ಕೃತಿಕಾರರ ಪರಿಚಯ :
ಶಿವರಾಮ ಕಾರಂತ
ಶಿವರಾಮ ಕಾರಂತರು ( ಕ್ರಿಸ್ತ ಶಕ ೧೯೦೨ ) ಉಡುಪಿ ಜಿಲ್ಲೆಯ ಕೋಟದವರು , ಇವರ ಪ್ರಮುಖ ಕೃತಿಗಳು : ಕಾದಂಬರಿಗಳು : ಚೋಮನದುಡಿ , ಮರಳಿಮಣ್ಣಿಗೆ , ಬೆಟ್ಟದಜೀವ , ಅಳಿದಮೇಲೆ ಮುಂತಾದವು . ಕಥಾಸಂಕಲನಗಳು : ಹಸಿವು , ಹಾವು , ಕವಿ , ಕರ್ಮ , ಕವನ ಸಂಕಲನಗಳು : ರಾಷ್ಟ್ರಗೀತ ಸುಧಾಕರ ಮತ್ತು ಸೀಲ್ಕವನಗಳು , ಪ್ರವಾಸ ಕಥನಗಳು : ಅಬುವಿನಿಂದ ಬರಾಮಕ್ಕೆ , ಅಪೂರ್ವ ಪಶ್ಚಿಮ , ಅರಸಿಕರಲ್ಲ , ಪಾತಾಳಕ್ಕೆ ಪಯಣ , ಈ ಕೃತಿಗಳಲ್ಲದೆ ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಆತ್ಮಕಥನ , ಯಕ್ಷಗಾನ ಬಯಲಾಟ – ಜಾನಪದ ಸಾಹಿತ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ . ಇವರಿಗೆ ಲಕಭಿಸಿರುವ ಪ್ರಶಸ್ತಿ ಪುರಸ್ಕಾರಗಳು : . ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ , * ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ಮೈಮನಗಳ ಸುಳಿಯಲ್ಲಿ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ . * ಇವರು ೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ೩೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . [ ಪ್ರಸ್ತುತ ಗದ್ಯವನ್ನು ಅಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಿಕೊಳ್ಳಲಾಗಿದೆ . ]
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ ,
1. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ ?
ಉತ್ತರ : ಜಯಪುರದ ಜನರಿಗೆ ಕೆಂಪು , ಕಿತ್ತಳೆ , ಹಳದಿ ಬಣ್ಣಗಳು ಇಷ್ಟ .
2. ಜಯಪುರದ ಪೂರ್ವದ ರಾಜಧಾನಿ ಯಾವುದು ?
ಉತ್ತರ : ಜಯಪುರದ ಪೂರ್ವದ ರಾಜಧಾನಿ ಅಂಬೇರ ವಿಗೆ
3. ಲೇಖಕರಿಗಿದ್ದ ಹಂಬಲವೇನು ?
ಉತ್ತರ : ಜಯಪುರದಲ್ಲಿ ಜಾನಪದ ನೃತ್ಯಗಳನ್ನು ನೋಡಬೇಕೆಂಬುದು ಲೇಖಕರ ಹಂಬಲವಾಗಿತ್ತು ,
4. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು ?
ಉತ್ತರ : ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯಲ್ಲಿ ರೈಗಳ ಮನೆಯಿತ್ತು .
5. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ ?
ಉತ್ತರ : ಜಯಪುರದಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1 , ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ ,
ಉತ್ತರ : ಅಂಬೇರ ಕೋಟೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲಿ ಮೀರಾಬಾಯಿಯ ದೇವಾಲಯವಿದೆ . ಆಕೆ ಗಿರಿಧರನಾಗರನನ್ನು ಪೂಜಿಸಿದ ಸ್ಥಳವದು . ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ . ಅಲ್ಲಿ ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ , ನವರಂಗಗಳಿವೆ .
2. ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ ,
ಉತ್ತರ : ಅದು ಊರಿನ ಜನಸಾಮಾನ್ಯರ ನೃತ್ಯವಾಗಿತ್ತು . ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು . ಮಾರವಾಡಿ ಸ್ತ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು , ಮುಖತೋರಿಸದೆ ಕುಣಿಯತೊಡಗಿದರು . ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು . ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ನರ್ತಿಸತೊಡಗಿದರು . ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾ ಚೆಲುವುಗಳೆರಡೂ ಇದ್ದವು .
3. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ ,
ಉತ್ತರ : ಜಯಪುರ ನಗರದ ಬೀದಿಗಳು ಬಹಳ ಅಗಲವಾಗಿಯೂ ನೇರವಾಗಿಯೂ ಇವೆ . ಬಹುದೂರದಿಂದ ಕಾಣಿಸುವ ಅಂಗಡಿ ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ . ಅಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಅಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ . ಕೆಲವೊಂದು ಕಡೆಗಳಲ್ಲಿ ಭವ್ಯವಾದ ಮಹಾದ್ವಾರಗಳಿವೆ .
4. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು ?
ಉತ್ತರ : ಲೇಖಕರು ಹಿಂದೆ ಅಂಬೇರಕ್ಕೆ ಹೋಗಿದ್ದಾಗ ಅಲ್ಲಿ ಜನವಸತಿ ಇದ್ದಿರಲಿಲ್ಲ . ಆಗ ಅಲ್ಲಿನ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು . ಆದರೆ ಈಗ ಹಾಗಿಲ್ಲ : ನೂರಾರು ಸಿಂಧಿ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
1. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ .
ಉತ್ತರ : ಅರಮನೆಯ ಮೊದಲ ಅಂತಸ್ತಿನಲ್ಲಿ ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಿಂದ ಕೂಡಿದ ಪುಟ್ಟ ದೇವಾಲಯವಿದೆ . ಅದರ ಗೋಡೆ , ನೆಲ , ಸ್ತಂಭಗಳೂ ಹಾಲುಗಲ್ಲಿನವು . ಮೇಲಿನ ಅಂಗಳವನ್ನೇರಿ ಹೋದರೆ ಅಲ್ಲಿ ದೊಡ್ಡದಾದ , ವಿಶಾಲವಾದ ಹಾಲುಗಲ್ಲಿನ ಸಭಾಂಗಣ ಕಂಡುಬರುತ್ತದೆ . ಅದರ ಚಾವಣಿ , ರಜಪುತಾನದ ಶೈಲಿಯ ಕಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು , ಪರಸ್ಪರ ಹೊಂದಿಕೊಂಡು ಸುಂದರವಾಗಿ ಕಾಣುತ್ತದೆ . ಎದುರಿನ ಅಂಗಣವೂ ಸಾಕಷ್ಟು ವಿಶಾಲವಾಗಿದೆ . ಅಲ್ಲಿಂದ ಮೂರನೆಯ ಅಂತಸ್ತಿಗೆ ಹೋದರೆ ರಾಜರ ಅಂತಃಪುರವಿದ್ದು ಅಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ . ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದ ಲತಾಪುಷ್ಪಗಳ ಚಿತ್ರಾವಳಿಗಳೂ ಇವೆ . ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಲ್ಪಟ್ಟಿವೆ . ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ ಆ ಲಕೋಪಲಕ್ಷ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ .
2. ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ .
ಉತ್ತರ : ಜಯಪುರ ಬಣ್ಣಗಾರರ ತವರೂರು , ಬಣ್ಣ ಹಾಕುವ ಕುಶಲಿಗರು ಆ ಊರಿನಲ್ಲಿ ಬಹಳ ಮಂದಿ ಇದ್ದಾರೆ . ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ . ಗಿಡಮರಗಳಿಲ್ಲದ ಸ್ಥಳದಲ್ಲಿ ವಾಸಿಸುವ ಜನರಿಗೆ , ಕಣ್ಣಿನ ತಣಿವು ಹೇಗೆ ಬರಬೇಕು ? ಹಾಗೆಂದೇ ಇಲ್ಲಿನ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು . ಅವರಿಗೆ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ . ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ , ಗಂಡಸರೂ ರಂಗುರಾಯರೇ . ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು . ಸುತ್ತುಸುತ್ತಿನ ಅವರ ದೇಶೀ ಮುಂಡಾಸನ್ನು ಚೆನ್ನಾಗಿ ಬಿಗಿದುಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ .
3. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ .
ಉತ್ತರ : ‘ ಜಂತ್ರ ಮಂತ್ರ ‘ ಹಳೆಯ ಕಾಲದ ಖಗೋಳವಿಜ್ಞಾನದ ಪರಿಶೀಲನಾಲಯ , ೪೦೦-೫೦೦ ವರ್ಷಗಳ ಪೂರ್ವದಲ್ಲಿ ಖಗೋಳಶಾಸ್ತ್ರಜ್ಞರು , ಗ್ರಹ , ಸೂರ್ಯ ಚಂದ್ರ , ತಾರಾಮಂಡಲಗಳನ್ನು ಅಳೆದು ಪರಿಶೀಲಿಸಿ ನೋಡುವ ಸಲುವಾಗಿ , ಅಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ . ಅಂತಹ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ . ಗಳಿಗೆ ಅಳೆಯುವುದಕ್ಕೆ ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ , ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಟುಗಳಿವೆ . ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ . ದೂರದರ್ಶಕ ಯಂತ್ರದ ಸಹಾಯವಿಲ್ಲದೆ , ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ .
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. “ ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಹದಿನೈದು ವರ್ಷಗಳ ಹಿಂದೆ ಜಯಪುರದ ಸಮೀಪದ ಅಂಬೇರಾಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಜನವಸತಿ ಇರಲಿಲ್ಲ . ಅಂದಿಗೂ ಇಂದಿಗೂ ಅಲ್ಲಿ ಉಂಟಾಗಿರುವ ಬದಲಾವಣೆಯನ್ನು ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ . ಹಿಂದೆ ಅಲ್ಲಿನ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು , ಆದರೆ ಈಗ ಹಾಗಿಲ್ಲ : ನೂರಾರು ಸಿಂಧೀ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ ‘ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ .
ಸ್ವಾರಸ್ಯ : ಅಂದು ಜನವಸತಿ ಇಲ್ಲದೆ ಪ್ರಾಚೀನ ಗುಡಿಗೋಪುರಗಳು ಪಾಳುಬಿದ್ದಿದ್ದವು . ಆದರೆ ಆಧುನಿಕತೆಯ ಪ್ರಭಾವದಿಂದ ಈಗ ಅಲ್ಲಿ ಜನಸಂದಣಿ ಇದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ .
2. “ ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ “
ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಅಂಬೇರ ಕೋಟೆಯಲ್ಲಿರುವ ಅರಮನೆಯ ಮೂರನೆಯ ಅಂತಸ್ತಿನಲ್ಲಿ ಕೆಲವು ಚಾವಡಿಗಳಲ್ಲಿ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ , ಮುಚ್ಚಿಕೆಗಳುಳ್ಳ ರಚನೆಯನ್ನು ಕುರಿತು ತಿಳಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಅಂತಹ ರಚನೆಗಳಿರುವೆಡೆ ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ , ಲಕ್ಷ್ಮೀಪಲಕ್ಷ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ . ಎಂದು ವರ್ಣಿಸಿದ್ದಾರೆ .
ಸ್ವಾರಸ್ಯ : ಜಯಪುರವನ್ನು ಆಳಿದ ರಜಪೂತ ದೊರೆಗಳ ಕಲಾ ರಸಿಕತೆ ಹಾಗು ಅವರು ಕಲೆಗೆ ನೀಡಿದ ನೀಡಿದ ಪ್ರೋತ್ಸಾಹ ಲೇಖಕರ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
3. “ ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ . ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಆಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ‘ ಬೆಡಗಿನ ತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕಾರಂತರು ಜಯಪುರದಲ್ಲಿದ್ದ ತಮ್ಮ ಸ್ನೇಹಿತರಾದ ರೈಯವರ ಮನೆಗೆ ಹೋದಾಗ ಅಲ್ಲಿ ತಾವು ಬಿಸಿನೀರಿನ ಸ್ನಾನ ಮಾಡಿದ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ . “ ರೈಯವರ ಮನೆ ಸುತ್ತಲೂ ಮರಳು ಹರಡಿದ್ದ ಮರುಭೂಮಿಯಲ್ಲಿತ್ತು . ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ . ಏಕೆಂದರೆ ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು ” ಎಂದು ಹೇಳಿದ್ದಾರೆ .
ಸ್ವಾರಸ್ಯ : ಮರುಭೂಮಿಯಲ್ಲಿ ವಾಸಿಸುವವರ ಜೀವನ ಶೈಲಿಯ ಮೇಲೆ ಅಲ್ಲಿನ ವಾಯುಗುಣ ಬೀರುವ ಪ್ರಭಾವ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
4. “ ಗಂಡಸರೂ ರಂಗುರಾಯರೇ ”
ಉತ್ತರ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ‘ ಅಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ‘ ಎ೦ಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಲೇಖಕರು ಜಯಪುರದ ಜನರಿಗಿರುವ ಬಣ್ಣಗಳ ವ್ಯಾಮೋಹವನ್ನು ವರ್ಣಿಸುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ . ಜಯಪುರದ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು : ಅದರಲ್ಲೂ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ , ಗಂಡಸರೂ ರಂಗುರಾಯರೇ , ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುತ್ತಾರೆ . ಎಂದು ಲೇಖಕರು ವರ್ಣಿಸಿದ್ದಾರೆ .
ಸ್ವಾರಸ್ಯ : ಜಯಪುರದಲ್ಲಿ ಬಣ್ಣದ ವ್ಯಾಮೋಹ ಹೊಂದಿರುವುದರಲ್ಲಿ ಹೆಂಗಸರಷ್ಟೇ ಅಲ್ಲ ಗಂಡಸರೂ ಮುಂದಿದ್ದಾರೆ ಎಂಬುದು ಲೇಖಕರ ಮಾತಿನ ಸ್ವಾರಸ್ಯವಾಗಿದೆ .
ಉ ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಲ ,
I ಜಯಪುರ ಬಣ್ಣಗಾರರ ತವರೂರು
2 , ಚಿತ್ರಕೊರೆದು ಮಾಡಿದ ಹಾಲುಗಲ್ಲಿನ ನೀರ ಕಾಲುವೆಗಳು ,
3 , ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ .
4. ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು .
5. ಮಿತ್ರ ರೈಗಳ ಸತ್ಕಾರಕ್ಕೆ ವಂದನೆ ಸಲ್ಲಿಸಿದೆವು
ಸರಿ ಉತ್ತರಗಳು
1 , ತವರೂರು ,
2 , ಹಾಲುಗಲ್ಲಿನ
3 , ಚಂದ್ರಕಾಂತ ಶಿಲೆಯ
4 ,ಡೋಲು
5 , ಸತ್ಕಾರಕ್ಕೆ
ಊ) ಹೊಂದಿಸಿ ಬರೆಯಿರಿ
ಅ ಪಟ್ಟಿ ಆ ಪಟ್ಟಿ ಸರಿ ಉತ್ತರಗಳು
1 , ಅಂಬೇರ ಸುವರ್ಣ ದೀರ್ಘಸಂದಿ ಪೂರ್ವದ ರಾಜಧಾನಿ
2 , ಲಕ್ಷೇಪಲಕ್ಷ ತತ್ಸಮ ಗುಣಸಂಧಿ
3. ಬಣ್ಣಬಣ್ಣ ಪೂರ್ವದ ರಾಜಧಾನಿ ಖಗೋಳ ವೀಕ್ಷಣಾಲಯ
4 ಜಂತ್ರ ಮಂತ್ರ ದ್ವಿರುಕ್ತಿ ತತ್ಸಮ
ಮಂತ್ರವಾದಿ