Chennabhairadevi
9th Class Chennabhairadevi Notesin Kannada 2022
ಕೃತಿಕಾರರ ಪರಿಚಯ
ಡಾ ಗಜಾನನ ಶರ್ಮ ( ೧೯೫೪ ) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು . ನಟ , ನಿರ್ದೇಶಕ ಮತ್ತು ನಾಟಕಕಾರರಾದ ಗಜಾನನ ಶರ್ಮರು , ಗೊಂಬೆ ರಾವಣ , ಜುಗ್ಗಪ್ಪಯ್ಯನ ತಿಪ್ಪರಲಾಗ ಮುಂತಾದ ಮಕ್ಕಳ ನಾಟಕಗಳನ್ನೂ , ಬೆಳ್ಳಿ ಬೆಳಕಿನ ಹಿಂದೆ , ದ್ವಂದ್ವ ದ್ವಾಪರ , ಕನ್ನಂಬಾಡಿಯ ಕಟ್ಟದಿದ್ದರೆ ಮುಂತಾದ ದೊಡ್ಡವರ ನಾಟಕಗಳನ್ನೂ ರಚಿಸಿದ್ದಾರೆ . ಗರ್ತಿಕೆರೆ ರಾಘಣ್ಣನವರ ಜೀವನ ಕಥನ , “ ಕಾಡು ಕಣಿವೆಯ ಹಾಡು ಹಕ್ಕಿ- ಗರ್ತಿಕೆರೆ ರಾಘಣ್ಣ ಕೃತಿಗೆ ಇವರು ಸಾಹಿತ್ಯ ಅಕಾಡಮಿ ಬಹುಮಾನ ಪಡೆದಿದ್ದಾರೆ . ಪುನರ್ವಸು ಮತ್ತು ರಾಣಿ ಚೆನ್ನಭೈರಾದೇವಿ ಇವರ ಪ್ರಮುಖ ಕಾದಂಬರಿಗಳು . ಇವರು ತಮ್ಮ ರಂಗಭೂಮಿಯ ಸೇವೆಗಾಗಿ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದಿದ್ದಾರೆ .
ಪದಗಳ ಅರ್ಥ
ಸುಭಿಕ್ಷ – ದವಸಧಾನ್ಯಗಳ ಸಮೃದ್ಧಿ
ಉದ್ಧಟತನ – ಅಹಂಕಾರ
ಹೆಂಬೇಡಿ – ಹೆದರುಪುಕ್ಕಲ
ಗಡವು – ವಾಯಿದೆ , ಅವಧಿ , ಸಮಯ
ಹುಸಿ – ಸುಳ್ಳು
ಅಟಾಟೋಪ – ಥಳುಲುಬಳುಕು, ಆಡಂಬರ
ಕೆಚ್ಚು – ಧೈರ್ಯ
ಆಡುಂಬೋಲ – ಆಟದ ಮೈದಾನ
9ನೇ ತರಗತಿ ಚೆನ್ನಭೈರಾದೇವಿ ಕನ್ನಡ ನೋಟ್ಸ್ 2022
I. ಒಂದು ವಾಕ್ಯದಲ್ಲಿ ಉತ್ತರಿಸಿ.
1. ಚೆನ್ನಭೈರಾದೇವಿ ಆಡಳಿತವಿದ್ದ ಪ್ರಾಂತ್ಯಗಳು ಯಾವುವು?
ಚೆನ್ನಭೈರಾದೇವಿ ಆಡಳಿತವಿದ್ದ ಪ್ರಾಂತ್ಯಗಳು ಗೇರುಸೊಪ್ಪೆ ಮತ್ತು ಹಾಡುವಳ್ಳಿ.
2. ಚೆನ್ನಭೈರಾದೇವಿಗೆ ಉದ್ಧಟತನದ ಪತ್ರ ಬರೆದವರು ಯಾರು?
ಚೆನ್ನಭೈರಾದೇವಿಗೆ ಉದ್ಧಟತನದ ಪತ್ರ ಬರೆದವರು ಗೋವೆಯ ಗವರ್ನರ್ ಲೂಯಿಸ್ ಅಟಾಯಿಡೆ.
3. ಪೋರ್ಚುಗೀಸರು ಚೆನ್ನಭೈರಾದೇವಿಗೆ ನೀಡಿದ್ದ ಬಿರುದು ಏನು?
ಪೋರ್ಚುಗೀಸರು ಚೆನ್ನಭೈರಾದೇವಿಗೆ ” ಕರಿಮೆಣಸಿನ ರಾಣಿ ” ಎಂಬ ಬಿರುದು ನೀಡಿದ್ದರು.
4. ಪೋರ್ಚುಗೀಸರು ಹಡಗಿನ ಮೂಲಕ ಎಲ್ಲಿಗೆ ದಾಳಿ ಮಾಡಲು ಸಿದ್ದರಾಗಿದ್ದರು?
ಪೋರ್ಚುಗೀಸರು ಹಡಗಿನ ಮೂಲಕ ಹೊನ್ನಾಔರದ ಮೆಲೆ ದಾಳಿ ಮಾಡಲು ಸಿದ್ದರಾಗಿದ್ದರು.
5. ಚೆನ್ನಭೈರಾದೇವಿಯ ರಾಯಭಾರಿಯ ಹೆಸರೇನು?
ಚೆನ್ನಭೈರಾದೇವಿಯ ರಾಯಭಾರಿಯ ಹೆಸರು ಕಂಠಪ್ಪ ನಾಯಕ.
6. ಚೆನ್ನಭೈರಾದೇವಿಯು ಕಾಡಿನ ಮಧ್ಯೆ ಕಟ್ಟಿದ ಕೋಟೆಯ ಹೆಸರೇನು?
ಚೆನ್ನಭೈರಾದೇವಿಯು ಕಾಡಿನ ಮಧ್ಯೆ ಕಟ್ಟಿದ ಕೋಟೆಯ ಹೆಸರು “ಕಾನೂರು ಕೋಟೆ”.
II. ಎರಡು /ಮೂರು ವಾಕ್ಯಗಳಲ್ಲಿ ಉತ್ತರಿಸಿ.
1.ಸಮುದ್ರಲ್ಲಿ ಪೋರ್ಚುಗೀಸರನ್ನು ಗೆಲ್ಲುವದು ಯಾಕೆ ಕಷ್ಟಸಾಧ್ಯ?
ಪೋರ್ಚುಗೀಸರಲ್ಲಿ ಸುಮಾರು ನೂರ ಮೂವತ್ತು ಹಡಗುಗಳಿವೆ. ವಿಶೇಷ ತರಭೇತಿ ಪಡೆದ ಸಾವಿರ ನಾವಿಕ ಸೈನ್ಯವನ್ನು ಪೋರ್ಚುಗಲ್ಲಿನಿಂದ ತರಸಿದ್ದಾರೆ. ಹಾಗಾಗಿ ಪೋರ್ಚುಗೀಸರನ್ನು ಸಮುದ್ರಯುದ್ದದಲ್ಲಿ ಗೆಲ್ಲುವದು ಕಷ್ಟಸಾಧ್ಯ.
2. ಚೆನ್ನಭೈರಾದೇವಿಗೆ ಬದ್ಧಿ ಕಲಿಸಬೇಕೆಂದು ಪೋರ್ಚುಗೀಸರು ಹೊನ್ನಾವರವನ್ನು ಏನು ಮಾಡಲು ಹೊರಟಿದ್ದರು?
ಚೆನ್ನಭೈರಾದೇವಿಗೆ ಬದ್ಧಿ ಕಲಿಸಬೇಕೆಂದು ಪೋರ್ಚುಗೀಸರು ಹೊನ್ನಾವರವನ್ನು ಏನನ್ನೂ ಬಿಟ್ಟು ಬಿಡದಂತೆ ಸುಟ್ಟು ಬಿಡಲು ನಿರ್ಧರಿಸಿದ್ದಾರೆ. ಅಲ್ಲಿರುವ ಮನೆ, ಕೊಟ್ಟಿಗೆ, ಅಂಗಡಿ , ದೇವಾಲಯ, ಮಸೀದಿ, ಬಸದಿಗಳನ್ನು ಸುಟ್ಟು ಬಿಡಲು ಹೊರಟಿದ್ದಾರೆ.
3. ಚೆನ್ನಭೈರಾದೇವಿ ಕಾಡಿನ ಮಧ್ಯ ಏಕೆ ಕೋಟೆಯನ್ನು ಕಟ್ಟಿಕೊಂಡಿದ್ದಾಳೆ?
ಚೆನ್ನಭೈರಾದೇವಿ ಕಾಡಿನ ಮಧ್ಯ ಏಕೆ ಕೋಟೆ ಕಟ್ಟಲು ಪ್ರಮುಖ ಕಾರಣವೆಂದರೆ ಶತ್ರುಗಳು ಅಲ್ಲಿ ಅಷ್ಟೊಂದು ಸುಲಭವಾಗಿ ತಲುಪಲಾರರು. ಆ ಕೋಟೆಗೆ ಬಂದು ಮುಟ್ಟಬೇಕಾದರೆ ಹಲವು ನದಿಗಳನ್ನು ದಾಟಿ ಬರಬೇಕಿತ್ತು. ಕಾಡು ಮನುಷ್ಯರಿಂದ ಮತ್ತು ವನ್ಯಮೃಗಗಳಿಂದ ಪಾರಾಗಿ ಬರುವುದೂ ಸುಲಭವಾಗಿರಲಿಲ್ಲ.
4. ಪೋರ್ಚುಗೀಸರು ಯುದ್ದಕ್ಕೆ ಸಿದ್ದವಾಗಿದ್ದ ಎರಡು ಉದ್ದೇಶಗಳು ಯಾವುವು?
ಪೋರ್ಚುಗೀಸರು ಯುದ್ದಕ್ಕೆ ಸಿದ್ದರಾಗುವ ಉದ್ದೇಶವೆಂದರೆ, ಹೊನ್ನಾವರ ಮತ್ತು ಭಟ್ಕಳ ಬಂದರುಗಳಲ್ಲಿ ಪೋರ್ಚುಗೀಸರ ಒಪ್ಪಿಗೆ ಇಲ್ಲದೆ ಮುಸಲ್ಮಾನರ ಹಡಗುಗಳಿಗೆ ಕರಿಮೆಣಸು, ದಾಲ್ಚಿನಿ, ಕೆಂಪಕ್ಕಿ ಮತ್ತು ಶ್ರೀಗಂಧ ತುಂಬಿಸಿ ಸಮುದ್ರ ವ್ಯಾಪಾರ ಅವರಿಗೆ ಅಕ್ರಮವಾಗಿ ಕಂಡಿತು. ಪೋರ್ಚುಗೀಸರ ರಾಜದ್ರೋಹಿ ರೊಜಾರಿಯೋಗೆ ಆಶ್ರಯ ನೀಡಿದ್ದು.
III. ಏಳೆಂಟು ವಾಕ್ಯಗಳಲ್ಲಿ ಉತ್ತರಿಸಿ.
1. ಪೋರ್ಚುಗೀಸ್ ಗವರ್ನರ್ ಚೆನ್ನಭೈರಾದೇವಿಗೆ ಬರೆದ ಪತ್ರವನ್ನು ವಿವರಿಸಿ.
ಪೋರ್ಚುಗೀಸ್ ಗವರ್ನರ್ ಚೆನ್ನಭೈರಾದೇವಿಗೆ ಬರೆದ ಪತ್ರದಲ್ಲಿ ಹೊನ್ನಾವರ ಮತ್ತು ಭಟ್ಕಳ ಬಂದರುಗಳಲ್ಲಿ ಅವರ ಒಪ್ಪಿಗೆಯನ್ನು ಪೆರಯದ ಮುಸಲ್ಮಾನರ ಹಡಗುಗಳಿಗೆ ಕರಿಮೆಣಸು, ದಾಲ್ಚಿನ್ನಿ, ಕೆಂಪಕ್ಕಿ ಮತ್ತು ಶ್ರೀಗಂಧವನ್ನು ತುಂಬಿಸಿ, ಸಮುದ್ರ ವ್ಯಾಪಾರಕ್ಕೆ ಕಳುಹಿಸುತ್ತಿರುವದು ಪೋರ್ಚುಗೀಸರ ಆಶಯಕ್ಕೆ ವಿರುದ್ದ ಒಪ್ಪಿಗೆ ಪಡೆಯದ ಹಡಗುಗಳಿಗೆ ನಿಮ್ಮ ಬಂದರುಗಳಿಂದ ಹೊರಗಟ್ಟಬೇಕು. ಇಲ್ಲವೇ ವಶಪಡಿಸಿಕೊಳ್ಳಬೇಕು. ಇಲ್ಲದಿದದ್ದರೆ ನಿಮ್ಮ ಮೇಲೆ ನಾವು ಕ್ರಮ ಕೈಗೊಳ್ಳುವದು ಅನಿವಾರ್ಯವಾಗುತ್ತದೆ. ನೀವು ಪೋರ್ಚಗೀಸ ರಾಜದ್ರೋಹಿ ರೊಜಾರಿಯೋಗೆ ಆಶ್ರಯ ನೀಡಿದ್ದೀರಿ ಆತನನ್ನು ಕೂಡಲೇ ಒಪ್ಪಿಸಬೇಕು. ಮೇಲಾಗಿ ತಾವು ಹಲವು ವರ್ಷಗಳಿಂದ ನಮಗೆ ಕಪ್ಪನ್ನು ಕೊಟ್ಟಿಲ್ಲ. ಇನ್ನೊಂದು ವಾರದೊಳಗೆ ಕಪ್ಪನ್ನೂ, ರೊಜಾರಿಯೋನನ್ನು ನಮಗೆ ಒಪ್ಪಿಸದಿದ್ದರೆ ನಿಮ್ಮನ್ನು ದಂಡಿಸ ಬೇಕಾಗುತ್ತದೆ. ನಮ್ಮ ಚಕ್ರವರ್ತಿ ನೀಡಿದ “ಕಾಳುಮೆಣಸಿನ ರಾಣಿ” ಎಂಬ ಬಿರುದನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ. ಎಂದು ಎಚ್ಚರಿಕೆಯ ಪತ್ರ ಬರೆಯಲಾಗಿತ್ತು.
2. ಕಾನೂರುಕೋಟೆಯ ದಾರಿಯಲ್ಲಿ ಚೆನ್ನಭೈರಾದೇವಿಯ ಸೈನಿಕರು ಪೋರ್ಚುಗೀಸರ ಮೇಲೆ ದಾಳಿ ಮಾಡಿದ ರೀತಿಯನ್ನು ವಿವರಿಸಿ.
ಪೋರ್ಚುಗೀಸ್ ಸೈನ್ಯ ಕಾನೂರು ಕೋಟೆಯ ಮೇಲೆ ದಾಳಿಮಾಡಲು ಹೊರಟಾಗ ಚೆನ್ನಭೈರಾದೇವಿಯ ಸೈನಿಕರು ಅವರ ಮೇಲೆ ಹಲವು ರೀತಿಯಿಂದ ದಾಳಿಮಾಡಿರುವುದಾಗಿ ಕೆಲವು ಯೋಧರು ಓಡಿಬಂದು ವಿಷಯ ತಿಳಿಸಿದರು. ರಾಕ್ಷಸರ ತರ ಕೋಡು ಇರುವ ಕಾಡು ಜನರು ದೂರದಿಂದ ಪೋರ್ಚುಗೀಸರ ಸೈನ್ಯದ ಮೇಲೆ ಕೋಲು ಕಟ್ಟಿಗೆ ಎಸೆದರು. ಬಳ್ಳಿಯ ಮೇಲೆ ಸುಯ್ಯನೆ ಬಂದು ಅವರ ಕೋವಿಗಳನ್ನು ಹೊತ್ತೋಯ್ದರು. ಅವರನ್ನು ಬೀಳಿಸಿದರು. ತಾಕಿದರೆ ಮೈ ತುರಿಸುವ ಗಿಡವನ್ನು ಅವರ ಮೇಲೆ ಎಸೆದರು. ಬೊಬ್ಬೆ ಬರಿಸುವ ರಸ ಸುರಿದರು. ಅವರ ಮೇಲೆ ಹಾವು ಚೇಳು ಎಸೆದು ದಕ್ಕಾಪಾಲಾಗು ಓಡಿ ಹೋಗುವಂತೆ ಮಾಡಿದರು.
ದಟ್ಟ ಅರಣ್ಯ ದಾಟಿಕೊಂಡು ಹೋಗಬೇಕಾದರೆ ವನ್ಯ ಪ್ರಾಣಿಗಳು ಪೋರ್ಚುಗೀಸರ ಸೈನಿಕರನ್ನು ಎಳೆದುಕೊಂಡು ಹೋದವು. ದೊಡ್ಡ ಹೆಬ್ಬಾವು ಇಬ್ಬರನ್ನು ಸುತ್ತಿಕೊಂಡಿತು. ಕ್ಯಾಪ್ಟನ್ ಪೌಲೋರ್ ಮುಖಕ್ಕೇ ಒಬ್ಬ ಅದೇನೋ ರಸ ಎರಚಿದ. ಮುಖವೆಲ್ಲಾ ಸುಟ್ಟು ಆತ ಒದ್ದಾಡಿದ. ಚೆನ್ನಭೈರಾದೇವಿಯ ಸೈನಿಕರು ಮರವನ್ನು ಮೊದಲೇ ಕಡಿದು ಹಗ್ಗ ಹಿಡಿದು ನಿಂತಿರುತ್ತಾರೆ. ವೈರಿ ಸೈನಿಕರು ಬರುತ್ತಿದ್ದಂತೆಯೆ ಅವರ ಮೇಲೆ ಬೀಳಿಸುತ್ತಾರೆ. ಹಲವು ಕಡೆ ಗುಂಡಿ ತೋಡಿ ಕಲ್ಲು ಹುಲ್ಲು ಮುಚ್ಚಿರುತ್ತಾರೆ. ವೈರಿಗಳು ಅಲ್ಲಿಗೆ ಬರುವಂತೆಯೆ ಆ ಖೆಡ್ಡಕ್ಕೆ ಬೀಳುವರು. ಅವರ ಕುಡಿಯುವ ನೀರಿನ ಬಿಂದಿಗೆ ಉರುಳಿಸಿ ಕುಡಿಯಲು ನೀರಿಲ್ಲದಂತೆ ಮಾಡಿದ್ದಾರೆ. ಅಟಾಯಿಡೆ ಇರುವ ಸ್ಥಳದಲ್ಲಿ ಬೆಟ್ಟದಿಂದ ಕಲ್ಲು ಉರುಳಿಸಿ ಅವನನ್ನು ಅಪಾಯಕ್ಕೆ ನೂಕುತ್ತಾರೆ. ಹೀಗೆ ಪರಿಪರಿಯಾದ ರೀತಿಗಳಿಂದ ಪೋರ್ಚುಗೀಸರ ಮೇಲೆ ಚೆನ್ನಭೈರಾದೇವಿಯ ಸೈನಿಕರು ಕಾನೂರು ಕೋಟೆಯ ದಾರಿಯಲ್ಲಿ ದಾಳಿಮಾಡಿದರು.
3. ಮರದ ಹಿಂದಿನ ಧ್ವನಿಯು ಲೂಯಿಸ್ ಅಟಾಯಿಡೆಯನ್ನು ಹೇಗೆ ಎಚ್ಚರಿಸಿತು?
ಶತಮೂರ್ಖ ಲೂಯಿಸ್ ಅಟಾಯಿಸ್ , ಯೋಚಿಸು…. ಯಾರು ಮೋಸಗಾರರು? ಯಾರು ವಂಚಕರು? ಇದು ನಮ್ಮ ಮಣ್ಣು , ನಮ್ಮ ಕಾಡು , ನಮ್ಮ ನೆಲ, ಇಲ್ಲಿಗೆ ಹೊಂಚುಹಾಕಿ ಬಂದ ವಂಚಕರು ನೀವು ಏನು, ನಮ್ಮ ರಾಣಿಯನ್ನು ಬಂಧಿಸಿಕೊಂಡ್ಯೊವಿಯಾ? ಬಾ… ಮೊದಲು ಕಾನೂರು ಕೋಟೆಗೆ ಹತ್ತಿರ ಬಾ ನಿನ್ನ ಆತಿಥ್ಯಕ್ಕಾಗಿ ಸಿದ್ದಳಾಗಿ ಕಾಯುತ್ತಿದ್ದಾಳೆ ನಮ್ಮ ರಾಣಿ. ಮಿಸ್ಟರ್ ಅಟಾಯಿಡೆ, ಖಂಡಾಂತರಗಳನ್ನು ದಾಟಿಬಂದ ನಿನ್ನ ಕೆಚ್ಚು ಎಲ್ಲಿ ಹೋಯಿತು? ನಿನ್ನೆ ರಾಯಭಾರಿ ಕಂಠಪ್ಪನನ್ನು ಕೊಲ್ಲಲು ಹೊರಟ ನಿನ್ನ ಬಂದೂಕು ಈಗೇಕೆ ಸುಮ್ಮನಾಯಿತು? ಪೋರ್ಚುಗೀಸರೆಂದು ಆಳಲು ಹುಟ್ಟಿದವರು ಎನ್ನುತ್ತಿದ್ದ ನಿನ್ನ ಆಟಾಟೋಪ ಈಗೆಲ್ಲಿ ಹೋಯಿತು? ಕಡಲು ನಿನ್ನ ಆಟದ ಮೈದಾನವಾದರೆ ಕಾಡು ನಮಗೆ ಆಡುಂಬೋಲಾ.
ನಿನ್ನ ಸುತ್ತ ನಾವೆಷ್ಟು ಮಂದಿ ಇದ್ದೇವೆಂದು ಗೊತ್ತೇನು? ಮರದ ಮೇಲೆ ನೋಡು. ನಿನ್ನ ಬೆನ್ನಹಿಂದೆ ನೋಡು, ಎದುರು ನೋಡು, ಮುಂದೆ ನೋಡು ಈಗಾಗಲೇ ನಿಮ್ಮ ಇನ್ನೂರಕ್ಕೂ ಹೆಚ್ಚು ಸೈನಿಕರು ನಮ್ಮ ವಶದಲ್ಲಿದ್ದಾರೆ. ಆದರೆ ಒಬ್ಬರೂ ಸತ್ತಿಲ್ಲ. ನಾವು ನಿಮ್ಮಂತೆ ಕೊಲೆಗಡುಕರಲ್ಲ ಶಾಂತಿ ಪ್ರಿಯರು. ಅಹಿಂಸೆ ನಮ್ಮ ಧರ್ಮ, ಈಗಲೂ ರಾಣಿಗೆ ಶರಣಾದೆವೆಂದು ಹೇಳಿದರೇ ನಿಮಗೆ ಅನ್ನ ನೀರು ಕೊಟ್ಟು ಗೌರವದಿಂದ ಹಿಂದೆ ಕಳಿಸುತೇವೆ. ಅದರೆ ಒಂದು ಕರಾರು ಇನ್ನು ಮುಂದೆ ಹೊನ್ನಾವರದ ದಿಕ್ಕಿಗೆ ತಲೆಯಿಟ್ಟು ಮಲಗಬಾರದು ಎಂದು ಮರದ ಹಿಂದಿನ ಧ್ವನಿ ಲೂಯಿಸ್ ಅಟಾಯಿಡೆಯನ್ನು ಎಚ್ಚರಿಸಿತು.
IV. ಈ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ
1.ನಮ್ಮ ನೆಲದ ನಾವಿಕ ರೊಜಾರಿಯೋನನ್ನು ಅವರಿಗೊಪ್ಪಿಸಲು ನಾವೇನು ಹೇಡಿಗಳಲ್ಲ.
ಆಯ್ಕೆ:- ಈ ಮೇಲಿನ ಮಾತನ್ನು ಡಾ. ಗಜಾನನ ಶರ್ಮ ಅವರು ಬರೆದ ಚೆನ್ನಭೈರಾದೇವಿ ಎಂಬ ಚಾರಿತ್ರಿಕ ನಾಟಕದಿಂದ ಅಯ್ದುಕೊಳ್ಳಲಾಗಿದೆ. ಈ ವಾಕ್ಯವನ್ನು ಚೆನ್ನಭೈರಾದೇವಿ ಸಭಿಕರನ್ನು ಉದ್ದೇಶಿಸಿ ನುಡಿದಳು.
ಸಂದರ್ಭ:- ಪೋರ್ಚುಗೀಸರ ಗವರ್ನರ್ ಲೂಯಿಸ್ ಅಟ್ಟಾಯಿಡೆ ಮಹಾರಾಣಿ ಚೆನ್ನಭೈರಾದೇವಿಗೆ ಪತ್ರ ಬರೆದು ನಮ್ಮ ಆಶ್ರಯಕ್ಕೆ ತಾವು ಯಾವುದೇ ಅಪ್ಪಣೆಯಿಲ್ಲದೇ ವ್ಯವಹಾರ ಮಾಡುತ್ತ ಮುಸಲ್ಮಾನ ಹಡಗುಗಳಿಗೆ ಸರಕು ತುಂಬುತ್ತಿರುವಿರಿ. ಹೀಗಿರುವಾಗ ತಮ್ಮ ಮೇಲೆ ಕ್ರಮ ಕೈಗೊಳ್ಳುವುದು ಅನಿರ್ವಾಯವಾಗುತ್ತದೆ. ಕಳೆದ ಹಲವು ವರ್ಷಗಳಿಂದ ಕಪ್ಪಾಕೂಡಾ ಕೊಟ್ಟಿಲ್ಲ . ಅಲ್ಲದೇ ಪೋರ್ಚುಗೀಸ್ ರಾಜದ್ರೋಹಿ ರೊಜಾರಿಯೋನನ್ನು ತಂದೊಪ್ಪಿಸಬೇಕಾಗುತ್ತದೆ. ಇಲ್ಲವಾದರೆ ನಿಮ್ಮನ್ನು ದಂಡಿಸಬೇಕಾಗುತ್ತದೆ. ಎಂಬ ಪತ್ರದ ಒಕ್ಕಣಿಕೆ ಸತ್ರಾಜಿತ ಓದುತ್ತಿದ್ದಂತೆಯೇ ರಾಣಿ ಚೆನ್ನಭೈರಾದೇವಿ ಈ ಮೇಲಿನ ಮಾತನ್ನು ನುಡಿಯುವಳು.
ಸ್ವಾರಸ್ಯ:- ನಮ್ಮ ನಾಡಿನ ನಾವಿಕನನ್ನು ಪೋರ್ಚುಗೀಸರಿಗೆ ಒಪ್ಪಿಸುವಷ್ಟು ಹೇಡಿಗಳು ತಾವು ಅಲ್ಲ. ಅವರ ಅಜ್ಞೆಯನ್ನು ಉಲ್ಲಂಘಿಸುವ ಒಳಾರ್ಧ ಇಲ್ಲಿರುವ ಸ್ವಾರಸ್ಯವಾಗಿದೆ.
2. ಈ ಸಲ ಸಮುದ್ರದಲ್ಲಿ ಅವರನ್ನು ಗೆಲ್ಲುವದು ಕಷ್ಟಸಾಧ್ಯ
ಆಯ್ಕೆ:- ಈ ಮೇಲಿನ ಮಾತನ್ನು ಡಾ. ಗಜಾನನ ಶರ್ಮ ಅವರು ಬರೆದ ಚೆನ್ನಭೈರಾದೇವಿ ಎಂಬ ಐತಿಹಾಸಿಕ ನಾಟಕದಿಂದ ಅಯ್ದುಕೊಳ್ಳಲಾಗಿದೆ. ಈ ಮಾತನ್ನು ಶಬಲೆ ಸಭೆಯಲ್ಲಿರುವ ರಾಣಿ ಚೆನ್ನಭೈರಾದೇವಿಗೆ ನುಡಿದಳು.
ಸಂದರ್ಭ:- ಚೆನ್ನಬೈರಾದೇವಿಯ ಗೂಢಾಚಾರಿಣಿ ಶಬಲೆ ಪೋರ್ಚುಗೀಸರ ಪ್ರಬಲ ನೌಕಾಪಡೆಯ ಸಜ್ಜಾದ ರೀತಿಯನ್ನು ವಿವರಿಸುತ್ತಾ ಗೋವೆಯ ಗವರ್ನರ್ ಲೂಯಿಸ್ ಅಟಾಯಿಡೆಯ ದಂಡು ಗೋವೆಯಿಂದ ಇನ್ನೆರಡು ದಿನಗಳಲ್ಲಿ ವಿಶೇಷ ತರಭೇತಿ ಪಡೆದ ನಾವಿಕ ಸೈನ್ಯ ಪೋರ್ಚುಗಲ್ಲಿನಿಂದ ಕರೆಸಿದ್ದಾರೆ. ಎಂದು ಹೇಳುತ್ತಾ ಶಬಲೆ ಮೇಲಿನ ಮಾತನ್ನು ನುಡಿಯುವಳು.
ಸ್ವಾರಸ್ಯ : ನೌಕಾಯುದ್ದ ತಂತ್ರ ನಿಪುಣರು ಅಪಾರ ಸೇನಾಬಲ ಹೊಂದಿದ ಪೋರ್ಚುಗೀಸರನ್ನು ಸಮುದ್ರದಲ್ಲಿ ಸೋಲಿಸುವದು ಅಸಾಧ್ಯವೇನಲ್ಲ ಆದರೆ ಕಷ್ಟದಾಯಕವಾದದ್ದು ಎಂಬುದು ಇಲ್ಲಿಯ ಸ್ವಾರಸ್ಯ.
3. ಅದಷ್ಟು ಬೇಗ ಹೊನ್ನಾವರ ಮೇಲೆ ದಾಳಿ ಮಾಡಬೇಕು.
ಆಯ್ಕೆ:- ಕೊಟ್ಟಿರುವ ಈ ವಾಕ್ಯವನ್ನು ಡಾ.ಗಜಾನನ ಶರ್ಮ ಅವರು ಬರೆದಿರುವ ಚೆನ್ನಭೈರಾದೇವಿ ಎಂಬ ಐತಿಹಾಸಿಕ ನಾಟಕದಿಂದ ಆಯ್ದುಕೊಳ್ಳಲಾಗಿದೆ. ಪ್ರಸ್ತುತ ವಾಕ್ಯವನ್ನು ಪೋರ್ಚುಗೀಸರ ಗವರ್ನರ್ ಲೂಯಿಸ್ ಅಟಾಯಿಡೆ ನುಡಿಯುವನು.
ಸಂದರ್ಭ:- ಚೆನ್ನಭೈರಾದೇವಿಯು ಕಿಂಚಿತ್ತೂ ಹೆದರದೆ ಲೂಯಿಸ್ ಅಟಾಯಿಡೆ ಬರೆದ ಪತ್ರಕ್ಕೆ ಖಂಡಾತುಂಡಾವಾಗಿ ಉತ್ತರಿಸಿ ಕಪ್ಪಾ ಕೊಡಲು ಇದು ನಿಮ್ಮ ಅಪ್ಪನ ನೆಲವಲ್ಲ ಮುಸಲ್ಮಾನರೊಡನೆ ವ್ಯಾಪಾರ ಮಾಡಲು ನಿಮ್ಮ ಒಪ್ಪಿಗೆಯ ಅಗತ್ಯವಿಲ್ಲ. ನಿಮ್ಮ ಹುಸಿ ಬೆದರಿಕೆಗೆ ನಾವು ಅಂಜುವುದಿಲ್ಲ. ಎಂಬ ಪತ್ರದಲ್ಲಿರುವ ಸಂಗತಿ ಡಿಸಿಲ್ವ ಓದುತ್ತಿದ್ದಂತೆಯೇ ಲೂಯಿಸ್ ಅಟಾಯಿಡೆ ಈ ಮೇಲಿನ ಮಾತನ್ನು ನುಡಿಯುವನು.
ಸ್ವಾರಸ್ಯ : ಚೆನ್ನಭೈರಾದೇವಿಯ ಶೌರ್ಯಭರಿತ ಪ್ರತ್ಯತ್ತರ ಕೇಳುತ್ತಿದ್ದಂತೆಯೇ ಇವನ ಮನಸ್ಸಿನಲ್ಲಿ ಮೊದಲು ಹೊಳೆದದ್ದೇ ಈ ಮಾತು ಆದಷ್ಟು ಬೇಗ ಚೆನ್ನಭೈರಾದೇವಿ ಆಳುತ್ತಿದ್ದ ಹೊನ್ನಾವರದ ಮೇಲೆ ದಾಳಿ ಮಾಡಬೇಕೆಂಬುದು.
4. ಮಹಾರಾಣಿ ನಮ್ಮ ಯೋಧರು ಶತ್ರುಗಳಿಗೆ ಬೆನ್ನು ತೋರಬೇಕೆ?
ಆಯ್ಕೆ:- ಈ ಮೇಲಿನ ಮಾತನ್ನು ಡಾ. ಗಜಾನನ ಶರ್ಮ ಅವರು ಬರೆದ ಚೆನ್ನಭೈರಾದೇವಿ ಎಂಬ ಐತಿಹಾಸಿಕ ನಾಟಕದಿಂದ ಅಯ್ದುಕೊಳ್ಳಲಾಗಿದೆ. ಈ ಮಾತನ್ನು ಮಹಾರಾಣಿ ಚೆನ್ನಭೈರಾದೇವಿಯನ್ನು ಉದ್ದೇಶಿಸಿ ಭೈರವ ನಾಯಕ ನುಡಿದನು.
ಸಂದರ್ಭ:- ಪೋರ್ಚುಗೀಸನ್ನು ಸಮುದ್ರದಲ್ಲಿ ಸೋಲಿಸುವದು ಕಷ್ಟಸಾಧ್ಯವೆಂದು ಅರಿತನಂತರ ರಾಣಿ ಚೆನ್ನಭೈರಾದೇವಿ ಹಲವು ಯುದ್ದ ತಂತ್ರಗಾರಿಕೆಯನ್ನು ಹೂಡುವಳು . ಕಂಠಪ್ಪ ನಾಯಕರಿಗೆ ಹೊನ್ನಾವರ ಕೋಟೆಯನ್ನುತೆರವು ಗೊಳಿಸಲು ತಿಳಿಸಿ ಒಳಗಿನಿಂದ ಬಾಗಿಲು ಭಧ್ರಪಡಿಸಿ ಹಗ್ಗದ ಸಹಾಯದಿಂದ ಹೊರಬರಲು ಸೂಚಿಸುವಳು ನಮ್ಮವರು ಅವರ ಪಿರಂಗಿಗಳಿಗೆ ಸಿಗದಂತೆ ಎಚ್ಚರ ವಹಿಸಿ ನಾಲ್ಕೈದು ದಿನ ಹೀಗೆಯೇ ಪ್ರಯತ್ನಿಸಿದ ನಂತರ ಅವರು ಹೇಗಾದರೂ ಮಾಡಿ ಮೇಲೆ ಬಂದಾರು ಬಂದವರ ವಿರುದ್ದ ಹೋರಾಡುತ್ತ ಮೆಲ್ಲಗೆ ಪಲಾಯನ ಮಾಡಿ ಎಂಬ ಮಾತಿಗೆ ಪ್ರತ್ಯತ್ತರವಾಗಿ ಈ ಮೇಲಿನ ಮಾತನ್ನು ನುಡಿಯುವನು.
ಸ್ವಾರಸ್ಯ:- ಪರಾಕ್ರಮಿಯಾದ ಕಂಠಪ್ಪ ನಾಯಕನಿಗೆ ಇದೊಂದು ಯುದ್ದ ತಂತ್ರಗಾರಿಕೆ ಎಂಬುದು ತಿಳಿಯದೇ ನಮ್ಮ ಯೋಧರೇಕೆ ಹೇಡಿಗಳಂತೆ ಪೋರ್ಚುಗೀಸರ ಸೈನ್ಯಕ್ಕೆ ಬೆನ್ನು ತೋರಿಸಬೇಕು? ಎಂದು ಸ್ವಾರಸ್ಯಮಯವಾಗಿ ಇಲ್ಲಿ ವ್ಯಕ್ತವಾಗಿದೆ.
5. ಕುತಂತ್ರವನ್ನು ತಂತ್ರಗಾರಿಕೆಯಿಂದಲೇ ಮಣಿಸಬೇಕು.
ಆಯ್ಕೆ:- ಪ್ರಸ್ತುತ ಈ ಮಾತನ್ನು ಡಾ. ಗಜಾನನ ಶರ್ಮ ಅವರು ಬರೆದ ಚೆನ್ನಭೈರಾದೇವಿ ಎಂಬ ಐತಿಹಾಸಿಕ ನಾಟಕದಿಂದ ಅಯ್ದುಕೊಳ್ಳಲಾಗಿದೆ. ಈ ಮಾತನ್ನು ಮಹಾರಾಣಿ ಚೆನ್ನಭೈರಾದೇವಿಯು ನುಡಿಯುವಳು.
ಸಂದರ್ಭ:- ಪೋರ್ಚುಗೀಸರ ಸುಸಜ್ಜಿತ ಸೈನ್ಯವನ್ನು ತಂತ್ರಗಾರಿಕೆಯೆಂದರೇ ಸೋಲಿಸಬೇಕೆಂದು ಮನಗಾಣುತ್ತಿದ್ದಂತೆಯೇ ಚೆನ್ನಭೈರಾದೇವಿ ಭೈರವ ನಾಯಕರನ್ನು ಉದ್ದೇಶಿಸಿ ಸೈನಿಕರಿಗೆ ಹೇಳಿ, ಇದು ಯುದ್ದ ತಂತ್ರ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಎಂದು ಮನವರಿಕೆ ಮಾಡಿಕೊಡುತ್ತ ಈ ಮೇಲಿನ ಮಾತನ್ನು ನುಡಿಯುವಳು.
ಸ್ವಾರಸ್ಯ:- ಇದೊಂದು ಯುದ್ದ ನೀತಿ ಪೋರ್ಚುಗೀಸರು ನೇರವಾಗಿ ಯುದ್ದಕ್ಕೇ ಬಾರದೇ ಮೋಸದಿಂದ ಯುದ್ದ ಮಾಡುತ್ತಿದ್ದರು. ಆದರೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡ ಚೆನ್ನ ಭೈರಾದೇವಿ ಅವರ ಕುತಂತ್ರವನ್ನೇ ತನಗೆ ವಿಜಯ ಸಾಧಿಸಲು ದಾರಿಯೆಂಬಂತೆ ತಂತ್ರಗಾರಿಕೆಯನ್ನು ಮಣಿಸಲು ಸಿದ್ದಳಾದಳು.
V. ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1.ಚೆನ್ನಭೈರಾದೇವಿ ಗೇರುಸೊಪ್ಪೆ ಮತ್ತು ಹಾಡುವಳ್ಳಿ ಜೋಡಿ ಸಾಮ್ರಾಜ್ಯಗಳ ಪಟ್ಟದ ರಾಣಿ.
( ಹೊನ್ನಾವರ, ಅಂಜುದ್ವೀಪ, ಹಾಡುವಳ್ಳಿ, ಕಾನೂರು)
2. ಗೋವಾದ ಪೋರ್ಚುಗೀಸ್ ಗವರ್ನರ್ ಲೂಯಿಸ್ ಅಟಾಯಿಡೆ.
(ಲೂಯಿಸ್ ಅಟಾಯಿಡೆ, ರೊಜಾರಿಯೋ, ಡಿಸಿಲ್ವ, ಮೆಂಜಿಸ್)
3. ಚೆನ್ನಭೈರಾದೇವಿಯ ಹೊನ್ನಾವರದ ನಾವಿಕ ಪಡೆಯ ಸರದಾರ ಭೈರವ ನಾಯಕ.
(ರೊಜಾರಿಯೋ, ಕಂಠಪ್ಪ ನಾಯಕ, ಶಬಲೆ, ಭೈರವ ನಾಯಕ)
4. ಪೋರ್ಚುಗೀಸರು ಸಜ್ಜುಗೊಳಿಸಿದ ಹಡಗುಗಳಿಗೆ ಸಂಖ್ಯೆ 130.
(150,130,100,325)
5. ಪೋರ್ಚುಗೀಸರು ಹೊನ್ನಾವರ ನಗರವನ್ನು ಸುಟ್ಟುಹಾಕಲು ನಿರ್ಧರಿಸಿದರು.
(ಹೊನ್ನಾವರ, ಹಾಡುವಳ್ಳಿ, ಕಾನೂರು, ಗೇರುಸೊಪ್ಪೆ)
ಸೈದ್ಧಾಂತಿಕ ಭಾಷಾಭ್ಯಾಸ
ಕಾಲಗಳು:-
ವರ್ತಮಾನ ಕಾಲ:- ಅವನು ಶಾಲೆಗೆ ಹೋಗುತ್ತಾನೆ.
ಹೋಗು-ಧಾತು, ಉತ್ತ- ಪ್ರತ್ಯಯ ಸೇರಿದೆ.
ಭೂತಕಾಲ:- ಅವನು ಶಾಲೆಗೆ ಹೋದನು.
ಹೋಗು-ಧಾತು, ದ-ಪ್ರತ್ಯಯ ಸೇರಿದೆ.
ಭವಿಷ್ಯತ್ ಕಾಲ:- ಅವನು ಶಾಲೆಗೆ ಹೋಗುವನು
ಹೋಗು- ಧಾತು, ವ- ಪ್ರತ್ಯಯ ಸೇರಿದೆ.
ಕಾಲ ಪಲ್ಲಟ
ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದ ಕ್ರಿಯಾರೂಪದಿಂದ ಹೇಳುವುದಕ್ಕೆ ಕಾಲಪಲ್ಲಟ ಎನ್ನುವರು.
ಉದಾ:- 1. ವರ್ತಮಾನ ಕಾಲವು ಭವಿಷ್ಯತ್ ಕಾಲದಲ್ಲಿ
- ಅವನು ಊಟ ಮಾಡುವನು (ವರ್ತಮಾನ ಕಾಲ- ಊಟ ಮಾಡುತ್ತಾನೆ)
- ಅವಳು ಒಳಗೆ ಅಡುಗೆ ಮಾಡುವಳು ( ವರ್ತಮಾನ ಕಾಲ- ಅಡುಗೆ ಮಾಡುತ್ತಾಳೆ)
ಉದಾ:- 2. ಭವಿಷ್ಯತ್ ಕಾಲವು ವರ್ತಮಾನ ಕಾಲದಲ್ಲಿ
- ಅವನು ನಾಳೆ ಹೋಗುತ್ತಾನೆ. ( ಹೋಗುವನು)
- ನಾನು ಮುಂದಿನ ತಿಂಗಳು ಬರುತ್ತೇನೆ. ( ಬರುವನು)