ಹೆಣ್ಣು ಮಕ್ಕಳ ಶಿಕ್ಷಣ ಅವರ ರಕ್ಷಣೆ ಸಮಾಜದಲ್ಲಿ ಅವರಿಗೆ ಸಮಾನ ಅವಕಾಶ ಹಾಗೂ ಅವರ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುವುದು ಹೆಣ್ಣುಮಕ್ಕಳ ದಿನದ ಮುಖ್ಯ ಗುರಿಯಾಗಿದೆ.
ಹೆಣ್ಣುಮಕ್ಕಳ ಎದುರಿಸುತ್ತಿರುವ ಸಮಸ್ಯೆಗಳು.
1. ಹೆಣ್ಣು ಭ್ರೂಣಹತ್ಯೆ
2. ಲೈಂಗಿಕ ಕಿರುಕುಳ
3. ಸಾಮಾಜಿಕ ಅಸಮಾನತೆ
4. ಲಿಂಗ ಅಸಮಾನತೆ
5. ಬಾಲ್ಯ ವಿವಾಹ
6. ಶಿಕ್ಷಣ
ಹೆಣ್ಣು ಮಕ್ಕಳ ದಿನಾಚರಣೆಯ ಮಹತ್ವ:-
1. ಹೆಣ್ಣುಮಕ್ಕಳ ಪ್ರಮುಖ ಪಾಠದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.
2. ಲಿಂಗ ಅಸಮಾನತೆಯನ್ನು ಹೋಗಲಾಡಿಸಿ ಲಿಂಗ ಸಮಾನತೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ಪ್ರತಿಯೊಬ್ಬರಿಗೂ ಸಮಾನವಾದ ಶಿಕ್ಷಣ ಅವಕಾಶವನ್ನು ಕಲ್ಪಿಸಿ ಕೊಡುವುದು.
3. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ನಡೆಸುವಂತಹ ವಿವಾಹಗಳಿಗೆ ಕಡಿಮೆ ಶಿಕ್ಷಣ ಗಳಿಸುವ ಮೂಲಕ ಬಾಲ್ಯ ವಿವಾಹದ ವಿರುದ್ಧ ಹೋರಾಟ ನಡೆಸುವುದು.
4. ಪ್ರತಿ ಹೆಣ್ಣು ಮಗುವಿಗೂ ಸಮಾನವಾದ ಅಂತಹ ಗೌರವವನ್ನು ನೀಡುವುದು.
5. ಹೆಣ್ಣುಮಕ್ಕಳಿಗೆ ಇರುವಂತಹ ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಎಲ್ಲರಿಗೂ ಸಿಗುವಂತೆ ಮಾಡುವುದು.
6. ಹೆಣ್ಣುಮಕ್ಕಳ ಜನಸಂಖ್ಯೆ ಕಡಿಮೆಯಾಗುತ್ತಿರುವುದರ ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು.
7. ಭಾರತದಲ್ಲಿರುವ ಲಿಂಗ ತಾರತಮ್ಯದ ವಿರುದ್ಧ ಜನರಿಗೆ ಇರುವಂತಹ ತಪ್ಪುಕಲ್ಪನೆಯನ್ನು ಹೋಗಲಾಡಿಸಿ ಅವರಲ್ಲಿ ಲಿಂಗ ತಾರತಮ್ಯದ ಬಗ್ಗೆ ತಿಳಿಸುವುದು.
ಇತಿಹಾಸ
ವಿಶ್ವಸಂಸ್ಥೆಯು ಅಕ್ಟೋಬರ್ 11ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಘೋಷಿಸಿದ ಇದರಂತೆ 2012ರಿಂದ ದಿನವನ್ನು ಆಚರಿಸಿಕೊಂಡು ಬರಲಾಗಿದೆ.
ದಿನಾಚರಣೆಯ ಪ್ರಮುಖ ಉದ್ದೇಶ ಹೆಣ್ಣುಮಕ್ಕಳ ಜನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರ ವಿರುದ್ಧ ಅದಕ್ಕೆ ತಕ್ಕಂತಹ ಕಾರಣ ಹಾಗೂ ಸಮಸ್ಯೆಗಳನ್ನು ಹುಡುಕಿ ಅದಕ್ಕೆ ಸೂಕ್ತವಾದಂತಹ ಪರಿಹಾರವನ್ನು ನೀಡುವುದು. ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯನ್ನು ಸಾಧಿಸುವಂತೆ ಕ್ರಮವನ್ನು ಕೈ ಗೊಳ್ಳುವಂತೆ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ.
ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಭೇದ ಭಾವವನ್ನು ತೆಗೆದು ಸಹಬಾಳ್ವೆಯ ಜೀವನವನ್ನು ನಡೆಸುವುದು ಅಂತರಾಷ್ಟ್ರೀಯ ಮಹಿಳಾ ದಿನದ ಉದ್ದೇಶ.
ಪ್ರತಿ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಈ ದಿನವನ್ನು ಹೆಚ್ಚು ಸಂತೋಷದಿಂದ ಆಚರಿಸುತ್ತಾರೆ. ಹೆಣ್ಣುಮಕ್ಕಳು ಕುಟುಂಬದ ದೀಪವಿದ್ದಂತೆ ಅದು ಸದಾ ಬೆಳಗುತ್ತಿರಬೇಕು ಆ ಬೆಳಕು ಹಯ್ಕಆರದ ಹಾಗೆ ನಾವೆಲ್ಲರೂ ನೋಡಿಕೊಳ್ಳೋಣ.