದ ಅರಿವು ಮೂಡಿಸಲು ಮೂರ್ತಿ ಪೂಜೆಯು ಒಂದು ಸುಲಭ ಸಾಧನವಾಗಿದೆ .
4. ಯಾವ ವ್ಯಕ್ತಿಯನ್ನು ನಾವು ಆದರ್ಶವಾಗಿ ಸ್ವೀಕರಿಸಬೇಕು ?
ಉತ್ತರ : ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ , ಯಾವಾಗಲೂ ತಪ್ಪು ಮಾಡದವನೆಂದು ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು . ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಕಳಂಕವಿಲ್ಲದಂತಿರುವುದೋ ನಿಸ್ಸಂಕೋಚವಾಗಿ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ , ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು .
5. ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು ?
ಉತ್ತರ : ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಲು ಕೆಲವು ತೊಡಕುಗಳಿವೆ . ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ , ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು . ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ . ಆ ಎರಡನೆಯವನಲ್ಲಿ ದೋಷ ಕಂಡುಬಂದರೆ , ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ , ಆಗ ಮನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು , ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ .
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಯಾವ ಕಲೆಯನ್ನು ನಾವು ಸೊಗಸಾಗಿ ಸಾಧಿಸಿದ್ದೇವೆಂದು ಲೇಖಕರು ನಗೆಯಾಡುತ್ತಾರೆ ?
ಉತ್ತರ : ‘ ಧಾರ್ಮಿಕ ಸಾಹಿತ್ಯದಲ್ಲಿ ಒಂದಕ್ಕಿಂತ ಒಂದು ಶ್ರೇಷ್ಠವಾದ ಗ್ರಂಥಗಳಿವೆ . ನಮ್ಮ ಗತ ಇತಿಹಾಸವಾದರೂ ಅಷ್ಟೇ , ಅತ್ಯಂತ ಮಹತ್ವಪೂರ್ಣವಾಗಿದೆ , ವೀರರಸಪ್ರಧಾನವಾಗಿದೆ , ಹಾಗೆಯೇ ಸ್ಫೂರ್ತಿದಾಯಕವೂ ಆಗಿದೆ . ಆದರೆ ನಾವೆಂದೂ ಅವುಗಳ ಬಗ್ಗೆ ಯೋಗ್ಯ ದೃಷ್ಟಿಯಿಂದ ಯೋಚಿಸಲು ಕಲಿತಿಲ್ಲ . ಎಲ್ಲಿಯಾದರೂ ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮತಾಳಿದರೆ ಸಾಕು , ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ . ಅವನಿಗೆ ದೇವತ್ವವನ್ನು ಹೊರಿಸಲು ಸ್ವಲ್ಪವೂ ತಡಮಾಡುವುದಿಲ್ಲ . ಉದಾಹರಣೆಗೆ : ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ . “ ಶಿವಚರಿತ್ತೆ ”ಶಿವಾಜಿಯ ಚರಿತ್ರೆಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ . ಒಂದುಕಡೆ ಲೋಕಮಾನ್ಯ ತಿಲಕರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದಗಳನ್ನು ಕೊಡಲಾಗಿತ್ತು . ಮಹಾನ್ ಪುರುಷರು ಕಣ್ಣಿಗೆ ಬೀಳುವುದೇ ತಡ , ಅವರಾಗಲೇ ದೇವಸ್ಥಾನ ಸೇರಿದಂತೆಯೇ . ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ ; ಆದರೆ ಅವರ ಗುಣಗಳನ್ನು ಅನುಸರಿಸುವ ಮಾತು ಮಾತ್ರ ಕೇಳುವುದಿಲ್ಲ . ಒಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ಬುದ್ಧಿಪೂರ್ವಕವಾಗಿ ದೂರ ಸರಿಸುವಂಥ ಈ ಅದ್ಭುತ ಕಲೆಯನ್ನು ನಾವು ಸೊಗಸಾಗಿ ಸಾಧಿಸಿಕೊಂಡಿದ್ದೇವೆ ‘ ಎಂದು ಲೇಖಕರು ಹೇಳಿದ್ದಾರೆ .
2. ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುವದರ ಬಗ್ಗೆ ಲೇಖಕರ ಅಭಿಪ್ರಾಯವೇನು ?
ಉತ್ತರ : ಶ್ರೀಕೃಷ್ಣನಂತಹ ಪೂರ್ಣ ಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ , ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ . ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು , ರಾಮಾಯಣ , ಮಹಾಭಾರತ , ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ . ಕೇವಲ ಮಣ್ಯಸಂಚಯಕ್ಕಾಗಿ ಎಂಥ ಸಂಕುಚಿತ ಯೋಚನೆ ಇದು . ಇದಕ್ಕೆ ಲೇಖಕರು ಒಂದು ಸಣ್ಣ ಉದಾಹರಣೆ ಹೇಳುತ್ತಾರೆ : ‘ ಒಮ್ಮೆ ನಮ್ಮ ಪರಿಚಿತ ಮಹನೀಯರೊಬ್ಬರು ನಮ್ಮಲ್ಲಿ ಬಂದರು . ಅವರು ದಿನನಿತ್ಯ ಸ್ನಾನ , ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು . ಒಂದು ದಿನ ನಾನು ಊಟದ ಸಮಯದಲ್ಲಿ , “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ ? ” ಎಂದು ಅವರನ್ನು ಕೇಳಿದೆ . ನಾನು ಅಷ್ಟು ಕೇಳಿದ್ದೇ ತಡ ಅವರು ಕೆರಳಿ ಕೆಂಡವಾದರು . “ ನೀವು ಶ್ರೀರಾಮಚಂದ್ರನ , ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ ? ನಾನು ಗುಣಗ್ರಹಣಕ್ಕಾಗಿ ಅಲ್ಲ . ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗಂಥಪಠಣ ಮಾಡುತ್ತೇನೆ ” ಎಂದರು ! ‘ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ .
3. ತಿಲಕರು ಮತ್ತು ಶಿವಾಜಿಯವರನ್ನು ಜನ ಹೇಗೆ ಸ್ವೀಕರಿಸಿದ್ದಾರೆ ? ಈ ಬಗ್ಗೆ ಲೇಖಕರು ಯಾವ ಅಭಿಪ್ರಾಯ ತಳೆದಿದ್ದಾರೆ ?
ಉತ್ತರ : ಎಲ್ಲಿಯಾದರೂ , ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮತಾಳಿದರೆ ಸಾಕು , ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ . ಅವನಿಗೆ ದೇವತ್ವವನ್ನು ಹೊರಿಸಲು ಕಿಂಚಿತ್ತೂ ತಡಮಾಡವು . ಈಗಂತೂ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ . ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ . “ ಶಿವಚರಿತೆ ” ಶಿವಾಜಿಯ ಚರಿತ್ರೆಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ . ಬಿಡಿ , ಲೋಕಮಾನ್ಯ ತಿಲಕರು ನಮ್ಮ ಕಾಲದಲ್ಲೇ ಆಗಿಹೋದ ನಾಯಕರು . ಆದರೆ ನಾನೊಮ್ಮೆ ಅವರದೊಂದು ಚಿತ್ರ ನೋಡಿದೆ . ಅದರಲ್ಲಿ ಅವರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದಗಳನ್ನು ಕೊಡಲಾಗಿತ್ತು ! ಈ ರೀತಿ ನಮ್ಮ ಮಹಾಪುರುಷರನ್ನು ದೇವತೆಗಳ ಶ್ರೇಣಿಗೆ ತಳ್ಳುವುದು ನಿಜಕ್ಕೂ ಅದೆಷ್ಟು ವಿಚಿತ್ರ ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ , ಅವರಾಗಲೇ ದೇವಸ್ಥಾನ ಸೇರಿದಂತೆಯೇ ಲೆಕ್ಕ ! ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ ; ಆದರೆ ಅವರ ಗುಣಗಳನ್ನು ಅನುಸರಿಸುವ ಸೊಲ್ಲು ಮಾತ್ರ ಕೇಳುವುದಿಲ್ಲ . ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ .
4. ಆದರ್ಶ ವ್ಯಕ್ತಿ ದೋಷರಹಿತನಾಗಿರಬೇಕಾದ್ದು ಮುಖ್ಯ , ಏಕೆ ?
ಉತ್ತರ : ನಮ್ಮಿಂದ ಎಂದೂ ದೂರವಾಗದಂಥ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು , ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ , ಯಾವುದೇ ದೋಷ ಇಲ್ಲದವನೆಂದು ಭಾವಿಸುವವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು . ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ . ಆ ಎರಡನೆಯವನಲ್ಲಿ ದೋಷ ಕಂಡುಬಂದರೆ , ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ , ಆಗ ಮನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು , ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ . ಆದ್ದರಿಂದ ಆದರ್ಶ ವ್ಯಕ್ತಿಯನ್ನು ಕುಂತು . ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ , ಅಷ್ಟೇ ಅಲ್ಲ , ನಾವು ಆದರ್ಶವೆಂದು ಭಾವಿಸುವ ಎಲ್ಲ ಗುಣಗಳೂ ಆ ವ್ಯಕ್ತಿಯಲ್ಲಿ ನಮಗೆ ಎದ್ದು ಕಾಣಬೇಕು . ಆದ್ದರಿಂದ ನಾವು ಯಾರ ಗುಣಗಳನ್ನನುಸರಿಸಲು ಸಾಧ್ಯವೋ ಅಂಥ ನಿರ್ದೋಷ ವ್ಯಕ್ತಿಯನ್ನೇ ಆದರ್ಶವಾಗಿ ಭಾವಿಸಬೇಕಾಗಿದೆ . ಯಾರ ಜೀವನವೆಂಬ ಹೂವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಕಳಂಕವಿಲ್ಲದಿರುವುದೋ , ಸ್ವಚ್ಛಂದವಾಗಿ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ , ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು .
5. ಶ್ರೀಕೃಷ್ಣನನ್ನು ಕೇವಲ ಪುಣ್ಯಸಂಚಯಕ್ಕಾಗಿ ಪೂಜಿಸುವುದು ಸರಿಯಲ್ಲ – ಲೇಖಕರು ಹೀಗೆ ಹೇಳಲು ಕಾರಣವೇನು ?
ಉತ್ತರ : ಕಾರಣವೇನೆಂದರೆ , ಮಹಾಪುರುಷರ ವಿಷಯದಲ್ಲಿ ಕೆಲವು ವಿಚಿತ್ರ ಭಾವನೆಗಳು ಸಮಾಜದಲ್ಲಿ ಬೇರೂರಿಬಿಟ್ಟಿವೆ . ಉದಾಹರಣೆಗೆ : ಶ್ರೀಕೃಷ್ಣನನ್ನು ಆದರ್ಶ ಎನ್ನಬಹುದಾದಂಥ ಹಲವಾರು ಮಹಾನ್ ಕಾರ್ಯಗಳನ್ನು ಅವನು ತನ್ನ ಜೀವನದಲ್ಲಿ ಸಾಧಿಸಿದ್ದಾನೆ . ಆದರೆ ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ ಅವನಾದರೋ ದೇವರು , ಪೂರ್ಣಾವತಾರನಾಗಿದ್ದ ; ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೆ ? ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ . ಶ್ರೀಕೃಷ್ಣನಂತಹ ಪೂರ್ಣ ಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ , ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ . ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು , ರಾಮಾಯಣ , ಮಹಾಭಾರತ , ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ , ಕೇವಲ ಮಣ್ಯಸಂಚಯಕ್ಕಾಗಿ ‘ ಎಂಬುದು ಸಂಕುಚಿತ ಆಲೋಚನೆಯಾಗಿದೆ.
ಈ ) ಈ ಕೆಳಗಿನ ವಾಕ್ಯಗಳ ಅರ್ಥ ಸ್ವಾರಸ್ಯವನ್ನು ಆರೇಳು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ .
1. ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ ?
ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ ‘ ಪ್ರೇರಣಾ ‘ ಎಂಬ ಕೃತಿಯಿಂದ ಆರಿಸಲಾದ ‘ ನಿಜವಾದ ಆದರ್ಶ ಪುರುಷ ಯಾರಾಗಬೇಕು ? ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಒಮ್ಮೆ ಲೇಖಕರಿಗೆ ಪರಿಚಿತರಾದ ಮಹನೀಯರೊಬ್ಬರು ಅವರಲ್ಲಿಗೆ ಬಂದರು . ಅವರು ದಿನನಿತ್ಯ ಸ್ನಾನ , ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು . ಒಂದು ದಿನ ಲೇಖಕರು ಊಟದ ಸಮಯದಲ್ಲಿ , “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ ? ” ಎಂದು ಅವರನ್ನು ಕೇಳಿದರು . ಅವರು ಅಷ್ಟು ಕೇಳಿದ್ದೇ ತಡ ಅವರು ಕೆರಳಿ ಕೆಂಡವಾಗಿ ಸಂದರ್ಭದಲ್ಲಿ “ ನೀವು ಶ್ರೀರಾಮಚಂದ್ರನ , ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ ? ನಾನು ಗುಣಗ್ರಹಣಕ್ಕಾಗಿ ಅಲ್ಲ . ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತೇನೆ ” ಎಂದು ಹೇಳಿದ ಮಾತನ್ನು ಲೇಖಕರು ಇಲ್ಲಿ ಉದಾಹರಿಸಿದ್ದಾರೆ .
ಸ್ವಾರಸ್ಯ : ರಾಮಾಯಣ , ಉನ್ನತ ಮೌಲ್ಯಗಳನ್ನು ಮಹಾಭಾರತದಂತಹ ಕಾವ್ಯಗಳ ಮೂಲ ಉದ್ದೇಶ ಮಾನವನ ಜೀವನದಲ್ಲಿ ಬಿತ್ತುವುದು . ಆದರೆ ಅವುಗಳನ್ನು ಓದುವುದು ಕೇವಲ ಪುಣ್ಯಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಎಂದು ಲೇಖಕರ ಪರಿಚಿತರು ಹೇಳಿದ ಮಾತನ್ನು ವ್ಯಂಗ್ಯಭರಿತವಾಗಿ ಹೇಳಿರುವುದು ಸ್ವಾರಸ್ಯಕರವಾಗಿದೆ .
2. ಮೊಗ್ಗುಗಳ ಬದಲು ಪೂರ್ಣ ಅರಳಿದ ಮುಷ್ಪಗಳು ನಮ್ಮ ಆದರ್ಶವಾಗಬೇಕು .
ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ ‘ ಪ್ರೇರಣಾ ‘ ಎಂಬ ಕೃತಿಯಿಂದ ಆರಿಸಲಾದ ‘ ನಿಜವಾದ ಆದರ್ಶ ಪುರುಷ ಯಾರಾಗಬೇಕು ? ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ . ಸಂದರ್ಭ : ಲೇಖಕರು , ನಾವು ಎಂತಹವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಸ್ವೀಕರಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು . ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಆ ಕ್ರಿಮಿಕೀಟಗಳಿಂದಾಗಿ ಮುಂದೆ ಅವು ಪೂರ್ಣವಾಗಿ ಅರಳಲಾರವು . ಆದ್ದರಿಂದ ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು ‘ ಎಂದು ಲೇಖಕರು ಈ ಸಂದರ್ಭದಲ್ಲಿ ಹೇಳಿದ್ದಾರೆ .
ಸ್ವಾರಸ್ಯ : ಇನ್ನೂ ಮೊಗ್ಗಿನಂತೆ ಮುದುಡಿರುವ ವ್ಯಕ್ತಿಗಳು ಒಳಗೆ ಕ್ರಿಮಿಕೀಟಗಳನ್ನು ಹೊಂದಿರಬಹುದಾದ ಮೊಗ್ಗುಗಳಂತೆ ‘ ಎಂದು ಹೋಲಿಸಿ , ಆದರೆ ನಿಜವಾದ ಆದರ್ಶ ವ್ಯಕ್ತಿಗಳು ಅರಳಿದ ಹೂವಿನಂತೆ . ಕ್ರಿಮಿರಹಿತವಾದ ಅರಳಿದ ಹೂವನ್ನು ಸ್ವೀಕರಿಸುವಂತೆ ಯಾರ ಮನಸ್ಸು ಅರಳಿ ಪ್ರಸನ್ನವಾಗಿದೆಯೋ ಅಂತಹ ವ್ಯಕ್ತಿಯನ್ನು ಆದರ್ಶವಾಗಿ ಸ್ವೀಕರಿಸಬೇಕು ‘ ಎಂಬುದು ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ .
ಹೆಚ್ಚುವರಿ ಪ್ರಶ್ನೆಗಳು :
ಕೊಟ್ಟಿರುವ ಪ್ರಶ್ನೆಗಳಿಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸಿ .
1 , ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಯಾವ ಪಟ್ಟಿಗೆ ಹಾಕಲಾಗಿದೆ ?
ಉತ್ತರ : ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ .
2. ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ ಅವರನ್ನು ಎಲ್ಲಿಗೆ ಸೇರಿಸಲಾಗುತ್ತದೆ ?
ಉತ್ತರ : ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ ಅವರು ದೇವಸ್ಥಾನ ಸೇರಿದಂತೆಯೇ ಸರಿ.
3. ಮೂರ್ತಿ ಪೂಜೆಯು ಯಾವುದಕ್ಕೆ ಒಂದು ಸುಲಭ ಸಾಧನವಾಗಿದೆ ?
ಉತ್ತರ : ಜನಸಾಮಾನ್ಯರಿಗೆ ವಿಶ್ವಶಕ್ತಿಯ ನಿರಾಕಾರ ಸ್ವರೂಪದ ಅರಿವು ಮೂಡಿಸಲು ಮೂರ್ತಿ ಪೂಜೆಯು ಒಂದು ಸುಲಭ ಸಾಧನ ,
4. ರಾಮಾಯಣ , ಮಹಾಭಾರತ , ಗೀತೆ ಮುಂತಾದವುಗಳನ್ನು ಪಠಿಸುವ ಉದ್ದೇಶದ ಬಗೆಗೆ ಇರುವ ಸಂಕುಚಿತ ಯೋಚನೆ ಏನು ?
ಉತ್ತರ : ರಾಮಾಯಣ , ಮಹಾಭಾರತ , ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ , ಕೇವಲ ಪುಣ್ಯಸಂಚಯಕ್ಕಾಗಿ ಎಂಬ ಸಂಕುಚಿತ ಯೋಚನೆ ಇದೆ .
ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಹೊಸಹೊಸ ವ್ಯಕ್ತಿಗಳನ್ನು ಆದರ್ಶ ವ್ಯಕ್ತಿಯಾಗಿ ಹುಡುಕುವಂತಾಗುವ ಬಗ್ಗೆ ಲೇಖಕರ ಅಭಿಪ್ರಾಯವೇನು?
ಉತ್ತರ : ‘ ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ , ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು . ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ . ಆ ಎರಡನೆಯವನಲ್ಲಿ ದೋಷ ಕಂಡುಬಂದರೆ , ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ . ಆಗ ಮನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು . ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ ‘ ಎಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ .
2. ರಾಷ್ಟ್ರಧ್ವಜವನ್ನು ನೋಡಿದಾಗ ಉಂಟಾಗುವ ಭಾವನೆಗಳೇನು ?
ಉತ್ತರ : ‘ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ , ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆ , ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆ , ಹೃದಯದಲ್ಲಿ ಅಪೂರ್ವ ಸ್ಫೂರ್ತಿಯ ಸಂಚಾರವಾಗುತ್ತದೆ . ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ .
3. ಶ್ರೀಕೃಷ್ಣನ ಅವತಾರ ಮತ್ತು ಕಾರ್ಯಗಳ ಬಗ್ಗೆ ನಮ್ಮ ಸಮಾಜದಲ್ಲಿ ರೂಢವಾಗಿರುವ ಭಾವನೆಗಳೇನು?
ಉತ್ತರ : ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ : ಅವನಾದರೋ ದೇವರು , ಪೂರ್ಣಾವತಾರನಾಗಿದ್ದ , ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೆ ? – ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ .
4. ಲೇಖಕರು ತಮ್ಮ ಪರಿಚಿತರನ್ನು ಆಧ್ಯಾತ್ಮ ರಾಮಾಯಣದ ಆಚರಣೆಯ ಬಗ್ಗೆ ಕೇಳಿದಾಗ ಅವರು ಏನೆಂದು ಪ್ರತಿಕ್ರಿಯಿಸಿದರು ?
ಉತ್ತರ : ಲೇಖಕರು ತಮ್ಮ ಪರಿಚಿತರನ್ನು ಆಧ್ಯಾತ್ಮ ರಾಮಾಯಣದ “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ ? ” ಎಂದು ಕೇಳಿದಾಗ ಆ ಮಹನೀಯರು ಕೆರಳಿ ಕೆಂಡವಾಗಿ “ ನೀವು ಶ್ರೀರಾಮಚಂದ್ರನ , ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ ? ನಾನು ಗುಣಗ್ರಹಣಕ್ಕಾಗಿ ಅಲ್ಲ . ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠ ಮಾಡುತ್ತೇನೆ ” ಎಂದರು .
5. ಶಿವಾಜಿ ಮತ್ತು ತಿಲಕರನ್ನು ಅವತಾರಿಗಳೆಂದು ಹೇಳಲಾಗುತ್ತಿರುವ ಬಗ್ಗೆ ಲೇಖಕರು ಏನೆಂದು ಹೇಳಿದ್ದಾರೆ ?
ಉತ್ತರ : “ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ . ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ . “ ಶಿವಚರಿತ್ರೆ ” ( ಶಿವಾಜಿಯ ಚರಿತ್ರೆಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ ). ಬಿಡಿ , ಲೋಕಮಾನ್ಯ ತಿಲಕರು ನಮ್ಮ ಕಾಲದಲ್ಲೇ ಆಗಿಹೋದ ನಾಯಕರು . ಆದರೆ ನಾನೊಮ್ಮೆ ಅವರದೊಂದು ಚಿತ್ರ ನೋಡಿದೆ . ಅದರಲ್ಲಿ ಅವರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದ್ಯಗಳನ್ನು ಕೊಡಲಾಗಿತ್ತು ! ” ಎಂದು ಹೇಳಿದ್ದಾರೆ.
ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ
1. “ ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ ”
ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ ‘ ಪ್ರೇರಣಾ ‘ ಎಂಬ ಕೃತಿಯಿಂದ ಆರಿಸಲಾದ ‘ ನಿಜವಾದ ಆದರ್ಶ ಪುರುಷ ಯಾರಾಗಬೇಕು ? ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ಲೇಖಕರು . ಆದರ್ಶ ವ್ಯಕ್ತಿಯನ್ನು ಆರಿಸುವಾಗ ವಹಿಸಬೇಕಾದ ಎಚ್ಚರಿಕೆಯನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಎಲ್ಲಾ ಒಳ್ಳೆಯಗುಣಗಳನ್ನು ಹೊಂದಿರುವ ಹಾಗೂ ಯಾವುದೇ ದೋಷವಿಲ್ಲದ ವ್ಯಕ್ತಿಯನ್ನು ನಮ್ಮ ಆದರ್ಶ ವ್ಯಕ್ತಿಯನ್ನಾಗಿ ಆರಿಸಬೇಕು . ಇಲ್ಲವಾದಲ್ಲಿ ನಾವು ಆರಿಸಿದ ವ್ಯಕ್ತಿಯಿಂದ ಏನಾದರು ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ . ಆ ಎರಡನೆಯವನಲ್ಲಿ ದೋಷ ಕಂಡುಬಂದರೆ , ಆಗ ಪುನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆಗಬಹುದು . ಆದ್ದರಿಂದ “ ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ . ” ಎಂದು ಲೇಖಕರು ಸಲಹೆ ನೀಡಿದ್ದಾರೆ .
ಸ್ವಾರಸ್ಯ : ಆದರ್ಶ ವ್ಯಕ್ತಿಯನ್ನು ಹುಡುಕುವುದು ಬಹಳ ಕಷ್ಟದ ಕೆಲಸ . ಏಕೆಂದರೆ ನಾವು ಆದರ್ಶ ಎನಿಸಿಕೊಂಡ ವ್ಯಕ್ತಿ ಏನಾದರು ತಪ್ಪು ಮಾಡಿದರೆ ನಮ್ಮ ಆಯ್ಕೆ ತಪ್ಪಾಗುತ್ತದೆ . ಆದ್ದರಿಂದ ನಮ್ಮ ಆದರ್ಶ ವ್ಯಕ್ತಿಯನ್ನು ಎಚ್ಚರಿಕೆಯಿಂದ ಆರಿಸಬೇಕೆಂಬುದು ಇಲ್ಲಿನ ಸ್ವಾರಸ್ಯವಾಗಿದೆ .
2 , “ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ . ”
ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ ‘ ಪ್ರೇರಣಾ ‘ ಎಂಬ ಕೃತಿಯಿಂದ ಆರಿಸಲಾದ ‘ ನಿಜವಾದ ಆದರ್ಶ ಪುರುಷ ಯಾರಾಗಬೇಕು ? ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ಲೇಖಕರು , ಜನರು ಮೂರ್ತಿ ಪೂಜೆ ಮಾಡುವುದಕ್ಕೆ ಕಾರಣವನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಆದೃಶ್ಯ , ಅವ್ಯಕ್ತ ಹಾಗೂ ಅಸ್ಪಷ್ಟ ವಿಶ್ವಚಾಲಕ ಶಕ್ತಿಯನ್ನು ನಿರ್ಗುಣ ಮತ್ತು ನಿರಾಕಾರ ರೂಪದಲ್ಲಿ ಪೂಜೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ . ಆದ್ದರಿಂದ ಆ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ . ಆದರೂ ಮೂರ್ತಿಪೂಜೆಯೇ ಧರ್ಮದ ಜೀವಾಳವಲ್ಲ . ಒಂದು ವಿಶಿಷ್ಟ ತತ್ತ್ವವು ಆ ಮೂರ್ತಿಯ ರೂಪದಲ್ಲಿ ಗೋಚರವಾಗುತ್ತದೆ ಎಂಬ ಕಾರಣಕ್ಕೆ ಅದಕ್ಕೆ ಪೂಜೆ ಸಲ್ಲುತ್ತದೆ . ಎಂದಿದ್ದಾರೆ .
ಸ್ವಾರಸ್ಯ : ಮೂರ್ತಿ ಪೂಜೆಯು ಕೇವಲ ಆಚರನೆಯಷ್ಟೇ ಅಲ್ಲ , ನಿರಾಕಾರ ಸ್ವರೂಪನಾದ ದೇವರನ್ನು ನೋಡಲು ಸಾಧ್ಯವಿಲ್ಲದಿರುವುದರಿಂದ ಅದಕ್ಕೊಂದು ರೂಪ ಕೊಟ್ಟು ಸಾಂಕೇತಿಕವಾಗಿ ಪೂಜಿಸಲಾಗುತ್ತದೆಯೇ ಹೊರತು ಧರ್ಮದ ಜೀವಾಳವಲ್ಲ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .
3. “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ ? ”
ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ ‘ ಪ್ರೇರಣಾ ‘ ಎಂಬ ಕೃತಿಯಿಂದ ಆರಿಸಲಾದ ‘ ನಿಜವಾದ ಆದರ್ಶ ಪುರುಷ ಯಾರಾಗಬೇಕು ? ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ಲೇಖಕರು , ಒಮ್ಮೆ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಪ್ರತಿನಿತ್ಯ ಓದುತ್ತಿದ್ದಂತಹ ಅವರ ಪರಿಚಿತ ವ್ಯಕ್ತಿಯೊಬ್ಬರಿಗೆ ಈ ಮಾತನ್ನು ಹೇಳಿದರು . ಅವರ ಆ ಪರಿಚಿತ ಮಹನೀಯರು ದಿನನಿತ್ಯ ಸ್ನಾನ ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು . ಇದನ್ನು ನೋಡಿದ ಲೇಖಕರು ಅವರನ್ನು ಕುರಿತು ಈ ಪ್ರಶ್ನೆಯನ್ನು ಕೇಳಿದರು . ಆಗ ಆ ಮಹನೀಯರು ಕೋಪದಿಂದ “ ನೀವು ಶ್ರೀರಾಮಚಂದ್ರನ , ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ ? ನಾನು ಗುಣಗ್ರಹಣಕ್ಕಾಗಿ ಅಲ್ಲ , ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತೇನೆ ” ಎಂದು ಹೇಳಿದರು .
ಸ್ವಾರಸ್ಯ : ರಾಮಾಯಣದಂತಹ ಕಾವ್ಯಗಳನ್ನು ಕೇವಲ ಪುಣ್ಯಗಳಿಸುವುದಕ್ಕಾಗಿ ಓದುವುದು ಸರಿಯಲ್ಲ . ಅವುಗಳನ್ನು ಓದಿ , ಅಲ್ಲಿರುವ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು . ಆದರೆ ಅವುಗಳನ್ನು ಬರಿದೆ ಓದುವ ಮಾತ್ರದಿಂದ ಮಣ್ಯ ಸಿಗಲಾರದು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .