ಗುಣಸಾಗರಿ ಪಂಡರಿಬಾಯಿ

ಪಾಠದ ಹೆಸರು : ಗುಣಸಾಗರಿ ಪಂಡರಿಬಾಯಿ   – ಡಾ. ಜಯಮಾಲಾ

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

1. ಪಂಢರಿಬಾಯಿ ಅವರ ತಂದೆ ತಾಯಿಯವರ ಹೆಸರೇನು ?

ಉತ್ತರ : ಪಂಢರಿಬಾಯಿ ಅವರ ತಂದೆ ರಂಗರಾವ್ ಮತ್ತು ತಾಯಿ ಕಾವೇರಿಬಾಯಿ .

2. ಪಂಢರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು ?

ಉತ್ತರ : ಪಂಢರಿಬಾಯಿಯವರು ನಟಿಸಿದ ಮೊದಲ ಚಿತ್ರದ ‘ ವಾಣಿ ‘

3 , ಪಂಢರಿಬಾಯಿ ನಾಟಕ ರಂಗಕ್ಕೆ ಪ್ರವೇಶಿಸಬೇಕಾಗಿ ಬಂದದ್ದು ಯಾಕೆ ?

ಉತ್ತರ : ಪಂಢರಿಬಾಯಿ ಅವರು ಆಕಸ್ಮಿಕವಾಗಿ ನಾಟಕ ರಂಗಕ್ಕೆ ಪ್ರವೇಶ ಮಾಡಿದರು . ‘ ಮುದುಕನ ಮದುವೆ ‘ ನಾಟಕದಲ್ಲಿ ಅಭಿನಯಿಸುತ್ತಿದ್ದ ನಟಿ ಇನ್ನೇನು ನಾಟಕ ಆರಂಭಕ್ಕೆ ಅರ್ಧಗಂಟೆ ಬಾಕಿ ಇರುವಾಗ ‘ ಬರುವುದಿಲ್ಲ ‘ ಎಂಬ ವಾರ್ತೆ ಕಳಿಸಿದಳು .

ಅದಕ್ಕಾಗಿ ಈ ಪಾತ್ರವನ್ನು ಪಂಢರಿಬಾಯಿ ಅವರೇ ಮಾಡಿದರು ಈ ಮೂಲಕ ಅವರು ನಾಟಕ ರಂಗ ಪ್ರವೇಶ ಮಾಡಿದರು .

4. ಪಂಢರಿಬಾಯಿ ಅವರಿಗೆ ಜೀವಮಾನ ಸಾಧನೆಗಾಗಿ ಯಾವ ಪ್ರಶಸ್ತಿಯನ್ನು ನೀಡಲಾಗಿದೆ ?

ಉತ್ತರ : ಪಂಢರಿಬಾಯಿ ಅವರಿಗೆ ಜೀವಮಾನ ಸಾಧನೆಗಾಗಿ 2000 ದಲ್ಲಿ ಫಿಲ್ಮಫೇರ್ ಪ್ರಶಸ್ತಿಯನ್ನು ನೀಡಲಾಗಿದೆ .

5. ಪಂಢರಿಬಾಯಿಯವರು ಯಾರ ಮನಸ್ಸಿನಲ್ಲಿ ಅಮರರಾದರು ?

ಉತ್ತರ : ಪಂಢರಿಬಾಯಿಯವರು ಕಲಾರಸಿಕರ ಮನಸ್ಸಿನಲ್ಲಿ ಎಂದೆಂದಿಗೂ ಅಮರರಾದರು .

6. ಪಂಢರಿಬಾಯಿಯವರು ನಾಟಕದಲ್ಲಿ ಬಣ್ಣ ಹಚ್ಚಲು ಕಾರಣವೇನು ?

ಉತ್ತರ : ಪಂಢರಿಬಾಯಿ ಅವರು ಆಕಸ್ಮಿಕವಾಗಿ ನಾಟಕ ರಂಗಕ್ಕೆ ಪ್ರವೇಶ ಮಾಡಿದರು . ‘ ಮುದುಕನ ಮದುವೆ ‘ ನಾಟಕದಲ್ಲಿ ಅಭಿನಯಿಸುತ್ತಿದ್ದ ನಟಿ ಇನ್ನೇನು ನಾಟಕ ಆರಂಭಕ್ಕೆ ಅರ್ಧಗಂಟೆ ಬಾಕಿ ಇರುವಾಗ ‘ ಬರುವುದಿಲ್ಲ ‘ ಎಂಬ ವಾರ್ತೆ ಕಳಿಸಿದಳು .

ನಾಟಕದ ಟಿಕೇಟುಗಳು ಪೂರ್ತಿ ಮಾರಾಟವಾಗಿದ್ದವು . ನಾಟಕ ನಿಂತರೆ ಬಹುದೊಡ್ಡ ಕಷ್ಟಕ್ಕೆ ಕುಟುಂಬ ಸಿಕ್ಕಿಕೊಳ್ಳುತ್ತಿತ್ತು . ಆ ಪಾತ್ರವನ್ನು ತಂಗಿ ಪಂಢರಿಬಾಯಿ ಕೈಲಿ ಏಕೆ ಮಾಡಿಸಬಾರದು ? ಎಂಬ ಆಲೋಚನೆ ಅಣ್ಣ ವಿಮಾಲಾನಂದನಿಗೆ ಬಂತು .

ಅದಕ್ಕಾಗಿ ಈ ಪಾತ್ರವನ್ನು ಪಂಢರಿಬಾಯಿ ಅವರೇ ಮಾಡಿದರು .

7. ರಂಗರಾವ್ ಅವರು ಮಗಳ ಹೆಸರನ್ನು ಪಂಢರಿಬಾಯಿ ಎಂದು ಬದಲಾಯಿಸಲು ಕಾರಣವೇನು ?

ಉತ್ತರ : ಪಂಢರಾಪುರದ ಪಂಢರಿನಾಥನಲ್ಲಿ ಅತೀವ ಶ್ರದ್ಧೆ ಮತ್ತು ಭಕ್ತಿಗಳನ್ನು ಹೊಂದಿದ್ದ ರಂಗರಾವ್ , ಗೀತಾ ಎನ್ನುವ ಮಗಳ ಹೆಸರನ್ನು ಪಂಢರಿಬಾಯಿ ಎಂದು ಬದಲಿಸಿದರು .

8. ಪಂಢರಿಬಾಯಿಯವರು ಕಲಾವಿದೆಯಾಗಿ ರೂಪುಗೊಳ್ಳಲು ಸಹಕರಿಸಿದ ಅಂಶಗಳು ಯಾವುವು ?

ಉತ್ತರ : ಚಿಕ್ಕಂದಿನಿಂದಲೇ ಪಂಢರಿಬಾಯಿ ಅವರಿಗೆ ಸಂಗೀತದ ಅಭ್ಯಾಸವಾಗಿತ್ತು . ಹರಿಕಥೆ ಮಾಡುವುದನ್ನು ಹಾಗೂ ಕೀರ್ತನೆ ಹಾಡುವುದನ್ನು ಇವರು ಕಲಿತಿದ್ದರು .

ಮನೆಯಲ್ಲಿ ಇದ್ದ ಸೃಜನಶೀಲ ವಾತಾವರಣ ಪಂಢರಿಬಾಯಿಯವರ ‘ ಕಲಾವಿದೆ ‘ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿತು .

magadha sahebha

8ನೇ ತರಗತಿ ಮಗ್ಗದ ಸಾಹೇಬ ಕನ್ನಡ ನೋಟ್ಸ್ | 8th Standard Maggada Saheba Kannada Notes
ಕೃತಿಕಾರರ ಪರಿಚಯ :
ಬಾಗಲೋಡಿ ದೇವರಾಯ

ಬಾಗಲೋಡಿ ದೇವರಾಯ ಅವರು ಕ್ರಿ.ಶ. ೧೯೨೭ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು . ಅವರ ಕಥಾಸಂಗ್ರಹಗಳೆಂದರೆ ಹುಚ್ಚು ಮುನಸೀಫ ಮತ್ತು ಇತರ ಕತೆಗಳು , ಆರಾಧನಾ , ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು , ಬಾಗಲೋಡಿ ದೇವರಾಯ ಅವರು ಒಟ್ಟು ೨೬ ಕತೆಗಳನ್ನು ಬರೆದಿದ್ದಾರೆ . ಇವರು ೧೯೮೫ ರಲ್ಲಿ ನಿಧನರಾದರು . ಮಗ್ಗದ ಸಾಹೇಬ ಕಥೆಯನ್ನು ಬಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆರಿಸಿಕೊಳ್ಳಲಾಗಿದೆ .

Maggada Saheba Kannada Notes Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1 ) ರಹೀಮ್ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು ?
ಉತ್ತರ : ರಹೀಮ ಮಗ್ಗವನ್ನು ಮುಟ್ಟದೆ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಾಗಿತ್ತು .

2 ) ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು ?
ಉತ್ತರ : ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕಿದೆ .

3 ) ಅಬ್ದುಲ್ ರಹೀಮನ ಹಠವೇನು ?
ಉತ್ತರ : ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಭ್ಯಾಸ ಕೊಡಿಸಿ ಸರಕಾರಿ ನೌಕರರನ್ನಾಗಿ ಮಾಡಬೇಕು ಅಬ್ದುಲ್ ರಹೀಮನ ಹಠವಾಗಿತ್ತು .

4 ) ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ ?
ಉತ್ತರ : ತಂದೆಯ ಆಸೆಯಂತೆ ಒಬ್ಬ ಮಗ ಸರಕಾರಿ ಕಚೇರಿಯಲ್ಲಿ ಗುಮಾಸ್ತನಾದ . ಇನ್ನೊಬ್ಬ ಪೋಸ್ಟ್ ಮಾಸ್ತರನಾದ .

5 ) ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ ?
ಉತ್ತರ : ರಹೀಮನು ತನ್ನ ಮಗನಿಗೆ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿಬಿಟ್ಟನು .
ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1 ) ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು ?

ಉತ್ತರ : ಅಂಗಡಿಯಿಂದ ಲಡ್ಡುಗಳನ್ನು ಕೊಂಡು ಕೊಟ್ಟುದಕ್ಕೆ ಅತಿಥಿಗಳಿಗೆ ಬಹಳ ಸಿಟ್ಟು ಬಂತು . ಅವರು ‘ ರಾಯರೆ , ಅಂಗಡಿಯಿಂದ ತೆಗೆದುಕೊಳ್ಳಲು ನಮ್ಮಲ್ಲಿ ಹಣವಿಲ್ಲವೆ ? ಮನೆಯಲ್ಲಿ ಕಾಯಿಲೆಯಿದ್ದರೆ ಒಂದು ತುಂಡು ಬೆಲ್ಲವನ್ನೂ ಕಲ್ಲುಸಕ್ಕರೆ ಹರಳನ್ನೋ ಕೊಡಿ . ನಿಮ್ಮ ಹಬ್ಬದ ಪೂಜೆಯ ಪ್ರಸಾದವನ್ನು ನಾವು ತೆಗೆದುಕೊಳ್ಳುವುದು ತಲತಲಾಂತರದಿಂದ ಬಂದ ಹಳೆಯ ಸಂಪ್ರದಾಯ , ಅಂಗಡಿಯ ಮಿಠಾಯಿಯನ್ನು ಪ್ರಸಾದವೆಂದು ಕೊಡುವುದು ಸರಿಯೇ ? ‘ ಎಂದು ಆಕ್ಷೇಪಿಸಿದರು .

2 ) ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ ,

ಉತ್ತರ : ಸಾಹೇಬ್ ಬಹಾದ್ದೂರ್‌ ಮಗ್ಗದ ಹುಸೇನ್ ಸಾಹೇಬರು ಜನಪ್ರಿಯ ಮತ್ತು ಧನವಂತ ವ್ಯಕ್ತಿಯಾಗಿದ್ದರು . ಅವರು ಮಸೀದಿ ಮಾತ್ರವಲ್ಲ : ದೇವಸ್ಥಾನವನ್ನೂ ಕಟ್ಟಿಸಿದ್ದರು .

3 ) ಶಾಲಾ ವಾರ್ಷಿಕೋತ್ಸವದಂದು ಕರೀಮ್ ಮಾಡಿದ ಕೆಲಸವೇನು ?

ಉತ್ತರ : ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು . ಅದರಲ್ಲಿ ಕರೀಮನದು ಸ್ತ್ರೀಪಾತ್ರ , ಅದಕ್ಕಾಗಿ ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ಪಡೆದುಕೊಂಡ . ಆದರೆ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ . ಎಲ್ಲೋ ಮಾಯವಾಗಿ ಹೋದ .

4 ) ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು ?

ಉತ್ತರ : ಲೇಖಕರ ಹುಟ್ಟೂರಿನ ಪಕ್ಕದಲ್ಲಿ ಮುಸಲ್ಮಾನರ ವಸತಿ ಇದೆ . ಅದರೊಳಗೆ ಒಂದು ಪವಿತ್ರ ಸ್ಥಾನವಿದೆ . ಅಲ್ಲಿ ಉರ್ಸ್ ‘ ಎಂಬ ಮುಸಲ್ಮಾನರ ಧಾರ್ಮಿಕ ಉತ್ಸವದ ಕಾಲದಲ್ಲಿ ನಮ್ಮ ಮನೆತನದ ಒಬ್ಬ ಪ್ರತಿನಿಧಿ ಇದ್ದೇ ಇರಬೇಕೆಂಬ ಸಂಪ್ರದಾಯ ಇತ್ತು .

5 ) ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೋಜನವೇನು ?
ಉತ್ತರ : ಕರೀಮ್ ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿದ್ದ . ಅದನ್ನು ಶಂಕರಪ್ಪ ಅವರು ಪಶಂಸೆ ಮಾಡಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು . ಅದರ ಫಲಸ್ವರೂಪವಾಗಿ ಸರಕಾರದಿಂದ ಅವನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ದೊರೆಯಿತು .

ಇ ] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ .
1 ) ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕಾಗಿ ಬಂದ ಪ್ರಸಂಗವನ್ನು ತಿಳಿಸಿ .

ಉತ್ತರ : ಕರೀಮನು ಶಂಕರಪ್ಪ ಅವರ ಮನೆಗೆ ಹೋಗಿ ತನ್ನ ತಂದೆಯೊಡನೆ ಸಂಧಾನ ಮಾಡಿಸಿರಿ ಎಂದು ಕೇಳಿಕೊಂಡನು . ಆಗ ಅಲ್ಲಿಗೆ ಹೋಗಿ ಶಂಕರಪ್ಪ ಅವರು ರಹೀಮನೊಡನೆ ಒಂದು ಗಂಟೆ ಗೋಗರೆದರು . ನಿವೇದಿಸಿದರು . ತರ್ಕಿಸಿದರು . ಚರ್ಚಿಸಿದರು . ಆದರೆ ರಹೀಮ ಒಂದು ಪದವನ್ನೂ ತಾಳ್ಮೆಯಿಂದ ಕೇಳಲಿಲ್ಲ . “ ಸಾಹೇಬ್ ಬಹಾದ್ದೂರ್ ಹುಸೇನ್ ಸಾಹೇಬರ ಕೀರ್ತಿಗೆ ಮಸಿಹಚ್ಚಿದ್ದಾನೆ . ನೀವು ಕಲಿಸಿದ ಪಾಠದಿಂದಲೇ ಈ ಪಠಮಾರಿ ನಮ್ಮ ವಂಶದ ಕೀರ್ತಿಯನ್ನು ಮಣ್ಣುಪಾಲು ಮಾಡಿದ . ಹಣ ತಂದಿದ್ದಾನಂತೆ , ಕಳವಿನ ಹಣವೋ ದರೋಡೆಯ ಹಣವೋ ? ‘ ಎಂದು ಸಿಡುಕಿದ . ಶಂಕರಪ್ಪ ಅವರು ಮುಖಬಾಡಿಸಿಕೊಂಡು ಹಿಂತೆರಳಿದರು .

2 ) ನವೀನ ಶಿಕ್ಷಣದ ವೈಶಿಷ್ಟ್ಯಗಳೇನು ?

ಉತ್ತರ : ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ‘ ನವೀನ ಶಿಕ್ಷಣ ‘ ಆರಂಭವಾಯಿತು . ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು , ಅವರಲ್ಲಿ ಹಸ್ತಕೌಶಲವನ್ನು , ದೇಹಶಮದಲ್ಲಿ ಗೌರವ – ಭಾವವನ್ನು ಉಂಟು ಮಾಡುವುದು ಒಂದು ಭಾಗವಾಗಿತ್ತು . ಕೆಲವರಿಗೆ ಬಡಗಿಯ ಕೆಲಸ , ಕೆಲವರಿಗೆ ಬೆತ್ತದ ಕುರ್ಚಿ ಕೆಲಸ ಇತ್ಯಾದಿ ಸಾಮಗ್ರಿಗಳನ್ನು ಮಾಡುವ , ಕೆಲವರಿಗೆ ಕೃಷಿ , ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸಲಾಗುತ್ತಿತ್ತು.
ಈ ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1 ) ಕರೀಮ ಧನವಂತನಾದ ಬಗೆ ಹೇಗೆ ? ವಿವರಿಸಿ .

ಉತ್ತರ : ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ‘ ನವೀನ ಶಿಕ್ಷಣ ‘ ಆರಂಭವಾಯಿತು . ಆ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು , ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸತೊಡಗಿದ್ದರು . ಹುಡುಗ ಕರೀಮ್ ಮಗ್ಗದ ಕೆಲಸವನ್ನು ಮೀನು ನೀರಿನಲ್ಲಿ ಈಜುವಷ್ಟೇ ಸುಲಭವಾಗಿ ಕಲಿತು ಬಹು ನಿಮಣನಾಗಿಬಿಟ್ಟ . ಕರೀಮ್ ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿಬಿಟ್ಟಿದ್ದ . ಅದರ ಫಲಸ್ವರೂಪವಾಗಿ ಸರಕಾರದಿಂದ ಅವನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ಬಂದವು . ತಂದೆ ಅವನ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿಬಿಟ್ಟನು . ಒಂದು ದಿನ ಶಾಲೆಯ ವಾರ್ಷಿಕೋತ್ಸವದಲ್ಲಿ ನಾಟಕವಿತ್ತು . ಅದರಲ್ಲಿ ಕರೀಮನದು ಸ್ತ್ರೀಪಾತ್ರ . ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ತೆಗೆದುಕೊಂಡ . ಆದರೆ ನಾಟಕ ಮುಗಿದ ಎಲ್ಲೋ ಮಾಯವಾಗಿ ಹೋದ . ಸಣ್ಣಪ್ರಾಯದಲ್ಲೇ ಮಗ್ಗದ ಸಹಕಾರಿ ಸಂಘವೊಂದನ್ನು ಸ್ಥಾಪಿಸಿ ಅವನೀಗ ಅದರ ಅಧ್ಯಕ್ಷನಾಗಿ ಸಾಕಷ್ಟು ಯಶಸ್ವಿಯೂ ಧನವಂತನೂ ಆದನು . ಅದೂ ಅಲ್ಲದೆ ಮಗ್ಗದ ಯಂತ್ರದ ಪ್ರಯೋಗದಲ್ಲಿ ಹೊಸ ಹೊಸ ಸುಧಾರಣೆಗಳನ್ನೂ ಪರಿವರ್ತನೆಗಳನ್ನೂ ತಂದು ಹೆಸರು ಮಾಡಿದನು .

2 ) ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು ?

ಅಬ್ದುಲ್ ರಹೀಮನಿಗೆ ‘ ಮಗ್ಗದ ಸಾಹೇಬ ‘ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು . “ ಅನಿಷ್ಟ ಮಗ್ಗದ ಹೆಸರೆತ್ತಬೇಡಿ ” – “ ಮಗ್ಗವಲ್ಲ ಕೊರಳಿಗೆ ಹಗ್ಗ ! ” ಎಂದು ರೋಷದಿಂದ ಹೇಳುತ್ತಿದ್ದನು . ಏಕೆಂದರೆ ಅವನ ಅಜ್ಜನ ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು . ಅವೇನೋ ನಿಜಕ್ಕೂ ನಿಕೃಷ್ಣ ವಸ್ತುಗಳು , ಒಂದು ವರ್ಷದೊಳಗೇ ಕಳೇಬರಗಳಾಗಿ ಹರಕು ಚಿಂದಿಯಾಗುತ್ತಿದ್ದವು . ಒಂದೇ ತಿಂಗಳಲ್ಲಿ ಬಣ್ಣ ವಿವರ್ಣವಾಗಿ ಎರಡೇ ತಿಂಗಳಲ್ಲಿ ಮಾಯವಾಗುತ್ತಿತ್ತು . ಆದರೆ ಜನರಿಗೆ ಬೇಕಾದುದು ಅಗ್ಗದ ವಸ್ತು . ಆದ್ದರಿಂದ ಅಗ್ಗದ ಮಾಲಿನದೇ ಅಧಿಪತ್ಯವಾಯಿತು . ಮಗ್ಗದವರು ಭಿಕಾರಿಗಳಾದರು . ಅವರ ಅನ್ನಕ್ಕೆ ಸಂಚಕಾರವಾಯಿತು . ಇದರಿಂದ ಅಬ್ದುಲ್ ರಹೀಮನಿಗೆ ಬಹಳ ಕಷ್ಟವಾಯಿತು . ಅವನ ಮಗ್ಗಗಳೆಲ್ಲಾ ಧೂಳು ತುಂಬಿ ಜೇಡನ ಬಲೆಗಳಿಂದ ಹಾಳುಬಿದ್ದವು . ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಎಂಬಂತಾಯಿತು . ಆದ್ದರಿಂದ ಅವನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಯಿತು .

ಉ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .
1 ) “ ಮಗ್ಗವಲ್ಲ ಕೊರಳಿಗೆ ಹಗ್ಗ ! ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ರಹೀಮನಿಗೆ ಮಗ್ಗದ ಸಾಹೇಬ ಎಂದು ಹೇಳಿದರೆ ಸಿಟ್ಟುಬರುತ್ತಿತ್ತು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ . ರಹೀಮನಿಗೆ ಮಗ್ಗವೆಂದರೆ ದ್ವೇಷ , ಅವನನ್ನು ಮಗ್ಗದ ಸಾಹೇಬ ಎಂದು ಕರೆದರೆ ಅವನು ಕೋಪದಿಂದ “ ಅನಿಷ್ಟ ಮಗ್ಗದ ಹೆಸರೆತ್ತಬೇಡಿ ” – “ ಮಗ್ಗವಲ್ಲ ಕೊರಳಿಗೆ ಹಗ್ಗ ! ” ಎಂದು ರೋಷದಿಂದ ಹೇಳುತ್ತಿದ್ದನು .

ಸ್ವಾರಸ್ಯ : ಬ್ರಿಟಿಷರ ವಿಲಾಯಿತಿ ಮಿಲ್ಲಿನ ಬಟ್ಟೆಗಳಿಂದಾಗಿ ಕೈಮಗ್ಗದ ಬಟ್ಟೆಗಳು ಬೆಲೆಕಳೆದುಕೊಂಡದ್ದರಿಂದ ಅವನು ಮಗ್ಗದ ಬಗ್ಗೆ ಸಿಟ್ಟಾಗಿರುವುದು ಇಲ್ಲಿ ಸ್ವಾರಸ್ಯವಾಗಿದೆ .
2 ) “ ಕಳ್ಳನಾದವನು , ಮನೆ ಬಿಟ್ಟು ಓಡಿ ಹೋದವನು ಮಗನೇ ಅಲ್ಲ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕರೀಮನು ನಾಟಕದಲ್ಲಿ ಅಲಂಕಾರ ಮಾಡಿಕೊಳ್ಳಲೆಂದು ತಾಯಿಯಿಂದ ಹಳೆಕಾಲದ ಒಂದು ಚಿನ್ನದ ಸರವನ್ನು ತೆಗೆದುಕೊಂಡಿದ್ದನು . ಆದರೆ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ . ಎಲ್ಲೋ ಮಾಯವಾಗಿ ಹೋದ . ಆ ಸಂದರ್ಭದಲ್ಲಿ ಕೋಪಗೊಂಡ ಆತನ ತಂದೆ ರಹೀಮನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ರಹೀಮನ ಹಠ , ಮಗನ ನಡವಳಿಕೆಯ ಬಗ್ಗೆ ಆತನಿಗಿದ್ದ ಕೋಪ ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .

3 ) “ ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕರೀಮನು ಹತ್ತು ಸಾವಿರ ರೂಪಾಯಿ ಮತ್ತು ತಾಯಿಯ ಸರದೊಂದಿಗೆ ಮನೆಗೆ ಬಂದಾಗ ಆತನ ತಂದೆ ಅವನನ್ನು ಮನೆಗೆ ಸೇರಿಸದೆ ಬಾಗಿಲು ಮುಚ್ಚಿದನು . ಆಗ ಕರೀಮನು ಶಂಕರಪ್ಪ ಮಾಸ್ತರರ ಬಳಿ ಹೋಗಿ ತನ್ನ ತಂದೆಯೊಡನೆ ಸಂಧಾನ ಮಾಡಿಸಿರಿ ಎಂದು ಕೇಳಿಕೊಳ್ಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ಇಲ್ಲಿ ಕರೀಮನ ಸಾಧನೆ , ತಂದೆ – ತಾಯಿಯ ಮೇಲೆ ಇಟ್ಟಿದ್ದ ಪ್ರೀತಿ , ಮುಖ್ಯೋಪಾಧ್ಯಾಯರಲ್ಲಿ ಆತನು ವಿನಂತಿಸಿಕೊಳ್ಳುವ ರೀತಿ ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ .

4 ) ” ದೇವರು ದೊಡ್ಡವನು ದೇವರು ದಯಾಳು ”

ಉತ್ತರ : ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : “ ನಿಮ್ಮ ಮಗ ಕರೀಮ್‌ನಿಗೆ ರಾಷ್ಟ್ರಪತಿ ಅವರು ಪದ್ಮಭೂಷಣ ಬಿರುದನ್ನು ಕೊಟ್ಟಿದ್ದಾರೆ . ಆ ವಿಷಯ ಪತ್ರಿಕೆಯಲ್ಲಿ ಬಂದಿದೆ ಎಂದು ಶಂಕರಪ್ಪ ಅವರು ಮುದುಕನಾಗಿದ್ದ ರಹೀಮನಿಗೆ ಹೇಳಿದಾಗ ರಹೀಮನು ಸಂತೋಷದಿಂದ ಹೆಮ್ಮೆಪಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ತನ್ನ ಮಗ ಕರೀಮನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿದ್ದ ರಹೀಮನಿಗೆ ತನ್ನ ಮಗನ ಸಾಧನೆಯನ್ನು ಕೇಳಿ ಅವನ ಬಗ್ಗೆ ಹೆಮ್ಮೆಯ ಭಾವನೆ ಮೂಡಿದ್ದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿದೆ .

ಊ ] ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ .
1 ) ಅಬ್ದುಲ್ ರಹೀಮನಿಗೆ ಮಗ್ಗದ ಸಾಹೇಬ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು .

2 ) ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಎಂಬಂತಾಗಿದೆ .

3 ) ಹುಡುಗನ ಉತ್ಸಾಹ ಆಕಾಶಕ್ಕೇರಿತು .

4 ) ಶಂಕರಪ್ಪ ಅವರು ಮುಖ ಬಾಡಿಸಿಕೊಂಡು ಹಿಂತೆರಳಿದರು .

5 ) ನನಗೆ ಎರಡೇ ಮಕ್ಕಳು ಕಳ್ಳರ ಪರಿಚಯ ನನಗಿಲ್ಲ .

ಚಟುವಟಿಕೆಗಳು

 Kannada activites

Fa1

Activity 1

೧.ಜ್ಞಾನಪೀಠ ಪ್ರಶಸ್ತಿ ಪಡೆದವರ ಭಾವಚಿತ್ರವನ್ನು ಸಂಗ್ರಹಿಸಿ, ಅವರ ಪರಿಚಯವನ್ನು ಮಾಡುವುದು.

 ಚಟುವಟಿಕೆ 2

೨. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರ ಭಾವಚಿತ್ರವನ್ನು ಸಂಗ್ರಹಿಸಿ ಅವರ ಪರಿಚಯವನ್ನು ಮಾಡುವುದು.

FA2

ಚಟುವಟಿಕೆ 3

೩. ಹಳೆಗನ್ನಡ ಮತ್ತು ನಡುಗನ್ನಡ ಸಾಹಿತಿಗಳ ಭಾವಚಿತ್ರವನ್ನು ಸಂಗ್ರಹಿಸಿ ಅವರ ಪರಿಚಯವನ್ನು ಮಾಡುವುದು.

ಚಟುವಟಿಕೆ 4

೪. ರಾಷ್ಟ್ರ ಕವಿಗಳ ಭಾವಚಿತ್ರವನ್ನು ಸಂಗ್ರಹಿಸಿ ಅವರ ಪರಿಚಯವನ್ನು ಮಾಡುವುದು.

FA3 

ಚಟುವಟಿಕೆ 5

೫. ಸುಮಾರು 50 ಗಾದೆಗಳನ್ನು ಸಂಗ್ರಹಣೆ ಮಾಡಿ. ಅದರಲ್ಲಿ ಯಾವುದಾದರೂ ಮೂರು ಗಾದೆಗಳನ್ನು ಅದರ ಮಹತ್ವದೊಂದಿಗೆ ವಿಸ್ತರಿಸಿ ಬರೆಯುವುದು.

ಚಟುವಟಿಕೆ 6

೬ . 10ನೇ ತರಗತಿ ಪಠ್ಯಪುಸ್ತಕದಲ್ಲಿರುವ ಎಲ್ಲಾ ಪ್ರಬಂಧಗಳನ್ನು ಮುಖಪುಟದಲ್ಲಿ ಬರೆದು ಅದರಲ್ಲಿ ಐದು ಪ್ರಬಂಧಗಳನ್ನು 15 ವಾಕ್ಯಗಳು ಮೀರತಂತೆ ಪ್ರಬಂಧವನ್ನು ವಿಸ್ತರಿಸಿ ಬರೆಯುವುದು.

FA4 

ಚಟುವಟಿಕೆ 7

೭. 10ನೇ ತರಗತಿ ಪಠ್ಯ ಪುಸ್ತಕದಲ್ಲಿರುವ ಎಲ್ಲಾ ಅಲಂಕಾರಗಳನ್ನು ಬರೆದು ಅದನ್ನು ಸಮನ್ವಯಗೊಳಿಸುವುದು. ಹಾಗೂ ಛಂದಸ್ಸುಗಳನ್ನು ಬರೆದು ಲಘುಗುರುವನ್ನು ಗುರುತಿಸಿ ಛಂದಸ್ಸಿನ ಹೆಸರನ್ನು ಬರೆಯುವುದು.

೮. 10ನೇ ತರಗತಿ ಪಠ್ಯಪುಸ್ತಕದಲ್ಲಿರುವ ವ್ಯಾಕರಣಗಳಿಗೆ ಅನುಗುಣವಾಗಿ ಪ್ರತಿಯೊಂದು ವ್ಯಾಕರಣ ಅಂಶಗಳನ್ನು ಮುಖಪುಟದಲ್ಲಿ ಬರೆದು ಪ್ರತಿಯೊಂದು ವ್ಯಾಕರಣಾಂಶಕ್ಕೂ 10 ಬಹು ಅಂಶ ಆಯ್ಕೆಯ ಪ್ರಶ್ನೆಗಳನ್ನು ರಚಿಸಿ ಬರೆಯುವುದು.








shabari lesson video class

 shabari lesson part 1

shabari lesson part 2 shabari lesson part 3

9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes

 9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes Question Answer Pdf Download, 9th ಕನ್ನಡ ನಾಡು ನುಡಿ Notes

ತರಗತಿ : 9ನೇ ತರಗತಿ

ಪದ್ಯದ ಹೆಸರು : ಕನ್ನಡ ನಾಡು ನುಡಿ

ಕವಿ ಪರಿಚಯ :

ಶ್ರೀವಿಜಯ :

ಈತನ ಕಾಲ : ಕ್ರಿ.ಶ. ಸುಮಾರು ೯ ನೆಯ ಶತಮಾನ ಆಶ್ರಯದಾತ : ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂ ಈತನ ಕೃತಿ ‘ ಕವಿರಾಜಮಾರ್ಗ ‘ ಎಂಬ ಲಕ್ಷಣ ಗ್ರಂಥ ಇದು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಕೃತಿಯಾಗಿದೆ . ನಯಸೇನ : ಈತನ ಕಾಲ : ಕ್ರಿ.ಶ. ಸುಮಾರು ೧೨ ನೆಯ ಶತಮಾನ ಸ್ಥಳ : ಧಾರವಾಡ ಜಿಲ್ಲೆಯ ಮುಳುಗುಂದ , ಈತನ ಪ್ರಮುಖ ಕೃತಿ : ‘ ಧರ್ಮಾಮೃತ ‘ ಎ ೦ ಬ ಚಂಪೂ ಕಾವ್ಯ * ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ವಿರೋಧ ವ್ಯಕ್ತಪಡಿಸುತ್ತಾನೆ . ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಆಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ . ನೇಮಿಚಂದ್ರ : ಈತನ ಕಾಲ : ಕ್ರಿ.ಶ. ಸುಮಾರು ೧೨ ನೆಯ ಶತಮಾನ .

* ಈತನ ಕೃತಿಗಳು : ‘ ಲೀಲಾವತೀ ಪ್ರಬಂಧ ‘ ಹಾಗೂ ‘ ಅರ್ಧನೇಮಿ ಪುರಾಣ ‘ * ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ . ಮಹಲಿಂಗರಂಗ : ಈತನ ಕಾಲ : ಕ್ರಿ.ಶ. ಸುಮಾರು ೧೭ ನೆಯ ಶತಮಾನ.

* ಇವನ ನಿಜನಾಮ : ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ .

* ಈತನ ಆರಾಧ್ಯ ದೈವ : ಶ್ರೀಶೈಲ ಮಲ್ಲಿಕಾರ್ಜುನ .

* ಈತನ ಪ್ರಮುಖ ಕೃತಿ : ‘ ಅನುಭವಾಮೃತ ‘ ಇದು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ ಆಂಡಯ್ಯ : ಈತನ ಕಾಲ : ಕ್ರಿ.ಶ. ಸುಮಾರು ೧೩ ನೇ ಶತಮಾನ . * ಆಶ್ರಯದಾತ : ಕದಂಬರ ದೊರೆ ಕಾಮದೇವ , * ಇವನ ಪ್ರಮುಖ ಕೃತಿ : ‘ ಕಬ್ಬಿಗರ ಕಾವ ‘ ಅಥವಾ ‘ ಕಬ್ಬಿಗರ ಕಾವಂ ‘ ಎಂಬ ಚಂಪೂ ಕಾವ್ಯ

* ಕನ್ನಡ ಸಾಹಿತ್ಯದಲ್ಲಿ ಕಬ್ಬಿಗರ ಕಾವಂ ಒಂದು ವಿಶಿಷ್ಟ ಕೃತಿ . ಸಂಸ್ಕೃತದ ಸಹಾಯವನ್ನು ಪಡೆಯದೆ ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಈ ಕೃತಿಯನ್ನು ಕಟ್ಟಲಾಗಿದೆ . ‘ ಕನ್ನಡ ನಾಡು – ನುಡಿ ‘ ಪದ್ಯದಲ್ಲಿ ಇರುವ ಪದ್ಯಗಳನ್ನು ಬಿ.ಎಂ.ಶ್ರೀ . ಅವರು ಸಂಪಾದಿಸಿರುವ ಕನ್ನಡ ಬಾವುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .

9th Standard Kannada Nadu Nudi Poem Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?

ಉತ್ತರ : ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಕನ್ನಡ .

2. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?

ಉತ್ತರ : ಪದನರಿದು ನುಡಿಯುವವರು ನಾಡವರ್ಗಳು ( ಸಾಮಾನ್ಯ ಜನರು ) ಎಂದು ಕವಿ ಹೇಳಿದ್ದಾನೆ .

3.ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?

ಉತ್ತರ : ತುಪ್ಪದೊಡನೆ ಎಣ್ಣೆಯನ್ನು ಬೆರೆಸಬಾರದು .

ಆ ] ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .

1. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ ?

ಉತ್ತರ : ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ “ ರಾಮಾಯಣದಲ್ಲಿ ವಾನರ ಸೈನ್ಯವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ ಕಟ್ಟದಿರಲಿ , ವಾಮನಾವತಾರದಲ್ಲಿ ವಾಮನನು ಆಕಾಶವನ್ನು ತನ್ನ ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ . ಮಹಾಭಾರತದಲ್ಲಿ ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ . ಆದರೆ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು : ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು ; ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು : ಇದು ಕವಿಗಳ ಸಾಮರ್ಥ್ಯ ” ಎಂದು ಹೇಳಿದ್ದಾನೆ .

2. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ ?

ಉತ್ತರ : ಮಹಲಿಂಗರಂಗನು ಕನ್ನಡ ಭಾಷೆಯ ಬಗ್ಗೆ ವರ್ಣಿಸುತ್ತಾ “ ಸುಲಿದ ಬಾಳೆಯ ಹಣ್ಣಿನಂತೆ : ಸಿಗುರು ತೆಗೆದ ಕಬ್ಬಿನಂತೆ : ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿರುವ , ಸುಲಲಿತವಾಗಿರುವ ಕನ್ನಡ ಭಾಷೆಯನ್ನು ಅರಿತು , ಮೋಕ್ಷವನ್ನು ಗಳಿಸಿಕೊಂಡರೆ ಸಾಲದೇ ? ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ ? ” ಎಂದು ಪತ್ನಿಸುತ್ತಾನೆ . ಮುಕ್ತಿ ಪಡೆಯಲು ಕನ್ನಡದಲ್ಲೇ ದೇವರನ್ನು ಸ್ತುತಿಸಿ ಮುಕ್ತಿ ಪಡೆಯಬಹುದಲ್ಲವೇ ? ಸಂಸ್ಕೃತ ಭಾಷೆಯಷ್ಟೇ ಶಕ್ತಿ ಕನ್ನಡ ಭಾಷೆಗೂ ಇದೆ ಎಂದು ಕವಿ ಅಭಿಪ್ರಾಯಪಟ್ಟಿದ್ದಾನೆ .

3. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ ?

ಉತ್ತರ : ಶ್ರೀವಿಜಯನು “ ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು . ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರಾಗಿದ್ದರು . ಈ ಸಾಮಾನ್ಯ ಜನರು ನಿಜವಾಗಿಯು ಚತುರರು , ಅವರು ಶಿಕ್ಷಣವನ್ನು ಪಡೆಯದಿದ್ದರು . ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ” ಎಂದು ಕನ್ನಡಿಗರ ಗುಣ ವಿಶೇಷತೆ ಹಾಗೂ ಕಾವ್ಯ ಶಕ್ತಿಯನ್ನು ವರ್ಣಿಸಿದ್ದಾನೆ .

4. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ ?

ಉತ್ತರ : ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು ; ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು ; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯೇ ? ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ” ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ .

5. ಕನ್ನಡ ನಾಡಿನ ಪ್ರಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ ? ಅಥವಾ ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ ?

ಉತ್ತರ : ಆಂಡಯ್ಯ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ ಸಂಪಗೆ ಅಲ್ಲದೆ , ಕೆಂಪಾದ ತೆಂಗು ಅಲ್ಲದೆ , ನಾವು ಅಲ್ಲದೆ ಅಡಿಕೆ ಅಲ್ಲದೆ : ಗಿಡಮರಗಳೇ ಇಲ್ಲ ” ಎಂದು ವರ್ಣಿಸುತ್ತಾನೆ . ಕನ್ನಡ ನಾಡಿನಲ್ಲಿ ಉತ್ತಮ ಫಲ ನೀಡುವಂತಹ ಸಸ್ಯಗಳು ಸಮೃದ್ಧವಾಗಿವೆ ಎಂಬುದು ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಸೂಚಿಸುತ್ತದೆ .

ಇ ] ಕೆಳಗಿನ ಪ್ರಶ್ನೆಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ .

1. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ . ?

ಉತ್ತರ : ಶ್ರೀವಿಜಯನು “ ಕನ್ನಡನಾಡಿನ ಸಾಮಾನ್ಯ ಜನರು ನಿಜವಾಗಿಯು ಚತುರರು . ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ” ಎಂದು ಕನ್ನಡಿಗರ ಗುಣ ವಿಶೇಷತೆ ವರ್ಣಿಸಿದ್ದಾನೆ . ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ “ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು . ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು . ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು . ಇದು ಕವಿಗಳ ಸಾಮರ್ಥ್ಯ ” ಎಂದು ಹೇಳಿದ್ದಾನೆ . ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು : ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು : ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯಲ್ಲ . ಎಂದು ಹೇಳುತ್ತಾ ಅಚ್ಚಗನ್ನಡದ ಪರ ದನಿ ಎತ್ತಿದ್ದಾನೆ . ಮಹಲಿಂಗರಂಗನು ಕನ್ನಡ ಭಾಷೆಯ ಸರಳತೆ , ಮಧುರತೆ , ಶಕ್ತಿಯ ಬಗ್ಗೆ ವರ್ಣಿಸುತ್ತಾ ” ಸುಲಿದ ಬಾಳೆಯ ಹಣ್ಣಿನಂತೆ : ಸಿಗುರು ತೆಗೆದ ಕಬ್ಬಿನಂತೆ : ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿದ್ದು , ಅದರಲ್ಲೇ ಮೋಕ್ಷವನ್ನು ಗಳಿಸಬಹುದು ; ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ ? ” ಎಂದು ಕನ್ನಡ ಭಾಷೆಯ ಸತ್ವವನ್ನು ಅಭಿಮಾನದಿಂದ ಹೇಳಿಕೊಂಡಿದ್ದಾನೆ .

ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ನೇಮಿಚಂದ್ರನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿಗಳ ಕವಿತಾ ಸಾಮರ್ಥ್ಯವನ್ನು ವರ್ಣಿಸುವ ಸಂದರ್ಭದಲ್ಲಿ ನೇಮಿಚಂದನು ಈ ಮಾತನ್ನು ಹೇಳಿದ್ದಾನೆ . ಪ್ರಸಿದ್ಧ ಕಾವ್ಯಗಳಲ್ಲಿ ಬರುವ ಘಟನೆಗಳು ನಡೆದವೋ ಇಲ್ಲವೋ ಆದರೆ ಅವನ್ನು ಕವಿಗಳು ತಮ್ಮ ಕಾವ್ಯಗಳ ಮೂಲಕ ಸಾಧ್ಯವಾಗಿಸಿದ್ದಾರೆ ಎಂದು ಕವಿ ಅಭಿಪ್ರಾಯ ಪಟ್ಟಿದ್ದಾನೆ .

ಸ್ವಾರಸ್ಯ : ‘ ರವಿ ಕಾಣದ್ದನ್ನು ಕವಿ ಕಂಡ ‘ ಎಂಬ ಲೋಕೋಕ್ತಿಯನ್ನು ನೇಮಿಚಂದ್ರನು ಇಲ್ಲಿ ಸ್ವಾರಸ್ಯಕರವಾಗಿ ಸಮರ್ಥಿಸಿದ್ದಾನೆ .

2. ಕಳೆದ ಸಿಗುರಿನ ಕಬ್ಬಿನಂದದಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಮಹಲಿಂಗರಂಗನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕನ್ನಡ ಭಾಷೆಯ ಸರಳತೆ ಮತ್ತು ಅದರ ಶಕ್ತಿಯನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ತಣ್ಣಗಿನ ಹಾಲಿನಂತೆ , ಸಿಗುರಿಲ್ಲದ ಕಬ್ಬಿನಂತೆ , ಸುಲಿದ ಬಾಳೆಯ ಹಣ್ಣಿನಂತೆ ಕನ್ನಡ ಸುಲಭ ಮತ್ತು ರುಚಿಕರವೆಂದಿದ್ದಾನೆ . ಸ್ವಾರಸ್ಯ : ಕನ್ನಡ ಭಾಷೆಯ ಸರಳ ಸುಂದರತೆಯನ್ನೂ ಮುಕ್ತಿಗಾಗಿ ಕನ್ನಡವೇ ಲೇಸೆಂಬುದನ್ನೂ ಕವಿ ಸ್ವಾರಸ್ಯಕರವಾಗಿ ಹೇಳಿದ್ದಾನೆ .

ಸ್ವಾರಸ್ಯ : ಸಂಸ್ಕೃತ ಭಾಷೆಯ ಪ್ರಭಾವಕ್ಕೆ ಸಿಕ್ಕಿ ನಾಶವಾಗುತ್ತಿದ್ದ ಅಚ್ಚ ಕನ್ನಡ ಭಾಷೆಯನ್ನು ಸಂರಕ್ಷಿಸಲು ನಯಸೇನ ಕವಿ , ದನಿ ಎತ್ತಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ .

3. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಶ್ರೀವಿಜಯ ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಕವಿರಾಜಮಾರ್ಗದಲ್ಲಿ ಶ್ರೀವಿಜಯನು ಕನ್ನಡನಾಡಿನ ಶ್ರೀಸಾಮಾನ್ಯರೂ ಸಹ ಹೇಗೆ ಕಾವ್ಯ ರಚನಾ ಶಕ್ತಿಯನ್ನು ಹೊಂದಿದ್ದರೆಂಬುದನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ . ಕನ್ನಡ ನಾಡಿನ ಸಾಮಾನ್ಯಜನರು ಓದು – ಬರೆಹ ಕಲಿಯದಿದ್ದರೂ ಕಾವ್ಯ ಪ್ರಯೋಗಮಾಡುವುದರಲ್ಲಿ ಪರಿಣಿತರಾಗಿದ್ದರು ಎಂದು ಕವಿ ಹೇಳಿದ್ದಾನೆ .

ಸ್ವಾರಸ್ಯ : ಇಲ್ಲಿ ಕನ್ನಡ ನಾಡಿನ ಜನಪದರ ಕವಿತಾ ಸಾಮರ್ಥ್ಯವನ್ನು ಕುರಿತು ಕವಿ ಹೆಮ್ಮೆಯಿಂದ ಹೊಗಳಿರುವುದು ಸ್ವಾರಸ್ಯಕರವಾಗಿದೆ .

4. ತಕ್ಕುದೆ ಬೆರೆಸ ಧೃತಮುಮಂ ತೈಲಮುಮಂ ,

ಆಯ್ಕೆ : ಈ ವಾಕ್ಯವನ್ನು ‘ ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ನಯಸೇನನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ನಯಸೇನನು , ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು . ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು ; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯಲ್ಲ . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ” ಎಂದು ಈ ಸಂದರ್ಭದಲ್ಲಿ ಹೇಳಿದ್ದಾನೆ .

5. ದಾಳಿಂಬಮಲ್ಲದೊಪ್ಪುವ ಚೆಂದೆಂಗಲ್ಲದೆ .

ಆಯ್ಕೆ : ಈ ವಾಕ್ಯವನ್ನು ಕನ್ನಡ ನಾಡು ನುಡಿ ‘ ಪದ್ಯದಲ್ಲಿರುವ ಆಂಡಯ್ಯನು ರಚಿಸಿರುವ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಆಂಡಯ್ಯ ಕವಿ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ “ ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ ಸಂಪಗೆ ಅಲ್ಲದೆ : ಕೆಂಪಾದ ತೆಂಗು ಅಲ್ಲದೆ , ಮಾವು ಅಲ್ಲದೆ ಅಡಿಕೆ ಅಲ್ಲದೆ : ಗಿಡಮರಗಳೇ ಇಲ್ಲ ” ಎಂದು ವರ್ಣಿಸಿದ್ದಾನೆ .

ಸ್ವಾರಸ್ಯ : ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಇದು ಸೂಚಿಸುತ್ತದೆ .

ಮಳೆ ಕೊಯ್ಲು ಬಗ್ಗೆ ಪ್ರಬಂಧMale Koylu Prabandha in Kannada

 

ಮಳೆ ಕೊಯ್ಲು ಬಗ್ಗೆ ಪ್ರಬಂಧ

ಪೀಠಿಕೆ

ಮಳೆನೀರು ಕೊಯ್ಲು ನೀರನ್ನು ಉಳಿಸಲು ಸಾಮಾನ್ಯವಾಗಿ ಬಳಸುವ ವಿಧಾನಗಳಲ್ಲಿ ಒಂದಾಗಿದೆ. ಇದು ವಿವಿಧ ಬಳಕೆಗಳಿಗಾಗಿ ಮಳೆನೀರನ್ನು ಸಂಗ್ರಹಿಸುವುದನ್ನು ಸೂಚಿಸುತ್ತದೆ. ಮಳೆನೀರು ಕೊಯ್ಲಿನ ಹಿಂದಿನ ಕಲ್ಪನೆಯು ಮಳೆನೀರನ್ನು ವ್ಯರ್ಥ ಮಾಡಬಾರದು ಮತ್ತು ಹರಿದು ಹೋಗದಂತೆ ತಡೆಯುವುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸರಳ ಕಾರ್ಯವಿಧಾನಗಳನ್ನು ಬಳಸಿಕೊಂಡು ಮಳೆನೀರನ್ನು ಸಂಗ್ರಹಿಸಲು ಇದನ್ನು ಮಾಡಲಾಗುತ್ತದೆ. ಭಾರತದಲ್ಲಿ ಆಗುತ್ತಿರುವ ನೀರಿನ ಕೊರತೆಯನ್ನು ಪರಿಗಣಿಸಿ ಈ ವಿಧಾನವು ತುಂಬಾ ಉಪಯುಕ್ತವಾಗಿದೆ. ಇದಲ್ಲದೆ, ಮಳೆನೀರು ಕೊಯ್ಲು ತುಂಬಾ ಸುಲಭ, ಬಹುತೇಕ ಎಲ್ಲರೂ ಇದನ್ನು ಮಾಡಬಹುದು. ಯಾವುದೇ ವೆಚ್ಚವಿಲ್ಲದೆ ಜನರು ಸುಲಭವಾಗಿ ಶುದ್ಧ ನೀರನ್ನು ಪಡೆಯಲು ಸಹಾಯ ಮಾಡಲು ನಾವು ಈ ಅಭ್ಯಾಸವನ್ನು ಪ್ರೋತ್ಸಾಹಿಸಬೇಕು.

ಮಳೆ ನೀರು ಕೊಯ್ಲು ಎನ್ನುವುದು ಭವಿಷ್ಯದ ಬಳಕೆಯ ಉದ್ದೇಶಕ್ಕಾಗಿ (ಕೃಷಿ ಇತ್ಯಾದಿ) ವಿವಿಧ ಸಂಪನ್ಮೂಲಗಳಲ್ಲಿ ವಿವಿಧ ವಿಧಾನಗಳನ್ನು ಬಳಸಿಕೊಂಡು ಮಳೆನೀರನ್ನು ಸಂಗ್ರಹಿಸಲು ಬಳಸಲಾಗುವ ಒಂದು ತಂತ್ರವಾಗಿದೆ.

ವಿಷಯ ವಿವರಣೆ

ಮಳೆನೀರು ಕೊಯ್ಲು ವಿಧಾನಗಳು

ಮೇಲ್ಮೈ ಹರಿವು ಕೊಯ್ಲು

ಮೇಲ್ಮೈ ಹರಿವು ಭೂಮಿಯ ಮೇಲ್ಮೈ ಮೇಲೆ ಬೀಳುವ ಮತ್ತು ನಂತರ ಪರಿಸರಕ್ಕೆ ಕಳೆದುಹೋಗುವ ಮಳೆಗೆ ಬಳಸಲಾಗುವ ಪದವಾಗಿದೆ. ಒಂದು ಕೊಳ ಅಥವಾ ತೊಟ್ಟಿಗೆ ಮಾರ್ಗವನ್ನು ಒದಗಿಸುವ ಮೂಲಕ ಮೇಲ್ಮೈ ಹರಿವಿನ ನೀರನ್ನು ಸಂಗ್ರಹಿಸಲು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದರೆ; ಗ್ಯಾಲನ್‌ಗಳಷ್ಟು ನೀರನ್ನು ಹಲವಾರು ಚಟುವಟಿಕೆಗಳಿಗೆ ಬಳಸುವುದಕ್ಕಾಗಿ ಸಂಗ್ರಹಿಸಬಹುದು.

ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಿದರೆ, ಮೇಲ್ಮೈ ಹರಿವಿನ ನೀರನ್ನು ಸಂಗ್ರಹಿಸುವ ವ್ಯವಸ್ಥೆಯು ರಸ್ತೆಗಳು, ಉದ್ಯಾನವನಗಳು ಮತ್ತು ಉದ್ಯಾನಗಳು ಇತ್ಯಾದಿಗಳಿಂದ ಒಂದು ಸಣ್ಣ ಸಮುದಾಯ ಅಥವಾ ನಗರವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಮಾಣದ ಹರಿವನ್ನು ಸಂಗ್ರಹಿಸಬಹುದು. ಆದಾಗ್ಯೂ, ಹರಿಯುವ ನೀರು ಕಲ್ಮಶಗಳನ್ನು ಹೊಂದಿರುತ್ತದೆ; ಆದ್ದರಿಂದ, ಅದನ್ನು ಮರುಬಳಕೆ ಮಾಡುವ ಮೊದಲು ಅದನ್ನು ಶೋಧನೆ ಪ್ರಕ್ರಿಯೆಯ ಮೂಲಕ ರವಾನಿಸಬೇಕು.

ಮೇಲ್ಛಾವಣಿಯ ಮೇಲಿನ ಮಳೆನೀರು ಕೊಯ್ಲು

ಮೇಲ್ಛಾವಣಿಯಲ್ಲಿ ಮಳೆನೀರು ಕೊಯ್ಲು, ಮನೆ ಅಥವಾ ಕಟ್ಟಡದ ಮೇಲ್ಛಾವಣಿಯು ಮಳೆನೀರನ್ನು ಸಂಗ್ರಹಿಸುವ ಜಲಾನಯನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತದೆ. ಛಾವಣಿಯ ಮೇಲೆ ಬೀಳುವ ನೀರನ್ನು ನೆಟ್ವರ್ಕ್ ಅಥವಾ ಪೈಪ್ಗಳ ಮೂಲಕ ಬಯಸಿದ ಪಿಟ್ ಅಥವಾ ಟ್ಯಾಂಕ್ಗೆ ತಿರುಗಿಸಲಾಗುತ್ತದೆ. ಇದು ಮಳೆನೀರು ಕೊಯ್ಲು ಮಾಡುವ ಅತ್ಯಂತ ಆರ್ಥಿಕ ಮತ್ತು ಸುಲಭ ವಿಧಾನವಾಗಿದೆ.

ಇಳಿಜಾರಿನ ಮೇಲ್ಛಾವಣಿಯನ್ನು ಹೊಂದಿರುವ ಮನೆಗಳು ಅಥವಾ ಕಟ್ಟಡಗಳು ಬೀಳುವ ಮಳೆಯನ್ನು ಸಂಗ್ರಹಿಸಲು ಮತ್ತು ಪೈಪ್ ಅಥವಾ ಕೃತಕವಾಗಿ ರಚಿಸಲಾದ ಕಂದಕವನ್ನು ಬಳಸಿಕೊಂಡು ಗಮ್ಯಸ್ಥಾನಕ್ಕೆ ಸಾಗಿಸಲು ಅಂಚುಗಳಲ್ಲಿ ಗಟಾರಗಳನ್ನು ಸ್ಥಾಪಿಸಬಹುದು. ಆದಾಗ್ಯೂ, ಕರಗುವ ಕಲ್ಮಶಗಳನ್ನು ಹೊಂದಿರುವುದರಿಂದ ಮೊದಲ ಮಳೆಯಿಂದ ಸಂಗ್ರಹಿಸಲಾದ ನೀರನ್ನು ಹೊರಹಾಕಲು ಕಾಳಜಿಯನ್ನು ತೆಗೆದುಕೊಳ್ಳಬೇಕು.

ಮಳೆನೀರು ಕೊಯ್ಲಿನ ಅನುಕೂಲಗಳು

ಮಳೆನೀರು ಕೊಯ್ಲು ನಮ್ಮ ಪರಿಸರ ವಿಜ್ಞಾನದ ನೀರಿನ ಚಕ್ರದಲ್ಲಿ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನಮ್ಮ ಪರಿಸರ ವ್ಯವಸ್ಥೆಯಲ್ಲಿನ ನೀರಿನ ಚಕ್ರವು ಸಾಗರಗಳು, ನದಿಗಳು ಮತ್ತು ಇತರ ಜಲಮೂಲಗಳ ಮೇಲ್ಮೈಯಿಂದ ನೀರು ಆವಿಯಾಗುತ್ತದೆ ಮತ್ತು ವಾತಾವರಣದಲ್ಲಿ ಮೋಡಗಳನ್ನು ರೂಪಿಸಲು ಘನೀಕರಿಸುವ ಚಕ್ರವಾಗಿದೆ. ಸಾಕಷ್ಟು ತೇವಾಂಶವನ್ನು ಸಂಗ್ರಹಿಸಿದ ನಂತರ ಈ ಮೋಡಗಳು ಭೂಮಿ ಮತ್ತು ಜಲಮೂಲಗಳ ಮೇಲೆ ಮಳೆಬಿಲ್ಲು ಸುರಿಯುವಂತೆ ಸಿಡಿಯುತ್ತವೆ. ಆವಿಯಾಗುವಿಕೆ ಮತ್ತು ಘನೀಕರಣವು ನಮ್ಮ ನೀರಿನ ಚಕ್ರದಲ್ಲಿ ಎರಡು ಪ್ರಮುಖ ಪ್ರಕ್ರಿಯೆಗಳಾಗಿವೆ. ಮಾನವನ ಬೇಜವಾಬ್ದಾರಿಯುತವಾದ ನೀರಿನ ಬಳಕೆಯಿಂದಾಗಿ ಪರಿಸರ ವ್ಯವಸ್ಥೆಯಲ್ಲಿನ ಈ ಜಲಚಕ್ರವು ಪರಿಣಾಮ ಬೀರುತ್ತಿದೆ ಮತ್ತು ಈ ಜಲಚಕ್ರಕ್ಕೆ ಸಮತೋಲನವನ್ನು ಪುನಃಸ್ಥಾಪಿಸಲು ಮಳೆನೀರು ಕೊಯ್ಲು ಒಂದು ನವೀನ ಪರಿಹಾರವಾಗಿದೆ.

ಭಾರೀ ಮಳೆ ಸುರಿದಾಗ ಭೂಮಿಯಲ್ಲಿ ಮಳೆ ಸುರಿಯಲು ಸ್ಥಳಾವಕಾಶವಿಲ್ಲದಿದ್ದರೆ, ಅದು ಆ ಪ್ರದೇಶದಲ್ಲಿ ಪ್ರವಾಹವನ್ನು ಉಂಟುಮಾಡಬಹುದು. ಚಿರಾಪುಂಜಿ ಮತ್ತು ಆಗುಂಬೆಯಂತಹ ಸ್ಥಳಗಳು ವರ್ಷವಿಡೀ ಅತಿ ಹೆಚ್ಚು ಮಳೆಯನ್ನು ಪಡೆಯುವ ಭಾರತದ ಸ್ಥಳಗಳೆಂದು ಪರಿಗಣಿಸಲಾಗಿದೆ. ಅಂತಹ ಸ್ಥಳಗಳಲ್ಲಿ ಮಳೆನೀರು ಕೊಯ್ಲು ವಿಧಾನವನ್ನು ಅಭ್ಯಾಸ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಸರಿಯಾಗಿ ಅಭ್ಯಾಸ ಮಾಡದಿದ್ದರೆ, ಮಳೆನೀರು ನೆಲದ ಮೇಲೆ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಅಂತಿಮವಾಗಿ ಪ್ರವಾಹಕ್ಕೆ ಕಾರಣವಾಗುತ್ತದೆ ಮತ್ತು ಜೀವ ಮತ್ತು ಆಸ್ತಿಗೆ ಭಾರೀ ಹಾನಿಯನ್ನುಂಟುಮಾಡುತ್ತದೆ.

ಮಳೆನೀರು ಕೊಯ್ಲಿನ ಇನ್ನೊಂದು ಪ್ರಾಮುಖ್ಯತೆ ಎಂದರೆ ಅದು ನದಿ ನೀರಿನ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಕಾವೇರಿ, ಕೃಷ್ಣಾ, ಗಂಗಾ ಮತ್ತು ಯಮುನೆಯಂತಹ ನದಿಗಳನ್ನು ಮಾನವರು ಕೈಗಾರಿಕಾ ಮತ್ತು ಗೃಹ ಉದ್ದೇಶಗಳಿಗಾಗಿ ಅತಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜಲಮೂಲಗಳ ಅತಿಯಾದ ಬಳಕೆಯಿಂದ ದೇಶದ ಜಲಚರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ, ಪ್ರಪಂಚದ ಸಾಗರಗಳು ಮತ್ತು ಸಮುದ್ರಗಳಲ್ಲಿ ಅಗಾಧವಾದ ಮಾಲಿನ್ಯವು ಕಂಡುಬಂದಿದೆ, ಇದು ಆ ಪ್ರದೇಶದಲ್ಲಿನ ಜಲಚರಗಳ ಮೇಲೆ ಪರಿಣಾಮ ಬೀರುತ್ತದೆ.

  • ಮಳೆನೀರು ಕೊಯ್ಲು ನಮಗೆ ನೀರನ್ನು ಉಳಿಸಲು ಸಹಾಯ ಮಾಡುತ್ತದೆ.
  • ಮುಂದಿನ ಮಹಾಯುದ್ಧ ನೀರಿಗಾಗಿಯೇ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
  • ಮಳೆನೀರು ಕೊಯ್ಲು ಪ್ರವಾಹವನ್ನು ತಡೆಯಲು ಸಹಾಯ ಮಾಡುತ್ತದೆ.
  • ಮಳೆನೀರು ಕೊಯ್ಲು ನಮ್ಮ ನದಿಗಳು ಮತ್ತು ಸರೋವರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
  • ಈ ವಿಧಾನವು ಜಲಚರಗಳು ಕಲುಷಿತಗೊಳ್ಳಲು ಮತ್ತು ಖಾಲಿಯಾಗದಂತೆ ಸಹಾಯ ಮಾಡುತ್ತದೆ.
  • ಎಲ್ಲಾ ಹಂತಗಳಲ್ಲಿ ಮಳೆನೀರು ಕೊಯ್ಲು ಅನುಷ್ಠಾನಕ್ಕೆ ಸಹಾಯ ಮಾಡಲು ಕಠಿಣ ಕಾನೂನುಗಳು ಜಾರಿಯಲ್ಲಿರಬೇಕು.
  • ಮಳೆನೀರು ಕೊಯ್ಲು ನಮ್ಮ ಪರಿಸರ ವ್ಯವಸ್ಥೆಯಲ್ಲಿ ಆರೋಗ್ಯಕರ ನೀರಿನ ಚಕ್ರವನ್ನು ನಿರ್ವಹಿಸುತ್ತದೆ.
  • ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರಗಳು ಹೆಚ್ಚಿನ ಪ್ರಮಾಣದ ಸಿಹಿನೀರನ್ನು ಬಳಸುತ್ತವೆ.
  • ಮಳೆನೀರು ಕೊಯ್ಲು ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಸರಿಯಾದ ಜಾಗೃತಿ ಅಭಿಯಾನಗಳನ್ನು ನಡೆಸಬೇಕು.
  • ಮಳೆನೀರು ಕೊಯ್ಲು ಭೂಮಿಯ ಕೆಳಗಿನ ನೀರಿನ ಮಟ್ಟದಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಳೆ ನೀರು ಕೊಯ್ಲು ಏಕೆ ಅಗತ್ಯ

ಮಳೆ ನೀರು ಕೊಯ್ಲು ಎಲ್ಲಾ ಪ್ರದೇಶಗಳ ಜನರಿಗೂ ನೀರು ಬಹಳ ಅವಶ್ಯಕವಾಗಿದೆ. ಭವಿಷ್ಯದಲ್ಲಿ ನೀರಿನ ಕೊರತೆಯ ಭಯವನ್ನು ಕಡಿಮೆ ಮಾಡುವುದು ಒಳ್ಳೆಯದು.

  • ಮೇಲ್ಮೈ ನೀರು ವಿವಿಧ ಉದ್ದೇಶಗಳಿಗಾಗಿ ನೀರಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ.
  • ಪ್ರತಿಯೊಬ್ಬರೂ ತಮ್ಮ ಪ್ರತಿಯೊಂದು ಅಗತ್ಯಕ್ಕೂ ಅಂತರ್ಜಲವನ್ನು ಅವಲಂಬಿಸಿದ್ದಾರೆ.
  • ಅರಣ್ಯನಾಶ, ಕ್ಷಿಪ್ರ ನಗರೀಕರಣ, ಮಳೆ ನೀರು ಉಪ ಮಣ್ಣಿಗೆ ಸೇರುವುದು ಇತ್ಯಾದಿ ಕಾರಣಗಳಿಂದ ಅಂತರ್ಜಲ ಮಟ್ಟ ನಿರಂತರವಾಗಿ ಕುಸಿಯುತ್ತಿದೆ.
  • ಮಳೆ ನೀರಿನ ಸಂರಕ್ಷಣೆಯು ನೈಸರ್ಗಿಕ ಜಲ ಸಂಪನ್ಮೂಲಗಳಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.
  • ಇದು ರಸ್ತೆಗಳಲ್ಲಿ ನೀರಿನ ಪ್ರವಾಹದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ಮಣ್ಣಿನ ಸವೆತದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸುತ್ತದೆ.

ಉಪಸಂಹಾರ

ನೀರು ಅತ್ಯಂತ ಅವಶ್ಯಕ ಮತ್ತು ಅಮೂಲ್ಯವಾದ ಸಂಪನ್ಮೂಲವಾಗಿದೆ, ಇದು ಭೂಮಿಯ ಮೇಲಿನ ಜೀವನಕ್ಕೆ ಅವಶ್ಯಕವಾಗಿದೆ. ಅದನ್ನು ವ್ಯರ್ಥ ಮಾಡಲಾಗುವುದಿಲ್ಲ ಮತ್ತು ಅದರ ಪ್ರತಿ ಹನಿಯನ್ನು ಅಗತ್ಯಕ್ಕೆ ಮರುಬಳಕೆ ಮಾಡಲು ಸಂರಕ್ಷಿಸಬೇಕು. ಮತ್ತೊಂದೆಡೆ ಮಳೆಯು ಶುದ್ಧ ನೀರಿನ ಪ್ರಮುಖ ಮೂಲವಾಗಿದೆ, ಅದನ್ನು ಸಂಗ್ರಹಿಸಲು ನಾವು ವಿಸ್ತಾರವಾದ ವ್ಯವಸ್ಥೆಗಳನ್ನು ಹೊಂದಿದ್ದರೆ ಮಾತ್ರ. ಇಲ್ಲಿ, “ಮಳೆನೀರು ಕೊಯ್ಲು” ಪರಿಕಲ್ಪನೆಯು ಪ್ರಾರಂಭವಾಗುತ್ತದೆ. ಮಳೆ ನೀರು ಕೊಯ್ಲು ಬಗ್ಗೆ ಅರಿವಿನ ಕೊರತೆಯಿಂದ ಪ್ರತಿ ವರ್ಷ ಸಾವಿರಾರು ಲೀಟರ್ ಮಳೆ ನೀರನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರಕೃತಿಗೆ ಮತ್ತು ಸಮಾಜಕ್ಕೆ ಅದರ ಉಪಯುಕ್ತತೆಯನ್ನು ನಾವು ಅರಿತುಕೊಳ್ಳಲು ಮತ್ತು ಸುರಕ್ಷಿತ ಮತ್ತು ನೀರಿನ ಸಮೃದ್ಧ ಭವಿಷ್ಯಕ್ಕಾಗಿ ಅದನ್ನು ನಮ್ಮ ಮನೆ, ಕಟ್ಟಡಗಳು, ಉದ್ಯಾನವನಗಳಲ್ಲಿ ಅಳವಡಿಸಲು ಪ್ರಾರಂಭಿಸುವ ಸಮಯ ಬಂದಿದೆ.