ಸಪ್ತಾಕ್ಷರಿ ಮಂತ್ರ (ಗದ್ಯ-8)
- 'ಮುದ್ದಣ' ಎಂಬ ಕಾವ್ಯನಾಮದಿಂದ ಪ್ರಸಿದ್ಧಿಗೆ ಬಂದಿರುವ ಲಕ್ಶ್ಮೀ ನಾರಾಯಣ ಕವಿಯ ಊರು ನಂದಳಿಕೆ. ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆಸೇರಿದ ಒಂದು ಗ್ರಾಮ.
- ಈತನ ಜನನ ಕ್ರಿ. ಶ. ೧೮೭೦ನೆಯ ಜನವರಿ ೨೪ರಂದು .
- ಈತನ ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಶ್ಮಿ.
- ಮುದ್ದಣ ಜಯಂತಿಯನ್ನು ಪ್ರತಿವರ್ಷ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಆಚರಿಸಲಾಗುತ್ತದೆ.
- ನಂದಳಿಕೆ ಬಾಲಚಂದ್ರರಾವ್ ನೇತೃತ್ವದಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.
- ಕವಿ ಮುದ್ದಣ ಸ್ಮಾರಕ ಭವನವನ್ನು ೧೯೮೭ರಲ್ಲಿ ನಿರ್ಮಿಸಲಾಯಿತು.
ಈತನ ಪ್ರಮುಖ ಕೃತಿಗಳೆಂದರೆ : ‘ ರತ್ನಾವತಿ ಕಲ್ಯಾಣ ‘ ಮತ್ತು ‘ ಕುಮಾರವಿಜಯ ‘ ( ಯಕ್ಷಗಾನ ಪ್ರಸಂಗಗಳು ) , ವಾರ್ಧಕ ಷಟ್ನದಿಯಲ್ಲಿ ರಚಿಸಲ್ಪಟ್ಟ ‘ ಶ್ರೀರಾಮಪಟ್ಟಾಭಿಷೇಕಂ ‘ ಕಾವ್ಯ , ಹಳಗನ್ನಡ ಶೈಲಿಯಲ್ಲಿ ಬರೆಯಲ್ಪಟ್ಟ ‘ ಅದ್ಭುತರಾಮಾಯಣ ‘ ಮತ್ತು ‘ ಶ್ರೀರಾಮಾಶ್ವಮೇಧಂ ‘ ಗದ್ಯಕಾವ್ಯಗಳು ಮುದ್ದನಿಂದ ರಚಿತವಾದುವು . * ‘ ಹೊಸಗನ್ನಡದ ಅರುಣೋದಯದ ಮುಂಗೋಳಿ ‘ ಎಂಬ ಪ್ರಶಂಸೆಗೆ ಭಾಜನನಾಗಿದ್ದಾನೆ .
* ಅವರು ೧೯೦೧ ರ ಫೆಬ್ರವರಿ ೧೫ ರಂದು ಇಹಲೋಕ ತ್ಯಜಿಸಿದರು . ( ಪ್ರಸ್ತುತ ಗದ್ಯಭಾಗವನ್ನು ‘ ಸಪ್ತಾಕ್ಷರಿ ಮಂತ್ರ ‘ ಗದ್ಯಭಾಗವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ , ‘ ಮುದ್ದ ಭಂಡಾರ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ಮುನಿಗಳಲ್ಲಿರುವ ಮಂತ್ರದ ಶಕ್ತಿ ಯಾವುದು ?
ಉತ್ತರ : ಬೇಡಿದ ವಸ್ತುವನ್ನು ನೀಡುವ ಮಂತ್ರದ ಶಕ್ತಿ ಮುನಿಗಳಲ್ಲಿದೆ .
2 , ತಪಸ್ವಿಗಳಿಗೆ ಬೇರೆ ಗೊಡವೆ ಇಲ್ಲದಿರಲು ಕಾರಣವೇನು ?
ಉತ್ತರ : ಬೇಡಿದ ವಸ್ತುಗನ್ನು ನೀಡುವ ಮಂತ್ರದ ಶಕ್ತಿ ಇರುವುದರಿಂದ ತಪಸ್ವಿಗಳು ಬೇರೆಗೊಡವೆ ಇಲ್ಲ.
3. ರಾಘವನ ಯಜ್ಞಾಶ್ಚ ಯಾರ ಆಶ್ರಮವನ್ನು ಹೊಕ್ಕಿತು ?
ಉತ್ತರ : ರಾಘವನ ಯಜ್ಞಾಶ್ವ ಅರಣ್ಯಕ ಮುನಿಯ ಆಶ್ರಮವನ್ನು ಹೊಕ್ಕಿತು .
4. ಮನೋರಮೆಯಲ್ಲಿ ಮೂಡಿದ ಸಂದೇಹವೇನು ?
ಉತ್ತರ : ‘ ಸಾವಿರ ಸಾವಿರ ಸಂಖ್ಯೆಯಲ್ಲಿದ್ದ ಸೈನಿಕರಿಗೆ ಭೋಜನವನ್ನು ನೀಡಲು ಆರಣ್ಯಕ ಮುನಿಗೆ ಹೇಗೆ ಸಾಧ್ಯವಾಯಿತು ‘ ಎಂದು ಮನೋರಮೆಗೆ ಸಂದೇಹ ಮೂಡಿತು .
5. ಮುದ್ದಣನಿಗೆ ಸಿದ್ಧಿಸಿದ ಮಂತ್ರದ ಹೆಸರೇನು ?
ಉತ್ತರ : ಮುದ್ದನಿಗೆ ಸಿದ್ಧಿಸಿದ ಮಂತ್ರದ ಹೆಸರು ‘ ಭವತಿ ಭಿಕ್ಷಾಂದೇಹಿ ‘
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಮುದ್ದಣನಿಗೆ ಒಲಿದ ಮಂತ್ರದ ಬಗ್ಗೆ ಮನೋರಮೆಯ ಪ್ರತಿಕ್ರಿಯೆ ಏನು ?
ಉತ್ತರ : ಮುದ್ದಣನು ತನಗೆ ಒಲಿದಿರುವ ಮಂತ್ರ ‘ ಭವತಿ ಭಿಕ್ಷಾಂದೇಹಿ ‘ ಎಂದು ಮನೋರಮೆಗೆ ಹೇಳಿದಾಗ ಅವಳು ಅರೆಮುನಿಸಿನಿಂದ : “ ಹೋಗು , ರಮಣ , ನಿನ್ನ ಮಾತನ್ನು ಕೇಳಿ ನಾನು ನಿಜವೆಂದೇ ಭಾವಿಸಿದೆ . ನೀನು ಮೋಸದ , ಕೊಂಕಿನ ಮಾತನ್ನು ಈ ರೀತಿಯಲ್ಲಿ ಹೇಳುತ್ತಿರುವೆ ಎಂದು ನನಗೆ ತಿಳಿಯಲಿಲ್ಲ . ನೀನು ಕವಿಯೋ ಅಥವಾ ಹಾಸ್ಯಗಾರನೋ ” ಎಂದು ಪ್ರತಿಕ್ರಿಯಿಸುತ್ತಾಳೆ .
2. ತನ್ನ ಆಶ್ರಮಕ್ಕೆ ಬಂದ ಅತಿಥಿಗಳನ್ನು ಅರಣ್ಯಕ ಹೇಗೆ ಸತ್ಕರಿಸಿದನು ?
ಉತ್ತರ : ಬಂದವರಿಗೆ ಕೈಗೆ , ಕಾಲಿಗೆ ನೀರುಕೊಟ್ಟು ಕುಳ್ಳಿರಿಸಿ , ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ , ಹೂವಿನಿಂದ ಅಲಂಕರಿಸಿ , ಪರಿಮಳಭರಿತವಾದ ಶ್ರೀಗಂಧವನ್ನು ಸಿಂಪಡಿಸಿ , ಜೊತೆಯಲ್ಲಿದ್ದು ಅವರೊಡನೆ ಹಿತವಾಗಿ ಮಾತನಾಡಿ ಉಪಚರಿಸಿದನು .
3. ಕವಿಗಳಿಗೆ ಒಲಿದಿರುವ ಮಂತ್ರದ ಮಹಿಮೆಯೇನು ?
ಉತ್ತರ : ಕವಿಗಳು ತಮಗೆ ಒಲಿಯುದಿರುವ ಒಂದು ಮಂತ್ರದಿಂದ ಮೂರು ಜಗವನ್ನು ನಾಶಮಾಡುವ , ಹೊಗಳುವ , ತೆಗಳುವ , ಕೊಳ್ಳುವ , ಆಳುವ , ತಾಳುವ , ಹೂಳುವ , ಹೇಳುವ , ಬಾಳುವ , ಶೃಂಗಾರವನ್ನು ವರ್ಣಿಸುವ ಶಕ್ತಿ ಇದೆ ಎಂದು ಕವಿಗಳ ಮಂತ್ರದ ಮಹಿಮೆಯನ್ನು ಕುರಿತು ಮುದ್ದಣ ಹೇಳಿದ್ದಾನೆ .
ಇ ] ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ ,
1. ಮುದ್ದಣನಿಗೆ ಒಲಿದ ಮಂತ್ರವನ್ನು ತಿಳಿದುಕೊಳ್ಳುವ ವಿಚಾರದಲ್ಲಿ ಗಂಡ – ಹೆಂಡತಿಯರ ನಡುವೆ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ( ಮುದ್ದಣನು ಮನೋರಮೆಗೆ ಅಶ್ವಮೇಧಯಾಗದ ಕಥೆಯನ್ನು ಹೇಳುತ್ತಿದ್ದಾಗ ಯಜ್ಞದ ಕುದುರೆ ಆರಣ್ಯಕ ಎಂಬ ಋಷಿಯ ಆಶ್ರಮವನ್ನು ಪ್ರವೇಶಿಸಿದಾಗ ಆ ಋಷಿಯು ಶತ್ರುಘ್ರಾದ್ಯರನ್ನು ಸತ್ಕರಿಸಿದ ಬಗೆಯನ್ನು ವರ್ಣಿಸುತ್ತಾನೆ . ಆಗ ಮನೋರಮೆ ಮುದ್ದಣನನ್ನು ಪಶ್ನಿಸುತ್ತಾಳೆ ….. ] ಮನೋರಮೆ : ಆರಣ್ಯಕ ಮುನಿ ಸಾವಿರ ಸಾವಿರ ಲೆಕ್ಕದಲ್ಲಿದ್ದ ಸೈನ್ಯಕ್ಕೆ ಭೋಜನ ನೀಡಿ ತೃಪ್ತಿಪಡಿಸಿದನೆ ? ಅವನಿಗೆ ಇದು ಹೇಗೆ ಸಾಧ್ಯವಾಯಿತು ? ಮುದ್ದಣ : ಮತ್ತೇನು ಮುನಿಗಳ ಒಂದು ಜಪ – ತಪ – ಮಂತ್ರದ ಶಕ್ತಿ ಬೇಡಿದ ದ್ರವ್ಯವನ್ನು ( ವಸ್ತುವನ್ನು ಕೂಡಲೆ ತಂದುಕೊಡುವುದು , ಮನೋರಮೆ : ಓಹೋ ! ಜಪದ ಶಕ್ತಿಯ ಸಹಾಯ ಇರುವುದರಿಂದಲೇ ತಪಸ್ವಿಗಳು ಬೇರೊಂದರ ಚಿಂತೆಯಿಲ್ಲ . ನೀವು ಅಂತಹ ಒಂದು ಮಂತ್ರವನ್ನು ಹಿರಿಯ ತಪಸ್ವಿಯಿಂದ ಉಪದೇಶ ಪಡೆದುಕೊಂಡರೆ ಆಗುವುದಿಲ್ಲವೇ ? ಮುದ್ದಣ : ನನ್ನ ಗುರುವಿನ ಕಡೆಯಿಂದ ನನಗೂ ಚಿಕ್ಕಂದಿನಲ್ಲೆ ಉಪದೇಶವಾಗಿದೆ . ಮನೋರಮೆ : ನನ್ನ ಪ್ರಿಯನೇ ಅದು ಯಾವುದೋ ಆ ಮಂತ್ರವನ್ನು ನನಗೆ ಹೇಳಾ . ಮುದ್ದಣ : ಎಲೆ ಹೆಣ್ಣೆ ನೀನು ಯಾರಲ್ಲೂ ಎಂದೆಂದಿಗೂ ಹೇಳಬಾರದು , ಜೋಕೆ ! ಮನೋರಮೆ : ನಿನ್ನಾಣ , ಕುಲದೇವರ ಮೇಲಾಣೆ ! ಎಂದಿಗೂ ಬೇರೆಯವರಲ್ಲಿ ಹೇಳುವುದಿಲ್ಲ . ಮುದ್ದಣ : ( ಹಾಸ್ಯದಿಂದ ) ‘ ಭವತಿ ಭಿಕ್ಷಾಂ ದೇಹಿ ‘ ಎಂಬುವುದು ಇದೇ ಕವಿಗಳಿಗೆ ಸಿದ್ಧಿಸಿರುವ ಹೆಮ್ಮೆಯ ಸಪ್ತಾಕ್ಷರಿ ಮಂತ್ರವಾಗಿದೆ . ಮನೋರಮೆ : ( ಆರೆಮುನಿಸಿನಿಂದ ) ಹೋಗು , ನಿನ್ನ ಮಾತನ್ನು ನಿಜವೆಂದೇ ನಂಬಿದೆ . ನಿನ್ನ ಮೋಸದ ಮಾತನ್ನು ಅರಿಯದಾದೆ .
ಉತ್ತರ : ಮುದ್ದನು ಋಷಿಗಳಿಗಿರುವಂತೆ ತನಗೂ ಮಂತ್ರ ಶಕ್ತಿ ಒಲಿದಿದೆ ಎಂದು ಮನೋರಮೆಗೆ ಹೇಳುತ್ತಾನೆ . ಅದನ್ನು ಅವಳು ನಿಜವೆಂದೇ ಭಾವಿಸಿ ‘ ಆ ಮಂತ್ರ ಯಾವುದು ? ‘ ಎಂದಾಗ ಅವನು ‘ ಆ ಮಂತ್ರವನ್ನು ನಿನಗೆ ಹೇಳುತ್ತೇನೆ . ಆದರೆ ಅದನ್ನು ಬೇರೆ ಯಾರಲ್ಲೂ ಹೇಳಬಾರದು ‘ ಎಂದು ಅವಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸುತ್ತಾನೆ . ಯಾರಲ್ಲಿಯೂ ಹೇಳುವುದಿಲ್ಲ ಎಂದು ಅವಳು ಆಣೆ ಮಾಡುತ್ತಾಳೆ . ಆಗ ಅವನು ತನಗೆ ಒಲಿದಿರುವ ಮಂತ್ರ ” ಭವತಿ ಭಿಕ್ಷಾಂದೇಹಿ ” ಎಂದು ಹೇಳುತ್ತಾನೆ . ಅದನ್ನು ಕೇಳಿ ಮನೋರಮೆಗೆ ನಿರಾಸೆಯಾಗುತ್ತದೆ . ಆದ್ದರಿಂದ ಅವಳು “ ನೀನು ಕೊಂಕಿನ ಮಾತನ್ನು ಈ ರೀತಿಯಲ್ಲಿ ಹೇಳುತ್ತಿರುವೆ ಎಂದು ನನಗೆ ತಿಳಿಯಲಿಲ್ಲ . ನೀನು ಕವಿಯೋ ಅಥವಾ ಹಾಸ್ಯಗಾರನೋ ” ಎಂದು ಮುನಿಸಿನಿಂದ ಹೇಳುತ್ತಾಳೆ ,
ಈ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1. ‘ ರಾಮಾಶ್ವಮೇಧ ‘ ಕೃತಿಯಲ್ಲಿ ಮುದ್ದಣ ಪರೋಕ್ಷವಾಗಿ ತನ್ನ ಬಾಳಿನ ಕತೆಯನ್ನು ಬಿಚ್ಚಿಟ್ಟಿದ್ದಾನೆ ಎಂಬುದನ್ನು ‘ ಸಪ್ತಾಕ್ಷರಿ ಮಂತ್ರ ‘ ಪಾಠದ ಆಧಾರದಿಂದ ಸಮರ್ಥಿಸಿ
ಉತ್ತರ : ರಾಮಾಶ್ವಮೇಧ ಕಥೆಯನ್ನು ಹೇಳ ಹೊರಡುವ ಕವಿ ಕಾವ್ಯದ ಮಧ್ಯದಲ್ಲಿ ತಮ್ಮ ಜೀವನದ ವಾಸ್ತವತೆಯನ್ನು ಬಿಚ್ಚಿಡುವುದು ಒಂದು ವೈಶಿಷ್ಟ್ಯವೇ ಸರಿ , ಇದು ಮುದ್ದಣ ಮನೋರಮೆಯರ ಸಲ್ಲಾಪವೆಂದೇ ಖ್ಯಾತಿ ಪಡೆದಿದೆ . ಕಾವ್ಯ ಧರ್ಮದೊಳಗೆ ಜೀವನ ಧರ್ಮವನ್ನು ಬೆರೆಸಿ ಹೇಳುವ ಕವಿಯ ಕಲೆಗಾರಿಕೆಯನ್ನು ಮುದ್ದಣನಲ್ಲಿ ಕಾಣಬಹುದಾಗಿದೆ , ಎಷ್ಟೇ ಕಷ್ಟಗಳಿದ್ದರೂ ಮನಸ್ಸನ್ನೇ ಸುಡುವ ಚಿಂತೆಯಿದ್ದರೂ ನವಿರಾದ ಹಾಸ್ಯ ಅವುಗಳನ್ನು ಸ್ವಲ್ಪಕಾಲ ಮರೆಯುವಂತೆ ಮಾಡುತ್ತದೆ . ‘ ಶ್ರೀರಾಮಾಶ್ವಮೇಧ ‘ ಕೃತಿಯಲ್ಲಿ ಮಡದಿ ಮನೋರಮೆ ( ನಿಜನಾಮ ಕಮಲಾಬಾಯಿ ) ಯೊಡನೆ ಸಂವಾದದಲ್ಲಿ ನಿರತನಾದಾಗ ವ್ಯಕ್ತವಾಗುವ ಮಾತುಗಳು ಮುದ್ದಣನ ಕಷ್ಟ ಜೀವನದ ಪ್ರತೀಕವೇ ಆಗಿವೆ . ಪಕೃತ ಗದ್ಯಭಾಗದಲ್ಲಿ ‘ ಸಪ್ತಾಕ್ಷರೀ ಮಂತ್ರದ ಶ್ರೇಷ್ಠತೆಯ ನೆಪದೊಂದಿಗೆ ತನ್ನ ಹಾಗೂ ಅಂದಿನ ಕವಿಗಳ ದಾರಿದ್ರವನ್ನು ಪರೋಕ್ಷವಾಗಿ ಮುದ್ದಣ ವ್ಯಕ್ತಪಡಿಸಿದ್ದಾನೆ , ಹೊರನೋಟಕ್ಕೆ ಕುತೂಹಲಕಾರಿಯೂ ಹಾಸ್ಯಮಯವೂ ಆಗಿದ್ದರೆ ಒಳಗೆ ದಾರುಣ ವ್ಯಥೆಯ ಕಥೆ ಯಲ್ಲಿ ಅಡಗಿರುವುದನ್ನು ಇಲ್ಲಿ ಕಾಣಬಹುದು .
2. ಶುಭಾದ್ಯರನ್ನು ಅರಣ್ಯಕನು ಸತ್ಕರಿಸಿದ ವಿಚಾರದಲ್ಲಿ ಮುದ್ದಣ ಮನೋರಮೆಯರ ಮಧ್ಯೆ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ರಾಘವನ ಯಜಾರವು ಆರಣ್ಯಕ ಎಂಬ ತಪಸ್ವಿಯ ಪವಿತ್ರ ಆಶ್ರಮಕ್ಕೆ ಪ್ರವೇಶಿಸುತ್ತಿರುವುದನ್ನು ಕಂಡು ಶತುಪ್ಪ ಮೊದಲಾದವರು ಮುನಿಗಳ ದರ್ಶನಕ್ಕೆಂದು ಆಶ್ರಮದ ಒಳಗೆ ಹೋದರು . ಆಗಮಿಸಿದ ಈ ಅತಿಥಿಗಳನ್ನು ಅರಣ್ಯಕ ಮುನಿಗಳು ಬಹಳ ಗೌರವದಿಂದ ಬರಮಾಡಿಕೊಂಡು ತಮ್ಮ ಆತಿಥ್ಯದಿಂದ ಸತ್ಕರಿಸಿದರು . [ ಹೀಗೆ ಕಥೆ ಹೇಳುತ್ತಿದ್ದ ಮುದ್ದಣನು ಇನ್ನು ಮುಂದುವರೆದು ಏನೋ ಹೇಳಬೇಕೆಂದು ಮಾತು ಮುಂದುವರಿಸುತ್ತಿರುವಾಗ ಮನೋರಮೆಗೆ ಮಧ್ಯದಲ್ಲಿ ಸಂಶಯವುಂಟಾಗಿ ಮುದ್ದಣನನ್ನು ಮುಂದಿನಂತೆ ಕೇಳುತ್ತಾಳೆ . ಆಗ ಅವರಿಬ್ಬರ ಸಲ್ಲಾಪ ಆರಂಭವಾಗುತ್ತದೆ . ಮನೋರಮೆಯು ” ನನ್ನ ಚೆಲುವ ಆತಿಥ್ಯವೆಂದರೇನು ? ಬರಿಯ ವಾಯುಪಚಾರವೇ ? ” ಎಂದಾಗ ಮುದ್ದಣ : “ ಅಲ್ಲ ಅಲ್ಲ , ಬರಿಯ ವಾಯುಪಚಾರವಲ್ಲ . ಬಂದವರಿಗೆ ಕೈಗೆ , ಕಾಲಿಗೆ ನೀರುಕೊಟ್ಟು ಕುಳ್ಳಿರಿಸಿ , ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ ಜೊತೆಯಲ್ಲಿದ್ದು ಅವರೊಡನೆ ಹಿತವಾಗಿ ಮಾತನಾಡಿ , ಗೌರವಿಸುವುದು . ” ಎನ್ನುತ್ತಾನೆ . ಆಗ ಆಶ್ಚರ್ಯಗೊಂಡ ಮನೋರಮೆ : ” ಹಾಗಿದ್ದರೆ , ಸಾವಿರ ಸಾವಿರ ಲೆಕ್ಕದಲ್ಲಿದ್ದ ಅಷ್ಟೊಂದು ದೊಡ್ಡ ಸೈನ್ಯಕ್ಕೆ ಊಟಕೊಟ್ಟು ತೃಪ್ತಿಪಡಿಸಿದನೆ ? ಅವನಿಗೆ ( ಮುನಿಗೆ ) ಇದು ಹೇಗೆ ಸಾಧ್ಯವಾಯಿತು ? ” ಎನ್ನುತ್ತಾಳೆ . ಅದಕ್ಕೆ ಮುದ್ದಣನು “ ಮತ್ತೇನು ! ಮುನಿಗಳ ಒಂದು ಜಪ – ತಪ – ಮಂತ್ರದ ಶಕ್ತಿಯೇನು ಕಿರಿದೆ ? ಬೇಡಿದ ದ್ರವ್ಯವನ್ನು ( ವಸ್ತುವನ್ನು ) ಕೂಡಲೆ ತಂದುಕೊಡುವುದು , ” ಎಂದು ಸಮರ್ಥಿಸುತ್ತಾನೆ .
ಉ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1. ” ಎನ್ನುವರೊಂದಿರಕೆ ನಗುವ“
ಉತ್ತರ : ಆಯ್ಕೆ : – ಈ ವಾಕ್ಯವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ ಮುದ್ದಣ ಭಂಡಾರ ‘ ಕೃತಿಯಿಂದ ಆರಿಸಲಾದ ‘ ಸಪ್ತಾಕ್ಷರಿ ಮಂತ್ರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .ಈ ಸಂದರ್ಭ- ಆರಣ್ಯಕ ಮುನಿಗಳು ತಮಗಿರುವ ಮಂತ್ರ ಶಕ್ತಿಯಿಂದ ಅತಿಥಿಗಳಿಗೆ ಸತ್ಕಾರ ಮಾಡಲು ಸಾಧ್ಯವಾಯಿತು ಎಂದು ಹೇಳಿದಾಗ ಮನೋರಮೆಯು ‘ ತಪಸ್ವಿಗಳಿಗೇನು ಸಂಸಾರದ ಚಿಂತೆಯೇ ? ನಿಮ್ಮಂತಹ ಕವಿಗಳು ಸಂಸಾರದ ಗೊಡವೆ ಇಲ್ಲದೆ ಹಾಳು ಕಥೆ ಬರೆದುಕೊಂಡಿರುವಿರಿ , ನೀವೂ ಕೂಡ ಹಿರಿಯ ಮುನಿಗಳಿಂದ ಮಂತಶಕ್ತಿಯ ಉಪದೇಶ ಪಡೆದುಕೊಂಡರಾಗದೆ ? ‘ ಎಂದು ಛೇಡಿಸಿದ ಸಂದರ್ಭದಲ್ಲಿ ಮುದ್ದಣನು ಈ ಮಾತನ್ನು ಹೇಳುತ್ತಾನೆ . ಸ್ವಾರಸ್ಯ- ಹಿಂದೆ ಕವಿ – ಸಾಹಿತಿಗಳು ಸಾಹಿತ್ಯರಚನೆಯಲ್ಲಿ ಮುಳುಗಿದ್ದು , ಬಡತನದಿಂದ ಸಂಸಾರವನ್ನು ನಡೆಸುತ್ತಿದ್ದ ಬಗ್ಗೆ ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ .
2. ‘ ಸಾಲಮೀ ಪರಿಪಾಸಂ ”
ಉತ್ತರ : ಆಯ್ಕೆ : – ಈ ವಾಕ್ಯವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ ಮುದ್ದಣ ಭಂಡಾರ ‘ ಕೃತಿಯಿಂದ ಆರಿಸಲಾದ ‘ ಸಪ್ತಾಕ್ಷರಿ ಮಂತ್ರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮುದ್ರನನು ತನೆಗೆ ಒಲಿದಿರುವ ಮಂತ್ರ ‘ ಭವತಿ ಭಿಕ್ಷಾಂದೇಹಿ ‘ ಎಂದು ಹೇಳಿದಾಗ ಮನೋರಮೆ ಹುಸಿಮುನಿಸಿನಿಂದ “ ನಿನ್ನ ಮಾತನ್ನು ನಿಜವೆಂದೇ ನಂಬಿದೆ . ನೀನೇನು ಕವಿಯೋ ಹಾಸ್ಯಗಾರನೋ ಎಂದು ಹೇಳತ್ತಾಳೆ . ಆ ಸಂದರ್ಭದಲ್ಲಿ ಮುದ್ದಣನು ” ಈ ಹಾಸ್ಯ ಇಲ್ಲಿಗೇ ಸಾಕು , ಮುಂದಿನ ಕಥೆಯನ್ನು ಕೇಳು ‘ ಎಂದು ಕಥೆ ಮುಂದುವರೆಸುತ್ತಾನೆ .
ಸ್ವಾರಸ್ಯ : – ಇಲ್ಲಿ ಮುದ್ದಣನ ಹಾಸ್ಯ ಪ್ರಜ್ಞೆ , ಮುದ್ದಣ ಮತ್ತು ಆತನ ಪತ್ನಿಯ ನಡುವಿನ ಸರಸ – ಸಲ್ಲಾಪಗಳು ಸ್ವಾರಸ್ಯಕರವಾಗಿ ಮೂಡಿಬಂದಿದೆ .
3“ಎನಗಿದಚ್ಚರಿ ಎಂತುಟಾರ್ತಂ”
ಉತ್ತರ : ಆಯ್ಕೆ : – ಈ ವಾಕ್ಯವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ ಮುದ್ದಣ ಭಂಡಾರ ‘ ಕೃತಿಯಿಂದ ಆರಿಸಲಾದ ‘ ಸಪ್ತಾಕ್ಷರಿ ಮಂತ್ರ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : – ಮುದ್ದಣನು ಮನೋರಮೆಗೆ ರಾಮಾಶ್ವಮೇಧದ ಕಥೆ ಹೇಳುತ್ತಾ ಯಜ್ಞದ ಕುದುರೆ ಆರಣ್ಯಕ ಮುನಿಗಳ ಆಶ್ರಮವನ್ನು ಪ್ರವೇಶಿಸಿದಾಗ ಶತ್ರುಪ್ತಿ ಮೊದಲಾದವರನ್ನು ಮುನಿಗಳು ಸತ್ಕರಿಸಿದ ಬಗೆಯನ್ನು ವರ್ಣಿಸಿದ ಸಂದರ್ಭದಲ್ಲಿ ಮನೋರಮೆ ಈ ಮಾತನ್ನು ಹೇಳುತ್ತಾಳೆ . ಅಶ್ರಮವಾಸಿಗಳಾಗಿದ್ದುಕೊಂಡು ಸಾವಿರಾರು ಜನರಿಗೆ ಸತ್ಕರಿಸಲು ಹೇಗೆ ಸಾಧ್ಯವಾಯಿತು ? ಎಂದು ಅಚ್ಚರಿಗೊಂಡು ಅವಳು ಹೀಗೆ ಹೇಳುತ್ತಾಳೆ .
ಸ್ವಾರಸ್ಯ : – ಮುನಿಯಾದವರು ಸಾವಿರಾರು ಜನರಿಗೆ ಸತ್ಕಾರ ಮಾಡಿದ ಪಂಸಗವನ್ನು ಕೇಳಿ ಮನೋರಮೆ ಅಚ್ಚರಿ ಪಟ್ಟಿರುವುದು ಇಲ್ಲಿ ಸ್ವಾರಸ್ಯವಾಗಿದೆ .
4. “ ಅಪ್ಪುದಪ್ಪುದು ತಪ್ಪೇಂ
ಉತ್ತರ : ಆಯ್ಕೆ : – ಈ ವಾಕ್ಯವನ್ನು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ ಮುದ್ದಣ ಭಂಡಾರ ‘ ಕೃತಿಯಿಂದ ಆರಿಸಲಾದ ‘ ಸಪ್ತಾಕ್ಷರಿ ಮಂತ ‘ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ- ಸಾವಿರಾರು ಜನರಿಗೆ ಸತ್ಕಾರ ಮಾಡಲು ಅರಣ್ಯಕ ಮುನಿಗೆ ಹೇಗೆ ಸಾಧ್ಯವಾಯಿತು ಎಂದು ಮನೋರಮೆ ಮುದ್ದಣನನ್ನು ಕೇಳಿದಾಗ ಮುನಿಗಳಿಗೆ ಹಲವಾರು ಮಂತ್ರಗಳ ಶಕ್ತಿ ಇದೆ ಎಂದು ಮುದ್ದಣ ಹೇಳುತ್ತಾನೆ . ಆಗ ಮನೋರಮೆ ” ಓಹೋ ಆದ್ದರಿಂದಲೇ ತಪಸ್ತಿಗಳಿಗೆ ಯಾವುದೇ ಚಿಂತ ಇಲ್ಲ ” ಎಂದು ಹೇಳಿದ ಸಂದರ್ಭದಲ್ಲಿ ಮುದ್ದನು ಈ ಮಾತನ್ನು ಹೇಳುತ್ತಾನೆ . ಸ್ವಾರಸ್ಯ ಮುನಿಯಾದವರಿಗೆ ಮಂತ್ರಗಳ ಶಕ್ತಿ ಇರುವುದರಲ್ಲಿ ತಪ್ಪೇನಿದೆ ? ಎಂದು ಮುದ್ದಣ ಸಮರ್ಥಿಸಿರುವುದು ಇಲ್ಲಿ ಸ್ವಾರಸ್ಯವಾಗಿದೆ .
ಊ] ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
1. ಮೃಷ್ಟಾನ್ನ : ¸ ಸವರ್ಣದೀರ್ಘ ¸ಸಂಧಿ :: ಒಡನಿರ್ದು : ಲೋಪಸಂಧಿ
2. ಕಾವ್ಯ : ಕಬ್ಬ :: ಆಶ್ವರ್ಯ : ಅಚ್ಚರಿ
3. ಮನ್ನಿಸಿ : ಗೌರವಿಸಿ :: ಬಾವನ್ನ : ಸುಗಂಧ (ಶ್ರೀಗಂಧ)
4.ಕುವೆಂಪು : ಕುಪ್ಪಳ್ಳಿ :: ಮುದ್ದಣ : ನಂದಳಿಕೆ
ಭಾಷಾಭ್ಯಾಸ
ಅ. ಕೊಟ್ಟಿರುವ ಸಮಾಸಪದಗಳನ್ನು ವಿಗ್ರಹಿಸಿ, ಸಮಾಸವನ್ನು ಹೆಸರಿಸಿ.
ಚಳಿಗಾಲ = ಚಳಿಯಾದ + ಕಾಲ – ಕರ್ಮಧಾರಯ ಸಮಾಸ
ಯಜ್ಞತುರಂಗ = ಯಜ್ಞದ + ತುರಗ –ತತ್ಪುರುಷ ಸಮಾಸ
ಬಾಯುಪಚಾರ = ಬಾಯಿಯಿಂದ+ಉಪಚಾರ -ತತ್ಪುರುಷ ಸಮಾಸ
ಸವಿಗೂಳು = ¸ ಸವಿಯಾದ +ಕೂಳು – ಕರ್ಮಧಾರಯ ಸಮಾಸ
ಮೃಷ್ಟಾನ್ನ = ಮೃಷ್ಟಾವಾದ + ಅನ್ನ – ಕರ್ಮಧಾರಯ ಸಮಾಸ
ಏಕಾಕ್ಷರೀ = ಏಕವಾದ + ಅಕ್ಷರೀ – ದ್ವಿಗುಸಮಾಸ
ಪಂಚಾಕ್ಷರೀ = ಪಂಚಗಳಾದ + ಅಕ್ಷರೀ – ದ್ವಿಗು ಸಮಾಸ
ಮೂಜಗ = ಮೂರು + ಜಗ – ದ್ವಿಗು ಸಮಾಸ
ಸಪ್ತಾಕ್ಷರೀ = ಸಪ್ತಗಳಾದ ದ + ಅಕ್ಷರೀ – ದ್ವಿಗು ಸಮಾಸ