ಪದ್ಯ ಭಾಗ-6
ಪದ್ಯದ ಹೆಸರು : ಗಂಗವ್ವ ತಾಯಿ
ಅ . ಬಿಟಸ್ಥಳವನ್ನು ಕೆಳಗೆ ನೀಡಲಾದ ಸೂಕ್ತ ಪದಗಳಿಂದ ಭರ್ತಿಮಾಡಿರಿ .
- ಬಾರವ್ವ ತಾಯಿ ಗಂಗವ್ವ ತಾಯಿ .
- ಹೊಳೆಯವ್ವ ತಾಯಿ ನೀರವ್ವ ತಾಯಿ .
- ಮೈಮನಸ ಹೊಲಸೆಲ್ಲ ತೊಳೆಯನ್ನ ತಾಯಿ ,
- ನೀರವ್ವ ಗಂಗವ್ವ ಮಳೆಯಾಗಿ ಬಾರವ್ವ
- ಒಣಗೀದ ನೆಲದಾಗ ಹಸುರಾಗಿ ಹೊಳೆಯವ್ವ ,
ಆ . ಸಮಾನಾರ್ಥಕ ಪದಗಳನ್ನು ಬರೆಯಿರಿ .
- ನೀರು : ಜಲ , ಗಂಗೆ
- ನಭ : ಆಕಾಶ , ಆಗಸ , ಬಾನು
- ಕುಣಿ : ಹೊಂಡ
- ತಾಯಿ : ಅಮ್ಮ ಅವ್ವ . ಮಾತೆ
ಇ . ಒಂದು ವಾಕ್ಯದಲ್ಲಿ ಉತ್ತರಿಸಿರಿ .
1. ನೀರು ಎಲ್ಲೆಲ್ಲಿ ತುಂಬಬೇಕು ಎಂದು ಕವಿ ಹೇಳುತ್ತಾರೆ ?
ಉತ್ತರ : ನೀರು ನೆಲದ ಕಣ ಕಣದಾಗ ಹಾಗೂ ಮನದ ಪದಪದರಾಗದಾಗ ತುಂಬಬೇಕು ಎಂದು ಕವಿ ಹೇಳುತ್ತಾರೆ .
2. ನೀರು ಹೇಗೆಲ್ಲ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ ?
ಉತ್ತರ : ನೀರು ನೆಲದ ಒಳ ಹೊರಹೆಲ್ಲ , ಪಾಣದ ತುಂಬೆಲ್ಲಾ ನಗುನಗುತ , ನಲಿಯುತ , ಪುಟಿಯುತ್ತ , ಕುಣಿಯುತ್ತ , ಚಿಮ್ಮುತ್ತಾ , ಜಿಗುಯುತ್ತಾ , ಹರಿಯುತ್ತಾ , ಸುರುಯುತ್ತಾ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ .
3. ಒಣಗಿದ ನೆಲದಲ್ಲಿ ನೀರು ಹೇಗೆ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ ?
ಉತ್ತರ : ಒಣಗಿದ ನೆಲದಲ್ಲಿ ಹಸುರಾಗಿ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ .
4. ಈ ಕವನವನ್ನು ಬರೆದವರು ಯಾರು ?
ಉತ್ತರ : ಈ ಕವನವನ್ನು ಬರೆದವರು ಡಾ || ಸಿದ್ದಲಿಂಗ ಪಟ್ಟಣಶೆಟ್ಟಿಯವರು .
ಈ . ಕೊಟ್ಟಿರುವ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು ?
1. ನೆಲದ ಕಣಕಣದಾಗ ಮನದ ಪದಪದರಾಗ ,
ಉತ್ತರ : ಮಳೆ ಬಾರದೆ ಇದ್ದಾಗ ರೈತರು ಗಂಗವ್ವನನ್ನು ಕವಿಯ ಮೂಲಕ ಕರೆದಿದ್ದಾರೆ .
2. ಹರಿಯುತ್ತ ಸುರಿಯುತ್ತ ಧೋಧೋ ಬಾರವ್ವ
ಉತರ : ಜನತೆ ಗಂಗವ್ವನನ್ನು ಮಳೆಯಾಗಿ ಸುರಿಯುವಂತೆ ಹೇಳಿರುವುದನ್ನು ಕವಿ ಕವಿತೆಯ ಮೂಲಕ ಕರೆದಿದ್ದಾರೆ.
3. ಒಣಗೀದ ನೆಲದಾಗ ಹಸಿರುಸಿರು ಉಳಿಸಾಕ
ಉತ್ತರ : ಗಂಗವ್ವ ಮಳೆಯಾಗಿ ಏಕೆ ಸುರಿಯಬೇಕೆನ್ನುವ ಪ್ರಶ್ನೆಗೆ ಉತ್ತರವಾಗಿ ಕಎ ಗಂಗವ್ವ ಒಣಗಿರುವ ನೆಲಕ್ಕೆ ಹಸಿರು ಬೆಳೆಯುವಂತೆ ಮಾಡಲು ಬರಬೇಕೆಂದು ರೈತರ ಪ್ರತಿನಿಧಿಯಾಗಿ ಕವಿ ಗಂಗವ್ವನನ್ನು ಕರೆಯುತ್ತಿದ್ದಾರೆ .
4. ಜೀವದಾ ತುಣಕಾಗಿ ಮೈಮನಸ ಹೊಲಸೆಲ್ಲ .
ಉತ್ತರ : ಜೀವನದಲ್ಲಿ ಉಂಟಾಗಿರುವ ಎಲ್ಲಾ ರೀತಿಯ ಮೈ ಮನಸ್ಸಿನ ಕೊಳೆಯೆಲ್ಲ ತೆಗೆಯಲು ಗಂಗವ್ವ ಧರೆಗೆ ಇಳಿದು ಬಾ ಎಂದು ಕಏ ಗಂಗವ್ವನಿಗೆ ಕರೆದಿದ್ದಾರೆ .
ಈ . ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿರಿ .
1. ಗಂಗವ್ವ ಇದ್ದರೆ ಎಲ್ಲೆಲ್ಲಿ , ಏನೇನು ಆಗುವುದೆಂದು ಕವಿ ಹೇಳಿದ್ದಾರೆ ?
ಉತ್ತರ : ಗಂಗವ್ವ ಇದ್ದರೆ ಒಣಗಿದ ನೆಲದಲ್ಲಿ ಹಸಿರು ಅಲಂಕರಿಸುವುದು , ಹಸಿರು ಹಸಿರಾಗಿ ಬೆಳೆದು ಎಲ್ಲರ ಉಸಿರು ಉಳಿಸುವುದು , ಗಂಗವ್ವ ಬಂದರೆ ಜನರ ಮೈ ಮನಸ್ಸಿನ ಕೊಳೆಯೆಲ್ಲಾ ತೊಳೆಯಲ್ಪಟ್ಟು ಅವರು ಪರಿಶುದ್ಧರಾಗುವರು . ನದಿಯಾಗಿ ಹರಿದಾಗ ಹನಿ ಹನಿ ಕಣ ಕಣವೆಲ್ಲಾ ಜಗಿಸಿ ಎಲ್ಲೆಲ್ಲೂ ಸಂತೋಷ , ನಗು ನಲಿವು ಕಂಡುಬರುತ್ತದೆ .
2. ನೀರು ಯಾವ ಯಾವ ಕೆಲಸಕ್ಕೆ ಬೇಕು ಎಂದು ಕವಿ ಹೇಳಿದ್ದಾರೆ ?
ಉತ್ತರ : ನೀರು ಜನರ ಉಪಯೋಗಕ್ಕೆ ಪ್ರಾಣವಾಯುವಿನಷ್ಟೆ ಅಗತ್ಯವಾಗಿ ಮನುಷ್ಯನಿಗೆ ಕುಡಿಯಲು ಬೇಕು , ಮಳೆಯಾಗಿ ಸುರಿದರೆ ಮಾತ್ರ ನೆಲ ಹಸಿರಾಗುತ್ತದೆ . ಹಸಿರು ನೆಡಲು ಸಾಧ್ಯವಾಗುತ್ತದೆ . ಹಸಿರು ಎಲ್ಲರಿಗೂ ಬೇಕಾದ ಆಹಾರ ಕೊಟ್ಟು ಜೀವಿಗಳ ಉಸಿರನ್ನು ಉಳಿಸುತ್ತದೆ ನೀರು ಇಲ್ಲದೆ ಜನರ ಮೈಗಳು ಕೊಳಕಾಗಿದ್ದರೆ , ಅದನ್ನು ಸ್ವಚ್ಛಗೊಳಿಸಲು ನೀರು ಅಗತ್ಯವಾಗಿ ಬೇಕು , ನೀರು ಇಲ್ಲದೆ ಬರಗಾಲ ಬಂದಲ್ಲಿ ಜನರು ಮನಸ್ಸು ತೊಡಗಿಸುತ್ತಾರೆ . ಅದರ ಬದಲು ಎಲ್ಲರಿಗೂ ತೃಪ್ತಿಯಾಗಿ ಊಟ – ಬಟ್ಟೆ ಸಿಕ್ಕಲ್ಲಿ ಅವರ ಮನಸ್ಸು ಇಂಥಹ ಕೆಲಸಗಳಿಗೆ ಎಡೆ ಮಾಡುವುದಿಲ್ಲ , ಹೀಗೆ ಜನಕ್ಕೆ ಎಲ್ಲರಿಗೂ ಕವಿ ಹೇಳಿದಾಗ ನೀರು ಬೇಕು ಎಂದು .
ಊ . ಕೊಟ್ಟಿರುವ ಪದ್ಯದಲ್ಲಿ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ ,
ಬೆಳ್ಳಾನ ಎರಡೆತ್ತು ಬೆಳ್ಳಿಯ ಬಾರುಕೋಲು
ಹಳ್ಳಾದ ಮಾಗಿ ಹೊಡೆದಾವು | ಎತ್ತಿನ
ತೆಜ್ಞಾನ ಹೊಟ್ಟಿ ಹಸಿದಾವು .
ಮೊದಲು . ಎರಡನೇ ಹಾಗೂ ಮೂರನೇ ಸಾಲಿನ ಎರಡನೇ ಅಕ್ಷರ ‘ ಳ್ಳಾ ‘ ಪುನರಾವರ್ತನೆ ಆಗಿರುವುದರಿಂದ ಇದು ‘ ಆದಿ ಪ್ರಾಸ ‘ ಇದೆ .
No comments:
Post a Comment