ಜನರು ಬರಲು ಆಸಕ್ತಿಯನ್ನು ತೋರುತ್ತಾರೆ. ಇದೆಲ್ಲ ಎಲ್ಲರಿಗೂ ತಿಳಿದಂತಹ ವಿಷಯವಾದರೂ ಮೈಸೂರಿನ ದಸರಾದ ಇತಿಹಾಸ ಹಾಗೂ ಅದರ ಮಹತ್ವದ ಬಗ್ಗೆ ಕೆಲವು ಕುತೂಹಲಕಾರಿ ಅಂತಹ ವಿಷಯಗಳನ್ನು ತಿಳಿಯೋಣ ಬನ್ನಿ.
412ನೇ ದಸರಾ
ಮೈಸೂರಿನ ಮಹಾರಾಜ ಆದಂತಹ ಒಂದನೇ ರಾಜ ಒಡೆಯರ್ 1610 ನೇ ಇಸವಿಯಲ್ಲಿ ದಸರಾವನ್ನು ಆರಂಭಿಸಿದರು. ಈ ಪ್ರಕಾರ ಮೈಸೂರಿನಲ್ಲಿ ನಡೆಯುತ್ತಿರುವುದು 412 ನೇ ದಸರಾ ವಾಗಿದೆ ಒಡೆಯರ್ ಆಳ್ವಿಕೆಗೂ ಮೊದಲು ವಿಜಯನಗರ ಸಾಮ್ರಾಜ್ಯದ ದೊರೆಯಾದ ಶ್ರೀ ಕೃಷ್ಣದೇವರಾಯ ಕಾಲದಲ್ಲಿ ದಸರಾವನ್ನು ಆಚರಿಸಲಾಯಿತು. ಕಾಲಕ್ರಮೇಣ ನಿಂತುಹೋಗಿದ್ದ ಪದ್ಧತಿಯನ್ನು ಒಂದನೇ ರಾಜ ಒಡೆಯರ್ ಮತ್ತೆ ಅದನ್ನು ಪ್ರಾರಂಭಿಸಿದರು.
ಪೌರಾಣಿಕ ಹಿನ್ನಲೆ
ಪುರಾಣ ಗ್ರಂಥವಾದ ದೇವಿ ಭಾಗವತದಲ್ಲಿ ಚಾಮುಂಡೇಶ್ವರಿ ಮಹಿಷಾಸುರನನ್ನು ವಧೆ
ಮಾಡುವ ಉಲ್ಲೇಖ ಇರುವುದನ್ನು ನಾವು ಗಮನಿಸಬಹುದು. ಕೋಣನತಲೆ ಇರುವಂತಹ ಮಹಿಷಾಸುರ ನಗರವನ್ನು ಆಳುತ್ತಿದ್ದ ಬ್ರಹ್ಮನಿಂದ ವರವನ್ನು ಪಡೆದ ಈತ ತನಗೆ ಆಗಿಲ್ಲವೆಂದು ಆತನು ಮೆರೆಯುತ್ತಿದ್ದನು ಆತನನ್ನು ಪಾರ್ವತಿಯು ಚಾಮುಂಡೇಶ್ವರಿಯ ರೂಪವನ್ನು ಧರಿಸಿ ಸಂಹರಿಸಿದಳು ಎಂಬುದು ಪುರಾಣಿಕ ಹಿನ್ನೆಲೆ ಈ ನಗರವನ್ನು ಮಹಿಷಾಸುರನ ಹಾಳುತ್ತಿದ್ದ ನಗರ ವಾದ್ದರಿಂದ ಮೈಸೂರು ಎಂಬ ಹೆಸರು ಬಂದಿದೆ.
ಮಡಿಕೇರಿಯಲ್ಲಿ ದಸರಾ ಉತ್ಸವ
ಹಿಂದಿನ ಕಾಲದಲ್ಲಿ ಮಡಿಕೇರಿಯಲ್ಲಿ ಮೈಸೂರಿನಲ್ಲಿರುವ ಆಚರಣೆಯಲ್ಲಿ ದಸರಾ ಉತ್ಸವ ನಡೆಯುತ್ತಿತ್ತು.1781 ರಿಂದ1809 ರವರಿಗೆ ಕೊಡಗನ್ನು ಆಳುತ್ತಿದ್ದ ಅಂತಹ ದೊಡ್ಡ ವೀರರಾಜೇಂದ್ರ ರಾಜರು ಆಯುಧ ಪೂಜೆ ಕುದುರೆ ಹಾಗೂ ಆನೆಯ ಜಂಬುಸವಾರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದರು ಕೊಡಗಿನ ರಾಜರನ್ನು ಅನಂತರ ದಸರಾ ಉತ್ಸವವನ್ನು ಅಲ್ಲಿ ಮಾಡುತ್ತಿರಲಿಲ್ಲ.
ಅಂಬಾರಿ ಇತಿಹಾಸ
750 ಕೆಜಿ ತೂಕದ ರತ್ನ ಖಚಿತ ಚಿನ್ನದ ಅಂಬಾರಿಯನ್ನು ಮೊದಲು ಮಹಾರಾಷ್ಟ್ರದ ದೇವಗಿರಿಯ ಸ್ಥಳದಲ್ಲಿ ಇತ್ತು. ತನ್ನ ಸಾಮ್ರಾಜ್ಯವು ನಾಶವಾಗುವಂತಹ ಸಂದರ್ಭದಲ್ಲಿ ದೇವಗಿರಿಯ ರಾಜನ್ ಆದಂತಹ ಮುಮ್ಮಡಿ ಸಿಂಗ ನಾಯಕರು ಅದನ್ನು ಬಳ್ಳಾರಿ ಬಳಿಯ ರಾಮದುರ್ಗದ ಕೋಟೆಯಲ್ಲಿ ಮುಚ್ಚುತ್ತಿದ್ದರು ದೆಹಲಿ ಸುಲ್ತಾನರ ದಾಳಿಯ ಸಂದರ್ಭದಲ್ಲಿ ಹಕ್ಕ-ಬುಕ್ಕರು ಅಂಬಾರಿಯನ್ನು ಹುತ್ತದಲ್ಲಿ ಮುಚ್ಚಿಟ್ಟಿದ್ದರು.
ವಿಧಾನದ ಸಾಮ್ರಾಜ್ಯ ಅಂತ್ಯವಾದ ಸಂದರ್ಭದಲ್ಲಿ ಹಕ್ಕ-ಬುಕ್ಕ ವಿಜಯನಗರ ಸಾಮ್ರಾಜ್ಯವನ್ನು ಆರಂಭಿಸಿ ಹಂಪೆಯನ್ನು ತಮ್ಮ ಎರಡನೇ ರಾಜಧಾನಿಯನ್ನಾಗಿ ಮಾಡಿಕೊಂಡರು ನಂತರ ಅಂಬಾರಿಯನ್ನು ಸ್ಥಳಾಂತರಿಸಿದರು ವಿಜಯನಗರ ಸಾಮ್ರಾಜ್ಯದ ವಿನಾಶದ ನಂತರ ಅಂಬಾರಿಯನ್ನು ಆಂಧ್ರಪ್ರದೇಶದ ಪೆನುಗೊಂಡ ಕ್ಕೆ ತೆಗೆದುಕೊಂಡು ಹೋಗಿ ಸುರಕ್ಷಿತವಾಗಿ ಇಡಲಾಯಿತು. ಮೈಸೂರಿನಲ್ಲಿ ಒಡೆಯರ್ ಆಡಲಿಕ್ಕೆ ಆರಂಭವಾದ ನಂತರ ಅದನ್ನು ಶ್ರೀರಂಗಪಟ್ಟಣಕ್ಕೆ ತರಲಾಯಿತು ಹೀಗೆ ಸುಮಾರು800 ವರ್ಷದ ಇತಿಹಾಸವನ್ನು ಅಂಬಾರಿ ಹೊಂದಿರುವುದನ್ನು ನಾವು ಗಮನಿಸಬಹುದಾಗಿದೆ.
ಶ್ರೀರಂಗಪಟ್ಟಣ
ಮೈಸೂರು ದಸರಾವನ್ನು ನಾವು ಮೈಸೂರಿನಲ್ಲಿ ಆಚರಿಸುತ್ತಿದ್ದೇವೆ ಆದರೆ ಇದು ಮೊದಲು ಪ್ರಾರಂಭವಾಗಿದ್ದು ಶ್ರೀರಂಗಪಟ್ಟಣದಲ್ಲಿ.1800
ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗವಣೆ ಮಾಡಿದ ನಂತರ
ದಸರಾ ಉತ್ಸವವನ್ನು ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಆದರೆ ಮೊದಲು ದಸರಾ ಆಚರಣೆ ಮಾಡಲಾಗಿದ್ದು ಶ್ರೀರಂಗಪಟ್ಟಣದಲ್ಲಿ