10ನೇ ತರಗತಿ ಹಲಗಲಿ ಬೇಡರು (ಜನಪದ ಲಾವಣಿ) ಕನ್ನಡ ನೋಟ್ಸ್
ಅಭ್ಯಾಸ ಪ್ರಶ್ನೋತ್ತರಗಳು
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊ೦ದು ವಾಕ್ಯಗಳಲ್ಲಿ ಉತ್ತರಿಸಿ.
೧. ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?
ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ
ಆದೇಶ ಹೊರಡಿಸಿತು.
೨. ಹಲಗಲಿಯ ನಾಲ್ವರು ಪ್ರಮುಖರು ಯಾರು ?
ಹಲಗಲಿಯ ನಾಲ್ವರು ಪ್ರಮುಖರುಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗ , ರಾಮ.
೩. ಹಲಗಲಿ ಗುರುತು ಉಳಿಯದಂತಾದುದು ಏಕೆ ?
ಕುಂಪಣಿ ಸರ್ಕಾರದ ದಂಡು ಹಲಗಲಿಗೆ ಬೆಂಕಿ ಹಚ್ಚಿ ಸುಟ್ಟು ಬೂದಿ ಮಾಡಿದ್ದರಿಂದ ಗುರುತು ಉಳಿಯದಂತಾಯಿತು.
೪. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?
ಹಲಗಲಿಯ ಬಂಟರ ಹತಾರ ಕದನದ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
೫. ಹಲಗಲಿ ಗ್ರಾಮ ಎಲ್ಲಿದೆ ?
ಹಲಗಲಿ ಗ್ರಾಮ ಮುಧೋಳ ಸಂಸ್ಥಾನದಲ್ಲಿದ್ದು, ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.
ಹೆಚ್ಚುವರಿ ಪ್ರಶ್ನೋತ್ತರಗಳು
೬. ಒಳಗಿನ ಮಂದಿ ಗುಂಡನ್ನು ಹೇಗೆ ಹೊಡೆದgÄÀ ?
ಒಳಗಿನ ಮಂದಿ ಮುಂಗಾರು ಸಿಡಿಲು ಸಿಡಿಯುವ ಹಾಗೆ ಗುಂಡನ್ನು ಹೊಡೆದರು.
೭. ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು ಯಾರು ?
ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು ಹೆಬಲಕ ಸಾಬ.
೮. ಲಾವಣಿಕಾರ ಯಾರ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾನೆ ?
ಲಾವಣಿಕಾರ ಕುರ್ತುಕೋಟಿ ಕಲ್ಮೇಶನ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾರೇ .
೯. ಕಂಪನಿ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿದ ಕಥೆಯನ್ನೊಳಗೊಂಡ ಲಾವಣಿ ಯಾವುದು ?
ಕಂಪನಿ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿದ ಕಥೆಯನ್ನೊಳಗೊಂಡ ಲಾವಣಿ ಹಲಗಲಿ ಬೇಡರ ಲಾವಣಿ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು ?
ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು
ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.ಈ ಆದೇಶದ ಪ್ರಕಾರ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಗೆ ಬಂದು ಜೋರ ಮಾಡಿ
ಬೇಡರ ಆಯುಧಗಳನ್ನು ಕಸಿದುಕೊಳ್ಳಲು ಹೋದರು . ಇದನ್ನು ವಿರೋಧಿಸಿ ರಾಮ, ಬಾಲ, ಹನುಮ, ಜಡಗ ಮೊದಲಾದ ಹಲಗಲಿ ಬೇಡರು
ತಮ್ಮಲ್ಲಿರುವ ಆಯುಧಗಳನ್ನು ಕೊಡಲೊಪ್ಪದೆ ದಂಗೆ ಎದ್ದರು.
೨. ಹಲಗಲಿಗೆ ದಂಡು ಬರಲು ಕಾರಣವೇನು ?
ಹಲಗಲಿಯ ಬೇಡರು ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆದಂಗೆ ಎದ್ದು ಮುಂಗಾರಿನ ಸಿಡಿಲು ಸಿಡಿಯುವ ಹಾಗೆ ಗುಂಡು ಹೊಡೆರು ಇದರಿಂದ ಬ್ರಿಟೀಷ್ ಸೈನಿಕರು ದಂಗು ಹಿಡಿದು ದೂರ ಸರಿದು
ನಿಂತರು. ಆಗ ಇನ್ನು ಹೆಚ್ಚಿನ ದಂಡು ಬರಲಿ ಎಂದು ಸಾಹೇಬ (ಜೆ..ಬಿ.ಸೆಬಿ.ಸೆಟೆನ್ಕರ್) ಪತ್ರ ಬರೆದು ತನ್ನ ಮೇಲಿನ ಅಧಿಕಾರಿಗೆ ಕಳಿಸಿದನು. ಆಗ
ದಂಡು ತಯಾರಾಗಿ ಹಲಗಲಿಗೆ ಬಂದಿತು.
೩. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು ?
ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಒಪ್ಪದೆ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷ್‌ರ ದಂಡು ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು ಹಲಗಲಿಯ ಬೇಡರನ್ನು ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು . ಬೇಡರನ್ನು ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು ಸಾಯಿಸಿದರು . ಸಿಕ್ಕದ್ದನ್ನೆಲ್ಲ ತೆಗೆದುಕೊಂಡು ಊರಿಗೆ ಕೊಳ್ಳಿ ಇಟ್ಟು ಗುರುತು ಉಳಿಯದಂತೆ ಸುಟ್ಟು ಬೂದಿ ಮಾಡಿ ಹೋದರು.
೪. ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ ?
ಲಾವಣಿಗಳನ್ನು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ವೀರ ಕಲಿಗಳ ವೀರಸಾಹಸ, ವೀರರ ಉಜ್ವಲ ಜೀವನದ ಘಟನೆಗಳನ್ನಾ
ಧರಿಸಿದಕಥನಾತ್ಮಕ ಕಾವ್ಯಗಳಾಗಿದ್ದು ಸಾಮಾನ್ಯವಾಗಿ ವೀರತನ ಹಾಗೂ ಸಾಹ¸ª
ವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನಲಾಗಿದೆ.
ಹೆಚ್ಚುವರಿ ಪ್ರಶ್ನೆಗಳು
೫. ಹಲಗಲಿ ಏಕೆ ಹಾಳಾಗಿ ಹೋಯಿತು ?
ಬ್ರಿಟೀಷರ ದಂಡು ಹಲಗಲಿಗೆ ಮುತ್ತಿಗೆ ಹಾಕಿ ಬೇಡರನ್ನು ಬಗ್ಗು ಬಡಿದು ಕೊಡಲಿ, ಕುಡಗೋಲು , ಕುಡ, ಕಬ್ಬಿಣ, ಮೊಸರು ,ಬೆಣ್ಣಿ, ಹಾಲು, ಉಪ್ಪು,ಎಣ್ಣೆ ,ಅರಿಸಿಣ, ಜೀರಗಿ , ಅಕ್ಕಿ, ಸಕ್ಕರೆ ಬೆಲ್ಲ, ಗಂಗಳ, ತಂಬಿಗೆ, ಮಂಗಳಸೂತ್ರ , ಬೀಸುವಕಲ್ಲು –ಹೀಗೆಹೀಗೆ ಸಿಕ್ಕಿದ್ದೆಲ್ಲಾ ತೆಗೆದುಕೊಂಡು, ಊರಿಗೆಕೊಳ್ಳಿ ಇಟ್ಟು ಸುಟ್ಟು ಬೂದಿ ಮಾಡಿ ಗುರುತು ಉಳಿಯದಂತೆ ಮಾಡಿ ಹೋಗಿದ್ದರಿಂದ ಹಾಳಾಗಿ ಹೋಯಿತು.
೬.ಬ್ರಿಟೀಷರು ಹೊರಡಿಸಿದ ನಿಶ್ಯಸ್ತಿçÃಕರಣದ ಆದೇಶ ವಿವರಣೆ ಏನು ?
ಬ್ರಿಟೀಷರು ಹೊರಡಿಸಿದ ನಿಶ್ಯಸ್ತ್ರೀಕರಣದ ಆದೇಶ ವಿವರಣೆ ಏನೆಂದರೆ ಬ್ರಿಟೀಷ್ ಸರ್ಕಾರದ ಅನುಮತಿಯಿರದೆ ಭಾರತೀಯರು ಶಸ್ತ್ರಾಸ್ತಗಳು
ಹೊಂದುವ೦ತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬುದಾಗಿತ್ತು.
೭. ಹೆಬಲಕ ಸಾಹೇಬನ ಬುದ್ಧಿಮಾತಿಗೆ ವಿರೋಧವಾಗಿ ಜಡಗ ಏನು ಹೇಳುತ್ತಾನೆ ?
ಹೆಬಲಕ ಸಾಹೇಬನ ಬುದ್ಧಿಮಾತಿಗೆ ವಿರೋಧವಾಗಿ ಜಡಗ ಇವರನ್ನು
ಹೊಡಿಯಿರಿ , ಇವರು ಸಂಪೂರ್ಣವಾಗಿ ಮೋಸಗಾರರು ,ವಿಶ್ವಾಸವಚಕರು ಇವರ ಮೇಲೆ ನಂಬಿಗೆ ಇಲ್ಲ. ಒಳಸಂಚಿನಿ೦ದ ಮೋಸಮಾಡಿ ನಮ್ಮ ದೇಶ ಗೆಲ್ಲುತ್ತಾರೆ. ಮುಂದೆ ನಮಗೆ ಆಪತ್ತು ಕಾದಿದೆ
ಎಂದು ಹೇಳುತ್ತಾನೆ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕವಾಕ್ಯಗಳಲ್ಲಿ ಉತ್ತರಿಸಿ.
೧. ಹಲಗಲಿ ದಂಗೆಗೆ ಕಾರಣವೇನು? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು?
ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು
ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.ಈ ಆದೇಶದ ಪ್ರಕಾರ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಗೆ ಬಂದು ಜೋರ ಮಾಡಿ
ಬೇಡರ ಆಯುಧಗಳನ್ನು ಕಸಿದುಕೊಳ್ಳಲು ಹೋದರು . ಇದನ್ನು ವಿರೋಧಿಸಿ ರಾಮ, ಬಾಲ, ಹನುಮ, ಜಡಗ ಮೊದಲಾದ ಹಲಗಲಿ ಬೇಡರು
ತಮ್ಮಲ್ಲಿರುವ ಆಯುಧಗಳನ್ನು ಕೊಡಲೊಪ್ಪದೆ ದಂಗೆ ಎದ್ದು ಒಳಗಿನಿಂದ ಮುಂಗಾರಿನ ಸಿಡಿಲು ಸಿಡಿಯುವ ಹಾಗೆ ಗುಂಡು ಹೊಡೆರು .ಇದರಿಂದ ಬ್ರಿಟೀಷ್ ಸೈನಿಕರು ದಂಗು ಹಿಡಿದು ದೂರ ಸರಿದು ನಿಂತರು. ಆಗ ಇನ್ನು ಹೆಚ್ಚಿನ ದಂಡು ಬರಲಿ ಎಂದು ಸಾಹೇಬ (ಜೆ.ಬಿ.ಸೆಟೆನ್ಕರ್)
ಪತ್ರ ಬರೆದು ತನ್ನ ಮೇಲಿನ ಅಧಿಕಾರಿಗೆ ಕಳಿಸಿದನು. ಆಗ ಬ್ರಿಟೀಷ್ ಸರ್ಕಾರದ ದಂಡು ತಯಾರಾಗಿ ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನಸಿಪಾಯಿಗಳು ಹಲಗಲಿಯ ಬೇಡರನ್ನು ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು . ಬೇಡರನ್ನು ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು ಸಾಯಿಸಿದರು. ಸಿಡಿಲು ಸಿಡಿಯುವ ಹಾಗೆ ಸಿಟ್ಟಿಲೆ ¨ ಭರಪೂರವಾಗಿ ಗುಂಡನ್ನು ¸ಸುರಿಸಿದರು. ಇದರಿಂದ ಹಲಗಲಿಬಂಟರು ಹೋರಾಡಿ ವೀರ ಮರಣವನ್ನಪಿದ . ಸಿಕ್ಕದ್ದನ್ನೆಲ್ಲ ತೆಗೆದುಕೊಂಡು ಊರಿಗೆ ಕೊಳ್ಳಿ ಇಟ್ಟು ಗುರುತು ಉಳಿಯದಂತೆ ಸುಟ್ಟು ಬೂದಿಮಾಡಿ ಹಲಗಲಿಯ ದಂಗೆಯನ್ನು ನಿಯಂತ್ರಿಸಿದರು.
೨. ಹಲಗಲಿ ದಂಗೆಯ ಪರಿಣಾಮವೇನು ?
ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದ
ಹಲಗಲಿಯ ಬೇಡರನ್ನು ಬಗ್ಗು ಬಡಿಯಲು ಬ್ರಿಟೀಷ್ ಸರ್ಕಾರದ ದಂಡು ತಯಾರಾಗಿ ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು
ಹಲಗಲಿಯ ಬೇಡರನ್ನು ಬೆನ್ನು ಬೆನ್ನು ಹತ್ತಿ ತಿರುತಿರತಿರವಿ ಹಾಕಿ ಕೊಂದರು . ಬೇಡರನ್ನು ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ
ಗುಂಡು ಹೊಡೆದು ಸಾಯಿಸಿದರು. ಕೆಲವು ಬೇಡರು ತಪ್ಪಿಸಿಕೊಂಡು ಗುಡ್ಡದ ಕಡೆ ಓಡಿದರು. ಅಗಸಿಗೆ ಬಂದು ಬುದ್ಧಿ ಮಾತನ್ನು ಹೇಳುತ್ತಿದ್ದ
ಹೆಬಲಕ ಸಾಹೇಬನ್ನು ಜಡಗ ಗುಂಡು ಹೊಡೆದು ಕೊಂದು ಹಾಕಿದನು. ಇದರಿಂದ ಸಿಟ್ಟಿಗೆದ್ದ ಕಾರಸಾಹೇಬ ಊರನ್ನು ಲೂಟಿ ಮಾಡಲು
ಆದೇಶಿಸಿದನು . ಬ್ರಿಟೀಷ್ ಸೈನಿಕರು ಸಿಡಿಲು ಸಿಡಿಯುವ ಹಾಗೆ ಸಿಟ್ಟಿಲೆ ¨ಭರಪೂರವಾಗಿ ಗುಂಡನ್ನು ಸುರಿಸಿದನು . ಬಾಲನು ಕಸರತ್ತಿನಿಂದ ಹತ್ತಿಪ್ಪತ್ತು
ಕುದುರೆಗಳನ್ನು ಕಡಿದು ಹಾಕಿದನು . ರಾಮನ ವಿಪರೀತ ಕಡಿತದಿಂದ ರಕ್ತದ ಕಾಲುವೆ ಹರಿಯಿತ . ಹೀಗೆ ಹಲಗಲಿ ಬಂಟರಾದ ಪೂಜೇರಿ
ಹನುಮಾ, ಬ್ಯಾಡರ ಬಾಲ, ಜಡಗ, ರಾಮ, ಭೀಮ ಮೊದಲಾದ ಹೋರಾಡಿ ವೀರ ಮರಣವನ್ನಪ್ಪಿದ . ಹಲಗಲಿಗೆ ಮುತ್ತಿಗೆ ಹಾಕಿ ಬೇಡರನ್ನು
ಬಗ್ಗು ಬಡಿದ ಬ್ರಿಟೀಷ್ ದಂಡು ಕೊಡಲಿ, ಕುಡಗೋಲು, ಕುಡ, ಕಬ್ಬಿಣ, ಮೊಸರು ,ಬೆಣ್ಣಿ, ಹಾಲು, ಉಪ್ಪು ,ಎಣ್ಣೆ ,ಅರಿಸಿಣ, ಜೀರಗಿ , ಅಕ್ಕಿ, ಸಕ್ಕರೆ,
ಬೆಲ್ಲ, ಗಂಗಳ, ತಂಬಿಗೆ, ಮಂಗಳಸೂತ್ರ, ಬೀಸುವಕಲ್ಲು –ಹೀಗೆ ಸಿಕ್ಕಿದ್ದೆಲ್ಲಾ ತೆಗೆದುಕೊಂಡು, ಊರಿಗೆ ಕೊಳ್ಳಿ ಇಟ್ಟು ಸುಟ್ಟು ಬೂದಿ ಮಾಡಿ ಗುರುತು
ಉಳಿಯದಂತೆ ಮಾಡಿ ಹೋಗಿದ್ದರಿಂದ ಹಾಳಾಗಿ ಹೋಯಿತು.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಎಲ್ಲಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ”
ಆಯ್ಕೆ :- ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ
ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಇದು ಕುಂಪಣಿ ಸರ್ಕಾರ ಹೊರಡಿಸಿದ ಆದೇಶದ ವಾಕ್ಯವಾಗಿದೆ. ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ವಿದೇಶದಿ೦ದ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.
ಇದನ್ನು ವಿರೋಧಿಸಿ ಹಲಗರ ಹಳ್ಳಿ ಸುತ್ತಾ ಮುತ್ತಾ ಮೆರೆಯಿತು ಎಂದ ಲಾವಣಿಕಾರ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ:- ಭಾರತೀಯರನ್ನು ನಿಶ್ಯಸ್ತ್ರೀಕರಣಗೊಳಿಸಬೇಕೆಂಬ ಕುಂಪಣಿ ಸರ್ಕಾರದ ದರ್ಪ ಈ ವಾಕ್ಯದಲ್ಲಿ ಸ್ವಾರಸ್ಯ ಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
೨. “ಜೀವ ಸತ್ತು ಹೋಗುವುದು ಗೊತ್ತ ”
ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ
ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಇದು ಹಲಗಲಿ ಬೇಡರು ಹೇಳಿದ ಮಾತಾಗಿದೆ. ಕುಂಪಣಿ ಸರಕಾರ ನಿಶ್ಶಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು
ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿದಾಗ, ಹಲಗಲಿಯ ಪ್ರಮುಖರಾದ ಪೂಜಾರಿ ಹನುಮಾ, ಬ್ಯಾಡರ ಬಾಲ, ಜಡಗ ರಾಮ ಎಂಬ
ನಾಲ್ಕು ಮಂದಿ ಕೂಡಿಕೊಂಡು ನಾವು ನಮ್ಮ ಬಳಿಯಿರುವ ಆಯಧಳನ್ನು ಸತಾಯಿಸಿದರೂ ಕೊಡಬಾರದು . ಆಯುಧಗಳು ಹೋದರೆ ನಮ್ಮ
ಜೀವ ಸತ್ತು ಹೋಗುತ್ತದೆ ಎಂದು ಪಿತೂರಿ ಮಾಡಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ:- ಆಯುಧಗಳು ತಮ್ಮ ಪ್ರಾಣಕ್ಕಿಂತ ಮಿಗಿಲಾದವು , ಅವು ಹೋದರೆ ನಮ್ಮ ಪ್ರಾಣಕ್ಕೆ ಸಂಚಕಾರ ಎಂಬ ಭಾವನೆ ಹಲಗಲಿಯ ಬೇಡರ ಈ
ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡ೦ತೆ ಇದೆ.
೩. “ಹೊಡೆದರೊ ಗುಂಡ ಕರುಣ ಇಲ್ಲದ್ಹಂಗ ”
ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ
ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೆ
ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷ್‌ರ ದಂಡು ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು ಹಲಗಲಿಯ ಬೇಡರನ್ನು ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು . ಬೇಡರನ್ನು ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು
ಸಾಯಿಸಿದರು ಎಂದು ಲಾವಣಿಕಾರ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ:- ಹಲಗಲಿಯ ಬೇಡರ ಮೇಲೆ ಗುಂಡು ಹಾರಿಸಿ ಕೊಲ್ಲುವ ಬ್ರಿಟಿಷ್ ಸೈನಿಕರ ನಿಷ್ಕಕರುಣಾ ಭಾವ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ
ವರ್ಣಿತವಾಗಿದೆ.
೪. “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು ”
ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ
ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ:- ಬ್ರಿಟಿಷ್‌ರ ಸೈನಿಕರು ಹಲಗಲಿಯನ್ನು ಲೂಟಿಮಾಡಿ ಊರಿಗೆ ಬೆಂಕಿ ಇಟ್ಟು ಸುಟ್ಟು
ಬೂದಿ ಮಾಡಿದ್ದರಿಂದ ಹಲಗಲಿಯು ಎಳ್ಳಷ್ಟು
ಗುರುತು ಉಳಿಯದೆ ಕಾಣದೆ ಹಾಳಾಗಿ ಹೋಯಿತು. ಇದನ್ನು ಕುರ್ತುಕೋಟಿಯ ಕಲ್ಮೇಶನ ದಯದಿಂದ ನಾನು ಕಂಡೊಷ್ಟು ವರ್ಣಿಸಿ ಹೇಳಿದೆ
ಎಂದು ಲಾವಣಿಕಾರ ಹಾಡಿದ ಸಂದರವಾಗಿದೆ.
ಸ್ವಾರಸ್ಯ:- ಹಲಗಲಿ ಬೇಡರು ಹೋರಾಡಿ ಕೆಟ್ಟು ಹೋದ ವಿಚಾರವನ್ನು ಕಂಡಷ್ಟು ವರ್ಣಿಸಿದ್ದೇನೆ ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿದೆ.
ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.
೧. ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ ಲಾವಣಿ
(ಕತೆ ಗಾದೆ, ಒಗಟು, ಲಾವಣಿ)
೨. ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ ಬಾಗಲಕೋಟೆ
(ಬಾಗಲಕೋಟೆ, ಕಲಾದಗಿ, ಮುಧೋಳ, ಹೆಬಲಕ)
೩. ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ ನಿಶ್ಶಸ್ತ್ರೀಕರಣ
(ಯುದ್ಧಶಾಸನ, ನಿಶ್ಶಸ್ತ್ರೀಕರಣ, ಕಬುಲಶಾಸನ, ಕುರ್ತಕೋಟಿಶಾಸನ)
೪. ಲಾವಣಿಕಾರ ಅಂಕಿತಗೊಳಿಸಿರುವ ದೈವ ಕಲ್ಮೇಶ
(ಕಲ್ಮೇಶ, ಹನುಮ, ರಾಮ, ಲಕ್ಷ್ಮೀಶ)
೫. ‘ವಿಲಾತಿ’ ಪದದ ಸರಿಯಾದ ರೂಪ ವಿಲಾಯಿತಿ
(ಆಯುಧ, ವಿಹಾರ, ವಿಲಂತಿ, ವಿಲಾಯಿತಿ)
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
ಮುಂಗೈ =ಕೈಯ +ಮುಂದು -ಅಂಶಿಸಮಾಸ
ನಡುರಾತ್ರಿ =ರಾತ್ರಿಯ +ನಡು – ಅ೦ಶಿಸಮಾಸ
ಹನುಮಭೀಮರಾಮ =ಹನುಮನೂ+ಭೀಮನೂ +ರಾಮನೂ -ದ್ವ೦ದ್ವಸಮಾಸ
ಮೋಸಮಾಡು =ಮೋಸರನ್ನು +ಮಾಡು -ಕ್ರಿಯಾಸಮಾಸ
೨. ಕೊಟ್ಟಿರುವ ಗ್ರಾಮ್ಯ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.
ಹೀಂಗ, ಮ್ಯಾಗ, ಕಳುವ್ಯಾರೆ, ಇಲ್ಲದ್ಹಂಗ, ಇಸವಾಸ, ಸಕ್ಕಾರಿ.
➢ಹೀಂಗ | ✓ ಹೀಗೆ |
➢ಮ್ಯಾಗ | ✓ ಮೇಲೆ |
➢ಕಳುವ್ಯಾರೆ | ✓ ಕಳುಹಿಸಿದ್ದಾರೆ |
➢ಇಲ್ಲದ್ಹ೦ಗ | ✓ ಇಲ್ಲದಹಾಗೆ |
➢ಇಸವಾಸ | ✓ ವಿಶ್ವಾಸ |
➢ಸಕ್ಕಾರಿ | ✓ ಸಕ್ಕರೆ |
೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.
ಅ) ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ
ಅಲ೦ಕಾರ: ಉಪಮಾಲಂಕಾರ ( ಧರ್ಮಲುಪ್ತೋ ಪಮಾಲಂಕಾರ )
ಉಪಮೇಯ: ಒಳಗಿನ ಮಂದಿ ಗುಂಡು ಹೊಡೆಯುವುದು
ಉಪಮಾನ: ಮುಂಗಾರಿನ ಸಿಡಿಲು ಸಿಡಿಯುವುದು
ಉಪಮಾ ವಾಚಕ: ಹಾಂಗ
ಸಮಾನ ಧರ್ಮ: ಸ್ಪಷ್ಟವಾಗಿಲ್ಲ (ಸಿಡಿಯುವುದು)
ಸಮನ್ವಯ: ಇಲ್ಲಿ ಉಪಮೇಯವಾದ ಒಳಗಿನ ಮಂದಿ ಗುಂಡು ಹೊಡೆಯುವುದನ್ನು ಉಪಮಾನವಾದ
ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಪರಸ್ಪರ ಹೋಲಿಸಿ ವರ್ಣಿಸಲಾಗಿದೆ.
ಲಕ್ಷಣ: ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು ಹೋಲಿಸಿ ವರ್ಣಿಸಿದರೆ ಅದು ‘
ಉಪಮಾಲಂಕಾರ
ಆ) ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ
ಅಲಂಕಾರ: ಉಪಮಾಲಂಕಾರ ( ಧರ್ಮಲುಪ್ತೋ ಪಮಾಲಂಕಾರ )
ಉಪಮೇಯ: ಗುಂಡು ಸುರಿಯುವುದು
ಉಪಮಾನ: ಸಿಡಿಲು ಸಿಡಿಯುವುದು
ಉಪಮಾ ವಾಚಕ: ಹಾಂಗ
ಸಮಾನ ಧರ್ಮ: ಸ್ಪಷ್ಟವಾಗಿಲ್ಲ (ಸುರಿಯುವುದು, ತೀವ್ರತೆ)
ಸಮನ್ವಯ:ಇಲ್ಲಿ ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು
ಸಿಡಿಯುವುದಕ್ಕೆ ಪರಸ್ಪರ ಹೋಲಿಸಿವರ್ಣಿಸಲಾಗಿದೆ.
ಲಕ್ಷಣ: ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು ಹೋಲಿಸಿ ವರ್ಣಿಸಿದರೆ ಅದು ‘
ಉಪಮಾಲಂಕಾರ
೪. ಸ್ವಂತ ವಾಕ್ಯದಲ್ಲಿ ಬಳಸಿ.
ಒಳಗಿಂದೊಳಗೆ, ಸುದ್ದಿ, ಮಂದಿ, ಕಸರತ್ತು.
ಒಳಗಿಂದೊಳಗೆ | : ಹಲಗಲಿಯ ಬೇಡರೆಲ್ಲ ಒಂದೆಡೆ ಸೇರಿಕೊಂಡು ಒಳಗಿಂದೊಳಗೆ ಮಾತು ಕೊಟ್ಟರು . |
ಸುದ್ದಿ | : ಕಾರಕೂನನ ಕಪಾಳ ಹೊಡೆದು, ಸಿಪಾಯಿಯನ್ನು ಸಾಯಿಸಿ ನೆಲಕ್ಕೆ ಬೀಳುವಂತೆ ಮಾಡಿದ ದುಃಖದ ಸುದ್ದಿ ಸಾಹೇಬನಿಗೆ ಮುಟ್ಟಿತು. |
ಮಂದಿ | :ಒಳಗಿನ ಮಂದಿ ಮುಂಗಾರಿ ಸಿಡಿಲ ಸಿಡಿದ್ಹಾಂಗ ಗುಂಡು ಹೊಡಿದರು. |
ಕಸರತ್ತು | : ಬಾಲನು ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆಗಳನ್ನು ಕಡಿದು ಹಾಕಿದರು. |
೫. ದೇಶ್ಯ-ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.
ಹೊತ್ತು, ಹತಾರ, ಮಸಲತ್ತ, ಬಂಟರು, ಹುಕುಮ, ಮುಂಗೈ, ಸಾಹೇಬ, ಕಾರಕೂನ, ಸಿಪಾಯಿ, ಮುಂಗಾರು, ಕಬುಲ.
ದೇಶಿಯ ಪದಗಳು | ಹೊತ್ತು ,ಬಂಟರು , ಮುಂಗೈ , ಮುಂಗಾರು. |
ಅನ್ಯದೇಶಿಯ ಪದಗಳು | ಹತಾರ , ಮಸಲತ್ತ , ಹುಕುಮ , ಸಾಹೇಬ , ಕಾರಕೂನ , ಸಿಪಾಯಿ , ಕಬುಲ. |
ಚಟುವಟಿಕೆ
೧. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
ಸಿಕ್ಕದ್ದು ತಗೊಂಡು ಸರದ ನಿಂತರೊ ಊರಿಗೆ ಕೊಳ್ಳಿ ಕೊಟ್ಟಾ ಬೂದಿ ಮಾಡ್ಯಾರೊ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟೂ ಕಾಣದೆ ಹೋಯಿತೊ ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು ಕುರ್ತಕೋಟಿ ಕಲ್ಮೇಶನ ದಯದಿಂದ ಹಾಡಿದೆನಣ್ಣಾ ಜನಕಾ
|