8ನೇ ತರಗತಿ ಗೆಳೆತನ ಪದ್ಯ ಕನ್ನಡ ನೋಟ್ಸ್
ಪದ್ಯ ಭಾಗ
೩. ಗೆಳೆತನ – ಚೆನ್ನವೀರ ಕಣವಿ
ಕೃತಿಕಾರರ ಪರಿಚಯ
ಕನ್ನಡದ ಪ್ರಮುಖ ಕವಿಗಳಲ್ಲಿ ಚೆನ್ನವೀರ ಕಣವಿ (1928) ಒಬ್ಬರು. ಗದಗ ಜಿಲ್ಲೆಯ ಹೊಂಬಳದವರು. ನವೋದಯ ಮತ್ತು ನವ್ಯ ಮಾರ್ಗಗಳ ಸಮನ್ವಯ ಸಾಧಿಸಿದ ಕವಿಯೆಂದೇ ಪ್ರಸಿದ್ಧರು. ಆಕಾಶಬುಟ್ಟಿ, ಭಾವಜೀವಿ,ಮಧುಚಂದ್ರ, ದೀಪಧಾರಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಕಾವ್ಯಾಕ್ಷಿ,ಚಿರಂತನ ದಾಹ ಇವರ ಪ್ರಮುಖ ಕವನ ಸಂಕಲನಗಳು. ಕರ್ನಾಟಕಅಕಾಡೆಮಿ ಗೌರವ ಪ್ರಶಸ್ತಿ,1981 ರಲ್ಲಿ ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿವೆ.ಗೆಳೆತನ ಕವನವನ್ನು ಚೆನ್ನವೀರ ಕಣವಿ ಅವರ ಆಕಾಶಬುಟ್ಟಿ ಕವನಸಂಕಲನ (ಪುಟ35-36) ದಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ .
ಪದಗಳ ಅರ್ಥ
ಅಪ್ಪುಕಯ್- ಒಪ್ಪಿಕೊಳ್ಳು, ಸ್ವೀಕರಿಸು; ಅಹಮಿಕೆ – ಅಹಂಕಾರ ; ತಂಗು – ಇಳಿದುಕೋ, ಬೀಡುಬಿಡು ;
ದುರ್ಭರ- ತಾಳಲಾಗದ; ದೋಷ – ತಪ್ಪು, ಕುಂದುಕೊರತೆ; ನುಡಿ – ಮಾತು ; ನೆವ – ಕಾರಣ ; ಪರಿಸರಿಸು – ಹರಡು,ವಿಸ್ತರಿಸು;
ಬವಣೆ – ಕಷ್ಟ ; ಬಾಗು – ಮಣಿ, ಬಗ್ಗು ಶರಣಾಗು ; ಮಿಗಿಲು – ಶ್ರೇಷ್ಠ ; ರಸಪಾಕ- ರುಚಿಯಾದಅಡುಗೆ;
ವಂಚನೆ – ಮೋಸ ; ಹದ – ಪಕ್ವತೆ, ಸರಿಯಾದ ಸ್ಥಿತಿ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ಕವಿ ಎಲ್ಲಿ ತಂಗಿದ್ದಾರೆ?
ಉತ್ತರ : ಕವಿ ಗೆಳೆತನದ ಸುವಿಶಾಲ ಆಲದ ಮರದಡಿಯ ತಂಪಾದ ನೆರಳಿನಲ್ಲಿ ತಂಗಿದ್ದಾರೆ.
2. ಕವಿ ಮೌನದಲ್ಲಿ ಏನನ್ನು ನುಂಗಿದ್ದಾರೆ?
ಉತ್ತರ : ಕವಿ ಮೌನದಲ್ಲಿ ಬಹಳಷ್ಟು ತಾಳಲಾಗದ ಕಷ್ಟಗಳನ್ನು, ನೋವುಗಳನ್ನ , ತಾಪಗಳನ್ನು ನುಂಗಿದ್ದಾರೆ.
3. ಗೆಳೆತನದ ಮನಸ್ಸಿನ ಭಾವನೆ ಹೇಗಿದೆ?
ಉತ್ತರ : ಗೆಳೆತನದ ಮನಸ್ಸಿನ ಭಾವನೆಯು ಬಾನಿನಷ್ಟು ಆಗಲ, ಎದೆ ತಿಳಿಯಾದ ಕೊಳದಂತೆ, ಭಾವವು
ಶುದ್ಧ ಸ್ಪಟಿಕ ಬೆಳದಿಂಗಳಂತೆ ಇದೆ.
4. ಉಪ್ಪು ಮತ್ತು ತಾಯಿಯ ಬಗೆಗಿರುವ ಗಾದೆ ಯಾವುದು?
ಉತ್ತರ : ಉಪ್ಪು ಮತ್ತು ತಾಯಿಯ ಬಗೆಗಿರುವ ಗಾದೆ ಯಾವುದು ಎಂದರೆ “ಉಪ್ಪಿಗಿಂತ ರುಚಿಯಿಲ್ಲ,
ತಾಯಿಗಿಂತ ಬಂಧುವಿಲ್ಲ”
ಆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
1. ಗೆಳೆತನದಲ್ಲಿ ಯಾವ ದುರ್ಗುಣಗಳು ಇಲ್ಲವೆಂದು ಹೇಳಲಾಗಿದೆ?
ಉತ್ತರ : ಇಲ್ಲಿ ವಂಚನೆಯಿಲ್ಲ ಚಂಚಲತೆಯಿನಿತಿಲ್ಲ ಮೇಲು ಕೀಳುಗಳೆಂಬ ಭೇದವಿಲ್ಲ ಅಹಮಿಕೆಯ ನೆವಮಿಲ್ಲ
ದ್ವೇಷ ಗುಣಮಣಮಿಲ್ಲ ಸಣ್ಣತನ ಸಂಕೋಚ ಮೊದಲಿಗಿಲ್ಲ ಮನವು ಬಾನಗಲ, ಎದೆ ತಿಳಿಗೊಳದೊಲು ಭಾವ
ಶುದ್ಧ ಸ್ಫಟಿಕ – ಬೆಳದಿಂಗಳು. ಅಂದರೆ ಗೆಳೆತನದಲ್ಲಿ ವಂಚನೆ, ಮೋಸ, ಮೇಲು ಕೀಳು, ಭೇದ ಭಾವ,
ಅಹಂಕಾರ, ದ್ವೇಷ, ಸಣ್ಣತನ, ಸಂಕೋಚದ ದುರ್ಗುಣಗಳು ಇರುವುದಿಲ್ಲ. ಎಂದು ಕವಿ ಹೇಳಿದ್ದಾರೆ.
2. ಗೆಳೆತನದ ಶುಚಿರುಚಿ ಎಂಥದ್ದು?
ಉತ್ತರ : ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು ಇಲ್ಲೆಂಬ ಗಾದೆನುಡಿ ಕೇಳಿರುವೆನು. ಗೆಳೆತನದ
ಶುಚಿರುಚಿಯು ಇದಕು ಮಿಗಿಲಾಗಿಹುದು ಎಂಬ ಸಾಹಸ ಮಾಡೆ ದೋಷವೇನು? ಕಂಡ ಕಂಡವರೇನು
ಬಲ್ಲರಿದನು ಉಂಡವನು ಕಂಡಿಹನು ಇದರ ಹದನು. ಅಂದರೆ ಗೆಳೆತನದ ರುಚಿ ಶುಚಿಯು ಉಪ್ಪಿಗಿಂತಲೂ
ಹೆಚ್ಚು, ತಾಯಿಯ ಸಂಬಂಧಕ್ಕಿಂತಲೂ ಹೆಚ್ಚು. ಆದರೆ ಇದರ ರುಚಿಯನ್ನು ಕಂಡ ಕಂಡವರು ಕಾಣಲು
ಸಾಧ್ಯವಿಲ್ಲ. ಯಾರು ಸ್ನೇಹವನ್ನು ಮಾಡುತ್ತಾರೋ ಅವರು ಮಾತ್ರ ಇದರ ಹದವನ್ನು ತಿಳಿಯಬಲ್ಲರು ,
ಸವಿಯಬಲ್ಲರು ಎಂದು ಕವಿ ಹೇಳಿದ್ದಾರೆ.
3. ಜೀವನ ರಸಪಾಕವಾಗುವುದು ಹೇಗೆ?
ಉತ್ತರ : ಹೇಗೊ ಹೇಗೋ ಹೆಗಲುಗೊಟ್ಟು ಬಂದಿಹ ಕೂರ್ಪು ಆಗು ಹೋಗುಗಳಿಂಗೆ ಬಾಗದಂತೆ, ಸುಖಕೆ
ಸಂತಸಬಟ್ಟು ದು:ಖದಲಿ ಸಹಭಾಗಿ ಯಾಗೆ ಜೀವನ ರಸದ ಪಾಕದಂತೆ ಸರಸವಿರಸವನೆಲ್ಲ ಅಪ್ಪುಕಯ್ದು
ಬಾಳುವರು ಗಂಧದೊಲು ಜೀವ ತೆಯ್ದು! ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುವ, ಏನೇ ಆಗು ಹೋಗುಗಳ
ಬಂದರೂ ಸಹ ಈ ಪ್ರೀತಿಯಿಂದ ಸಂತೈಸುವ, ತನಗೆ ಸುಖ ಬಂದಾಗ ಸಂತಸಪಟ್ಟು, ದುಃಖದಲ್ಲಿ
ಸಹಭಾಗಿಯಾಗಿರುವ ಗೆಳೆಯ ದೊರೆತಾಗ ಜೀವನ ರಸಪಾಕವಾಗುವುದು ಸರಸವಿರಸದಲ್ಲಿ ಒಂದಾದರೆ
ಜೀವನ ರಸಪಾಕಗುತ್ತದೆ.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ
1. ಗೆಳೆತನ ಇಹಲೋಕಕಿರುವ ಅಮೃತ ಹೇಗೆ? ತಿಳಿಸಿ.
ಉತ್ತರ : ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು; ಜೀವನದನಂತ ದುರ್ಭರ
ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು-ಜೀವನ್ಮೃತ! ಈ ಜೀವನದಲ್ಲಿ ಸುಖಕ್ಕಿಂತ ಕಷ್ಟ ದುಃಖಗಳೇ ಹೆಚ್ಚು, ಜೀವನದಲ್ಲಿ
ಸಹಿಸಲು ಅಸಾಧ್ಯವಾದ ನೋವುಗಳನ್ನು ನಾವು ಮೌನವಾಗಿ ನುಂಗಬೇಕಾಗಿದೆ . ಆದರೆ ಇದೇ
ಇಹಲೋಕದಲ್ಲಿ ಇಂಥಹ ಕಷ್ಟದಲ್ಲಿ ಬಳಲುತ್ತಿರುವಾಗ ಆಲದ ಮರದಡಿಯಲ್ಲಿ ಸಿಗುವ ತಂಪಾದ
ನೆರಳಿನಂತಿರುವ ಗೆಳೆಯನು ದೊರೆತಾಗ ಆ ಗೆಳೆತನದ ಜೀವನ ಅಮೃತ ದೊರೆತಷ್ಟು (ಕುಡಿದಷ್ಟು)
ಸಂತಸವಾಗುವುದು. ಜೀವನದಲ್ಲಿ ಬರುವ ಕಷ್ಟನಷ್ಟಗಳನ್ನು ಸ್ನೇಹಿತರ ಬಳಿ ಹೇಳಿಕೊಂಡು, ಒಬ್ಬರ
ನೋವಿನಲ್ಲಿ, ನಲಿವಿನಲ್ಲಿ ಭಾಗಿಯಾಗಿ ಇರುವುದರಿಂದ ಗೆಳೆತನವು ಈ ಭೂಮಿಯ ಮೇಲಿರುವ
ಅಮೃತವಾಗಿದೆ. ಇಲ್ಲಿ ಮೋಸ, ವಂಚನೆ, ಚಂಚಲತೆ, ಭೇದಭಾವವಿಲ್ಲ, ದ್ವೇಷವಿಲ್ಲ ದುರ್ಗುಣಗಳು
ಇಲ್ಲದಿರುವುದರಿಂದ ಗೆಳೆತನವು ಇಹಲೋಕದ ಅಮೃತವಾಗಿದೆ.
2. ಗೆಳೆಯರ ಮನಸ್ಸಿನ ಭಾವನೆ ಹೇಗಿರುತ್ತದೆ? ವಿವರಿಸಿ
ಉತ್ತರ : ಇಲ್ಲಿ ವಂಚನೆಯಿಲ್ಲ ಚಂಚಲತೆಯಿನಿತಿಲ್ಲ ಮೇಲು ಕೀಳುಗಳೆಂಬ ಭೇದವಿಲ್ಲ ಅಹಮಿಕೆಯ ನೆವಮಿಲ್ಲ
ದ್ವೇಷ ಗುಣಮಣಮಿಲ್ಲ ಸಣ್ಣತನ ಸಂಕೋಚ ಮೊದಲಿಗಿಲ್ಲ ಮನವು ಬಾನಗಲ, ಎದೆ ತಿಳಿಗೊಳದೊಲು ಭಾವ
ಶುದ್ಧ ಸ್ಫಟಿಕ – ಬೆಳದಿಂಗಳು! ಅಂದರೆ ಗೆಳೆತನದಲ್ಲಿ ವಂಚನೆ, ಮೋಸ, ಮೇಲು ಕೀಳು, ಭೇದ ಭಾವ,
ಅಹಂಕಾರ, ದ್ವೇಷ, ಸಣ್ಣತನ, ಸಂಕೋಚದ ದುರ್ಗುಣಗಳು ಇರುವುದಿಲ್ಲ.ಗೆಳೆಯರ ಮನಸ್ಸು
ವಿಶಾಲವಾಗಿರುತ್ತದೆ. ಎದೆಯು ಕಲ್ಮಶವಿಲ್ಲದ ಕೊಳದಂತೆ ಇರುತ್ತದೆ. ಭಾವವು ಶುದ್ಧವಾದ ಸ್ಪಟಿಕದಂತೆ ಮತ್ತು
ಬೆಳದಿಂಗಳಿನ0ತೆ ಇದೆ. ಈ ರೀತಿಯ ಗೆಳೆಯರ ಮನಸ್ಸಿನಲ್ಲಿ ಇರುವ ಭಾವನೆಗಳು.
3. ಗೆಳೆಯರು ಹೇಗೆ ಬಾಳುತ್ತಾರೆ?
ಉತ್ತರ: “ಉಪ್ಪಿಗಿಂತಲೂ ರುಚಿಯಿಲ್ಲ , ತಾಯಿಗಿಂತ ಬಂಧುವಿಲ್ಲ’ ಎಂಬ ಗಾದೆ ಪ್ರಸಿದ್ಧಿಯಾಗಿದೆ. ನಮ್ಮ
ಗೆಳೆಯರ ಬದುಕು ಅದಕ್ಕಿಂತಲೂ ಮಿಗಿಲು, ಗೆಳೆತನವೆಂಬ ಶುಚಿ-ರುಚಿಯ ಬದುಕಿನ ಸವಿಯನ್ನು
ಉಣ್ಣುತ್ತಾರೆ. ಒಬ್ಬರನೊಬ್ಬರು ದೋಷ ಎಣಿಸುವ ಅಥವಾ ತಪ್ಪು ಹುಡುಕುವ ಸಾಹಸಕ್ಕಿ ಕೈ ಹಾಕುವುದಿಲ್ಲ.
ಇವರ ಗೆಳೆತನವನ್ನು ಬಲ್ಲವರೆ ಬಲ್ಲರು . ‘ಬೆಲ್ಲದ ಸವಿಯನು ಮೆದ್ದವನೇ ಬಲ್ಲನೆಂಬಂತೆ ಗೆಳೆತನವನ್ನು
ಹೊಂದಿರುವವರು ಮಾತ್ರ ಇವರ ಗೆಳೆತನವನ್ನು ಅರ್ಥಮಾಡಿಕೊಳ್ಳಬಲ್ಲರು. ಒಟ್ಟಾರೆ ಹೇಳುವುದಾರೆ
ಗೆಳೆಯರು ಒಬ್ಬರಿಗೊಬ್ಬರು ಹೆಗಲು ಕೊಟ್ಟು ಒಬ್ಬರ ಸಂತಸಕಂಡು ಮತೊಬ್ತ್ಬರು ಸುಖಿಸುತ್ತಾ , ಗೆಳೆಯನ
ದುಃಖದಲ್ಲಿ ತಾನು ಬಾಗಿಯಾಗಿ ಸಮರಸ ಜೀವನವನ್ನು ನಡೆಸುತ್ತಾ ಬಾಳುತ್ತಾರೆ.
ಈ. ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ಗೆಳೆತನದ ಮಹತ್ವವನ್ನು ಕಣವಿ ಅವರು ಹೇಗೆ ತಿಳಿಸಿದ್ದಾರೆ?
ಉತ್ತರ : ಕವನದಲ್ಲಿ ಗೆಳೆತನ, ಅದರ ಸವಿ, ಮಹತ್ವ ಹಾಗೂ ಅನ್ಯೋನ್ಯತೆಯ ಬಗ್ಗೆ ತಾತ್ವಿಕ ನೆಲೆಯಲ್ಲಿ
ಪ್ರಸ್ತಾಪಿಸಿದ್ದಾರೆ. ಗೆಳೆತನಕ್ಕೆ ಪೌರಾಣಿಕ, ಐತಿಹಾಸಿಕ ಹಾಗೂ ಸಮಕಾಲೀನ ಬದುಕಿನಲ್ಲಿ ಮಿಗಿಲಾದ
ಸ್ಥಾನವಿರುವುದನ್ನು ತಿಳಿಸಿಕೊಟ್ಟಿದ್ದಾರೆ. ಆಧುನಿಕ ಪ್ರಪಂಚದಲ್ಲಿ ಗೆಳೆತನ ವೈಯಕ್ತಿಕ ನೆಲೆಯಿಂದ
ವಿಶ್ವಸಾಮರಸ್ಯದ ನೆಲೆಗೆ ಧಾವಿಸುತ್ತಿರುವ ಸಂದರ್ಭದಲ್ಲಿ ಈ ಕವಿತೆ ಮಹತ್ವವನ್ನು ಪಡೆದಿದೆ. ಗೆಳೆತನ
ಎಂಬುದು ಒಂದು ವಿಶಾಲವಾದ ಆಲದ ಮರದ ನೆರಳಿನಲ್ಲಿ ಹರಡಿರುವ ತಂಪಾದ ನೆರಳಿನಂತಿದ್ದು ಆ
ನೆರಳಿನಲ್ಲಿ ತಂಗಿರುವೆವು. ಜೀವನದಲ್ಲಿ ಸಹಿಸಲಾಗದ ನೋವುಗಳನ್ನು ¸ ಸಂಕಟಗಳನ್ನು ಅನುಭವಿಸುತ್ತಿರುವ
ನಮಗೆ ಈ ಲೋಕದಲ್ಲಿ ಗೆಳೆತನ ಎಂಬುದು ಜೀವನಕ್ಕೆ ಅಮೃತವಿದ್ದಂತೆ. ಈ ಅಮೃತಮಯವಾದ
ಗೆಳೆತನದಿಂದಲೇ ನಮ್ಮ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿ ದೊರೆಯುವುದು. ಇದೇ ಕವಿತೆಯ
ಆಂತರ್ಯಭಾವ. ಗೆಳೆತನವು ಭೂಲೋಕದ ಅಮೃತ ಇದ್ದಂತೆ. ಗೆಳೆಯರಿಲ್ಲದ ಜೀವನ ವ್ಯರ್ಥವಾದ ಜೀವನ.
ನಮ್ಮ ನೋವು ನಲಿವು, ಕಷ್ಟನಷ್ಟಗಳನ್ನು ಅರ್ಥ ಮಾಡಿಕೊಂಡು ಸಹಾಯ ಮಾಡುವವರು ಗೆಳೆಯರು. ಆಗು
ಹೋಗುಗಳಿಂಗೆ ಬಾಗದಂತೆ, ಸುಖಕೆ ಸಂತಸಬಟ್ಟು ದು:ಖದಲಿ ಸಹಭಾಗಿ ಯಾಗೆ ಜೀವನ ರಸದ ಪಾಕದಂತೆ
ಇದ್ದಂತೆ ಅದ್ದರಿಂದ ಗೆಳೆತನದ ಮಹತ್ವವನ್ನು ಕಣವಿ ಅವರು ಹೇಳಿದ್ದಾರೆ .
ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ
1. “ಅದನುಳಿದರೇನಿಹುದು_ ಜೀವನ್ಮೃತ!”
ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ರಚಿಸಿರುವ ‘ಆಕಾಶಬುಟ್ಟಿ’ ಎಂಬ ಕವನ ಸಂಕಲನದಿಂದ
ಆಯ್ದ ‘ಗೆಳೆತನ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಜೀವನದನಂತ ದುರ್ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು ಗೆಳೆತನವೆ
ಇಹಲೋಕಕಿರುವ ಅಮೃತ ಅದನುಳಿದರೇನಿಹುದು-ಜೀವನ್ಮೃತ! ಎಂದು ವರ್ಣಿಸುವ ಸಂದರ್ಭವಾಗಿದೆ.
ಸ್ವಾರಸ್ಯ : ಗೆಳೆತನವನ್ನು ಕವಿ ಅಮೃತಕ್ಕೆ ಹೋಲಿಸಿದ್ದು, ಗೆಳೆತನ ಮಾಡಿದ ಗೆಳೆಯರು ಚಿರಂಜೀವಿಗಳಂತೆ
ಬದುಕುತ್ತಾರೆ. ಎಂದು ಗೆಳೆತನದ ಮಹತ್ತವವನ್ನು ಕವಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಿದ್ದಾರೆ.
2. “ಭಾವ ಶುದ್ಧ ಸ್ಫಟಿಕ_ ಬೆಳದಿಂಗಳು!”
ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ರಚಿಸಿರುವ ‘ಆಕಾಶಬುಟ್ಟಿ’ ಎಂಬ ಕವನ ಸಂಕಲನದಿಂದ
ಆಯ್ದ ‘ಗೆಳೆತನ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಗೆಳತನದಲ್ಲಿ ವಂಚನೆ, ಮೋಸ,ದ್ವೇಷ, ಸಂಕೋಚ, ಚಂಚಲತೆ, ಮೇಲು ಕೀಳು ಎಂಬ ಭಾವವು
ಇರುವುದಿಲ್ಲ. ಎಂದು ಗೆಳೆತನದಲ್ಲಿ ಯಾವ ಯಾವ ದುರ್ಗುಣಗಳು ಇರಬಾರದು ಎಂದು ವರ್ಣಿಸಿದ
ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಗೆಳತೆನದಲ್ಲಿ ಮನಸ್ಸು, ಹೃದಯವು ತಿಳಿಕೊಳದಂತೆ, ಭಾವವು ಸ್ಪಟಿಕದಂತೆ ಇರುತ್ತದೆ ಎಂದು
ಹೇಳಿರುವ ಮಾತು ಸ್ವಾರಸ್ಯಕರವಾಗಿದೆ.
3. “ಕಂಡ ಕಂಡವರೇನು ಬಲ್ಲರಿದನು”
ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ರಚಿಸಿರುವ ‘ಆಕಾಶಬುಟ್ಟಿ’ ಎಂಬ ಕವನ ಸಂಕಲನದಿಂದ
ಆಯ್ದ ‘ಗೆಳೆತನ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಗೆಳೆತನದ ಶುಚಿರುಚಿಯ ಮಹತ್ವವನ್ನು ವರ್ಣಿಸುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು
ಹೇಳಿದ್ದಾರೆ.
ಸ್ವಾರಸ್ಯ : ಗೆಳೆತನದ ಶುಚಿರುಚಿ ತಿಳಿಯಬೇಕಾದರೆ ಗೆಳೆತನ ಮಾಡಿ ಅದರ ಅನುಭವನ್ನು ಪಡೆದುಕೊಳ್ಳಬೇಕು
ಆಗ ಮಾತ್ರ ಗೆಳೆತನದ ನಿಜವಾದ ಅನುಭವವಾಗುತ್ತದೆ ಎಂಬ ಮಾತು ಬಹು ಸ್ವಾರಸ್ಯಪೂರ್ಣವಾಗಿ ಮೂಡಿ
ಬಂದಿದೆ.
4. “ಬಾಳುವರು ಗಂಧದೊಲು ಜೀವ ತೆಯ್ದು!”
ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ರಚಿಸಿರುವ ‘ಆಕಾಶಬುಟ್ಟಿ’ ಎಂಬ ಕವನ ಸಂಕಲನದಿಂದ
ಆಯ್ದ ‘ಗೆಳೆತನ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಗೆಳೆಯರು ಕಷ್ಟನಷ್ಟಗಳಲ್ಲಿ, ನೋವು ನಲಿವುಗಳಲ್ಲಿ, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ
ಜೀವನದ ರಸಪಾಕದಂತೆ ಸದಾ ಜೊತೆಗೆ ಇರುತ್ತಾರೆ. ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಗಂಧವು ತೀಡಿದಷ್ಟೂ ಸುವಾಸನೆ ಬೀರುತ್ತದೆ, ಹಾಗಯೇ ಸ್ನೇಹವು ಅರ್ಥ ಮಾಡಿಕೊಂಡಷ್ಟು
ಅದರ ಸುವಾಸನೆ ಎಲ್ಲೆಡೆ ಪಸರಿಸುತ್ತದೆ ಎಂದು ಹೇಳಿರುವುದು ಸ್ವಾರಸ್ಯಕರವಾಗಿದೆ .
ಊ. ಗುಂಪಿಗೆ ಸೇರದ ಪದವನ್ನು ಗುರುತಿಸಿ.
1. ಹೆಗಲುಗೊಟ್ಟು ಸಂತಸಬಟ್ಟು ಉಂಡವನು ತಿಳಿಗೊಳ
2. ಲೋಕ ಅಮೃತ ಎದೆ ಸಾಹಸ
3. ಭಾವಜೀವಿ ಕಾವ್ಯಾಕ್ಷಿ ದೀಪಧಾರಿ ಜೀವಧ್ವನಿ
4. ಬಾನು ಆಕಾಶ ಭಾನು ಗಗನ
ಕೊಟ್ಟಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ.
1. ಉಪ್ಪಿಗಿಂತಲು ರುಚಿಯು __ __ __ __ ___ ___ ಇದರ ಹದನು (ಆರು ಸಾಲು)
ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು
ಇಲ್ಲೆಂಬ ಗಾದೆನುಡಿ ಕೇಳಿರುವೆನು.
ಗೆಳೆತನದ ಶುಚಿರುಚಿಯು ಇದಕು ಮಿಗಿಲಾಗಿಹುದು
ಎಂಬ ಸಾಹಸ ಮಾಡೆ ದೋಷವೇನು?
ಕಂಡ ಕಂಡವರೇನು ಬಲ್ಲರಿದನು
ಉಂಡವನು ಕಂಡಿಹನು ಇದರ ಹದನು .