Showing posts with label 6th kannada notes. Show all posts
Showing posts with label 6th kannada notes. Show all posts

6th poem

 6th poem bandidhe besige raja

6th kannada notes

 ಪದ್ಯ ಭಾಗ-6

ಪದ್ಯದ ಹೆಸರು : ಗಂಗವ್ವ ತಾಯಿ



ಅ . ಬಿಟಸ್ಥಳವನ್ನು ಕೆಳಗೆ ನೀಡಲಾದ ಸೂಕ್ತ ಪದಗಳಿಂದ ಭರ್ತಿಮಾಡಿರಿ . 

  1. ಬಾರವ್ವ ತಾಯಿ ಗಂಗವ್ವ ತಾಯಿ . 
  2. ಹೊಳೆಯವ್ವ ತಾಯಿ ನೀರವ್ವ ತಾಯಿ . 
  3. ಮೈಮನಸ ಹೊಲಸೆಲ್ಲ ತೊಳೆಯನ್ನ ತಾಯಿ , 
  4. ನೀರವ್ವ ಗಂಗವ್ವ ಮಳೆಯಾಗಿ ಬಾರವ್ವ
  5. ಒಣಗೀದ ನೆಲದಾಗ ಹಸುರಾಗಿ ಹೊಳೆಯವ್ವ ,   

ಆ . ಸಮಾನಾರ್ಥಕ ಪದಗಳನ್ನು ಬರೆಯಿರಿ . 

  1. ನೀರು : ಜಲ , ಗಂಗೆ 
  2. ನಭ : ಆಕಾಶ , ಆಗಸ , ಬಾನು 
  3. ಕುಣಿ : ಹೊಂಡ 
  4. ತಾಯಿ : ಅಮ್ಮ ಅವ್ವ . ಮಾತೆ 

ಇ . ಒಂದು ವಾಕ್ಯದಲ್ಲಿ ಉತ್ತರಿಸಿರಿ . 

1. ನೀರು ಎಲ್ಲೆಲ್ಲಿ ತುಂಬಬೇಕು ಎಂದು ಕವಿ ಹೇಳುತ್ತಾರೆ ? 

ಉತ್ತರ : ನೀರು ನೆಲದ ಕಣ ಕಣದಾಗ ಹಾಗೂ ಮನದ ಪದಪದರಾಗದಾಗ ತುಂಬಬೇಕು ಎಂದು ಕವಿ ಹೇಳುತ್ತಾರೆ . 

2. ನೀರು ಹೇಗೆಲ್ಲ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ ?

 ಉತ್ತರ : ನೀರು ನೆಲದ ಒಳ ಹೊರಹೆಲ್ಲ , ಪಾಣದ ತುಂಬೆಲ್ಲಾ ನಗುನಗುತ , ನಲಿಯುತ , ಪುಟಿಯುತ್ತ , ಕುಣಿಯುತ್ತ , ಚಿಮ್ಮುತ್ತಾ , ಜಿಗುಯುತ್ತಾ , ಹರಿಯುತ್ತಾ , ಸುರುಯುತ್ತಾ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ . 

3. ಒಣಗಿದ ನೆಲದಲ್ಲಿ ನೀರು ಹೇಗೆ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ ? 

ಉತ್ತರ : ಒಣಗಿದ ನೆಲದಲ್ಲಿ ಹಸುರಾಗಿ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ . 

4. ಈ ಕವನವನ್ನು ಬರೆದವರು ಯಾರು ? 

ಉತ್ತರ : ಈ ಕವನವನ್ನು ಬರೆದವರು ಡಾ || ಸಿದ್ದಲಿಂಗ ಪಟ್ಟಣಶೆಟ್ಟಿಯವರು . 

ಈ . ಕೊಟ್ಟಿರುವ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು ? 

1. ನೆಲದ ಕಣಕಣದಾಗ ಮನದ ಪದಪದರಾಗ , 

ಉತ್ತರ : ಮಳೆ ಬಾರದೆ ಇದ್ದಾಗ ರೈತರು ಗಂಗವ್ವನನ್ನು ಕವಿಯ ಮೂಲಕ ಕರೆದಿದ್ದಾರೆ . 

2. ಹರಿಯುತ್ತ ಸುರಿಯುತ್ತ ಧೋಧೋ ಬಾರವ್ವ 

ಉತರ : ಜನತೆ ಗಂಗವ್ವನನ್ನು ಮಳೆಯಾಗಿ ಸುರಿಯುವಂತೆ ಹೇಳಿರುವುದನ್ನು ಕವಿ ಕವಿತೆಯ ಮೂಲಕ ಕರೆದಿದ್ದಾರೆ. 

3. ಒಣಗೀದ ನೆಲದಾಗ ಹಸಿರುಸಿರು ಉಳಿಸಾಕ

ಉತ್ತರ : ಗಂಗವ್ವ ಮಳೆಯಾಗಿ ಏಕೆ ಸುರಿಯಬೇಕೆನ್ನುವ ಪ್ರಶ್ನೆಗೆ ಉತ್ತರವಾಗಿ ಕಎ ಗಂಗವ್ವ ಒಣಗಿರುವ ನೆಲಕ್ಕೆ ಹಸಿರು ಬೆಳೆಯುವಂತೆ ಮಾಡಲು ಬರಬೇಕೆಂದು ರೈತರ ಪ್ರತಿನಿಧಿಯಾಗಿ ಕವಿ ಗಂಗವ್ವನನ್ನು ಕರೆಯುತ್ತಿದ್ದಾರೆ . 

4. ಜೀವದಾ ತುಣಕಾಗಿ ಮೈಮನಸ ಹೊಲಸೆಲ್ಲ . 

ಉತ್ತರ : ಜೀವನದಲ್ಲಿ ಉಂಟಾಗಿರುವ ಎಲ್ಲಾ ರೀತಿಯ ಮೈ ಮನಸ್ಸಿನ ಕೊಳೆಯೆಲ್ಲ ತೆಗೆಯಲು ಗಂಗವ್ವ ಧರೆಗೆ ಇಳಿದು ಬಾ ಎಂದು ಕಏ ಗಂಗವ್ವನಿಗೆ ಕರೆದಿದ್ದಾರೆ . 

ಈ . ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿರಿ . 

1. ಗಂಗವ್ವ ಇದ್ದರೆ ಎಲ್ಲೆಲ್ಲಿ , ಏನೇನು ಆಗುವುದೆಂದು ಕವಿ ಹೇಳಿದ್ದಾರೆ ? 

ಉತ್ತರ : ಗಂಗವ್ವ ಇದ್ದರೆ ಒಣಗಿದ ನೆಲದಲ್ಲಿ ಹಸಿರು ಅಲಂಕರಿಸುವುದು , ಹಸಿರು ಹಸಿರಾಗಿ ಬೆಳೆದು ಎಲ್ಲರ ಉಸಿರು ಉಳಿಸುವುದು , ಗಂಗವ್ವ ಬಂದರೆ ಜನರ ಮೈ ಮನಸ್ಸಿನ ಕೊಳೆಯೆಲ್ಲಾ ತೊಳೆಯಲ್ಪಟ್ಟು ಅವರು ಪರಿಶುದ್ಧರಾಗುವರು . ನದಿಯಾಗಿ ಹರಿದಾಗ ಹನಿ ಹನಿ ಕಣ ಕಣವೆಲ್ಲಾ ಜಗಿಸಿ ಎಲ್ಲೆಲ್ಲೂ ಸಂತೋಷ , ನಗು ನಲಿವು ಕಂಡುಬರುತ್ತದೆ . 

2. ನೀರು ಯಾವ ಯಾವ ಕೆಲಸಕ್ಕೆ ಬೇಕು ಎಂದು ಕವಿ ಹೇಳಿದ್ದಾರೆ ? 

ಉತ್ತರ : ನೀರು ಜನರ ಉಪಯೋಗಕ್ಕೆ ಪ್ರಾಣವಾಯುವಿನಷ್ಟೆ ಅಗತ್ಯವಾಗಿ ಮನುಷ್ಯನಿಗೆ ಕುಡಿಯಲು ಬೇಕು , ಮಳೆಯಾಗಿ ಸುರಿದರೆ ಮಾತ್ರ ನೆಲ ಹಸಿರಾಗುತ್ತದೆ . ಹಸಿರು ನೆಡಲು ಸಾಧ್ಯವಾಗುತ್ತದೆ . ಹಸಿರು ಎಲ್ಲರಿಗೂ ಬೇಕಾದ ಆಹಾರ ಕೊಟ್ಟು ಜೀವಿಗಳ ಉಸಿರನ್ನು ಉಳಿಸುತ್ತದೆ ನೀರು ಇಲ್ಲದೆ ಜನರ ಮೈಗಳು ಕೊಳಕಾಗಿದ್ದರೆ , ಅದನ್ನು ಸ್ವಚ್ಛಗೊಳಿಸಲು ನೀರು ಅಗತ್ಯವಾಗಿ ಬೇಕು , ನೀರು ಇಲ್ಲದೆ ಬರಗಾಲ ಬಂದಲ್ಲಿ ಜನರು ಮನಸ್ಸು ತೊಡಗಿಸುತ್ತಾರೆ . ಅದರ ಬದಲು ಎಲ್ಲರಿಗೂ ತೃಪ್ತಿಯಾಗಿ ಊಟ – ಬಟ್ಟೆ ಸಿಕ್ಕಲ್ಲಿ ಅವರ ಮನಸ್ಸು ಇಂಥಹ ಕೆಲಸಗಳಿಗೆ ಎಡೆ ಮಾಡುವುದಿಲ್ಲ , ಹೀಗೆ ಜನಕ್ಕೆ ಎಲ್ಲರಿಗೂ ಕವಿ ಹೇಳಿದಾಗ ನೀರು ಬೇಕು ಎಂದು . 

ಊ . ಕೊಟ್ಟಿರುವ ಪದ್ಯದಲ್ಲಿ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ , 

ಬೆಳ್ಳಾನ ಎರಡೆತ್ತು ಬೆಳ್ಳಿಯ ಬಾರುಕೋಲು 

ಹಳ್ಳಾದ ಮಾಗಿ ಹೊಡೆದಾವು | ಎತ್ತಿನ 

ತೆಜ್ಞಾನ ಹೊಟ್ಟಿ ಹಸಿದಾವು . 

ಮೊದಲು . ಎರಡನೇ ಹಾಗೂ ಮೂರನೇ ಸಾಲಿನ ಎರಡನೇ ಅಕ್ಷರ ‘ ಳ್ಳಾ ‘ ಪುನರಾವರ್ತನೆ ಆಗಿರುವುದರಿಂದ ಇದು ‘ ಆದಿ ಪ್ರಾಸ ‘ ಇದೆ .

6th Class Siddharoodhara Jatre Kannada Notes 2022

 

6th Class Siddharoodhara Jatre Kannada Notes 2022

ತರಗತಿ : 6ನೇ ತರಗತಿ
ವಿಷಯ : ಕನ್ನಡ

ಅಭ್ಯಾಸಗಳು:

ಅ. ಪದಗಳ ಅರ್ಥಗಳ ಅರ್ಥ ಬರೆಯಿರಿ.

1. ಹಿರೇಮಣಿ: (ತರತಿಯ) ನಾಯಕ, ಮುಂದಾಳು

2. ಕರ್ಮಭೂಮಿ: ಕಾರ್ಯಕ್ಷೇತ್ರ ( ಕೆಲಸ ಮಾಡಿದ ಸ್ಥಳ)

3. ಪತಾಕೆ: ಧ್ವಜ, ಬಾವುಟ

4. ಜನಸ್ತೋಮ: ಜನ ಸಮೂಹ, ಜನರ ಗುಂಪು

ಆ. ಈ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ.

1.ಅಲ್ಲಿ ಜಾತ್ರೆ ದಿನ ಶಿವರಾತ್ರಿಯ ಕೂಡುತ್ತದೆ.

ಶಿವರಾತ್ರಿಯ ದಿನ ಅಲ್ಲಿ ಜಾತ್ರೆ ಕೂಡುತ್ತದೆ.

2. ಮಠದ ಮಂಟಪ ಮುಂದೆ ಹಾಕಿದ್ದರು ದೊಡ್ಡ

ಮಠದ ಮುಂದೆ ದೊಡ್ಡ ಮಂಟಪ ಹಾಕಿದ್ದರು.

3. ಮಿಠಾಯಿಗಳನ್ನು ಶಾಲೆಯ ಕೊಂಡರು ಮಕ್ಕಳು

ಶಾಲೆಯ ಮಕ್ಕಳು ಮಿಠಾಯಿಗಳನ್ನು ಕೊಂಡರು.

4. ಹೋರಾಟದ ಸಕ್ರಿಯವಾಗಿದ್ದ ಸ್ವಾತಂತ್ರ್ಯ ಮಠವಿದು ಸಮಯದಲ್ಲಿ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠವಿದು.

ಇ. ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.

1. ಪ್ರೇರಣೆ: ಗುರುಗಳ ಪ್ರೇರಣೆಯಿಂದ ರವಿಯು ಸಂಗೀತ ಕಲಿತನು.

2. ಕಷ್ಟಕಾರ್ಪಣ್ಯ: ಪಾಂಡವರು ವನವಾಸದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದರು.

3. ಹುರುಪು: ಕ್ರಿಕೆಟ್‌ ಆಡುವುದೆಂದರೆ ರಮೇಶನಿಗೆ ತುಂಬಾ ಹುರುಪು.

4. ಸ್ವಯಂಸೇವಕ: ಜನರಿಗೆ ಸಹಾಐ ಕಲ್ಪಿಸಲು ಶಾಲಾ ಮಕ್ಕಳು ಸ್ವಯಂಸೇವಕರಾಗಿ ದುಡಿದರು.

ಈ. ಒಂದು ವಾಕ್ಯದಲ್ಲಿ ಉತ್ತರಿಸಿರಿ .

೧. ಸಿದ್ಧಾರೂಢರ ಮಠವು ಯಾವ ಜಿಲ್ಲೆಯಲ್ಲಿದೆ ?

ಉತ್ತರ: ಸಿದ್ಧಾರೂಢರ ಮಠವು ಧಾರವಾಡ ಜಿಲ್ಲೆಯಲ್ಲಿದೆ.

೨. ಶಾಲೆಯ ಮಕ್ಕಳಿಗೆ ದಾರಿಯ ದಣಿವು ಏಕೆ ಆಗಲಿಲ್ಲ ?

ಉತ್ತರ: ಹಲವು ಚರ್ಚೆ ಸಂವಾದಗಳು ದಾರಿಯುದ್ದಕ್ಕೂ ನಡೆದಿದ್ದರಿಂದ ಶಾಲೆಯ ಮಕ್ಕಳಿಗೆ ದಣಿವು ಆಗಲಿಲ್ಲ.

೩. ಸಿದ್ಧಾರೂಢ ಸ್ವಾಮಿಗಳು ಮೂಲತಃ ಯಾವ ಊರಿನವರು ?

ಉತ್ತರ: ಸಿದ್ಧಾರೂಢ ಸ್ವಾಮಿಗಳು ಮೂಲತಃ ಬೀದರ್‌ ಜಿಲ್ಲೆಯ ಚಳಕಾಪುರದವರು.

೪. ಸ್ವಾಮಿಗಳು ಯಾವ ಮಂತ್ರವನ್ನು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು ?

ಉತ್ತರ: ʼಓಂ ನಮಃ ಶಿವಾಯʼ ಎಂಬ ಮಂತ್ರವನ್ನು ಸ್ವಾಮಿಗಳು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು.

೫. ಮಠದಲ್ಲಿ ಶಾಲೆಯ ಮಕ್ಕಳು ಯಾವ ಕೆಲಸಗಳನ್ನು ಮಾಡಿದರು ?

ಉತ್ತರ: ಮಠದಲ್ಲಿ ಶಾಲೆಯ ಮಕ್ಕಳು ಕೆಲವರು ನೀರು ತಂದು ಕೊಟ್ಟರು ಕೆಲವರು ಬಂದ ಜನರಿಗೆ ಊಟ ಬಡಿಸಿದರು.

೬. ಶಾಲಾ ಮಕ್ಕಳು ಯಾವ ಆಟಗಳನ್ನು ಆಡಿದರು ?

ಉತ್ತರ: ಶಾಲಾ ಮಕ್ಕಳು ತೊಟ್ಟಿಲ ಜೀಕ ಹಾಗೂ ಕುದುರೆ ಆನೆ ಒಂಟೆಗಳಿಂದ ಕೂಡಿದ ತಿರುಗು ಯಂತ್ರಗಳಲ್ಲಿ ಕುಳಿತು ಆಟವಾಡಿದರು.

೭. ಸಿದ್ಧಾರೂಢರ ಮಠದಿಂದ ಸ್ಫೂರ್ತಿಯನ್ನು ಪಡೆದ ರಾಷ್ಟ್ರನಾಯಕರು ಯಾರು ?

ಉತ್ತರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಗಾಂದೀಜಿ ಮತ್ತು ತಿಲಕರಂಥ ರಾಷ್ಟ್ರೀಯ ನಾಯಕರು ಸಿದ್ಧಾರೂಢರ ಮಠದಿಂದ ಸ್ಫೂರ್ತಿಯನ್ನು ಪಡೆದರು.

ಉ. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಸಿದ್ಧಾರೂಢ ಸ್ವಾಮಿಗಳ ಜೀವನದ ಬಗ್ಗೆ ತಿಳಿಸಿರಿ.

ಸಿದ್ಧಾರೂಢರು ಬೀದರ್‌ ಜಿಲ್ಲೆಯ ಚಳಕಾಪುರದಲ್ಲಿ 1839ರಲ್ಲಿ ಜನಿಸಿದರು. ಅವರಿಗೆ ಚಿಕ್ಕಂದಿನಲ್ಲಿಯೇ ಐಹಿಕ ಸುಖ ಭೋಗಗಳಲ್ಲಿ ವಿರಕ್ತಿ ಬಂದು ಸನ್ಯಾಸವನ್ನು ಸ್ವೀಕಾರ ಮಾಡಿದರು. ಮನೆಬಿಟ್ಟು ಸಂಚಾರಿಯಾಗಿ ಊರಿಂದ ಊರಿಗೆ ಸಂಚರಿಸುತ್ತಾ ತಮ್ಮ ನಲವತ್ತೊಂದನೆಯ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ಬಂದು ನೆಲೆ ನಿಂತು ಅನೇಕ ಮಹಾನ್‌ ವ್ಯಕ್ತಿಗಳಿಗೆ ಸ್ಫೂರ್ತಿಯಾದರು.

2. ಮಠವು ಸಮಾಜದಲ್ಲಿ‌ ಹೇಗೆ ದಾರಿದೀಪವಾಗಿದೆ?

ಮಠಗಳು ಹಲವಾರು ರೀತಿಯಲ್ಲಿ ಸಮಾಜಕ್ಕೆ ಸಹಾಯವನ್ನು ಮಾಡುತ್ತದೆ. ಬಡಬಗ್ಗರಿಗೆ ಧನ ಸಹಾಯ ಮಾಡಬಹುದು. ವಿದ್ಯಾರ್ಥಿಗಳಿಗೆ ಊಟ ವಸತಿ ನೀಡಬಹುದು. ದಿಕ್ಕು ತೋಚದವರಿಗೆ ಮಾನಸಿಕ ನೆಮ್ಮದಿ ನೀಡುವ ಉಪದೇಶ ಮಾಡಬಹುದು. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಒಟ್ಟಾರೆ ಮಠಗಳು ಸಮಾಜಕ್ಕೆ ದಾರಿದೀಪವಾಗಿವೆ.

3. ಸಿದ್ಧಾರೂಢ ಜಾತ್ರೆಯ ತೇರೆಳೆಯುವ ಸಂದರ್ಭವನ್ನು ವರ್ಣಿಸಿ.

ಮಠದ ಮುಂದೆ ಒಂದು ದೊಡ್ಡ ಮಂಟಪ ಅದರ ಮುಂದೆ ಬಣ್ಣ ಬಣ್ಣದ ಅರಿವೆ ಸುತ್ತಿ ಪತಾಕೆಗಳನ್ನು ಹಚ್ಚಿ ಸಿಂಗರಿಸಿದ ದೊಡ್ಡ ತೇರು ನಿಂತಿತ್ತು. ನಾಲ್ಕು ಗಂಟೆಗೆ ಜನರೆಲ್ಲ ತೇರು ನೋಡಲು ಸೇರಿದರು. ಕೆಲವರು ಗುಂಪು ಗುಂಪಾಗಿ ಅಲ್ಲಲ್ಲಿ ನಿಂತರು. ಕೆಲವರು ತೇರಿನ ಹಗ್ಗ ಹಿಡಿದು ಅದರ ಸಮೀಪ ನಿಂತರು. ಎಲ್ಲರೂ ʼಹರ ಹರ ಮಹಾದೇವ! ʼ ಎಂದು ಭಕ್ತಿಯಿಂದ ಕೂಗುತ್ತಾ ಎಳೆಯತೊಡಗಿದರು.

ಊ. ಕೆಳಗಿನ ವಾಕ್ಯಗಳಲ್ಲಿ ಜೋಡುನುಡಿಗಳನ್ನು ಗುರುತಿಸಿ ಬರೆಯಿರಿ.

1.ನಮ್ಮ ನೆರೆಹೊರೆಯವರು ಬಹಳ ಒಳೆಯವರು.

ನೆರೆಹೊರೆ

2. ಅಮ್ಮ ರಾತ್ರಿಹಗಲು ಕೆಲಸ ಮಾಡುತ್ತಾಳೆ.

ರಾತ್ರಿಹಗಲು

3. ನಾಟಕದಲ್ಲಿ ವಿಧವಿಧವಾದ ಉಡುಗೆ ತೊಡುಗೆ ಧರಿಸಿರುತ್ತಾರೆ.

ಉಡುಗೆ ತೊಡುಗೆ

ಋ. ಸರಿಹೊಂದುವ ಬಿಡಿ ಪದಗಳನ್ನು ಸೇರಿಸಿ ಜೋಡುನುಡಿಗಳನ್ನು ರಚಿಸಿರಿ.

ಆಟ ಪಾಠ, ತಿಂಡಿ ತೀರ್ಥ, ಹೊರಗೆ ಒಳಗೆ , ದಿಕ್ಕು ದೆಸೆ, ಅಕ್ಕ ಪಕ್ಕ, ಹಳ್ಳ ಕೊಳ್ಳ

6th standard kannada notes of lesson dhanyavadha yelidha kokare2022

6th Standard Kannada Notes Question Answer Pdf 2022 | 6ನೇ ತರಗತಿ ಕನ್ನಡ ನೋಟ್ಸ್ ಎಲ್ಲಾ ಪಾಠ ಪದ್ಯಗಳ ಪ್ರಶ್ನೋತ್ತರಗಳು