1. ಭಾರತ ದೇಶದಲ್ಲಿ ಮಕ್ಕಳ ದಿನಾಚರಣೆಯನ್ನು ನವಂಬರ್ 14 ರಂದು ಆಚರಿಸಲಾಗುತ್ತದೆ. ವಿ.ಎನ್ ಕುಲಕರ್ಣಿರವರು ವಿಶ್ವಸಂಸ್ಥೆಯ ಯೋಜನೆಯ ಅಡಿಯಲ್ಲಿ 1951ರಂದು ಇಂಗ್ಲೆಂಡಿನ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಿದರು. ಬಡ ಮಕ್ಕಳ ಕಲ್ಯಾಣಕ್ಕಾಗಿ ಅವರು ರಾಣಿ ಎಲಿಜಬೆತ್-2 ರವರ ದಿನಾಚರಣೆಯನ್ನು ಧ್ವಜ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಇದರಿಂದ ಅನೇಕ ಧನಸಹಾಯವನ್ನು ಸಂಗ್ರಹಣೆ ಮಾಡಲಾಯಿತು. ಅಂತಹ ಸಂದರ್ಭದಲ್ಲಿ ಕುಲಕರಣಿ ರವರ ಮನಸ್ಸು ಭಾರತದಲ್ಲಿ ಬಡಮಕ್ಕಳ ಸ್ಥಿತಿಗತಿಯ ಮೇಲೆ ಅವರ ಗಮನ ಇತ್ತು.
2. ಇಂತಹ ಒಂದು ಯೋಜನೆಯನ್ನು ಭಾರತದಲ್ಲಿ ಮಾಡಬೇಕು ಎಂದು ಮಕ್ಕಳಿಗಾಗಿ ಧನ ಸಂಗ್ರಹಣೆ ಮಾಡಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ವಿಟ್ಟಾಗ ಭಾರತದ ಪ್ರಧಾನ ಮಂತ್ರಿಯಾಗಿದ್ದ ಜವಹರಲಾಲ್ ನೆಹರುರವರ ಜನ್ಮ ದಿನಕ್ಕಿಂತ ಪ್ರಶಸ್ತವಾದ ದಿನ ಬೇರೊಂದಿಲ್ಲ ಎಂದು ಭಾವಿಸಿ ನೆಹರೂರವರು ಇದಕ್ಕೆ ಒಪ್ಪಿದ್ದಾರೆಯೇ? ಎನ್ನುವ ಆತಂಕ ಎಲ್ಲರಲ್ಲೂ ಕೂಡ ಕಾಡುತ್ತಿತ್ತು.
3. ನೆಹರುರವರಿಗೆ ಮಕ್ಕಳಾದ ಮೇಲೆ ಅಪಾರವಾದಂತಹ ಪ್ರೀತಿ ಹಾಗೂ ಒಲವು ಇತ್ತು. ಅವರು ಕೂಡ ಈ ದಿನಾಚರಣೆಯನ್ನು ಆಚರಿಸಲು ಒಪ್ಪಿಗೆಯನ್ನು ನೀಡಿದರು. ಅಂದಿನಿಂದ ಅವರ ಹುಟ್ಟಿದ ಹಬ್ಬದ ದಿನ ನಾವು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತೇವೆ.
4. ಮಕ್ಕಳ ದಿನಾಚರಣೆಯ ಉದ್ದೇಶ ಅವರ ಹಿತ ರಕ್ಷಣೆ ಹಾಗೂ ಯೋಗಕ್ಷೇಮವನ್ನು ಕಾಪಾಡುವುದು. ಜಗತ್ತಿನಲ್ಲಿ ಮಕ್ಕಳ ದಿನಾಚರಣೆಯನ್ನು ಬೇರೆಬೇರೆ ದಿನಾಂಕಗಳ ಮೂಲಕ ಆಚರಣೆ ಮಾಡುತ್ತಾರೆ. ನವಂಬರ್ 20ರಂದು ಯುನಿವರ್ಸಲ್ ಚಿಲ್ಡ್ರೆಂಸ್ ಡೇ ಆಚರಣೆ ಮಾಡುತ್ತಾರೆ. ಜೂನ್ ಒಂದರಂದು ಇಂಟರ್ನ್ಯಾಷನಲ್ ಚಿಲ್ಡ್ರೆಂಸ್ ಡೇ ಚಯನ್ನಾಗಿ ಆಚರಣೆ ಮಾಡುತ್ತಾರೆ.
ಆಚರಣೆ
ಈ ಮಕ್ಕಳ ದಿನಾಚರಣೆಯ ದಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಅತಿಹೆಚ್ಚಾಗಿ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಕೆಲವು ಗಂಟೆಗಳ ಬಳಿಕ ರಜೆಯನ್ನು ನೀಡಲಾಗುತ್ತದೆ. ಪ್ರಮುಖವಾಗಿ ಚಿತ್ರಕಲಾ ಸ್ಪರ್ಧೆಯನ್ನು ನಡೆಸುವರು.
ಮಕ್ಕಳ ಕಣ್ಣಿಗೆ ನೀರೆರೆದು
ಪೋಷಿಸುವ ಕೈಗಳು ನಾವಾಗಬೇಕು
ಮಕ್ಕಳ ನಗು ಭವಿಷ್ಯದ ಬೆಳಕು.
ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.❤