8th Kannada Auto Rikshada Rasaprasangagalu Notes | 8ನೇ ತರಗತಿ ಆಟೋರಿಕ್ಷಾದ ಪ್ರಸಂಗಗಳು ಕನ್ನಡ ನೋಟ್ಸ್
ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
೧. ಸಿಡುಕಿನಿಂದ ಆಟೋ ಸ್ಟಾರ್ಟ್ ಮಾಡಿದ ಆಟೋ ಚಾಲಕ ಏನೆಂದು ಹೇಳಿದ ?
ಸಿಡುಕಿನಿಂದ ಆಟೋ ಸ್ಪಾರ್ಟ್ ಮಾಡಿದ ಆಟೋ ಚಾಲಕ “ ರೀ ಸ್ವಾಮಿ , ಸುಮ್ಮನೆ ಕುಳಿತುಕೊಳ್ಳಿ . ನಿಮ್ಮಂತವರಿಂದಲೇ ಆಕ್ಸಿಡೆಂಟ್ ಆಗುವುದು . ಹತ್ತುವುದಕ್ಕಿಂತ ಮುಂಚೇನೆ ಅಪಶಕುನ ” ಎಂದು ಹೇಳಿದನು .
೨. ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿಲ್ಲವೇಕೆ ?
ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿಲ್ಲ . ಏಕೆಂದರೆ ವಿಮಾನಕ್ಕೆ ಯಾವಾಗಲೂ ಎಮ್ಮೆ , ಹಸು , ಜನ ಅಡ್ಡ ಬರಲಿಲ್ಲ . ಜೊತೆಗೆ ವಿಮಾನವನ್ನು ಓವರ್‌ಟೇಕ್ ಮಾಡಿದ ಪ್ರಸಂಗವೂ ಇಲ್ಲ “
೩. ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರ ಅಭಿಪ್ರಾಯವೇನು ?
‘ ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವುದೇ ಒಂದು ಪ್ರಯಾಸದ ಕೆಲಸ , ಬಸ್‌ಗಳ ಟೈಮ್ ಅನಿಶ್ಚಿತ ಹಾಗೂ ತುಂಬಾ ಕಾಯಬೇಕಾಗಿದ್ದು ಆ ನೂಕುನುಗ್ಗಲಲ್ಲಿ ಬಸ್ ಸಂಚಾರ ಬಹಳ ದುಸ್ತರ . ‘ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ .
೪. ದೇಹಕ್ಕೆಲ್ಲ ನಟ್ಟು ಬೋಲ್ಟ್ ಹಾಕಿಸಿಕೊಳ್ಳುವುದಕ್ಕಿಂತ ಯಾವುದು ಲೇಸು ?
ದೇಹಕ್ಕೆಲ್ಲ ನಟ್ಟು ಬೋಲ್ಟ್ ಹಾಕಿಸಿಕೊಳ್ಳುವುದಕ್ಕಿಂತ ಭಗವಂತನ ಪಾದಾರವಿಂದವನ್ನು ಸೇರುವುದೇ ಲೇಸು .
೫. ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದ್ದವನಾರು ?
ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದ್ದವನು ಬಾಲಯೋಗಿ ,
೬. ಆಟೋ ಚಾಲಕರಲ್ಲಿಯೂ ಮಾನವೀಯತೆಯನ್ನರಿತ ಪ್ರಸಂಗದ ಬಗ್ಗೆ ತಿಳಿಸಿ ,
ಒಂದು ಸಂಜೆ ಜಯನಗರದಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ ಮುಗಿಸಿಕೊಂಡು ಹೋಗುವುದು ರಾತ್ರಿ ೧೦ ಘಂಟೆಯಾಯಿತು . ಕೆಲವು ಉಪಾಧ್ಯಾಯರು “ ಇಷ್ಟು ಹೊತ್ತಿನಲ್ಲಿ ಹಾಸ್ಟೆಲ್‌ನಲ್ಲಿ ಊಟ ಇರುವುದಿಲ್ಲ ; ಆದುದರಿಂದ ನಮ್ಮ ಮನೆಗೆ ಬಂದು ಊಟಮಾಡಿಕೊಂಡು ಹೋಗಿ ” ಎಂದು ಅವರನ್ನು ಒತ್ತಾಯಪಡಿಸುತ್ತಿದ್ದರು . “ ಪರವಾಗಿಲ್ಲ . ಒಂದು ಹೊತ್ತು ಊಟ ಇಲ್ಲದೇ ಇದ್ದರೆ ಚಿಂತೆ ಇಲ್ಲ . ತುಂಬಾ ಹೊತ್ತಾಗಿದೆ ” ಎಂದು ಲೇಖಕರು ಹೇಳಿದರು . ಇದನ್ನೆಲ್ಲಾ ಕೇಳುತ್ತಿದ್ದ ಆಟೋ ಚಾಲಕರು ‘ ಯಾಕೆ ಸಾರ್ , ನಿಮಗೆ ಮನೆ ಇಲ್ಲವೇ ? ‘ ಎಂದು ಕೇಳಿದರು . “ ಇಲ್ಲಪ್ಪ , ಹಾಸ್ಟೆಲಿನಲ್ಲಿದ್ದೇನೆ ” ಅಂದರು . ಆಗ ಅವನು “ ಇಷ್ಟು ಹೊತ್ತಿನಲ್ಲಿ ಉಪವಾಸ ಮಲಗಿಕೊಳ್ಳಬಾರದು ಸಾರ್ , ವಿಶ್ವೇಶ್ವರಪುರದಲ್ಲಿರುವ ಸಜ್ಜನರಾವ್ ಸರ್ಕಲ್‌ಗೆ ಹೋಗೋಣ ಬನ್ನಿ . ಅಲ್ಲಿ ಇಡ್ಲಿ ಮಾರುತ್ತಾರೆ . ನೀವು ಇಡ್ಲಿ ತಿನ್ನುವ ತನಕ ಕಾಯುತ್ತೇನೆ ” ಎಂದು ತುಂಬಾ ಆತ್ಮೀಯವಾಗಿ ವಿನಂತಿಸಿಕೊಂಡನು . ಲೇಖಕರು ಅವನಿಗೆ ವಂದಿಸಿದರು .