9th Standard Kannada Nadu Nudi Poem | ಕನ್ನಡ ನಾಡು ನುಡಿ ಪದ್ಯದ ಪ್ರಶ್ನೋತ್ತರ ನೋಟ್ಸ್

 

9th Standard Kannada Nadu Nudi Poem | ಕನ್ನಡ ನಾಡು ನುಡಿ ಪದ್ಯದ ಪ್ರಶ್ನೋತ್ತರ ನೋಟ್ಸ್

ಪದ್ಯ ಭಾಗ – 8   ಕನ್ನಡ ನಾಡು ನುಡಿ

  • ಶ್ರೀವಿಜಯ 

ಕೃತಿಕಾರರ ಪರಿಚಯ

9th standard kannada nadu nudi poem summary

ಶ್ರೀವಿಜಯ       

ಶ್ರೀವಿಜಯನು ಕ್ರಿ.ಶ. ಸುಮಾರು 9 ನೆಯ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿ ಇದ್ದನು . ಈತನು ‘ ಕವಿರಾಜಮಾರ್ಗ ‘ ಎಂಬ ಲಾಕ್ಷಣಿಕ ಗ್ರಂಥವನ್ನು ರಚಿಸಿದ್ದಾನೆ .

ನಯಸೇನ : ನಯಸೇನನು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಧಾರವಾಡ ಜಿಲ್ಲೆಯ ಮುಳುಗುಂದದಲ್ಲಿ ಜೀವಿಸಿದ್ದನು .

ಈತನು ‘ ಧರ್ಮಾಮೃತ ‘ ಎಂಬ ಚಂಪೂ ಕಾವ್ಯ ಕೃತಿಯನ್ನು ರಚಿಸಿದ್ದಾನೆ . ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ಆಕ್ಷೇಪವನ್ನು ವ್ಯಕ್ತಪಡಿಸುತ್ತಾನೆ .

ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ .

ನೇಮಿಚಂದ್ರ : ನೇಮಿಚಂದ್ರನು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಜೀವಿಸಿದ್ದನು

ಈತನು ಲೀಲಾವತೀ ಪ್ರಬಂಧ ಹಾಗೂ ಅರ್ಧನೇಮಿ ಪುರಾಣ ಎಂಬ ಪ್ರಸಿದ್ಧ ಕಾವ್ಯಗಳನ್ನು ರಚಿಸಿದ್ದಾನೆ . ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ .

ಮಹಲಿಂಗರಂಗ : ಮಹಲಿಂಗರಂಗನು ಕ್ರಿ.ಶ. ಸುಮಾರು 17 ನೆಯ ಶತಮಾನದಲ್ಲಿ ಜೀವಿಸಿದ್ದನು . ಈತನು ‘ ಅನುಭವಾಮೃತ ‘ ಎಂಬ ಕೃತಿಯನ್ನು ರಚಿಸಿದ್ದಾನೆ . ಇವನ ನಿಜನಾಮ ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ .

ಈತನ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನ , ಅನುಭವಾಮೃತವು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ .

ಆಂಡಯ್ಯನು ಕ್ರಿಶ ಸುಮಾರು 13 ನೇ ಶತಮಾನದಲ್ಲಿ ಕದಂಬರ ದೊರೆ ಕಾಮದೇವನ ಆಶ್ರಯದಲ್ಲಿ ಇದ್ದನು . ಇವನು ‘ ಕಬ್ಬಿಗರ ಕಾವ ‘ ಅಥವಾ ‘ ಕಬ್ಬಿಗರ ಕಾವಂ ‘ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ .

‘ ಕನ್ನಡ ನಾಡು – ನುಡಿ ‘ ಪದ್ಯದಲ್ಲಿ ಇರುವ ಎಲ್ಲಾ ಪದ್ಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .

ಆಶಯ ಭಾವ

ನಮ್ಮ ಕನ್ನಡ ನಾಡು ನುಡಿಯ ವಿಶಿಷ್ಟತೆಯನ್ನು ನಮ್ಮ ನಾಡಿನ ಕವಿಗಳು ಮನಸಾರ ಹೊಗಳಿರುವುದನ್ನು , ಅವರ ಭಾಷಾ ಕಾಳಜಿಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು . ಶ್ರೀ ವಿಜಯನು ನಮ್ಮ ಕನ್ನಡದ ಜನಪದರು ಅಕ್ಷರಸ್ತರಲ್ಲದಿದ್ದರೂ ಕಾವ್ಯ ಪ್ರಯೋಗ ಪರಿಣತರಾಗಿದ್ದರು ಎನ್ನುತ್ತಾನೆ .

ನಯಸೇನನು ನಮ್ಮ ಕನ್ನಡವು ಕೆಲವು ಪಂಡಿತರಿಂದ ಸಂಸ್ಕೃತಮಯವಾಗುವುದನ್ನು ಸಹಿಸದೇ ಶುದ್ಧ ಕನ್ನಡವೇ ಇರಬೇಕೆಂದು ಬಯಸುತ್ತಾನೆ .

ನೇಮಿಚಂದ್ರನು ಕನ್ನಡ ನಾಡಿನ ಶ್ರೇಷ್ಠಕಾವ್ಯಗಳ ರಚನೆಯ ಬಗ್ಗೆ ಹೊಗಳಿದ್ದಾನೆ . ಮಹಲಿಂಗರಂರನು ನಮ್ಮ ಕನ್ನಡವು ಹೇಗೆ ಸರಳ ಸುಂದರ ಎಂಬುದನ್ನು ಹಲವು ಉಪಮೇಯಗಳೊಂದಿಗೆ ಹೊಗಳಿ ಸಂಸ್ಕೃತಕ್ಕಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುತ್ತಾನೆ .

ಆಂಡಯ್ಯನು ಕನ್ನಡನಾಡಿನ ಪ್ರಕೃತಿಯ ರಮ್ಯತೆಯನ್ನು ಮೆಚ್ಚಿ ಹೀಗೆ ಕನ್ನಡನಾಡಿನ ಪ್ರಕೃತಿ , ಸಂಸ್ಕೃತಿ ಹಾಗೂ ಭಾಷಾ ಹಿರಿಮೆಗಳನ್ನು ವಿವಿಧ ಕವಿಗಳು ವರ್ಣಿಸಿರುವುದನ್ನು ಪರಿಚಯಿಸುವುದೇ ಪ್ರಸ್ತುತ ಪದ್ಯಪಾಠದ ಆಶಯವಾಗಿದೆ ,

ಪದಗಳ ಅರ್ಥ

ಅರಿದು – ತಿಳೆದು ;

ಚದುರ ( ದ ) -ಚತುರ ( ತೃ ) ಜಾಣ :

ಪರಿಣಿತ – ತಜ್ಞ  .

ಘೃತ- ತುಪ್ಪ

ಬೆರೆಸು – ಕೂಡಿಸು

ಅಗ್ಗಳ – ಶ್ರೇಷ್ಠ,

ಕಡಲು – ಸಮುದ್ರ

ಮೋಕ್ಷ – ಮುಕ್ತಿ

ಆರಯ – ಪಾಲನೆ

ಪದ- ಕ್ರಮ , ರೀತಿ

ಮತಿಗಳು – ಪ್ರತಿಭಾವಂತರು ;

ತೈಲ – ಎಣ್ಣೆ ;

ಸಕ್ಕದ ( ದ್ಧ ) – ಸಂಸ್ಕೃತ ( ತ್ಸ )

ಕಟ್ಟುಗೆ – ಸೇತುವೆ

ನರ – ಅರ್ಜುನ

ಉಷ್ಣ – ಶಾಖ ;

ಆ ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

kannada nadu nudi poem notes question answer

1. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?

ಉತ್ತರ : ಪದನರಿದು ನುಡಿಯುವವರು ಕನ್ನಡ ನಾಡಿನ ಜನ

2 , ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?

ಉತ್ತರ : ತುಪ್ಪದೊಡನೆ ತೈಲವನ್ನು ಬೆರೆಸಬಾರದು .

3. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?

ಉತ್ತರ : ಮಹಲಿಂಗರಂಗರವರ ಪ್ರಕಾರ ಸುಲಿದ ಬಾಳೆಯ ಹಣ್ಣನಂತೆ ಇರುವ ಭಾಷೆ ಕನ್ನಡ ,

ಆ ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ .

9th standard kannada nadu nudi padya Answer in two to three sentences.

1. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ ?

ಉತ್ತರ : “ ಪದನಡೆದು ನುಡಿಯಲುಂ ನುಡಿ ದುದನಜೆದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುಜೆತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ ”

ಅಂದರೆ ಕನ್ನಡ ನಾಡಿನ ಜನತೆ ಕ್ರಮವರಿತು ನುಡಿಯಬಲ್ಲರು ನುಡಿದಿದ್ದನ್ನು ಅರಿತು ಪಾಲನೆ ಮಾಡಬಲ್ಲರು ಯಾವುದೇ ಅಕ್ಷರ ಜ್ಞಾನವಿಲ್ಲದಿದ್ದರು ಕಾವ್ಯ ರಚಿಸುವಂತಹ ಪರಿಣತರು ಕನ್ನಡನಾಡಿನ ಜನತೆ ನಿಜಕ್ಕೂ ಚತುರರು ,

ಬುದ್ಧಿವಂತರು ಎಂದು ನಾಡಿನ ಜನಪದರ ಕಾವ್ಯರಚಿಸುವಂತಹ ಪರಿಣತಿಯನ್ನು ಕುರಿತು ಹೇಳಿದ್ದಾನೆ .

2. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ ?

ಉತ್ತರ : “ ಸಕ್ಕದಮಂ ಪೇಡೆ ನೆಜ ಸಕ್ಕದಮಂ ಪೇಟಿ ಶುದ್ಧ ಕನ್ನಡದೊಳ್ ತಂ ದಿಕ್ಕುವುದೇ ಸಕ್ಕದಮಂ ತಕ್ಕುದೆ ಬೆರೆಸಿ ಧೃತಮುಮಂ ತೈಲಮುಮಂ ” ನಮಗೆ ತುಪ್ಪವೂ ಬೇಕು , ಎಣ್ಣೆಯೂ ಬೇಕು , ಸಂಸ್ಕೃತವೂ ಬೇಕು , ಕನ್ನಡವೂ ಬೇಕು . ಆದರೆ ಎಣ್ಣೆ – ತುಪ್ಪದ ಅಸ್ವಾದು ಮಿಶ್ರಣ ಬೇಡ ಅಂದರೆ

ಕನ್ನಡ ಸಂಸ್ಕೃತದ ಮಿಶ್ರಣ ಬೇಡ ಎಂದಿದ್ದಾನೆ . ಶುದ್ದ ಕನ್ನಡದೊಳ್ ತಂದಿಕ್ಕುವುದೆ ಸಕ್ಕದಮಂ ಎಂದಿದ್ದಾನೆ . ಕವಿ ನಯಸೇನ ,

3. ಕವೀಂದರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ ?

ಉತ್ತರ : “ ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರಸೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ ಕೃತಿಬಂಧದೊಳ ಕಟ್ಟಿದರ್ ಮುಟ್ಟಿದರೆತ್ತಿ

ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ ” ಕಪಿಸಂತತಿ ಸೇತುವೆಯನ್ನು ಕಟ್ಟಿದಂತೆ ಹರನು , ನರನು ಮುಗಿಲನ್ನು ಒತ್ತಿ ಹಿಡಿದಂತೆ , ಕವಿಗಳು ಶ್ರೇಷ್ಟ ಕೃತಿಗಳನ್ನು ರಚಿಸಿದವರು ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದರ ಶ್ರೇಷ್ಠತೆಯನ್ನು ವರ್ಣಿಸಿದ್ದಾರೆ .

4. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ ?

ಉತ್ತರ : “ ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊರೆ ಸಾಲದೇ ಸಂಸ್ಕೃತದಲಿನ್ನೇನು ” ?

ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣಿನಂತೆ , ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಆಳಿದ ಹಾಲಿನಂತೆ , ಸುಲಭವೂ ರುಚಿಯುಳ್ಳದ್ದೂ ಆಗಿದೆ . ಆದ್ದರಿಂದ ಕನ್ನಡ ಭಾಷೆಯಿಂದಲೇ ಮೋಕ್ಷಗಳಿಸಿಕೊಂಡರೆ ಸಾಕು ಸಂಸ್ಕೃತದಲ್ಲಿದೆ ಎಂದು ಕವಿ ಮಹಲಿಂಗರಂಗ ಪ್ರಶ್ನಿಸಿದ್ದಾರೆ

5. ಕನ್ನಡ ನಾಡಿನ ಪಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ ?

ಉತ್ತರ : “ ಮಲ್ಲಿಗೆಯಲ್ಲದೆ ಸಂಪಗೆಯಲ್ಲದೆ ದಾಳಿಂಬವಲ್ಲದೊಪ್ಪುವ ಚೆಂದೆಂ ಗಲ್ಲದೆ ಮಾವಲ್ಲದೆ ಕೌಂ ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್ ” ಮಲ್ಲಿಗೆ , ಸಂಪಿಗೆ , ದಾಳಿಂಬೆ , ಒಪ್ಪುವ ಚಂದದ ಮಾವು, ತೆಂಗು, ಬಾಳೆ ಹೀಗೆ ಹಲವಾರು ಗಿಡ ಮರಗಳಿಂದ ಕೂಡಿರುವ ಕನ್ನಡನಾಡು ಅತ್ಯಂತ ಸಂಪದ್ಭರಿತವಾಗಿದೆ ಎಂದು ಕವಿ ಆಂಡಯ್ಯನವರು ಕನ್ನಡನಾಡಿನ ಪ್ರಾಕೃತಿಕ ವರ್ಣನೆಯನ್ನು ಸಾರಿದ್ದಾರೆ .

ಇ ) ಕೆಳಗಿನ ಪ್ರಶ್ನೆಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ .

1. ಕನ್ನಡ ನಾಡಿನ ವಿಸ್ತಾರ , ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ ?

ಉತ್ತರ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲೂ ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ . ಕನ್ನಡ ಸಂಸ್ಕೃತಿ , ಸೊಬಗು ವೈಭವ , ಸೌಂದರ್ಯ ಅಪೂರ್ವ ಹಾಗೂ ಅವಿಸ್ಮರಣೀಯ .

ಸಂಸ್ಕೃತ ಪ್ರಭಾವ ದಟ್ಟವಾಗಿದ್ದ ಆ ಕಾಲದಲ್ಲಿ ಕನ್ನಡದ ಹಿರಿಮೆ ಹಾಗೂ ಸಂಸ್ಕೃತಿಯನ್ನು ಮೆರೆದ ಸಾಹಸ ಅವರದು .

ಕನ್ನಡನಾಡು ವಿಸ್ತಾರವಾದ ಭೂಮಿ , ಇಲ್ಲಿನ ಜನ ಪ್ರತಿಭಾ ಸಂಪನ್ನರು , ವಿಶೇಷವಾಗಿ ‘ ಕುಣಿತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ’ಕಾವ್ಯ ಸೃಷ್ಟಿಯಲ್ಲಿ ಮೇಲುಗೈ ಪಡೆದವರು .

ಇಲ್ಲಿನ ಪ್ರಾಕೃತಿಕ ಸಂಪತ್ತು ಶ್ರೀಮಂತವಾದುದು ಭೌಗೋಳಿಕ ಹರವಿನ ಸಾಂಸ್ಕೃತಿಕ ವೈಭವ ಮನೋಹರವಾಗಿದೆ . ಇಲ್ಲಿ ಮಲ್ಲಿಗೆ , ಸಂಪಿಗೆಯ ಪರಿಮಳವಿದ ದಾಳಿಂಬೆ , ತೆಂಗು , ಮಾವು , ಬಾಳೆ ಹೀಗೆ ಹಲವಾರು ಗಿಡಮರಗ ಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ .

2. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ . ?

ಉತ್ತರ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲು ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ ಕನ್ನಡ ನಾಡಿನ ಜನತೆ ಕ್ರಮವರಿತು ನಡೆಯಬಲ್ಲರು , ನುಡಿದದ್ದನ್ನು ಅರಿತು ಪಾಲನೆ ಮಾಡಬಲ್ಲರು .

ಕಾವ್ಯರಚಿಸುವಂತಹ ಪರಿಣತರು , ಕನ್ನಡ ನಾಡಿನ ಜನತೆ ನಿಜಕ್ಕೂ ಚತುರರು ಎಂದು ಶ್ರೀ ವಿಜಯ ತನ್ನ ಕವಿರಾಜಮಾರ್ಗದಲ್ಲಿ ತಿಳಿಸಿದ್ದಾನೆ . ನಮಗೆ ತುಪ್ಪವೂ ಬೇಕು , ಎಣ್ಣೆಯು ಬೇಕು , ಸಂಸ್ಕೃತವೂ ಬೇಕು .

ಕನ್ನಡವೂ ಬೇಕು , ಆದರೆ ತುಪ್ಪದ ಅಸ್ವಾದು ಮಿಶ್ರಣ ಬೇಡ ಅಂದರೆ ಕನ್ನಡ ಸಂಸ್ಕೃತದ ಮಿಶ್ರಣಬೇಡ ಎಂದಿದ್ದಾನೆ . ಶುದ್ಧ ಕನ್ನಡದೊಳ್ ತಂದಿಕ್ಕುವುದೆ ಸಕ್ಕದಮಂ ಎಂದಿದ್ದಾನೆ

ಕವಿ ನಯಸೇನ , ಕಪಿಸಂತತಿ ಸೇತುವೆಯನ್ನು ಕಟ್ಟಿದಂತೆ , ಹರನು , ನರನು ಮುಗಿಲನ್ನು ಒತ್ತಿ ಹಿಡಿದಂತೆ , ಕವಿಗಳು ಶ್ರೇಷ್ಟವಾದ ಕೃತಿಗಳನ್ನು ರಚಿಸಿದರು

ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದ್ರರ ಶ್ರೇಷ್ಟತೆಯನ್ನು ವರ್ಣಿಸಿದ್ದಾನೆ ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣನೆಂತೆ , ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಆಳಿದ ಹಾಲಿನಂತೆ , ಸುಲಭವೂ ರುಚಿಯುಳ್ಳದ್ದೂ

ಆಗಿದೆ ಆದ್ದರಿಂದ ಕನ್ನಡ ಭಾಷೆಯಿಂದಲೆ ಮೋಕ್ಷಗಳಿಸಿಕೊಂಡರೆ ಸಾಕು ಸಂಸ್ಕೃತದಲ್ಲೆನಿದೆ ಎಂದು ಕವಿ ಮಹಲಿಂಗರಂಗರು ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಅಭಿಮಾನದಿಂದ ನುಡಿದಿದ್ದಾರೆ

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ , ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಕವಿರಾಜಮಾರ್ಗಕಾರ ಶ್ರೀವಿಜಯ ಕನ್ನಡ ನಾಡಿನ ಜನಪದರನ್ನು ಹೊಗಳುವ ಸಂದರ್ಭದಲ್ಲಿ ಹೇಳಿದ್ದಾನೆ . ಪ್ರಾಚೀನ ಜನಪದರಿಗೆ ಅಕ್ಷರದ ಅರಿವು ಇಲ್ಲದಿದ್ದರು ಸಹ ,

ದೇಶಿ ನುಡಿಯಲ್ಲಿ ಉತ್ತಮವಾದ ಸಾಹಿತ್ಯರಚನಾ ಸಾಮರ್ಥ್ಯವನ್ನು ಹೊಂದಿದ್ದರು . ಶಾಸ್ತ್ರ ಸಾಹಿತ್ಯವನ್ನು ಅರಿಯದಿದ್ದರೂ ಅದಕ್ಕೆ ಸರಿಸಮಾನವಾದ ಸಾಹಿತ್ಯವನ್ನು ರಚಿಸಿದ್ದರು ಎಂದು ಹೇಳುವಾಗ ಈ ಮಾತು ಬಂದಿದೆ

ಸ್ವಾರಸ್ಯ : ಕನ್ನಡ ನಾಡಿನ ಜನಪದರ ಸಾಹಿತ್ಯ ಶಕ್ತಿಯ ಬಗ್ಗೆ , ಕನ್ನಡ ನಾಡು , ನುಡಿ , ಜನತೆಯ ಬಗೆಗಿರುವ ಈ ಮಾತುಗಳು ಸ್ವಾರಸ್ಯಕರವಾಗಿವೆ .

2. ತಕ್ಕುದೆ ಬೆರೆಸಲೆ ಧೃತಮುಮಂ ತೈಲಮುಮಂ .

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ “ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅನೇಕ ಕವಿಗಳು ಕನ್ನಡದಲ್ಲಿ ಉತ್ತಮ ಕಾವ್ಯಗಳನ್ನು ರಚಿಸಿದರೂ ಅದನ್ನು ಸಂಸ್ಕೃತಮಯವಾಗಿ ಮಾಡಿಬಿಟ್ಟರು . ಇದನ್ನು ಕಂಡ ಕವಿ ನಯಸೇನ ನಮಗೆ ತುಪ್ಪವೂ ಬೇಕು ,

ಎಣ್ಣೆಯೂ ಬೇಕು , ಸಂಸ್ಕೃತವೂ ಬೇಕು , ಕನ್ನಡವೂ ಬೇಕು . ಆದರೆ ಎಣ್ಣೆ ತುಪ್ಪದ ಆಸ್ವಾದು ಮಿಶ್ರಣ ಬೇಡ ಎಂದು ಹೇಳುವ ಸಂದರ್ಭದಲ್ಲಿ ಕವಿ ನಯಸೇನನು ಈ ಮಾತನ್ನು ಹೇಳಿದ್ದಾನೆ .

ಸ್ವಾರಸ್ಯ : ಎಣ್ಣೆ ತುಪ್ಪ ಹೇಗೆ ಬೇರೆ ಬೇರೆ ರುಚಿಯಾಗಿರುತ್ತವೆಯೇ ಹಾಗೆಯೇ ಕನ್ನಡ ಭಾಷೆ , ಸಂಸ್ಕೃತ ಭಾಷೆಗಳು ಸಹ ಅದರಿಂದ ಇವುಗಳ ಮಿಶ್ರಣ ಕಾವ್ಯ ರಚನೆ ಬೇಡ ಎಂಬ ಮಾತಿನಲ್ಲಿ ಕನ್ನಡ ಭಾಷೆಯ ಬಗ್ಗೆ ತೋರಿರುವ ಅಭಿಮಾನ ಸ್ವಾರಸ್ಯಕರವಾಗಿದೆ .

3. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ: ಕಪಿ ಸಂತತಿಯು ಕಡಲಿಗೆ ಸೇತುವೆಯನ್ನು ಕಟ್ಟಿದಂತೆ , ಹರನು ನರನು ಮುಗಿಲನ್ನು ಗಂಟಲಲ್ಲಿ ಒತ್ತಿ ಹಿಡಿದಂತೆ , ಕನ್ನಡ ಕವಿಗಳು ಹಂತ ಹಂತವಾಗಿ ಕಾವ್ಯಗಳನ್ನು ರಚಿಸುತ್ತಾ ,

ಉತ್ತಮ ಕೃತಿಗಳನ್ನು ರಚಿಸಿ ಕವೀಂದ್ರರೇ ಆದರೆಂದು ಹೇಳುವ ಸಂದರ್ಭದಲ್ಲಿ ನೇಮಿಚಂದ್ರ ಕನ್ನಡ ಕವಿಗಳ ಮಹತ್ವವನ್ನು ತಿಳಿಸುತ್ತಾ ಹೇಳಿದ್ದಾರೆ .

ಸ್ವಾರಸ್ಯ : ಕನ್ನಡ ನಾಡಿನ ಕವಿಗಳು ತಮ್ಮ ಕಾವ್ಯಗಳಲ್ಲಿ ಎಂತಹ ವಿಷಯಗಳನ್ನಾದರೂ ಕಟ್ಟಿ ಕೊಡುವ ಶಕ್ತಿ ಉಳ್ಳವರು ಎಂದು ಅವರ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ .

9th Kannada Naadu Nudi | ಕನ್ನಡ ನಾಡು ನುಡಿ ಪದ್ಯದ ನೋಟ್ಸ್

4. ಕಳೆದ ಸಿಗುರಿನ ಕಬ್ಬಿನಂದದಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ “ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣನೆಂತೆ ಸಿಗುರು ತೆಗೆದ ಕಬ್ಬಿನಂತೆ , ಉಷ್ಟ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ .

ಮೋಕ್ಷವನ್ನು ಗಳಿಸಿಕೊಳ್ಳಲು ಈ ಭಾಷೆಯೇ ಸಾಕು ಸಂಸ್ಕೃತದಲ್ಲೆನಿದೆ ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಕವಿ ಮಹಲಿಂಗರಂಗರವರು ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಕನ್ನಡ ಭಾಷೆಯನ್ನು ಕಲಿಯಲು ಸರಳವೂ , ಸುಂದರವೂ ಆದ ಭಾಷೆಯಾಗಿದೆ ಕನ್ನಡವನ್ನು ಬೇಗ ಕಲಿತು ಮೋಕ್ಷ ಸಂಪಾದನೆ ಮಾಡಬಹುದು ಎಂಬ ಕವಿ ಕನ್ನಡಾಭಿಮಾನದ ಮಾತು ಸ್ವಾರಸ್ಯಕರವಾಗಿದೆ .

5. ದಾಳಿಂಬವಲ್ಲದೊಪುವ ಚೆಂದೆಂ

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕನ್ನಡ ನಾಡು ಮಲ್ಲಿಗೆ , ಸಂಪಿಗೆಯ ಪರಿಮಳವಿದೆ ದಾಳಿಂಬೆ , ತೆಂಗು , ಮಾವು , ಬಾಳೆ ಹೀಗೆ ಹಲವಾರು ಗಿಡಮರಗಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ . ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಆಂಡಯ್ಯ ಕವಿಗೆ ಕನ್ನಡ ನಾಡು , ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ .

ಕೊಟ್ಟಿರುವ ಪದ್ಯಭಾಗಗಳನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .

ಪದನರದು ನುಡಿಯಲುಂ ನುಡಿ ‌

ದುದನಟಿದಾರಯಲುಮಾರ್ಪರಾ ನಾಡವರ್ಗಳ್|

ಚದುರರ್ ನಿಜದಿಂ ಕುಚಿತೋ‌

ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್|

 

ಮಲ್ಲಿಗೆಯಲ್ಲದೆ ಸಂಪಗೆ|

ಯಲ್ಲದೆ ದಾಳಿಂಬವಲ್ಲದೊಡ್ಡುವ ಚೆಂದೆಂ||

ಗಲ್ಲದೆ ಮಾವಲ್ಲದೆ ಕೌಂ|

ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್||                      -ಆಂಡಯ್ಯ

No comments: