ಸಂಕಲನಾತ್ಮಕ ಮೌಲ್ಯಮಾಪನ -1
ಅಂಕಗಳು -೧೦೦ ಪ್ರಥಮ ಭಾಷೆ -ಕನ್ನಡ ತರಗತಿ -೧೦
ಕೆಳಗಿನ ಪ್ರಶ್ನೆಗಳಿಗೆ ನಾಲ್ಕುಪರ್ಯಯ ಉತ್ತರವನ್ನು ನೀಡಲಾಗಿದೆ ಅದರಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ ಬರೆಯಿರಿ . 6x1=6
೧. ಜನೈಕ್ಯ ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ .
ಅ . ಗುಣ ಆ . ವೃದ್ಧಿ ಇ . ಲೋಪ ಈ . ಸವರ್ಣದೀರ್ಘ
೨. ಕ್ರಿಯಾಪದದ ಮೂಲ ರೂಪ .
ಅ . ಧಾತು ಆ .ನಾಮಪದ ಇ . ಪ್ರಾಸ ಈ . ವಿಭಕ್ತಿ
೩. ಒಬ್ಬರು ಹೇಳಿದ ಮಾತನ್ನೇ ಯಥಾವತಾಗಿ ಹೇಳುವಾಗ ಯಾವ ಲೇಖನಚಿನ್ಹೆ ಬಳಸಲಾಗುತ್ತದೆ .
ಅ . ಪ್ರಶ್ನಾರ್ಥಕ ಆ ಉದ್ಧರಣ ಇ. ಅಲ್ಪವಿರಾಮ ಈ . ವಿವಾರಣಾತ್ಮಕ
೪.ಇಮ್ಮಡಿ ಈ ಪದವು ಯಾವ ಸಮಾಸ ಪದವಾಗಿದೆ .
ಅ . ಗಮಕ ಸಮಾಸ ಆ . ಕ್ರಿಯಾ ಸಮಾಸ ಇ . ದ್ವಿಗು ಸಮಾಸ ಈ . ಕರ್ಮಧಾರೆಯ ಸಮಾಸ
೫. ತಕರಾರು ಈ ಪದ ಯಾವ ಭಾಷೆಯ ಪದವಾಗಿಧೆ .
ಅ . ಗ್ರೀಕ್ ಆ .ಉರ್ದು ಇ . ಪ್ರಶ್ಚಿಯನ್ ಈ . ಅರೇಬಿಕ್
೬ . ಒಂದು ಪೂರ್ಣ ಕ್ರಿಯಾಪಾದದಿಂದ ಸ್ವತಂತ್ರವಾಗಿರುವ ವಾಕ್ಯ .
ಅ .ಸ್ವತಂತ್ರ ವಾಕ್ಯ ಆ .ಮಿಶ್ರ ವಾಕ್ಯ ಇ .ಸಂಯೋಜಿತ ವಾಕ್ಯ ಈ .ಆಧ್ಯಾಹಾರಯುಕ್ತ ವಾಕ್ಯ
ಮೊದಲೆರಡು ಪದಗಳಿಗಿರುವ ಸಂಬಂದಂತೆ ಮೂರನೆಯ ಪದಕ್ಕೆ ಸರಿ ಸಂಬಂಧಿ ಪದ ಬರೆಯಿರಿ 4x1=4
೭. ಮತ್ತೆ ಮತ್ತೆ :ದ್ವಿರುಕ್ತಿ ::ಹಾಲು ಜೇನು :_____________
೮. ಮನೆಯಲ್ಲಿ :ಸಪ್ತಮಿ ::ಕಾಡಿನಿಂದ :______________
೯. ಕಂದ :ನಾಲ್ಕು ::ಷಟ್ಪದಿ :____________
೧೦. ದೃತಿ :ಧೈರ್ಯ ::ಆರ್ತಿ :____________
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ . 7x1=7
೧೧. ರಾಹಿಲನು ಯಾರು ?
೧೨.ಶ್ರೀ ರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗಹಿಸಿದಳು ?
೧೩. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
14. ನದಿಜಲಗಳು ಏನಾಗಿವೆ?
15. ಹಕ್ಕಿಯ ಗರಿ ಯಲ್ಲಿ ಯಾವ ಬಣಗಳಿವೆ?
16. ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು?
17. ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ?
ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ. 10x2=20
18. ಮಹಿಳೆಯ ಆರ್ತನಾದ ಕೇಳಿ ರಾಹುಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
19. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
20. ಸಾಮ್ರಾಟರ ರಾಜ್ಯಾಭಿಷೇಕ ವಾಗುವ ಸಿಂಹಾಸನದ ಮೇಲಿರುವ ಕಲ್ಲು ಪಾಟಿಯ ವಿಶೇಷತೆಯೇನು?
21. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
22. ಹಕ್ಕಿಯು ಯಾವ ಮೇರೆ ಮೀರಿ, ನೀರನು ಹೀರಿದೆ?
23. ಗಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?
24. ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು?
25. ವಿವೇಕಾನಂದರು ಹಿಂದಿಗೂ ಸತ್ಯ ಏಕೆ?
26. ವಸಂತ ಮುಖ ತೋರಲಿಲ್ಲ ಎಂಬ ಕವನದಲ್ಲಿ ಪ್ರಕೃತಿಯ ಸಂಭ್ರಮ ಹೇಗೆ ವ್ಯಕ್ತವಾಗಿದೆ?
27. ಯಾರಿಗೆ ವಸಂತ ಮುಖ ತೋರಲಿಲ್ಲ? ಪುಟ್ಟಿಯ ಪ್ರಶ್ನೆಗಳೇನು?
ಈ ಕೆಳಗಿನ ಸಾಹಿತಿ ಕವಿಗಳ ಕಾಲ ಸ್ಥಳ ಕೃತಿ ಹಾಗೂ ಪ್ರಶಸ್ತಿಗಳನ್ನು ಕುರಿತು ವಾಕ್ಯ ರೂಪದಲ್ಲಿ ಬರೆಯಿರಿ. 2x3=6
28. ವಿ ಕೃ ಗೋಕಾಕ್
29. ಕುಮಾರವ್ಯಾಸ
ಈ ಕೆಳಗಿನ ಪದ್ಯ ಭಾಗಕ್ಕೆ ಪ್ರಸ್ತಾರ ಹಾಕಿ ಗಣ ವಿಭಾಗಿಸಿ ಛಂದಸ್ಸಿನ ಹೆಸರನ್ನು ಬರೆಯಿರಿ. 1x3=3
30. ಪುಟ್ಟಿದ ನೂರ್ವರುಮೆನ್ನೊಡ
ವುಟ್ಟಿದ ನೂವ೯ರುಮಿದಚಿ೯ ಸತ್ತೊಡೆ ಕೊಪಂ
ಈ ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ ಸಮನ್ವಯ ಗೊಳಿಸಿ.1x3=3
31. ಅಚ್ಚೋದ ಸರೋವರವು ತ್ರೈಲೋಕ್ಯ ಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.
ಈ ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಗಾದೆಯ ಮಹತ್ವದೊಂದಿಗೆ ಬರೆಯಿರಿ. 1x3=3
32. ತಾಳಿದವನು ಬಾಳಿಯಾನು
ಅಥವಾ
ದೇಶ ಸುತ್ತು ಕೋಶ ಓದು
ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ. 1x3=3
33. "ಯಾರನ್ನು ತುಳಿದರೇನು? ಎಲ್ಲಿ ಹೆಜ್ಜೆ ಹಾಕಿದರೇನು? ಎಲ್ಲವೂ ಅಷ್ಟೆ! ಮಣ್ಣು! ಮಣ್ಣು!".
34. "ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು".
35." ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ"
36. ಪ್ರೀತಿಯ ಹಣತೆಯ ಹಚ್ಚೋಣ
37. ಜೀವ ಸತ್ತು ಹೋಗುವುದು ಗೊತ್ತ
38. ಮಾರಿಗೌತಣವಾಯ್ತು ನಾಳಿನ ಭಾರತವು
ಈ ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಸಿರಿ. 1x4=4
39. ಕಲುಷಿತವಾದೀ. _____ ಮತಗಳೆಲ್ಲವೂ___________
_____________________ _____________________
_____________________ ಅಥವಾ _____________________
_____________________ಮುಟ್ಟೋಣ. ________________ ಬಿತ್ತೋಣ.
ಈ ಕೆಳಗಿನ ಪದ್ಯ ಭಾಗವನ್ನು ಓದಿ ಅರ್ಥಮಾಡಿಕೊಂಡು ಅದರಲ್ಲಿ ಅಡಕವಾಗಿರುವ ಸಾರಾಂಶವನ್ನು ಬರೆಯಿರಿ. 1x4=4
40. ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿಹಾರುತಿದೆ ನೋಡಿದಿರಾ?
ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. 2x4=8
41. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು 'ಮಾದರಿ ಮೈಸೂರು' ರಾಜ್ಯ ಹೇಗಾಯಿತು?
ಅಥವಾ
ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.
42. ಕರ್ಣನಿಗೆ ಶ್ರೀ ಕೃಷ್ಣನು ಒಡ್ಡಿದ ಆಮಿಷಗಳೇನು?
ಅಥವಾ
ಪಾಂಡವರು ಸೋದರೆಂದು ತಿಳಿದಾಗ ಕರ್ಣನ ಮನಸ್ಥಿತಿಯನ್ನು ತಿಳಿಸಿ.
ಈ ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿಕೊಂಡು ಅದರಲ್ಲಿರುವ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಿರಿ. 2x2=4
43. ಆಲೂರು ವೆಂಕಟರಾಯರು ಅಖಂಡ ಕರ್ನಾಟಕದ ಕನಸುಗಳನ್ನು ನನಸಾಗಿಸಲು ಹೋರಾಟವನ್ನು ನಡೆಸುತ್ತಾ ಸ್ವಾತಂತ್ರ್ಯ ಭಾರತದ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದರು. ಭಾರತವನ್ನು ಬಿಟ್ಟು ಕರ್ನಾಟಕ ವಿಲ್ಲ, ಕರ್ನಾಟಕವನ್ನು ಬಿಟ್ಟು ಭಾರತವಿಲ್ಲ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಅಂದು ವಿದೇಶಿ ವಸ್ತುಗಳ ಮಾರಾಟದಿಂದ ಸ್ವದೇಶಿ ವಸ್ತುಗಳ ಮಾರಾಟ ಕಡಿಮೆಯಾಗಿ ನಮ್ಮ ಅನೇಕ ಕೈಗಾರಿಕೆಗಳು ಮೂಲೆ ಸೇರುತ್ತಾ ಬಂದವು ಇದನ್ನು ಪ್ರತಿಭಟಿಸಲು ತಲೆಯೆತ್ತಿದ ವಿದೇಶಿ ವಸ್ತುಗಳ ಬಹಿಷ್ಕಾರ ಸ್ವದೇಶಿ ವಸ್ತುಗಳ ಪುರಸ್ಕಾರ ಚಳುವಳಿಯಲ್ಲಿ ದುಮುಕಿ ಮಂಗಳೂರು ಹೆಂಚುಮತ್ತು ಸೀಸದ ಕಡ್ಡಿ ತಯಾರಿಸುವ ಕಾರ್ಖಾನೆಗಳ ಸ್ಥಾಪನೆಗೆ ಜನರನ್ನು ಹುರಿದುಂಬಿಸಿ ದರಲ್ದೆ ತಾವು ಸ್ಥಾಪಿಸಿ ಅವರಿಗೆ ಮಾದರಿಯಾದರು. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಶಿಕ್ಷಣದ ಪಾತ್ರ ಬಹಳ ದೊಡ್ಡದು ಆದರೆ ಭಾರತೀಯರು ಪಡೆಯುತ್ತಿದ್ದ ಶಿಕ್ಷಣ ಅವರಿಗೆ ಪ್ರದೇಶವನ್ನು ಸಂಸ್ಕೃತಿಯನ್ನು ಮೇರೆಸುತ್ತಲಿದ್ದಿತ್ತು. ಈ ಅಪಾಯವನ್ನು ತಪ್ಪಿಸಲು ನಮ್ಮ ದೇಶ ನಮ್ಮ ಸಂಸ್ಕೃತಿಗಳನ್ನು ಪೋಷಿಸುವ ರಾಷ್ಟ್ರೀಯ ಚಳುವಳಿಯ ಹಾಗ ಭಾರತದಲ್ಲೆಲ್ಲ ವ್ಯಾಪಿಸಿತು ವೆಂಕಟರಾಯರು ಚಳುವಳಿಯಲ್ಲಿಯೂ ಧುಮುಕಿ ಧಾರವಾಡದಲ್ಲಿ 'ಕರ್ನಾಟಕ ನೂತನ ವಿದ್ಯಾಲಯ' ಎಂಬ ರಾಷ್ಟ್ರೀಯ ವಿದ್ಯಾಲಯವನ್ನು ಸ್ಥಾಪಿಸಿದರು.
ಪ್ರಶ್ನೆಗಳು:
ಅ. ಆಲೂರು ವೆಂಕಟರಾಯರು ಸೇವೆಯ ಮೂಲಕ ಹೇಗೆ ಮಾದರಿ ಎನಿಸಿದರು?
ಆ. ಆಲೂರು ವೆಂಕಟರಾಯರು ರಾಷ್ಟ್ರೀಯ ವಿದ್ಯಾಲಯವನ್ನು ಸ್ಥಾಪಿಸಲು ಕಾರಣವೇನು?
44. ನಿಮ್ಮನ್ನು ಕೋಲಾರ ಜಿಲ್ಲೆಯ ಶ್ರೀಕಾಂತ್ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ಕೈಗೊಂಡಂತಹ ಶೈಕ್ಷಣಿಕ ಪ್ರವಾಸದ ವಿವರವನ್ನು ಕುರಿತು ಶಿವಮೊಗ್ಗದಲ್ಲಿರುವ ನಿಮ್ಮ ತಾಯಿಗೆ ಪತ್ರ ಬರೆಯಿರಿ. 1x5=5 ಅಥವಾ
ನಿಮ್ಮ ಶಾಲೆಯಲ್ಲಿ ಆಚರಿಸುವ ಗಾಂಧಿ ಜಯಂತಿ ದಿನಾಚರಣೆಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಪತ್ರ ಬರೆಯಿರಿ.
ಕೆಳಗಿನ ಯಾವುದಾದರೂ ಒಂದು ವಿಷಯವನ್ನು ಕುರಿತು 15 ವಾಕ್ಯಗಳಿಗೆ ಕಡಿಮೆ ಇಲ್ಲದಂತೆ ಪ್ರಬಂಧವನ್ನು ಬರೆಯಿರಿ. 1x5=5
45. ಅ.ಆನ್ಲೈನ್ ಶಿಕ್ಷಣದ ಅನುಕೂಲ ಮತ್ತು ಅನಾನುಕೂಲಗಳು
ಆ. ಸ್ವಚ್ಛ ಭಾರತ ಅಭಿಯಾನ
ಇ. ತ್ಯಾಜ್ಯ ವಸ್ತು ನಿರ್ವಹಣೆ
ಶಿವರಾಜ್ ಎo
ಕನ್ನಡ ಭಾಷಾ ಶಿಕ್ಷಕರು
ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ
ಚೋಳರ ಪಾಳ್ಯ